ಪರೀಕ್ಷಾ ಸಮಯ
Team Udayavani, Jan 7, 2018, 6:55 AM IST
ವರ್ಷವಿಡೀ ಓದಿದ್ದನ್ನು ಪದೇ ಪದೇ ಮನಸ್ಸಿನಲ್ಲಿ ಮೆಲುಕು ಹಾಕುತ್ತಲಿದ್ದೆ. ಕೆಮಿಸ್ಟ್ರಿ ಯಾವಾಗಲೂ ಕಬ್ಬಿಣದ ಕಡಲೆ. ಸುಲಭ ಅನ್ನಿಸಿದ್ದೇ ಇಲ್ಲ. ಪಿಜಿಕಲ್ ಕೆಮಿಸ್ಟ್ರಿ, ಬೆನಿjàನ್ ರಿಂಗು, ಈಕ್ವೆಷನ್ನು, ಲಂಗು ಲಟ್ಟು- ಅರ್ಥವಾಗುವ ಛಾನ್ಸೇ ಇಲ್ಲ. ಅರ್ಥಮಾಡಿಕೊಂಡವರಿಗೆ ನೆಮ್ಮದಿಯೂ ಇಲ್ಲ. ಒಂದನೆಯ ತರಗತಿಯಲ್ಲಿ ಮಗ್ಗಿ ಉರು ಹಚ್ಚುವಂತೆ, ಬೈಹಾರ್ಟ್ ಮಾಡಿಕೊಳ್ಳುವುದೇ ಜಾಣತನ. ಉರು ಹಚ್ಚುವ ಕಲೆ ಕರಗತವಾದರಷ್ಟೇ ಕೆಮಿಸ್ಟ್ರಿಯಿಂದ ಮೋಕ್ಷ.
ರಾತ್ರಿಯಿಡೀ ಎಚ್ಚರವಿದ್ದು, ಮಲಗುವ ಕೋಣೆಯಲ್ಲಿ ಅತ್ತಿಂದಿತ್ತ ಅಡ್ಡಾಡುತ್ತ ಪ್ರಶ್ನೋತ್ತರಗಳನ್ನು ಕಂಠಪಾಠ ಮಾಡಿಕೊಂಡೆ. ನಿದ್ದೆ ಹತ್ತಿದರೆ ಎಲ್ಲಿ ಉರು ಹಚ್ಚಿದ ವಾಕ್ಯಗಳು ಮರೆತು ಹೋಗುತ್ತವೆಯೋ ಎನ್ನುವ ಭಯದಲ್ಲಿ, ನಿದ್ದೆಯೂ ನನ್ನತ್ತ ಸುಳಿಯಲಿಲ್ಲ. ಬೆಳಗೆದ್ದು ಲಗುಬಗೆಯಿಂದ ಅಣಿಯಾಗುವಾಗ ಗಂಟೆ ಒಂಬತ್ತಾದದ್ದೇ ಗೊತ್ತಾಗಲಿಲ್ಲ. “”ಟೆನÒನ್ ಮಾಡ್ಬೇಡ, ದೇವರಿಗೆ ಕೈಮುಗಿದು ಹೋಗು, ಪೇಪರ್ ಈಜಿಯಾಗಿರುತ್ತೆ” ಅಮ್ಮ ಬುದ್ಧಿ ಹೇಳಿದರು. “”ನೀನು ತುಂಬಾ ಬ್ರೈಟು, ಗಡಿಬಿಡಿ ಮಾಡ್ಕೊàಬೇಡ, ಸಾವಕಾಶವಾಗಿ ಬರಿ” ಅಪ್ಪ ಧೈರ್ಯ ಹೇಳಿದರು. “”ಮಾರ್ಕು ಎಷ್ಟಾದರೂ ಬಂದು ಹಾಳಾಗೋಗ್ಲಿ, ಫೇಲಾದ್ರೂ ಏನಾಯ್ತು, ನಾವೇನು ಕಾಲೇಜು ಕಲೆ¤à ದೊಡ್ಡವರಾದೋರಾ?” ಅಜ್ಜಿ ಮಾಮೂಲಿನಂತೆ ಹೇಳುತ್ತಲೇ ಇದ್ದರು.
ಅವಸರವಸರವಾಗಿ ಬಂದು, ಕಾಲೇಜಿನ ಕಾಂಪೌಂಡಿನೊಳಗೆ ಅಡಿ ಇಟ್ಟಾಗ, ಎದುರಿನಲ್ಲಿ ಸಿಕ್ಕ ಲೈಬ್ರೇರಿಯನ್, “”ಗುಡ್‌ಲಕ್ ಲತಾ, ಚೆನ್ನಾಗಿ ಮಾಡಮ್ಮಾ” ಅಂತ ವಿಷ್ ಮಾಡಿದರು. ಹಿಂದಿನಿಂದ ಬಂದು ದೊಪ್ಪನೆ ಭುಜದ ಮೇಲೆ ಕೈಯಿಟ್ಟು ನೀತು, “”ಲತಾ, ಚೆನ್ನಾಗಿ ಪ್ರಿಪೇರಾಗಿ ಬಂದಿದೀಯಾ?” ಎಂದು ಕೇಳಿದಳು.
“”ಹಾn… ಪರಾÌಗಿಲ್ಲ, ಆದ್ರೂ ಫಿಜಿಕಲ್ ಕೆಮಿಸ್ಟ್ರಿ ಅಷ್ಟೊಂದು ಕಾನ್ಫಿಡೆನ್ಸಿಲ್ಲ” ಎಂದೆ.
“”ಏಯ್, ಇದೇನೇ ಇದು, ನಾನು ಇವತ್ತಿನ ಪೇಪರ್ ವಿಷ್ಯ ಕೇಳಿದ್ರೆ, ನೀನು ನಾಡಿದ್ದಿರೋ ಕೆಮಿಸ್ಟ್ರಿ ವಿಷ್ಯ ಹೇಳ್ತಿದೀಯಲ್ಲಾ?”
“”ಅØ…! ನನಗೇನಾದ್ರೂ ಕನ್‌ಫ್ಯೂಸ್ ಆಯ್ತಾ? ರೀತೂ, ಇವತ್ತಿರೋದು ಕೆಮಿಸ್ಟ್ರಿ ಅಲ್ವಾ?”
“”ಛೇ! ನಿನಗೇನಾಯ್ತು, ಈಗ ನಾವು ಬರೀಬೇಕಾಗಿರೋದು, ಝೂವಾಲಜಿ”!
ರೀತುವಿನ ಉತ್ತರ ಕೇಳಿ ಒಮ್ಮೆಗೆ ನೂರು ಸಿಡಿಲು ಬಡಿದ ಅನುಭವವಾಯ್ತು. ನಿಂತ ನೆಲವೇ ಬಾಯ್ಬಿಟ್ಟಂತಾಗಿ ಬೆವರಿದೆ. ಬೆಳಿಗ್ಗೆ ತಿಂದ ಇಡ್ಲಿ, ನಂತರ ಕುಡಿದ ಕಾಫಿ ಒಟ್ಟಾಗಿ ಮೂಗಿಗೆ ಬರುವಂತಾಯಿತು. ಕಾಲುಗಳು ತಕತಕನೆ ನಡುಗಲಾರಂಭಿಸಿದವು. ರೀತು ತನ್ನ ಪಾಡಿಗೆ ಪರೀಕ್ಷಾ ಕೊಠಡಿಯೆಡೆಗೆ ನಡೆದಳು. ನನ್ನ ನಾಲಿಗೆ ಒಣಗಿತು. ಗಂಟಲುಬ್ಬಿ ಬಂತು. ಬೆವರು ಧಾರಾಕಾರವಾಗಿ ಹರಿದು, ನಿತ್ರಾಣಳಾಗಿ ಬೆಂಕಿಯಲ್ಲಿ ಬಿದ್ದ ಅನುಭವವಾದಾಗ, ಕಣ್ತೆರೆದೆ!
ತಥ್ ತೆರೀಕಿ… ಹಾಳಾದ್ದು, ಅದೇ ಮಾಮೂಲು ಕನಸು! ಕಾಲೇಜು ಬಿಟ್ಟು, ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳೇ ಕಳೆದಿದ್ದರೂ, ಕನಸಿನಲಿ ಕಾಡುವ ಕೆಮಿಸ್ಟ್ರಿ ಭೂತ! ಸದ್ಯ, ಎಚ್ಚರವಾದಾಗ ಪರೀಕ್ಷೆಯ ಗುಮ್ಮ ಕಣ್ಮುಂದೆ ಇರುವುದಿಲ್ಲವೆಂಬುದೇ ಸಂತಸದ ಸಂಗತಿ. ವರ್ತಮಾನವೇ ಭೂತ-ಭವಿಷ್ಯಗಳಿಗಿಂತ ಸುಂದರವಾಗಿದೆಯೆಂಬುದು ನಮಗರ್ಥವಾಗುವ ಸಲುವಾಗಿ ಆಗಾಗ್ಗೆ ಇಂತಹ ದುಃಸ್ವಪ್ನಗಳು ಬೀಳುತ್ತಿರುವುದು ಒಳ್ಳೆಯದೇ ಬಿಡಿ.
ನಾನು ಮೂರನೆಯ ತರಗತಿಯಲ್ಲಿದ್ದಾಗ, ಶಾಲೆಯ ಕೆಂಚಪ್ಪ ಮಾಸ್ತರರು, ಬ್ರಾಕೆಟ್ಟನ್ನು ಹೋಲುವ ಗಣಿತದ ಚಿಹ್ನೆಯನ್ನು ಬಳಸಿ ನಮಗೆ ಭಾಗಾಕಾರದ ಲೆಕ್ಕಗಳನ್ನು ಕಲಿಸಿದ್ದರು. ಅವರ ವರ್ಗಾವಣೆಯ ನಂತರ ಬಂದ ಲೀಲಾವತಿ ಟೀಚರುÅ ಇರುವಾಗ ಒಂದು ಅರ್ಧ ವಾರ್ಷಿಕ ಪರೀಕ್ಷೆ ನಡೆಯಿತು. ಪ್ರಶ್ನೆಪತ್ರಿಕೆ ತಯಾರು ಮಾಡಿದ್ದು ಹೊಸ ಮೇಡಂ ಲೀಲಾವತಿ. ಹ್ಯಾಗಿತ್ತೂಂತೀರಾ, ಲೀಲಾವತಿ ಪೇಪರುÅ? ವಿಪರೀತಾ ಠಫು#! ಪ್ರಶ್ನೆಪತ್ರಿಕೆಯಲ್ಲಿ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಯಾವುದು ಅಲ್ಲದೇ ವಿಚಿತ್ರ ಚಿಹ್ನೆಗಳೇ ತುಂಬಿಕೊಂಡಿದ್ದವು. ಗಣಿತದ ಚಿಹ್ನೆಯೇ ಅರ್ಥವಾಗಲಿಲ್ಲವೆಂದಾದ ಮೇಲೆ ಸಮಸ್ಯೆ ಬಿಡಿಸುವುದಾದರೂ ಹೇಗೆ?
ಪರೀಕ್ಷೆ ಹಾಲಿನಿಂದ ಹೊರಬಂದಾಗ ಕಂಡ ಟೀಚರುÅ “ಪರೀಕ್ಷೆ ಹೇಗಾಯ್ತು?’ ಎಂದು ಕೇಳಿದ್ದರು. ಅಮ್ಮ ಪೂಜೆಯ ಸಮಯದಲ್ಲಿ ದೇವರ ಮುಂದೆ ಹಾಡುವ ಹಾಡು ಯಾಕೋ ನೆನಪಾಯ್ತು.
“”ಟೀಚರ್, ಇಂದು ಎನಗೆ ಗೋವಿಂದಾ…” ಎಂದೆ. ಗುರುರಾಯರು ತಮ್ಮ ಕೀರ್ತನೆಯಲ್ಲಿ “ಗೋವಿಂದಾ’ ಎಂದು ಪರಮಾತ್ಮನನ್ನು ಕರೆದಿದ್ದರೆ, ನಾನು ಗೋವಿಂದ ಎನ್ನುವ ಶಬ್ದವನ್ನು “ಎಲ್ಲಾ ಮುಗಿದೇ ಹೋಯ್ತು’ ಎನ್ನುವ ಅರ್ಥದಲ್ಲಿ ಪ್ರಯೋಗಿಸಿದ್ದು ಕೇಳಿ ಟೀಚರುÅ ಪಕಪಕ ನಕ್ಕಿದ್ದರು.
ಪರೀಕ್ಷೆಯು ಮುಗಿದ ನಂತರವಷ್ಟೇ ಟೀಚರುÅ ತಿಳಿಸಿದ್ದು- ಪ್ರಶ್ನೆಪತ್ರಿಕೆಯಲ್ಲಿ ಕಂಡುಬಂದ ವಿಚಿತ್ರ ಚಿಹ್ನೆಗಳೂ ಕೂಡ, ಭಾಗಾಕಾರದ ಚಿಹ್ನೆಯಂತೆ. ಒಂದು ಮೈನಸ್ ಚಿಹ್ನೆಯ ಮೇಲೂ ಕೆಳಗೂ ಚುಕ್ಕೆಗಳಿದ್ದರೆ ಅದೂ ಸಹ ಭಾಗಾಕಾರವನ್ನು ಸೂಚಿಸುತ್ತದಂತೆ. ಪರೀಕ್ಷೆಗೂ ಮೊದಲೇ ಈ ವಿಷಯ ತಿಳಿಸಿದ್ದರೆ, ಅವರ ಗಂಟೇನು ಹೋಗುತ್ತಿತ್ತೇ? ಛೇ! ಅದೆಷ್ಟು ಸುಲಭದ ಲೆಕ್ಕಗಳಿದ್ದವು ಗೊತ್ತೇ? ಐದು ಭಾಗಿಸು ಇಪ್ಪತ್ತು, ಮೂರು ಭಾಗಿಸು ಹದಿನೈದು, ಆರು ಭಾಗಿಸು ಹದಿನೆಂಟು. ಅನ್ಯಾಯವಾಗಿ ಮಾರ್ಕು ಕಳೆದುಕೊಂಡು, “ಇಂದು ಎನಗೆ ಗೋವಿಂದಾ…’ ಎಂದು ಹಾಡುವಂತಾಯಿತು. ಮೂರನೆಯ ತರಗತಿಯಲ್ಲಿ ಈ ಭಾಗಾಕಾರದ ಚಿಹ್ನೆ ಹುಟ್ಟಿಸಿದ ಭೀತಿ ಇವತ್ತಿನವರೆಗೂ ಮುಂದುವರಿದಿದೆ. ಇವತ್ತೂ ಪರೀಕ್ಷೆ ಹಾಲಿನಿಂದ ಹೊರಬರುವಾಗ “ಎಲ್ಲಾ ಮುಗಿದೇ ಹೋಯ್ತು’ ಎಂದೆನಿಸಿ “ಇಂದು ಎನಗೆ ಗೋವಿಂದಾ…’ ಹಾಡು ಮನಸ್ಸಿನಲ್ಲಿ ರಿಂಗಣಿಸುತ್ತದೆ.
ನನಗಂಟಿಕೊಂಡ ಪರೀಕ್ಷಾ ಭಯವನ್ನು ಹಿಮ್ಮೆಟ್ಟಿಸಲು ಮೂರನೇ ತರಗತಿಯ ನಂತರ ನಾನು ಹೂಡಿದ ಉಪಾಯಗಳು ಒಂದೆರಡಲ್ಲ. ಪರೀಕ್ಷೆಯ ಸಮಯದಲ್ಲಿ ಚೂÂಯಿಂಗಮ್ ಜಗಿಯುತ್ತಿದ್ದೆ. ಪದೇ ಪದೇ ನೀರು ಕುಡಿಯುತ್ತಿದ್ದೆ. ತಾತ ಹೇಳಿದಂತೆ ನೃಸಿಂಹ ಮಂತ್ರವನ್ನು ಮನಸ್ಸಿನಲ್ಲೇ ಪಠಿಸುತ್ತಿದ್ದೆ. ಪರೀಕ್ಷಾ ಭಯ ಮಾತ್ರ ಜಗ್ಗಲಿಲ್ಲ, ತಗ್ಗಲಿಲ್ಲ.
ಭಯಪಡುವ ಸನ್ನಿವೇಶಕ್ಕೇನೇ ಪದೇ ಪದೇ ನಮ್ಮನ್ನು ಒಡ್ಡಿಕೊಂಡರೆ, ಅನುಭವದಿಂದ ಮನಸು ಜಡ್ಡುಗಟ್ಟಿ ನಿರ್ಲಿಪ್ತವಾಗಬಹುದೆಂದು, ಮಿಡ್ಲ್ಸ್ಕೂಲಿನಿಂದ ಸಿಕ್ಕ ಸಿಕ್ಕ ಪರೀಕ್ಷೆಗಳಿಗೆ ಹಾಜರಾಗತೊಡಗಿದೆ. ಟೈಪ್‌ರೈಟಿಂಗ್ ಪರೀಕ್ಷೆಗಳು, ದಕ್ಷಿಣ ಭಾರತ ಹಿಂದಿ, ಮೈಸೂರು ಹಿಂದಿ, ಮಹಿಳಾ ಹಿಂದಿ, ಸಂಸ್ಕೃತ ಪರೀಕ್ಷೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಾವಾ-ಜಾಣ-ಕಬ್ಬ ಒಂದಾದ ಮೇಲೊಂದು ಪರೀಕ್ಷೆಯನ್ನು ಭಯದಿಂದಲೇ ಬರೆದು ಮುಗಿಸಿದೆ. ಪಾಸಿನ ಪ್ರಮಾಣಪತ್ರಗಳು ಕ್ವಿಂಟಾಲು ಭಾರ ತೂಗಿದವು. ಪರೀಕ್ಷೆಯ ಭಯ ಮಾತ್ರ ಮಾಯವಾಗದೇ ಉಳಿದೇಬಿಟ್ಟಿತು.
ಹಿಡಿದ ಚಾಳಿ ಬಿಡಲಾರದೇ, ಈಗ ಐವತ್ತರ ಗಡಿಯಲ್ಲೂ ಪರೀಕ್ಷೆಗಳನ್ನು ಬರೆಯುತ್ತಲೇ ಇದ್ದೇನೆ. ಪರೀಕ್ಷೆಯ ಕಂಪನ ಮಾತ್ರ ಈಗಲೂ ಮೊದಲಿನಂತೆಯೇ ಇದೆ. ಈಗಲೂ ಪರೀಕ್ಷೆಯ ಕೊಠಡಿಯಿಂದ ಹೊರಬರುವಾಗ ನೆನಪಾಗುವ ಹಾಡು- “ಇಂದು ಎನಗೆ ಗೋವಿಂದಾ…’
ವರನಟ ರಾಜ್‌ಕುಮಾರ್ ಅವರ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ರವರು ಕ್ಯಾಮರಾದ ಎದುರು ನಿಲ್ಲಲು ಭಯವಾಗುತ್ತಿದೆ ಎಂದಾಗ, ಅಣ್ಣಾವ್ರು, “”ನಿನಗೆ ಮಾತ್ರವಲ್ಲ, ನನಗೂ ನಲವತ್ತು ವರ್ಷದ ಅನುಭವದ ನಂತರವೂ ಕ್ಯಾಮರಾವನ್ನು ಎದುರಿಸಲು ಭಯವಾಗುತ್ತದೆ. ಆ ಭಯವು ಭಯವಲ್ಲ, ಭಕ್ತಿ. ಕಲೆಯ ಮೇಲಿನ ನಮ್ಮ ಗೌರವ” ಎಂದರಂತೆ. ಪರೀಕ್ಷಾ ಭಯದಲ್ಲೂ ವಿದ್ಯೆಯ ಮೇಲೆ ನಾವಿಟ್ಟಿರುವ ಗೌರವ-ಭಕ್ತಿಯೇ ಕಾಣುತ್ತದಲ್ಲವೆ?
– ಕೇವೀಟಿ ಮೇಗೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
AICC ಅಧಿವೇಶನ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.