ಜಗತ್ತಿನ ಏಕೈಕ ಶತಾಯುಷಿ ಜನಾಂಗ
Team Udayavani, Sep 29, 2019, 4:46 AM IST
ಇಂದಿನ ಜೀವನ ಶೈಲಿಯ ಪ್ರಕಾರ ಸಾಮಾನ್ಯ ಮನುಷ್ಯ ಸರಾಸರಿ ನೂರು ವರ್ಷಗಳ ಕಾಲ ಬದುಕುತ್ತಾನೆ. ಇದಕ್ಕಿಂತ ಹೆಚ್ಚಿನ ವರ್ಷ ಬದುಕಿರುವ ಜನರು ವಿಶ್ವದ ವಿವಿಧೆಡೆಗಳಲ್ಲಿರಬಹುದು. ಆದರೆ, ಅಂತಹವರ ಸಂಖ್ಯೆ ವಿರಳ. ಮನುಷ್ಯನ ವಯಸ್ಸು ಕಳೆಯುತ್ತ ಹೋದಂತೆ ದೇಹ ದುರ್ಬಲವಾಗಿ, ಮುಖ ಸುಕ್ಕುಗಟ್ಟಿ, ಮುಖದ ವರ್ಚಸ್ಸನ್ನು ನೋಡಿಯೇ ವ್ಯಕ್ತಿಯ ಅಂದಾಜು ವಯಸ್ಸನ್ನು ಹೇಳಲು ಸಾಧ್ಯವಾಗುತ್ತದೆ. ಆದರೆ, ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾದ ಜನಾಂಗವೊಂದಿದ್ದು, ಇವರ ಸರಾಸರಿ ಆಯಸ್ಸು 120 ವರ್ಷವಾಗಿದ್ದು, ಕೆಲವರು 160 ವರ್ಷಗಳ ಕಾಲ ಬದುಕುತ್ತಾರೆ. ಈ ಜನಾಂಗದ ಮಹಿಳೆಯರಿಗೆ ವಯಸ್ಸಾಗುತ್ತಿದ್ದರೂ ಅವರ ಮುಖದಲ್ಲಿ ವಯಸ್ಸಿನ ವ್ಯತ್ಯಾಸ ಅಷ್ಟು ಸುಲಭವಾಗಿ ಗೋಚರಿಸುವುದಿಲ್ಲ. ಈ ಜನಾಂಗವೇ ಹುಂಝ ಅಥವಾ ಬುರುಷೋ ಜನಾಂಗ.
ಹುಂಝ ಅಥವಾ ಬುರುಷೋ ಜನಾಂಗವು ನೆರೆರಾಷ್ಟ್ರವಾದ ಪಾಕಿಸ್ತಾನದ ಉತ್ತರಕ್ಕೆ ಇರುವ ಚಿತ್ರಾಲ್ ಜಿಲ್ಲೆಯ ಹುಂಝ ಕಣಿವೆ ಪ್ರದೇಶದಲ್ಲಿ ವಾಸ ಮಾಡುತ್ತಾರೆ. 2000ನೇ ವರ್ಷದಲ್ಲಿ ಈ ಪಂಗಡದ ಒಟ್ಟು ಜನಸಂಖ್ಯೆ ಸುಮಾರು 87,000 ರಷ್ಟು ಇದ್ದು, ಈ ಪಂಗಡದ ಸ್ತ್ರೀ ಹಾಗೂ ಪುರುಷರು ಬೇರೆ ಜನರಿಗೆ ಹೋಲಿಸಿದರೆ ಹೆಚ್ಚು ಆರೋಗ್ಯವಂತರು. ಈ ಜನಾಂಗದ ಜನರ ಜೀವನಶೈಲಿಯೂ ಅತ್ಯಂತ ವಿಭಿನ್ನವಾಗಿದೆ. ಈ ಜನಾಂಗದ ಮಹಿಳೆಯರು ಅವರ 65 ರಿಂದ 75ನೆಯ ವಯಸ್ಸಿನವರೆಗೂ ಮಕ್ಕಳಿಗೆ ಜನ್ಮ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪುರುಷರು ಸುಮಾರು 90ರ ವಯಸ್ಸಿನವರೆಗೂ ಸಂತಾನೋತ್ಪತ್ತಿಯ ಶಕ್ತಿಯನ್ನು ಹೊಂದಿದ್ದಾರೆ.
ಹುಂಝ ಜನಾಂಗದ ಜನರ ದೇಹದ ಚರ್ಮವೂ ಅತ್ಯಂತ ಕಾಂತಿಯುತವಾಗಿದ್ದು, ಇವರಿಗೆ ವಯಸ್ಸಾಗುತ್ತ ಹೋದರೂ ಚರ್ಮ ಅಷ್ಟು ಸುಲಭವಾಗಿ ಸುಕ್ಕುಗಟ್ಟುವುದಿಲ್ಲ. ಈ ಜನಾಂಗದ ಹೆಣ್ಣುಮಕ್ಕಳು ಬಾಲ್ಯದಿಂದ ಯೌವನ, ಯೌವನದಿಂದ ಮಧ್ಯವಯಸ್ಸಿಗೆ ಬಂದರೂ ಅವರ ವಯಸ್ಸು, ಮುಖದ ವರ್ಚಸ್ಸಿನಲ್ಲಿ ಕಾಣಿಸುವುದಿಲ್ಲ. ಹುಂಝ ಜನರಿಗೆ ಕ್ಯಾನ್ಸರ್‌ನಂಥ ಮಾರಕ ರೋಗ ಬರುವುದೇ ಇಲ್ಲ. ಹುಂಝ ಜನಾಂಗದವರ ಉತ್ಕೃಷ್ಟವಾದ ಆರೋಗ್ಯದ ಗುಟ್ಟು ಅಲ್ಲಿನ ಜನರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಗಳಲ್ಲಿ ಅಡಗಿದೆ. ಹುಂಝ ಜನಾಂಗದವರ ಬಗ್ಗೆ ಇತ್ತೀಚಿನವರೆಗೂ ಪ್ರಪಂಚಕ್ಕೆ ಅಷ್ಟಾಗಿ ತಿಳಿದಿರಲಿಲ್ಲ.
ವಿಮಾನ ನಿಲ್ದಾಣದಲ್ಲಾದ ಘಟನೆಯ ಬಳಿಕ !
ಈ ಜನಾಂಗದ ಅಬ್ದುಲ್ ಮೊಬುಡು ಎಂಬ ವ್ಯಕ್ತಿಯು ಲಂಡನ್‌ಗೆ ಹೋದಾಗ ಲಂಡನ್ ವಿಮಾನ ನಿಲ್ದಾಣದ ವಲಸೆ (ಇಮಿಗ್ರೇಶನ್) ವಿಭಾಗದಲ್ಲಿ ಈತನ ಪಾಸ್‌ಪೋರ್ಟ್‌ನಲ್ಲಿ ಇದ್ದ ಜನನ ದಿನಾಂಕಕ್ಕೂ ಆತನ ದೇಹಾಕೃತಿಗೂ ಹೋಲಿಕೆ ಕಷ್ಟವಾಗಿತ್ತು. ನಂತರ ಜನನ ದಿನಾಂಕದ ಸತ್ಯಾಸತ್ಯತೆಯ ಪರೀಕ್ಷೆಯನ್ನು ಮಾಡುವ ಸಲುವಾಗಿ ವಿವರಗಳನ್ನು ಪರೀಕ್ಷಿಸಿದಾಗ ತಿಳಿದು ಬಂದ ವಿಷಯ ಎಲ್ಲರಿಗೂ ಅಚ್ಚರಿಯನ್ನು ತಂದಿತ್ತು. ಇದರ ನಂತರವೇ ಹುಂಝ ಜನಾಂಗದ ಬಗ್ಗೆ ಅನೇಕರು ಅಧ್ಯಯನ ಮಾಡಿ ಅವರ ಜೀವನ ಶೈಲಿ ಮತ್ತು ಆರೋಗ್ಯಯುತ ಜೀವನದ ಕುರಿತಾಗಿ ಹೊರಜಗತ್ತಿಗೆ ತಿಳಿಯುವಂತೆ ಮಾಡಿದರು.
ಹುಂಝ ಕಣಿವೆಯಲ್ಲಿ ಇಲ್ಲಿನ ಜನರು ತಮ್ಮದೇ ಆದ ಶೈಲಿಯಲ್ಲಿ ಆಹಾರವನ್ನು ಬೆಳೆಯುತ್ತಾರೆ. ಇಲ್ಲಿನ ಶುದ್ಧ ಹಿಮನದಿಯ ನೀರನ್ನು ಕುಡಿಯಲು ಮತ್ತು ಸ್ನಾನ ಮಾಡಲು ಬಳಸುತ್ತಾರೆ. ನಗರಗಳು ಅಥವಾ ವಾಣಿಜ್ಯ ಕೇಂದ್ರಗಳಲ್ಲಿ ದೊರೆಯುವ ಯಾವುದೇ ರೀತಿಯ ಕತ್ತರಿಸಿದ ಅಥವಾ ಯಾವುದೇ ಸಂಸ್ಕರಿಸಿದ ಆಹಾರಗಳನ್ನು ಇವರು ಸೇವಿಸುವುದೇ ಇಲ್ಲ. ತಾಜಾ ತರಕಾರಿಗಳು, ಹಾಲು, ಧಾನ್ಯಗಳು ಮತ್ತು ಹಣ್ಣುಗಳನ್ನಷ್ಟೇ ಇವರು ಆಹಾರವಾಗಿ ಬಳಸುತ್ತಾರೆ. ಏಪ್ರಿಕಾಟ್‌ಗಳಿಂದ ಸಮೃದ್ಧವಾಗಿರುವ ಆಹಾರವನ್ನು ಇವರು ಪ್ರಧಾನ ಆಹಾರವಾಗಿ ಬಳಸುತ್ತಾರೆ. ಇವರು ವರ್ಷಕ್ಕೆ ಕೆಲವು ತಿಂಗಳುಗಳ ಕಾಲ ಕೇವಲ ಏಪ್ರಿಕಾಟ್‌ರಸದಿಂದ ತಯಾರಿಸಿದ ಆಹಾರಗಳನ್ನೇ ಬಳಸುತ್ತಾರೆ.
ವಿಶ್ವದ ಕೆಲವು ಪ್ರದೇಶಗಳನ್ನು ಹಸಿರು ವಲಯಗಳೆಂದು (ಬ್ಲೂಝೋನ್) ಕರೆಯಲಾಗುತ್ತದೆ, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರು ಶತಾಯುಷಿಗಳು ಅಥವಾ ದೀರ್ಘಾವಧಿಯ ಆಯಸ್ಸನ್ನು ಹೊಂದಿರುತ್ತಾರೆ. ಹುಂಝಾಗಳಿರುವ ಕಣಿವೆ ಪ್ರದೇಶವನ್ನು ಹಸಿರುವಲಯ ಪಟ್ಟಿಗೆ ಸೇರಿಸಿಲ್ಲವಾದರೂ ಹುಂಝಗಳು ಹಸಿರು ವಲಯದಲ್ಲಿನ ನಿವಾಸಿಗಳ ಬಹುತೇಕ ಗುಣಲಕ್ಷಣಗಳನ್ನು ಹೋಲುತ್ತಾರೆ. ಇವರು ಸಮುದ್ರ ಮಟ್ಟಕ್ಕಿಂತ ಅತಿ ಹೆಚ್ಚು ಎತ್ತರದ ಪ್ರದೇಶದಲ್ಲಿ ವಾಸಿಸುತ್ತಾರೆ. ಪರ್ವ ತ ಗಳ ಹಾದಿ ಯಲ್ಲಿ ದಿನಕ್ಕೆ 15ರಿಂದ 20 ಕಿ. ಮೀ. ನಡೆಯುತ್ತಾರೆ. ಇವರು ಧಾರ್ಮಿಕ ಸಂಪ್ರದಾಯವನ್ನು ಸಹ ಅನುಸರಿಸುತ್ತಾರೆ. ಈ ಅವಧಿಯ 4-5 ತಿಂಗಳವರೆಗೆ ಇವರು ಘನ ಆಹಾರವನ್ನು ಸೇವಿಸದೇ ಒಣಗಿದ ಏಪ್ರಿಕಾಟ್ ರಸವನ್ನು ಮಾತ್ರ ಕುಡಿಯುತ್ತಾರೆ. ಜಾಗತೀಕರಣದ ಬಿಸಿಯು ಈ ಸಮುದಾಯಕ್ಕೂ ನಿಧಾನವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ಇವರು ಕೈಗಾರಿಕೆಗಳಲ್ಲಿ ತಯಾರಾದ ಸಂಸ್ಕರಿಸಿದ ಆಹಾರಗಳನ್ನೂ ಬಳಸಲು ಪ್ರಾರಂಭಿಸಿದ್ದು ಕ್ಷಯ ಮತ್ತು ಜಠರದ ಸಮಸ್ಯೆಗಳು, ಹಿಂದೆಂದೂ ಕಾಣದ ಕಾಯಿಲೆಗಳು ಕಾಣಿಸಿಕೊಳ್ಳಲಾರಂಭಿಸಿದೆ.
ಸಂತೋಷ್ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.