ಪ್ರಪಂಚದ ಎಂಟನೆಯ ಅದ್ಭುತ ಬುರ್ಜ್ ಖಲೀಫಾ
Team Udayavani, Dec 24, 2017, 6:00 AM IST
ದುಬೈ ವಿಮಾನ ನಿಲ್ದಾಣವು ಜಗತ್ತಿನ ಅತ್ಯಂತ ಚಟುವಟಿಕೆಯ ವಿಮಾನ ನಿಲ್ದಾಣಗಳಲ್ಲಿ ಒಂದು. ಪ್ರತಿವರ್ಷ ಸುಮಾರು 20 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಮೂರು ದಶಲಕ್ಷ ಟನ್‌ನಷ್ಟು ಸರಕು ಈ ವಿಮಾನ ನಿಲ್ದಾಣದ ಉಪಯೋಗ ಪಡೆಯಲು ಸಾಧ್ಯವಾಗಿದೆ. ನಿರ್ಮಾಣ ಹಂತದಲ್ಲಿರುವ ಅಲ್ ಮಕೂ¤ಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಗತ್ತಿನ ಅತಿ ದೊಡ್ಡ ವಿಮಾನ ನಿಲ್ದಾಣವಾಗಲಿದ್ದು, ವಾರ್ಷಿಕ 12 ದಶಲಕ್ಷ ಟನ್ ಸರಕು ಹಾಗೂ 160 ದಶಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸೌಕರ್ಯ ಹೊಂದಲಿದೆ.
ಇತ್ತೀಚೆಗೆ ಪ್ರವಾಸ ನಿಮಿತ್ತ ಬೆಂಗಳೂರಿನಿಂದ ಹೊರಟು ದುಬೈ ವಿಮಾನ ನಿಲ್ದಾಣದಲ್ಲಿ ಇಳಿದು ಬಳಿ ಇರುವ ಮೆಟ್ರೊ ನಿಲ್ದಾಣದಲ್ಲಿ ರೈಲು ಹಿಡಿದು ನಾವು ಉಳಿದುಕೊಳ್ಳಲಿದ್ದ ಸಿಟಿ ಸ್ಟೇ ಹೊಟೇಲ್ ಅಪಾರ್ಟ್‌ಮೆಂಟ್ ತಲುಪಿದ್ದೆವು.
ದುಬೈ ನಗರವು ಪರ್ಷಿಯನ್ ಕೊಲ್ಲಿಯ ದಕ್ಷಿಣ ಭಾಗದಲ್ಲಿದ್ದು, ಸಂಯುಕ್ತ ಅರಬ್ ರಾಷ್ಟ್ರದ “ದುಬೈ ಸಂಸ್ಥಾನ’ದ ರಾಜಧಾನಿಯಾಗಿದೆ. ಸಂಯುಕ್ತ ಅರಬ್ ರಾಷ್ಟ್ರದ ಏಳು ಸಂಸ್ಥಾನಗಳ ಪೈಕಿ ಅಬುಧಾಬಿ ಮತ್ತು ದುಬೈ ಮಾತ್ರ ರಾಷ್ಟ್ರೀಯ ಪ್ರಾಮುಖ್ಯವಿರುವ ವಿಷಯಗಳಲ್ಲಿ ವೀಟೊ ಚಲಾಯಿಸುವ ಹಕ್ಕನ್ನು ಹೊಂದಿದ ಪ್ರಮುಖ ಸಂಸ್ಥಾನಗಳಾಗಿವೆ. ದುಬೈ- ಶಾರ್ಜಾ- ಅಜ್ಮಾನ್ ಮೆಟ್ರೊಪಾಲಿಟನ್ ಕ್ಷೇತ್ರದ ಶಿಖರಪ್ರಾಯವಾದ ದುಬೈ ಸಂಯುಕ್ತ ಅರಬ್ ರಾಷ್ಟ್ರದ ಅತ್ಯಂತ ಜನನಿಬಿಡ ನಗರವಾಗಿದೆ. 1960ರಲ್ಲಿ ಪೆಟ್ರೋಲಿಯಮ್ ನಿಕ್ಷೇಪ ಪತ್ತೆಯಾದ ನಂತರ, ಪೆಟ್ರೋಲಿಯಮ್ ಉತ್ಪನ್ನಗಳಿಂದ ಮತ್ತು ಸಾಂಪ್ರದಾಯಿಕ ಮೂಲಗಳಿಂದ ಆದಾಯವನ್ನು ಹೊಂದಿದ್ದ ದುಬೈ, ಕ್ರಮೇಣ ಪೆಟ್ರೋಲಿಯಮ್ ಉತ್ಪನ್ನಗಳ ಆದಾಯ ಇಳಿಮುಖವಾದುದರಿಂದ, ವ್ಯಾಪಾರ ವಹಿವಾಟು ಹಾಗೂ ಪ್ರವಾಸೋದ್ಯಮದಿಂದ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಾಗಿದೆ. ಈಚೆಗೆ ಮಧ್ಯಪ್ರಾಚ್ಯದ ಅತ್ಯಂತ ಮುಖ್ಯ ವ್ಯಾಪಾರೀ ಕೇಂದ್ರವಾಗಿ ದುಬೈ ಹೊರಹೊಮ್ಮಿದ್ದು, 2020ರ ವಲ್ಡ…ì ಎಕೊÕ$³ ಸಹ ಆಯೋಜನೆಗೊಳ್ಳಲಿದೆ.
ಕಟ್ಟಡಗಳ ವೈಭವ
ಕಣ್ಣು ಕೋರೈಸುವ ಮಾಲ್‌ಗಳು ಹಾಗೂ ಗಗನಚುಂಬಿ ಕಟ್ಟಡಗಳು ದುಬೈ ನಗರದ ಪ್ರಮುಖ ಆಕರ್ಷಣೆಗಳು. ಒಂದೊಂದು ಕಟ್ಟಡವೂ ವಿಭಿನ್ನ ಎತ್ತರ ಮತ್ತು ಆಕಾರಗಳಿಂದ ಕಂಗೊಳಿಸುತ್ತದೆ. ಅರಬ್ ಮತ್ತು ಅಂತಾರಾಷ್ಟ್ರೀಯ, ಮುಖ್ಯವಾಗಿ ಅಮೆರಿಕದ ನಿರ್ಮಾಣ ಸಂಸ್ಥೆಗಳು ದುಬೈನಲ್ಲಿ ನವನವೀನ ವಿನ್ಯಾಸದ ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿಕೊಂಡಿವೆ. 1980ರ ದಶಕದಿಂದ ಪ್ರಾರಂಭವಾದ ನಿರ್ಮಾಣ ಚಟುವಟಿಕೆ 1990ರ ದಶಕದಲ್ಲಿ ಬಿರುಸುಗೊಂಡು, 2000ರ ದಶಕದಲ್ಲಿ ಆಧುನಿಕ ಇಸ್ಲಾಮ್ ಮತ್ತು ಜಾಗತಿಕ ಕಟ್ಟಡ ನಿರ್ಮಾಣ ಕ್ಷೇತ್ರವು ಉನ್ನತ ಮಟ್ಟವನ್ನು ಮುಟ್ಟಿರುವುದನ್ನು ಇಲ್ಲಿ ಕಾಣಬಹುದು. 2010ರಲ್ಲಿ ಬುರ್ಜ್ ಖಲೀಫಾದ ನಿರ್ಮಾಣವಾಗುವುದರೊಂದಿಗೆ ಈ ಪೈಪೋಟಿ ಇನ್ನೊಂದು ಮಜಲನ್ನು ಮುಟ್ಟಿಬಿಟ್ಟಿದೆ. ಇದೀಗ ದುಬೈ ನಗರದ ಕಟ್ಟಡಗಳ ಎತ್ತರವನ್ನು ಅಡಿ ಅಥವಾ ಮೀಟರುಗಳಲ್ಲಿ ಅಳೆಯದೆ ಕಿಲೋಮೀಟರುಗಳಲ್ಲಿ ಅಳೆಯುವ ಹಂತಕ್ಕೆ ತಲುಪಿದೆ ಎಂದರೆ ತಪ್ಪಾಗಲಾರದು! ಕಾಲು ಕಿ.ಮೀ.ಗಿಂತ ಎತ್ತರವಿರುವ, ಅರ್ಧ ಕಿ.ಮೀ. ಎತ್ತರವಿರುವ ಅನೇಕ ಕಟ್ಟಡಗಳನ್ನು ಇಲ್ಲಿ ನಾವು ನೋಡಬಹುದು. ಈ ಎಲ್ಲ ಕಟ್ಟಡಗಳಿಗೆ ಕಳಶಪ್ರಾಯವಾಗಿರುವುದು ಬುರ್ಜ್ ಖಲೀಫಾ ಎಂಬ ಕಟ್ಟಡ.
ಮಯನಿರ್ಮಿತ ಮಾಯಾಪುರ !
829.8 ಮೀ. ಅಥವಾ 2,722 ಅಡಿ ಎತ್ತರವಿರುವ, 33 ಲಕ್ಷ ಚದರಡಿ ತಳಪಾಯ ಹೊಂದಿರುವ, 168 ಮಹಡಿಗಳುಳ್ಳ ಬುರ್ಜ್ ಖಲೀಫಾ ಈವರೆಗಿನ ಪ್ರಪಂಚದ ಅತಿ ಎತ್ತರದ ಮಾನವನಿರ್ಮಿತ ಕಟ್ಟಡ ಎಂಬ ಖ್ಯಾತಿಯನ್ನು ಹೊಂದಿದೆ. ಇದನ್ನು ಪ್ರಪಂಚದ ಎಂಟನೆಯ ಅದ್ಭುತ ಎಂದು ಕರೆಯಬಹುದೇನೋ! ಹೈಮೆನೋಕಾಲಿಸ್ ಎಂಬ ಮರುಭೂಮಿಯ ಹೂವಿನ ಆಕಾರವು ಈ ಕಟ್ಟಡದ ತಳವಿನ್ಯಾಸಕ್ಕೆ ಪ್ರೇರಣೆಯಾಗಿದೆ. 2004ರ ಸೆಪ್ಟಂಬರ್ 20ರಂದು ಪ್ರಾರಂಭವಾದ ಕಟ್ಟಡದ ನಿರ್ಮಾಣ ಕಾರ್ಯವು ಪೂರ್ಣಗೊಂಡದ್ದು 2010ರ ಜನವರಿ 4ರಂದು. ವಿವಿಧ ದೇಶಗಳ ಮೂವತ್ತು ನಿರ್ಮಾಣ ಸಂಸ್ಥೆಗಳ ಸುಮಾರು ನೂರು ರಾಷ್ಟ್ರೀಯತೆಯುಳ್ಳ ಸಹಸ್ರಾರು ಕೆಲಸಗಾರರು ಎಸ್‌ಒಎಮ್ ಆರ್ಕಿಟೆಕ್ಚರ್ ಡಿಸೈನ್ ಸಂಸ್ಥೆಯು ವಿನ್ಯಾಸಗೊಳಿಸಿದ ಈ ಕಟ್ಟಡವನ್ನು ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ. ದಕ್ಷಿಣ ಏಷ್ಯಾದ ಕೆಲಸಗಾರರ ಮಾನವಹಕ್ಕು ಉಲ್ಲಂಘನೆಯ ಆರೋಪವನ್ನು ದುಬೈ ಈ ಸಂದರ್ಭದಲ್ಲಿ ಎದುರಿಸಬೇಕಾಯಿತು! ಈ ಕಟ್ಟಡದ ನಿರ್ಮಾಣ ವೆಚ್ಚ ಸುಮಾರು ಎರಡು ಬಿಲಿಯನ್ ಡಾಲರುಗಳು.
ಅದೊಂದು ಪ್ರತಿಸ್ವರ್ಗ !
ಬುರ್ಜ್ ಖಲೀಫಾ ಕಟ್ಟಡದಲ್ಲಿ ಪ್ರತಿಷ್ಠಿತ ಹೊಟೇಲ್‌ಗಳು, ಪ್ರಖ್ಯಾತ ಅಪಾರ್ಟ್‌ಮೆಂಟ್‌ಗಳು, ವ್ಯಾಪಾರಿ ಕೇಂದ್ರಗಳು ಇತ್ಯಾದಿ ಇವೆ. ಈ ಕಟ್ಟಡದಲ್ಲಿ ಒಂದು ಐಷಾರಾಮಿ ಮನೆಯನ್ನು ಹೊಂದುವುದು ದೇಶ-ವಿದೇಶಗಳ ಕೋಟ್ಯಾಧಿಪತಿಗಳ ಕನಸು ಎಂದರೆ ತಪ್ಪಲ್ಲ. ಈ ಕಟ್ಟಡವನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಿರುವುದರಿಂದ ಪ್ರವಾಸೋದ್ಯಮಕ್ಕೂ ಒಳಿತಾಗಿದೆ. ಹಾಗೆಯೇ ದೇಶ-ವಿದೇಶಗಳ ಪ್ರವಾಸಿಗರಿಗೆ ಈ ಅದ್ಭುತ ಕಟ್ಟಡವನ್ನು ನೋಡುವ ಸ್ಮರಣೀಯ ಅನುಭವ ಲಭ್ಯವಾಗುತ್ತದೆ. ಬುರ್ಜ್ ಖಲೀಫಾದ 125ನೇ ಮಹಡಿಯವರೆಗೆ ಹೋಗಲು ಪ್ರವಾಸಿಗರಿಗೆ ಅವಕಾಶವಿದೆ. ಆಲ್ಲಿರುವ ಅಠಿ At the Top, Burj Khalifa- -ಪ್ರಪಂಚದ ಅತಿ ಎತ್ತರದ ವೀಕ್ಷಣಾ ಸ್ಥಳ ಎಂಬ ಖ್ಯಾತಿಯನ್ನು ಹೊಂದಿದ್ದು ವಾರ್ಷಿಕ ಎರಡು ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವೇಶ ಶುಲ್ಕ ಒಬ್ಬರಿಗೆ 125 ದಿರØಮ್‌ಗಳು, ಒಂದು ದಿರØಮ್‌ನ ಬೆಲೆ ಸುಮಾರು 19 ರೂ. ಅಂದರೆ ಪ್ರವೇಶ ಶುಲ್ಕ ತಲಾ ರೂ. 2,375. ಟಿಕೆಟ್ ಕೊಳ್ಳುವಾಗ ನಾವು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅಲ್ಲಿರಬೇಕಾಗುತ್ತದೆ. ಕಟ್ಟುನಿಟ್ಟಿನ ಸುರಕ್ಷತಾ ತಪಾಸಣೆಯ ನಂತರ ಸರತಿಸಾಲಿನಲ್ಲಿ ನಿಂತರೆ ನಾವು ಲಿಫ್ಟ್ವರೆಗೆ ಹೋಗಲು ಸುಮಾರು ಅರ್ಧ ಮುಕ್ಕಾಲು ಗಂಟೆ ಬೇಕಾಗುತ್ತದೆ. ಲಿಫ್ಟ್ 124ನೇ ಮಹಡಿಯವರೆಗೆ ನಮ್ಮನ್ನು ಕರೆದೊಯ್ಯುತ್ತದೆ. ಎಷ್ಟು ಸಮಯ ಲಿಫ್ಟ್ ಒಳಗೆ ಇರಬೇಕಾಗುತ್ತದೋ ಎಂಬ ಲೆಕ್ಕಾಚಾರವನ್ನು ನಾವೆಲ್ಲ ಹಾಕುತ್ತಿದ್ದರೆ ಕೇವಲ 58 ಸೆಕೆಂಡುಗಳಲ್ಲಿ 124ನೇ ಮಹಡಿ ತಲುಪಿಯಾಗಿತ್ತು! ಅಲ್ಲಿಂದ ಮುಂದಿನ ಒಂದು ಮಹಡಿಗೆ ಮೆಟ್ಟಿಲು ಹತ್ತಿ ಹೋಗಲು ಅವಕಾಶವಿದೆ.
ವಿಹಂಗಮ ನೋಟ
ಕಟ್ಟಡದ ಹೊರ ಆವರಣದ ಒಂದು ಸುತ್ತು ಬರಬಹುದಾದ ವೀಕ್ಷಣಾ ಬಾಲ್ಕನಿ 124 ಮತ್ತು 125ನೇ ಮಹಡಿಯಲ್ಲಿವೆ. ಗಾಜಿನ ಗೋಡೆಯ ಮೂಲಕ ನಾವು ಸುತ್ತಲಿನ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ನೆಲದಿಂದ ಕತ್ತು ನೋಯಿಸಿಕೊಂಡು ನೋಡಿದ್ದ ಎತ್ತರೆತ್ತರದ ಕಟ್ಟಡಗಳು ಕೂಡಾ ಇಲ್ಲಿಂದ ಕುಬjವಾಗಿ ಕಾಣುತ್ತವೆ! ನಾವು ಹೋಗಿದ್ದು ರಾತ್ರಿಯ ಸಮಯವಾದ್ದರಿಂದ ಸುತ್ತೆಲ್ಲ ದೂರದೂರಕ್ಕೆ ಬೆಳಕು ಚೆಲ್ಲಿದಂತಹ ದೃಶ್ಯ ನಮ್ಮ ಮೈಮರೆಸಿತ್ತು. ಎÇÉೋ ಪಾತಾಳದಲ್ಲಿ ಚಲಿಸುತ್ತಿದ್ದ ವಾಹನಗಳು ಇರುವೆ ಸಾಲಿನಂತೆ ಕಂಡಿತ್ತು.
ಕಳೆದ ಜನವರಿಯಲ್ಲಿ ನಮ್ಮ ಗಣರಾಜ್ಯೋತ್ಸವದ ಹಿಂದಿನ ರಾತ್ರಿ ಬುರ್ಜ್ ಖಲೀಫಾ ಕಟ್ಟಡದ ಮೇಲೆ ನಮ್ಮ ದೇಶದ ಬಾವುಟದ ವಿನ್ಯಾಸ ಬಿಡಿಸಿ, ದೇಶಭಕ್ತಿಯ ಗೀತೆಗಳನ್ನು ನುಡಿಸಿದ್ದು ನಾವೆಲ್ಲ ಹೆಮ್ಮೆಪಡುವಂತೆ ಮಾಡಿತ್ತು.
– ಕೆ. ಪಿ. ಸತ್ಯನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.