ಕನ್ನಡದ ಮೊದಲ ಮುದ್ರಿತ ಪುಸ್ತಕ ಪ್ರಕಟಗೊಂಡು ಎರಡು ಶತಮಾನ


Team Udayavani, Aug 13, 2017, 6:50 AM IST

12-SUPLY-8.jpg

ವಿಲಿಯಂ ಕೇರಿಯ ಎ ಗ್ರಾಮರ್‌ ಆಫ್ ಕರ್ನಾಟ ಲಾಂಗ್ವೇಜ್‌ 1817ರ ಆಗಸ್ಟ್‌ 17ರಂದು ಬಿಡುಗಡೆಯಾಯಿತು. ಇದೀಗ ಎರಡು ನೂರು ವರ್ಷಗಳಾದವು. ಕನ್ನಡ ಪುಸ್ತಕ ಪ್ರಕಟಣ ಇತಿಹಾಸದಲ್ಲಿ ಮುದ್ರಣ ರೂಪದಲ್ಲಿ ಕಾಣಿಸಿಕೊಂಡ ಮೊತ್ತಮೊದಲ ಪುಸ್ತಕ ಎಂಬ ಐತಿಹಾಸಿಕ ಮಹತ್ವ ಈ ಪುಸ್ತಕಕ್ಕಿದೆ. ಕನ್ನಡ ವ್ಯಾಕರಣವನ್ನು ಅಂದಿನ ಮುದ್ರಿತ ಅಕ್ಷರ ಮಾಧ್ಯಮ ಕಲ್ಲಚ್ಚಿನಲ್ಲಿ ಕೊರೆದು ಮುದ್ರಿಸಿದ ಕೀರ್ತಿ ದೂರದ ಕೊಲ್ಕತಾದ ಸೆರಾಂಪುರ (ಶ್ರೀರಾಮಪುರ)ಕ್ಕೆ ಸಲ್ಲುತ್ತದೆ. ಅಲ್ಲೇ ಮುಂದೆ ಮೊದಲ ಕನ್ನಡ ಬೈಬಲ್‌ ಅವತರಣಿಕೆಯೂ ಪ್ರಕಟವಾಯಿತು.

ಕನ್ನಡದಲ್ಲಿ ಪ್ರಕಟವಾದ  ಎ ಗ್ರಾಮರ್‌ ಆಫ್ ಕರ್ನಾಟ ಲಾಂಗ್ವೇಜ್‌ ಪುಸ್ತಕ ಕನ್ನಡ ವ್ಯಾಕರಣವನ್ನು ಹೊಸ ದೃಷ್ಟಿಯಿಂದ ನೋಡಿ ಬರೆದದ್ದಾಗಿದೆ. ಸಾಂಪ್ರದಾಯಿಕ ವ್ಯಾಕರಣದ ಕಟ್ಟುಪಾಡುಗಳಿಂದ ಹೊರಬಂದು ಭಾಷಾಶಾಸ್ತ್ರ  (Philology)ದ ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಬೋಧನೆಗೆ ಅನುಕೂಲವಾಗುವಂತೆ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಕನ್ನಡದಲ್ಲಿ ಉದಾಹರಣೆಗಳನ್ನು ನೀಡಲಾಗಿದೆ.

ಈ ವ್ಯಾಕರಣ ಗ್ರಂಥ ಕನ್ನಡದ ಸರ್ವಾಂಗ ಪರಿಶುದ್ಧ ಕೃತಿ ಎಂದು ನಾವು ಭಾವಿಸ‌ಬೇಕಾಗಿಲ್ಲ. ಆಗಿನ ಕಾಲದ ಭಾಷಿಕ ತಿಳಿವಳಿಕೆಯ ಹಿನ್ನೆಲೆಯಲ್ಲಿ ಇದು ರಚಿತವಾಗಿದೆ.  ಇದಕ್ಕಿಂತ ಹೆಚ್ಚು ಶಾಸ್ತ್ರೀಯವಾದ ಇನ್ನೊಂದು ವ್ಯಾಕರಣ ಗ್ರಂಥ ಹೊರಬಂದರೆ ತಾನು ಅತೀವ ಸಂತೋಷಪಡುತ್ತೇನೆ ಎನ್ನುವ ವಿಲಿಯಂಕೇರಿಯ ಉದಾರದೃಷ್ಟಿ ಗಮನಾರ್ಹವಾದುದು. ಆಧುನಿಕ ಕನ್ನಡದ ಮುಂಗುರುಹನ್ನು ಈ ವ್ಯಾಕರಣ ಗ್ರಂಥದಲ್ಲಿ ನೋಡಬಹುದು.

ಯಾರು ಈ ವಿಲಿಯಂ ಕೇರಿ?
ವಿಲಿಯಂ ಕೇರಿ ಕ್ರಿ.ಶ. 1761ರಲ್ಲಿ ಲಂಡನ್‌ ನಗರದ ಪ್ಯಾಡಿಂಗ್ಟನ್‌ನಲ್ಲಿ ಜನ್ಮವೆತ್ತಿದರು. ಇವರ ತಂದೆ ಪಾದರಕ್ಷೆಯ ಅಂಗಡಿಯನ್ನಿಟ್ಟುಕೊಂಡಿದ್ದರು. ಎಳವೆಯಿಂದಲೇ ಇವರಿಗೆ ಭಾಷೆಗಳನ್ನು ಕಲಿಯುವುದರಲ್ಲಿ ವಿಶೇಷ ಆಸಕ್ತಿ. ಜೊತೆಗೆ ಬೈಬಲ್‌ ಪಠಣದಲ್ಲಿ ಎಲ್ಲಿಲ್ಲದ ಉತ್ಸಾಹ. ಹೀಗಾಗಿ ಗ್ರೀಕ್‌, ಹೀಬ್ರೂ, ಡಚ್‌, ಜರ್ಮನ್‌ ಮುಂತಾದ ಭಾಷೆಗಳಲ್ಲಿ ಪರಿಣತಿಯನ್ನು ಪಡೆದರು. 1779ರಲ್ಲಿ ಆತನಿಗೆ ಕ್ರೈಸ್ತ ಧರ್ಮೋಪದೇಶವನ್ನು ನೀಡಲಾಯಿತು. 1881ರಲ್ಲಿ ಪೊರೂತಿ ಎಂಬವಳ ಜೊತೆ ವಿವಾಹ ನಡೆಯಿತು.

ಧರ್ಮೋಪದೇಶಕರ ಜೊತೆ ಧಾರ್ಮಿಕ ಚರ್ಚೆಯನ್ನು ನಡೆಸುತ್ತ ಜಗತ್ತಿನಾದ್ಯಂತ ಕ್ರೈಸ್ತಧರ್ಮವನ್ನು ವಿಸ್ತರಿಸುವ ಸಾಧ್ಯತೆಯ ಬಗೆಗೆ ಎಳವೆಯಿಂದಲೇ ಕುತೂಹಲ ತಾಳಿದ್ದರು. ಕ್ರಿ.ಶ. 1783ರಲ್ಲಿ ಭಾರತದ ದಲಿತ ಹಾಗೂ ರೋಗಪೀಡಿತ ಬಡಜನರ ಶುಶ್ರೂಷೆಗಾಗಿ ಕೇರಿ ಭಾರತಕ್ಕೆ ಬಂದರು. ಕರುಣಾಮಯಿಯಾದ ಕೇರಿ ಕಲ್ಕತ್ತಾ ಪರಿಸರದಲ್ಲಿ ಬೇಗನೆ ಜನಪ್ರಿಯವಾದರು.

ಧರ್ಮೋಪದೇಶದ ಜೊತೆಗೆ ಆತ ಕಲ್ಕತ್ತಾದಲ್ಲಿ ದೇಶೀಯ ಭಾಷಾಮಾಧ್ಯಮದ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಉತ್ಸುಕರಾದರು. ಇಂತಹ ಶಾಲೆಗಳಲ್ಲಿ ಯುರೋಪಿಯನ್‌ ವಿಜ್ಞಾನವನ್ನು ಬೋಧಿಸುವ ಮೂಲಕ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಆಧುನಿಕತೆಯನ್ನು ತರುವ ಪ್ರಯತ್ನ ಮಾಡಿದರು. ಶಾಲಾಶಿಕ್ಷಣ, ಚಿಕಿತ್ಸಾಶಿಬಿರ ಹಾಗೂ ಕ್ರೈಸ್ತಮತ ಧರ್ಮಗಳನ್ನು ಕುರಿತು ಉಪನ್ಯಾಸ- ಇವುಗಳಲ್ಲಿ ಕೇರಿ ಸಂಪೂರ್ಣವಾಗಿ ತನ್ನನ್ನು  ತೊಡಗಿಸಿಕೊಂಡರು. ಜೊತೆಗೆ ಭಾರತದಲ್ಲಿ ಪ್ರಚಲಿತವಿದ್ದ ಸಹಗಮನ ಪದ್ಧತಿ, ನರಬಲಿ ಮುಂತಾದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕುವಲ್ಲಿ ಅಂದಿನ ವೈಸ್‌ರಾಯ್‌ ಬೆಂಟಿಂಕ್‌ ಜೊತೆ ಕೈ ಜೋಡಿಸಿದರು. ಕಲ್ಕತ್ತಾ¤ದ ಪೋರ್ಟ್‌ ವಿಲಿಯಂ ಕಾಲೇಜಿನಲ್ಲಿ ಬಂಗಾಳಿ ಮತ್ತು ಸಂಸ್ಕೃತ ಭಾಷಾ ಅಧ್ಯಾಪಕನಾಗಿ ನಿಯುಕ್ತರಾದರು.

ವಿಲಿಯಂ ಕೇರಿ ಭಾರತದಲ್ಲಿ ನಲವತ್ತು ವರ್ಷಗಳ ಕಾಲ ಉಳಿದಿದ್ದ ಕ್ರೈಸ್ತಮತ ಪ್ರಚಾರಕರಾಗಿ, ವಿವಿಧ ಭಾರತೀಯ ಭಾಷೆಗಳಲ್ಲಿ ಬೈಬಲ್‌ ಅವತರಣಿಕೆಗಳನ್ನು ಸಿದ್ಧಪಡಿಸಿ ಅವುಗಳನ್ನು ತನ್ನ ಸೆರಾಂಪುರದ ಮುದ್ರಣಾಲಯದಲ್ಲಿ ಅಚ್ಚುಹಾಕಿಸಿದರು. ಬಂಗಾಲದಲ್ಲಿದ್ದುಕೊಂಡು ವಿವಿಧ ಭಾಷಾ ಪಂಡಿತರ ನೆರವಿನೊಂದಿಗೆ ಫ್ರೆಂಚ್‌, ಜರ್ಮನ್‌, ಗ್ರೀಕ್‌, ಹೀಬ್ರೂ, ಚೀನಿ, ಸಂಸ್ಕೃತ, ಪರ್ಷಿಯನ್‌, ಹಿಂದೂಸ್ತಾನಿ, ಪಂಜಾಬಿ, ಬಂಗಾಳಿ, ಒರಿಯಾ, ಭೂತಾನಿ, ಮರಾಠಿ, ತೆಲುಗು, ಕನ್ನಡ ಭಾಷೆಗಳಲ್ಲಿ ಪರಿಣತಿ ಗಳಿಸಿಕೊಂಡರು. ಈ ಭಾಷೆಗಳಲ್ಲಿ ಕೆಲವಕ್ಕೆ ಅರ್ಥಕೋಶವನ್ನು ರಚಿಸಿ, ಅದರ ಬಲದಿಂದ ಬೈಬಲ್‌ ಭಾಷಾಂತರ ಕಾರ್ಯವನ್ನು ನಿರ್ವಹಿಸಿದರು.

ಬೈಬಲ್‌ ಸಾಹಿತ್ಯವನ್ನು ದೇಶೀಯ ಭಾಷೆಗಳಲ್ಲಿ ರೂಪಿಸುವುದು ಕೇರಿಯ ಪ್ರಧಾನ ಆಶಯವಾಗಿತ್ತು. ಬಂಗಾಲಿ ಭಾಷೆ ಅವರ ಪ್ರಧಾನ ಆಡುಂಬೊಲವಾಗಿತ್ತು. ಇವನ Dilogues to Acquire Bengali (1801) ಎಂಬುದು ಬಂಗಾಲಿ  ಭಾಷಾಕಲಿಕೆಯ ಪ್ರವೇಶ ಪುಸ್ತಕ. ಅವನ ಬಂಗಾಲಿ-ಇಂಗ್ಲಿಷ್‌ ಅರ್ಥಕೋಶವು ಬೃಹತ್‌ ಸಂಪುಟವಾಗಿದ್ದು, ಭಾರತೀಯ ಭಾಷಾ ನಿಘಂಟುಗಳಲ್ಲಿ ಬಹಳ ಮಹತ್ವದ್ದಾಗಿದೆ. ಬಂಗಾಲಿ ಸಾಹಿತ್ಯಕ್ಕೆ ಆಧುನಿಕತೆಯನ್ನು ತಂದಿತ್ತವರಲ್ಲಿ ಕೇರಿಯದು ದೊಡ್ಡ ಪಾತ್ರ. ಕೇರಿ ದೊಡ್ಡ ಸಂಸ್ಕೃತ ಪಂಡಿತನೂ ಆಗಿದ್ದರು. ಪಾಣಿನಿಯ ವ್ಯಾಕರಣದ ಹಿನ್ನೆಲೆಯಲ್ಲಿ ಈತ ರಚಿಸಿದ ಸಂಸ್ಕೃತ ವ್ಯಾಕರಣವು 1806ರಲ್ಲಿ ರಚಿತವಾಯಿತು. ಆತನ ಸಹವಂದಿಗ ಜೆ. ಮಾರ್ಷಮನ್‌ ಜೊತೆ ಸೇರಿ ವಾಲ್ಮೀಕಿ ರಾಮಾಯಣವನ್ನು 1806ರಲ್ಲಿ ಇಂಗ್ಲಿಷ್‌ಗೆ ಭಾಷಾಂತರಿಸಿದರು. ಈ ಮೊದಲೇ ಅವರು “ಹಿತೋಪದೇಶ’ವನ್ನು ಪ್ರಕಟಿಸಿದ್ದರು. ದೇಶೀಯ ಭಾಷಾ ವ್ಯಾಕರಣ ರಚನೆಯಲ್ಲೂ ಆತ ತನ್ನ ಕೈ ನುರಿಯಿಸಿಕೊಂಡಿದ್ದರು. 1805ರಲ್ಲಿ ಮರಾಠಿ ಭಾಷಾ ವ್ಯಾಕರಣ, 1812ರಲ್ಲಿ ಪಂಜಾಬಿ ವ್ಯಾಕರಣವೂ, 1814ರಲ್ಲಿ ತೆಲುಗು ವ್ಯಾಕರಣವೂ, 1817ರಲ್ಲಿ ಕನ್ನಡ ವ್ಯಾಕರಣವೂ, ಸೆರಾಂಪುರದ ಮುದ್ರಣಾಲಯದಿಂದ ಪ್ರಕಟಗೊಂಡವು.

ಕೇರಿ ರಚಿಸಿದ ಬಂಗಾಲಿ-ಇಂಗ್ಲಿಷ್‌ಅರ್ಥಕೋಶವು 1827ರಲ್ಲಿ ಎರಡನೆಯ ಬಾರಿ (ಪ್ರ.ಮು. 1812) ಪ್ರಕಟವಾಯಿತು. ಸ್ಯೂಯೆಟರ್‌ ಜೊತೆ ಸೇರಿ 1819ರಲ್ಲಿ ಅವರು ಬರೆದ ಭೂತಾನಿ-ಇಂಗ್ಲಿಷ್‌ ನಿಘಂಟು ಮತ್ತೆ ಮತ್ತೆ ಪ್ರಕಟಣೆಯಾಗುತ್ತ ಬಂದಿತು. ವಿಲಿಯಂ ಕೇರಿ ಭಾರತೀಯ ಹಾಗೂ ವಿದೇಶೀಯ ಭಾಷೆಗಳನ್ನು ಕುರಿತು ಬರೆದ ನಿಘಂಟುಗಳು, ವ್ಯಾಕರಣಗಳು, ಭಾಷಾಸಂಬಂಧಿ ಬರಹಗಳು ನೂರಾಐವತ್ತಕ್ಕೂ ಹೆಚ್ಚಿವೆ. ಭಾಷಾಸೇವೆ, ಕ್ರೈಸ್ತ ಸುವಾರ್ತಾ ಪ್ರಚಾರದ ಜೊತೆಗೆ ಆತನೊಬ್ಬ ಸಮಾಜ ಸುಧಾರಕನೂ ಆಗಿದ್ದರು.

ಬಂಗಾಲದಲ್ಲಿ 19ನೆಯ ಶತಮಾನದ ಪೂರ್ವಾರ್ಧದಲ್ಲಿ ಸತಿ ಸಹಗಮನ ಪದ್ಧತಿ ಇನ್ನೂ ಜೀವಂತವಾಗಿತ್ತು. ಬ್ರಿಟಿಶ್‌ ಅಧಿಕಾರಿಗಳು ವಿಶೇಷವಾಗಿ ವಿಲಿಯಂ ಬೆಂಟಿಂಕ್‌ ಈ ಅನಿಷ್ಟ ಪದ್ಧತಿಯನ್ನು ಕೊನೆಗೊಳಿಸುವಲ್ಲಿ ಕ್ರೈಸ್ತಮತ ಪ್ರಚಾರಕರ ಹಾಗೂ ದೇಶೀಯ ಸುಧಾರಣಾವಾದಿಗಳ ನೆರವು ಕೋರಿದ್ದರು. ರಾಜಾರಾಮ್‌ ರಾಯ್‌ ಅಂತಹ ಒಬ್ಬ ಸುಧಾರಣಾವಾದಿ. ಸತಿ ಸಹಗಮನ ಪದ್ಧತಿಯ ಜೊತೆಗೆ ಬಂಗಾಲದಲ್ಲಿ ಕಾಳಿಗೆ ಮಕ್ಕಳನ್ನು ನರಬಲಿ ನೀಡುವ, ಗಂಗಾನದಿಗೆ ದೇವಿಯ ಪ್ರೀತ್ಯರ್ಥವಾಗಿ ಶಿಶುಗಳನ್ನು ಎಸೆಯುವ ಕ್ರೂರ ಆಚಾರಗಳು ಬಳಕೆಯಲ್ಲಿದ್ದವು. ಇಂಥ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಕೇರಿ ಅನೇಕ ಪ್ರತಿಭಟನೆಗಳನ್ನು ನಡೆಸಿದ್ದ. ಈ ಸಂಬಂಧವಾದ ಒಂದು ಘಟನೆ ದಾಖಲಾಗಿದೆ. 1829ನೇ ವರ್ಷದ ಒಂದು ಆದಿತ್ಯವಾರ ಕೇರಿ ಕ್ರೈಸ್ತ ದೇವಾಲಯವೊಂದರಲ್ಲಿ ಪ್ರಸಂಗ ನಡೆಸುತ್ತಿದ್ದರು. ಅಷ್ಟು ಹೊತ್ತಿಗೆ ಅಂದಿನ ಬ್ರಿಟಿಷ್‌ ಗವರ್ನರ್‌ ಜನರಲ್‌ ಲಾರ್ಡ್‌ ವಿ. ಬೆಂಟಿಂಕನು ಒಂದು ಸರಕಾರಿ ಆದೇಶ ಪತ್ರವನ್ನು ವಿವಿಧ ಭಾರತೀಯ ಭಾಷೆಗಳಲ್ಲಿ ಭಾಷಾಂತರಿಸುವ ಸಲುವಾಗಿ ವಿ. ಕೇರಿಗೆ ಕಳುಹಿಸಿಕೊಟ್ಟರು. ಅದು ಸತಿಸಹಗಮನ ಪದ್ಧತಿಯನ್ನು ರದ್ದುಮಾಡುವ ಐತಿಹಾಸಿಕ ಮಹತ್ವದ ಪತ್ರವಾಗಿತ್ತು. ಇದನ್ನು ಓದಿದ ಧರ್ಮಗುರು ವಿಲಯಂ ಕೇರಿಗೆ ಆದ ಸಂತೋಷ ಸಂಭ್ರಮ ಹೇಳತೀರದು. ಅದನ್ನು ಓದಿದ ಕೇರಿ ತನ್ನ ಪ್ರಸಂಗವನ್ನು ಅರ್ಧದಲ್ಲೇ ಕೊನೆಗೊಳಿಸಿ ತಾವು ಹೊರಡುತ್ತಿರುವ ಬಗ್ಗೆ ಹೀಗೆ ಹೇಳಿದ್ದರು: 

Someone else must preach for me today. I will not delay a minute translating this document list some poor women are burnt in the intervals… ಹೀಗೆ ಹೊರಗೆ ನಡೆದ ವಿಲಿಯಂ ಕೇರಿ ಬೆಂಟಿಂಕ್‌ನ ಆಜ್ಞಾಪತ್ರವನ್ನು ಒಡನೆಯೇ ಹಲವು ದೇಶೀಯ ಭಾಷೆಗಳಿಗೆ ಅನುವಾದಿಸಿ ಕಳುಹಿಸಿಕೊಟ್ಟರಂತೆ. ತನ್ನ ಹಲವಾರು ವರ್ಷಗಳ ಪ್ರಯತ್ನಕ್ಕೆ ಯಶಸ್ಸು ದೊರೆತಿರುವುದಕ್ಕೆ ಅಂದು ಹಿರಿಹಿರಿ ಹಿಗ್ಗಿದರು.

ವಿಲಿಯಂ ಕೇರಿಯ ವ್ಯಕ್ತಿತ್ವದ ಇನ್ನೊಂದು ಮುಖ ಕೃಷಿಯನ್ನು ಕುರಿತು ಅವರ‌ ಅಸಾಧಾರಣ ತಿಳಿವಳಿಕೆ. ಆತ ಕಲ್ಕತ್ತಾದಲ್ಲಿದ್ದಾಗ ಅಖೀಲ ಭಾರತ ವ್ಯವಸಾಯ ಸಂಘ, ಹಣ್ಣು-ಹಂಪಲು ಬೆಳಗಾರರ ಸಂಘ ತೆರೆದು ಕೃಷಿಕ್ಷೇತ್ರದಲ್ಲಿ ಆಧುನಿಕ ತಿಳಿವಳಿಕೆಯನ್ನು ರೈತರ ನಡುವೆ ಹಂಚುವುದರಲ್ಲಿ ಆಸಕ್ತಿ ತೋರಿದರು. ಕಲ್ಕತ್ತಾದಲ್ಲಿ ಆತ ಸ್ಥಾಪಿಸಿದ Botanical Garden ಇಂದಿಗೂ ಸಸ್ಯಾಸಕ್ತರಿಗೆ ಕುತೂಹಲದ ಕೇಂದ್ರ.

(ಎ ಗ್ರಾಮರ್‌ ಆಫ್ ಕರ್ಣಾಟ ಲಾಂಗ್ವೇಜ್‌ ಬರೆದದ್ದೇ ಒಂದು ದೊಡ್ಡ ಕತೆ…ಮುಂದಿನ ರವಿವಾರ)

ಎ. ವಿ. ನಾವಡ

ಟಾಪ್ ನ್ಯೂಸ್

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

2-mudhol

Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು

Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

3-dog

German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್‌ ಶೆಫ‌ರ್ಡ್‌ ನಾಯಿ ಕೊಂದ!

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ

Helmet: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.