ಡಾಲರ್‌ ನಾಡಿನಲ್ಲಿ ಆಹಾರ ವಿಚಾರ


Team Udayavani, Feb 23, 2020, 5:49 AM IST

ram-2

ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ ಕಷ್ಟ, ಇನ್ನು ಉದ್ಯೋಗದ ಮೇಲೆ ಹೋಗುವವರಿಗೆ ತುಂಬಾನೇ ಕಷ್ಟವಂತೆ- ಹೀಗೆಲ್ಲ ಅಂತೆಕಂತೆಗಳನ್ನು ಕಲ್ಪಿಸಿ ಅಳುಕಿನೊಂದಿಗೆ ಅಮೆರಿಕ ವಿಮಾನ ಹತ್ತುವಂತೆ ಮಾಡುವವರಿದ್ದಾರೆ. ಆದರೆ, ವಾಸ್ತವ ಬೇರೆಯೇ ಇದೆ.

ಸಾಮಾನ್ಯವಾಗಿ ಅಮೆರಿಕ ಎಂದರೆ ಭಾರತೀಯರಲ್ಲಿ ವಿಚಿತ್ರವಾದ ಕಲ್ಪನೆಗಳಿವೆ. ಅತಿಯಾದ ನಿರೀಕ್ಷೆಗಳ ಜೊತೆಗೆ ಬಹಳಷ್ಟು ವಿಷಯಗಳಲ್ಲಿ, ಅದರಲ್ಲೂ ಮುಖ್ಯವಾಗಿ ಆಹಾರ ಪದ್ಧತಿ ಬಗ್ಗೆ ಏನೇನೋ ಕಲ್ಪನೆಗಳಿವೆ; ಭಾರತದಿಂದ ಯಾರಾದರೂ ಪ್ರವಾಸಕ್ಕೊ ಉದ್ಯೋಗಕ್ಕೊ ಅಮೆರಿಕಕ್ಕೆ ಹೋಗುವುದಾದರೆ ಮೊದಲು ಮೂಡುವ ಪ್ರಶ್ನೆ- ನಮಗೆ ಹೊಂದುವ ಊಟತಿಂಡಿ ಸಿಗುವುದೇ ಎಂಬುದು. ಅಮೆರಿಕಕ್ಕೆ ಹೋಗುವವರಿಗಿಂತಲೂ ಅವರ ಮನೆಯವರಿಗೆ ಆಗುವ ಗೊಂದಲ, ಅದಕ್ಕೂ ಹೆಚ್ಚಾಗಿ ಅವರ ತಲೆಗೆ ಹುಳ ಬಿಡುವವರಿಂದಾಗುವ ಅವಾಂತರ- ಇನ್ನೂ ಹೆಚ್ಚು. ಅಮೆರಿಕದಲ್ಲಿ ತರಕಾರಿ ಸಿಗುವುದಿಲ್ಲವಂತೆ, ಊರಿನ ಊಟ ಸಿಗುವುದಿಲ್ಲವಂತೆ, ಕೇವಲ ಮಾಂಸಾಹಾರ, ಅದರಲ್ಲೂ ದನದ ಮಾಂಸ ಕೂಡಾ ಇರುತ್ತದಂತೆ. ಬ್ರೆಡ್‌ ಸ್ಯಾಂಡ್‌ವಿಚ್‌ ಇಂತಹುದನ್ನೇ ತಿನ್ನಬೇಕಂತೆ, ಪ್ರವಾಸಿಗರಿಗೇ ಕಷ್ಟ, ಇನ್ನು ಉದ್ಯೋಗದ ಮೇಲೆ ಹೋಗುವವರಿಗೆ ತುಂಬಾನೇ ಕಷ್ಟವಂತೆ- ಹೀಗೆಲ್ಲ ಅಂತೆಕಂತೆಗಳನ್ನು ಕಲ್ಪಿಸಿ ಯಾವುದೋ ದೂರದ ಲೋಕಕ್ಕೆ ಹೋಗುತ್ತಿರುವ ಭ್ರಮೆ ಹುಟ್ಟಿಸಿ ಏನೋ ಹೇಗೋ ಎಂದೆಲ್ಲ ಅಳುಕಿನೊಂದಿಗೆ ಅಮೆರಿಕ ವಿಮಾನ ಹತ್ತುವಂತೆ ಮಾಡುತ್ತಾರೆ. ಆದರೆ, ವಾಸ್ತವ ಬೇರೆಯೇ ಇದೆ.

ಮೂವತ್ತು ಲಕ್ಷಕ್ಕೂ ಅಧಿಕ ಭಾರತೀಯರು
ಅಮೆರಿಕದಲ್ಲಿ ಇರುವ ಭಾರತೀಯರ ಸಂಖ್ಯೆ ಒಂದು ಅಂದಾಜಿನಂತೆ ಮೂವತ್ತು ಲಕ್ಷಕ್ಕೂ ಹೆಚ್ಚು. ಇದು ಇಲ್ಲಿಗೆ ಉದ್ಯೋಗಕ್ಕಾಗಿ ಬಂದು ಖಾಯಂ ನಿವಾಸಿಗಳಾಗಿರುವ ಮತ್ತು ಇಲ್ಲಿ ಜನಿಸಿದವರ ಸಂಖ್ಯೆ ಮಾತ್ರ. ಪ್ರವಾಸಿಗರು ಮತ್ತು ತಾತ್ಕಾಲಿಕ ಉದ್ಯೋಗದ ಮೇಲೆ ಬಂದು ಹೋಗುವವರು ಇನ್ನೂ ಅನೇಕರಿದ್ದಾರೆ. ಆದ್ದರಿಂದಲೇ ಇಲ್ಲಿ ಎಲ್ಲೆಡೆ ಸ್ವಾಭಾವಿಕವಾಗಿ ಭಾರತೀಯ ಊಟೋಪಚಾರ ಸಿಗುತ್ತದೆ. ಇನ್ನೂ ವಿಶೇಷವೆಂದರೆ ಕೆಲವೊಂದು ನಿಯಮಾವಳಿಗಳನ್ನು ಪೂರೈಸಿದವರಿಗೆ ಗ್ರೀನ್‌ ಕಾರ್ಡ್‌ ಸಿಕ್ಕಿದರೆ ಅವರು ಅಮೆರಿಕದಲ್ಲಿ ಎಷ್ಟು ಸಮಯವಾದರೂ ಇರಬಹುದು. ಅವರಿಗೆ ಯಾವುದೇ ಉದ್ಯೋಗ, ವ್ಯಾಪಾರ-ವ್ಯವಹಾರ ಮಾಡಲು ಅನುಮತಿಯಿದೆ. ಉದ್ಯೋಗಕ್ಕಾಗಿ ಬಂದವರಲ್ಲಿ ಈ ವರ್ಗಕ್ಕೆ ಸೇರಿದ ಕೆಲವರು ಒಟ್ಟುಗೂಡಿ ತಮ್ಮ ಬಿಡುವಿನ ವೇಳೆಯಲ್ಲಿ ಹೊಟೇಲ್‌ ಅಥವಾ ದಿನಬಳಕೆಯ ವಸ್ತುಗಳ ಮಾರಾಟ ಮಳಿಗೆ ಆರಂಭಿಸುತ್ತಾರೆ. ಸಹಜವಾಗಿ ಅವರ ಆದ್ಯತೆ ಭಾರತೀಯರ ಅಗತ್ಯದ ವಸ್ತುಗಳೇ ಆಗಿರುತ್ತವೆ.

ಭಾರತ ಕೃಷಿ ಪ್ರಧಾನ ದೇಶವಾದರೂ ನಮ್ಮ ದೇಶದ ಆವಶ್ಯಕತೆಯ ಶೇ. 70 ಮಾತ್ರ. ದೇಶದಲ್ಲಿ ಉತ್ಪಾದನೆಯಾಗಿ ಉಳಿದ ಅಗತ್ಯ ವಸ್ತುಗಳನ್ನು ಆಮದು ಮಾಡಲಾಗುತ್ತದೆ ಎನ್ನಲಾಗಿದೆ. ಆದರೆ, ಅಮೆರಿಕಾದ ಕೃಷಿ ಉತ್ಪನ್ನಗಳ ಆವಶ್ಯಕತೆಯ ಶೇ. 87ರಷ್ಟು ದೇಶದೊಳಗೇ ಉತ್ಪಾದನೆಯಾಗುತ್ತದೆಂದು ಅಂಕಿಅಂಶಗಳು ಹೇಳುತ್ತವೆ. ಯುದೊœàಪಕರಣಗಳು ಮತ್ತು ವೈದ್ಯಕೀಯ ಉತ್ಪನ್ನಗಳು ದೇಶದ ಪ್ರಮುಖ ಆದಾಯ ಮೂಲಗಳಾದರೂ, ಆಹಾರ ಮತ್ತು ಇಂಧನದ ಬೇಡಿಕೆಗೆ ಬಹುತೇಕ ಸ್ವಾವಲಂಬಿಯಾಗಿರುವುದೇ ವಿಶ್ವದ ದೊಡ್ಡಣ್ಣನೆಂಬ ಕಿರೀಟಕ್ಕೆ ಪೂರಕವೆಂದರೆ ತಪ್ಪಾಗಲಾರದು.

ಹವಾಮಾನಕ್ಕೆ ಸರಿಯಾದ ಆಹಾರ
ಈ ದೇಶದ ಹವಾಮಾನವೂ ಒಂದು ರೀತಿಯಲ್ಲಿ ವಿಚಿತ್ರ. ಒಟ್ಟು ಐವತ್ತು ರಾಜ್ಯಗಳನ್ನೊಳಗೊಂಡ ಅಮೆರಿಕದಲ್ಲಿ ಆರು ವಲಯಗಳಿದ್ದು (ಟೈಮ್‌ ಝೋನ್‌) ಒಂದರಿಂದ ಇನ್ನೊಂದಕ್ಕೆ ವ್ಯತ್ಯಾಸವಿದೆ. ಮಾತ್ರವಲ್ಲ ಒಂದು ವಲಯದಿಂದ ಇನ್ನೊಂದರ ಹವಾಮಾನ ಕೂಡ ವಿಭಿನ್ನವಾಗಿರುತ್ತದೆ. ಉದಾಹರಣೆಗೆ, ನಾವಿದ್ದ ಮಿನಿಯಾಪೊಲೀಸ್‌ ನಗರದಲ್ಲಿ (ನವೆಂಬರ್‌ನಿಂದ ಎಪ್ರಿಲ್) ಆರು ತಿಂಗಳು ಕಠಿಣ ಚಳಿ. ತಾಪಮಾನ (-35) ಕ್ಕಿಂತಲೂ ಕಡಿಮೆ ಇರುತ್ತದೆ. ಅದೇ ಉಳಿದ ಆರು ತಿಂಗಳು (+35ವರೆಗೂ) ಇರುತ್ತದೆ. ಚಳಿಗಾಲದ ಆರು ತಿಂಗಳು ಎಲ್ಲೆಡೆ ಹಿಮದ ರಾಶಿ. ಮರಗಳು ಎಲೆಗಳನ್ನು ಉದುರಿಸಿಕೊಂಡು ನಿಲ್ಲುತ್ತವೆ.

ಆದರೆ, ಬೇಸಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ತರಕಾರಿ, ಹಣ್ಣು, ಬೇಳೆಕಾಳು ಉತ್ಪಾದನೆ ನಡೆಯುತ್ತದೆ. ವಾಲ್‌ಮಾರ್ಟ್‌, ಕೋಸ್ಟ್‌ಕೋ, ಟಾರ್ಗೆಟ್‌ ಮುಂತಾದ ಬೃಹತ್‌ ಮಳಿಗೆಗಳು, ಇಂಡಿಯಾ ಮಾರ್ಕೆಟ್‌, ಇಂಡಿಯಾ ಬಝಾರ್‌, ಇಂಡಿಯಾ ಸ್ಪೈಸ್‌ಹೌಸ್‌ ಮುಂತಾದ ಮಧ್ಯಮ ಗಾತ್ರದ ಮಳಿಗೆಗಳಲ್ಲಿ ಹೂ, ಹಣ್ಣು, ತರಕಾರಿ, ಮುಂತಾದ ಎಲ್ಲಾ ದಿನೋಪಯೋಗಿ ವಸ್ತುಗಳೂ, ಮೀನು, ಮಾಂಸ- ಹೀಗೆ ಎಲ್ಲವೂ ಎಲ್ಲಾ ಋತುವಿನಲ್ಲೂ ದೊರೆಯುತ್ತದೆ. ಯಾವ ವಲಯದಲ್ಲಿ ಚಳಿ ಇರುವುದೋ ಅಲ್ಲಿ ಉತ್ಪಾದನೆ ಸ್ಥಗಿತವಾದರೆ ಎಲ್ಲಿ ಉತ್ಪಾದನೆಯಾಗುವುದೋ ಅಲ್ಲಿಂದ ರವಾನೆಯಾಗುತ್ತದೆ. ಹೀಗೆ, ಸಮತೋಲನ ಕಾಪಾಡಿಕೊಳ್ಳಲಾಗುತ್ತದೆ. ಹೀಗಾಗಿ, ವರ್ಷದ ಎಲ್ಲ ದಿನಗಳಲ್ಲೂ ಇವು ಎಲ್ಲೆಡೆ ಲಭ್ಯವಿರುತ್ತವೆ.

ಆದರೆ, ತರಕಾರಿಯಿರಲಿ, ಹಣ್ಣುಹಂಪಲೇ ಇರಲಿ, ಸಿದ್ಧಪಡಿಸಿದ ಆಹಾರ ಪದಾರ್ಥಗಳೇ ಇರಲಿ, ಗುಣಮಟ್ಟದಲ್ಲಿ ಮಾತ್ರ ಯಾವುದೇ ರಾಜಿಯಿಲ್ಲ. ಭಾರತೀಯರು ಉಪಯೋಗಿ ಸುವ ದೈನಂದಿನ ಆವಶ್ಯಕತೆಗಳ ಜತೆಗೆ, ಹಬ್ಬಹರಿದಿನಗಳಲ್ಲಿ ಉಪಯೋಗಿಸಲು ಬಾಳೆಎಲೆ, ವೀಳ್ಯದೆಲೆ, ಅಡಿಕೆ, ಅರಸಿನ… ಹೀಗೆ ಎಲ್ಲವೂ ಸಿಗುತ್ತದೆ. ಇನ್ನೂ ಹೇಳಬೇಕೆಂದರೆ ಕಲಶಕ್ಕೆ ಅಥವಾ ಪೂಜೆಗೆ ಮಾವಿನೆಲೆ ಬೇಕಾದರೂ ಲಭ್ಯ. ಬೆಲೆ ಮಾತ್ರ ಕೇಳಬೇಡಿ. ಏಕೆಂದರೆ, ನಮಗೆ ಎಲ್ಲವನ್ನೂ ವಿನಿಮಯ ದರಕ್ಕೆ ತುಲನೆ ಮಾಡುವ ಅಭ್ಯಾಸ. ಐದು ಮಾವಿನ ಎಲೆಗಳಿಗೆ 2 ಡಾಲರ್‌. ರೂಪಾಯಿ ಲೆಕ್ಕದಲ್ಲಿ 140! ಹೊಟೇಲುಗಳಲ್ಲಿ ಇಡ್ಲಿ, ಮಸಾಲೆ ದೋಸೆ, ತಾಜಾ ಕಬ್ಬಿನ ರಸ ಕೂಡ ಲಭ್ಯ! ಉಡುಪಿಯ ಕುಚ್ಚಲಕ್ಕಿ, ಅಷ್ಟೇ ಅಲ್ಲ, ಹಲ್ದೀರಾಮ…, ಎಂಟಿಆರ್‌ ಮೊದಲಾದ ಭಾರತದ ಉನ್ನತ ಉತ್ಪನ್ನಗಳೆಲ್ಲವೂ ಸಿಗುತ್ತದೆ.

ನೇರವಾಗಿ ತೋಟದಿಂದ ಮಾರುಕಟ್ಟೆಗೆ ಬೆಳೆಗಾರರೇ ಮಾರಾಟ ಮಾಡುವ ಫಾರ್ಮರ್ಸ್‌ ಮಾರ್ಕೆಟ್‌ ಒಂದು. ನಾವೇ ನೇರವಾಗಿ ತೋಟಕ್ಕೆ ಹೋಗಿ ನಮ್ಮ ಆಯ್ಕೆಯ ಹಣ್ಣು, ತರಕಾರಿ ಆರಿಸಿ ತರುವುದು ಇನ್ನೊಂದು.

ನಾವಿರುವ ಪ್ರದೇಶದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಒಂದು ಫ‌ಲೋದ್ಯಾನವನಕ್ಕೆ ಕಳೆದ ಬೇಸಿಗೆಯಲ್ಲಿ ಭೇಟಿ ನೀಡಿದ್ದೆವು. ಇಂತಹ ಹಲವಾರು ಪ್ರೇಕ್ಷಣೀಯ ಸ್ಥಳಗಳು ನಾವಿರುವ ಊರಿನ ಅಕ್ಕಪಕ್ಕದಲ್ಲಿ ಇವೆ. ಇವು ಖಾಸಗಿ ಒಡೆತನದವುಗಳಾಗಿದ್ದು ಹವ್ಯಾಸಕ್ಕೆಂದು ಆರಂಭಿಸಿ, ಕಾಲಕ್ರಮೇಣ ಬೃಹದಾಕಾರದ ತೋಟಗಳಾಗಿ ಬೆಳೆದಿವೆ. ಜೊತೆಗೆ ಪ್ರವಾಸಿ ತಾಣವಾಗಿಯೂ ಬೆಳೆದಿವೆ. ಸಂಪೂರ್ಣ ಸಾವಯವ ತೋಟಗಾರಿಕೆಯ ಈ ಉದ್ದಿಮೆ Minnetonka Apple Orchard ಸುಮಾರು 12 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. Lowell ಮತ್ತು Phyllis Schaper ದಂಪತಿಗಳು 1972ರಲ್ಲಿ ತಮ್ಮ ಖಾಸಗಿ ಉಪಯೋಗಕ್ಕೆ ಈ ಸ್ಥಳವನ್ನು ಖರೀದಿಸಿ ಕ್ರಮೇಣ 1976ರಲ್ಲಿ 600 ಸೇಬು ಹಣ್ಣಿನ ಗಿಡಗಳನ್ನು ನೆಟ್ಟು ಅಭಿವೃದ್ಧಿ ಪಡಿಸಿದರಂತೆ. ಈ ತೋಟದಲ್ಲಿ ಸಿಹಿಕುಂಬಳ, ಸ್ಟ್ರಾಬೆರಿ ಮುಂತಾದ ಹಲವು ಬಗೆಯ ಹಣ್ಣುಹಂಪಲುಗಳನ್ನು ಹಾಗೂ ಜೋಳವನ್ನು ಬೆಳೆಯಲಾಗುತ್ತದೆ. ವಿಶೇಷತೆ ಎಂದರೆ ಒಂದಿಷ್ಟು ಶುಲ್ಕ ಪಾವತಿಸಿ ತೋಟದಲ್ಲಿ ತಿರುಗಾಡಿ ನಮಗೆ ಬೇಕಾದ ಹಣ್ಣುಹಂಪಲು ಕಿತ್ತು ತರಬಹುದು. ಉತ್ತಮ ಗುಣಮಟ್ಟದ ಮತ್ತು ಸ್ವಾದಿಷ್ಟ ಹಣ್ಣುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ!

ನಮ್ಮ ದೇಶದಲ್ಲಿ ಒಳನಾಡು ಮೀನುಗಾರಿಕೆ ಇರುವಂತೆ ಅಮೆರಿಕದಲ್ಲಿ ಸಮುದ್ರದ ಮೀನುಗಾರಿಕೆ ಒಂದು ಉದ್ದಿಮೆಯಾಗಿಸಿಕೊಂಡಿದ್ದು ಹೊಸ ಹೊಸ ತಳಿಯ ಮೀನು ಮಾರುಕಟ್ಟೆಯಲ್ಲಿ ಸಿಗುತ್ತದೆ. ಇದಲ್ಲದೆ, ಖಾಲಿ ಸ್ಥಳವನ್ನು ಬಾಡಿಗೆಗೆ ಪಡೆದು ಕೃಷಿ ಉತ್ಪನ್ನಗಳನ್ನು ಕೂಡ ಬೆಳೆದು ಮಾರಾಟ ಮಾಡಲೂ ಅವಕಾಶವಿದೆ. ಒಟ್ಟಿನಲ್ಲಿ ಉದ್ಯೋಗಕ್ಕೊ ಪ್ರವಾಸಕ್ಕೊ ಹೊರಡುವ ಮೊದಲು ಮಾಡಬೇಕಾಗಿರುವುದು ಇಷ್ಟೆ. ಅಮೆರಿಕದಲ್ಲಿ ಉಳಿದುಕೊಳ್ಳುವ ಸ್ಥಳದ ಹತ್ತಿರದಲ್ಲಿರುವ ಭಾರತೀಯ ಹೊಟೇಲ್‌ಗ‌ಳ ಮಾಹಿತಿಯನ್ನು ಅಂತರ್ಜಾಲದಲ್ಲಿ ಹುಡುಕಿ. ಎಲ್ಲ ಸಲೀಸು.

ಮೋಹನದಾಸ ಕಿಣಿ

ಟಾಪ್ ನ್ಯೂಸ್

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.