ತಂತ್ರವೆಂಬ ಚಿಂತನೆ ವಿದ್ವನ್ಮಮಣಿಗಳಾದ ಶ್ರೀಕಂಠ ಶಾಸ್ತ್ರಿಗಳ ಕೃತಿಗಳು
Team Udayavani, Feb 11, 2018, 8:15 AM IST
ತಂತ್ರಗಳ ಚರಿತ್ರೆ ಜಟಿಲ ಮತ್ತು ಬಹಳ ವಿಸ್ತಾರವಾದ ಆಯಾಮವನ್ನು ಹೊಂದಿದೆ. ವಿವಿಧ ಅರಿವಿನ ಶಾಖೆಗಳ ತಲೆಮಣಿಗಳು ಈ ಕುರಿತು ತಮ್ಮ ತಮ್ಮ ಅಧ್ಯಯನದ ತಪಸ್ಸಿನ ಆಧಾರದಿಂದ ಮಾತನಾಡಿದ್ದಾರೆ, ಬರೆದಿದ್ದಾರೆ. ಅದರ ಮೇಲೆ ಕಳೆದ ನೂರಿನ್ನೂರು ವರ್ಷಗಳಲ್ಲಿ ಇಂಗ್ಲಿಶ್, ಫ್ರೆಂಚ್, ಜರ್ಮನಿ ಭಾಷೆಗಳಲ್ಲಿ ತಂತ್ರ-ಆಗಮ ಶಾಸ್ತ್ರ ಕುರಿತು ದೊಡ್ಡ ಮಟ್ಟದ ಸಾಹಿತ್ಯ ಸಿದ್ಧವಾಗಿದೆ. ಪಾಶ್ಚಾತ್ಯರು ಈ ನಮ್ಮ ವಿದ್ವಾನ್ ತಲೆಮಣಿಗಳನ್ನು ಕೆಲವು ಸಲ ಉಲ್ಲೇಖ ಮಾಡುವರು, ಕೆಲವು ಸಲ ಮಾಡುವುದಿಲ್ಲ. ಅದು ಅರಿವಿನ ಚರಿತ್ರೆಯ ಒಂದು ರಾಜಕಾರಣದ ಭಾಗವೇ ಆಗಿದೆ. ವ್ರಜವಲ್ಲಭ ದ್ವಿವೇದಿ, ಶ್ಯಾಮಾಕಾಂತ ದ್ವಿವೇದಿ, ಸ್ವಾಮಿ ಲಕ್ಷ್ಮಣ ಝೂ, ಗೋಪೀನಾಥ ಕವಿರಾಜ, ಎಸ್.ಕೆ. ರಾಮಚಂದ್ರರಾಯರು, ಟಿ.ವಿ. ಕಪಾಲಿಶಾಸ್ತ್ರೀ, ಕಾವ್ಯಕಂಠ ವಾಸಿಷ್ಠ ಗಣಪತಿ ಮುನಿ ಮುಂತಾದವರು ತಂತ್ರಗಳ ಬಗೆಗೆ ಅದ್ಭುತವಾಗಿ ಬರೆದಿದ್ದಾರೆ. ಯಾಮಳ-ಡಾಮರ-ಶಾಬರ ತಂತ್ರಗಳು ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಸಿಗುತ್ತವೆ. ಆದರೆ ಸಂಸ್ಕೃತ ಸಾಹಿತ್ಯ ಚರಿತ್ರೆ, ಕನ್ನಡ-ತುಳು ಸಾಹಿತ್ಯ ಚರಿತ್ರೆಯಂತೆ ಇನ್ನೂ ಆಗಮ-ತಂತ್ರಗಳ ಚರಿತ್ರೆಯ ಸಂಪುಟ ದಕ್ಷಿಣ ಭಾರತದ ಮಟ್ಟಿಗೆ ಸಿದ್ಧವಾಗಿಲ್ಲ. ಈ ನಿಟ್ಟಿನಲ್ಲಿ ಹಲವು ವಿದ್ವಾಂಸರು ಮಾಡಿರುವ ಸಂಶೋಧನೆಗಳು ಸಹಾಯಕ್ಕೆ ಬರುತ್ತವೆ. ಅಂಥ ಒಬ್ಬ ಹಿರಿಯ ವಿದ್ವಾನ್ ತಲೆಮಣಿ ಕನ್ನಡಿಗರಾದ ಪ್ರೊ. ಎಸ್. ಶ್ರೀಕಂಠ ಶಾಸಿŒ.
ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಭಾರತೀಯ ಸಂಸ್ಕೃತಿ ಕುರಿತು ಅನೇಕ ಮಹತ್ವಪೂರ್ಣ ಲೇಖನಗಳನ್ನು ಬರೆಯುವುದರ ಜತೆಗೆ ಭಾರತೀಯ ಸಂಸ್ಕೃತಿ ಎಂಬ ಉತ್ತಮ ಪುಸ್ತಕವನ್ನು ಕೂಡ ರಚಿಸಿದ್ದಾರೆ. ಅದರಲ್ಲಿ ಅವರು ತಂತ್ರಗಳ ಕುರಿತು ಚರ್ಚಿಸಿದ್ದಾರೆ. ಇದಲ್ಲದೆ ಇಂಗ್ಲಿಷಿನಲ್ಲೂ ಅವರು ಬುದ್ಧಿಯನ್ನು ಕೆಣಕುವ ಕೆಲವು ಲೇಖನಗಳನ್ನು ರಚಿಸಿದ್ದಾರೆ, ಅದರಲ್ಲಿ ಶ್ರೀವಿದ್ಯೆಗೆ ಸಂಬಂಧಿಸಿದ ಬರೆಹಗಳೂ ಸೇರಿವೆ. ಈಗ ಪ್ರೊ. ಎಸ್. ಶ್ರೀಕಂಠಶಾಸ್ತ್ರಿ ಅವರ ತಂತ್ರ ಕುರಿತ ವಿಚಾರಗಳನ್ನು ನೋಡೋಣ.
ಭಾರತೀಯ ಸಂಸ್ಕೃತಿಗೆ ತಂತ್ರವು ಕೊಡುಗೆ ನೀಡಿರುವುದು ಅನೇಕ ಮುಖಗಳಲ್ಲಿ. ಆದರೆ ವಿಶೇಷವಾಗಿ ಶಾಕ್ತಮತಕ್ಕೂ ತಂತ್ರಕ್ಕೂ ಇರುವ ಸಂಬಂಧ ತೀವ್ರ ಸ್ವರೂಪದ್ದು. ಭಾತದಲ್ಲಿ ಶಕ್ತಿಪೂಜೆ ವೈದಿಕ (ವೇದಮೂಲ)ವೋ ಅಲ್ಲವೋ ಎಂಬುದರ ಬಗ್ಗೆ ವಿದ್ವಾಂಸರಲ್ಲಿ ಭಿನ್ನಮತಗಳಿವೆ. ಭಾರತೀಯ ತಾಂತ್ರಿಕ ಗ್ರಂಥಗಳೆಲ್ಲವೂ ವೇದ ಪ್ರಾಮಾಣ್ಯವನ್ನು ಅಂಗೀಕರಿಸಿವೆ ಎಂಬ ಶ್ರೀಕಂಠಶಾಸ್ತ್ರೀಯವರ ಮಾತು ಚರ್ಚಾಸ್ಪದ (ಭಾರತೀಯ ಸಂಸ್ಕೃತಿ ಪುಸ್ತಕ, 1975, ಪುಟ 170).
ಭಾರತದಂತೆ ವಿದೇಶದ ಸಂಸ್ಕೃತಿಗಳಲ್ಲೂ ಶಕ್ತಿಯನ್ನು ತಾಯಿ ಎಂದು ಸ್ವೀಕರಿಸಿ ಪೂಜಿಸುವ ಪದ್ಧತಿಯಿದೆ. ಸುಮೇರಿಯ, ಅಸ್ಸೀರಿಯ, ಫ್ರಿಜಿಯ, ಈಜಿಪ್ತ್ , ಸಿರಿಯಾ ದೇಶದಲ್ಲಿನ ಶಕ್ತಿಪೂಜೆಯಲ್ಲಿ ದ್ವೇತಭಾವ ಮತ್ತು ದೇಹದ ಪುನರುತ್ಥಾನ ತತ್ವಗಳಿಗೆ ಸ್ಥಾನವಿದೆ. ಭಾರತದ ಶಾಕ್ತಮತದಲ್ಲಿ ಮುಖ್ಯವಾಗಿ ಕರ್ಮ, ಪುನರ್ಜನ್ಮಗಳಿಗೆ ಹೆಚ್ಚಿನ ಸ್ಥಾನವಿದೆ (ಅದೇ ಪುಸ್ತಕ, 1975, ಪುಟ 170-71).
ವೈದಿಕ ಮತದಲ್ಲಿ ಶಕ್ತಿಪೂಜೆ ಮತ್ತು ತಂತ್ರ ಸಾಹಿತ್ಯ ಮುಖ್ಯವಾಗಿ ಬೆಳೆದಿರುವುದು ಶ್ರೀಚಕ್ರ ಪೂಜೆ ಮತ್ತು ದೇವಾಲಯ ನಿರ್ಮಾಣ, ಶಿಲ್ಪಶಾಸ್ತ್ರದ ಸಂದರ್ಭದಲ್ಲಿ. ವೈದಿಕ ವಾಯದಲ್ಲಿ ಮಂತ್ರ, ಯಂತ್ರ, ನ್ಯಾಸ, ದೀಕ್ಷೆ, ಶ್ರೀಚಕ್ರ ಮೊದಲಾದ ಅಂಶಗಳಿಗೆ ಮಹತ್ವ ಹೆಚ್ಚು. ಬೌದ್ಧ ಮತ್ತು ವೈದಿಕರಲ್ಲಿ ಮಂಡಲಗಳಿಗೆ ಸಾಧನೆಯಲ್ಲಿ ಮತ್ತು ಚಿತ್ರಕಲೆಯಲ್ಲಿ ವಿಶೇಷ ಸ್ಥಾನವಿದೆ.
ಶ್ರೀಚಕ್ರ ಒಂದು ಯಂತ್ರವಾಗಿದ್ದು ಅದರ ಮಧ್ಯದಲ್ಲಿರುವ ಬಿಂದುವಿನ ಮಂಡಲ/ ವೃತ್ತಕ್ಕೆ ಓಡ್ಯಾಣ ಪೀಠ ಎಂದು ಹೆಸರು ತ್ರಿಕೋಟಾಗಳ ತುದಿಯಲ್ಲಿರುವ ಜಾಗಗಳಿಗೆ ಪೂರ್ಣಗಿರಿ, ಜಾಲಂಧರ ಮತ್ತು ಕಾಮೇಶ್ವರಿ ಪೀಠಗಳೆಂದು ಹೆಸರಿದೆ. ಭಾರತದ ಉದ್ದಗಲಕ್ಕೂ ತಂತ್ರ ಆಚರಣೆಯಲ್ಲಿದ್ದ ಕಾರಣದಿಂದಲೋ ಏನೋ ಈ ಮೂರು ಜಾಗಗಳನ್ನು ಭೌಗೋಳಿಕ ಕ್ಷೇತ್ರಗಳಲ್ಲಿ ಗುರುತಿಸುವ ಪ್ರಯತ್ನ ನಡೆದಿದೆ. ವಾಯುವ್ಯ ಪ್ರಾಂತ್ಯದ ಉದ್ಯಾನ ಎಂಬ ಸ್ಥಳವೇ ಓಡ್ಯಾಣ, ಉತ್ತರ ಬದರಿಯೇ ಪೂರ್ಣಗಿರಿ ಮತ್ತು ಜಲಂಧರ ಜಿಲ್ಲೆಯೇ (ಪಂಜಾಬ್ ರಾಜ್ಯ) ಜಾಲಂಧರ (1975, ಪುಟ 75). ಭಾರತದ ಪಶ್ಚಿಮದ ಮತ್ತು ವಾಯುವ್ಯ ಭಾಗಗಳಲ್ಲಿ ಬೇರೆ ಬೇರೆ ಐತಿಹಾಸಿಕ ಕಾಲಗಳಲ್ಲಿ ಅನೇಕ ತಾಂತ್ರಿಕಶಾಕ್ತರು ಇದ್ದರೆಂಬುದಕ್ಕೆ ಶ್ರೀಚಕ್ರದ ಈ ಭಾಗಗಳು ಸಂಕೇತವಿರಬಹುದು. ಇಂದಿಗೂ ಅಸ್ಸಾಂ ರಾಜ್ಯದ ಕಾಮಾಖ್ಯವನ್ನು ಸತಿಯ ದೇಹವನ್ನು ಶಿವನು ಹೊತ್ತು ತಿರುಗುತ್ತಿದ್ದಾಗ ಆ ದೇಹವನ್ನು ವಿಷ್ಣು ಕತ್ತರಿಸಿದ ಐತಿಹ್ಯದೊಡನೆ ವಿಶೇಷವಾಗಿ ಸಮೀಕರಿಸಲಾಗುತ್ತದೆ. ಸತಿಯ ದೇಹದ ವಿವಿಧ ಭಾಗಗಳು ಭಾರತದ ವಿವಿಧ ಭಾಗಗಳಲ್ಲಿ ಬಿದ್ದು ಶಕ್ತಿಪೀಠಗಳು ಹುಟ್ಟಿಕೊಂಡವು. ಸತಿಯ ಯೋನಿ ಬಿದ್ದ ಸ್ಥಳವೇ ಕಾಮಾಖ್ಯ ಎಂಬ ನಂಬಿಕೆಯಿದೆ.
ಯೋಗಶಾಸ್ತ್ರದಲ್ಲಿ ಇಳಾ, ಪಿಂಗಳಾ, ಸುಷುಮ್ನಾ ಎಂಬ ನಾಡಿಗಳಿಗೆ ಸಂಕೇತವಾಗಿ ಗಂಗಾ, ಯಮುನಾ, ಸರಸ್ವತಿ ನದಿಗಳನ್ನು ಇಟ್ಟುಕೊಂಡರೆ ಪ್ರಾಚೀನ ಆರ್ಯಾವರ್ತವೇ ತಂತ್ರಗಳ ಮುಖ್ಯ ಭೂಮಿ ಎನಿಸುತ್ತದೆ. ಈ ಭೂಪ್ರದೇಶದ ಒಂದು ಮೂಲೆಗೆ ಇಂದಿನ ಅಪಘಾನಿಸ್ತಾನ, ಮತ್ತೂಂದು ತುದಿಗೆ ಬದರಿಯಾದರೆ, ಮಗದೊಂದು ಅಂಚೇ ಕಾಮಾಖ್ಯ. ಹೀಗೆ ಈ ಭೂ ಭಾಗವು ಎಷ್ಟೋ ಪುರಾಣದೇವತೆಗಳ ಉಗಮ ಭೂಮಿಯಾದಂತೆ, ತಾಂತ್ರಿಕ ಆಚರಣೆಯ ಪೀಠವೂ ಆಗಿದೆ. ಇಂದಿಗೂ ತಂತ್ರದ ಪ್ರಭಾವವನ್ನು ಬಂಗಾಳ, ಅಸ್ಸಾಂ, ಒರಿಸ್ಸಾ ಮತ್ತು ಹಿಮಾಲಯದ ಪ್ರದೇಶದಲ್ಲಿ ನೋಡಬಹುದು.
ತಂತ್ರದಲ್ಲಿ ಮುಖ್ಯವಾಗಿ ಶ್ರೀವಿದ್ಯಾ ಉಪಾಸನೆ (ಪೂಜೆ) ಯಲ್ಲಿ ಎರಡು ಸಂಪ್ರದಾಯಗಳಿವೆ. ವೇದ-ಪುರಾಣಗಳಲ್ಲಿ ಬರುವ ಋಷಿಗಳಾದ ಅಗಸ್ತ$Â ಮತ್ತು ಅವನ ಹೆಂಡತಿ ಲೋಪಾಮುದ್ರೆಯ ಹೆಸರಿನಲ್ಲಿ ಈ ಮಾರ್ಗಗಳನ್ನು ಕ್ರಮವಾಗಿ ಕಾದಿ ಮತ್ತು ಹಾದಿ ಎಂದು ಗುರುತಿಸಲಾಗಿದೆ. ಇವೆರಡರ ಮಿಶ್ರಣವನ್ನು ಕಹಾದಿ ಎನ್ನಲಾಗಿದೆ. ಕಾದಿಗೆ ಸಮಯಾಚಾರವೆಂದೂ, ಹಾದಿಗೆ ಕೌಲಮಾರ್ಗವೆಂದೂ, ಕಹಾದಿಗೆ ವಾಮಾಚಾರವೆಂದೂ ಹೆಸರು. ಸಾಮಾನ್ಯವಾಗಿ ಆಧುನಿಕ ಶಿಕ್ಷಿತರಲ್ಲಿ ವಾಮದ ಬಗ್ಗೆ ಭಯ, ದೂರವಿದ್ದರೆ ಒಳ್ಳೆಯದು ಎಂಬ ಭಾವನೆಯಿದೆ. ಇದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ ಕೆಲವು ವ್ಯಾಖ್ಯಾನಕ್ಕೆ ಸಿಗುವಂತವೂ ಇವೆ. ಉದಾಹರಣೆಗೆ ಈ ಕುರಿತಂತೆ ಸ್ವಾತಂತ್ರ್ಯಪೂರ್ವ ಭಾರತದ ಮಹತ್ವದ ಚಿಂತಕರಲ್ಲೊಬ್ಬರಾದ ಅರವಿಂದರ ವ್ಯಾಖ್ಯೆಯನ್ನು ನೋಡಬಹುದು:
1ತಂತ್ರ-ಪುರಾಣ ಯುಗದಲ್ಲಿ ತ್ರಿಮೂರ್ತಿಗಳಿಗಿಂತ ಭಿನ್ನರಾದ ಹೊಸ ದೇವತೆಗಳು ಹುಟ್ಟಿಕೊಂಡರು, ಹೊಸ ಕಲ್ಪನೆ ಚಿಗುರಿತು.
2ವೈದಿಕ ಯಜ್ಞ ವ್ಯವಸ್ಥೆ ಹದ ತಪ್ಪಿತು. ಆಗ ಯಜ್ಞಶಾಲೆಗಳ ಬದಲಾಗಿ ದೇವಾಲಯಗಳು ತಲೆಯೆತ್ತಿದ್ದವು.
3ಪೂರ್ವಮೀಮಾಂಸೆಯ ಹಿಡಿತದಲ್ಲಿದ್ದ ಯಜ್ಞದ ವ್ಯವಸ್ಥೆಯ ಕರ್ಮಕಾಂಡದ ಸ್ಥಾನವನ್ನು ಭಕ್ತಿ ಪ್ರಧಾನವಾದ ಭಕ್ತಿಕಾಂಡ ಆವರಿಸಿತು.
4 ಮುಖ್ಯವಾಗಿ ತ್ರಿಮೂರ್ತಿಗಳ ಸ್ವರೂಪಗಳು ಪರಿವರ್ತಿತವಾಗಿ, ಜೊತೆಗೆ ಹಲವು ಜೀರ್ಣಗೊಂಡ ದೇವತೆಗಳ ಶಕ್ತಿಗಳು ಸೇರಿ ಹೊಸದಾದ ಶಕ್ತಿದೇವತೆಯು ಹುಟ್ಟು ಪಡೆಯಿತು.
5ಹೊಸದಾಗಿ ಹುಟ್ಟಿದ ಈ ಶಾಕ್ತ ತಂತ್ರವು ಎರಡು ರೀತಿಯ ಆರಾಧನೆಯನ್ನು ರೂಪಿಸಿತು: 1. ಅಂತರಂಗದ ಆರಾಧನೆ ಮತ್ತು 2. ಬಹಿರಂಗದ ಅರ್ಚನೆ, (ಇದರಿಂದಾಗಿ ಏಕಕಾಲದಲ್ಲಿ ಧ್ಯಾನ, ಯೋಗದಂಥ ಆರಾಧನೆಗಳೂ, ಪೂಜೆ, ಹಾಡು, ನೃತ್ಯ, ದೇವಾಲಯ ನಿರ್ಮಾಣದಂಥ ಅರ್ಚನೆಗಳೂ ತಲೆಯೆತ್ತಿದ್ದವು)
6ಒಟ್ಟಿನಲ್ಲಿ ವೇದ, ಉಪನಿಷತ್ತು, ಜೈನ-ಬೌದ್ಧಗಳ ನಂತರದ ಕಾಲದಲ್ಲಿ ಪುರಾಣ, ತಂತ್ರ ಮತ್ತು ಯೋಗಗಳು ಮಿಶ್ರಗೊಂಡವು, ಪರಸ್ಪರ ಕೊಳುಕೊಡೆ ನಡೆಸಿದವು. ಎಷ್ಟನ್ನು ಕಳಕೊಂಡವೋ, ಎಷ್ಟೋ ಹೊಸತನ್ನು ಪಡೆದುಕೊಂಡವು. (ಪುನರುಜ್ಜೀವನದತ್ತ ಹಿಂದೂ ಧರ್ಮ-ಅರವಿಂದರು ಅನು: ಡಾ.ಜಿ.ಬಿ. ಹರೀಶ, 2002, ಪುಟ 55-56).
“ವೈದಿಕ ಮತಕ್ಕೂ ತಾಂತ್ರಿಕ ಮತಕ್ಕೂ ಉಪಾಸನಾಕ್ರಮದಲ್ಲಿ ವ್ಯತ್ಯಾಸವೇ ವಿನಾ ಮೂಲತತ್ವವು ಒಂದೇ’ (ಶ್ರೀಕಂಠಶಾಸಿŒ, 1975, ಪುಟ 173) ಎಂಬ ಅಭಿಪ್ರಾಯದಂತೆಯೇ “ಶೂದ್ರ ಮತ್ತು ಸ್ತ್ರೀಯರನ್ನು ಧಾರ್ಮಿಕ ಸ್ಥಾನಮಾನದಿಂದ ಬಹಿಷ್ಕರಿಸಿದ್ದ ಆಸ್ತಿಕ ಮತ್ತು ನಾಸ್ತಿಕ ಗುಪ್ತ ಸಮಾಜಗಳು ತಮ್ಮ ಹೊರ ಆಕೃತಿಯನ್ನು ಬದಲಿಸಿಕೊಂಡವು’ ಎಂಬ ಒಳನೋಟವೂ ಲಭ್ಯವಿದೆ (ನಾಗರಾಜಪ್ಪಕೆ.ಜಿ. 1998). ಉದಾಹರಣೆಗೆ ಮಿಥಿಲಾ ಪ್ರದೇಶದಲ್ಲಿ (ಇಂದಿನ ಬಿಹಾರ್) “ಅಂತಃ ಶಾಕ್ತಾ ಬಹಿಃ ಶೈವಾ| ಸಭಾ ಮಧೆÕàತು ವೈಷ್ಣವಾಃ’ ಎಂಬ ಮಾತು ಪ್ರಚಲಿತವಿದೆ. ಅಂದರೆ ಒಳಗೆ ಶಾಕ್ತ, ಹೊರಗೆ ಶೈವ ಸಭೆಯಲ್ಲಿದ್ದಾಗ ವೈಷ್ಣವ. ಒಂದು ಕೇಂದ್ರದಿಂದ ಹೊರಟ ಮೂರು ವೃತ್ತಗಳನ್ನು ಕಲ್ಪಿಸಿಕೊಂಡರೆ ಕೇಂದ್ರವೇ ತಂತ್ರ ಪದ್ಧತಿ, ಅದಕ್ಕೆ ಅಂಟಿಕೊಂಡಿರುವ ತೀರಾ ಒಳಗಿನ ವೃತ್ತ ಶಾಕ್ತ, ಮಧ್ಯದ್ದು ಶೈವ, ತೀರಾ ಹೊರ ವೃತ್ತ ವೈಷ್ಣವ. ಇದೇ ಕೇಂದ್ರ ತ್ರಿವೃತ್ತ ಪರಿಕಲ್ಪನೆಯನ್ನು ವೈಷ್ಣವ ಪಥಕ್ಕೂ ಅನ್ವಯಿಸಬಹುದು. ಲಕ್ಷ್ಮೀಯು ಪುರಾಣಗಳಲ್ಲಿ ವಿಷ್ಣು ಪತ್ನಿಯಾಗಿ ದೊಡ್ಡ ಸ್ಥಾನ ಹೊಂದಿರುವ ವೈಷ್ಣವ ದೇವತೆಯಾದರೂ ಕೊಲ್ಲೂರಿನ ಮಹಾಲಕ್ಷ್ಮಿ ಮತ್ತು ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿಯ ಮಹಾಲಕ್ಷ್ಮೀಯರಲ್ಲಿ ಒಂದು ವಿಶೇಷವಿದೆ. ಈ ಲಕ್ಷ್ಮೀಯರ ದೇವಾಲಯಕ್ಕೆ ಜಯ-ವಿಜಯರಾಗಲಿ, ಗರುಡ, ಹನುಮರಾಗಲಿ ದ್ವಾರಪಾಲಕರಾಗಿರದೆ ಭೈರವ ದ್ವಾರಪಾಲಕನಾಗಿದ್ದಾನೆ. ಮೂಲತಃ ಶಾಕ್ತ ಪೀಠಗಳಾದ ಈ ಕೇಂದ್ರಗಳು ಅಂತರಂಗದಲ್ಲಿ ಶಾಕ್ತಪೀಠಗಳು, ಬಹಿರಂಗದಲ್ಲಿ ವೈಷ್ಣವ ಸ್ಥಾನಗಳು.
ಶಾಕ್ತ ಸಾಹಿತ್ಯಗಳಲ್ಲಿ ಒಂದಾದ ಲಲಿತಾ ಸಹಸ್ರನಾಮದಲ್ಲಿ ಲಕ್ಷ್ಮೀಯ ಪ್ರಸ್ತಾವವಿದೆ. ಭಾರತದ ಎಷ್ಟೋ ಪಂಥಗಳು ತಂತ್ರದಿಂದ ಸ್ಫೂರ್ತಿ ಹೊಂದಿದರೂ ಅದರ ಬಗ್ಗೆ ಭಯಮಿಶ್ರಿತ ಗೌರವ, ದೂರದಿಂದಲೇ ಅನುಕರಿಸಲು ಹೋಗಿ ತೀರಾ ಹತ್ತಿರಕ್ಕೆ ಬಂದು ಬಿಡುವ ಸ್ಥಿತಿಯನ್ನು ಹೊಂದಿಬಿಟ್ಟವು. ತಂತ್ರದ ಆಕರ್ಷಣೆ-ವಿಕರ್ಷಣೆಯಲ್ಲಿ ವೈಷ್ಣವ, ಜೈನ, ಶಾಕ್ತ, ಗಣಪತಿ, ಕುಮಾರಸ್ವಾಮಿ, ಸೂರ್ಯ ಆರಾಧನೆಯ ಪಂಥಗಳಿಗೆ ವಿಶೇಷವಾದ ರೂಪ, ಸಂಕೀರ್ಣತೆಗಳು ಒದಗಿವೆ.
ಜಿ. ಬಿ. ಹರೀಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.