ಕೌತುಕದ ಬಾಲ್ಯವನ್ನು ಕಸಿಯುವ “ಬಾಲಕೌತುಕ’ ಸ್ಪರ್ಧೆ
Team Udayavani, Aug 27, 2017, 7:45 AM IST
ಮಕ್ಕಳ ಬಾಲ್ಯ ಹೇಗಿರಬೇಕು, ಬೆಳವಣಿಗೆ ಹೇಗಾಗಬೇಕು ಎಂದು ಯೋಚಿಸುವ, ಮತ್ತು ಅಂತಹ ಯೋಚನೆಗಳಿಂದಲೇ ಹುಟ್ಟುವ ವಿಚಾರಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡ ದೇಶಗಳಲ್ಲಿ ಬ್ರಿಟನ್ ಕೂಡ ಒಂದು. ಇಲ್ಲಿ ಸಾಮಾನ್ಯಜ್ಞಾನವೂ ವೈಜ್ಞಾನಿಕ ವಾದವೂ ಬೆರೆತು ಹುಟ್ಟಿರಬಹುದಾದ ವಿಚಾರದ ಆಧಾರದಲ್ಲಿ ಮಕ್ಕಳ ಆರೈಕೆ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸ. ಐದನೆಯ ವರ್ಷದಲ್ಲಿ ಔಪಚಾರಿಕ ಶಿಕ್ಷಣ ಶುರು, ಆಗ ಕಾನೂನುಬದ್ಧವಾಗಿ ಎÇÉಾ ಮಕ್ಕಳೂ ಶಾಲೆಯ ಮೆಟ್ಟಿಲು ಹತ್ತಲೇಬೇಕು. ಶಾಲೆಯ ಪ್ರವೇಶ ಆದ ಮೇಲೆ ಹೊಸ ಹೊಸ ಆಟಗಳ ಜೊತೆಗೆ ಪಾಠಗಳು ನಡೆಯುತ್ತವೆ.
ಭಾಷೆಯ ಮೊದಲ ಪಾಠಗಳು ಮಕ್ಕಳಿಗೆ ಓದುವ ಅಭ್ಯಾಸದಿಂದ ಶುರು ಆಗಬೇಕು ಎನ್ನುವ ಚಿಂತನೆ ಇರುವ ಇಲ್ಲಿನ ಶಾಲೆಗಳಲ್ಲಿ , ಮಕ್ಕಳು ಬರೆಯಲು ಆರಂಭಿಸುವುದು ಅವರಿಗೆ ಏಳು ವರ್ಷವಾದ ನಂತರವೇ, ಅಲ್ಲಿಯ ತನಕ ಬರೇ ಓದುವ ಅಭ್ಯಾಸ ನಡೆಯುತ್ತದೆ. ಗಣಿತದ ಪ್ರಾರಂಭಿಕ ಪಾಠಗಳು ವಸ್ತುಗಳನ್ನು ಕಣ್ಣೆದುರಿಟ್ಟು ಆಡುತ್ತ, ಅವುಗಳನ್ನು ಕೈಯಲ್ಲಿ ಮುಟ್ಟಿ ಪರಿಕಲ್ಪನೆಗಳನ್ನು ಬೆಳೆಸುವ ಮೂಲಕ ನಡೆಯುತ್ತದೆ, ವಿಜ್ಞಾನದ ಪಾಠಗಳು ಶುರು ಆಗುವುದು ಇನ್ನೂ ತಡ. ಪ್ರಾಥಮಿಕ ಶಾಲೆಗಳ ಪಠ್ಯಕ್ರಮದÇÉೆಲ್ಲೂ ಅವಸರ ಇಲ್ಲ, ಒತ್ತಡದಿಂದ ವಿಷಯಗಳ ಹೇರಿಕೆ ಕಾಣುವುದಿಲ್ಲ, ವಾರಕ್ಕೆ ಒಂದು ವಿದ್ಯಾರ್ಥಿಗೆ ಒಂದು ಪುಟದ ಮನೆಗೆಲಸ ಸಿಗಬಹುದು ! ಆರೋಗ್ಯಕ್ಕೆ ಬೇಕಾದ ಚಟುವಟಿಕೆ ಮತ್ತೆ ಸೂರ್ಯನ ಕೆಳಗೆ ಸಿಗುವ ಜೀವಸತ್ವಗಳನ್ನು ಪಡೆದುಕೊಳ್ಳಲು ಬಿಸಿಲಿರಲಿ, ಚಳಿಯಿರಲಿ ಶಾಲಾ ಬಯಲಲ್ಲಿ ದಿನವೂ ಮಕ್ಕಳು ಸ್ವಲ್ಪ ಆಟವನ್ನು ಆಡಬೇಕು. ಬಿಬಿಸಿಯಲ್ಲಿ ಮಕ್ಕಳು ನೋಡುವ ಕಾಟೂìನುಗಳು ಸಂಜೆ ಏಳು ಗಂಟೆಗೆ ಮುಗಿದು ಮಕ್ಕಳಿಗೆ ಶುಭರಾತ್ರಿ ಹೇಳುತ್ತವೆ. ಮಕ್ಕಳನ್ನು ಅತ್ಯಂತ ಸೂಕ್ಷ್ಮ ಮತ್ತು ಕೋಮಲ ಎಂದು ತಿಳಿಯುವ ಇವರ ಯೋಚನೆಗಳು ಮಕ್ಕಳ ಹಕ್ಕುಗಳ ಬಗ್ಗೆಯೂ ಎಚ್ಚರ ವಹಿಸಿವೆ. ಅಲ್ಲದೆ, ಎಳವೆಯÇÉೇ ಮಕ್ಕಳಿಗೆ ಅವರ ಹಕ್ಕುಗಳ ಪರಿಚಯ ಮಾಡಿಕೊಡಲಾಗುತ್ತದೆ.
ಬಾಲ್ಯವೊಂದು ಹೇಗಿದ್ದರೆ ಮಕ್ಕಳು ಖುಷಿಪಡುತ್ತಾರೋ, ಎಂತಹ ಬೆಳವಣಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಆಗುತ್ತದೋ ಅಂತಹ ಎಲ್ಲ ಪ್ರಯತ್ನಗಳು ಮಕ್ಕಳ ಬಾಲ್ಯದ ಸುತ್ತಲೂ ಕೆಲಸ ಮಾಡುವ ವ್ಯವಸ್ಥೆಗಳಲ್ಲಿ, ಯೋಚನೆಗಳಲ್ಲಿ ಕಾಣಸಿಗುತ್ತವೆ.
ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆ
ಮಕ್ಕಳ ಬಗ್ಗೆ ವಿಶೇಷ ಪ್ರಜ್ಞೆಯನ್ನು ಮತ್ತು ಕಾಳಜಿಯನ್ನು ತುಂಬಿಸಿಕೊಂಡ ಈ ದೇಶದಲ್ಲಿ ಈಗಷ್ಟೇ ರಾಷ್ಟ್ರಮಟ್ಟದ ಮಕ್ಕಳ ಸ್ಪರ್ಧೆಯೊಂದು ಮುಗಿದಿದೆ ಮತ್ತು ಆ ಸ್ಪರ್ಧೆ ನಡೆದಾಗಲೆಲ್ಲ ಕೇಳಿಬರುವ ಪ್ರತಿಕ್ರಿಯೆಗಳು ಮತ್ತೆ ಗಮನ ಸೆಳೆದಿವೆ. ವರ್ಷಕ್ಕೊಮ್ಮೆ ನಡೆಯುವ ಈ ಮಕ್ಕಳ ಸ್ಪರ್ಧೆಯಲ್ಲಿ ಗೆಲ್ಲಬೇಕಿದ್ದರೆ, ವೇದಿಕೆಯ ಮೇಲೆ ನಿಂತು ಮಗುವೊಂದು ತನ್ನೆದುರು ಕುಳಿತ ಗಂಭೀರ ಮುಖಮುದ್ರೆಯ ನಿರ್ವಾಹಕನಿಂದ ಬರುವ ಇತಿಹಾಸ, ಗಣಿತ, ಆಂಗ್ಲ ಭಾಷೆ, ವಿಜ್ಞಾನ ಹೀಗೆ ಬೇರೆ ಬೇರೆ ವಿಭಾಗಗಳ ಅಸಾಮಾನ್ಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಬೇಕು. ತಲೆಯ ಮೇಲೆ ತೂಗು ಹಾಕಿದ ಹಾಲೊಜೆನ್ ಬೆಳಕಿನ ಬಿಸಿ, ಎದುರು ನಿಂತ ಟಿವಿ ಕ್ಯಾಮೆರಾಗಳು, ವೇದಿಕೆಯ ಮುಂದೆ ಕುಳಿತು ನೋಡುತ್ತಿರುವ ಹೆತ್ತವರ ನಿಟ್ಟುಸಿರು ಅಥವಾ ಮೌನ ಇವೆಲ್ಲವನ್ನೂ ಎದುರಿಸಬೇಕು ಮತ್ತು ಮೀರಬೇಕು. ಬ್ರಿಟನ್ ಅಲ್ಲಿ ನೆಲೆಸಿರುವ 7ರಿಂದ 12 ವರ್ಷದೊಳಗಿನ ಇಪ್ಪತ್ತು ಅನುಪಮ ಪ್ರತಿಭಾನ್ವಿತ ಮಕ್ಕಳು ಪಾಲ್ಗೊಳ್ಳುವ ಈ ರಸಪ್ರಶ್ನೆ ಸ್ಫರ್ಧೆಯ ಹೆಸರು ಚೈಲ್ಡ… ಜೀನಿಯಸ್. ಇದು ಬ್ರಿಟನ್‌ನ ಬಾಲಕೌತುಕ (ಇಜಜಿlಛ ಗಟnಛಛಿr)ದ ಅನ್ವೇಷಣೆ. 2013ರಲ್ಲಿ ಪ್ರಾರಂಭಗೊಂಡ ಈ ಸ್ಪರ್ಧೆಯಲ್ಲಿ, ಈ ವರ್ಷವೂ ಸೇರಿದಂತೆ ಮೂರು ಬಾರಿ ಭಾರತೀಯ ಮಕ್ಕಳು ವಿಜೇತರಾಗಿದ್ದರೆ.
ಈ ಸ್ಪರ್ಧೆಗೆ ಬರುವ ಮಕ್ಕಳು ಮತ್ತು ಅವುಗಳ ಹೆತ್ತವರು, ಬ್ರಿಟನ್‌ನಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಾಧಾನದ ಜೀವನ ಕ್ರಮವನ್ನು, ಅವಸರವಿಲ್ಲದ ಬಾಲ್ಯವನ್ನು, ಒತ್ತಡವಿಲ್ಲದ ಪ್ರಾಥಮಿಕ ವಿದ್ಯಾಭ್ಯಾಸದ ಕ್ರಮವನ್ನು ನಂಬುವವರಲ್ಲ. ಅದನ್ನು ಅವರು ಅನುಸರಿಸಲು ಇಷ್ಟ ಪಡುವುದಿಲ್ಲ.
ಈ ವರ್ಷದ ಸ್ಪರ್ಧೆಯ ವಿಜೇತ ಬಾಲಕೌತುಕ ರಾಹುಲ್ ಯಾವಾಗಲೂ ಪುಸ್ತಕ ಓದುತ್ತಿರುವವನು, ಊಟ-ತಿಂಡಿಯ ಜೊತೆಗೂ ಪುಸ್ತಕ ಓದುವುದು ಇವನಿಗೆ ಇಷ್ಟವಂತೆ. ರಾಹುಲನ ತಂದೆಯ ಮಾತಲ್ಲಿ ಹೇಳುವುದಾದರೆ, ಮಗನ ಬುದ್ಧಿಮತ್ತೆ ಆಲ್ಬರ್ಟ್ ಐನಸ್ಟೆ çನ್ ಮತ್ತು ಸ್ಟೆಫೆನ್ ಹಾಕಿಂಗ್‌ರಿಗಿಂತಲೂ ಹೆಚ್ಚು. ಹನ್ನೆರಡು ವರ್ಷದ ರಾಹುಲನ ಕನ್ನಡಕದ ಹಿಂದಿನ ಹುಬ್ಬು ಗಂಟಿಕ್ಕಿದ ಮುಖಮುದ್ರೆ, ತನ್ನ ವಿಜಯದಲ್ಲಿ ನೀಡುವ ಮುಗ್ಧ ನಗೆ, ಪುಟಗಟ್ಟಲೆ ವಿಷಯಗಳನ್ನು ಗಂಟೆಯೊಳಗೆ ಬಾಯಿಪಾಠ ಮಾಡುವ ಸಾಮರ್ಥ್ಯ- ಇತ್ಯಾದಿಗಳು ಪ್ರತಿ ಆಂಗ್ಲ ಪತ್ರಿಕೆಯಲ್ಲೂ ಸುದ್ದಿ ಆಗಿವೆ. ಜೊತೆಗೆ, ಸ್ಪರ್ಧೆಯ ಕೊನೆಯ ಹಂತದ ಪ್ರಶ್ನೋತ್ತರದಲ್ಲಿ ರಾಹುಲನ ಎದುರಾಳಿ ಬಾಲಕ ತಪ್ಪು ಉತ್ತರ ನೀಡಿದಾಗ ಖುಷಿಯಲ್ಲಿ ನಗುವ ರಾಹುಲನ ತಂದೆಯ ಮನೋಸ್ಥಿತಿ ತೀಕ್ಷ್ಣ ಟೀಕೆಗೂ ಗುರಿಯಾಗಿದೆ. ಕಳೆದ ವರ್ಷದ ಚೈಲ್ಡ… ಜೀನಿಯಸ್ ವಿಜೇತೆ ಭಾರತೀಯ ಮೂಲದ ಹುಡುಗಿ ರಿಯಾ. ರಿಯಾಳ ತಾಯಿ, ತನ್ನ ಮಗಳು ಕೊನೆಯ ಹಂತದ ಸ್ಪರ್ಧೆಯಲ್ಲಿ ಒಂದು ತಪ್ಪು ಉತ್ತರ ನೀಡಿದ್ದಕ್ಕೆ ಪ್ರಶ್ನೆಯು ನಿರ್ದಿಷ್ಟವಾಗಿಲ್ಲದಿರುವುದೇ ಕಾರಣ ಎಂದು ವಾದಿಸಿ ಮಗಳಿಗೆ ಪ್ರಶಸ್ತಿ ಗೆಲ್ಲಲು ನಿರ್ಣಾಯಕ ಎನಿಸಿದ ಅಂಕ ಗಳಿಸಿಕೊಟ್ಟಿದ್ದಳು.
ಸ್ಪರ್ಧೆಯ ಎಲ್ಲ ಹಂತಗಳಲ್ಲೂ ಕಾಣುವ ಕಠಿಣ ಸ್ಪರ್ಧೆ, ಹೆತ್ತವರ ಪರ್ವತದೆತ್ತರದ ನಿರೀಕ್ಷೆಗಳು ಮತ್ತು ಒತ್ತಡದ ಪೈಪೋಟಿಯ ಕಾರಣಕ್ಕಾಗಿ ಚೈಲ್ಡ… ಜೀನಿಯಸ್ ಬ್ರಿಟನ್ನಿನ ಅತ್ಯಂತ ಕ್ರೂರ ದೂರದರ್ಶನ ಸರಣಿ ಎಂಬ ಅಪಕೀರ್ತಿಗೂ ಒಳಗಾಗಿದೆ. “ಮಕ್ಕಳು ಇಲ್ಲಿ ಎದುರಿಸುವುದು ಪ್ರಶ್ನೆಗಳನ್ನಲ್ಲ , ಬದಲಾಗಿ ಭಯಾನಕ ವಾಗ್ಧಾಳಿಯನ್ನು! ಇಂತಹ ಸ್ಪರ್ಧೆಯನ್ನು ನೋಡಲಾರೆವು’ ಎಂದು ಆಕ್ಷೇಪಿಸಿದವರೂ ಇ¨ªಾರೆ. ಪ್ರಶ್ನೆಗೆ ಉತ್ತರಿಸಲಾಗದೆ ರಸಪ್ರಶ್ನೆಯ ನಡುವೆಯೇ ಕಣ್ಣೀರು ಹಾಕುತ್ತ ಕೆಲವು ಮಕ್ಕಳು ವೇದಿಕೆಯಿಂದ ನಿರ್ಗಮಿಸುವುದು ಪ್ರತಿ ವರ್ಷದ ಸ್ಪರ್ಧೆಯಲ್ಲೂ ಇರುತ್ತದೆ. ವೇದಿಕೆಯ ಒಂದು ಕಡೆ ಗೆಲುವಿನ ಸಂಭ್ರಮೋÇÉಾಸ ಮತ್ತೂಂದು ಕಡೆ ಸೋತು ಕುಗ್ಗಿದ ಮಗು- ಇವು ಸ್ಪರ್ಧೆಯ ಪರಿಸರದಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯಗಳು!
ಪತ್ರಿಕೆಗಳ ಅಂತರ್ಜಾಲ ಪುಟಗಳಲ್ಲಿ ಪ್ರಶಸ್ತಿಯನ್ನು ಎತ್ತಿ ಹಿಡಿದ ಮಕ್ಕಳ ಭಾವಚಿತ್ರದ ಪ್ರಕಟಣೆಯ ಕೆಳಗೆ, ಚೈಲ್ಡ… ಜೀನಿಯಸ್ ಪ್ರಶಸ್ತಿ ಗೆದ್ದವರು ದೊಡ್ಡವರಾದ ಮೇಲೂ ಮಹಾನ್ ಪ್ರತಿಭೆಗಳಾಗಿ ಉಳಿದಿದ್ದರ ಉದಾಹರಣೆಗಳು ಎಷ್ಟಿವೆ, ಮಕ್ಕಳ ಬಾಲ್ಯವನ್ನೇಕೆ ಹಾಳು ಮಾಡುತ್ತೀರಿ ಎನ್ನುವ ಪ್ರತಿಕ್ರಿಯಾತ್ಮಕ ಬರಹಗಳು ಕಂಡು ಬರುತ್ತವೆ.
ಟೀಕೆಗಳು ಎಷ್ಟಿದ್ದರೂ ತನ್ನ ಮಗು ಮುಂಬರುವ ವರ್ಷಗಳ ಅಪ್ರತಿಮ ಬಾಲಪ್ರತಿಭೆಯಾಗಬೇಕೆಂಬ ಮಹತ್ವಾಕಾಂಕ್ಷೆಯವರು ನಿರಂತರವಾಗಿ ತಯಾರಿ ನಡೆಸುವವರಿದ್ದಾರೆ. ಆದರೆ ಮತ್ತೂಂದೆಡೆ, ಮಕ್ಕಳನ್ನು ಸೂಕ್ಷ್ಮಮನಸುಗಳು, ಎಳೆಯ ಕನಸುಗಳು ಎಂದು ಕರೆಯುವವರು ಸುಂದರ ಬಾಲ್ಯವೇ ತಮ್ಮ ಮಕ್ಕಳಿಗೆ ದೊಡ್ಡ ಪ್ರಶಸ್ತಿಯೆಂದು ತಣ್ಣಗಿ¨ªಾರೆ.
– ಯೋಗೀಂದ್ರ ಮರವಂತೆ ಬ್ರಿಸ್ಟಲ್, ಇಂಗ್ಲೆಂಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.