ಆನಂದದ ನಾಡು, ಭೂತಾನ್‌ನಲ್ಲಿ ವರ್ತಮಾನ


Team Udayavani, Jul 23, 2017, 7:20 AM IST

butan.gif

ಭೂತಾನ ಕ್ಕೆ ಆನಂದದ ನಾಡು (land of happiness) ಎಂಬ ಹೆಸರಿದೆ. ಹಾಗಿದ್ದರೆ ಅಲ್ಲಿಗೆ ಒಮ್ಮೆ ಹೋಗಿ ಬರಬೇಕು ಅನ್ನಿಸಿತು. ಇತ್ತೀಚೆಗೆ ಆ ಭಾಗ್ಯ ಕೂಡಿ ಬಂದಿತು. ಅಲ್ಲಿಗೆ ಹೋಗಿ ಬಂದು ನನ್ನ ಅನುಭವಗಳನ್ನು ಹಂಚಿಕೊಳ್ಳುವುದು ನನ್ನ ಆನಂದವನ್ನು ಅಧಿಕಗೊಳಿಸುತ್ತದೆ.

ಭಾರತದಿಂದ ಭೂತಾನಕ್ಕೆ ಹೋಗಲು ಎರಡು ಮಾರ್ಗಗಳಿವೆ. ಒಂದು ರಸ್ತೆ ಮೂಲಕ, ಇನ್ನೊಂದು ವಿಮಾನದ ಮೂಲಕ. ರಸ್ತೆ ಮೂಲಕ ಹೋಗಬೇಕಾದರೆ ಪಶ್ಚಿಮ ಬಂಗಾಳದ ಸಿಲಿಗುರಿ, ಜಲಪಾಯಿಗುರಿ ಮೂಲಕ ಗಡಿಭಾಗದ ಜೈಗಾವ್‌ಗೆ ಬಂದು ಅಲ್ಲಿ ಭೂತಾನ್‌ ಗೇಟ್‌ ದಾಟಿ ಪುಂಶೋಲಿಂಗ್‌ಗೆ ಹೋಗಬೇಕು. ಜೈಗಾವ್‌ ಮತ್ತು ಪುಂಶೋಲಿಂಗ್‌ ಒಂದೇ ಪಟ್ಟಣ ಎಂದರೆ ತಪ್ಪಾಗದು. ಅರ್ಧ ಭಾಗ ಭಾರತ ದಲ್ಲಿದ್ದರೆ ಇನ್ನರ್ಧ ಭೂತಾನ್‌ ನಲ್ಲಿದೆ. ಜೈಗಾವ್‌ ಭಾರತ ವಾದರೆ ಪುಂಶೋಲಿಂಗ್‌ ಭೂತಾನದ ಭಾಗ. ಆಶ್ಚರ್ಯವೆಂದರೆ ಜೈಗಾವ್‌ ಅತ್ಯಂತ ಗಲೀಜು ಪಟ್ಟಣ , ಆದರೆ ಅದೇ ಪಟ್ಟಣದ ಇನ್ನರ್ಧ ಪುಂಶೋಲಿಂಗ್‌ ತುಂಬಾ ಸ್ವತ್ಛವಾಗಿದೆ. ಇಡೀ ಭೂತಾನ್‌  ಎÇÉೆಲ್ಲೂ ಸ್ವತ್ಛವಾಗಿದೆ, ಭಾರತ ಸ್ವತ್ಛ ಆಗಬೇಕಾಗಿದೆ. ಜೈಗಾವ್‌  ರಸ್ತೆಗಳಲ್ಲಿ ಎÇÉೆಲ್ಲೂ ಗುಂಡಿಗಳು, ಹೊಂಡಗಳು, ಕಸ ಕಡ್ಡಿಗಳು, ಹಾರನ್‌ ಮಾಡುತ್ತ ಓಡಾಡುವ ವಾಹನಗಳು, ಕೈಗಾಡಿಗಳು, ಯದ್ವಾ ತದ್ವಾ ನಿಂತಿರುವ ವಾಹನಗಳು ಕಾಣಿಸುತ್ತವೆ. ಅದು ಭಾರತ ಎಂಬುದರಲ್ಲಿ ಸಂದೇಹವೇ ಇಲ್ಲ. ಭೂತಾನ್‌ ಗೇಟ್‌ ದಾಟಿದರೆ ಒಳ್ಳೆಯ ರಸ್ತೆಗಳು, ಶಿಸ್ತುಬದ್ದವಾಗಿ ಚಲಿಸುವ ವಾಹನಗಳು, ಹಾರನ್‌ ಇಲ್ಲ, ಕಸ ಕಡ್ಡಿ ಇಲ್ಲ, ರಸ್ತೆ ಗುಂಡಿಗಳಿಲ್ಲ.  ಭೂತಾನದಲ್ಲಿ ಆಟೋ ರಿûಾ ಗಳೇ ಇಲ್ಲ. ದೇಶ ಬದಲಾದರೆ ಎಷ್ಟೊಂದು ಬದಲಾವಣೆ. Paradigm Shift.

ವಿಮಾನ ಮೂಲಕ ಹೋಗಬಯಸುವವರು ಭೂತಾನ ದ ಏಕೈಕ ವಿಮಾನ ನಿಲ್ದಾಣ “ಪಾರೋ’ ದಲ್ಲಿ ಇಳಿಯಬೇಕು. ದೆಹಲಿ, ಕೋಲ್ಕತಾ ಮತ್ತು ಬಗಡೋಗ್ರಾಗಳಿಂದ ಪಾರೋಗೆ ವಿಮಾನ ಸೌಕರ್ಯವಿದೆ. ರಸ್ತೆ ಮೂಲಕ ಹೋದರೆ ಪ್ರಕೃತಿಸೌಂದರ್ಯವನ್ನು ಸವಿಯಬಹುದಲ್ಲವೇ? ನಾನು ರಸ್ತೆ ಮೂಲಕವೇ ಹೋಗಲು ತೀರ್ಮಾನಿಸಿದೆ. ಅಲ್ಲದೆ ಜೊತೆಗೆ ನನ್ನ ಜೀವನ ಸಂಗಾತಿಯನ್ನು ಕರೆದೊಯ್ದೆ.

ನಾವು ಒಬ್ಬರು ಪ್ರವಾಸೋದ್ಯಮಿಯ ಮೂಲಕ ಒಂದು ಗುಂಪಿನಲ್ಲಿ ಹೊರಟಿ¨ªೆವು. ಬೆಂಗಳೂರಿನಿಂದ ಕೊಲ್ಕತಾ ಮೂಲಕ ಬಗಡೋಗ್ರಾಗೆ ವಿಮಾನದಲ್ಲಿ ಪ್ರಯಾಣಿಸಿ ಅಲ್ಲಿಂದ ವಿಶೇಷ ಬಸ್‌ ನಲ್ಲಿ 5 ತಾಸು ಪ್ರಯಾಣಮಾಡಿ ಪುಂಶೋಲಿಂಗ್‌ ತಲುಪಿದೆವು. ಭೂತಾನ್‌ ಮತ್ತು ಭಾರತ ಮಿತ್ರ ರಾಷ್ಟ್ರ ಗಳಾದ ಕಾರಣ ಭೂತಾನಕ್ಕೆ ಪ್ರವೇಶಿಸಲು ನಿರ್ಬಂಧಗಳಿಲ್ಲ. ಒಂದು ದೇಶದ ವಾಹನಗಳು ಕೂಡ ಇನ್ನೊಂದು ದೇಶದೊಳಗೆ ಪ್ರವೇಶಿಸಬಹುದು. Passport, Visa ಯಾವುದೂ ಬೇಕಿಲ್ಲ. ಗಡಿ ದಾಟುತ್ತಿದ್ದಂತೆ ನಿಮ್ಮ ಗಡಿಯಾರವನ್ನು 30 ನಿಮಿಷ ಮುಂದಕ್ಕೆ ಇಟ್ಟುಕೊಂಡರೆ ಆಯ್ತು, ಅದು ಭೂತಾನ ಸಮಯವಾಗುತ್ತದೆ. ನಾವು ಪುಂಶೋಲಿಂಗ್‌ ತಲಪಿದಾಗ ರಾತ್ರಿಯಾಗಿತ್ತು. ಅಲ್ಲಿ ಹೋಟೆಲ್‌ ದೃಕ್‌ (Hotel Druk) ನಲ್ಲಿ ತಂಗಿದೆವು. ಮಾರನೆಯ ದಿನ ಬೆಳಗ್ಗೆ ಅÇÉೇ ಸಮೀಪದಲ್ಲಿದ್ದ immigration ಕಚೇರಿಗೆ ಹೋಗಿ ಅನುಮತಿ ಪತ್ರ ಪಡೆದೆವು. ಅದಕ್ಕೆ ನಮ್ಮ ಗುರುತಿನ ಚೀಟಿ (ಮತದಾರನ ಗುರುತಿನ ಕಾರ್ಡ್‌ ಅಥವಾ ಪಾಸ್‌ ಪೋರ್ಟ್‌) ಯನ್ನು ತೋರಿಸಬೇಕಾಗಿತ್ತು. ಈ ಕೆಲಸವನ್ನು ಮುಗಿಸಿ ಅಲ್ಲಿಂದ ಮುಂದಿನ ಪ್ರಯಾಣ.

ನಮ್ಮ ಮುಂದಿನ ಪ್ರಯಾಣ ಪಾರೋ ನಗರಕ್ಕೆ. 178 ಕಿ. ಮಿ. ದೂರವಿದೆ. ಗುಡ್ಡ ಬೆಟ್ಟಗಳ ನಡುವೆ ರಸ್ತೆ ಮೂಲಕ 6 ತಾಸಿನ ಪ್ರಯಾಣ.   ಭೂತಾನದಲ್ಲಿ ಬರೀ ರಸ್ತೆ ಮೂಲಕವೇ ಸಾಗಬೇಕು. ಏಕೆಂದರೆ ಅಲ್ಲಿ ರೈಲ್ವೇ ಮತ್ತು ವಿಮಾನ ಸೌಕರ್ಯ ಗಳಿಲ್ಲ. ರಸ್ತೆ ಗುಣಮಟ್ಟ ತುಂಬಾ ಚೆನ್ನಾಗಿರುವುದರಿಂದ ಪ್ರಯಾಣ ಕಷ್ಟವೆನಿಸಲಿಲ್ಲ. ಪುಂಶೋಲಿಂಗ್‌ ನಿಂದ ಹೊರಟ ಕೊಡಲೇ ಬಸ್ಸು ಘಟ್ಟ ಏರ ತೊಡಗಿತು. ತುಸು ಮೇಲೆ ಹೋದ ಬಳಿಕ ಖರಬಂದಿಗೊಂಪ ಎಂಬಲ್ಲಿ ಸಾರಥಿಯು ಬಸ್‌ ನಿಲ್ಲಿಸಿ ಭಾರತದ ಬಯಲು ಪ್ರದೇಶವನ್ನು ತೋರಿಸಿದ. ಅÇÉೇ ಒಂದು ಬುದ್ಧ ದೇವಾಲಯವೂ ಇತ್ತು. ಅದನ್ನೂ ನೋಡಿ ಮತ್ತೆ ಬಸ್‌ ಏರಿದೆವು.

ಸುಂದರ ಬೆಟ್ಟಗಳ ಮಧ್ಯ ಶುದ್ಧ ತಂಗಾಳಿಯ ಆಲಿಂಗನದೊಂದಿಗೆ  ಪ್ರಯಾಣಿಸುತ್ತ ಸುಮಾರು ಎರಡೂವರೆ ತಾಸಿನ ಬಳಿಕ ಒಂದು ಹೋಟೆಲ್‌ ಬಳಿ ಬಸ್‌ ನಿಂತಿತು. ಅಲ್ಲಿ ಶುಚಿ ರುಚಿಯ ಸಸ್ಯಾಹಾರಿ ಭೋಜನ. ಅಲ್ಲಿಯ  ವಿಶೇಷ ಅಡುಗೆಯಾದ “ಕೇವ ದಾಟಿಶಿ’ ಯ ರುಚಿಯನ್ನು ನೋಡಿದೆವು. ಅಲ್ಲಿಂದ ಮುಂದೆ ಹೋಗುತ್ತ  ತಲ ( Tala ) ವಿದ್ಯುತ್‌ ಉತ್ಪಾದನಾ ಕೇಂದ್ರವನ್ನುದೂರದಿಂದಲೇ ನೋಡಿದೆವು. ಅದು ವಾಂಗುc ನದಿಯ ಜಲವಿದ್ಯುತ್‌ ಘಟಕ. ಭೂತಾನ ದ ಅತಿ ದೊಡ್ಡ ವಿದ್ಯುತ್‌ ಸ್ಥಾವರ. ಭಾರತ ಸರಕಾರದ ನೆರವಿನೊಂದಿಗೆ 2007 ರಲ್ಲಿ ಆರಂಭಗೊಂಡದ್ದು. ಅಲ್ಲಿ ಉತ್ಪಾದಿಸಲ್ಪಡುವ ಎಲ್ಲ ವಿದ್ಯುತನ್ನು ಭಾರತಕ್ಕೆ ರಫ್ತು ಮಾಡುತ್ತಾರೆ. ಭೂತಾನ್‌ ಸರಕಾರಕ್ಕೆ ಅತಿ ಹೆಚ್ಚು ಆದಾಯ ತಂದು ಕೊಡುವ ಉದ್ಯಮವಿದು.

ಪ್ರಕೃತಿಸೌಂದರ್ಯವನ್ನು ಸವಿಯುತ್ತಾ ಮುಂದೆ ಸಾಗಿ ಸಂಜೆ ಪಾರೋ ನಗರಕ್ಕೆ ತಲಪಿದೆವು. ಅಲ್ಲಿ ಹೋಟೆಲ್‌ ಒಲಥಾಂಗ್‌ನಲ್ಲಿ ವಸತಿ. ಈ ಹೋಟೆಲ್‌ 1974 ರಲ್ಲಿ ನಿರ್ಮಾಣವಾಗಿತ್ತು. ಪ್ರಕೃತಿಯ ನಡುವೆ ಇರುವ  ಭೂತಾನದ ಪಾರಂಪರಿಕ ಶೈಲಿಯ ಸುಂದರ ಕಟ್ಟಡ. ಅಲ್ಲಿನ ಎಲ್ಲ ಕಟ್ಟಡಗಳು ಸಹ ಪಾರಂಪರಿಕ ಶೈಲಿಯÇÉೇ ಇವೆ. ಭೂತಾನ್‌ ದ ಜನರು ತಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾರೆ ಮತ್ತು ಅದರ ರಕ್ಷಣೆಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಆದ ಕಾರಣ ಅಲ್ಲಿ ವಿದೇಶಿ ಸಂಸ್ಕೃತಿಯ ಪ್ರಭಾವ ಅಷ್ಟಾಗಿ ಕಾಣಿಸುತ್ತಿಲ್ಲ. ಅಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಎಲ್ಲರೂ ಅಲ್ಲಿನ ಸಾಂಪ್ರದಾಯಿಕ ಉಡುಗೆಯಾದ ಘೋ ಮತ್ತು ಕೀರ ವನ್ನೇ ಧರಿಸುತ್ತಾರೆ. ಘೋ ಎಂಬುದು ಗಂಡಸರ ಉಡುಗೆ, ಕೀರ ಹೆಂಗಸರ ಉಡುಗೆ. ನಮ್ಮ ಗೈಡ್‌ ಮತ್ತು ಬಸ್‌ ಚಾಲಕರು ಸಹ ಸದಾ ಘೋ ಧರಿಸಿ ಕರ್ತವ್ಯಕ್ಕೆ ಬರುತ್ತಿದ್ದರು.

ಹೋಟೆಲುಗಳಲ್ಲಿ, ಅಂಗಡಿಗಳಲ್ಲಿ  ಎÇÉೆಲ್ಲೂ ಘೋ ಅಥವಾ ಕೀರ ಧರಿಸಿದ  ನೌಕರರೇ ಇರುತ್ತಿದ್ದರು. ಸರಕಾರವು ಘೋ ಮತ್ತು ಕೀರ ಗಳನ್ನು ಅವರ ರಾಷ್ಟ್ರೀಯ ಉಡುಗೆಯೆಂದು ಘೋಷಿಸಿದೆ.  ಭೂತಾನ ಜನರು ಸರಕಾರಿ ಕಚೇರಿಗಳಿಗೆ ಹೋಗುವಾಗ  ಮತ್ತು  ಸಾರ್ವಜನಿಕ ಸೇವೆಯಲ್ಲಿರುವಾಗ ರಾಷ್ಟ್ರೀಯ ಉಡುಗೆಯನ್ನೇ ಧರಿಸಬೇಕೆಂಬುದು ಅಲ್ಲಿನ ಕಾನೂನು.

ಭೂತಾನ ದ ಒಟ್ಟು ಜನಸಂಖ್ಯೆಸುಮಾರು 8 ಲಕ್ಷ. ಅವರಲ್ಲಿ  ಸ್ವಲ್ಪ ಸ್ವಲ್ಪವೇ 1 ಕ್ರೀಶ್ಚಿಯನರು, ಹಿಂದುಗಳು ಬಿಟ್ಟರೆ ಮಿಕ್ಕೆಲ್ಲ ಬೌದ್ಧರು. ಬೇರೆ ಜನಾಂಗೀಯರು ಇಲ್ಲವೆಂದೇ ಹೇಳಬಹುದು. ಈಸಾಯಿ ಮಿಶನರಿಗಳು ಹಾಗೂ ಮುಸಲ್ಮಾನ ಆಕ್ರಮಣಕಾರರು ಅಲ್ಲಿಗೆ ಹೋಗಿಲ್ಲ ಎನ್ನುವುದೇ ಆಶರ್ಯ. 
(ಮುಂದಿನ ವಾರ ಇನ್ನಷ್ಟು)

– ಅಳಿಕೆ ಗಣಪತಿ ಭಟ್‌ 

ಟಾಪ್ ನ್ಯೂಸ್

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.