ಒಂಟಿ ಪಯಣಿಗರ ಅಳಿದುಳಿದ ಮಾತು


Team Udayavani, Jul 16, 2017, 2:45 AM IST

old-man-a.jpg

ಮನುಷ್ಯ ಸಂಘಜೀವಿ ಎಂಬ ಮಾತಿನಷ್ಟೇ ನಿಜವಾದ ಇನ್ನೊಂದು ಮಾತೆಂದರೆ, ಆಳದಲ್ಲಿ ಇವನು ಒಂಟಿ ಎಂಬುದು. ಎಷ್ಟೆಲ್ಲಾ ಸಂಬಂಧಗಳ ಸಂತೆಯ ನಡುವೆಯೂ ತಾನು ಒಂಟಿ ಎನಿಸಲು ಕಾರಣವೆಂದರೆ ಬಹುಶಃ ತನ್ನದಷ್ಟೇ ಆಗಿರಬಹುದಾದ ಎಷ್ಟೆಲ್ಲಾ ಅನುಭವಕ್ಕೂ ತಾನು ಸಾಕ್ಷಿ ಒದಗಿಸಲಾರದೆ ಹೋಗುವ ಸ್ಥಿತಿ ನಮ್ಮೆಲ್ಲರಿಗೂ ಇರುವುದು. ಹಾಗೆ ಸಾಕ್ಷಿ ಒದಗಿಸಬೇಕೆಂದೇ ಮನುಕುಲ ಎಷ್ಟೆಲ್ಲಾ ಅನುಭವಗಳನ್ನೂ ಯಾವ ಕಾಲದಿಂದಲೂ ಮಾತಿನಲ್ಲೇ ಉಳಿಸಿಕೊಂಡು ಕಾಪಿಟ್ಟು ಮುಂದೆ ಸಾಗಿಸುವ ಪ್ರಯತ್ನವನ್ನು ಬಿಡದೆ ಮಾಡುತ್ತಲೇ ಬಂದಿದೆ. ಆದರೂ ಈ ಮಹಾಪ್ರಯತ್ನದಲ್ಲಿ ನಮಗೆ ದಕ್ಕುವುದು ಎಷ್ಟಿರಬಹುದು? ಒಂಟಿ ಪಯಣಿಗರಾಗಿಯೇ ಸಾಗುವ ನಾವೆಲ್ಲ ನಮ್ಮ ನಮ್ಮದೇ ಕಥೆ ಹೇಳ ಹೊರಟರೂ ಅಲ್ಲಿ ಮಾತಿಗೆ ದಕ್ಕುವುದು ಎಷ್ಟಿರಬಹುದು? ಅಥವಾ ಆ ಮಾತಿನ ಮೂಲವಾದ ಅನುಭವವೊಂದು ನಮ್ಮ ನೆನಪಿನಲ್ಲಿ ಕಾಲದಿಂದ ಕಾಲಕ್ಕೆ ರೂಪಾಂತರಗೊಳ್ಳುತ್ತ ಹೋಗುವಾಗ, ನೆನಪಿನಲ್ಲಿ ಉಳಿದೇ ಇರದ ಅಥವಾ ಬದಲಾಗಿರಬಹುದಾದ ಮೂಲದ ಅನುಭವವನ್ನು ಮಾತಿನಲ್ಲಿ ಮೂಡಿಸುವ ಬಗೆಯಾದರೂ ಹೇಗೆ? ಕಡೆಗೂ ಮಾತಲ್ಲಿ ಸಿಗುವುದು ಅಳಿದುಳಿದ ನೆನಪಿನ ಚೂರುಗಳಷ್ಟೇ  ಇರಬಹುದು.

ಅರ್ನೆಸ್ಟ್‌ ಹೆಮಿಂಗ್ವೇಯ The Old Man and the Sea’ ನೆನಪಾಗುತ್ತಿದೆ- ಈ ಕಾದಂಬರಿಯ ಮುಖ್ಯ ಪಾತ್ರ, ಮುದಿ ಮೀನುಗಾರ ಸ್ಯಾಂಟಿಯಾಗೋ ಆಡಿರುವುದಾದರೂ,  ಕೇಳಿಸಿಕೊಳ್ಳುವವರು ಯಾರೂ ಹತ್ತಿರದಲ್ಲಿಲ್ಲದಾಗ, ತನ್ನ ಅಂಕೆಗೂ ಮೀರಿ ತಾನು ಕುಳಿತ ಪುಟ್ಟ ದೋಣಿ ಮತಾöವುದೋ ಜೀವದ ಸೆಳೆತಕ್ಕೆ ಸಿಕ್ಕು ನಡುಗಡಲಿನಲ್ಲಿ ದಿಕ್ಕೆಟ್ಟು ಸಾಗುತ್ತಿರುವಾಗ, ಅದರಲ್ಲಿ ಕುಳಿತ, ಪ್ರಾಯ ಸಂದ ಒಂಟಿ ಪಯಣಿಗ ಆಡಬಹುದಾದ ಮಾತು.

ಕ್ಯೂಬನ್‌ ಮೀನುಗಾರ ಸ್ಯಾಂಟಿಯಾಗೋ ಪ್ರತಿದಿನವೂ ಕಡಲಿಗಿಳಿದರೂ ಕಳೆದ ಎಂಬತ್ತಾ$°°ಲ್ಕು ದಿನಗಳಿಂದ ಒಂದು ಮೀನೂ ಹಿಡಿದಿಲ್ಲ. ದಿನವೂ ಖಾಲಿ ದೋಣಿಯಲ್ಲಿ, ಬರಿಗೈಲಿ ವಾಪಸಾಗುತ್ತಿರುವ ಇವನ ಕುರಿತು ಜೊತೆಗಾರರಿಗೆ ಸ್ವಲ್ಪ ಅನುಕಂಪವೂ ಜೊತೆಗೆ ಅಸಡ್ಡೆಯೂ ಇದೆ. ಕೆಲವರಿಗಂತೂ ಈ ಮುದುಕ ಕೇವಲ ಹಾಸ್ಯಾಸ್ಪದ ವಸ್ತುವಾಗಿ¨ªಾನೆ. ಒಂದು ಕಾಲದಲ್ಲಿ ಅತ್ಯುತ್ತಮ ಮೀನುಗಾರ, ಅತಿ ಶಕ್ತಿಶಾಲಿ ಎಂದೆಲ್ಲ ಅನ್ನಿಸಿಕೊಂಡಿದ್ದ ಇವನು ಈಗ ಹಿಂದಿನ ಪ್ರಖ್ಯಾತಿ, ಶಕ್ತಿ ಕಳೆದುಕೊಂಡಿದ್ದರೂ ತನ್ನಲ್ಲಿ ತಾನಿಟ್ಟ ವಿಶ್ವಾಸ ಮಾತ್ರ ಹಾಗೇ ಇದೆ. ಹೀಗಾಗಿಯೇ ಇವನದ್ದು ಯಾರ ಹಂಗಿಗೂ ಬೀಳದೆ ಒಬ್ಬಂಟಿಯಾಗಿಯೇ ಮಾಡುತ್ತಿದ್ದರೂ ಕುಗ್ಗದ ಹೋರಾಟ. 

ಒಂಟಿಯಾಗಿಯೇ ಎಂಬತ್ತೈದನೆಯ ದಿನವೂ ಕಡಲಿಗಿಳಿದ ಸ್ಯಾಂಟಿಯಾಗೋ ತೀರದಿಂದ ಎಂದಿಗಿಂತಲೂ ದೂರ ಬಂದಿ¨ªಾನೆ. ಈಗ ತನ್ನ ಊಹೆಯನ್ನೂ ಮೀರಿ, ಅವನು ಮೀನು ಹಿಡಿಯಲು ಇಳಿಬಿಟ್ಟ ತಂತಿಯ ಕೊಕ್ಕೆಗೆ ತಾನು ಕುಳಿತ ದೋಣಿಗಿಂತಲೂ ದೊಡ್ಡ ಗಾತ್ರದ ಮಾರ್ಲಿನ್‌ ಮೀನು ಸಿಕ್ಕಿ ಬಿದ್ದಿದೆ. ಹಾಗೆ ಸಿಕ್ಕಿಬಿದ್ದ ಮೀನು ಪ್ರಾಣ ಭೀತಿಯಿಂದ ತಾನು ಸಿಕ್ಕಿಕೊಂಡಿರುವ ಕೊಕ್ಕೆಯ ಗಾಳದ ತಂತಿ, ಅದು ಇರುವ ದೋಣಿ, ಅದರಲ್ಲಿ ಕುಳಿತ ಸ್ಯಾಂಟಿಯಾಗೋ ಎಲ್ಲರನ್ನೂ ಎಳೆದುಕೊಂಡು ನಡುಗಡಲಿನ ಕಡೆಗೆ ಧಾವಿಸಿ ಹೋಗುತ್ತಿದೆ. ಅಸಹಾಯಕನಾಗಿ ತೀರದಿಂದ ದೂರ ದೂರಕ್ಕೆ ಮೀನು ತುಯ್ದು ಎಳೆಯುತ್ತಿರುವ ಕಡೆಗೆ ದೋಣಿಯಲ್ಲಿ ಕುಳಿತು ಸಾಗುತ್ತಿರುವ ಸ್ಯಾಂಟಿಯಾಗೋ, ಇಂಥ ಭಯಾನಕ ಸನ್ನಿವೇಶ‌ದಲ್ಲೂ ತನ್ನ ಸಾಮರ್ಥ್ಯ ಮತ್ತು ಯಾವುದೇ ಗಳಿಗೆಯಲ್ಲೂ ಸೋತು ಸುಮ್ಮನಾಗಬಹುದಾದ ಮೀನಿನ ಹೋರಾಟ ಎರಡನ್ನೂ ನಂಬಿಕೊಂಡು ಕಾಯುತ್ತಿ¨ªಾನೆ. ತನ್ನಂತೆಯೇ ಎಂಥಾ ಕಷ್ಟದ ಪರಿಸ್ಥಿತಿಯಲ್ಲೂ ಹೋರಾಟ ಮಾಡುತ್ತಿರುವ ಕಾರಣಕ್ಕೆ ಆ ದೊಡª ಮೀನಿನ ಕುರಿತು ಪ್ರೀತಿ ಅದನ್ನು ಕೊಲ್ಲಬೇಕಾದ ದುಃಖ, ಅದು ಅನಿವಾರ್ಯ ಎಂಬ ತಿಳುವಳಿಕೆ ಎಲ್ಲದರ ಕುರಿತು ಅವನು ಆ ಮೀನಿನ ಜೊತೆಗೇ ಮಾತನಾಡತೊಡಗುತ್ತಾನೆ. ಮಾರ್ಲಿನ್‌ ಮೀನಿನ ಜೊತೆ, ಕಡಲ ಹಕ್ಕಿಯ ಜೊತೆ, ತಂತಿಯನ್ನು ಹಿಡಿದು ಸೋಲುತ್ತಿರುವ ತನ್ನದೇ ಕೈ ಜೊತೆಗೆ ಮಾತನಾಡುತ್ತ ಕಡಲ ಮೇಲೆಯೇ ಹಲವು ದಿನ ಕಳೆಯುವ ಸ್ಯಾಂಟಿಯಾಗೋ ಕಡೆಗೂ ಆ ಮಹಾಮತ್ಸ್ಯವನ್ನು ಕೊಂದರೂ ಅದನ್ನು ದೋಣಿಗೆ ಹೇರಿಕೊಳ್ಳಲಾಗದೆ ತಂತಿಯ ಜೊತೆಗೇ ಎಳೆದುಕೊಂಡು ತೀರದತ್ತ ಹೊರಟಾಗ ನಿಜವಾದ ಸಂಕಷ್ಟದಲ್ಲಿ ಸಿಲುಕುತ್ತಾನೆ. ಸತ್ತ ಮಾರ್ಲಿನ್‌ ಮೀನನ್ನು ಕಿತ್ತು ತಿನ್ನುತ್ತಾ ದೋಣಿಯನ್ನು ಹಿಂಬಾಲಿಸಿ ಬರುವ ಶಾರ್ಕ್‌ ಗಳು ಮತ್ತು ಸ್ಯಾಂಟಿಯಾಗೋ ನಡುವಿನ ಹೋರಾಟದಲ್ಲಿ ಕಡೆಗೆ ಉಳಿಯುವುದು ದೋಣಿಗೆ ಅಂಟಿಕೊಂಡಂತೆ ಬರುವ ಮಾರ್ಲಿನ್‌ ಮೀನಿನ ಅಸ್ಥಿಪಂಜರ ಮತ್ತು ಹರಿದುಳಿದ ಮೀನಿನ ರೆಕ್ಕೆ ಮಾತ್ರ. ಹೇಗೋ ತೀರ ಸೇರಿ ತನ್ನ ಪುಟ್ಟ ಕೋಣೆಗೆ ನಿತ್ರಾಣನಾಗಿ ಬಂದು ಬಿದ್ದು,  ಗಂಟೆಗಟ್ಟಲೆ ನಿ¨ªೆಗೆ ಜಾರಿ ಬಿಡುವ ಸ್ಯಾಂಟಿಯಾಗೋ ತನ್ನ ಈ ಅನುಭವವನ್ನು ಯಾರೊಂದಿಗೆ ಹೇಗೆ ಹೇಳಬಲ್ಲ ಎನ್ನುವುದನ್ನು ಕಾದಂಬರಿ ಹೇಳಹೋಗುವುದಿಲ್ಲ. ಇಲ್ಲಿಗೆ ಈ ಕಥೆ ನಿಲ್ಲುತ್ತದೆ. 

ಸ್ಯಾಂಟಿಯಾಗೋ ದಿನಗಟ್ಟಲೆ ಕಡಲಿನಲ್ಲಿ ಒಬ್ಬಂಟಿಯಾಗಿ ಕುಳಿತು ಆಡಿದ ಮಾತುಗಳನ್ನು ಯಾರೂ ಕೇಳಿಸಿಕೊಂಡಿಲ್ಲ. ಅವನ ಆ ಅಸಾಧಾರಣ ಕೆಚ್ಚಿನ ಹೋರಾಟವನ್ನು ಯಾರೂ ನೋಡಿಲ್ಲ. ದೋಣಿಗಂಟಿಕೊಂಡು ಬಂದ ಮೀನಿನ ಅಸ್ಥಿಪಂಜರವಾದರೂ ಸಾಕ್ಷಿಗೆ ಅಲ್ಲಿ ಇರದಿದ್ದ ಪಕ್ಷದಲ್ಲಿ ತೀರದಲ್ಲಿನ ಯಾರಿಗೂ ಬಹುಶಃ ನಡೆದ ಕಥೆಯ ಅಂದಾಜು ಕೂಡ ಸಿಗುವ ಸಾಧ್ಯತೆ ಇರುತ್ತಿರಲಿಲ್ಲ. ಕತೆಗಾರನ ಕರುಣೆಯಿಂ ದಾಗಿಯೇ ಎಂಬಂತೆ ಸ್ಯಾಂಟಿಯಾಗೋನ ದೋಣಿಗೆ ಛಿದ್ರಗೊಂಡು ಅಳಿದುಳಿದ ಮಾರ್ಲಿನ್‌ ಮೀನು ಅಂಟಿಕೊಂಡಿದೆ. 

ಹಾಗೆ ನೋಡಿದರೆ ಸ್ಯಾಂಟಿಯಾಗೋಗೆ ಸಿಕ್ಕಿರುವ ಈ ಭಾಗ್ಯ ಎಷ್ಟೋ ಜೀವಗಳ ಪಾಲಿಗೆ ಸಿಗದಿರುವ ಸಾಧ್ಯತೆಯೇ ಹೆಚ್ಚು. ನಮ್ಮ ನಮ್ಮದೇ ಮಾತು, ಕತೆ, ಹೋರಾಟಗಳ ಹಾದಿಯಲ್ಲಿ ಇಲ್ಲಿ ಬಹುತೇಕ ಎಲ್ಲರೂ ಏಕಾಂಗಿಗಳೇ. ಆದ ಎಲ್ಲ ಪಾಡಿಗೂ ಅಂಟಿಕೊಂಡು ಉಳಿಯುವ ಸಾಕ್ಷಿಯಾದರೂ ಎಲ್ಲರಿಗೂ ಎಲ್ಲಿ ಸಿಕ್ಕೀತು?

ಪುರಂದರ ದಾಸರ ಮಾತಿನಂತೆ, ಈ ಭವಸಾಗರ ದಾಟಲು ನಮ್ಮ ಬಳಿ ಇರುವ  ಹರಿಗೋಲಿಗಾದರೋ ಇರುವುದು ಒಂಬತ್ತು ತೂತು. ಏಕಾಂಗಿಗಳಾಗಿಯೇ ಇದರಲ್ಲಿ ಕೂತು ಕಡಲಿಗಿಳಿಯುವ ನಾವು, ನಮ್ಮಷ್ಟಕ್ಕೇ ಆಡಿಕೊಂಡಿರಬಹುದಾದ ಮಾತುಗಳಾದರೂ ಅವು ಇದ್ದಂತೆಯೇ ನಮ್ಮ ನೆನಪಿನಲ್ಲಾದರೂ ಉಳಿದು ಬಂದಿದ್ದರೆ ಅದೇ ಒಂದು ದೊಡª ಭಾಗ್ಯ. ನಮ್ಮ ನಮ್ಮ ಹಾಡು-ಪಾಡುಗಳಿಗೆ ನಮ್ಮೊಳಗೇ ಅಳಿದುಳಿದಿರಬಹುದಾದ ಈ ಮಾತುಗಳೇ ನಮಗೆ ಸಾಕ್ಷಿ ! 

– ಮೀರಾ ಪಿ. ಆರ್‌., ನ್ಯೂಜೆರ್ಸಿ

ಟಾಪ್ ನ್ಯೂಸ್

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

Singapore: ಇಂದಿನಿಂದ ವಿಶ್ವ ಚೆಸ್‌: ಗುಕೇಶ್‌-ಲಿರೆನ್‌ ಮುಖಾಮುಖಿ

MNG-illgal-Sand

Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌

Fish-Agriculture

Fish Farming: ಲಾಭದಾಯಕ ಪಂಜರ ಮೀನು ಕೃಷಿ ಯೋಜನೆಯೇ ಸ್ತಬ್ಧ

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್‌ ಪೂರೈಕೆ ಶುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.