ಸಂಜನಾ-ವಂದನಾ ಕಾಳಗವು
Team Udayavani, Jan 5, 2020, 4:01 AM IST
ಕಳೆದ ಕೆಲ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ತನ್ನ ಅಭಿನಯ, ಸಿನಿಮಾಗಳಿಗಿಂತ ಇತರೆ ವಿಷಯಗಳಿಗೆ ಹೆಚ್ಚು ಸುದ್ದಿಯಾಗುವ ನಟಿಯರ ಪೈಕಿ ಗಂಡ ಹೆಂಡತಿ ಖ್ಯಾತಿಯ ಸಂಜನಾ ಗಲ್ರಾನಿ ಕೂಡ ಒಬ್ಬರು. ಕ್ರಿಕೆಟಿಗ ಅಮಿತ್ ಮಿಶ್ರಾ, ನಿರ್ದೇಶಕ ರವಿ ಶ್ರೀವತ್ಸ ವಿರುದ್ದ ಮಿಟೂ ಅಭಿಯಾನದಲ್ಲಿ ಆರೋಪ ಮಾಡಿ ವಿವಾದದ ಮೂಲಕ ಸುದ್ದಿಯಾಗಿದ್ದ ಸಂಜನಾ, ಇತ್ತೀಚೆಗೆ ಬಾಲಿವುಡ್ ನಿರ್ಮಾಪಕಿ ವಂದನಾ ಜೈನ್ ಜೊತೆ ಗಲಾಟೆ ಮಾಡಿಕೊಂಡು ಮತ್ತೆ ವಿವಾದದ ಮೂಲಕವೇ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಕ್ರಿಸ್‌ಮಸ್ ಈವ್ ಪಾರ್ಟಿ ಸಂದರ್ಭದಲ್ಲಿ ಪ್ರತಿಷ್ಟಿತ ಬಾರ್‌ವೊಂದರಲ್ಲಿ ಪಾರ್ಟಿ ಮಾಡುತ್ತಿದ್ದ ಸಂಜನಾ ಮತ್ತು ನಿರ್ಮಾಪಕಿ ವಂದನಾ ಜೈನ್ ನಡುವೆ ಕುಡಿದ ಮತ್ತಿನಲ್ಲಿ ಮಾರಾಮಾರಿ ನಡೆದಿದೆ ಎನ್ನಲಾಗಿದೆ. ವಂದನಾ ಜೈನ್‌ಗೆ ಸಂಜನಾ ಮಧ್ಯದ ಬಾಟಲ್‌ನಲ್ಲಿ ಹೊಡೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಈ ಘಟನೆ ಸಂಬಂಧ ಬೆಂಗಳೂರಿನ ಕಬ್ಬನ್ ಪೊಲೀಸ್ ಠಾಣೆಯಲ್ಲಿ ಸಂಜನಾ ವಿರುದ್ದ ವಂದನಾ ಜೈನ್ ದೂರು ಕೂಡ ದಾಖಲಿಸಿದ್ದಾರೆ. ಆದರೆ, ಇಷ್ಟೆಲ್ಲ ಘಟನೆಗಳು ನಡೆದರೂ, ಯಾವುದಕ್ಕೂ ಪ್ರತಿಕ್ರಿಯಿಸದೆ ಕೆಲದಿನಗಳಿಂದ ಮಾಧ್ಯಮಗಳಿಂದ ದೂರವಿದ್ದ ಸಂಜನಾ ಬಗ್ಗೆ ಚಿತ್ರರಂಗದಲ್ಲೂ ಒಂದಷ್ಟು ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿವೆ.
ಇದೀಗ ಘಟನೆಯ ಬಗ್ಗೆ ವದಂತಿಗಳು ಹೆಚ್ಚಾಗುತ್ತಿದ್ದಂತೆ, ಈ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಪತ್ರ ಬರೆದಿರುವ ನಟಿ ಸಂಜನಾ ಗಲ್ರಾನಿ, “ಇತ್ತೀಚೆಗೆ ನನ್ನ ಬಗ್ಗೆ ಹರಡುತ್ತಿರುವ ಪ್ರತಿಯೊಂದು ವಿಷಯವೂ ಕೇವಲ ಸುಳ್ಳು ವದಂತಿಯಾಗಿದೆ. ನನ್ನನ್ನು ದೂಷಿಸುತ್ತಿರುವ ಆ ಮಹಿಳೆಯ ಬಳಿ ಯಾವುದೇ ಪುರಾವೆಗಳಿಲ್ಲ. ಇಲ್ಲಿ ನಾನು ವಿವರವಾಗಿ ಹೇಳಲೂ ಸಾಧ್ಯವಾಗದಂತಹ ಅವಾಚ್ಯ ಪದಗಳನ್ನು ಬಳಸಿ ಅವಳು ನನ್ನನ್ನು, ನನ್ನ ತಾಯಿಯನ್ನು ಹಾಗೂ ನನ್ನ ಕುಟುಂಬವನ್ನು ನಿಂದಿಸಿ¨ªಾಳೆ. ನನ್ನಿಂದ ಹಾಗೂ ನನ್ನ ವೃತ್ತಿ ಜೀವನದಿಂದ ದೂರ ಇರಲು ಹಲವು ಬಾರಿ ಅವಳಿಗೆ ತಿಳಿ ಹೇಳಿದೆ. ಆದರೆ, ನನ್ನ ವೃತ್ತಿ ಜೀವನವನ್ನು ಹಾಳು ಮಾಡಲು, ನನ್ನನ್ನು ಜೈಲಿಗೆ ಕಳುಹಿಸಲು ಹಾಗೂ ನನ್ನ ಹಾಗೂ ನನ್ನ ಕುಟುಂಬದವರ ಹೆಸರನ್ನು ಹಾಳು ಮಾಡಳು ಅವಳು ಸಂಚು ನಡೆಸುತ್ತಿ¨ªಾಳೆ. ಅವಳು ಯಾವಾಗಲೂ ಅಗ್ಗದ ಪ್ರಚಾರ ಬಯಸುವವಳು ಹಾಗೂ ಅವಳೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ನಾನು ಬಯಸುವುದಿಲ್ಲ. ತಾವು ನನ್ನ ಬಗ್ಗೆ ಯಾವುದೇ ರೀತಿಯ ನಿರ್ಧಾರಕ್ಕೆ ಬರುವ ಮೊದಲು ದಯಮಾಡಿ ಅವಳ ಬಗ್ಗೆ ವಿವರವಾಗಿ ತಿಳಿದುಕೊಳ್ಳತಕ್ಕದ್ದು. ನಾನು ನನ್ನ ಜೀವನದಲ್ಲಿ ಬೇಜವಾಬ್ದಾರಿಯುತವಾಗಿ ವರ್ತಿಸಿರುವುದಿಲ್ಲ. ನನ್ನ ವಿರುದ್ಧ ಇದೊಂದು ಆಧಾರರಹಿತ ಆರೋಪವಾಗಿದೆ’ ಎಂದು ಪತ್ರದಲ್ಲಿ ತಮ್ಮ ವಿರುದ್ದದ ಆರೋಪಗಳಿಗೆ ಒಂದಷ್ಟು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ.
ಅದೇನೆಯಿರಲಿ, ಸತತವಾಗಿ ಒಂದರ ಹಿಂದೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿರುವ ಸಂಜನಾ ಗಲ್ರಾನಿ, ಇನ್ನು ಮುಂದಾದರೂ, ವಿವಾದಗಳಿಗಿಂತ ಉತ್ತಮ ಸಿನಿಮಾಗಳ ಮೂಲಕ ಸುದ್ದಿಯಾಗಲಿ ಅನ್ನೋದು ಸಿನಿಪ್ರಿಯರ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.