ಅಫ‌ಘಾನಿಸ್ಥಾನದ ಕತೆ: ನರಿಯ ಉಪಕಾರ


Team Udayavani, Mar 25, 2018, 7:30 AM IST

3.jpg

ದೇಶವನ್ನು ಕೆಟ್ಟವನಾದ ಒಬ್ಬ ದೊರೆ ಆಳುತ್ತಿದ್ದ. ಇನ್ನೊಬ್ಬರಲ್ಲಿ ಒಳ್ಳೆಯ ವಸ್ತುವಿದ್ದರೆ ಬಲವಂತವಾಗಿ ಅದನ್ನು ಕಿತ್ತುಕೊಳ್ಳುತ್ತಿದ್ದ. ಅದನ್ನು ಮರಳಿ ಕೊಡುವಂತೆ ಬೇಡಿಕೊಂಡರೆ, “”ನನಗೆ ಉತ್ತರ ತಿಳಿಯದ ಒಗಟು ಹೇಳಿ ನನ್ನನ್ನು ಸೋಲಿಸಬೇಕು. ಹಾಗಿದ್ದರೆ ಮಾತ್ರ ವಸ್ತುವನ್ನು ಮರಳಿ ಕೊಡುತ್ತೇನೆ” ಎನ್ನುತ್ತಿದ್ದ. ಯಾರಾದರೂ ಒಗಟು ಹೇಳಿದರೆ ಸರಿಯಾದ ಉತ್ತರ ನೀಡಿ ಅವರನ್ನು ಬರಿಗೈಯಲ್ಲಿ ಕಳುಹಿಸುತ್ತಿದ್ದ. 

    ಒಂದು ಸಲ ರೈತನೊಬ್ಬನ ಹಸು ಬೆಟ್ಟದ ಕಡೆಗೆ ಮೇಯಲು ಹೋಗಿತ್ತು. ಸಂಜೆ ಅದು ಎಂದಿನಂತೆ ಮರಳಿ ಕೊಟ್ಟಿಗೆಗೆ ಬರಲಿಲ್ಲ. ಚಿಂತೆಯಲ್ಲಿ ರೈತ ರಾತ್ರೆ ನಿದ್ರೆಯಿಲ್ಲದೆ ಹೊರಳಾಡಿದ. ಬೆಳಗಾದ ಕೂಡಲೇ ಹಸುವನ್ನು ಹುಡುಕಿಕೊಂಡು ಹೋದ. ಒಂದೆಡೆ ದನಗಾಹಿಯೊಬ್ಬ ಅರಮನೆಯ ಹಸುಗಳನ್ನು ಮೇಯಿಸುತ್ತ ಇದ್ದ. ರೈತ ಬಂದು ಅಲ್ಲಿ ನೋಡಿದಾಗ ಅವನ ಹಸು ಕೂಡ ಅದೇ ಮಂದೆಯೊಳಗೆ ಸೇರಿಕೊಂಡು ಮೇಯುತ್ತ ಇತ್ತು. ರೈತ ಸಂತೋಷದಿಂದ ತನ್ನ ಹಸುವನ್ನು ಹೊಡೆದುಕೊಂಡು ಹೋಗಲು ಮುಂದಾದ. ಆಗ ದನಗಾಹಿ, “”ಅದು ಅರಮನೆಯ ಹಸು. ಅದನ್ನು ಎಲ್ಲಿಗೆ ಕರೆದೊಯ್ಯುತ್ತಿರುವೆ?” ಎಂದು ಆಕ್ಷೇಪಿಸಿದ. ರೈತ, “”ಏನಣ್ಣ ಇದು, ನಿನ್ನೆ ಮೇಯಲು ಬಂದ ನನ್ನ ಹಸು ಮರಳಿ ಬಾರದೆ ನಿಮ್ಮ ಹಸು ಮಂದೆಯನ್ನು ಸೇರಿಕೊಂಡಿದೆ ಅಷ್ಟೇ. ನಾನೇನು ಸುಳ್ಳು ಹೇಳುತ್ತೇನೆಯೆ?” ಎಂದು ಹೇಳಿದ.

    “”ಅದು ನಿನ್ನ ಹಸುವೇ ಆಗಿದ್ದರೆ ನಿನ್ನೆಯೇ ಬಂದು ರಾಜನ ಬಳಿ ದೂರು ಕೊಡಬೇಕಿತ್ತು. ರಾತ್ರೆ ಕಳೆದು ಬೆಳಗಾದರೆ ಅದು ರಾಜನ ಆಸ್ತಿಯಾಗುತ್ತದೆ. ತಕರಾರು ಮಾಡದೆ ಹೋಗಿಬಿಡು” ಎಂದುಬಿಟ್ಟ ದನಗಾಹಿ. ಆದರೂ ರೈತ ರಾಜನ ಬಳಿಗೆ ಹೋದ. ತನ್ನ ಹಸುವನ್ನು ಒಯ್ಯಲು ದನಗಾಹಿ ಅಡ್ಡಿ ಮಾಡುತ್ತಿರುವುದನ್ನು ತಿಳಿಸಿದ. “”ದಯವಿಟ್ಟು ಬಡವನಿಗೆ ನ್ಯಾಯ ಕೊಡಿಸಬೇಕು” ಎಂದು ಪ್ರಾರ್ಥಿಸಿದ. ಆದರೆ ರಾಜನ ಹೃದಯದಲ್ಲಿ ಕರುಣೆ ಮೂಡಲಿಲ್ಲ. “”ಹಸು ನಿನ್ನದಾಗಿದ್ದರೆ ಮರಳಿಸಲು ನನ್ನ ಅಡ್ಡಿಯಿಲ್ಲ. ಆದರೆ ನಾನು ಉತ್ತರಿಸಲಾಗದ ಒಗಟೊಂದನ್ನು ಹೇಳಿ ನನ್ನನ್ನು ಸೋಲಿಸಬೇಕು. ನಾನು ಸರಿ ಉತ್ತರ ಹೇಳಿದರೆ ಹಸು ನಿನಗೆ ಸಿಗುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿಬಿಟ್ಟ.

    ರೈತನಿಗೆ ಒಗಟು ಗೊತ್ತಿರಲಿಲ್ಲ. ನಾಳೆ ಬರುವುದಾಗಿ ಹೇಳಿ ತಲೆಯ ಮೇಲೆ ಕೈ ಹೊತ್ತುಕೊಂಡು ಅಲ್ಲಿಂದ ಹೊರಟ. ದಾರಿಯ ಪಕ್ಕದಲ್ಲಿ ಒಂದು ಮುದಿ ನರಿ ಮಲಗಿಕೊಂಡು ವಿಶ್ರಾಂತಿ ಪಡೆಯುತ್ತ ಇತ್ತು. ಅದು ರೈತನನ್ನು ನೋಡಿ, “”ಓ ರೈತಣ್ಣ, ಈ ವರ್ಷ ಸೌತೆಕಾಯಿ ಬೆಳೆದಿಲ್ಲವೆ? ಇದ್ದರೆ ನನಗೆ ಸ್ವಲ್ಪ$ ತಂದುಕೊಡಯ್ಯ. ಮುದಿತನದಿಂದಾಗಿ ರಾತ್ರೆ ಹೊಲಗಳಿಗೆ ಹೋಗುವುದೇ ಕಷ್ಟವಾಗಿದೆ” ಎಂದು ಕರೆಯಿತು. ರೈತ ನರಿಯ ಬಳಿಗೆ ಹೋದ. “”ಇನ್ನು ಮುಂದೆ ಯಾವ ಕೃಷಿಯನ್ನೂ ಮಾಡುವುದಿಲ್ಲ ಅಂತ ಯೋಚಿಸಿದ್ದೇನೆ. ನನ್ನ ಇದ್ದ ಒಂದು ಹಸುವನ್ನೂ ಊರನ್ನಾಳುವ ರಾಜ ಕಿತ್ತುಕೊಂಡುಬಿಟ್ಟ” ಎಂದು ನಡೆದುದನ್ನು ಹೇಳಿದ. 

    ಅದನ್ನು ಕೇಳಿ ನರಿ ನಕ್ಕುಬಿಟ್ಟಿತು. “”ಚಿಂತಿಸಬೇಡ. ನನ್ನ ದೇಹ ವಯಸ್ಸಿನಿಂದ ಸೊರಗಿರಬಹುದು. ಆದರೆ ಬುದ್ಧಿ ಮಾತ್ರ ಹರಿತವಾಗಿಯೇ ಇದೆ. ರಾಜನಿಗೆ ಉತ್ತರ ತಿಳಿಯದ ಒಗಟು ನಾನು ಹೇಳಿ ಸೋಲಿಸುತ್ತೇನೆ. ನಿನಗೆ ಆದ ಅನ್ಯಾಯಕ್ಕೆ ಸೂಕ್ತ ಪರಿಹಾರ ಕೊಡಿಸುವ ಜವಾಬ್ದಾರಿ ನನ್ನದು” ಎಂದು ಹೇಳಿತು. ಒಂದು ಗೋಣಿಚೀಲದ ತುಂಬ ಮೂಳೆಗಳನ್ನು ತುಂಬಿಸಿ ಹೆಗಲಿನಲ್ಲಿ ಹೊತ್ತುಕೊಂಡು ಹೊರಟಿತು. ಬಿಸಿಲಿಗೆ ಬಸವಳಿದು ರಾಜನ ಸಭೆಗೆ ತಲುಪಿತು. “”ಯಾಕೆ ಬಂದೆ, ಮೂಟೆಯಲ್ಲಿ ಏನಿದೆ?” ಎಂದು ರಾಜ ಕೇಳಿದ.

    “”ಮಹಾರಾಜರೇ, ಇದು ಒಗಟಿನ ಚೀಲ. ಇದರಲ್ಲಿ ಮೂರು ಪ್ರಾಣಿಗಳ ಮೂಳೆಗಳಿವೆ. ಒಂದು ಪ್ರಾಣಿ ಕೋಪದಿಂದ, ಇನ್ನೊಂದು ನಿದ್ರೆಯಿಂದ, ಕೊನೆಯದು ದುರಾಶೆಯಿಂದ ಒಂದೇ ಕಡೆ ಸತ್ತಿವೆ. ಇದು ಹೇಗೆ ಆಯಿತು ಎಂಬುದು ಒಗಟು. ಯಾರಾದರೂ ನಿಜವಾದ ಕಾರಣ ಹೇಳುತ್ತಾರೆಯೇ ಎಂದು ಈ ಮೂಟೆ ಹೊತ್ತು ತಿರುಗಾಡಿದೆ. ಇದರ ರಹಸ್ಯವನ್ನು ಬಿಡಿಸಲು ಮುಂದೆ ಬಂದವರಿಗೆಲ್ಲ ಅವಕಾಶ ನೀಡಿದೆ. ಆದರೂ ಯಾರೂ ಸಫ‌ಲರಾಗಲಿಲ್ಲ. ಬಸವಳಿದು ನಾನು ಮುದುಕನಾದೆ. ಆಗ ಯಾರೋ ಒಬ್ಬರು ಇದಕ್ಕೆ ಸಮಾಧಾನ ಹೇಳಲು ನೀವೊಬ್ಬರೇ ಸಮರ್ಥರು, ನಿಮ್ಮಂಥ ಬುದ್ಧಿವಂತರು ಬೇರೊಬ್ಬರಿಲ್ಲ ಎಂದು ಹೇಳಿದ ಕಾರಣ ಇಲ್ಲಿಗೆ ಬಂದಿದ್ದೇನೆ’ ಎಂದು ಹೇಳಿತು ನರಿ.

    ರಾಜ ಹೆಮ್ಮೆಯಿಂದ ಮೀಸೆ ತಿರುವಿದ. “”ನೀನು ಸರಿಯಾದ ಸ್ಥಳಕ್ಕೆ ಬಂದಿರುವೆ. ಇದರ ಕಾರಣವನ್ನು ಅರೆಕ್ಷಣದಲ್ಲಿ ನಾನು ಹೇಳಿಬಿಡಲೆ?” ಎಂದು ಕೇಳಿದ. “”ತುಂಬ ಸಂತೋಷ. ನೀವೇ ಇದರ ರಹಸ್ಯ ಬಿಡಿಸಿ ದೊಡ್ಡವರಾಗಿ. ಆದರೆ ನೀವು ಸೋತುಹೋದರೆ ನನಗೆ ಒಂದು ಹಸುವಿನ ತೂಕದಷ್ಟೇ ಚಿನ್ನ ಕೊಡಲು ತಪ್ಪಬಾರದು. ಹಾಗೆಂದು ಪತ್ರದಲ್ಲಿ ಬರೆದುಕೊಡಬೇಕು. ಇದಕ್ಕೆ ನೀವು ಸಿದ್ಧರಿಲ್ಲವಾದರೆ ನಾನು ಹೋಗಿಬಿಡುತ್ತೇನೆ” ಎಂದಿತು ನರಿ. “”ಅದಕ್ಕೇನಂತೆ. ನಾನು ಗೆಲ್ಲುವ ವಿಚಾರದಲ್ಲಿ ಸಂದೇಹವಿಲ್ಲ. ಆದರೂ ಲಿಖೀತವಾಗಿ ಬರೆದುಕೊಡುತ್ತೇನೆ” ಎಂದು ಹೇಳಿ ರಾಜನು ಪತ್ರವನ್ನು ಬರೆದುಕೊಟ್ಟ. ನರಿ ಪತ್ರವನ್ನು ಸ್ವೀಕರಿಸಿ, “”ಸರಿ, ಉತ್ತರ ಹೇಳಿ” ಎಂದು ಕೇಳಿತು. ರಾಜನು, “”ಪ್ರಶ್ನೆಗೆ ಉತ್ತರ ಸುಲಭ. ಮೂರು ಪ್ರಾಣಿಗಳ ಮೇಲೂ ಏಕಕಾಲದಲ್ಲಿ ಸಿಡಿಲು ಬಡಿದು ಅವು ಸತ್ತಿರಬೇಕು” ಎಂದು ಹೇಳಿದ.

    “”ಇಲ್ಲ ದೊರೆಯೇ, ಇದು ನಿಜವಾದ ಕಾರಣ ಅಲ್ಲ. ಸತ್ಯವೇನೆಂಬುದನ್ನು ನೀವೇ ಕೇಳಿ. ಒಂದು ಆನೆ ರಾತ್ರೆ ಕಾಡಿನಲ್ಲಿ ಮಲಗಿ ನಿದ್ರಿಸುತ್ತ ಇತ್ತು. ವಿಷದ ಹಾವೊಂದು ಅಲ್ಲಿಗೆ ಹರಿದಾಡುತ್ತ ಬಂತು. ನಿದ್ರೆಯಲ್ಲಿರುವ ಆನೆ ಅದನ್ನು ತಿಳಿಯದೆ ಹಾವಿನ ಮೇಲೆ ಕಾಲಿಟ್ಟಿತು. ಹಾವು ಕೋಪಗೊಂಡು ಆನೆಯನ್ನು ಕಚ್ಚಿತು. ಆನೆ ಎಚ್ಚೆತ್ತು ಹಾವನ್ನು ತುಳಿದು ಸಾಯಿಸಿತು. ಹೀಗೆ ನಿದ್ರೆಯಿಂದ ಆನೆ, ಕೋಪದಿಂದ ಹಾವು ಪ್ರಾಣಬಿಟ್ಟವು. ಸ್ವಲ್ಪ$ ಹೊತ್ತಿನಲ್ಲಿ ಒಂದು ನರಿ ಅಲ್ಲಿಗೆ ಬಂದು ಸತ್ತಿರುವ ಆನೆಯನ್ನು ಕಂಡು ದುರಾಶೆಯಿಂದ ಕುಣಿದಾಡಿತು. ಈ ಆನೆಯ ದೇಹದ ಒಳಗೆ ಹೋದರೆ ವರ್ಷಗಟ್ಟಲೆ ಮಾಂಸವನ್ನು ತಿನ್ನುತ್ತ ಹಬ್ಬ ಮಾಡಬಹುದು ಎನ್ನುತ್ತ ಆನೆಯ ಚರ್ಮವನ್ನು ಕೊರೆದು ಒಳಗೆ ಪ್ರವೇಶಿಸಿ ಮಾಂಸವನ್ನು ತಿನ್ನತೊಡಗಿತು. ಆದರೆ ಬಿಸಿಲಿನಿಂದಾಗಿ ಆನೆಯ ಚರ್ಮ ಒಣಗಿ ಅದರ ರಂಧ್ರ ಮುಚ್ಚಿಹೋಯಿತು ಒಳಗೆ ಸೇರಿದ್ದ ನರಿ ಉಸಿರುಗಟ್ಟಿ ಜೀವ ತೊರೆಯಿತು. ಮಹಾರಾಜಾ, ಒಂದೇ ಕಡೆ ಮೂರು ಕಾರಣದಿಂದ ಪ್ರಾಣಿಗಳು ಹೇಗೆ ಸತ್ತು ಹೋದವೆಂಬುದನ್ನು ಬುದ್ಧಿವಂತರಾದರೂ ಊಹಿಸಲು ನಿಮ್ಮಿಂದ ಆಗಲಿಲ್ಲ” ಎಂದು ನರಿ ರಹಸ್ಯವನ್ನು ಬಿಡಿಸಿತು.

    ರಾಜನು ಸೋತು ತಲೆತಗ್ಗಿಸಿದ. ನರಿಗೆ ಪತ್ರದಲ್ಲಿ ಬರೆದುಕೊಟ್ಟ ಪ್ರಕಾರ ಒಂದು ಹಸುವಿನ ತೂಕದಷ್ಟು ಬಂಗಾರವನ್ನು ಕೊಟ್ಟು ಕಳುಹಿಸಿದ. ನರಿ ಅದನ್ನು ಮೂಟೆ ಕಟ್ಟಿ ತಂದು ರೈತನ ಮುಂದೆ ಇರಿಸಿತು. ರೈತ ವಿಸ್ಮಯದಿಂದ ಕಣ್ಣರಳಿಸಿ ನೋಡಿ, “”ಏನಿದು, ಎಲ್ಲಿಂದ ತಂದೆ?” ಎಂದು ಕೇಳಿದ. “”ತೆಗೆದುಕೋ, ಈ ಬಂಗಾರದಲ್ಲಿ ನೂರು ಹಸುಗಳನ್ನು ಕೊಳ್ಳಬಹುದು. ನಿನಗೆ ಆದ ಅನ್ಯಾಯವನ್ನು ಸರಿಪಡಿಸಿದ್ದೇನೆ. ಪ್ರತಿಯಾಗಿ ಒಂದು ಬುಟ್ಟಿ ಸೌತೆಕಾಯಿ ಕೊಟ್ಟುಬಿಡು” ಎಂದಿತು ನರಿ.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.