ದೆವ್ವದ ಕತೆಗಳು
Team Udayavani, Apr 29, 2018, 6:00 AM IST
ಏನದು ಬ್ರೇಕಿಂಗ್ ನ್ಯೂಸ್ ?
ರವಿಕುಮಾರ ಬೈಕಿನ ಮೇಲೆ ಅತ್ಯಂತ ಜೋರಾಗಿ ಹೊರಟಿದ್ದ. ಅವನಿಗೆ ಆ ಸುದ್ದಿಯನ್ನು ನೋಡಿ ನಂಬಲು ಆಗುತ್ತಿಲ್ಲ. ಕಾಲು, ಕೈ, ಮೈಯೆಲ್ಲ ನಡುಗುತ್ತಿದೆ. ತಾನು ನೋಡಿದ್ದ ಆ ಬ್ರೇಕಿಂಗ್ ನ್ಯೂಸ್ ಸುಳ್ಳಾಗಲಿ ದೇವರೇ ಅಂತ ಪ್ರಾರ್ಥಿಸುತ್ತಿದ್ದ. ವಾರದ ಹಿಂದೆ ಊಟಿ ಕಡೆಗೆ ಪ್ರವಾಸಕ್ಕೆಂದು ಹೋಗಿದ್ದ ಅವನ ಸ್ನೇಹಿತರೆಲ್ಲ ಇವತ್ತು ಬೆಳಗಿನ ಜಾವ ಅಪಘಾತದಲ್ಲಿ ಸತ್ತುಹೋಗಿ¨ªಾರೆ ಅಂತ ಚಾನೆಲ್ ಒಂದರಲ್ಲಿ ಅವರ ಹೆಸರು, ಊರು ಎಲ್ಲವನ್ನೂ ತೋರಿಸುತ್ತಿದ್ದರು.
ಕೈಯಲ್ಲಿ ಹಿಡಿದ ಕಾಫಿ ಕಪ್ ಅಲ್ಲೇ ಇಟ್ಟು ಅವರ ಮನೆ ಕಡೆಗೆ ಬೈಕ್ ಹತ್ತಿ ಅವಸರವಸರವಾಗಿ ಸುದ್ದಿ ತಿಳಿಯಲು ಹೊರಟಿದ್ದ. ದಾರಿ ಮಧ್ಯೆ ಅದೇ ಸ್ನೇಹಿತರು ತಮ್ಮ ವಾಹನ ಪಕ್ಕಕ್ಕೆ ನಿಲ್ಲಿಸಿ ಹರಟೆ ಹೊಡೆಯುತ್ತ ನಿಂತಿದ್ದರು. ಅವರನ್ನು ನೋಡಿ ನಿಜಕ್ಕೂ ಗಾಬರಿಯಾಯ್ತು ಅವನಿಗೆ. ಅವರ ಬಳಿ ಬಂದು, “”ಏನ್ರೊà ನಿಮ್ಮ ಕತೆ, ನೀವು ನಿನ್ನೇ ರಾತ್ರಿನೇ ಅಪಘಾತದಲ್ಲಿ ಎಲ್ಲರೂ ಸತ್ತು ಹೋಗಿದ್ದೀರಿ ಅಂತ ತೋಸ್ತಿತ್ತಿದ್ದಾರೆ. ನೀವು ನೋಡಿದ್ರೆ ಊರಿಗೆ ಬಂದಿದಿರಿ?” ಅಂದ. ಅವರಲ್ಲೊಬ್ಬ ನಗುತ್ತ, “”ಹೌದು ಕಣೊ, ನಾವು ಸತ್ತದ್ದೇನೊ ನಿಜ. ನಿನ್ನ ನೋಡೋಕೆ ಅಂತಲೇ ಇಲ್ಲಿವರೆಗೂ ಬಂದ್ವಿ. ಬರತಿವಿ ಕಣೋ” ಅಂತಂದು ತಕ್ಷಣ ಎಲ್ಲಾ ಮಾಯ.
ಬೀಸಿದ ರಭಸದ ಗಾಳಿಗೆ ರವಿ ತಲೆತಿರುಗಿ ಬಿದ್ದ.
ಸತ್ತವನು ಯಾರು?
ಆ ಊರಿನ ಹೆಣ್ಣು-ಗಂಡೆಲ್ಲ ಅಷ್ಟೂ ದೂರದಿಂದ ಆ ಹೆಣವನ್ನು ನೋಡುತ್ತ ನಿಂತಿದ್ದರೆ, ಇವನ್ಯಾರೋ ಏನೋ ಆ ಹೆಣದ ಮೈಮೇಲಿರುವ ಬಟ್ಟೆಗಳಲ್ಲಿನ ಜೇಬುಗಳನ್ನು ತಡಕಾಡುತ್ತಿದ್ದ. ಓಡೋಡುತ ಬಂದ ಪೊಲೀಸನಿಗೆ ಶಾಕ್ ಆಯ್ತು. ಜೊತೆಗೆ ಸಾವಿನ ಹಿಂದಿನ ಸಾಕ್ಷಿ ನಾಶಪಡಿಸುತ್ತಿರಬಹುದು ಅಂತ ಅನಿಸಿ ಗದರುತ್ತ- “”ಲೇ ಯಾರೋ ನೀನು, ಏನೋ ಹುಡುಕುತ್ತಿದ್ದೀಯಾ. ಹಾಗೆಲ್ಲ ಪೋಸ್ಟ್ ಮಾರ್ಟಮ್ ಆಗೋವರೆಗೂ ಹೆಣಾ ಮುಟ್ಟಬಾರದು ಅಂತ ಗೊತ್ತಿಲ್ವ ನಿನಗೆ? ನೀನೆ ಕೊಂದು ಸಾಕ್ಷಿ ಹಾಳ ಮಾಡತಿದಿಯಾ, ಬದ್ಮಾಶ್” ಅಂತ ಕೂಗುತ್ತಲೇ ಲಾಠಿಯಿಂದ ಹೊಡೆಯಲು ಹೋದ. ಆತ ಮೇಲೆದ್ದು , “”ಸರ್ ಸತ್ತದ್ದು ನಾನೇ. ನಾನೇ ಸತ್ತಮೇಲೆ ನನ್ನ ನಾನೇ ನಾಶ ಮಾಡಿಕೊಳ್ಳೋದು ಇನ್ನೇನಿದೆ?” ಪೊಲೀಸ್ ಹೆದರುತ್ತ ಹೆಣದ ಮುಖವನ್ನು ಆ ವ್ಯಕ್ತಿಯ ಮುಖವನ್ನು ಒಮ್ಮೆ ನೋಡಿ ಮೂಛೆì ಹೋದ.
ಹೆಂಡತಿ ಫೋನ್ ಮಾಡಿದ್ದು ಯಾಕೆ?
ಫೋನಿನಲ್ಲಿದ್ದ ಗಂಡನಿಗೆ, “”ರೀ, ನಿಮ್ಮ ಹುಟ್ಟುಹಬ್ಬಕ್ಕೆ ಬಟ್ಟೇ ತಂದಿದ್ದೀನಿ. ಹೋಗ್ರಿ, ಮೊದಲು ಬಟ್ಟೆ ಹಾಕ್ಕೊಂಡ ಬಂದು, ಫೋನ ನೋಡ್ತಾ ಕೂಡ್ರಬಾರದಾ?” ಅಂದಾಗ ಅವ ಒಳ ಹೋದ. ಆಕೆ ಅಡುಗೆ ಮನೆಗೆ ಹೋದಳು.
ಅವನು ಹೊರಗಡೆ ಬಟ್ಟೆ ಹಾಕಿಕೊಂಡು ಬಂದಾಗ ಟೇಬಲ್ ಮೇಲಿನ ಪೋನು ಮತ್ತೆ ರಿಂಗಾಯ್ತು, “”ಎಲ್ಲಿದ್ದೀಯೆ? ಬಟ್ಟೇ ಹಾಕ್ಕೊಂಡಿದ್ದೀನಿ ನೋಡು ಬಾ” ಅಂತ ಹೇಳುತ್ತ ಪೋನ್ ತಗೊಂಡ. ಅರೇ! ಹೆಂಡತಿಯದೇ. ಇÇÉೇ ಇದ್ದು ರಿಂಗ ಮಾಡತಿದಾಳೆ.ಅಡುಗೆ ಮನೆಗೆ ಹೋಗಿ ನೋಡಿದ ಇರಲಿಲ್ಲ . ಎಲ್ಲೂ ಇಲ್ಲ ಫೋನ್ ರಿಸೀವ್ ಮಾಡಿದಾಗ ಟ್ರಾಫಿಕ್ ಪೊಲಿಸ ಮಾತಾಡಿದ.
“”ರೀ ಯಾರ್ರಿ, ಇದು? ಈ ಯಮ್ಮ ರಸ್ತೆ ದಾಟಬೇಕಾದರೆ ಲಾರಿ ಕೆಳಗೆ ಸಿಕ್ಕಹಾಕಿಕೊಂಡಿದಾಳೆ ಅರ್ಧ ಗಂಟೆ ಆಯ್ತು ಸತ್ತು. ಬಾಡಿನಾ ಗೌರ್ಮೆಂಟ್ ಹಾಸ್ಪಿಟಲ್‌ಗೆ ಕಳಿಸಿದ್ದೀವಿ. ನೀವು ಮಾರ್ಕೆಟ್ಟಿನಲ್ಲಿರೊ ಗಾಂಧಿ ಸರ್ಕಲ್‌ಗೆ ಬೇಗ ಬರ್ರಿ” ಅಂದ.
ಹೆಂಡತಿ, ಬಟ್ಟೆ, ಆಕ್ಸಿಡೆಂಟು ಒಮ್ಮಿಗೆ ಜೀವ ನೆತ್ತಿಗೆ ಹೊಡೆಯಿತು.
ಡಾಕ್ಟರ್ ಯಾರು?
ಸರಿ, ಕಣ್ಣಿನ ಬಟ್ಟೆ ಬಿಚಿ¤àವಿ. ಮೊದಲು ಯಾರನ್ನು ನೊಡೋಕೆ ಇಷ್ಟ ಪಡತಿಯಾ ಹೇಳು. ಅವರನ್ನು ಕರಿಸ್ತೀವಿ” ಅಂದರು ಡಾಕುó.
“”ಸರ್ ಯಾರೂ ಬೇಡ, ನಿಮ್ಮನ್ನೇ ನೋಡತಿನಿ ಸಾಕು”
“”ನನ್ನನ್ನಾ… ಯಾಕೆ?”
“”ಹೆಂಡತಿ- ಮಕ್ಕಳು ಯಾರನ್ನು ನೋಡಲ್ವಾ?”
“”ನಮ್ಮಪ್ಪನ ಆಪರೇಷನ ಮಾಡಿದಾಗ್ಲೂ ನಿಮ್ಮನ್ನು ನೋಡಕ್ಕಾಗಲಿಲ್ಲ, ನನ್ನ ಹೆಂಡತಿ ಆಪರೇಷನ್ ಮಾಡಿದಾಗಲೂ ನೋಡಕ್ಕಾಗಲಿಲ್ಲ, ನನ್ನ ಆಪರೇಷನ್ ಮಾಡಿದಾಗಲು ನಿಮ್ಮನ್ನು ನೋಡಕ್ಕಾಗಲಿಲ್ಲ. ಈವಾಗಲಾದರೂ ನಿಮ್ಮನ್ನು ನೋಡಲೇಬೇಕೆನಿಸುತಿದೆ, ಸರ್” ಅಂದ.
ಡಾಕ್ಟರ್‌ಗೆ ಸಖೇದಾಶ್ಚರ್ಯ. “”ಹೌದಾ, ನಿಮ್ಮ ಫ್ಯಾಮಿಲಿಯ ಎಲ್ಲಾ ಮೆಂಬರ್‌ಗೂ ನಾನೇ ಆಪರೇಷನ್ ಮಾಡಿ¨ªಾ? ಓ ಗಾಡ್ ಕಮಾನ್” “”ಹೌದು ಸರ್, ನನ್ನ ಕುಟುಂಬದ ಎಲ್ಲ ಸದಸ್ಯರನ್ನು ಆಪರೇಷನ್ ಮಾಡುವಾಗ್ಲೆà ಕೊಂದಿದ್ದೀರಿ, ನೆನಪಿಲ್ವೆ ಸರ್. ಕೊನೆಗೆ ನನ್ನನ್ನು ಕೊಂದು ಕಿಡ್ನಿ ತಗೊಂಡ್ರಿ. ಕಣ್ಣ ತಗೊಂಡ್ರಿ. ನಿಮ್ಮನ್ನ ನೋಡಬೇಕು ಅನಿಸ್ತು. ಅದಕ್ಕೆ ಸರ್”
ಬಸವಣ್ಣೆಪ್ಪ ಕಂಬಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.