ಪರೀಕ್ಷಾ ಮೀಮಾಂಸೆ ಈಗ ಎಲ್ಲೆಲ್ಲೂ ಪರೀಕ್ಷೆಯೇ!


Team Udayavani, Apr 9, 2017, 3:45 AM IST

parikshe.jpg

ಸಾಲಾಗಿ ನಿಂತಿರುವ ಮೊಲ, ನರಿ, ಆನೆ, ದನ, ಜಿರಾಫೆ, ಮಂಗ ಮುಂತಾದ ಪ್ರಾಣಿಗಳು. ಅವುಗಳೆದುರಿಗೆ ಉದ್ದಕ್ಕೆ ಚಾಚಿದ ತೆಂಗಿನದ್ದೋ, ಹಲಸಿನದ್ದೋ ಮರ. ಬದಿಯಲ್ಲೇ ಕುಳಿತಿರುವ ಕಾಡಿನ ರಾಜ ಸಿಂಹ. ಉದ್ದೇಶವಿಷ್ಟೇ: ಆ ದಿನ ಎಲ್ಲಾ ಪ್ರಾಣಿಗಳಿಗೆ ಒಂದು ಪರೀಕ್ಷೆ. ಯಾರು ಮೊದಲು ಆ ಮರವನ್ನು ಹತ್ತಿಳಿಯುತ್ತಾರೋ ಅವರನ್ನು ಅಪ್ರತಿಮರೆಂದು ಬಿರುದು-ಬಾವಲಿಗಳೊಂದಿಗೆ ಸನ್ಮಾನ ಮಾಡಲಾಗುವುದು. ಬೇಸಿಗೆಯ ಸೀಸನ್ನು ಆರಂಭವಾಗುವುದೇ ಪರೀಕ್ಷೆಗಳಿಂದ. ಮಾವಿನ ಸ್ವಾದವನ್ನು ಸವಿಯುವ ಮುನ್ನ ಮುದ್ದು ಮಕ್ಕಳಾದಿಯಾಗಿ ಮಾಸ್ತರರಾಗುವ ಹಂತದವರೆಗಿನ (ಅಂದರೆ, ಮಾಸ್ಟರ್‌ ಡಿಗ್ರಿ, ನಂತರದ ಪೀಎಚಿxಯೂ ಸೇರಿ) ಎಲ್ಲರೂ ಕಡ್ಡಾಯವಾಗಿ ಈ ಪರೀಕ್ಷೆಯೆಂಬ ಬೇಲಿಯನ್ನು ಯಶಸ್ವಿಯಾಗಿ ದಾಟಲೇಬೇಕು. 

ಮೇಲಿನ ವ್ಯಂಗ್ಯಚಿತ್ರವನ್ನು ನಾನು ಮೊದಲು ಗಮನಿಸಿದ್ದು ಫೇಸ್‌ಬುಕ್ಕೆಂಬ ಎಲ್ಲರ ನೆಚ್ಚಿನ ಪುಸ್ತಕದಲ್ಲಿ! ಬಹು ವಿಡಂಬನಾತ್ಮಕವಾಗಿ ಚಿತ್ರಿತವಾಗಿರುವ ಈ ಸನ್ನಿವೇಶವು ಈಗಿನ ಪರೀಕ್ಷೆಗಳ ಅಣಕವಾಡುತ್ತಿರುವಂತೆ ಭಾಸವಾಗುತ್ತದೆ. ಹಲಬಗೆಯ ನೈಪುಣ್ಯಗಳನ್ನು ಬದಿಗೊತ್ತಿ ಜ್ಞಾಪಕಶಕ್ತಿಯಾಧಾರಿತ ಪರೀಕ್ಷೆಯೆಂಬ ತಕ್ಕಡಿಯಲ್ಲಿ ವಿದ್ಯಾರ್ಥಿಗಳ ಜಾಣ್ಮೆಯನ್ನು ತೂಗಲಾಗುತ್ತಿದೆ. ಅಂಕಗಳಿಕೆಯನ್ನೇ ಯಶಸ್ಸೆಂದು ಬಿಂಬಿಸಲಾಗುತ್ತಿದೆ. ಫೇಲಾದರೆ ಜೀವನವೇ ಅಂತ್ಯವಾದಂತೆ ಎಂಬ ಒತ್ತಡ ನಿರ್ಮಾಣವಾಗುತ್ತಿದೆ. ವಸ್ತುಶ‌ಃ ನೋಡುವುದಾದರೆ, ನಪಾಸಾಗುವುದೆಂದರೆ ಸರಿಯಾಗಿ ಪ್ರಯತ್ನ ಪಟ್ಟರೂ ವಿಷಯ ಮನನವಾಗಲಿಲ್ಲ, ಇನ್ನೂ ಹೆಚ್ಚಿನ ಪ್ರಯತ್ನ ಆ ನಿಟ್ಟಿನಲ್ಲಿ ಅವಶ್ಯ ಎಂಬುವುದನ್ನು ಬಿಂಬಿಸುವುದಷ್ಟೇ. ಸರಿ, ಇನ್ನೊಮ್ಮೆ ಪ್ರಯತ್ನಿಸಿದರಾಯಿತು. ಅದರಲ್ಲಿ ಮರ್ಯಾದೆ ಹೋಗುವಂತಹದ್ದು ಏನೂ ಇಲ್ಲ. ಆದರೆ, ವಿದ್ಯಾರ್ಥಿಯ ಪ್ರಯತ್ನ ಪ್ರಾಮಾಣಿಕವಾಗಿರಬೇಕಷ್ಟೇ. ಒಬ್ಟಾತ ವಿಷಯವನ್ನು ಎಷ್ಟು ಅರ್ಥೈಸಿಕೊಂಡಿ¨ªಾನೆ ಎನ್ನುವುದನ್ನು ಅರಿಯಲು ಇರುವ ಮಾರ್ಗವಷ್ಟೇ ಈ ಪರೀಕ್ಷೆ. 

ಹಿಂದಿನ ಗುರುಕುಲ ಪದ್ಧತಿಯನ್ನು ನಾವೇನು ಕಣ್ಣಾರೆ ಕಾಣದೇ ಹೋದರೂ ಅದರ ಬಗ್ಗೆ ಹಲವಾರು ಕಥೆಗಳಲ್ಲಿ ಕೇಳಿ ಅರಿತಿದ್ದೇವೆ. ಆ ಪದ್ಧತಿಯಲ್ಲಿಯೂ ಪರೀಕ್ಷೆಗಳಿದ್ದವು. ವಿದ್ಯಾರ್ಜನೆಗಾಗಿ ಗುರುಕುಲಕ್ಕೆ ಸೇರಿದ ವಿದ್ಯಾರ್ಥಿಯು ಹಲವಾರು ವರ್ಷಗಳ ನಿರಂತರ ಸಾಧನೆಯ ನಂತರ ಆಶ್ರಮವನ್ನು ತೊರೆಯುವ ಮೊದಲು ತಾನೆಷ್ಟು ವಿಷಯವನ್ನು ಗ್ರಹಿಸಿಕೊಂಡಿದ್ದೇನೆಂದು ಗುರುವಿಗೆ ಒಪ್ಪಿಸಬೇಕಿತ್ತು. ಅದು ಯುದ್ಧಕಲೆಯೋ, ಸಂಗೀತವೋ, ಚಿತ್ರಕಲೆಯೋ ಯಾವುದೇ ವಿದ್ಯೆಯಾಗಿದ್ದಿರಬಹುದು. ಒಂದೊಮ್ಮೆ ಒಪ್ಪಿಸುವಿಕೆಯಲ್ಲಿ ಏನಾದರೂ ಲೋಪಗಳಿದ್ದರೆ ಪುನಃ ಕೆಲ ಸಮಯ ಆಶ್ರಮದಲ್ಲೇ ಕಳೆದು, ಲೋಪಗಳನ್ನು ಸರಿಪಡಿಸಿಕೊಂಡು, ಪರಿಣತಿಯನ್ನು ಸಾಧಿಸಿ, ಗುರುಗಳ ಗ್ರೀನ್‌ ಸಿಗ್ನಲ್‌ನೊಂದಿಗೆ ಹೆಮ್ಮೆಯಿಂದ ಹೊರಹೋಗುತ್ತಿದ್ದರಂತೆ. ಆ ಸಿಗ್ನಲ್ಲೇನಾದರೂ ರೆಡ್ಡಾದರೆ ಪುನಃ ಅಲ್ಲೇ ಮುಂದುವರೆಯಬೇಕಿತ್ತಂತೆ! ಈ ಮಾದರಿಯ ಶಿಕ್ಷಣವು ಕೇವಲ ಪಠ್ಯ-ಪುಸ್ತಕದ ವಿಷಯಗಳಿಗಷ್ಟೇ ಸೀಮಿತವಾಗಿರಲಿಲ್ಲ. ಅಲ್ಲಿ ಬೇಸಾಯವಿತ್ತು, ಹೈನುಗಾರಿಕೆಯಿರುತ್ತಿತ್ತು, ಸೌದೆ ಒಡೆಯಬೇಕಾಗುತ್ತಿತ್ತು. ಗುರುಗಳ ಸೇವೆ, ಮನೆಯ ಇನ್ನಿತರೆ ಕೆಲಸಗಳೊಟ್ಟಿಗೆ ಕಲಿಕೆ ಸಾಗುತ್ತಿತ್ತು. ಒಟ್ಟಿನಲ್ಲಿ ಬದುಕಲು ಬೇಕಾಗುವ ಸಮಗ್ರ ವಿಷಯಗಳ ಅರಿವು ವಿದ್ಯಾರ್ಥಿಗೆ ದೊರೆಯುತ್ತಿತ್ತು. ಇದಲ್ಲದೇ ಹೆಚ್ಚಿನ ನಿಪುಣತೆಯನ್ನು ಸಾಧಿಸುವ ನಿಟ್ಟಿನಲ್ಲಿ ಮಾಸ್ಟರ್‌ ಆಗಲು ಬೇರೆ ಗುರುವನ್ನು ಹುಡುಕಿ ಹೋದ (ಅರ್ಜುನ, ಏಕಲವ್ಯ, ಕರ್ಣ ಇತ್ಯಾದಿ) ಕಥೆಗಳನ್ನೂ ನಾವು ಕೇಳಿದ್ದೇವೆ. ಸಂಗೀತದ ವಿಷಯವನ್ನೇ ತೆಗೆದುಕೊಂಡರೂ ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ಗುರುವಿನ ಸೇವೆ ಮಾಡುತ್ತ ಅಪಾರ ಸಾಧನೆ ಮಾಡಿದ ಹಲವಾರು ಮಹನೀಯರು ಈಗಲೂ ನಮ್ಮ ನಡುವೆಯೇ ಇ¨ªಾರೆ. ಅವರ ವಿದ್ಯೆ ಅಂಕಗಳಿಕೆಗೆ ಸೀಮಿತವಾಗಿಲ್ಲದೇ ಆ ವಿಷಯದ ಕುರಿತ ಪ್ರಭುತ್ವ ಸಾಧಿಸುವುದರಲ್ಲಿದೆ. 

ಓದುವುದು ಅನುಭವಕ್ಕಾಗಿ ಅಲ್ಲ ; ಪರೀಕ್ಷೆಗಾಗಿ !
ಇನ್ನು ಆಧುನಿಕ ನಾಗರಿಕ ಸಮುದಾಯದ ಪರೀಕ್ಷಾ-ಕೇಂದ್ರಿತ ಶಿಕ್ಷಣ ಪದ್ಧತಿಯತ್ತ ನೋಟ ಹರಿಸೋಣ. ಮೂರು ವರ್ಷ ಪ್ರಾಯದ ಮುಗ್ಧ ಮಗು ಎಲ್‌ಕೆಜಿಗೆ ಸೇರುವ ಮೊದಲೇ ಇಂಟರ್‌ವ್ಯೂ ಹೆಸರಿನಲ್ಲಿ ಆರಂಭವಾಗುವ ಈ ಪರೀಕ್ಷೆಗಳ ಪ್ರಹಸನ ಮುಂದೆ ಆ ಮಗು ಬೆಳೆದು ಉದ್ಯೋಗಕ್ಕೆ ಸೇರುವವರೆಗೂ ಹಲವಾರು ಬಾರಿ ನಡೆಯುತ್ತಲೇ ಇರುತ್ತದೆ. ಅಳೆದೂ, ತೂಗಿ ಈಗ ಹಲವಾರು ವರ್ಷಗಳಿಂದ ಸೆಮಿಸ್ಟರ್‌ ಪದ್ಧತಿಗೆ ಜೋತು ಬಿದ್ದಿದ್ದೇವೆ. ಇದರಲ್ಲಿ ವರ್ಷಕ್ಕೆರಡು ಬಾರಿ ಮಕ್ಕಳು ಪರೀಕ್ಷೆಗಳನ್ನು ಎದುರಿಸಬೇಕು (ಕೆಲ ವರ್ಷ ಪ್ರಾಥಮಿಕ ಹಂತದಲ್ಲಿ ಟ್ರೈಮಿಸ್ಟರ್‌ ಪದ್ಧತಿಯಲ್ಲಿ ಮೂರು ಬಾರಿ!). ಜೊತೆಗೆ ಪ್ರತೀ ಪರೀಕ್ಷೆಯ ಮಾರ್ಕ್ಸ್ಗಳ ವಿವರ ಪೋಷಕರಿಗೆ ತಲುಪುವಂತಹ ವ್ಯವಸ್ಥೆ ಬೇರೆ. ಹೀಗಾಗಿ ಒಂದು ಪರೀಕ್ಷೆಗಿಂತ ಮತ್ತೂಂದು ಪರೀಕ್ಷೆಯಲ್ಲಿ ಒಂದು ಅಂಕ ಕಡಿಮೆ ಗಳಿಸಿದರೂ ಪೋಷಕರಿಗೆ ಮಾಹಿತಿ ಹೋಗಿ ಅವರು ಮಕ್ಕಳಿಗೆ ಮಂಗಳಾರತಿಯೆತ್ತುವುದು ಮಾಮೂಲಾಗಿದೆ. ಓದೆನ್ನುವುದು ಪರೀಕ್ಷೆಗಾಗಿ ಎನ್ನುವಂತಾಗಿದೆ.

ಮೂರನೇ ತರಗತಿಯ ತನಕದ ನಲಿ-ಕಲಿ ಮಾದರಿ, ನಂತರದ ಒಂಭತ್ತನೆಯ ತರಗತಿಯವರೆಗಿನ ಶಿಕ್ಷಣದಲ್ಲಿ ಗುರುಕುಲ ಪದ್ಧತಿಯ ಛಾಯೆ ಹೊಡೆದು ಕಾಣುತ್ತಿದೆ. ಕೇವಲ ವಾರ್ಷಿಕ ಪರೀಕ್ಷೆಯನ್ನು ಅವಲಂಬಿಸದೇ ವಿದ್ಯಾರ್ಥಿಗಳನ್ನು ಪಠ್ಯಕ್ಕನುಸಾರವಾಗಿ ಇತರೆ ಹಲವಾರು ಚಟುವಟಿಕೆಗಳ ಮುಖಾಂತರ ಅಳೆದು, ಆತನ ಕುರಿತು ಸಮಗ್ರವಾದ ದತ್ತಾಂಶಗಳನ್ನು ಅಂಕಗಳಾಗಿ ಪರಿಗಣಿಸುವುದು ನಿಜವಾಗಿಯೂ ಒಳ್ಳೆಯ ಪದ್ಧತಿಯೇ. ವಿದ್ಯಾರ್ಥಿಯ ಸಮಗ್ರ ವ್ಯಕ್ತಿತ್ವವನ್ನು ಬೆಳೆಸಲು ಈ ಮಾದರಿ ಮೆಚ್ಚತಕ್ಕದ್ದೇ. ಆದರೆ ಮುಂದಿನ ತರಗತಿಯಾದ ಎಸ್ಸೆಸ್ಸೆಲ್ಸಿಯಲ್ಲಿ ಆವರೆಗಿನ ಪದ್ಧತಿಗೆ ತಿಲಾಂಜಲಿಯನ್ನಿತ್ತು ಅಂಕ ಸಾಧನೆಯ ಬೆನ್ಹತ್ತಬೇಕಾಗಿದೆ. 

ನಮ್ಮ ಯಾವುದೇ ಸಮಸ್ಯೆಯನ್ನೂ ಮಿತಿಮೀರಿದ ಜನಸಂಖ್ಯೆಗೆ ಜೋಡಿಸಬಹುದು. ಜ್ಞಾನಾರ್ಜನೆಗೆ ಅತ್ಯುತ್ತಮವೆನ್ನಬಹುದಾದ ಮಾದರಿಗಳನ್ನು ನಾವು ಪ್ರಾಥಮಿಕ ಹಂತದಲ್ಲಿ ಹೊಂದಿದ್ದರೂ ಅವುಗಳ ಯಶಸ್ವೀ ಅಳವಡಿಕೆ ಇನ್ನೂ ಸಾಧ್ಯವಾಗಿಲ್ಲ. ಬೆರಳೆಣಿಕೆಯ ಶಿಕ್ಷಕರು ಸಾಗರದಂತಿರುವ ಮಕ್ಕಳ ಸಮಗ್ರ ಬೆಳವಣಿಗೆಯನ್ನು ಗಮನಿಸಿ ನೈಜ ಅಂಕಗಳನ್ನು ಕೊಡಲು ಸಾಧ್ಯವಾಗದೇ ಗರಿಷ್ಠ ಹಾಗೂ ಕನಿಷ್ಠ ಗೆರೆಗಳನ್ನು ಹೊಡೆದು ಅವುಗಳ ನಡುವೆ ವಿದ್ಯಾರ್ಥಿಗಳಿಗೆ ಅವರು ಗ್ರಹಿಸಿದಂತೆ- ಮಾರ್ಕ್ಸ್ಗಳನ್ನು ದಯಪಾಲಿಸಿ ಕೈ ತೊಳೆದುಕೊಳ್ಳುತ್ತಿ¨ªಾರೆ. ಜೊತೆಗೆ ಅವುಗಳಿಗೆ ಸಂಬಂಧಪಟ್ಟ ಕಡತಗಳನ್ನು ಸೃಷ್ಟಿಸಿ, ರಾಶಿಹಾಕಿ, ಮೇಲ್ವಿಚಾರಣೆಗೆ ಬರುವವರಿಗೆ ಒಪ್ಪಿಸಿ ಧನ್ಯರಾಗುತ್ತಿ¨ªಾರೆ. ಅದರಲ್ಲಿ ಅವರದ್ದೂ ತಪ್ಪೆನಿಸುವುದಿಲ್ಲ. ಯಾಕೆಂದರೆ ವಿದ್ಯಾರ್ಥಿಗಳ ಸಮಗ್ರ ಪರೀಕ್ಷೆ, ಊಟ-ಹಾಲು-ಮೊಟ್ಟೆ-ಮಾತ್ರೆ ಮುಂತಾದ ಕ್ರಿಯೆಗಳಲ್ಲಿಯೇ ಬಹುಪಾಲು ಸಮಯವನ್ನು ಅವರು ಕಳೆದರೆ ಪಾಠ ಮಾಡಲು ಸಮಯವೇ ಲಭ್ಯವಾಗುವುದಿಲ್ಲ ! ಪಾಠ ಮಾಡದಿದ್ದರೆ ಮಕ್ಕಳ ಸಾಧನೆಯ ಅಂಕಗಳ ಜೋಳಿಗೆ ತುಂಬುವುದಿಲ್ಲ. ಹೀಗೆ ಸಮಸ್ಯೆಗಳು ಜಟಿಲಗೊಂಡು ಒಂದಕ್ಕೊಂದು ಬೆಸೆದುಕೊಂಡಿವೆ.

ಇನ್ನು ಪಿಯುಸಿಯ ಕಥೆಯಂತೂ ಬೇಡವೇ ಬೇಡ. ಅಲ್ಲಿ ಮೇಲೆ ಉದಾಹರಿಸಿದ ಮರ ಹತ್ತುವ ದೃಷ್ಟಾಂತ ಅಕ್ಷರಶಃ ಕಣ್ಣೆದುರು ಮೂಡಿಬರುತ್ತದೆ. ಈಗಿನ ಟ್ರೆಂಡಾದ ಸೈನ್ಸ್‌Õನ ಬೆನ್ನು ಬೀಳುವ ಪೋಷಕರು ವಿದ್ಯಾರ್ಥಿಗಳಿಗೆ ಇಷ್ಟವಿಲ್ಲದಿದ್ದರೂ ಆ ವಿಷಯಕ್ಕೆ ತಳ್ಳುತ್ತಾರೆ. ಖಾಸಗೀ ಕಾಲೇಜುಗಳ್ಳೋ ಪಿಯುಸಿಯ ಮೊದಲ ದಿನದಿಂದಲೇ ಸ್ಪೆಷಲ್‌ ಕ್ಲಾಸ್‌ಗಳ ಮೇಲೆ ಕ್ಲಾಸ್‌ ಮಾಡುತ್ತಾ ಗಾಣದೆತ್ತಿನಂತೆ ವಿಷಯಗಳ ಸುತ್ತ ವಿದ್ಯಾರ್ಥಿಗಳನ್ನು ಗಿರಕಿ ಹೊಡೆಸುತ್ತಿರುತ್ತವೆ.

ಹಬ್ಬ-ಹರಿದಿನ, ಮದುವೆ-ಮುಂಜಿ, ಆ ರಜೆ, ಈ ರಜೆಗಳೆಲ್ಲವೂ ಸ್ಪೆಷಲ್‌ ಕ್ಲಾಸ್‌ಗಳಿಂದ ತುಂಬಿಹೋಗಿ ವಿದ್ಯಾರ್ಥಿ ಜೀವನವನ್ನು ಪರೀಕ್ಷೆಯೆಂಬ ಗಮ್ಯದತ್ತ ಚಿತ್ತೈಸುವಂತೆ ಮಾಡುತ್ತಿವೆ. ನಾಯಿಕೊಡೆಗಳಂತೆ ಚಾಚಿಕೊಂಡಿರುವ ಟ್ಯೂಷನ್‌ ಕೇಂದ್ರಗಳ ಯಶಸ್ವೀ ಸಹಯೋಗದೊಂದಿಗೆ ಕಾಲೇಜುಗಳು ಥಿಯರಿಯನ್ನು ಅರೆದು ಕುಡಿಸಿ, ಅಂಕವೀರರನ್ನು ಉತ್ಪಾದಿಸುವ ಕಾರ್ಖಾನೆಗಳಂತಾಗಿವೆ. ಹೈಸ್ಕೂಲಿನ ತನಕದ ಸಂಗೀತ, ನಾಟಕ, ಚಿತ್ರಕಲೆ, ಆಟ ಮತ್ತಿತರ ಪಠ್ಯೇತರ ಚಟುವಟಿಕೆಗಳನ್ನು ಬದಿಗೊತ್ತಲಾಗುತ್ತಿದೆ. ಹೋಗಲಿ, ವಿಷಯಗಳನ್ನಾದರೂ ಸರಿಯಾಗಿ ಕಲಿಸುತ್ತಾರೆಯೇ? ಒಂದು ದೃಷ್ಟಾಂತವನ್ನು ಗಮನಿಸೋಣ. ವಿಜ್ಞಾನವೆಂದರೆ ಪ್ರಯೋಗಗಳ ಮೂಲಕ ಅರಿಯುವಂತಹ ವಿಷಯ. ಒಂದು ಪಾಠವನ್ನು ಮುಗಿಸಿದ ಮೇಲೆ ನ್ಯಾಯವಾಗಿ ಆ ಪಾಠಕ್ಕೆ ಸಂಬಂಧಪಟ್ಟ ವಿವಿಧ ಪ್ರಯೋಗಗಳನ್ನು ವಿದ್ಯಾರ್ಥಿಗಳ ಕೈಯಲ್ಲಿ ಮಾಡಿಸಬೇಕು. ಹಾಗಾದಾಗಲೇ ವಿಷಯವು ಗ್ರಹಿಸಲ್ಪಡುತ್ತದೆ. ಆದರೆ ಅಂಕ ಗಳಿಕೆಯ ಹುಚ್ಚಿನಿಂದಾಗಿ ಈ ಮಾದರಿಗೆ ಹೆಚ್ಚಿನ ಕಾಲೇಜುಗಳಲ್ಲಿ ತಿಲಾಂಜಲಿಯನ್ನಿಡಲಾಗಿದೆ. ಒಂದು ವಿಷಯಕ್ಕೆ ಸಂಬಂಧಪಟ್ಟ ಎÇÉಾ ಪ್ರಾಯೋಗಿಕ ತರಗತಿಗಳನ್ನು ಒಂದು ವಾರದಲ್ಲಿಯೋ, ಹತ್ತು ದಿನದಲ್ಲಿಯೋ (ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಯಾವ ಪ್ರಯೋಗಗಳನ್ನು ಕೊಡುತ್ತಾರೋ ಅಂಥ ಪ್ರಯೋಗಕ್ಕೆ ಜಾಸ್ತಿ ಒತ್ತು ಕೊಟ್ಟು) ಮಾಡಿಸಲಾಗುತ್ತಿದೆ. 

ಏನ್ರೀ ಔಟ್‌ ಆಫ್ ಸಿಲೆಬಸ್‌ ಕೊÌಶ್ಚನ್‌ ಕೇಳ್ತಿದಿರಲಿ?
ವಾರ್ಷಿಕ ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಒಬ್ಟಾತ ಗಳಿಸಿ¨ªಾನೆ ಎನ್ನುವುದರ ಮೇಲೆ ವಿದ್ಯಾರ್ಥಿಯ ಸಾಧನೆ ಬಿಂಬಿತವಾಗುತ್ತಿದೆ. ಸಿಇಟಿಯಲ್ಲಿ ಒಳ್ಳೆಯ ರ್‍ಯಾಂಕ್‌ಗಳನ್ನು ಪಡೆದರಷ್ಟೇ ಉತ್ತಮ ಜೀವನ ಸಾಧ್ಯವೆನ್ನುವ ಭ್ರಮೆಯಲ್ಲಿ ನಾವಿದ್ದೇವೆ. ಅದರ ಹೊರತಾಗಿ ಜೀವನವೇ ಇಲ್ಲವೇನೋ ಎಂದುಕೊಳ್ಳತೊಡಗಿದ್ದೇವೆ. ಐಎಎಸ್‌, ಐಎಫ್ಎಸ್‌ ಮುಂತಾದ ವಿಷಯಗಳನ್ನು ಗಮನಿಸದಾಗಿದ್ದೇವೆ. ಕಡಿಮೆ ಅಂಕಗಳಿಸಿ ಕಲಾ ವಿಭಾಗಕ್ಕೆ ತಳ್ಳಲ್ಪಟ್ಟರೆ ಜೀವನ ಬರ್ಬಾದಾಯಿತೆಂದು ಆತ್ಮಹತ್ಯೆಯ ಹಾದಿ ಹಿಡಿಯುವ ದುರ್ಬಲ ಯುವ ಸಂಕುಲವನ್ನು ಸೃಷ್ಟಿಸುತ್ತಿದ್ದೇವೆ. ಇಷ್ಟವಿ¨ªೋ, ಇಲ್ಲದೆಯೋ ಹೆಚ್ಚಿನ ಸಂಬಳ ತರುವ ಉದ್ಯೋಗದ ಬೆನ್ಹತ್ತಿ ಜೀವ ತೇಯುತ್ತಿರುವ ಅಸಂಖ್ಯಾತರಲ್ಲಿ ಇದ್ದಕ್ಕಿದ್ದಂತೆ ಆವರಿಸಿಕೊಳ್ಳುತ್ತಿರುವ ಖನ್ನತೆಯಂತಹ ಮಾನಸಿಕ ರೋಗಗಳನ್ನು ಜಾಣತನದಿಂದ ಕಡೆಗಣಿಸುತ್ತಿದ್ದೇವೆ. ತಮ್ಮ ಅಂಕಗಳಿಂದಾಗಿ ಎಮ್ಮೆನ್ಸಿಗಳಲ್ಲಿರುವ ಬಹುಸಂಖ್ಯೆಯ ಉದ್ಯೋಗಿಗಳು ನಿಜವಾಗಿಯೂ ಆ ಸ್ಥಾನಕ್ಕೆ ಅನರ್ಹರು, ಅವರ ಕೌಶಲವು ಬೇರೆ ದೇಶಗಳ ಕೆಲಸಗಾರರ ಮಟ್ಟಕ್ಕಿಂತ ತೀರಾ ಕೆಳಗಿದೆ ಎನ್ನುವ ವರದಿಗಳನ್ನು ನೀವೆÇÉಾ ಗಮನಿಸಿರಬಹುದು. ಇದಕ್ಕೆಲ್ಲ ನೇರ ಕಾರಣ ನಮ್ಮ ಪರೀಕ್ಷೆಯ ಅಂಕಾಧಾರಿತ ಶಿಕ್ಷಣ ಪದ್ಧತಿ. ಇದೇ ಕಾರಣಕ್ಕೇ ನಮ್ಮ ದೇಶದ ಓಲಿಂಪಿಕ್‌ ಮೆಡಲ್ಲುಗಳ ಸಂಖ್ಯೆ ಕ್ಷೀಣಿಸುತ್ತಿರುವುದು, ಕ್ರೀಡಾ ಕ್ಷೇತ್ರದಲ್ಲಿ ಹೊಸ ಪ್ರತಿಭೆಗಳು ಹೊರಹೊಮ್ಮದೇ ಇರುವುದು, ಒಳ್ಳೆಯ ಕಥೆಗಳು, ಸಿನಿಮಾಗಳು, ಹಾಡುಗಳ ರಚನೆಯಾಗದೇ ಇರುವುದು! ಅವೂ ವಿದ್ಯೆಗಳೇ ತಾನೇ?
ಬೇರೆ ದೇಶಗಳಲ್ಲಿ ಹಾಗಾದರೆ ಪರಿಸ್ಥಿತಿ ಹೇಗಿದೆ? ನಾನು ಗಮನಿಸಿದಂತೆ ಮುಂದುವರಿದ ದೇಶಗಳಾದ ಚೀನಾ, ಜಪಾನ್‌, ತೈವಾನ್‌, ಯುರೋಪ್‌, ಆಸ್ಟ್ರೇಲಿಯಾ ಮತ್ತು ಅಮೆರಿಕಗಳಲ್ಲಿ ಅಂಕಗಳಿಗೆ ಪ್ರಾಧಾನ್ಯ ಇಲ್ಲವೇ ಇಲ್ಲ. ಅವರ ಪರೀûಾ ಪದ್ಧತಿಗಳೂ ನಮಗಿಂತ ತೀರಾ ಭಿನ್ನ. ವಿಷಯದಲ್ಲಿ ಪ್ರಭುತ್ವವನ್ನು ಕೊಡಮಾಡುವ ಶಿಕ್ಷಣ ಅವರ ಗುರಿ.

ಪ್ರಾಥಮಿಕ ಹಂತದಲ್ಲಿ ಹೊರಲಾಗದ ಸ್ಕೂಲ್‌ಬಾÂಗ್‌ಗಳ ಹೊರೆಯಿಲ್ಲ. ಉರು ಹೊಡೆಸುವ ಹೋಮ್‌ವರ್ಕ್‌ಗಳು ಅಸ್ತಿತ್ವದÇÉೇ ಇಲ್ಲ. ಮಗು ಬೆಳೆದಂತೆ ವಯಸ್ಸಿಗನುಗುಣವಾಗಿ ಪ್ರಯೋಗಾಧಾರಿತ ಮಾದರಿಯಲ್ಲಿ ನೈಜ ಶಿಕ್ಷಣ ಅಲ್ಲಿ ಸಿಗುತ್ತಿದೆ. ಬ್ಯಾಂಕಿಂಗ್‌, ವ್ಯಾಪಾರ, ವ್ಯವಹಾರ, ವೈಜ್ಞಾನಿಕ ಅನ್ವೇಷಣೆ ಮುಂತಾದ ವಿಷಯಗಳಲ್ಲಿ ನೈಜ ಸವಾಲುಗಳನ್ನೆದುರಿಸಿ ಅವರು ವಿಷಯ ತಜ್ಞರಾಗುತ್ತಿ¨ªಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೇಂಬ್ರಿಡ್ಜ್, ಸ್ಟ್ಯಾನ್‌ಫೋರ್ಡ್‌ಗೆ ತೆರಳಲು ಗಳಿಸಿದ ಅಂಕಗಳಿಗಿಂತ ವಿಷಯಕ್ಕೆ ಸಂಬಂಧಪಟ್ಟ ಜಟಿಲ ಸಮಸ್ಯೆಗಳನ್ನು ವಿದ್ಯಾರ್ಥಿ ಹೇಗೆ ಬಗೆಹರಿಸುತ್ತಾನೆ ಎನ್ನುವುದು ಮುಖ್ಯವಾಗುತ್ತದೆೆ. ಈ ವಿಧಾನವನ್ನು ನಾವೇನಾದರೂ ಅಳವಡಿಸಿಕೊಂಡರೆ ವಿದ್ಯಾರ್ಥಿಗಳಿಗಿಂತ ಪಾಲಕರ ವಿರೋಧವನ್ನೇ ಎದುರಿಸಬೇಕಾಗುತ್ತದೇನೋ? “ಏನ್ರೀ ಔಟ್‌ ಆಫ್ ಸಿಲೆಬಸ್‌ ಕೊÌಶ್ಚನ್‌ ಕೇಳ್ತಿದಿರಲಿÅà? ಎಲ್ಲಿದೇರಿ ನಿಮ್‌ ಕೊÌಶ್ಚನ್‌ ಟೆಕ್ಸ್ಟ್ ಬುಕ್ಕಲ್ಲಿ?’ ಎಂದು ಎಗರಿ ಬಿ¨ªಾರು! ತಿಂಗಳಾನುಗಟ್ಟಲೇ ಸ್ಟ್ರೈಕುಗಳಾದಾವು! ನೆನಪಿರಲಿ, ಹಲವಾರು ಹೆಸರಾಂತ ವಿಜ್ಞಾನಿಗಳು ಕಾಲೇಜು ಮೆಟ್ಟಿಲನ್ನು ಹತ್ತಿದವರೇ ಅಲ್ಲ.

ರ್‍ಯಾಂಕ್‌ ಹೋಲ್ಡರ್ಗಳಂತೂ ಅಲ್ಲವೇ ಅಲ್ಲ. ಆದರೂ ಅವರ ವಿಷಯಗಳ ಮೇಲಿನ ಕುತೂಹಲದಿಂದಾಗಿ ಅವರೆಲ್ಲ ಅಪ್ರತಿಮ ಸಾಧಕರಾಗಿ ಹೊರಹೊಮ್ಮಿದ್ದು. ಅಂತಹ ದಾಹವನ್ನು ಹೆಚ್ಚಿಸುವ, ಕುತೂಹಲವನ್ನು ಉದ್ದೀಪಿಸುವ ಪರೀಕ್ಷೆಗಳು ನಮ್ಮಲ್ಲಿ ಹೆಚ್ಚಲಿ.

– ಮನೋಜ್‌ ಗೋಡಬೋಲೆ

ಟಾಪ್ ನ್ಯೂಸ್

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

Veera Ratna Foundation: ಯೋಧರ ಕುಟುಂಬಕ್ಕೆ ಹೆಗಲಾಗುವ ವೀರ ರತ್ನ

1

Ratan Naval Tata: ರತನ್‌ ಟಾಟಾ ಮರೆಯಾದ ಮಾಣಿಕ್ಯ; ಅಳಿದ ಮೇಲೂ ಉಳಿವ ನೆನಪು

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

14

Kannada Sahitya Ranga: ಅಮೆರಿಕದಲ್ಲಿ ವಸಂತೋತ್ಸವ; ಕನ್ನಡ‌ ಸಾಹಿತ್ಯ ರಂಗದ ಸಾರ್ಥಕ ಸೇವೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.