ವಜ್ರಯಾನ ಬೆಳೆದು ಬಂದ ದಾರಿ
Team Udayavani, Feb 4, 2018, 10:50 AM IST
ಅತೀಶ ದೀಪಂಕರನೆಂಬ ಬೌದ್ಧ ಯೋಗಿಯ ಕತೆ
ಭಾರತದಲ್ಲಿ ನವ ಬೌದ್ಧರಿಂದ ಪ್ರಚಲಿತವಿರುವ ಬೌದ್ಧಧರ್ಮಕ್ಕೂ ಮೂಲತಃ ವಜ್ರಯಾನ ಅಥವಾ ಬೇರೆ ಯಾನಗಳಲ್ಲಿ ಇರುವ ಆಚರಣಾತ್ಮಕ ಬೌದ್ಧಧರ್ಮಕ್ಕೂ ವ್ಯತ್ಯಾಸವಿದೆ. ಇದು ವಜ್ರಯಾನದ ದೃಷ್ಟಿಯಿಂದಲೂ ನಿಜ. ಆಚಾರ್ಯ ಪದ್ಮಸಂಭವ ಟಿಬೆಟ್ ಮತ್ತು ಭೂತಾನ್ ದೇಶಗಳಿಗೆ ವಜ್ರಯಾನದ ರೂಪದಲ್ಲಿ ತಂತ್ರವನ್ನು ತೆಗೆದುಕೊಂಡು ಹೋದರು. ಸ್ವತಃ ಆಗಿನ ಟಿಬೆಟ್ಟಿನ ರಾಜನೇ ಅವರಿಗೆ ಆಹ್ವಾನ ಕಳಿಸಿದ್ದ ಎನ್ನುತ್ತದೆ ಬೌದ್ಧಪರಂಪರೆ. ಇಲ್ಲಿಂದ “ನಿಂಗ್‌ಮ ಎಂ’ ಪಂಥ ಅಲ್ಲಿ ಬೆಳೆಯಿತು. ಎರಡನೇ ಹಂತದಲ್ಲಿ ಭಾರತ-ಟಿಬೆಟ್ಟಿನ ಬೌದ್ಧ ಸಂಪರ್ಕ ಬೆಳೆದಿದ್ದು ಕ್ರಿ.ಶ. 11-12ನೇ ಶತಮಾನದಲ್ಲಿ. ಇದಕ್ಕೆ ಆಚಾರ್ಯರಾದ ಅತೀಶ, ಮಾರ್ಪ ಮತ್ತು ಬೊÅಗ್ಮಿ ಕಾರಣಪುರುಷರು. ಇವರಲ್ಲಿ ಒಬ್ಬೊಬ್ಬರೂ ಅವರದೇ ರೀತಿಯಲ್ಲಿ ಬೌದ್ಧಧರ್ಮವನ್ನು ಬೆಳಗಿದರು.
ವಜ್ರಯಾನಕ್ಕೆ ಕೊಡುಗೆ ನೀಡಿದರು.
ಇವರಲ್ಲಿ ಮೊದಲನೆಯವರಾದ ಅತೀಶರ ಬಗೆಗೆ ನೋಡೋಣ. ಅತೀಶ ಭಾರತ ಮೂಲದವರು. ಇವರು ಜನಿಸಿದ್ದು ಒಂದು ಕ್ಷತ್ರಿಯ ವಂಶದಲ್ಲಿ. ಅವರು ಹುಟ್ಟಿದ್ದು ವಿಕ್ರಮಪುರಿಯಲ್ಲಿ, ಇದು ಈಗ ಬಾಂಗ್ಲಾದೇಶದ ರಾಷ್ಟ್ರರಾಜ್ಯಕ್ಕೆ ಸೇರಿಕೊಂಡಿದೆ. ಸಾಂಸ್ಕƒತಿಕವಾಗಿ ಬಾಂಗ್ಲಾ ಭಾರತದ ಒಂದು ಭಾಗವೇ ಆಗಿದೆ. ಬಾಂಗ್ಲಾದ ಮುನ್ಶಿಗಂಜ್ ಜಿÇÉೆಯಲ್ಲಿ ಅತೀಶರ ಜನನವಾಯಿತು. ಅತೀಶ ಎಂದರೆ ಶಾಂತಿ ಎಂದು ಅರ್ಥ. ಇವರ ತಂದೆ ಬಂಗಾಲದ ರಾಜನಾದ ಕಲ್ಯಾಣಶ್ರೀ ಮತ್ತು ತಾಯಿ ಪ್ರಭಾವತಿ. ಹುಟ್ಟಿದಾಗ ಮಗುವಿಗೆ ಚಂದ್ರಗರ್ಭ ಎಂದು ಹೆಸರಿತ್ತು. ಮುಂದೆ ಬೌದ್ಧ ಸನ್ಯಾಸಿಯಾದ ಮೇಲೆ ಅತೀಶ ಎಂಬ ಹೆಸರು ಬಂದದ್ದು. ಈ ಮಗು ಜನಿಸಿದಾಗ ರಾಜ್ಯದಲ್ಲಿ ಆಕಾಶದಿಂದ ಪುಷ್ಪ³ವೃಷ್ಟಿಯಾಯಿತು ಎಂಬ ಉÇÉೇಖವುಂಟು.
ಮಗುವನ್ನು ಅರಮನೆಯೊಳಗೇ ಮೊದಲ ಹದಿನೆಂಟು ತಿಂಗಳು ಬೆಳೆಸಲಾಯಿತು. ಹದಿನೆಂಟು ತಿಂಗಳು ತುಂಬಿದ ಮೇಲೆ ಮಗುವನ್ನು ಅರಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದು, ರಾಜ-ರಾಣಿ ಸಮೀಪದ ಕಮಲಾಪುರದ ಒಂದು ದೇವಸ್ಥಾನಕ್ಕೆ ಕರೆದುಕೊಂಡು ಬಂದರು. ರಾಜಕುಮಾರನನ್ನು ನೋಡಲು ಕುತೂಹಲದಿಂದ ಸುತ್ತಲಿನ ಹಳ್ಳಿಯ ಜನತೆ ಅಲ್ಲಿ ನೆರೆದಿತ್ತು. ಮಗು ಎಲ್ಲರ ಮುಂದೆ ಮಾತನಾಡಿತು. ಅದು ಮಾತನಾಡಿದ್ದು: “ಈ ರಾಜ್ಯದ ಎಲ್ಲ ಜನರಿಗೂ ನನ್ನ ತಂದೆ-ತಾಯಿಯ ಸದ್ಗುಣಗಳು ಬರಲಿ. ಅವರೆಲ್ಲರೂ ಸಮೃದ್ಧಿಯ ಉತ್ತುಂಗ ಕಾಣುವ ಸಾಮ್ರಾಜ್ಯವನ್ನು ಆಳಲಿ. ಎಲ್ಲರೂ ಉತ್ತಮ ಕೆಲಸಗಳನ್ನು ಮಾಡಿ ಸ್ವತಃ ತಾವೇ ಮುಂದಿನ ಜನ್ಮಗಳಲ್ಲಿ ರಾಜರಾಗಿ ಜನಿಸಲಿ’
ಮಗು ಚಂದ್ರಗರ್ಭ-ಅತೀಶ ತಾನೇ ಹೋಗಿ ದೇವಾಲಯದಲ್ಲಿ ಪೂಜೆ ಮಾಡಿತು. ಮುಂದೆ “ಜನರಿಗೆ ಒಳ್ಳೆಯದಾಗುವ ಕೆಲಸಗಳಲ್ಲಿ ಮಾತ್ರ ಕೈಜೋಡಿಸುವೆ, ನನಗೆ ನನ್ನ ಸ್ವಂತದ್ದು ಎನ್ನುವುದು ಯಾವುದೂ ಇಲ್ಲ’ ಎಂದೂ ಹೇಳಿತಂತೆ. ಭಗವಾನ್ ಬುದ್ಧನ ಬಾಲ್ಯದ ಅಪೂರ್ವ ಘಟನೆಗಳಿಗೂ ಅತೀಶನ ಬಾಲ್ಯಕಾಲದ ಘಟನೆಗಳಿಗೂ ಅನೇಕ ಹೋಲಿಕೆಗಳಿವೆ.
ಮಗು ಬೆಳೆದು ತರುಣನಾದ. ಅವನಿಗೆ ಮದುವೆ ಮಾಡಬೇಕೆಂದು ಹಿರಿಯರು ನಿಶೆòಸಿದರು. ಆಗ ನಡೆದ ಮಹತ್ವದ ಘಟನೆಯನ್ನು ಬೌದ್ಧಸಾಹಿತ್ಯ ಗುರುತಿಸಿದೆ. ವಜ್ರಯಾನ ಸಂಪ್ರದಾಯದಲ್ಲಿ ತಾರಾ ದೊಡ್ಡ ದೇವತೆ. ಈ ದೇವಿ ಅತೀಶನ ಮುಂದೆ ಕಾಣಿಸಿಕೊಂಡು, “ನೀನು ಹಿಂದಿನ ಜನ್ಮದಲ್ಲಿ ಶ್ರೇಷ್ಠ ಸನ್ಯಾಸಿಯಾಗಿ¨ªೆ. ಈ ಜನ್ಮದಲ್ಲೂ ನೀನು ಅದೇ ರೀತಿ ಇರಬೇಕು’ ಎಂದು ಉಪದೇಶ ಮಾಡಿದಳು. ಆಕೆ ಒಂದು ಚಂದದ ಹೋಲಿಕೆ ಕೊಟ್ಟಳು. ಆನೆ ಕೆಸರು-ಉಸುಕಿನಲ್ಲಿ ಕಾಲಿಟ್ಟು ಮುಳುಗಿಬಿಡುವಂತೆ, ಧೀರರಾದವರು ಕಾಮದ ಕೆಸರಿನಲ್ಲಿ ಸಿಲುಕೊಂಡುಬಿಡುತ್ತಾರಪ್ಪ ಎಂಬುದಾಗಿ. ಈ ಸಂದರ್ಭದಲ್ಲಿ ದೇವಿಯ ಈ ಮಾತಿನ ಅರ್ಥವೆಂದರೆ, ಆನೆ ತನ್ನ ಭಾರಕ್ಕೆ ತಾನೇ ಕುಸಿಯುವಂತೆ, ರಾಜಪುತ್ರನಾದ ನೀನು ನಿನ್ನ ಲೌಕಿಕ ಐಶ್ವರ್ಯದ ಕಾರಣಕ್ಕೆ ಸಂಸಾರದಲ್ಲಿ ಮುಳುಗಿಹೋಗಿಬಿಡಬಹುದು ಎಂದು. ಕೂಡಲೇ ಅತೀಶ ಅರಮನೆ, ಸಂಪತ್ತು ಎಲ್ಲಕ್ಕೂ ಅಂತರಂಗದಲ್ಲಿ ವಿದಾಯ ಹೇಳಿದ. ಬಹಿರಂಗದಲ್ಲಿ ತಾನು ಬೇಟೆಯಾಡಲು ಹೋಗುತ್ತೇನೆ ಎಂದು ಅರಮನೆಯಿಂದ ಹೊರಟ. ಅಸಲಿಗೆ ಅವನು ಹೊರಟದ್ದು ಗುರುವಿನ ಅನ್ವೇಷಣೆಗಾಗಿ. ಗುರುವನ್ನು ಹುಡುಕುವುದು, ಗುರುವಿನ ಕೃಪೆಗೆ ಪಾತ್ರರಾಗುವುದು ಇಡೀ ಭಾರತೀಯ ಅಧ್ಯಾತ್ಮಿಕ ಪರಂಪರೆಯಲ್ಲಿ ದೊಡ್ಡ ಘಟನೆ. ತರುಣನಾದ ಅತೀಶನಿಗೆ “ಜಟಾರಿ’ ಎಂಬ ಬ್ರಾಹ್ಮಣ ಗುರುಗಳು ದೊರೆತರು. ಆತ ಆಗ ಬೌದ್ಧಧರ್ಮ ಪಾಲನೆ ಮಾಡುತ್ತಿದ್ದರು. ಅವನು ಕೆಲವು ಪಾಠಗಳನ್ನು ಅತೀಶನಿಗೆ ಮಾಡಿದರು. ಅವುಗಳೆಂದರೆ, ಬುದ್ಧನ ತ್ರಿರತ್ನಗಳು: ಶರಣಾಗತಿ ಹೊಂದುವುದು, ಧರ್ಮ ಮತ್ತು ಸಂಘದಲ್ಲಿ ಶರಣುಹೊಂದುವುದು, ಬೋಧಿಚಿತ್ತವನ್ನು ಅಭ್ಯಾಸಮಾಡುವುದು. ಬೋಧಿಚಿತ್ತವೆಂದರೆ ಸಕಲ ಪ್ರಾಣಿಗಳ ಲೇಸನ್ನು ಬಯಸಿ ಬೋಧಿಯ ಕುರಿತು ಮಾನಸಿಕ ಆಸಕ್ತಿ ಬೆಳೆಸಿಕೊಳ್ಳುವುದು. ತಾನು ಕಲಿಸುವುದೆಲ್ಲ ಪೂರೈಸಿದ ಮೇಲೆ ಅತೀಶನನ್ನು ಆಶೀರ್ವದಿಸಿದ ಗುರು ಜಟಾರಿ ಉನ್ನತ ವಿದ್ಯಾಭ್ಯಾಸಕ್ಕೆ ನಲಂದಾಕ್ಕೆ ಹೋಗಲು ಸೂಚನೆ ಕೊಟ್ಟರು. ಅಲ್ಲಿನ ಗುರು ಬೋಧಿಭದ್ರ ಬೋಧಿಸತ್ವ ತಣ್ತೀ ಕುರಿತು ಇನ್ನಷ್ಟು ಕಲಿಸಿದರು. ನಂತರ ಶೂನ್ಯತೆಯನ್ನು ಕುರಿತು ಧ್ಯಾನ ಮಾಡುವ ವಿದ್ಯಾಕೋಕಿಲವನ್ನು ಸೇವಿಸುವಂತೆ ಉಪದೇಶಿಸಿದರು. ಈ ದಾರಿಯಲ್ಲಿ ನಲಂದಾದಲ್ಲಿ ಇದ್ದುಕೊಂಡು ಸಾಧನೆ ಮಾಡಿದಾಗ ಅತೀಶನಿಗೆ ತಿಳಿದದ್ದು : ದೇಹ ಮತ್ತು ಮನಸ್ಸು ತಮ್ಮಷ್ಟಕ್ಕೆ ಬಂಧನಗಳಲ್ಲ ; ನಾವು ಅವುಗಳ ಮೋಹದಲ್ಲಿ ಸಿಲುಕಿಕೊಂಡು ಬಂಧನ ತಂದುಕೊಳ್ಳುತ್ತೇವೆ !
ಹೆಣ್ಣು ಎಂದರೆ, ಮೋಕ್ಷ ಅಥವಾ ಬಿಡುಗಡೆಗೆ ಕರೆದುಕೊಂಡು ಹೋಗುವ ದೊಡ್ಡ ಶಕ್ತಿ. ಅತೀಶ ಒಮ್ಮೆ ಒಬ್ಬಳು ಹೆಂಗಸು ಸ್ವಲ್ಪ ನಗುವುದು, ಸ್ವಲ್ಪ ಅಳುವುದನ್ನು ಕಂಡು ಕುತೂಹಲಿಯಾದ. ಅವಳಲ್ಲಿ, “ಹೀಗೇಕೆ ಮಾಡುವೆ?’ ಎಂದು ಕೇಳಿದ. ಅವಳು ಹೇಳಿದ ಮಾತುಗಳು ಇಂದಿಗೂ ಬಹಳ ಮಹಣ್ತೀ ಪಡೆದಿವೆ. ಅವಳು ಹೇಳಿದಳು, “ಅನಂತಕಾಲದಿಂದ ನಮ್ಮ ಮನಸ್ಸೇ ಬುದ್ಧನಾಗಿದೆ. ಆದರೆ, ಇದು ಒಂದು ತಿಳಿಯದೆ ತಪ್ಪು ಭಾವನೆ ಉಂಟಾಗಿ ಕೋಟಿಗಟ್ಟಲೆ ಜೀವಿಗಳು ಜಗತ್ತಿನಲ್ಲಿ ದುಃಖ ಪಡುತ್ತಿವೆ. ಅದನ್ನು ಕಂಡು ಸಂಕಟವಾಗಿ ಅಳುತ್ತೇನೆ. ಈ ಒಂದು ಸಣ್ಣ ಪ್ರಮಾದದ ಅರಿವಾಗಿ ಬಿಟ್ಟರೆ ನಾವು ಕೂಡಲೆ ಬುದ್ಧರೇ ಆಗಿಬಿಡುತ್ತೇವಲ್ಲ ಎಂದು ನೆನಪಿಸಿಕೊಂಡು ನಗುತ್ತೇನೆ’
(“One’s own mind has been a Buddha from beginningless time. By not knowing this, great complications follow from such a small base of error for hundreds of thousands of sentient beings…. Not being able to bear the suffering for so many beings, I cry. And then, I laugh because when this small basis of error is known—when one knows one’s own mind—one is freed.’’)ಈ ಘಟನೆ ಅವನ ಮನಸ್ಸಿನ ಮೇಲೆ ಪರಿಣಾಮ ಉಂಟುಮಾಡಿತು. ಮುಂದೆ ನಲಂದಾದ ಗುರುಗಳು, ಅತೀಶನಿಗೆ ವಜ್ರಯಾನದ ಮಹಾಗುರುವಾದ ಅವಧೂತಿಪರ ಬಳಿ ವಿದ್ಯಾಭ್ಯಾಸ ಮಾಡಲು ಸಲಹೆ ನೀಡಿದರು. ಅವಧೂತಿಪರ ಬಳಿ ವಿದ್ಯೆಯನ್ನು ಬೇಡಿ ಅತೀಶನಿಗೆ ಕಲಿಸಲು ಒಪ್ಪಿದ ಈ ಗುರು ಕಪ್ಪುಬೆಟ್ಟದ ಯೋಗಿಯ ಬಳಿ ಹೋಗಿ ಬರಲು ತಿಳಿಸಿದ. ಕಪ್ಪುಬೆಟ್ಟದ ಯೋಗಿ ಅತೀಶನಿಗೆ ಅನೇಕ ಕಠಿಣ ಪರೀಕ್ಷೆಗಳನ್ನು ಒಡ್ಡಿದ. ಮೊದಲು ಅತೀಶ ಬರುತ್ತಿದ್ದಂತೆ ಸಿಡಿಲನ್ನು ಸೃಷ್ಟಿಸಿ ಅವನ ಮೇಲೆ ಪ್ರಯೋಗಿಸಿದ. ನಂತರ ಹದಿಮೂರು ದಿನಗಳ ಕಾಲ ಹೇವಜ್ರ ಬೌದ್ಧ ಸಂಪ್ರದಾಯದ ರಹಸ್ಯಗಳನ್ನು ತಿಳಿಸಿಕೊಟ್ಟ. “ಮುಂದಿನ ಹಂತದ ವಿದ್ಯೆ ಕಲಿಸುವುದಕ್ಕೂ ಮೊದಲು ನೀನು ಮರಳಿ ವಿಕ್ರಮಪುರಿಗೆ ಹೋಗಿ ತಂದೆತಾಯಿಗಳಿಂದ ಅನುಮತಿ ಪಡೆದುಕೊಂಡು ಬಾ, ರಾಜ್ಯ-ಕೋಶ ಎಲ್ಲವನ್ನೂ ಬಿಟ್ಟುಬರಬೇಕು’ ಎಂದು ಆದೇಶಿಸಿದ. ಮರಳಿ ರಾಜ್ಯಕ್ಕೆ ಹೊರಟ ಅತೀಶನ ಸಂಗಡ ಎಂಟು ಜನ ನಗ್ನರಾದ ಯೋಗಿ- ಯೋಗಿನಿಯರನ್ನು ವಿಕ್ರಮಪುರಿಗೆ ಕಳುಹಿಸಿಕೊಟ್ಟ.
ಸಂನ್ಯಾಸ ಪಡೆಯುವ ಮೊದಲು ಹೆತ್ತವರ ಅನುಮತಿ ಅಗತ್ಯ ಎಂಬ ಪರಂಪರೆ ಈ ಆದೇಶದ ಬೆನ್ನ ಹಿಂದೆ ಇದೆ. ರಾಜ್ಯದಲ್ಲಿ ಹೆತ್ತವರನ್ನು ಕಂಡ ಅತೀಶ ನಡೆದದ್ದನ್ನು ಅವರಿಗೆ ವಿವರಿಸಿ ತಾನು ಧರ್ಮದ ದಾರಿಯಲ್ಲಿ ಶಾಶ್ವತವಾಗಿ ಹೋಗಲು ನಿರ್ಧರಿಸಿರುವುದನ್ನು ತಿಳಿಸಿದ. ಈ ತಂದೆ-ತಾಯಿ, ಈ ರಾಜ್ಯ-ಸಂಪತ್ತು ಎಲ್ಲವೂ ಈ ಜನ್ಮಕ್ಕೆ ಮಾತ್ರ ಸಂಬಂಧಪಟ್ಟಿದ್ದು, ಅದರಿಂದ ತನಗೆ ಏನೂ ಸುಖವಿಲ್ಲ ಎಂದು ಅವರಿಗೆ ವಿವರಿಸಿದ. ಮುಂದಿನ ಜನ್ಮಗಳಲ್ಲಿ ಈ ಜನರಾಗಲಿ, ವಸ್ತುಗಳಾಗಲಿ ತನ್ನ ಸಂಗಡ ಇರುವುದಿಲ್ಲ ಎಂದು ತಿಳಿಸಿದ. ತಾಯಿಗೆ ಮಗನ ಹೃದಯ ಅರ್ಥವಾಯಿತು. ಇದು ಬೌದ್ಧಧರ್ಮದ ಪುಣ್ಯ.
ಮೊದಲಿನಿಂದಲೂ ವೈರಾಗ್ಯದಲ್ಲಿ ಅವನಿಗಿದ್ದ ಆಸಕ್ತಿಯನ್ನು ಗಮನಿಸಿ ಕುಟುಂಬ ತ್ಯಾಗಕ್ಕೆ ಆಕೆ ಅನುಮತಿಸಿದಳು. ತಾಯಿ ಅನುಮತಿ ಕೊಟ್ಟಷ್ಟು ಸುಲಭವಾಗಿ ತಂದೆ ನೀಡಲಿಲ್ಲ. ಅತೀಶನ ತಂದೆಯೂ ಭಗವಾನ್ ಬುದ್ಧನ ತಂದೆಗೂ ಇಲ್ಲಿ ಪುತ್ರವ್ಯಾಮೋಹದ ವಿಷಯದಲ್ಲಿ ಹೋಲಿಕೆ ಇದೆ. ತಂದೆಯ ಅನುಮತಿಯೂ ದೊರಕಿದ ಮೇಲೆ ಅತೀಶ ಮರಳಿ ಗುರು ಅವಧೂತಿಪರ ಬಳಿ ಹೋಗಿ ನೆಲೆಸಿದ. ಗುರು ಅವನಿಗೆ ಮಾಧ್ಯಮಿಕ ತಣ್ತೀಗಳನ್ನು ಬೋಧಿಸಿದರು. ಈ ನಡುವೆ ಅತೀಶನಿಗೆ ತನಗೆ ಬಹಳ ತಿಳಿದಿದೆ ಎಂಬ ಭ್ರಮೆ ಉಂಟಾಗಿ ಸ್ವಲ್ಪ ಗರ್ವ ಬಂತು. ಆಗ ದೇವಿಯು ಡಾಕಿನೀ ದೇವಿಯ ರೂಪದಲ್ಲಿ ಕಾಣಿಸಿಕೊಂಡು ಅಪಾರ ಜ್ಞಾನರಾಶಿಯಲ್ಲಿ ನಿನಗೆ ತಿಳಿದಿರುವುದು ಬಹಳ ಕಮ್ಮಿ ಎಂಬ ಅರಿವನ್ನು ಮೂಡಿಸಿ ಅವನನ್ನು ಗರ್ವಜಾಲದಿಂದ ಪಾರುಮಾಡಿದಳು. ಅತೀಶ ಬಹಳ ವಿನಯವಂತನಾದ.
ತಾನು ಬಹಳ ಆಳವಾಗಿ ನಿಷ್ಠೆಯಿಂದ ತಂತ್ರಗಳ ಸಾಧನೆಯನ್ನು ಮಾಡುತ್ತೇನೆ ಎಂದು ನಿರ್ಧರಿಸಿದ್ದ ಅತೀಶ. ಅವನಿಗೆ ಒಂದು ರಾತ್ರಿ ಸ್ವಪ್ನದಲ್ಲಿ ಗುರು ಕಪ್ಪುಬೆಟ್ಟದ ಯೋಗಿಗಳು ಕಾಣಿಸಿಕೊಂಡು ತಂತ್ರದ ಪೂರ್ಣ ಸಾಧನೆ ಕೈಗೊಳ್ಳಲು ನೀನು ಸನ್ಯಾಸಿಯಾಗಬೇಕು ಎಂದು ಆದೇಶಿಸಿದರು. ಶೀಲರಕ್ಷಿತರೆಂಬ ಮಹಾಗುರುಗಳ ಸಮ್ಮುಖದಲ್ಲಿ ತನ್ನ ಇಪ್ಪತ್ತೂಂಭತ್ತನೆಯ ವಯಸ್ಸಿನಲ್ಲಿ ರಾಜಕುಮಾರ ಸನ್ಯಾಸಿಯಾದ. ಯಾರ ಆಳವಾದ ಪ್ರಜ್ಞೆ ದೀಪದಂತೆ ಕೆಲಸ ಮಾಡುವುದೋ ಅವನು ಎಂಬ ಅರ್ಥದಲ್ಲಿ ಅವನಿಗೆ ದೀಪಂಕರ ಶ್ರೀಜ್ಞಾನ ಎಂಬ ಮರು ನಾಮಕರಣವಾಯಿತು. ವಜ್ರಯಾನಕ್ಕೆ ಮತ್ತು ಇಡೀ ಬೌದ್ಧ ಸಾಧನಾ ಪದ್ಧತಿಗೆ ಅತೀಶ ದೀಪಂಕರ ಶ್ರೀಜ್ಞಾನರ ಕೊಡುಗೆ ಮಹತ್ವದ್ದು.
(ಮುಂದುವರಿಯುತ್ತದೆ)
– ಜಿ. ಬಿ. ಹರೀಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.