ಅವರು ಸಂಗೀತವನ್ನು ಬರೆಯುತ್ತಾರೆ, ನಾವು ಹಾಡುತ್ತೇವೆ !
Team Udayavani, Dec 31, 2017, 6:25 AM IST
ಜಗತ್ತಿನ ಎಲ್ಲ ಬಗೆಯ ಸಂಗೀತಾಭ್ಯಾಸಿಗಳ ಮತ್ತು ಸಂಗೀತದ ಆಸ್ವಾದಕರ ನಡುವೆ ಸಾಮಾನ್ಯವಾದ ಮಾತೊಂದಿದೆ: ಶ್ರೋತೃವಾಗಲೀ ಅಥವಾ ಕಲಾವಿದನಾಗಲಿ, ಯಾವುದೇ ಒಂದು ಬಗೆಯ ಸಂಗೀತದಲ್ಲಿ ಉತ್ತಮವಾದ ಅಭ್ಯಾಸವಿದ್ದರೆ ಆ ಪ್ರಕಾರವನ್ನು ಮೂಲವಾಗಿಟ್ಟುಕೊಂಡು ಜಗತ್ತಿನ ಎಲ್ಲ ಬಗೆಯ ಸಂಗೀತವನ್ನು ಅರ್ಥೈಸಿಕೊಳ್ಳಬಹುದು, ಜೊತೆಗೆ ಆನಂದಿಸಬಹುದು!
ಬಹಳಷ್ಟು ಕಾರಣಗಳಿಂದ ನಮಗೆ ಇದು ಸತ್ಯ ಎಂದು ಕಂಡರೂ ಕೆಲವೊಮ್ಮೆ ವಿಭಿನ್ನವಾದ ದೃಷ್ಟಿಕೋನವನ್ನಿಟ್ಟುಕೊಂಡು ಗಮನಿಸಿದರೆ ಇದು ಸರಿಯಲ್ಲವೆಂದೂ ಅನ್ನಿಸುತ್ತದೆ. ಉದಾಹರಣೆಗೆ, ಭಾರತೀಯ ಸಂಗೀತಪದ್ಧತಿಯಲ್ಲಿ ಅದರಲ್ಲೂ ಹಿಂದೂಸ್ತಾನಿ ಸಂಗೀತದಲ್ಲಿ ಆಳವಾದ ಅಭ್ಯಾಸವನ್ನು ಹೊಂದಿರುವಂಥ ಕಲಾವಿದರು ಪಾಶ್ಚಾತ್ಯ ಸಂಗೀತದ ಹಾರ್ಮನಿಯನ್ನು ಭಾರತೀಯ ಸಂಗೀತದ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳಲು ನಿಜಕ್ಕೂ ಹೆಣಗಬೇಕಾಗುತ್ತದೆ. ನಮ್ಮ ಸಂಗೀತದ ಕೃತಿ ಅಥವಾ ಬಂದಿಶ್‌ಗಳಂತೆ ಪಾಶ್ಚಾತ್ಯರ, ಅದರಲ್ಲೂ ಬಿಥೋವನ್ ಮೊದಲಾದ ದಿಗ್ಗಜರ ರಚನೆಗಳು ಇರುವುದಿಲ್ಲ. ಕಾರ್ಡ್ಸ್ ಮತ್ತು ಹಾರ್ಮನಿ ಎಂಬ ವಿಭಿನ್ನವಾದ ರಚನಾ ಶೈಲಿಯು ಪಾಶ್ಚಾತ್ಯರ ಸಂಗೀತದಲ್ಲಿÉ ಎದ್ದು ಕಾಣಿಸುವುದು ಆ ಬದಿಯ ವಿಶೇಷವಾದ ಮನೋಧರ್ಮ. ಭಜನೆಯ ಸಾಲಿನ ವಿಟuಲನನ್ನು ಹೇಗೆ ಕರೆದರೂ ಅವನು ನಮಗೆ ವಿಟuಲನೇ, ಕೋಮಲಗಾಂಧಾರದಲ್ಲಿ ನಾವು ವಿಟuಲನನ್ನು ಕರೆದರೆ ಅÇÉೊಂದು ಮಾರ್ದವತೆಯಿರುತ್ತದೆ.
ತೀವ್ರಗಾಂಧಾರದ ಕರೆಯಲ್ಲಿ ಭಕ್ತಿಯ ಪರಾಕಾಷ್ಠೆಯು ಇರುತ್ತದೆ. ಆದರೆ, ಎರಡು ಜಾಗದಲ್ಲಿಯೂ ನಮಗೆ ಬೇಕಾದಂತೆ ವಿಟuಲನನ್ನು ನೋಡಬಹುದು. ಪಾಶ್ಚಾತ್ಯ ಸಂಗೀತ ಅದರಲ್ಲೂ 18ನೆಯ ಶತಮಾನದ ಇಂಗ್ಲೆಂಡಿನ ಜನಪದ ಸಂಗೀತದ (ಉದಾಹರಣೆಗೆ, ಆಸಕ್ತರು ಸ್ಪೆನ್ಸರ್ ದ ರೋವರ್ ಮುಂತಾದ ರಚನೆಗಳನ್ನು ಗಮನಿಸಬಹುದು) ರಚನೆಗಳನ್ನು ಗಮನಿಸಿದರೆ ಸುಮಾರು ಎರಡು ಶತಮಾನಗಳು ಕಳೆದರೂ ಆ ರಚನೆಗಳನ್ನು ಇಂದಿಗೂ ಹಾಗೆಯೇ ಹಾಡಲಾಗುತ್ತದೆ.
ಅದೇ ನಾವು ನಮ್ಮ ಪ್ರಸಿದ್ಧ ತುಕಾರಾಮರ¨ªೋ, ತುಲಸೀದಾಸರ¨ªೋ, ಪುರಂದರದಾಸರ¨ªೋ ಭಜನೆಗಳನ್ನು ಅಥವಾ ಸಂತ ಶರೀಫರ ಪದ್ಯಗಳನ್ನೋ ತೆಗೆದುಕೊಂಡು ನೋಡಿದರೆ ಹತ್ತಕ್ಕೂ ಮಿಗಿಲಾದ ಬಗೆಬಗೆಯ ಧಾಟಿಗಳು ನಮಗೆ ಸಿಗುತ್ತವೆ. ಕೋಡಗನ ಕೋಳಿಯು ಸಿ. ಅಶ್ವತ್ಥರಿಗೆ ಕಂಡ ರೀತಿ ಬೇರೆಯೇ ಮತ್ತು ರಘು ದೀಕ್ಷಿತ್‌ರಿಗೆ ದಕ್ಕಿದ ರೀತಿ ಬೇರೆಯೇ. ಭಾರತೀಯ ಸಂಗೀತದ ರಚನೆಗಳಿಗೂ ಪಾಶ್ಚಾತ್ಯರ ರಚನೆಗೂ ಇಂಥ ದೊಡ್ಡ ವ್ಯತ್ಯಾಸವಿರಲು ಮುಖ್ಯವಾದ ಕಾರಣವೆಂದರೆ, ಅವರು ಸಂಗೀತವನ್ನು ಬರೆಯುತ್ತಾರೆ ಮತ್ತು ನಾವು ಹಾಡುತ್ತೇವೆ!
I wrote this music - ಇದು ಪಕ್ಕಾ ಪಾಶ್ಚಾತ್ಯ ಸಂಗೀತದ ಪ್ರಯೋಗ ಅಥವಾ ಪಾಶ್ಚಾತ್ಯ ಸಂಗೀತದ ಪ್ರಭಾವವುಳ್ಳ ಸಂಗೀತಗಾರನೊಬ್ಬ ತನ್ನ ರಚನೆಯ ಬಗ್ಗೆ ಹೇಳಿಕೊಳ್ಳುವ ರೀತಿ. ಆದರೆ, ನಾವು ಸಂಗೀತವನ್ನು ಬರೆಯುತ್ತೇವೆ ಎಂದು ಎಲ್ಲೂ ಪ್ರಯೋಗಿಸುವುದಿಲ್ಲ. ಯಾಕೆಂದರೆ, ಬರೆದಿಡುವ ಪದ್ಧತಿ ನಮ್ಮಲ್ಲಿ ಬಂದಿದ್ದು ಬಹಳ ಇತ್ತೀಚೆಗೆ. ದಕ್ಷಿಣದ ಪ್ರಭಾವದಿಂದ ಉತ್ತರದಲ್ಲಿ ತೀರಾ ಇತ್ತೀಚೆಗೆ ಬರೆದಿಡುವ ಕಾರ್ಯಕ್ರಮ ಶುರುವಾದರೂ ಪಾಶ್ಚಾತ್ಯರ ಬರೆವಣಿಗೆಗೂ ನಮ್ಮ ಬರವಣಿಗೆಗೂ ತೀರಾ ವ್ಯತ್ಯಾಸವಿದೆ. ಅಲ್ಲಿ ಸಾಮಾನ್ಯವಾಗಿ ಅಲ್ಪಸ್ವಲ್ಪ ಸಂಗೀತದ ಅಭ್ಯಾಸವಿರುವ ಎಲ್ಲರೂ ಯಾರದೇ ರಚನೆಯ ಕಾಗದವನ್ನಿಟ್ಟುಕೊಂಡು ಸರಳವಾಗಿ ಹಾಡಿಬಿಡಬಹುದು ಅಥವಾ ನುಡಿಸಬಹುದು. ಮುಂದಿನ ಕೆಲಸವೇನಿರುವುದಿಲ್ಲ ಅಲ್ಲಿ. ನಮ್ಮಲ್ಲಿ ಹಾಗಿಲ್ಲವಲ್ಲ, ಮುತ್ತುಸ್ವಾಮಿ ದೀಕ್ಷಿತರ ಈ ಕೃತಿಯನ್ನು ಅಥವಾ ಅಮೀರ್ ಖಾನ್ ಸಾಹೇಬರ ಈ ಬಂದಿಶ್‌ನ್ನು ನಾನು ಓದಿಕೊಂಡು ಕಲಿಯುತ್ತೇನೆ ಮತ್ತು ಹಾಡುತ್ತೇನೆ ಎನ್ನುವಂತಿಲ್ಲ. ಆಕಸ್ಮಾತ್ ಹಾಗೆಯೇ ಅನುಕರಣೆ ಮಾಡುವುದನ್ನು ಕಲಿತು ಹಾಡಿದರೆ ರಿಯಾಲಿಟಿ ಶೋಗಳ ವೈಭವದ ವೇದಿಕೆಯಲ್ಲಿ ನಾಲ್ಕಾರು ಚಪ್ಪಾಳೆಗಳೂ ಮತ್ತು ಅಲ್ಲಿನ ಜಡುjಗಳಿಂದ ಅತ್ಯಂತ ಕೃತಕವಾದ ಮತ್ತು ಭವಿಷ್ಯಕ್ಕೆ ಯಾವ ಕೆಲಸಕ್ಕೂ ಬಾರದ ಶಹಬ್ಟಾಸ್ ಗಿರಿಯು ದೊರೆಯಬಹುದಷ್ಟೆ. ಯಾಕೆಂದರೆ, ನಮ್ಮ ಸಂಗೀತವು ಊಜ್ಡಿಛಿಛ ಸಂಗೀತವಲ್ಲ. ನಮ್ಮಲ್ಲಿ ಸ್ವಾತಂತ್ರ್ಯಕ್ಕೆ ಎಷ್ಟು ಮಹಣ್ತೀವಿದೆಯೋ ಅಷ್ಟೇ ಅಡಚಣೆಗಳೂ ಇ¨ªಾವೆ. ಸಮಕ್ಕಿಂತ ಹಿಂದೆ ಎರಡು ಬಾರಿ ತಪ್ಪಿ ಬಿದ್ದರೆ “ಅನಾಗತ್ ತಿಹಾಯಿ’ಯೆಂದು ಹೇಳುತ್ತಾರೆಯೇ ಹೊರತು ಮತ್ತದೇ ತಪ್ಪಾದರೆ ಅದು ತಪ್ಪು ಎಂದು ಸಾಮಾನ್ಯ ಶ್ರೋತೃವಿಗೂ ತಿಳಿಯುತ್ತದೆ. ಹಾಗಾಗಿಯೇ ನಮ್ಮ ಶಾಸ್ತ್ರೀಯ ಸಂಗೀತ ಪ್ರಕಾರಗಳು ಗುರುಶಿಷ್ಯ ಪರಂಪರೆಯಲ್ಲಿ ನಡೆಯುತ್ತ ಬೆಳೆಯುತ್ತ ಬಂದಿವೆಯೇ ಹೊರತು ಪುಸ್ತಕದ ಮೂಲಕವಲ್ಲ!
ಭಾರತೀಯ ಸಂಗೀತದಲ್ಲಿ ದಿಗ್ಗಜರೆನಿಸಿಕೊಂಡವರು ಹೀಗೆ ಸಂಪೂರ್ಣ ಪಾಶ್ಚಾತ್ಯ ಸಂಗೀತದ ಆರ್ಕೆಸ್ಟ್ರಾಗಳಲ್ಲಿ ನುಡಿಸುವ ಯತ್ನವನ್ನು ಮಾಡಿ ಅಸಮಾಧಾನದಿಂದ ವೇದಿಕೆಯಿಳಿದ ಉದಾಹರಣೆಗೇನೂ ಕಮ್ಮಿಯಿಲ್ಲ. ದಕ್ಷಿಣ ಆಫ್ರಿಕಾದ ಡರ್ಬನ್ನಿನ ಫಿಲ್ ಹಾರ್ಮೋನಿಕ್ ಆರ್ಕೆಸ್ಟ್ರಾದ ಜೊತೆಗೆ ವೇದಿಕೆಯೇರಿ ಕುಳಿತ ಪಂ. ಹರಿಪ್ರಸಾದ್ ಚೌರಾಸಿಯಾ ಕೂಡ ಇಂಥದ್ದೇ ಒಂದು ಪರಿಸ್ಥಿತಿಯನ್ನು ಎದುರಿಸಿದ್ದರು.
ಆದರೆ, ಚೆನ್ನಾಗಿ ಪಾಶ್ಚಾತ್ಯ ಸಂಗೀತವನ್ನು ಅಭ್ಯಾಸ ಮಾಡಿದ ವಾದ್ಯ ಕಲಾವಿದ ಅಥವಾ ಗಾಯಕನಿಗೆ ಭಾರತೀಯ ಸಂಗೀತವನ್ನು ಅರ್ಥೈಸಿಕೊಳ್ಳುವುದು ಭಾರತೀಯ ಸಂಗೀತಗಾರ ಪಾಶ್ಚಾತ್ಯ ಸಂಗೀತವನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆಗಿಂತ ಸುಲಭ. ಯಾಕೆಂದರೆ, ಅವರಲ್ಲಿ ರಾಗದ ಸಂಕ್ಷಿಪ್ತ ರೂಪವಾದ ಸ್ಕೇಲ್ ಎಂಬ ಪದ್ಧತಿಯಿದೆ. ರಾಗದ ಸ್ವರಗಳನ್ನು ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ಅಳೆದು ಇದು ಆರೋಹಣ ಮತ್ತು ಇದು ಅವರೋಹಣ ಎಂದು ಹೇಳುವುದು ಸ್ಕೇಲ…. ಡರ್ಬನ್ನಿನಲ್ಲಿ ಅಂಥ ಮಿತ್ರನೊಬ್ಬನಿ¨ªಾನೆ. ಅವನ ಹೆಸರು Guy Buttery. ಖುದ್ದು ಪಾಶ್ಚಾತ್ಯ ಸಂಗೀತದ ಉತ್ತಮ ಕಲಾವಿದನೂ, ವರ್ಷಕ್ಕೊಮ್ಮೆ ತನ್ನ ಕಛೇರಿಗಳಿಗಾಗಿ ಜಗತ್ತಿನ ಪರ್ಯಟನೆ ಮಾಡುವಷ್ಟು ತನ್ನ ಸಂಗೀತಪ್ರಕಾರದಲ್ಲಿ ಪ್ರಖ್ಯಾತನಾದ ಈತ ದಿನಕ್ಕೆ ಕೆಲವೊಮ್ಮೆ ಬರೋಬ್ಬರಿ ಹತ್ತು ತಾಸು ಸತತವಾಗಿ ಕಿಶೋರಿ ಅಮೋನ್ಕರ್ ಸಂಗೀತವನ್ನು ಕೇಳುತ್ತಾನೆ. ಗಿಟಾರ್ ವಾದಕನಾದ ಈತ ತಕ್ಕಮಟ್ಟಿಗೆ ಸಿತಾರನ್ನೂ ನುಡಿಸುತ್ತಾನೆ. ಕೇವಲ ರೆಕಾರ್ಡನ್ನು ಕೇಳಿಸಿಕೊಂಡು ಇದು ವಿಲಾಯತ್ ಖಾನ್‌ರ ಬಾಜ್ ಎಂದು ಗುರುತಿಸುತ್ತಾನೆ. ಭಾರತೀಯ ಸಂಗೀತದ ಬಗ್ಗೆ ಈ ಕಲಾವಿದನಿಗಿರುವ ಮೋಹವು ಆತನ ಸಾಂಗೀತಿಕ ವ್ಯಕ್ತಿತ್ವದ ಬಗ್ಗೆ ಬಹಳ ಗೌರವವನ್ನು ಮೂಡಿಸುತ್ತದೆ.
ಬಗೆಬಗೆಯ ಸಂಗೀತದ ಮೇಳೈಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯತ್ನಗಳ ಫಲಾಫಲವನ್ನು ಹತ್ತಿರದಿಂದ ನೋಡಿದರೆ ಸಂಗೀತಕ್ಕಿರುವ ಅಂಥಾ¨ªೊಂದು ವಿಶಿಷ್ಟ ಗುಣವು ಕಾಣಿಸುತ್ತದೆ. ಸಂದರ್ಭ ಮತ್ತು ಪರಿಶ್ರಮದ ಅಧಾರದ ಮೇಲೆ ಒಂದು ಬಗೆಯ ಸಂಗೀತವು ಮತ್ತೂಂದು ಬಗೆಯ ಸಂಗೀತದೊಂದಿಗೆ ನೀರಿನಂತೆ ಒಂದಾಗಬಹುದು ಅಥವಾ ಪಾದರಸದಂತೆ ದ್ರವವಾಗಿ ಹರಿಯಲು ಜಿದ್ದಿಯೂ ಆಗಬಹುದು.
– ಕಣಾದ ರಾಘವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.