ಸ್ವರ್ಗಸದೃಶ ಮೌಂಟ್‌ ಟಿಟ್ಲಿಸ್‌


Team Udayavani, Aug 4, 2019, 5:00 AM IST

x-3

ಇತ್ತೀಚೆಗಿನ ನಮ್ಮ ಯೂರೋಪ್‌ ಪ್ರವಾಸದಲ್ಲಿ ಸ್ವಿಟ್ಜರ್‌ಲೆಂಡ್‌ ಕೂಡ ಸೇರಿತ್ತು. ಅಲ್ಲಿನ ಟಿಟ್ಲಿಸ್‌ ಎಂಬ ಹಿಮಾವೃತ್ತ ಪರ್ವತದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿದ್ದವು. ಹದಿನಾಲ್ಕು ದಿನಗಳ ಬಸ್‌ ಪ್ರಯಾಣ, ಹವಾಮಾನದ ಬದಲಾವಣೆ, ಪರ್ವತದ ಮೇಲಿನ ಥಂಡಿಯ ವಾತಾವರಣ, ಹಿಮಪಾತ ಇವುಗಳ ಬಗ್ಗೆ ಸ್ವಲ್ಪ ಆತಂಕವಿತ್ತು.ಧೈರ್ಯ ಮಾಡಿ ಹೊರಟೆವು.

ದುಬೈ ಮೂಲಕ ಹೊರಟು ಮೇ 30ರಂದು ಪ್ಯಾರಿಸ್‌ ತಲುಪಿ, ಅದಾಗಲೇ ಲಂಡನ್‌ ನೋಡಿಕೊಂಡು ಪ್ಯಾರಿಸ್‌ಗೆ ಬಂದಿದ್ದ ನಮ್ಮ ಪ್ರವಾಸಿ ತಂಡವನ್ನು ಸೇರಿಕೊಂಡೆವು. ಮರುದಿನದಿಂದ ಪ್ಯಾರಿಸ್‌, ಬೆಲ್ಜಿಯಮ್, ನೆದರ್‌ಲೆಂಡ್‌ ನೋಡಿಕೊಂಡು ಸ್ವಿಟ್ಜರ್‌ಲೆಂಡ್‌ಗೆ ಬಂದಿದ್ದು ಪ್ರವಾಸದ ಏಳನೆಯ ದಿನ. ಝೂರಿಚ್‌ನ ಹೋಟೆಲ್ನಿಂದ ಹೊರಟು ಲೂಝರ್ನ್ ಮೂಲಕ ಏಂಜೆಲ್ಬರ್ಗ್‌ ತಲುಪಿದೆವು.

ಏಂಜೆಲ್ಬರ್ಗ್‌ನಲ್ಲಿರುವ ಪ್ರವೇಶದ್ವಾರದಿಂದ ಒಳಹೋದ ನಂತರ ಲಿಫ್ಟ್ನಲ್ಲಿ ಐದು ಮಜಲುಗಳಷ್ಟು ಮೇಲೆ ಹೋಗಬಹುದು. ಈ ಮಜಲುಗಳಲ್ಲಿ ಹೋಟೆಲ್, ಅಂಗಡಿಗಳು ಇವೆ. ನಮಗೆ ಎರಡನೆಯ ಮಜಲಿನ ಹೋಟೆಲಿನಲ್ಲಿ ಊಟದ ಏರ್ಪಾಟಾಗಿತ್ತು. ಮತ್ತೆ ಮೂರು ಮಜಲುಗಳನ್ನು ಲಿಫ್ಟಿನಲ್ಲಿ ಏರಿದೆವು. ಇಲ್ಲಿ ಕೃತಕವಾಗಿ ನಿರ್ಮಿಸಲಾದ ಮಂಜುಗಡ್ಡೆಯ ಸುರಂಗವೊಂದಿದೆ. ಜಾರುವ ನೆಲದ ಮೇಲೆ ಸುತ್ತಲ ಮಂಜುಗಡ್ಡೆಯ ಚುಮುಚುಮು ಚಳಿಯನ್ನು ಅನುಭವಿಸುತ್ತ್ತ ನಡೆಯುವುದು ಮೋಜೆನಿಸುತ್ತದೆ. ಹೊರಬಂದರೆ ಇಲ್ಲಿಯೇ ಹಿಮದ ಹಾಸಿನ ದರ್ಶನವಾಗುತ್ತದೆ. ಅದನ್ನು ನೋಡಿಯೇ ನಮ್ಮ ‘ವಾವ್‌Ø’ಗಳು ಶುರುವಾಗುತ್ತವೆ.

ಇದಾದ ನಂತರ ಮೂರು ಕೇಬಲ್ ಕಾರ್‌ ಬಳಸಿ – ಮೊದಲನೆ ಯದರಲ್ಲಿ 4140 ಅಡಿ ಎತ್ತರದವರೆಗೆ, ಇನ್ನೊಂದರಲ್ಲಿ 5892 ಅಡಿಯವರೆಗೆ, ಮೂರನೆಯದರಲ್ಲಿ 7966 ಅಡಿಯವರೆಗೆ- ಮೇಲೇರಬಹುದು. ಕೇಬಲ್ ಕಾರಿನಲ್ಲಿ ಹೋಗುವಾಗ ಹೊರಗಿನೆ ನೋಟ ಬೆರಗುಗೊಳಿಸುತ್ತದೆ. ಕೊನೆಯ ಹಂತದ ಕೇಬಲ್ ಕಾರ್‌ ನಮ್ಮನ್ನು ಶಿಖರದ ಮೇಲುಭಾಗಕ್ಕೆ ಕರೆದೊಯ್ಯುತ್ತದೆ. ಇದು 360 ಡಿಗ್ರಿ ಸುತ್ತ ತಿರುಗುತ್ತ ಹೋಗುವ rotating cable car. ಈ ಪ್ರಯಾಣ ನಾಲ್ಕೂ ದಿಕ್ಕುಗಳ ನೋಟವನ್ನು ಒದಗಿಸುತ್ತ ವಿಭಿನ್ನ ಅನುಭವ ನೀಡುತ್ತದೆ. ಕೇಬಲ್ ಕಾರಿನಿಂದ ಹೊರಬಂದು ಕೆಲವು ಮೆಟ್ಟಿಲುಗಳನ್ನು ಹತ್ತಿ ಕಟ್ಟಡದ ಆಚೆ ಬಂದರೆ ನಾವು ಸಮುದ್ರ ಮಟ್ಟದಿಂದ 10, 020 ಅಡಿ ಎತ್ತರದಲ್ಲಿದ್ದೇವೆಂದು ತಿಳಿಸುವ ಒಂದು ಬೋರ್ಡ್‌ ನೋಡಿ ಎಲ್ಲರೂ ಸಂಭ್ರಮಿಸಿದೆವು.

ಕಾಜೋಲ್ ಮತ್ತು ಶಾರುಖ್‌ ಅಭಿನಯದ ದಿಲ್ವಾಲೇ ದುಲಾØನಿಯಾ ಲೇ ಜಾಯೇಂಗೇ ಸಿನಿಮಾದ ಶೂಟಿಂಗ್‌ ಇಲ್ಲಿ ನಡೆದಿತ್ತಂತೆ. ಹಾಗಾಗಿ ಅವರಿಬ್ಬರ ಕಟ್ಔಟ್ನ್ನು ಇಲ್ಲಿ ಇರಿಸಿದ್ದಾರೆ. ಅದನ್ನು ಕಂಡು ಭಾರತೀಯರಿಗೆ ಹೆಮ್ಮೆ ಅನಿಸುತ್ತದೆ. ಆ ಕಟ್ಔಟ್ ಜತೆ ಅವರದೇ ಪೋಸಿನಲ್ಲಿ ಫೋಟೊ ತೆಗೆದುಕೊಳ್ಳುವುದು ಯುವಜೋಡಿಗಳ ನೆಚ್ಚಿನ ವಿಷಯ. ನಾವು ಬಂದಾಗ ಹಿಮಪಾತವಾಗುತ್ತಿತ್ತು. ಸಾಕಷ್ಟು ಬೆಚ್ಚನೆಯ ಉಡುಪು ತೊಟ್ಟಿದ್ದರೂ ಚಳಿ ಮೈ ಕೊರೆಯುತ್ತಿತ್ತು.

ಅಬ್ಟಾ, ಸ್ವರ್ಗ ಎಂದರೆ ಇದೇ ಇರಬಹುದೇ ಎನ್ನುವ ಮಾಯಾಲೋಕದ ದರ್ಶನ ನಮಗಾಯಿತು. ಕಣ್ಣು ಹಾಯಿಸಿದಷ್ಟೂ ಎಲ್ಲೆಡೆ ಕಾಣುವ ಹಿಮದ ಹಾಸು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿತು.

ಕ್ಲಿಫ್ ವಾಕ್‌!

ಅಲ್ಲಿಂದ ಸ್ವಲ್ಪ ಮುಂದೆ ನಡೆದರೆ ಅಲ್ಲೊಂದು ತೂಗು ಸೇತುವೆ ಕ್ಲಿಫ್ ವಾಕ್‌ನ್ನು ಎರಡು ಶಿಖರಗಳ ನಡುವೆ ನಿರ್ಮಿಸಿದ್ದಾರೆ. ಕೆಳಗೆ ಪ್ರಪಾತ, ಆ ಕಡೆ ಈ ಕಡೆ ಹಿಮಾವೃತ್ತ ಬಂಡೆಗಲ್ಲುಗಳು. ಅದರ ಮೇಲೆ ನಡೆಯುತ್ತ ಹೋಗಿಬರುವುದೊಂದು ಅನನ್ಯ ಅನುಭವ. ಒಂದಷ್ಟು ಹೊತ್ತು ಆಟವಾಡಿ ಇನ್ನೂ ಮುಂದೆ ಹೋದಾಗ ಕಂಡಿದ್ದು ಮತ್ತೂಂದು ಟಿಕೆಟ್ ಕೌಂಟರ್‌. ಮೊದಲೇ ಕೊಂಡಿದ್ದರಿಂದ ಟಿಕೆಟ್ ತೋರಿಸಿ ಒಳಹೋದರೆ ಆರು ಜನ ಕೂರಬಹುದಾದ ಕೇಬಲ್ ಚೇರ್‌ ಕಾಣಬಂತು. ಇದರಲ್ಲಿ ಕುಳಿತು 500 ಮೀ.ಗಳಷ್ಟು ಕೆಳಗೆ ಇಳಿಯುವ ಅವಕಾಶವಿತ್ತು. ಅದು ಓಪನ್‌ಚೇರ್‌ ಆದುದರಿಂದ ಅದರಲ್ಲಿ ಕುಳಿತು ಕೆಳಗಿಳಿಯುವಾಗ ಭಯ ಮಿಶ್ರಿತ ಸಂಭ್ರಮ. ಆದರೆ ಸುತ್ತಲಿನ ನೋಟ ನಮ್ಮನ್ನು ಹಿಡಿದಿಟ್ಟುಕೊಳ್ಳುವುದರಿಂದ ಎಲ್ಲವನ್ನೂ ಮರೆತು ಅದರಲ್ಲಿ ತಲ್ಲೀನರಾಗಿಬಿಟ್ಟೆವು.

ಕೇಬಲ್ ಚೇರ್‌ನಿಂದ ಇಳಿದು ಒಂದಷ್ಟು ದೂರ ನಡೆದಾಗ ಕಂಡದ್ದು ಅಗಾಧವಾದ ಹಿಮದ ಹಾಸು, ಅಲ್ಲೊಂದಿಷ್ಟು ಜಾರುವುದಕ್ಕೋಸ್ಕರವಾಗಿ ಗುರುತಿಸಲಾದ ಸ್ಥಳ. ಅಲ್ಲಿರುವ ಪ್ಲಾಸ್ಟಿಕ್‌ ಮಣೆಗಳ ಮೇಲೆ ಕುಳಿತು ಇನ್ನೂರು ಅಡಿಗಳಷ್ಟು ಜಾರುವ ವಿಶಿಷ್ಟ ಅವಕಾಶದ ಸದುಪಯೋಗ ಮಾಡಿಕೊಳ್ಳದೆ ಇರಲಾಗಲಿಲ್ಲ. ಅದೊಂದು ರೋಮಾಂಚನಕಾರಿಯಾದ ಅನುಭವವೇ ಸರಿ. ಕೆಳಗೆ ಜಾರಿ ಇಳಿದವರು ಮೇಲೆ ಬರಲು ಎಸ್ಕಲೇಟರ್‌ ಸೌಲಭ್ಯವಿದೆ. ಅದರ ಮೇಲೆ ನಿಂತು ಮೊದಲಿನ ಸ್ಥಳಕ್ಕೆ ಬಂದು, ನಂತರ ಕೇಬಲ್ ಚೇರ್‌ ಮೂಲಕ ವಾಪಸಾದೆವು. ಮತ್ತೆ ಕೇಬಲ್ ಕಾರುಗಳ ಮೂಲಕ ಪರ್ವತದ ಬುಡಕ್ಕೆ ಬಂದಾಗ ಕನಸಿನ ಲೋಕದಿಂದ ಹೊರಬಂದಂತಹ ಪರಿಸ್ಥಿತಿ ನಮ್ಮದಾಗಿತ್ತು.

ಟಿಟ್ಲಿಸ್‌ ಪರ್ವತ
1435ರ ದಾಖಲೆಗಳ ಪ್ರಕಾರ ಈ ಪರ್ವತಕ್ಕೆ ಟ್ಯುಟಿಲೋಸ್‌ ಎಂಬ ಸ್ಥಳೀಯ ರೈತನೊಬ್ಬನ ಹೆಸರಿನಿಂದ ಟಟಲ್ಸ್ ಬರ್ಗ್‌ (Tuttelsberg) ಅಂದರೆ ಟ್ಯುಟಿಲೋಸ್‌ ಪರ್ವತ (Tutilos mountain) ಎಂದು ಕರೆಯಲಾಗುತ್ತಿತ್ತು. ನಂತರ ಅದು ಟಿಟ್ಲಿಸ್‌ಬರ್ಗ್‌ (Titlisberg) ಎಂದಾಗಿ ಈಗ ಟಿಟ್ಲಿಸ್‌ ಎನ್ನುವ ಹೆಸರೇ ಪ್ರಚಲಿತದಲ್ಲಿದೆ.

ಲೂಝರ್ನ್ ಸರೋವರದ ದಕ್ಷಿಣದಲ್ಲಿರುವ ಟಿಟ್ಲಿಸ್‌, ಯೂರೋಪಿಯನ್‌ ಆಲ್ಫ್ಸ್ ಪರ್ವತದ ಒಂದು ಶಿಖರ. ಸಮುದ್ರ ಮಟ್ಟದಿಂದ 3, 238 ಮೀ. ಗಳಷ್ಟು ಎತ್ತರವಿದೆ 10, 623 ಅಡಿ. ಇದು ಉತ್ತರ ಸ್ವಿಟ್ಜರ್‌ಲೆಂಡ್‌ ಪರ್ವತ ಶ್ರೇಣಿಯ ಅತಿ ಎತ್ತರದ ಶಿಖರ. ಉತ್ತರಭಾಗದಲ್ಲಿ ಟಿಟ್ಲಿಸ್‌ ಹಿಮನದಿ (Titlis Glacier) ಇದೆ. ಭೂ ತಾಪಮಾನದ ಏರಿಕೆಯಿಂದಾಗಿ ಇದೂ ಕೂಡ ಕರಗುತ್ತಿದ್ದು, ಕೆಲವೇ ವರ್ಷಗಳಲ್ಲಿ ಕಣ್ಮರೆಯಾಗಬಹುದೆಂಬ ಆತಂಕವಿದೆ.

ತಲುಪುವ ಬಗೆ : ಹತ್ತಿರದ ವಿಮಾನ ನಿಲ್ದಾಣಗಳು ಬರ್ನ್ ಮತ್ತು ಝೂರಿಚ್. ಏಂಜೆಲ್ಬರ್ಗ್‌ನಿಂದ 157 ಕಿ. ಮೀ., ಮತ್ತು ಝೂರಿಚ್ನಿಂದ 101 ಕಿ. ಮೀ. ದೂರವಿದೆ. ರೈಲು ಮತ್ತು ರಸ್ತೆಯ ಮೂಲಕವೂ ಇಲ್ಲಿಗೆ ತಲುಪಬಹುದು.

ಟಾಪ್ ನ್ಯೂಸ್

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-ssss

J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.