ಮರದಡಿಯ ಹನುಮ ಮತ್ತು ಪೊಟರೆಯ ಶಿಲುಬೆ


Team Udayavani, Dec 8, 2019, 5:18 AM IST

sd-6

ಮನೆಯ ಹಿಂದಿನ ಚಿಂಬೈ ರಸ್ತೆಯ ಬದಿಯಲ್ಲಿರುವ ಅಶ್ವತ್ಥ ಮರದ ಅಡಿಯಲ್ಲಿ ಸ್ಥಾಪಿತವಾಗಿದ್ದ ಹನುಮನ ಗುಡಿಯ ಇರವಿನ ಬಗ್ಗೆ ತಿಳಿದುಬಂದದ್ದು ನನಗೆ ಸಹಾಯಕಿಯಾಗಿ ಬರುತ್ತಿದ್ದ ಜ್ಯಾನೆಟ್ಟಳಿಂದ. ಅದೆಷ್ಟು ವರ್ಷಗಳಿಂದ ಆ ಗುಡಿ ಅಲ್ಲಿದೆಯೋ ತಿಳಿಯದು. ಆ ರಸ್ತೆಯಲ್ಲಿ ಹಲವು ಬಾರಿ ಹೋಗಿದ್ದರೂ ಆ ವರೆಗೆ ಅದು ನನ್ನ ಗಮನಕ್ಕೆ ಬಂದಿರಲಿಲ್ಲ. ದೇವರು ಎಲ್ಲೆಲ್ಲೂ ಇರುವನೆಂಬುದನ್ನು ಯಥಾವತ್‌ ಸಾಬೀತುಪಡಿಸುವಂತೆ, ಮುಂಬಯಿಯ ಗಲ್ಲಿಗಲ್ಲಿಗಳಲ್ಲಿ, ಸಂದುಗೊಂದುಗಳಲ್ಲಿ, ಎಲ್ಲೆಂದರಲ್ಲಿ ಇರುವ ದೇವರ ಅನಧಿಕೃತ ನಿವಾಸಗಳು ಅಧಿಕೃತ ವಾಸಸ್ಥಳಗಳ ಸಂಖ್ಯೆಯನ್ನು ಅದೆಷ್ಟೋ ಪಟ್ಟು ಯಾವಾಗಲೋ ಮೀರಿರುವಾಗ, ಅವೆಲ್ಲವುದರ ಕಡೆ ಗಮನ ಕೊಡುವುದೂ ಸುಲಭಸಾಧ್ಯವಲ್ಲವಷ್ಟೇ.

ಜ್ಯಾನೆಟ್ಟಳ ಪರಿಚಯವಾದಾಗ ತಾನು “ಹಿಂದು-ಕ್ರಿಶ್ಚಿಯನ್‌’ ಎಂದಿದ್ದಳು. ಹಾಗೆಂದರೇನೆಂದು ಕೇಳಿದ್ದಕ್ಕೆ, “ಹಿಂದು-ಕ್ರಿಶ್ಚಿಯನ್‌ ಅಂದ್ರೆ ನಿಮಗೆ ಗೊತ್ತಿಲ್ಲವೇ?’ ಎಂದು ನನಗೇ ಮರುಪ್ರಶ್ನೆ ಹಾಕಿ ಅಚ್ಚರಿಪಟ್ಟಿದ್ದಳು. ಮುಂದೆ ಮಾತ್ರ ಹಬ್ಬ-ಹುಣ್ಣಿಮೆ, ದೇವರುದಿಂಡರ ಬಗ್ಗೆ ಅವಳೇ ನನಗೆ ಹೇಳಿಕೊಡುವಂತಾಯಿತು. ಇವತ್ತು ಆ ಹಬ್ಬವಲ್ಲವೆ, ಇವತ್ತು ಈ ಉಪವಾಸ ಉಂಟಲ್ಲ , ಎಂದು ನನಗೆ ಗೊತ್ತಿಲ್ಲದ ಎಷ್ಟೋ ಹಿಂದೂ ಪದ್ಧತಿಗಳನ್ನು, ಹಬ್ಬಗಳನ್ನು ಘೋಷಿಸಿ ನನ್ನನ್ನು ತಬ್ಬಿಬ್ಬುಗೊಳಿಸುತ್ತಿದ್ದಳು. ಅವಳ ಪ್ರಕಟಣೆಗಳು ನನ್ನ ಮಟ್ಟಿಗೆ ಹೊಸ ಮಾಹಿತಿಯಾದರೂ, ಅದನ್ನು ತೋರಿಸಿಕೊಳ್ಳದೆ, “ಹೌದೌದು’ ಎಂದು ಉತ್ತರಿಸುತ್ತಿದ್ದುದೂ ಇತ್ತು. ಅಂತೂ ಹಿಂದೂ-ಕ್ರಿಶ್ಚಿಯನ್‌ ಅಂದರೆ ಏಕಕಾಲಕ್ಕೆ ಹಿಂದುವೂ, ಕ್ರೈಸ್ತರೂ ಆಗಿರುವುದೆಂಬ ಸುಲಭದ ಉತ್ತರ ಕ್ರಮೇಣವಾಗಿ ದೊರಕಿತು.

ಆವತ್ತು ಬೆಳಿಗ್ಗೆ, “ಇವತ್ತು ಹನುಮ ಜಯಂತಿ, ನಿಮಗೆ ಆ ಗುಡಿ ತೋರಿಸುತ್ತೇನೆ’ ಎಂದು ಅವಳೇ ಮುಂದಾದಾಗ, ನೋಡಿಬಿಡುವ ಒಂದು ಸಾಹಸ ಎಂದು ಒಪ್ಪಿದೆ. ಸಂಜೆ ಕರೆದೊಯ್ಯಲು ಬಂದಾಗ, ಕ್ಯಾಮೆರಾ ಹಿಡಿದು ಹೊರಟೆ. ಎಷ್ಟೋ ದಿನಗಳಿಂದ ಆ ಗುಡಿಯ ಕಾರಣೀಕದ ಬಗ್ಗೆ ಎಡೆಬಿಡದೆ ಹೇಳಿ, ಈಗ ನನ್ನನ್ನು ಒಪ್ಪಿಸಿ ಕರೆದುಕೊಂಡು ಹೋಗುವಾಗ ಅದೇನೋ ದಿಗ್ವಿಜಯ ಸಾಧಿಸಿದ ಗತ್ತು ಅವಳಲ್ಲಿದ್ದುದನ್ನು ಗಮನಿಸಿದೆ. ಇರಲಿ, ಪಾಪ, ನನ್ನ ಹೆಳೆಯಲ್ಲಿ ಗತ್ತು ತೋರಿಸುವುದಾದರೆ ತೋರಿಸಲಿ ಎಂದು ಒಳಗೊಳಗೆ ನಗು ಬಂದರೂ ಸುಮ್ಮನಿದ್ದೆ.

ಹೋಗಿ ಗುಡಿಯ ಎದುರು ನಿಂತು ಗುಡಿಯನ್ನು ನೋಡುತ್ತಿದ್ದಂತೆ, ಅದು ಯಾವ ಮಾಯಕದಲ್ಲೋ, ನಾವು ಪೂಜೆಯಲ್ಲಿ ಭಾಗವಹಿಸುವ ಸಾಲಿನ ಭಾಗವಾಗಿ ಬಿಟ್ಟಿದ್ದೆವು. ದೀಪದ ಮಾಲೆಗಳು ಗುಡಿಯನ್ನು ಮಾತ್ರವಲ್ಲ, ಇಡೀ ಮರವನ್ನು ಅಲಂಕರಿಸಿದ್ದುವು. ಸಾಲಿನಲ್ಲಿ ನಿಂತು ಪೂಜೆ ನೋಡುವಾಗ ಅಗಲಕಿರಿದಾದ ಆ ರಸ್ತೆಯಲ್ಲಿ ಹಾದುಹೋಗುವ ಕಾರು, ರಿಕ್ಷಾ, ಸ್ಕೂಟರುಗಳಿಂದ ತರಚಿಸಿಕೊಳ್ಳದೆ ನಿಲ್ಲುವುದೇ ಒಂದು ದೊಡ್ಡ ಸಾಹಸವೆಂಬುದರ ಅರಿವಾಗಲು ತಡವಾಗಲಿಲ್ಲ. ಪೂಜೆ ಸಾಗುತ್ತಿದ್ದಂತೆ ಕ್ಯಾಮೆರಾ ಹೊರತೆಗೆದು, ಒಳ್ಳೆಯ ಚಿತ್ರಕ್ಕಾಗಿ ರಸ್ತೆಯ ಇನ್ನೊಂದು ಬದಿಗೆ ಹೋದೆ. ಗುಡಿಯ ನೇರ ಎದುರಿಗಿದ್ದ ಅಂಗಡಿಯ ದಂಡೆಯ ಮೇಲೆ ನಿಂತು ಹಿಂದೆ ತಿರುಗಿದರೆ, ಏನು ನೋಡುವುದು? ಮೇಲಿನಿಂದ ಕೆಳಗಿನವರೆಗೆ ನೇತಾಡುತ್ತಿದ್ದ ಮಾಂಸದ ತುಂಡುಗಳು! ತಟಕ್ಕನೆ ಓಡಿ ಬಂದು ಪುನಃ ನನ್ನ ಸ್ಥಾನ ಸೇರುವುದರೊಳಗೆ ಟ್ಯಾಕ್ಸಿಯೊಂದು ಪಾದದ ಮೇಲೆ ಹಾಯದಿದ್ದುದು ನನ್ನ ಪುಣ್ಯ ಅಥವಾ ಹನುಮನ ದಯೆಯೋ!

ಗುಡಿಯೊಳಗೆ ಹೋಗಿ ಹನುಮಂತನಿಗೆ ಕೈ ಮುಗಿಯುತ್ತ, ಜ್ಯಾನೆಟ್ಟಳ ಎಡೆಬಿಡದ ಮಾರ್ಗದರ್ಶನದಲ್ಲಿ ಕುಂಕುಮ ಹಿಡಿಸಿ, ಹೂ ಏರಿಸಿದ್ದಾಯಿತು; ತೆಂಗಿನಕಾಯಿಯನ್ನು ಅಲ್ಲೇ ಖರೀದಿಸಿ ಅಲ್ಲೇ ಒಪ್ಪಿಸಿದ್ದೂ ಆಯಿತು. ಕಷ್ಟದಲ್ಲಿ ಒಬ್ಬರು ನಿಲ್ಲಬಹುದಾದ ಆ ಗುಡಿಯಿಂದ ಹೊರಗೆ ಬಂದರೆ ರಸ್ತೆಯ ಅಂಚಿನಲ್ಲಿ ದೊಡ್ಡ ಹಂಡೆಗಳೆದುರು ಕುಳಿತ ಹುಡುಗರು ಪ್ರಸಾದ ಹಂಚಲು ಸುರುಮಾಡಿದ್ದರು. ಅಲ್ಲಿನ ಪ್ರಸಾದದ ರುಚಿಯ ಬಗ್ಗೆ ಕೆಲಕೆಲವು ದಿನಗಳಿಂದಲೇ ಜ್ಯಾನೆಟ್ಟಳ ಬಾಯಿಯಿಂದ ಕೇಳಿಕೇಳಿ ನನ್ನ ನಾಲಿಗೆ ಚುರುಕುಗೊಂಡಿತ್ತು. ಅಂತೂ, ಎಲೆಯ ದೊಣ್ಣೆಯಲ್ಲಿ ಪ್ರಸಾದ ಕೈಗೆ ಬಂತು,- ಪೂರಿ, ಶೀರ, ಪುಲಾವ್‌. ಎದುರಿನ ಅಂಗಡಿಯತ್ತ ಕಣ್ಣಕೊಡಿಯನ್ನೂ ಹಾಯಿಸದೆ, ಪ್ರಸಾದವನ್ನು ಹಿಡಿದು ಅಲ್ಲಿಂದ ಹೊರಟೆ.

ಇದಾಗಿ, ಕೆಲವು ದಿನಗಳಾಗಿದ್ದವು. ನಮ್ಮ ರಸ್ತೆಯ ತುದಿಯ ಆಂಡ್ರೂಸ್‌ ಇಗರ್ಜಿಯ ಬಳಿ ತಿರುಗಿ ಬ್ಯಾಂಡ್‌ಸ್ಟಾಂಡ್‌ನ‌ತ್ತ ಹೋಗುತ್ತಿರುವಾಗ, ಫ‌ಕ್ಕನೆ ಎಡಗಡೆಗೆ ದೃಷ್ಟಿ ಹೋಯಿತು. ಮಾರ್ಗದ ಬದಿಯ ಹುಣಸೆಮರದಲ್ಲಿನ ಪೊಟರೆಯ ಮೇಲ್ಭಾಗದಲ್ಲೊಂದು ಸಣ್ಣ ಶಿಲುಬೆ ಕಂಡಿತು. ಸುಮಾರು ಎಂಟಿಂಚು ಅಳತೆಯ ಆ ಪೊಟರೆಯೊಳಗೆ ಸಣ್ಣಸಣ್ಣ ಪ್ರತಿಮೆಗಳು ಮತ್ತು ಅದಕ್ಕೊಂದು ಹೂವಿನ ಹಾರ. ಹತ್ತಿರ ಹೋಗಿ ನೋಡಿದರೆ, ಮೇರಿ-ಜೋಸೆಫ‌ರ ಪ್ರತಿಮೆಗಳಂತಿದ್ದವು. ದಿನ ಸರಿದಂತೆ ಹೂವಿನಹಾರವು ಪ್ರತಿದಿನ ಬದಲಾಗುವುದನ್ನೂ ಗಮನಿಸಿದೆ. ಮುಂದೊಂದು ದಿನ ಅದಕ್ಕೊಂದು ಕಬ್ಬಿಣದ ನೆಟ್ಟೂ ಬಂತು.

ಪೊಟರೆಯ ಶಿಲುಬೆಯ ಬಗ್ಗೆ ಜ್ಯಾನೆಟ್ಟಳಿಗೆ ಹೇಳುವ ಸರದಿ ನನ್ನದಾಯಿತು. ಪ್ರತೀ ವಾರ ಇಗರ್ಜಿಗೆ ಹೋಗುತ್ತಿದ್ದರೂ ಅವಳು ಅದನ್ನು ಗಮನಿಸಿರಲಿಲ್ಲವೆಂದು ತಿಳಿದಾಗ ನನಗೆ ಯಾಕೋ ಎಲ್ಲಿಲ್ಲದ ಮುದವೆನಿಸಿತು. ಸಿಕ್ಕಿದ ಅವಕಾಶವನ್ನು ಬಿಟ್ಟುಕೊಡದೆ, ಹೆಮ್ಮೆಯಲ್ಲಿ ಅದರ ಬಗ್ಗೆ ವಿವರಿಸಿ ಹೇಳಿ, ಫೋಟೋ ತೋರಿಸಿ, ಹೋಗಿ ನೋಡುವಂತೆ ಅಗತ್ಯಕ್ಕಿಂತ ತುಸು ಹೆಚ್ಚೇ ಒತ್ತಾಯಿಸಿದೆ.

ಭವ್ಯ ದೇವಾಲಯಗಳಲ್ಲಿ, ಬೃಹತ್‌ ಇಗರ್ಜಿಗಳಲ್ಲಿ ಇರುವ ದೈವತ್ವವು ಹೊರಗೆ ಬಂದು ಬೀದಿಗಿಳಿದು ಮರದಡಿಯ ಗುಡಿಯಲ್ಲೋ, ಪೊಟರೆಯೊಳಗಿನ ಶಿಲುಬೆಯಲ್ಲೋ ನೆಲೆಸುವುದರಿಂದ ಜನಸಾಮಾನ್ಯರಿಗೆ ಸುಲಭವಾಗಿ ಲಭಿಸುವಂತಾಗುವುದೇನೋ ಹೌದು. ಬೆಳಗಿನ ಹೊತ್ತು ಕೆಲಸಕ್ಕೆ ಹೋಗುವ ಜನರು ಹತ್ತಿರದ ಬಸ್ಸು ನಿಲುಗಡೆಗೋ, ರೈಲು ನಿಲ್ದಾಣಕ್ಕೋ ಧಾವಿಸುವ ಗಡಿಬಿಡಿಯಲ್ಲಿ, ಇಂಥ ಗುಡಿಗಳೆದುರು ಅವಸರವಸರವಾಗಿ ರಸ್ತೆಯಲ್ಲೇ ಮೆಟ್ಟು ಜಾರಿಸಿ, ಕೈಜೋಡಿಸಿ ನಿಂತು, ದೈವತ್ವದ ಕ್ಷಣಿಕ ಅನುಭವವನ್ನು ಆನಂದಿಸಿ ಮುಂದೆ ಸರಿಯುವುದು ನಗರಗಳಲ್ಲಿ ಸಾಮಾನ್ಯ ದೃಶ್ಯ. ಹೆಚ್ಚಿನ ಪ್ರತಿಷ್ಠಿತ ದೇವಾಲಯಗಳಲ್ಲಿ ಒಳಗಿನವರೆಗೆ ಹೋಗಿ ಗರ್ಭಗುಡಿಯೆದುರು ನಿಂತು ಹಣಿಕಿದರಷ್ಟೇ ದರ್ಶನಭಾಗ್ಯ, ಅದರ ಮೇಲೆ ಉದ್ದಾನುದ್ದದ ಕ್ಯೂನಲ್ಲಿ ಸಮಯ ದಂಡ! ಬೀದಿಬದಿಯ ಭಗವಂತನಾದರೋ ಬಯಲು ಮತ್ತು ಆಲಯಗಳ ನಡುವೆ ಇರುವ ಜನರ ಕೈಗೆಟಕುವ ದೇವರು!

ಮಿತ್ರಾ ವೆಂಕಟ್ರಾಜ್‌

ಟಾಪ್ ನ್ಯೂಸ್

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

6

Karkala: ಇಳಿಜಾರಿನಲ್ಲಿ ಯು-ಟರ್ನ್; ಅತ್ತೂರು ರಸ್ತೆಯಲ್ಲಿ ಅಪಾಯ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

7

Kundapura: ಚೋರಾಡಿ; ಕರೆ ಬಂದರೆ ಬೆಟ್ಟ ಹತ್ತಬೇಕು!

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.