ಶ್ರುತಿ ಬದ್ಧ ಹಾಡುಗಳು

Team Udayavani, Dec 31, 2017, 6:20 AM IST

shruti.jpg

ವರ್ಷ ಮುಗಿಯುತ್ತ ಬಂದಂತೆ ಸಹಜವಾಗಿಯೇ ಈ ಲೆಕ್ಕಾಚಾರ ನಡೆಯುತ್ತದೆ. ಈ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನಟಿ ಯಾರು? ಅತೀ ಹೆಚ್ಚು ಗೆಲುವು ನೋಡಿದ್ದು ಯಾರು? ಪ್ರಶಸ್ತಿ-ಸಾಧನೆಗಳ ಪಟ್ಟಿಯಲ್ಲಿ ಯಾರ ಹೆಸರು ಮುಂಚೂಣಿಯಲ್ಲಿತ್ತು ಎಂಬಂತಹ ಪ್ರಶ್ನೆಗಳು ಸಹಜವಾಗಿಯೇ ಕೇಳಿಬರುತ್ತದೆ. ಆ ನಿಟ್ಟಿನಲ್ಲಿ ಈ ವರ್ಷದ ನಟಿ ಯಾರು ಎಂದು ಹುಡುಕುತ್ತ ಹೋದರೆ, ಮೊದಲಿಗೆ ಸಿಗುವ ಹೆಸರು ಶ್ರುತಿ ಹರಿಹರನ್‌ ಅವರದ್ದು.

ಶ್ರುತಿ ಅಭಿನಯದ ಒಟ್ಟು ಆರು ಚಿತ್ರಗಳು ಬಿಡುಗಡೆಯಾಗಿವೆ. ಶ್ರುತಿ ಅಭಿನಯದ ಆರು ಚಿತ್ರಗಳು ಈ ವರ್ಷ ಬಿಡುಗಡೆಯಾಗಿದೆ. ವರ್ಷದ ಆರಂಭದಲ್ಲಿ ಮೊದಲಿಗೆ ಬ್ಯೂಟಿಫ‌ುಲ್‌ ಮನಸುಗಳು ಬಿಡುಗಡೆಯಾಯಿತು. ಅಲ್ಲಿಂದ ಇಲ್ಲಿಯವರೆಗೂ ಊರ್ವಿ, ಹ್ಯಾಪಿ ನ್ಯೂ ಇಯರ್‌, ವಿಸ್ಮಯ, ತಾರಕ್‌ ಮತ್ತು ಉಪೇಂದ್ರ ಮತ್ತೆ ಬಾ ಚಿತ್ರಗಳು ಬಿಡುಗಡೆಯಾಗಿವೆ. ಈ ಮೂಲಕ ಈ ವರ್ಷ ಅತೀ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಶ್ರುತಿ ಹರಿಹರನ್‌ ಅವರ¨ªಾಗುತ್ತದೆ. ಅಷ್ಟೇ ಅಲ್ಲ, ಬ್ಯೂಟಿಫ‌ುಲ್‌ ಮನಸುಗಳು ಚಿತ್ರದ ಅಭಿನಯಕ್ಕಾಗಿ ಅವರು ರಾಜ್ಯ ಸರ್ಕಾರ ಕೊಡುವ ಅತ್ಯುತ್ತಮ ನಟಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.

2017ರಲ್ಲಿ ವರ್ಷದ ನಟಿ ಸ್ಥಾನಕ್ಕೆ ಭಡ್ತಿ ಪಡೆದಿದ್ದ ಶ್ರುತಿಗೆ ಕಳೆದ ವರ್ಷ ಶ್ರುತಿ ಹರಿಹರನ್‌ ಪಾಲಿಗೆ ಅಷ್ಟೇನೂ ಚೆನ್ನಾಗಿರಲಿಲ್ಲ ಎಂದರೆ ತಪ್ಪಿಲ್ಲ. ಕಳೆದ ವರ್ಷ ಶ್ರುತಿ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ಜೈ ಮಾರುತಿ 800, ಮಾದ ಮತ್ತು ಮಾನಸಿ ಮತ್ತು ಸಿಪಾಯಿ ಚಿತ್ರಗಳು ಸೋತಿದ್ದಷ್ಟೇ ಅಲ್ಲ, ಈ ಚಿತ್ರಗಳು ಶ್ರುತಿಗೂ ಹೆಸರು ತಂದುಕೊಡಲಿಲ್ಲ. ಇನ್ನು ಗೋಧಿ ಬಣ್ಣ ಸಾಧಾರಣ ಮೈಕಟ್ಟು  ಚಿತ್ರ ಸೂಪರ್‌ ಹಿಟ್‌ ಆದರೂ, ಅದರ ಕ್ರೆಡಿಟ್‌ ಸಿಕ್ಕಿದ್ದು ಅನಂತ್‌ನಾಗ್‌ ಮತ್ತು ರಕ್ಷಿತ್‌ ಶೆಟ್ಟಿ ಅವರಿಗೇ ಹೆಚ್ಚು.

ಹಾಗಾಗಿ ಒಂದು ಸುಮಾರಾದ ವರ್ಷ ಕಳೆದ ಶ್ರುತಿ ಹರಿಹರನ್‌ಗೆ ಈ ವರ್ಷದ ಆರಂಭವೇ ಚೆನ್ನಾಗಿದೆ ಎಂದರೆ ತಪ್ಪಿಲ್ಲ. ಪ್ರಮುಖವಾಗಿ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಬ್ಯೂಟಿಫ‌ುಲ್‌ ಮನಸುಗಳು ಚಿತ್ರವು ಶ್ರುತಿ ಹರಿಹರನ್‌ಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಈ ಚಿತ್ರದಲ್ಲಿ ನಂದಿನಿ ಎಂಬ ಕೆಳ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಅವರು, ಚಿತ್ರದ ಹೈಲೈಟ್‌ ಅಷ್ಟೇ ಅಲ್ಲ, ತಾವೊಬ್ಬ ಒಳ್ಳೆಯ ನಟಿ ಎಂಬುದನ್ನು ಮತ್ತೂಮ್ಮೆ ಸಾಬೀತು ಮಾಡಿದರು. ಚಿತ್ರ ನೋಡಿದವರಿಂದ ಶ್ರುತಿಗೆ ಮೆಚ್ಚುಗೆಯ ಮಾತುಗಳು ಕೇಳಿ ಬಂತು. ಅದಾಗಿ, ಕೆಲವೇ ತಿಂಗಳ ಅಂತರದಲ್ಲಿ, ಅವರಿಗೆ ಆ ಚಿತ್ರಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿಯೂ ಸಿಕ್ಕಿತು.

ಬ್ಯೂಟಿಫ‌ುಲ್‌ ಮನಸುಗಳು ಚಿತ್ರ ನೀಡಿದ ಹೆಸರನ್ನು ಊರ್ವಿ ಮುಂದುವರೆಸಿಕೊಂಡು ಹೋಯಿತು. ಆದರೆ, ಚಿತ್ರ ಗೆಲ್ಲಲ್ಲಿಲ್ಲ. ಅಷ್ಟೇ ಅಲ್ಲ, ಆ ನಂತರ ಬಿಡುಗಡೆಯಾದ ಶ್ರುತಿ ಹರಿಹರನ್‌ ಅಭಿನಯದ ಯಾವೊಂದು ಚಿತ್ರ ಸಹ ಗೆಲ್ಲಲಿಲ್ಲ. ಈ ಬೇಸರ ಶ್ರುತಿ ಅವರಿಗೆ ಇರಬಹುದು. ಆದರೂ ಒಂದು ಕಡೆ ಅತೀ ಹೆಚ್ಚು ಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದ ಕಾರಣಕ್ಕೆ 2017 ಅವರ ಪಾಲಿಗೆ ಅವಿಸ್ಮರಣೀಯ ವರ್ಷವಾಗಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಈ ವರ್ಷವೇನೋ ಆಯಿತು. ನಾಳೆಯಿಂದ ಮುಂದಿನ ವರ್ಷ. ಶ್ರುತಿ ಇನ್ನೂ ಏನೇನು ಸರ್‌ಪ್ರೈಸ್‌ಗಳನ್ನು ಪಡೆಯಲಿದ್ದಾರೋ, ಯಾರಿಗೆ ಗೊತ್ತು?

ಟಾಪ್ ನ್ಯೂಸ್

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.