ಹನ್ನೆರಡು ರಾಜಕುಮಾರಿಯರು


Team Udayavani, Sep 16, 2018, 6:35 AM IST

hannerdu-rajakumariyaruu.jpg

ದೇಶವನ್ನು ಆಳುವ ರಾಜನಿಗೆ ಮಕ್ಕಳಿರಲಿಲ್ಲ. ಅದಕ್ಕಾಗಿ ಹಂಬಲಿಸಿಕೊಂಡಿದ್ದ ಅವನಿಗೆ ಮಾಟಗಾತಿಯೊಬ್ಬಳು ಭೇಟಿಯಾದಳು. ಒಂದು ದಾಳಿಂಬೆಯ ಹಣ್ಣನ್ನು ಕೊಟ್ಟಳು. “”ಇದರ ಒಳಗಿರುವ ಎಸಳುಗಳನ್ನು ನಿನ್ನ ರಾಣಿಗೆ ತಿನ್ನಲು ಕೊಡು. ಎಸಳುಗಳಿರುವಷ್ಟೇ ಸಂಖ್ಯೆಯ ಮಕ್ಕಳನ್ನು ಪಡೆಯುವೆ” ಎಂದು ಹೇಳಿದಳು. ರಾಜನು ದಾಳಿಂಬೆ ಹಣ್ಣನ್ನು ತಿನ್ನಲು ತನ್ನ ಹೆಂಡತಿಗೆ ಹೇಳಿದ. ಹನ್ನೆರಡು ಎಸಳುಗಳನ್ನು ತಿನ್ನುವಾಗ ಅವಳಿಗೆ ಸಾಕೆನಿಸಿತು. ರಾಣಿ ಹನ್ನೆರಡು ಮಂದಿ ಹೆಣ್ಣುಮಕ್ಕಳನ್ನು ಹೆತ್ತಳು.

ರಾಜನು ಮಕ್ಕಳನ್ನು ಮುದ್ದಾಗಿ ಸಲಹಿದ. ವಿದ್ಯೆಗಳನ್ನು ಕಲಿಸಿದ. ಸುಂದರಿಯರಾಗಿದ್ದ ಅವರಿಗೆ ಮದುವೆ ಮಾಡಬೇಕೆಂದು ನಿರ್ಧರಿಸಿದಾಗ ಅವರು, “”ಅಪ್ಪಾ$, ನಮಗೆ ಮದುವೆ ಬೇಡ. ಅದಕ್ಕಾಗಿ ಪ್ರಯತ್ನಿಸಬೇಡಿ” ಎಂದು ಸ್ಪಷ್ಟವಾಗಿ ಹೇಳಿದರು. ಈ ನಿರ್ಧಾರಕ್ಕೆ ಕಾರಣವೇನೆಂಬುದು ರಾಜನಿಗೆ ತಿಳಿಯಲಿಲ್ಲ. ಅವನು ಇನ್ನೊಂದು ಕುತೂಹಲದ ವಿಷಯವನ್ನೂ ಗಮನಿಸಿದ. ರಾತ್ರೆ ಕುಮಾರಿಯರು ತಮ್ಮ ಕೋಣೆಯಲ್ಲಿ ಮಲಗಿದ ಬಳಿಕ ಕೋಣೆಯೊಳಗೆ ತುಂಬ ಮಂದಿ ಗೆಜ್ಜೆ ಕಟ್ಟಿ ನೃತ್ಯ ಮಾಡಿದ ಸದ್ದು ಕೇಳಿ ಬರುತ್ತ ಇತ್ತು. ಇದರ ಬಗೆಗೆ ಕೇಳಿದರೆ ತಮಗೇನೂ ತಿಳಿದಿಲ್ಲವೆಂದೇ ಹೇಳಿದರು.

ಆದರೆ ಪ್ರತಿದಿನವೂ ರಾಜನು ಎಚ್ಚರವಾಗಿದ್ದು ಕೋಣೆಯೊಳಗೆ ನೃತ್ಯದ ದನಿಯನ್ನು ಕೇಳುತ್ತಲೇ ಇದ್ದ. ಇದರಲ್ಲಿ ಏನೋ ರಹಸ್ಯವಿದೆಯೆಂದು ಅವನಿಗೆ ಗೊತ್ತಾಯಿತು. ಹಲವಾರು ದೇಶಗಳಿಗೆ ದೂತರನ್ನು ಕಳುಹಿಸಿ, “”ರಾಜಕುಮಾರಿಯರ ಕೋಣೆಯೊಳಗಿರುವ ರಹಸ್ಯವನ್ನು ಪತ್ತೆ ಮಾಡಿದ ಯುವಕರಿಗೆ ಅವರೊಂದಿಗೆ ಮದುವೆ ಮಾಡುತ್ತೇನೆ” ಎಂದು ಡಂಗುರ ಸಾರಿಸಿದ. ರಾಜಕುಮಾರಿಯರ ಸೌಂದರ್ಯದ ಬಗೆಗೆ ಕೇಳದವರಿರಲಿಲ್ಲ. ಹೀಗಾಗಿ ಒಬ್ಬನಾದ ಬಳಿಕ ಒಬ್ಬನಂತೆ ಅನೇಕ ದೇಶಗಳಿಂದ ರಾಜಕುಮಾರರು ಬಂದರು. 

ರಾಜಕುಮಾರಿಯರ ಗುಟ್ಟನ್ನು ತಾವು ಬಿಡಿಸುವುದಾಗಿ ಹೇಳಿಕೊಂಡರು. ರಾಜನು ಅದಕ್ಕಾಗಿ ಅವರಿಗೆ ರಾಜಕುಮಾರಿಯರು ಮಲಗುವ ಕೋಣೆಯ ಬಳಿ ಮಲಗಿಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟ. ಆದರೆ ಬೆಳಗಾಗಿ ಹೊತ್ತೇರಿದರೂ ಮಲಗಿಕೊಂಡವರು ನಿದ್ರೆಯಿಂದ ಏಳುವ ಲಕ್ಷಣ ಕಾಣಿಸಲಿಲ್ಲ. ರಾಜನು, “”ಏಳಿ, ರಾಜಕುಮಾರಿಯರ ಗುಟ್ಟು ಕಂಡು ಹಿಡಿಯುತ್ತೇನೆಂದು ಬಂದವರು ಹೀಗೆ ನಿದ್ರೆ ಮಾಡಿದರೆ ಹೇಗೆ?” ಎಂದು ನಿದ್ರೆಯಿಂದ ಎಬ್ಬಿಸಿ ಕೇಳಿದ. ರಾಜಕುಮಾರರು ನಾಚಿಕೆಪಟ್ಟರು. “”ನಮಗೆ ಒಮ್ಮೆಯೂ ಇಷ್ಟು ಗಾಢ ನಿದ್ರೆ ಬಂದದ್ದಿಲ್ಲ. ಯಾಕೆ ಹೀಗಾಯಿತೆಂಬುದೂ ಗೊತ್ತಿಲ್ಲ” ಎಂದು ಹೇಳಿ ಬಂದ ದಾರಿಯಲ್ಲಿ ಹಿಂದೆ ಹೊರಟುಹೋದರು.

ರಾಜಕುಮಾರಿಯರ ಗುಟ್ಟನ್ನು ಬಯಲು ಮಾಡಲು ಯಾರಿಗೂ ಸಾಧ್ಯವಾಗುವುದಿಲ್ಲವೆಂಬುದು ಗೊತ್ತಾದ ಮೇಲೆ ಅವರನ್ನು ಕೈ ಹಿಡಿಯಲು ಬರುವವರ ಸಂಖ್ಯೆ ಕಡಮೆಯಾಯಿತು. ಇದರಿಂದ ರಾಜನಿಗೆ ಚಿಂತೆಯಾಯಿತು. ಅವನು ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಇದ್ದ. “”ಬಡ ಯುವಕರಾದರೂ ಸರಿ, ನನ್ನ ಕುಮಾರಿಯರ ಗುಟ್ಟನ್ನು ಬಿಡಿಸಿದರೆ ನಾನು ಅವರನ್ನು ಅವನಿಗೆ ಕೊಟ್ಟು ಮದುವೆ ಮಾಡಿ ಈ ರಾಜ್ಯದ ಉತ್ತರಾಧಿಕಾರವನ್ನೂ ನೀಡುತ್ತೇನೆ” ಎಂದು ಸಾರಿದ. 

ಒಂದು ಹಳ್ಳಿಯಲ್ಲಿ ಒಬ್ಬ ಸೈನಿಕನಿದ್ದ. ಅವನಿಗೆ ಈ ವಿಷಯ ಗೊತ್ತಾಯಿತು. ತಾನೂ ಯಾಕೆ ಬುದ್ಧಿ ಖರ್ಚು ಮಾಡಬಾರದು ಎಂದು ಅವನಿಗೆ ಯೋಚನೆ ಬಂದಿತು. ಒಂದು ಬುತ್ತಿ ಕಟ್ಟಿಕೊಂಡು ರಾಜಧಾನಿಯೆಡೆಗೆ ಹೊರಟ. ನಗರವನ್ನು ತಲುಪುವಾಗ ಒಬ್ಬಳು ಮುದುಕಿ ಒಂದು ಹೊರೆ ಕಟ್ಟಿಗೆ ಕಟ್ಟಿ ತಲೆಯ ಮೇಲೆ ಏರಿಸಲಾಗದೆ ಕಷ್ಟಪಡುವುದನ್ನು ಕಂಡು, “”ಅಜ್ಜಿ, ಇದನ್ನು ನಿನ್ನ ಮನೆಯ ತನಕ ಹೊತ್ತು ತಂದು ಹಾಕುತ್ತೇನೆ, ನೀನು ನನಗೆ ದಾರಿ ತೋರಿಸಿದರೆ ಸಾಕು” ಎಂದು ಹೇಳಿ ಹೊರೆಯನ್ನು ಹೊತ್ತುಕೊಂಡು ಮುಂದೆ ಸಾಗಿದ.

ದಾರಿಯಲ್ಲಿ ಸೈನಿಕನೊಂದಿಗೆ ಅಜ್ಜಿ, ತನಗೆ ಯಾರೂ ದಿಕ್ಕಿಲ್ಲ. ದಾರಿಹೋಕರಿಗೆ ಅಡುಗೆ ಮಾಡಿ ಹಾಕಿ ದಿನಯಾಪನೆ ಮಾಡುತ್ತಿರುವುದಾಗಿ ಹೇಳಿದಳು. ಸೈನಿಕ ಅವಳ ಮನೆಗೆ ಬಂದು ಊಟ ಮಾಡಿದ. ತನ್ನಲ್ಲಿರುವ ಒಂದು ಚಿನ್ನದ ನಾಣ್ಯವನ್ನು ತೆಗೆದು ಅವಳಿಗೆ ಕೊಟ್ಟ. ಅಜ್ಜಿಗೆ ಖುಷಿಯಾಯಿತು. ಈ ಖುಷಿಯನ್ನು ಕಂಡು ಅವನು, “”ಅಜ್ಜಿ, ಈ ನಗರದಲ್ಲಿರುವ ರಾಜಕುಮಾರಿಯರು ಮಲಗುವ ಕೋಣೆಯಿಂದ ರಾತ್ರೆ ನೃತ್ಯ ಮಾಡಿದಂತೆ ಕೇಳಿಸುತ್ತದೆಯಂತಲ್ಲ? ನಾನು ಈ ಗುಟ್ಟನ್ನು ಕಂಡುಹಿಡಿದು ಅವರನ್ನು ಮದುವೆಯಾಗಬೇಕು ಅಂತ ಇದ್ದೇನೆ” ಎಂದು ಹೇಳಿದ.

ಅದಕ್ಕೆ ಅಜ್ಜಿ, “”ಇದನ್ನು ಕಂಡು ಹಿಡಿಯುವುದಕ್ಕೆ ಅಂತ ಬಂದವರಿಗೆ ಲೆಕ್ಕವಿಲ್ಲ. ಆದರೆ ಅವರೆಲ್ಲರೂ ರಾಜಕುಮಾರಿಯರ ಚಂದಕ್ಕೆ ಮರುಳಾಗಿ ಅವರು ಪ್ರೀತಿಯಿಂದ ಕೊಡುವ ದ್ರಾûಾರಸವನ್ನು ಕುಡಿದು ಮೈಮರೆತು ನಿದ್ರಿಸುತ್ತಾರೆ. ಈ ಗುಟ್ಟು ಗೊತ್ತಾಗಬೇಕಿದ್ದರೆ ಅವರು ಏನು ಕೊಟ್ಟರೂ ಕುಡಿಯಬಾರದು. ಇನ್ನು ನನ್ನ ಬಳಿ ಒಂದು ಹಳೆಯ ಗಡಿಯಾರವಿದೆ. ಇದನ್ನು ಕೊರಳಿಗೆ ಕಟ್ಟಿಕೊಂಡರೆ ಯಾರ ಕಣ್ಣಿಗೂ ಅವರು ಗೋಚರಿಸುವುದಿಲ್ಲ. ಇದರ ಸಹಾಯದಿಂದ ಅವರ ಗುಟ್ಟು ಬಯಲು ಮಾಡಬಹುದು. ನೀನು ಈ ಕೆಲಸ ಮಾಡುವುದಾದರೆ ಗಡಿಯಾರವನ್ನು ನಿನಗೇ ಕೊಟ್ಟುಬಿಡುತ್ತೇನೆ” ಎಂದು ಹೇಳಿದಳು. 

ಸೈನಿಕ ಅವಳ ಕೈಯಿಂದ ಗಡಿಯಾರವನ್ನು ತೆಗೆದುಕೊಂಡ. ನೆಟ್ಟಗೆ ರಾಜನ ಬಳಿಗೆ ಹೋಗಿ ತಾನು ರಾಜಕುಮಾರಿಯರ ರಹಸ್ಯ ಬಿಡಿಸಲು ಬಂದಿರುವುದಾಗಿ ಹೇಳಿದ. ರಾಜನು ಸಂತೋಷದಿಂದ ತನ್ನ ಪುತ್ರಿಯರು ಮಲಗುವ ಕೋಣೆಯ ಬಳಿ ಅವನಿಗೆ ಮಲಗಲು ಹಾಸಿಗೆ ಹಾಕಿಸಿದ.

ರಾಜಕುಮಾರಿಯರು ಸೈನಿಕನ ಬಳಿಗೆ ಪ್ರೀತಿಯನ್ನು ನಟಿಸುತ್ತ ಬಂದರು. ಕುಡಿಯಲು ದ್ರಾûಾರಸವನ್ನು ಕೊಟ್ಟರು. ಅದನ್ನು ಅವನು ಕುಡಿದ ಹಾಗೆ ನಟಿಸಿ ದೂರ ಚೆಲ್ಲಿ ಬಂದು ಮಲಗಿ ಗಾಢ ನಿದ್ರೆ ಬಂದವರಂತೆ ಗೊರಕೆ ಹೊಡೆಯತೊಡಗಿದ. ಮಧ್ಯರಾತ್ರೆ ಒಳಗಿನ ಕೋಣೆಯಿಂದ ಗೆಜ್ಜೆ ಕಟ್ಟಿ ನೃತ್ಯ ಮಾಡುವ ದನಿ ಕೇಳಿಸಿತು. ಅವನು ಮೆಲ್ಲಗೆ ಎದ್ದ. ತನ್ನ ಗಡಿಯಾರವನ್ನು ಹಿಡಿದುಕೊಂಡ. ರಾಜಕುಮಾರಿಯರ ಕೋಣೆಯೊಳಗೆ ಹೋದ. ಅವರು ಅವನನ್ನು ಗಮನಿಸಲಿಲ್ಲ. ಅವರೆಲ್ಲರೂ ಅಲಂಕೃತರಾಗಿ ಗೆಜ್ಜೆ ಕಟ್ಟಿಕೊಂಡು ಒಂದು ನೆಲಮಾಳಿಗೆಯೊಳಗೆ ಇಳಿಯುವುದು ಕಾಣಿಸಿತು. ಅವನು ಅವರನ್ನು ಹಿಂಬಾಲಿಸಿದ. ಕೆಳಗೆ ಒಂದು ಅದ್ಭುತವಾದ ಲೋಕ ಇತ್ತು. ಅಲ್ಲಿರುವ ಮರಗಳ ಕೊಂಬೆಗಳಲ್ಲಿ ಬಂಗಾರದ ನಾಣ್ಯಗಳು, ರತ್ನಗಳು, ವಜ್ರಗಳು ಕಾಯಿಗಳಂತೆ ತೂಗಾಡುತ್ತಿದ್ದವು. ಆಗ ಹನ್ನೆರಡು ಮಂದಿ ರಾಜಕುಮಾರರು ಪ್ರತ್ಯಕ್ಷರಾಗಿ ಜೊತೆಗೂಡಿ ನೃತ್ಯ ಮಾಡತೊಡಗಿದರು.

ಇದನ್ನು ನೋಡುತ್ತಿದ್ದ ಸೈನಿಕನು ಒಂದು ಮರದ ಕೊಂಬೆಯನ್ನು ಮುರಿದ. ತಕ್ಷಣವೇ ನೃತ್ಯ ಮಾಡುತಿದ್ದ ಒಬ್ಬ ರಾಜಕುಮಾರನು ಕೆಳಗೆ ಬಿದ್ದು ಸತ್ತುಹೋದ. ಅವನ ಜೊತೆ ನರ್ತಿಸುತ್ತಿದ್ದ ರಾಜಕುಮಾರಿ ಅಳತೊಡಗಿದಳು. ಸೈನಿಕನು ಮರಳಿ ಅರಮನೆಗೆ ಬಂದ. ರಾಜಕುಮಾರಿಯರೂ ಬಂದು ಮಲಗಿಕೊಂಡರು. ಸೈನಿಕನು ಬೆಳಗಾದ ಮೇಲೆ ರಾಜನ ಮುಂದೆ ಅವನ ಕುಮಾರಿಯರನ್ನು ಕರೆಸಿ ಅವರು ನೃತ್ಯ ಮಾಡುತ್ತಿದ್ದ ಸ್ಥಳ, ರಾಜಕುಮಾರರು, ವಜ್ರಗಳ ಮರ ಎಲ್ಲದರ ಬಗೆಗೂ ವಿವರಿಸಿ ತಾನು ತಂದಿದ್ದ ಕೊಂಬೆಯನ್ನು ತೋರಿಸಿದ.

ರಾಜಕುಮಾರಿಯರು, “”ಹೌದು, ನಾವು ಶಾಪಗ್ರಸ್ಥರಾಗಿದ್ದ ಯಕ್ಷಿಣಿಯರು. ದಿನವೂ ರಾತ್ರೆ ನಮ್ಮಂತೆಯೇ ಶಾಪ ಪಡೆದಿದ್ದ ಜೊತೆಗಾರರೊಂದಿಗೆ ನರ್ತಿಸುತ್ತಿದ್ದೆವು. ನಮ್ಮ ಜೊತೆಗಾರರ ಜೀವ ಅಲ್ಲಿರುವ ಮರದ ಕೊಂಬೆಗಳಲ್ಲಿತ್ತು. ಅದರಲ್ಲಿ ಒಂದು ಕೊಂಬೆಯನ್ನು ಇವನು ಮುರಿದ ಕಾರಣ ಅವರಲ್ಲಿ ಒಬ್ಬನು ಸತ್ತುಹೋದ. ನಾವು ಹನ್ನೊಂದು ಮಂದಿ ನಮ್ಮ ರಹಸ್ಯ ಬಯಲಾದ ಕಾರಣ ಶಾಪ ವಿಮುಕ್ತರಾಗಿ ಸಂಗಾತಿಯೊಡನೆ ಮೇಲಿನ ಲೋಕಕ್ಕೆ ಹೋಗುತ್ತೇವೆ. ಜೊತೆಗಾರನಿಲ್ಲದ ಹನ್ನೆರಡನೆಯವಳು ಈ ಸೈನಿಕನ ಹೆಂಡತಿಯಾಗುತ್ತಾಳೆ” ಎಂದು ಹೇಳಿದರು. ಸೈನಿಕನು ಅವಳ ಕೈ ಹಿಡಿದ. ಮುಂದೆ ಆ ರಾಜ್ಯದ ಅರಸನಾದ.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.