ಏಕಾಂಗಿ ಕಟ್ಟಿದ ಎರಡು ಪದಸಮುದ್ರಗಳು
Team Udayavani, Mar 18, 2018, 7:00 AM IST
ಕನ್ನಡಕ್ಕೆ “ಪದನಿಧಿ’ಯಂಥ ಅಪೂರ್ವ ಗ್ರಂಥವನ್ನು ನೀಡಿದ ರೆ| ಫಾ| ಪ್ರಶಾಂತ ಮಾಡ್ತ ಅವರ ಹೊಸ ಕೃತಿಸಾಹಸ “ಕೊಂಕಣಿ ಥೆಸಾರ್’ ಇಂದು ಲೋಕಾರ್ಪಣೆಗೊಳ್ಳುತ್ತಿದೆ.
ಭಾರತದ ಭಾಷೆಗಳಲ್ಲಿ ಯಾವುದಕ್ಕೆಲ್ಲ ಇಂಗ್ಲಿಶಿಗೆ ಇದ್ದಂತೆ ಥೆಸಾರಸ್‌ನ ಭಾಗ್ಯ ಇದೆ? ಖಂಡಿತ ಅದು ಅತಿ ಕಡಿಮೆ. ಫಾದರ್ ಪ್ರಶಾಂತ್ ಮಾಡ್ತ ಅವರ “ಪದನಿಧಿ 2007′ ರಲ್ಲಿ ಪ್ರಕಟವಾದಾಗ ಈ ಶಕ್ತಿಯು ಕನ್ನಡಕ್ಕೆ ದಕ್ಕಿತು. ಕರಾವಳಿಯ ಮಂಗಳೂರು ಪರಿಸರದ ಕೊಂಕಣಿ ಭಾಷೆಗೆ ಇಂದು ಬಿಡುಗಡೆಯಾಗುವ ಥೆಸಾರ್ (ಮಾರ್ಚ್ 18ರಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ) ನ ಮೂಲಕ ವಿದ್ವತ್ ಬಲವೊಂದು ಇದೇ ಬಗೆಯಲ್ಲಿ ದೊರಕುತ್ತಿದೆ. ವಿಶೇಷವೆಂದರೆ ಕೊಂಕಣಿಯ ಈ ಗ್ರಂಥವು ಕನ್ನಡ ಲಿಪಿಯಲ್ಲಿದೆ ಮತ್ತು ಇದನ್ನು ಸಿದ್ಧಪಡಿಸಿದವರೂ ಫಾ. ಪ್ರಶಾಂತ್ ಅವರೇ! ಒಬ್ಬನೇ ವ್ಯಕ್ತಿಯು ಎರಡು ಭಾರತೀಯ ಭಾಷೆಗಳ ಥೆಸಾರಸ್ ಸಿದ್ಧಪಡಿಸಿರುವುದು ಅದೂ ಕನ್ನಡದ ಲಿಪಿಯಲ್ಲಿ ಎಂಬುದು ಕನ್ನಡದ, ಈ ದೇಶದ ಮತ್ತು ಭಾಷಾಲೋಕದ ಅಪೂರ್ವ ವಿದ್ಯಮಾನ.
ಏನಿದು ಥೆಸಾರಸ್?
ಸಾಮಾನ್ಯ ಅರ್ಥಕೋಶಕ್ಕೂR ಥೆಸಾರಸ್‌ಗೂ ತುಂಬಾ ವ್ಯತ್ಯಾಸ. ತಿಳಿಯದವರು ಥೆಸಾರಸ್‌ನ್ನು “ಸಮಾನಾರ್ಥಕ ಕೋಶ’ ಅಂತ ಸರಳವಾಗಿ ಹೇಳುವುದುಂಟು. ಅದು ಹಾಗಲ್ಲ. ಯಾವುದೇ ಒಂದು ಸಾಮಾನ್ಯ ಅರ್ಥಕೋಶದಲ್ಲಿ ಪದಗಳು ಅಕಾರಾದಿಯಾಗಿ ಜೋಡಿಸಿಕೊಳ್ಳುವುದು ನಮಗೆ ಗೊತ್ತಿರುವ ವಿಷಯ. ಆದರೆ ನಾವು ಭಾಷೆಯಲ್ಲಿ ಪದಗಳನ್ನು ದಿನನಿತ್ಯ ಬಳಸುವುದಕ್ಕೂ ಈ ಅಕಾರಾದಿಗೂ ಯಾವ ಸಂಬಂಧವೂ ಇರುವುದಿಲ್ಲ! ಸಾಮಾನ್ಯವಾದ ಒಂದು ನಿಘಂಟು “ಸಾವು’ ಎಂಬ ಪದಕ್ಕೆ “ಮರಣ’ ಎಂಬ ಅರ್ಥವನ್ನು ಒಂದು ಪುಟದಲ್ಲಿ ಕೊಟ್ಟರೆ, ಇನ್ನೊಂದು ಪುಟದಲ್ಲಿ ಮರಣ ಎಂಬ ಪದಕ್ಕೆ ಸಾವು ಎಂಬ ಅರ್ಥವನ್ನು ತಿರುಗಿಸಿ ಕೊಡುತ್ತದೆ. ಇದೊಂದು ಬಗೆಯ ಶಬ್ದಗಳ ಪುನರಾವರ್ತನೆ. ಥೆಸಾರಸ್ ಹೀಗೆ ಅಲ್ಲ.
1853ರಲ್ಲಿ ಪೀಟರ್ ಮಾರ್ಕ್ ರೊಜೆಟ್ ಎಂಬ ಕ್ರೆಸ್ತ ಧರ್ಮಗುರು ಪದಗಳನ್ನು ವಿವಿಧ ತಾತ್ವಿಕ ಪರಿಕಲ್ಪನೆಗಳಲ್ಲಿ ವಿಂಗಡಿಸಿ ಸಮಾನಾರ್ಥ, ಸಮೀಪಾರ್ಥ ಪದಗಳ ಕೋಶವೊಂದನ್ನು ಇಂಗ್ಲಿಶ್ ಭಾಷೆಗೆ ಸಿದ್ಧಪಡಿಸಿದರು. ಅಮೂರ್ತ ಪರಿಕಲ್ಪನಾತ್ಮಕ ಸಂಬಂಧಗಳು, ಭೌತಿಕ ಜಗತ್ತು, ಬೌದ್ಧಿಕತೆ, ಇಚ್ಛೆ, ಭಾವನಾತ್ಮಕ ಹಾಗೂ ನೈತಿಕ ಪ್ರವೃತ್ತಿಗಳು ಎಂಬ ಆರು ಪ್ರಧಾನ ವರ್ಗಗಳು ಮತ್ತು ಇವುಗಳ ಒಳಗೆ ಅಪಾರ ಉಪವರ್ಗಗಳು ಸೇರಿ ಈ ತಾತ್ವಿಕ ಪರಿಕಲ್ಪನೆಗಳು ರೂಪುಗೊಂಡಿದ್ದುವು. ಪದಗಳನ್ನು ಅಕಾರಾದಿಯಾಗಿ ಕೃತಕವಾಗಿ ಇರಿಸದೆ ಮನುಷ್ಯ ಬದುಕಿನ ಯೋಚನಾಲಹರಿಗೆ ಸಮೀಪವಾಗುವಂತೆ ರೋಜೆಟ್ ಹೊಸಕೋಶವ್ಯವಸ್ಥೆ ಮಾಡಿಕೊಟ್ಟರು. ಈ ನಿಘಂಟಿನ ಕ್ರಮವು ಎಷ್ಟೊಂದು ಹೊಚ್ಚಹೊಸದಾಗಿತ್ತೆಂದರೆ ಅದಕ್ಕೆ ರೊಜೆಟ್ ಇತ್ತ ಥೆಸಾರಸ್ ಎಂಬ ಶೀರ್ಷಿಕೆಯೇ ಮುಂದೆ ಈ ತರದ ನಿಘಂಟುಗಳ ದಾರಿಗೆ ಸಾಮಾನ್ಯ ಹೆಸರಾಯಿತು.
ಫಾ. ಪ್ರಶಾಂತ್ ಅವರ ಪದನಿಧಿ
ಥೆಸಾರಸ್ ಎಂಬುದಕ್ಕೆ ಫಾ| ಪ್ರಶಾಂತ್ ರೂಪಿಸಿದ ಪದ ಪದನಿಧಿ. ಈ ಕೋಶದಲ್ಲಿ ರೊಜೆಟ್ ಅವರ ಜಗದ್ವಿಖ್ಯಾತ ಮಾದರಿಯನ್ನು ಪ್ರಶಾಂತ್ ಮಾಡ್ತ ಕನ್ನಡಕ್ಕೆ ಅಳವಡಿಸಿದರು. 880 ಪ್ರಮುಖ ಪರಿಕಲ್ಪನೆಗಳಲ್ಲಿ ಕನ್ನಡದ ಲಕ್ಷಾಂತರ ಪದಗಳು ಇದರಲ್ಲಿ ಜೋಡಣೆಯಾಗಿವೆ. ಹುಡುಕುವ ಅನುಕೂಲಕ್ಕಾಗಿ ಅಕಾರಾದಿ ವ್ಯವಸ್ಥೆಯೂ ಗ್ರಂಥದ ಕೊನೆಗೆ ಇದೆ. 2007 ರಲ್ಲಿ ಬೆಂಗಳೂರಿನ ಸಂತ ಜೋಸೆಫ್ ಸಂಜೆ ಕಾಲೇಜಿನ ಕನ್ನಡ ಸಂಘ ಇದನ್ನು ಪ್ರಕಟಿಸಿತು. ಎರಡು ಬಾರಿ ಮುದ್ರಣಗೊಂಡರೂ ಈಗ ಪ್ರತಿಗಳು ಲಭ್ಯವಿಲ್ಲದಷ್ಟು ಇದರ ಜನಬಳಕೆಯಿದೆ. ವಿಶ್ವವಿದ್ಯಾನಿಲಯಗಳು ವಿದ್ವಜ್ಜನರ ತಂಡಕ್ಕೆ ಲಕ್ಷಾಂತರ ದುಡ್ಡು ಸುರಿದು ಮಾಡುವ ಕೆಲಸವನ್ನು ಫಾ. ಪ್ರಶಾಂತ್ ಏಕಾಂಗಿಯಾಗಿ ಇಪ್ಪತ್ತೆçದು ವರುಷದ ಶ್ರಮ ಸುರಿದು ಸಿದ್ಧಪಡಿಸಿದರು. ಇದುವರೆಗೆ ಈ ಕೆಲಸಕ್ಕೆ ಕರ್ನಾಟಕದ ಯಾವುದೇ ವಿಶ್ವವಿದ್ಯಾಲಯವು ಕನಿಷ್ಟ ಸಂಮಾನವನ್ನು ಕೊಟ್ಟಿಲ್ಲ ಎಂಬುದು ಖೇದಕರ.
ಪದನಿಧಿಯ ವ್ಯವಸ್ಥೆಯು ಭಾಷೆಯ ಜೀವಂತಿಕೆಯ ಸೂಚಕ
ತನ್ನ ಯೋಚನೆಗಳಿಗೆ ಹೊಂದುವ ಪದಗಳಿಗಾಗಿ ಮನುಷ್ಯ ಸದಾ ಬಯಸುತ್ತಾನೆ. ಮಾನವನ ಕಲ್ಪನೆಯೊಂದಕ್ಕೆ ಹೊಂದುವ ಎಲ್ಲ ಪದಗಳನ್ನು ಮಾತ್ರವಲ್ಲ ಹೊಂದಿಕೆಗೆ ಸಮೀಪವಾಗುವ ಹಾಗೆಯೇ ವಿರುದ್ಧವಾಗಿ ಹೊಂದಿಕೊಳ್ಳುವ ಭಾಷೆಯೊಳಗಿನ ಸರ್ವಪದಗಳನ್ನು ಪದನಿಧಿಯು ಒಟ್ಟುಹಾಕಲು ಶ್ರಮಿಸುತ್ತದೆ. ಪಡೆನುಡಿ, ಗಾದೆಮಾತು, ಉಪಭಾಷೆ, ಜಾನಪದ, ಹೀನಾರ್ಥದ ಪದ, ಬೈಗಳು, ಪಡ್ಡೆಮಾತು- ಹೀಗೆ ಭಾಷೆಯ ಜೀವಂತಿಕೆಯ ಎಲ್ಲ ಮುಖಗಳನ್ನು ಇದಕ್ಕಾಗಿ ಬಳಸುತ್ತದೆ. ಸಮಾನಾರ್ಥ, ಸಮೀಪಾರ್ಥ, ವಿರುದ್ಧಾರ್ಥಗಳ ಮೂಲಕ ಹಾದುಹೋಗುವಾಗ ಪದದ ಅರ್ಥವು ಕೊಂಚಕೊಂಚವೇ ಜರಗುವ ಜೀವಂತ ಕ್ರಿಯೆಯನ್ನು ಪದನಿಧಿಯಲ್ಲಿ ನಾವು ಗಮನಿಸಲು ಸಾಧ್ಯವಿದೆ. ಹೀಗೆ ಅನುಕೂಲಗಳಿರುವುದರಿಂದ ಬರಹ, ಭಾಷಣಗಳ ಸಂದರ್ಭದಲ್ಲಿ ಥೆಸಾರಸ್ ಬಹು ಉಪಯುಕ್ತ. ಪದವೊಂದರ ವಿಸ್ತಾರ ಅರ್ಥಪ್ರಪಂಚವನ್ನು ತೋರಿಸುವುದರಿಂದ ಥೆಸಾರಸ್ ಭಾಷೆಯ ಶ್ರೀಮಂತಿಕೆಯನ್ನು ಮನಗಾಣಿಸಿ ಓದುಗರಿಗೆ ಅಚ್ಚರಿ, ಆನಂದ ಕೊಡುತ್ತದೆ. ಆದ್ದರಿಂದ ಪದನಿಧಿ ಸುಮ್ಮನೆ ಓದುವುದಕ್ಕೂ ರಂಜನೀಯ. ಬದುಕಿಗೆ ಸಂಬಂಧಿಸಿದ ಒಂದು ಕಲ್ಪನೆಯನ್ನು ಎಷ್ಟೆಲ್ಲ ಬಗೆಗಳಲ್ಲಿ ನಮ್ಮ ಪೂರ್ವಜರು ಪದಗಳಾಗಿ ರೂಪಿಸಿ¨ªಾರೆ ಎಂಬುದನ್ನು ಪದನಿಧಿಯಲ್ಲಿ ಗಮನಿಸಿದಾಗ ಅವರು ಹೊಂದಿದ್ದ ಲೋಕದೃಷ್ಟಿ, ಬದುಕಿನ ಬಗೆಗಿನ ಅವರ ಚಿಂತನೆಗಳು ನಮಗೆ ಮನದಟ್ಟಾಗಲು ಸಾಧ್ಯ. ಹೀಗೆ ಸರ್ವೇಸಾಮಾನ್ಯ ನಿಘಂಟು ಕೇವಲ ಪದದ ಅರ್ಥವನ್ನು ಮಾತ್ರ ಕೊಟ್ಟರೆ ಪದನಿಧಿಯು ಆ ಪದದ ಅರ್ಥವಂತಿಕೆಯನ್ನು ಹಿಡಿಯಲು ಹೊರಡುತ್ತದೆ.
ಕೊಂಕಣಿ ಥೆಸಾರಸ್ ಥೆಸಾರ್
ಫಾ. ಪ್ರಶಾಂತ್ ಹತ್ತುಸಾವಿರ ಕೊಂಕಣಿ ನುಡಿಗಟ್ಟುಗಳ ಬೃಹತ್ ಗ್ರಂಥ “ಕೊಂಕಣಿ ಪಿಕೊಳಿಂ’ ಎಂಬುದನ್ನು ಹಲವು ವರುಷಗಳ ಹಿಂದೆಯೇ ಹೊರತಂದಿದ್ದರು. ಈಗ 529 ಪರಿಕಲ್ಪನೆಗಳಲ್ಲಿ ಕೊಂಕಣಿಯ 5000 ಪದಗಳನ್ನು ಅಳವಡಿಸಿದ ಕೊಂಕಣಿ ಭಾಷೆಯ ಥೆಸಾರಸ್ ಅವರ ಹದಿನೈದು ವರುಷಗಳ ಶ್ರಮದ ಫಲವಾಗಿ ಹೊರಬರುತ್ತಿದೆ. ಪ್ರಕಟಣೆ- ಬೆಂಗಳೂರಿನ ಸಂತ ಜೋಸೆಫರ ವಾಣಿಜ್ಯ ಕಾಲೇಜು. ರೊಜೆಟ್ ಅವರ ಥೆಸಾರಸ್‌ನಿಂದ ತೊಡಗಿ ಕನ್ನಡದ ಪದನಿಧಿಯನ್ನು ಹಾದು ಈಗ ಕೊಂಕಣಿಯ ಥೆಸಾರ್ ವರೆಗೆ ತಲುಪಿದ ಫಾ. ಪ್ರಶಾಂತ್ ಅವರ ಪದ- ಅರ್ಥ ಜೀವನ ಅನುಸಂಧಾನದ ಬಗ್ಗೆ ಅವರು ಹೇಳುವುದು ಹೀಗೆ:
“”ನನಗೆ ಪದಗಳು ಅಂದರೆ ಹಿಂದಿನಿಂದಲೂ ಥ್ರಿಲ್ಲಿಂಗ್. ಎಲ್ಲೇ ಹೊಸಪದ ಸಿಕ್ಕರೂ ನಾನು ಜತನದಲ್ಲಿ ಗಮನಿಸುವವನು. ಯಾಕೆಂದರೆ ಪದ ಎಂದರೆ ನನ್ನ ಪಾಲಿಗೆ ಅದೊಂದು ಅರ್ಥಲೋಕ. ರೊಜೆಟ್ ಆಂಗ್ಲ ಸಮಾಜದ ಹಿನ್ನಲೆಯಿಂದ ಬಂದವರು. ನಾನು ಪದನಿಧಿ ರೂಪಿಸುವಾಗ ಅವರಿಗೆ ದಕ್ಕದಿದ್ದ ಭಾರತೀಯ ಸಂಸ್ಕೃತಿ ಪದಸಂಪತ್ತು, ಪರಿಕಲ್ಪನೆಗಳನ್ನು ಅಳವಡಿಸಿದ್ದೇನೆ. ವಿವಿಧ ಪ್ರದೇಶ, ಲಿಪಿ, ಉಪಭಾಷೆಗಳಲ್ಲಿ ಹರಡಿರುವ ಕೊಂಕಣಿಗೆ ಥೆಸಾರಸ್ ರೂಪಿಸುವುದು ಬಹುಕಷ್ಟ. ನಾನು ಮಂಗಳೂರು ಪರಿಸರದಲ್ಲಿರುವ ಕನ್ನಡಲಿಪಿಯನ್ನು ಬಳಸುವ ಕೊಂಕಣಿಯನ್ನು ಥೆಸಾರಸ್‌ಗೆ ಪ್ರಮುಖವಾಗಿ ಗಮನಿಸಿದ್ದೇನೆ. ಈ ಕೆಲಸ ಮಾಡುತ್ತಿದ್ದಂತೆ ನಾನು ಕಂಡುಕೊಂಡ ಕೊಂಕಣಿಯ ಒಂದು ವಿಶೇಷವೆಂದರೆ ಖಚಿತಪದಗಳ ಕೊರತೆಯು ಬಂದಾಗ ಕೊಂಕಣಿಯು ಅಪಾರ ಪಡೆನುಡಿಗಳನ್ನು ತನಗಾಗಿ ಹುಟ್ಟಿಸಿಕೊಳ್ಳುವುದು. ಸಣ್ಣ ಪರಿಧಿಯಲ್ಲಿ ಜೀವಂತವಾಗಿರುವ ಇಂತಹ ಭಾಷೆಗಳಿಗೆ ಅದು ಅನಿವಾರ್ಯವಾದುದು”
ಕೊಂಕಣಿ ಥೆಸಾರ್‌ನ ಪುಟವೊಂದರಿಂದ-
“ಹೊಡೆಯು’ ಪದದ ಸಮಾನಾರ್ಥಕ ಪದಗಳು-
ಆಡಾರಾಂ ವೋಡ್, ಆಡೊºಟೆಂ ಮಾರ್, ಏಕ್ ದಿ, ಏಕ್ ಬಸಯ್, ಏಟ್ ದಿ, ಕುಮ್ಕೀಯ್, ಖೊಟೊ ಮುಟಿ ದಿ, ಗುದಾಸಾಂಘಾಲ್, ಗುಮೆ ವ್ಹಾಜಯ್, ಘಟ್ಟಿಯ್, ಚಿಡಾಯ್, ಚೊಚಾಯ್, ಝಡlಡ್, ಠೊಕಯ್, ಠೊಣ್, ಡಬxಬ್ ಮಾರ್, ತಡಕ್, ತಾಪಯ್, ಥಾಪ್, ದಂಡಿÏ, ಧಕ್ಕಾಬುಕ್ಕಿಕರ್, ಧಪೆಧುಮೆ ಮಾರ್, ಧಾಡಾಯ್, ನಾಗು ಬೇತ್ ಪಾಟಿರ್ ಪಿಟೊಕರ್, ಪೆಟ್ ದಿ, ಪೆಟ್ ಮಾರ್, ಪೆಟ್ಟು ದಿ, ಪೆಟ್ಟು ಮಾರ್, ಪೊಪಾಯ್, ಫಾಡಾಯ್, ಬಡಯ್, ಬಸಯ್, ಬಿಜಾಯ್, ಮಾರ್‌ಘಾಲ್, ಮಾರಾಂಚೊ ಪಾವ್ಸ್ ವೋತ್, ವಯ್ ವಯ್ ದಿ, ವ್ಹಾಜಯ್, ಸರರಿತ್ ಪೊಪಾಯ್, ಹರ್ವಯ್, ಹಲ್ಲೊಕರ್.
“ಸಂತಸ’ ಪದದ ಸಮಾನಾರ್ಥಕ ಪದಗಳು-
ಉಲ್ಲಾಸ್: ಅನಂದ್, ಆಹ್ಲಾದ್, ಈದ್, ಉನ್ಮೆàಷ್, ಉಮಾಳೊ, ಖುಶಾಲಾಯ್, ಖುಶ್, ಖೊಶಿ, ಗಮ್ಮತಾಯ್, ತುಷ್ಟಿ, ತೊಖಣೆಂ, ತೋಷ್, ಥ್ರಿಲ್, ಪುಳಕ್, ಪ್ರಫುಲ್ಲತಾ, ಪ್ರಮೋದ್, ಪ್ರಸನ್°, ಮಝಾ, ರಂಜನ್, ರೊಮಾಂಚಿತ್, ಲವಲವಿತ್, ಹರುಷಾ. ಧಾದೊಸ್ಕಾಯ್, ಪರಮಾನಂದ್, ಪಸಂದ್, ಸುಡುಡಾಯ್, ಸೊಗಾಸಾಯ್, ಹರಿಕ್, ಹರುಷ್, ಹುರುಪ್, ಆಂಗ್ ಪಿಸಾಯ್, ಆಂಗ್ ಫುಲ್, ಉಡಿ ಮಾರ್, ಉಲ್ಲಾಸಾನ್‌ಊಡ್, ಎಕಾ ಮೆಟಾನ್ ವಚ್, ಏಕ್‌ಕೋಲ್‌ಊಡ್, ಕಾನಾಂಚ್ಯಾ ಪೊವಾ ಪಾಟ್ಲಾನ್‌ಘಾಮ್ ಸುಟ್, ಕಾಷ್ಟಿ ವಾರ್ಯಾರ್‌ಊಬ್, ಕಾಳಿಜ್ ನಾಚ್, ಕಾಳಿಜ್ ಉಡಿ ಮಾರ್, ಕಾಳಿಜ್ ಫುಲ್, ಕಾಳಾjಕ್ ಪೊಶೆ, ಕಾಳಾjಕ್ ವಾರೆಂಘಾಲ್, ಕಾಳಾjಚಿ ಉಡಿ ಚೂಕ್, ಕುಚಿಲೊಜಾ, ಕುಳಾರ್ ಅನಿ ಮಾಂವಾಡೊಜಾ, ಕುಳಾರ್ ಮಳಾರ್ ಏಕ್ ಮೆಟ್, ಖೀರ್ ವಾಂಟ್, ಗಗನಾರ್‌ಊಬ್, ಗೊಡಿÏ ಶಿರ್ ದಿ, ಗಾಲ್‌ಕೆಪ್ಪಟ್ಯಾ ಗಾಲಾ ತೆದೆ ಫುಲ್, ಗಾಲುಟಾಂ ಫುಲ್, ಗಿಮಾಂತ್ ಪಾವ್ಸ್‌ಆಯಿಲ್ಯಾ ಬರಿ ಜಾ, ಘರ್ ಭೊರೆಲಂ, ಚಂದ್ರೆಮ್‌ಉದೆ, ಚಾಂದೆ°ಂ ಫಾಂಕ್, ಜಿಣಿಗೋಡ್ ಸಾಕರ್‌ಜಾ.
ರೆ| ಫಾ| ಪ್ರಶಾಂತ್ ಮಾಡ್ತ ಯಸ್. ಜೆ.
ಹುಟ್ಟೂರು ದಕ್ಷಿಣಕನ್ನಡದ ಸುಳ್ಯ. ಬೆಂಗಳೂರು ವಿವಿಯಿಂದ ಸ್ವರ್ಣಪದಕಗಳೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ, ಕೊಂಕಣಿ, ಆಂಗ್ಲ ಈ ಮೂರು ಭಾಷೆಗಳಲ್ಲಿ ಹಲವು ಬೃಹತ್ ಆಧಾರ ಗ್ರಂಥಗಳ ನಿರ್ಮಾಣ. ಉದಯವಾಣಿಯು ಸೇರಿದಂತೆ ಮುಖ್ಯ ಪತ್ರಿಕೆಗಳಲ್ಲಿ ಕನ್ನಡ ಮತ್ತು ಕೊಂಕಣಿಭಾಷೆಗಳ ಅಂಕಣಕಾರ. ವಿದ್ಯಾಸಂಸ್ಥೆಗಳ ಸ್ಥಾಪನೆಯಲ್ಲಿ ಜಗತ್ತಿನಲ್ಲೆ ಅಗ್ರಮಾನ್ಯರಾದ ಜೆಸುಯಿಟ್ ಕ್ರೈಸ್ತ ಗುರುಗಳ ಧರ್ಮಸಭೆಗೆ ಫಾ. ಪ್ರಶಾಂತ್ ಸೇರಿದವರು. ಮಂಗಳೂರು ಹಾಗೂ ಬೆಂಗಳೂರಿನ ಹಿರಿಯ ಪ್ರಖ್ಯಾತ ಕಾಲೇಜುಗಳಲ್ಲಿ ದೀರ್ಘಕಾಲ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ದುಡಿದ ಶಿಕ್ಷಣತಜ್ಞ. ಜಗತ್ತಿನ ವಿವಿಧ ಚಿಂತನಪ್ರಸ್ಥಾನಗಳ ಬಗ್ಗೆ ಅರಿತ ಚಿಂತಕ.
ಮಹಾಲಿಂಗ ಭಟ್ ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಫೆ.21ರಂದು ತೆರೆಗೆ ಬರಲಿದೆ ʼವಿಷ್ಣು ಪ್ರಿಯಾʼ
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.