ಎರಡು ಪುಟ್ಟ ಕತೆಗಳು
Team Udayavani, Jan 5, 2019, 1:12 PM IST
ರಾಮಾಯಣದಲ್ಲಿ ಭರತನ ವ್ಯಕ್ತಿತ್ವಕ್ಕೆ ರಾಮನ ವ್ಯಕ್ತಿತ್ವಕ್ಕಿಂತ ಕಿಂಚಿದೂನವೂ ಇಲ್ಲ. ರಾಮನ ಕಠಿಣವಾದ ಮಾರ್ಗವನ್ನು ಅವನ ತಮ್ಮ ಭರತನೂ ಅನುಸರಿಸಿದ. ತನ್ನ ಪಾಲಿಗೆ ಅನಾಯಾಸವಾಗಿ ಬಂದ ಚಕ್ರಾಧಿಪತ್ಯವನ್ನು ಬಿಟ್ಟು ಸಂನ್ಯಾಸಿಯ ಬದುಕನ್ನು ನಡೆಸಿದ. ತನ್ನ ಅಣ್ಣನ ಅರ್ಥಾತ್ ಅಯೋಧ್ಯೆಯ ನಿಜಚಕ್ರವರ್ತಿಯ ಪಾದುಕೆಗಳನ್ನು ಶಿರದ ಮೇಲೆ ಧರಿಸಿಕೊಂಡು ಬಂದು, ಅದನ್ನೇ ಸಿಂಹಾಸನದ ಮೇಲಿರಿಸಿ ತಾನು ನಿಮಿತ್ತ ಮಾತ್ರನಾಗಿ ಉಳಿದ.
ಕಾಲಾಂತರದಲ್ಲಿ ಅದೇ ಸೂರ್ಯವಂಶದಲ್ಲಿ ಅಗ್ನಿವರ್ಣನೆಂಬ ರಾಜ ಅಧಿಕಾರಕ್ಕೆ ಬರುತ್ತಾನೆ. ಅವನಾದರೋ ಅತ್ಯಂತ ಲಂಪಟ. ಯಾವಾಗಲೂ ಅಂತಃಪುರದಲ್ಲಿಯೇ ಕಾಲ ಕಳೆಯುತ್ತಿದ್ದ. ಅವನು ಕರ್ತವ್ಯವನ್ನು ಯಾವ ಪರಿಯಲ್ಲಿ ಮರೆತನೆಂದರೆ ರಾಣೀವಾಸವನ್ನು ಬಿಟ್ಟು ಹೊರಗೇ ಬರಲಿಲ್ಲ. ಅಯೋಧ್ಯೆಯ ರಾಜರಿಗೆ ಅವನನ್ನು ನೋಡುವ ಆಸೆ ಉಂಟಾಗುತ್ತಿತ್ತು. ಅವರೆಲ್ಲ ಅಂತಃಪುರದ ಸುತ್ತ ನೆರೆದು, “ನಿನ್ನ ದರ್ಶನ ಮಾಡುವ ತವಕ ಉಂಟಾಗಿದೆ’ ಎಂದು ಆಗ್ರಹಿಸಿದರು. ಆಗ ಅಗ್ನಿವರ್ಣ ತನ್ನ ಎರಡೂ ಪಾದಗಳನ್ನು ಗವಾಕ್ಷಿಯ ಮೇಲೆ ಇಟ್ಟು, “ನೋಡಿ!’ ಎಂದು ಹೇಳಿದ. ಪ್ರಜೆಗಳು ಅವನ ಪಾದಗಳನ್ನು ನೋಡಿ ಸಂತೋಷದಿಂದ ಮನೆಗೆ ಮರಳಿದರು.
ಭರತನಿಂದ ಅಗ್ನಿವರ್ಣನವರೆಗೆ…
.
ಚಂದ್ರವಂಶದ ಯಯಾತಿ ಎಂಬ ಮಹಾರಾಜ ಬೇಟೆಗಾಗಿ ಹೋಗಿದ್ದಾಗ ಬಾವಿಯೊಳಗಡೆ ಹೆಣ್ಣೊಬ್ಬಳು ಅಳುವ ಸದ್ದು ಕೇಳಿಸಿತು. ಅವಳಾದರೋ ವಿವಸ್ತ್ರ ಸ್ಥಿತಿಯಲ್ಲಿದ್ದಳು. ಅವಳತ್ತ ತನ್ನ ಮೈಯ ಅರ್ಧವಸ್ತ್ರವನ್ನು ಎಸೆದು ಅವಳ ಮಾನರಕ್ಷಣೆ ಮಾಡಿದ ಉದಾತ್ತ ರಾಜ ಯಯಾತಿ. ಅವಳು ಶುಕ್ರಾಚಾರ್ಯರ ಮಗಳು ದೇವಯಾನಿ. ಮನೆಗೆ ಕರೆತಂದು ಅವಳನ್ನು ಮದುವೆಯೂ ಆದ.
ಇದೇ ಯಯಾತಿಯ ವಂಶವಾಹಿನಿಯಲ್ಲಿ ದುರ್ಯೋಧನನೆಂಬ ಅರಸ ರಾಜ್ಯಾಧಿಕಾರವನ್ನು ವಹಿಸಿದ. ಅವನಿಗೊಬ್ಬ ತಮ್ಮ ದುಶಾÏಸನ ! ಅವರಿಬ್ಬರೂ ಸೇರಿ ತಮ್ಮ ಅತ್ತಿಗೆಯ ಮೈಮೇಲಿನ ವಸ್ತ್ರಕ್ಕೆ ಕೈ ಹಾಕಿ ಎಳೆಯುವ ಪ್ರಯತ್ನ ಮಾಡಿದರು.
ಯಯಾತಿಯಿಂದ ದುರ್ಯೋಧನನವರೆಗೆ…
ಆರ್‌ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.