Vanki Ring: ಉಂಗುರದ ಹಿಂದೆ ಸುತ್ತಿಕೊಂಡ ನೆನಪಿನ ಸುರಳಿ…

Team Udayavani, Oct 29, 2023, 4:32 PM IST

tdy-20

ನಮಗೆ ಅಷ್ಟೋ ಇಷ್ಟೋ ಬುದ್ದಿ ತಿಳಿಯುವ ಕಾಲದಿಂದ ಅಮ್ಮನಿಗೆ ಅವಳ ತವರು ಮನೆಯ ನೆನಪಾಗಿ ಇದ್ದಿದ್ದು ಬೆರಳಿನಲ್ಲಿ ಇದ್ದ ಒಂದು ವಂಕಿ ಉಂಗುರ ಮಾತ್ರ. ಅಮ್ಮ ಬೆರಳಿನ ಉಂಗುರ ನೀವುತ್ತಾ ಕಣ್ಣು ತುಂಬಿ ಕೊಂಡಿದ್ದಾಳೆಂದರೆ, ತನ್ನ ಪಾಲಿಗೆ ಇದ್ದೂ ಇಲ್ಲದ, ತನ್ನ ಕಡೆಯ ಯಾರನ್ನೋ ತವರನ್ನೋ ನೆನಪು ಮಾಡಿ  ಕೊಂಡಿದ್ದಾಳೆಂದೇ ಅರ್ಥ.

ನಲವತ್ತು ವರ್ಷದಲ್ಲಿ ಅಮ್ಮ ಯಾವತ್ತೂ ವಂಕಿ ಉಂಗುರ ತೆಗೆದಿಟ್ಟಿದ್ದು, ಅಳಿಸಿದ್ದು, ಬದಲಿಸಿದ್ದು ನೋಡಿಲ್ಲ.  ಅಮ್ಮ ಕೊನೆಯ ಸಲ ಕಣ್ಣು ತುಂಬಿಕೊಂಡಿದ್ದು ಕೂಡ ನೆನಪಿದೆ. ಅಸ್ಪತ್ರೆಯ ಮಂಚದ ಮೇಲೆ ಮಲಗಿದ ಅಮ್ಮ, ನರ್ಸ್‌ ಬೆರಳಿನ ಉಂಗುರ ತೆಗೆಯುವಾಗ, ಅಮ್ಮ “ತೆಗೆಯಲೇ ಬೇಕಾ’ ಎಂಬಂತೆ ನೋಡಿ ಕಣ್ಣು ತುಂಬಿ  ಕೊಂಡಿದ್ದಳು. ಅಮೇಲೆ ಉಂಗುರ ಮಾತ್ರ ಉಳಿಯಿತು.

ಚಿಕ್ಕಂದಿನಲ್ಲಿ ಕರೆಂಟಿಲ್ಲದ ಕತ್ತಲೆ ಕೋಣೆಯಲ್ಲಿ ಅಮ್ಮ ದೇವರಿಗೆ ದೀಪ ಹಚ್ಚುವಾಗ ಸಣ್ಣ ಬೆಳಕಿನಲ್ಲಿ ಪಕ್ಕನೆ ಹೊಳೆಯವ ಉಂಗುರದ ಚಿತ್ರ, ಅಮ್ಮ ಮೆಟ್ಟು ಗತ್ತಿಯ ಮೇಲೆ ಕುಳಿತು ಹಲಸಿನ ಕಾಯಿ ಬಿಡಿಸುವಾಗ   ಉಂಗುರಕ್ಕೆ ಸುತ್ತಿದ ಮೇಣ ಬಿಡಿಸುವ ಅಮ್ಮನ ಚಿತ್ರ, ಬಕೇಟಿನಲ್ಲಿ ಬಟ್ಟೆ ನೆನೆಸುವಾಗ ಸರ್ಫಿನ ನೊರೆ ತೆಗೆದಂತೆ ನಿಧಾನಕ್ಕೆ ಬೆರಳಿನಲ್ಲಿ ಪಳ ಪಳಿಸುತಿದ್ದ ಉಂಗುರದ ಚಿತ್ರ ಮಾತ್ರ ಅಮ್ಮ ಹೋದ ಮೇಲೂ ಹಾಗೆ ಉಳಿದು ಕೊಂಡು ಬಿಟ್ಟಿದೆ.

ನಮ್ಮಲ್ಲಿ ವಂಕಿ ಉಂಗುರ ಸಂಪ್ರದಾಯ, ಮದುವೆಯಾದವರು ಮಾತ್ರ ಹಾಕುವಂತದ್ದು. ಹೆಂಡತಿಯ ಬೆರಳಲ್ಲೂ ಅಂತದ್ದೇ ಇದೆ. ನಮ್ಮ ಏಕಾಂತದ ಗಳಿಗೆಯಲ್ಲಿ ಅವಳ ಬೆರಳು ಹಿಡಿದು, ಉಂಗುರ ಮುಟ್ಟಿ, ತಿರುವಿ, ಅಮ್ಮನ ಉಂಗುರದ ಕಥೆ ನೆನಪು ಮಾಡಿಕೊಳ್ಳುವುದು ಒಂದು ಗೀಳು.

ತಮಾಷೆ ಹುಟ್ಟುಗುಣವಾದರೆ, ಇಂತಹ ಭಾವುಕತೆಗಳೇ ದೌರ್ಬಲ್ಯ. ಸಾಕು, ಅತೀ ಭಾವುಕತೆ ಒಳ್ಳೆಯದಲ್ಲ.  ನಮ್ಮಲ್ಲೊಬ್ಬರು ಹೇಳುವ ಹಾಗೆ ಭಾವುಕತೆ ಎಲ್ಲಾ ಒಳ್ಳೆದಲ್ಲ. ಬೋಳು ಮರದ ಹಾಗೆ ಇಬೇìಕು. ಯಾವ ಗಾಳಿ ಮಳೆಯೂ ಮರವನ್ನ ಅಲ್ಲಾಡಿಸಲಾರದು. ನಿಜ, ನಿರ್ಮೋಹಿ­ಯಾಗ ಬೇಕು. ಗಾಳಿ ಮಳೆಗೆ ಅಲ್ಲಾಡದ ಬೋಳುಮರದ ಹಾಗೆ. ಇದು ಎಲೆಯುದುರುವ ಕಾಲ.

ಆಶಿಷ್‌ ಮಾರಾಳಿ

(ಅಕ್ಟೋಬರ್‌ 19 ರಂದು ಫೇಸ್‌ಬುಕ್‌ನಲ್ಲಿ ಪ್ರಕಟವಾದ ಬರಹ) 

ಟಾಪ್ ನ್ಯೂಸ್

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.