ನಿಯಮವಿರುವುದೇ ಉಲ್ಲಂಘಿಸಲು!


Team Udayavani, Apr 21, 2019, 6:00 AM IST

8

ಗುರುಮಠವೊಂದರಲ್ಲಿ ಪ್ರತೀ ತರಗತಿ ಒಂದು ತಾಸಿನ ಅವಧಿಯದಾಗಿತ್ತು. ತರಗತಿ ಮುಕ್ತಾಯದ ಕ್ಷಣಕ್ಕೆ ಬಂದ ಕೂಡಲೇ “ಢಣ್‌’ ಎಂದು ಗಂಟೆ ಬಾರಿಸಲಾಗುತ್ತಿತ್ತು. ಇದು ಕಲಿಕಾ ವರ್ಷದ ಆರಂಭದ ದಿನಗಳಲ್ಲಿ ಮಾತ್ರ. ಆಮೇಲೆ ನಿಧಾನವಾಗಿ ಗಂಟೆ ಬಾರಿಸುವ ಪದ್ಧತಿಯನ್ನು ನಿಲ್ಲಿಸುತ್ತಿದ್ದರು. ಗಂಟೆ ಬಾರಿಸದೆಯೇ ಒಂದು ತಾಸಿನ ಅವಧಿಯಾಗಿರುವುದು ಗುರುಗಳಿಗೂ ಶಿಷ್ಯರಿಗೂ ಅರಿವಾಗಿಬಿಡುತ್ತಿತ್ತು ; ಬೆಳಗ್ಗೆ ಬೇಗನೆ ಏಳಬೇಕೆಂದು ಸಂಕಲ್ಪಿಸಿ ರಾತ್ರಿ ಮಲಗಿದರೆ, ಆಲಾರಂ ಕ್ಲಾಕ್‌ ಇಲ್ಲದೆಯೂ ಎಚ್ಚರವಾಗುತ್ತದಲ್ಲ… ಹಾಗೆ !

“ಢಣ್‌’ ಎಂಬ ಗಂಟೆಯ ಸದ್ದು ಎಂಬುದು ನಿಯಮಪಾಲನೆಗಿರುವ ಸೂಚನೆ. ತುಂಟ ಹುಡುಗನೊಬ್ಬ ಅದನ್ನು ಬೇಗನೆ ಬಾರಿಸಿಬಿಟ್ಟರೆ ತರಗತಿ ಕೆಲವು ನಿಮಿಷಗಳಿಗಿಂತ ಮೊದಲೇ ಮೊಟಕುಗೊಳ್ಳಬಹುದು ಅಥವಾ ಗಂಟೆಯ ಸದ್ದು ಮೊಳಗಿದ ಬಳಿಕವೂ ಗುರು ತನ್ನ ತರಗತಿಯನ್ನು ಮುಂದುವರಿಸಬಹುದು. ನಿಯಮವೆಂಬುದು ಇದ್ದರೆ, ಅದರ ಜೊತೆಗೆ ಉಲ್ಲಂಘನೆಯೂ ಇದ್ದೇ ಇರುತ್ತದೆ.

ಉಲ್ಲಂಘನೆ ಸಂಭವಿಸುವುದೇ ನಿಯಮವಿರುವುದರಿಂದಾಗಿ !
ಉಲ್ಲಂಘಿ ಸಬಾರದೆಂದಾದರೆ ಆ ನಿಯಮ “ಒಳಗೆ’ ಹುಟ್ಟಿಕೊಳ್ಳಬೇಕು. ಮೊಳಗಬೇಕಾಗಿರುವುದು ಹೊರಗಿನ ಗಂಟೆಯಲ್ಲ, ಒಳಗಿನದ್ದು. ಹಾಗಾಗಿಯೇ, ಆ ಗುರುಮಠದಲ್ಲಿ ಗಂಟೆ ಬಾರಿಸುವ ಪದ್ಧತಿಯನ್ನು ನಿಧಾನವಾಗಿ ನಿಲ್ಲಿಸಿರುವುದು ಮತ್ತು ಅದು “ಒಳಗೆಯೇ’ ಮೊಳಗುವಂತೆ ಪ್ರೇರಣೆ ನೀಡಿರುವುದು.

“ನಿಯಮ-ನಿಬಂಧನೆಗಳ ಕಟ್ಟಡದೊಳಕ್ಕೆ ಮನುಷ್ಯ ಬಂಧಿಯಾಗಿದ್ದಾನೆ’ ಎನ್ನುತ್ತಿದ್ದರು ಓಶೋ.
ಇವತ್ತು ಕಾರ್ಪೊರೇಟ್‌ ಆಫೀಸಿನೊಳಗೂ ಎಷ್ಟೊಂದು ನಿಯಮಗಳು! ಹೇಗೆ ಮಾತನಾಡಬೇಕು, ಮಾತನಾಡುವಾಗ ಹೇಗೆ ಭುಜ ಕುಣಿಸಬೇಕು, ಮುಖಚರ್ಯೆ ಹೇಗಿರಬೇಕು, ಎಷ್ಟು ನಗಬೇಕು, ಹೇಗೆ ಶೇಕ್‌ ಹ್ಯಾಂಡ್‌ ಮಾಡಬೇಕು, ತಿಂಡಿಯನ್ನು ಹೇಗೆ ತಿನ್ನಬೇಕು, ತಿಂದ ಮೇಲೆ ಚಮಚಾವನ್ನು ಹೇಗೆ ಇಡಬೇಕು…ಹೀಗೆ ಹಲವಾರು. ರಸ್ತೆಗೆ ಇಳಿದರೆ ಒಂದಿಷ್ಟು ಟ್ರಾಫಿಕ್‌ ರೂಲ್ಸ್‌. ಮನೆಯಲ್ಲಿಯೂ ಗಟ್ಟಿಯಾಗಿ ಮಾತನಾಡುವಂತಿಲ್ಲ, ಪಕ್ಕದ ಮನೆಗೆ ಕೇಳೀತು !

ಒಬ್ಬ ಸಜ್ಜನನಿದ್ದ. ಪರಮ ಸಜ್ಜನ. ಸುಳ್ಳನ್ನು ಹೇಳಲಿಲ್ಲ, ಭಂಗಿಯನ್ನು ಸೇದಲಿಲ್ಲ, ಧನವನ್ನು ಅಪೇಕ್ಷಿಸಲಿಲ್ಲ. ನೀತಿಯನ್ನು ತಪ್ಪಲಿಲ್ಲ, ಕೆಟ್ಟ ಭಾಷೆ ನುಡಿಯಲಿಲ್ಲ , ಸ್ತ್ರೀಸಂಗ ಮಾಡಲಿಲ್ಲ, ಹುಡುಗರ ಬಗ್ಗೆ ಅನ್ಯ ಭಾವನೆ ತಳೆಯಲಿಲ್ಲ…

ಅವನ ಕುರಿತು ಯಾವ ನೆಗೆಟಿವ್‌ ವಿಚಾರ ಹೇಳಿದರೂ “ಇಲ್ಲ’ ಎಂಬುದೇ ಉತ್ತರವಾಗಿರುತ್ತಿತ್ತು. ಊರಿನಿಂದ ದೂರವಿರುವ ಮನೆಯಲ್ಲಿ ಒಂಟಿಯಾಗಿ, ಎಲ್ಲರಿಗೂ ಪ್ರಿಯನಾಗಿ “ಸ್ಮಾರ್ಟ್‌’ ಎನ್ನುತ್ತಾರಲ್ಲ, ಹಾಗೆ ಬದುಕುತ್ತಿದ್ದ. ಅವನಲ್ಲಿ ಯಾರಾದರೂ, “ಇವೆಲ್ಲ ಹೇಗೆ ಸಾಧ್ಯವಾಯಿತು’ ಎಂದು ಕೇಳಿದರೆ, ನಕ್ಕು ಮೇಲೆ ನೋಡುತ್ತ, “ಎಲ್ಲ ಅವನ ದಯೆ’ ಎನ್ನುತ್ತಿದ್ದ.

ಅವನು ವೃದ್ಧನಾದ. ಅವನ ಕುಟಿಗೆ ಜನ ಬಂದು ಹೋಗತೊಡಗಿದರು. ಎಲ್ಲರಿಗೂ ಅವನ ಬಗ್ಗೆ ಗುರುಭಾವ ಮೂಡುತ್ತಿತ್ತು. “”ನೀವು ಹೇಗೆ ಇಷ್ಟೊಂದು ಪರಿಶುದ್ಧ ಬಾಳ್ವೆಯನ್ನು ನಡೆಸಿದಿರಿ?” ಎಂದು ಅವನನ್ನು ಕೇಳುವವರೇ ಎಲ್ಲರೂ. ಅವನು ಸುಮ್ಮನೆ ನಕ್ಕು ಬಿಡುತ್ತಿದ್ದ. ಇನ್ನೇನು ಸಾಯುವ ಕ್ಷಣ ಸಮೀಪಿಸಿತು ಎನ್ನುವಾಗ ಆ ಸಜ್ಜನ ತನಗೆ ಪ್ರಿಯವಾದವನೊಬ್ಬನನ್ನು ಕರೆದು ಅವನ ಕಿವಿಯಲ್ಲಿ ಸಂಕಟದಿಂದ ಹೇಳಿಕೊಂಡ‌, “”ನಾನು ಪರಿಶುದ್ಧವಾಗಿದ್ದದ್ದು ನಿಜವೇ. ಆದರೆ, ಬದುಕಿನ ನಿಜವಾದ ಆನಂದವನ್ನು ಕಳೆದುಕೊಂಡೆ. ನನ್ನ ಮೇಲೆ ನಾನೇ ನಿಯಮಗಳನ್ನು ಹೇರಿಕೊಂಡೆ. ಆ ನಿಯಮಗಳನ್ನು ಪಾಲಿಸುವುದರಲ್ಲಿಯೇ ನನ್ನ ಬದುಕು ಮುಗಿದುಹೋಯಿತು” ಪ್ರೀತಿ ಶೆಣೈ ಎಂಬ ಪ್ರಸಿದ್ಧ ಇಂಗ್ಲಿಷ್‌ ಲೇಖಕಿಯ ಕಾದಂಬರಿಯೊಂದರ ಹೆಸರು : ದ ರೂಲ್‌ ಬ್ರೇಕರ್ಸ್‌! ಇದು ಸ್ವಾಭಿಮಾನದ ಬದುಕಿಗಾಗಿ ಒಬ್ಟಾಕೆ “ನಿಯಮ’ವನ್ನು ಮುರಿಯುವ ಕಥನ.

ಇಂದಿನ ಶಾಲೆಗಳಲ್ಲಿ ವಿದ್ಯೆಗಿಂತ ಹೆಚ್ಚಾಗಿ ಶಿಸ್ತುಪಾಲನೆಯನ್ನು ಮಕ್ಕಳಿಗೆ ಕಲಿಸುತ್ತಾರೆ. ಟೈ ಕಟ್ಟುವುದು ಕೊಂಚ ಸರಿಯಾಗದಿದ್ದರೂ ಅದು ಅಸಭ್ಯತೆ! ಈ ಶಿಸ್ತು ಅಂತರಂಗದೊಂದಿಗೆ ನುಸಂಧಾನಗೊಳ್ಳದಿದ್ದರೆ ಭವಿಷ್ಯದ ಬದುಕು ಯಾಂತ್ರಿಕವಾಗತೊಡಗುತ್ತದೆ. ಇದನ್ನು ಮುರಿಯುವುದು ಹೇಗೆ ಎಂಬ ಕಡೆಗೆ ಮನಸ್ಸು ಚಾಚಿಕೊಳ್ಳುತ್ತದೆ.

ಇವತ್ತು ಸಮಯಕ್ಕೆ ಸರಿಯಾಗಿ ಆರಂಭವಾಗಿ, ಸಮಯಕ್ಕೆ ಸರಿಯಾಗಿ ಮುಕ್ತಾಯಗೊಳ್ಳುವ ಕಾರ್ಯ ಕ್ರಮಗಳ ಬಗ್ಗೆ ಎಲ್ಲರಿಗೂ ಮೆಚ್ಚುಗೆಯೇ. ತಪ್ಪಲ್ಲ. ಆದರೆ, ಕಾರ್ಯಕ್ರಮದೊಳಗೆ ಏನಿದೆ ಎಂದು ಯಾರೂ ವಿಮರ್ಶೆ ಮಾಡುವುದಿಲ್ಲ. ಒಂದು ಒಳ್ಳೆಯ ಸಂಗೀತ ಗಾಯನವನ್ನು “ಠಣ್‌’ ಎಂದು ಆರಂಭಿಸಿ, “ಠಣ್‌’ ಎಂದು ಮುಗಿಸುವುದಕ್ಕಾಗುತ್ತದೆಯೆ? ನಿಯಮ ಎಂಬುದು ಬದುಕನ್ನು ರೂಪಿಸುವ ಉಪಕರಣ ಮಾತ್ರ. ಅದೇ ಬದುಕಲ್ಲ !

ಮೈತ್ರೇಯಿ

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.