ವಕ್ರದಂತ ಪುರಾಣ! 


Team Udayavani, Aug 20, 2017, 7:40 AM IST

purana.jpg

ನಿಮಗೀಗಾಗಲೇ ತಿಳಿದಿರಬಹುದು, ನಾನು ಹೇಳಹೊರಟಿರುವುದು ಏನನ್ನು ಎಂದು. ಮುತ್ತು ಪೋಣಿಸಿದಂತೆ ಹಲ್ಲು ಹೊಂದಿರುವವರಿಗೆ ಹೇಗೆ ತಿಳಿಯಬೇಕು; ನಮ್ಮಂತಹ “ವಕ್ರದಂತ’ದವರ ಕಷ್ಟ. ಸರಿಯಾಗಿ ಕ್ರಮದÇÉೇ ಇದ್ದವು ನನ್ನ ಹಾಲು ಹಲ್ಲುಗಳು. ನಾನು ಎರಡೋ ಮೂರನೆಯ ತರಗತಿಯಲ್ಲಿರುವಾಗ ಒಂದೊಂದಾಗಿ ಬಿದ್ದು ಹೋಗಿ ಹೊಸ (ಮಜ್ಜಿಗೆ?) ಹಲ್ಲುಗಳು ಬರಲಾರಂಭಿಸಿದವು. ಮೊದಮೊದಲು ಸರಿಯಾಗಿಯೇ ಬಂದ ಈ ಹಲ್ಲುಗಳು ನಂತರ ನಾ ಮೊದಲು ತಾ ಮೊದಲು ಎಂದು ಅಡ್ಡಾದಿಡ್ಡಿಯಾಗಿ ಬರತೊಡಗಿದವು. ಎದುರಿನ ಹಲ್ಲುಗಳ ಕತೆ ಹೀಗಾದರೆ ಹಿಂದಿನ ದವಡೆ ಹಲ್ಲುಗಳು ಕೂಡ ನಾವೇನು ಕಡಿಮೆ ಎಂಬಂತೆ ಸಯಾಮಿ ಅವಳಿಗಳಂತೆ ಒಂದರ ಪಕ್ಕದಲ್ಲಿ ಒಂದು ಬಂದವು. ಅಪ್ಪಟ ಸಸ್ಯಾಹಾರಿಯಾಗಿದ್ದ ನನ್ನನ್ನು ನೋಡಿ ಗೆಳತಿಯರು, “”ಛೇ, ನಮಗಾದರೂ ಇಂತಹ ಹಲ್ಲು ಇದ್ದಿದ್ದರೆ ಚಿಕನ್‌ ತುಂಡನ್ನು ಚೆನ್ನಾಗಿ ಅಗಿದು ತಿನ್ನಬಹುದಿತ್ತು” ಎಂದು ಅಸೂಯೆಪಡುತ್ತಿದ್ದರು. ಸೌಂದರ್ಯಪ್ರಜ್ಞೆ ಅಷ್ಟಾಗಿ ಯಾರಲ್ಲೂ  ಇರದಿದ್ದ ಆ ಕಾಲದಲ್ಲಿ ನಾನು ಹಲ್ಲುಗಳ ಬಗ್ಗೆ ಸ್ವಲ್ಪವೂ ಕೀಳರಿಮೆ ಇಲ್ಲದಂತೆ ನನ್ನ ಪ್ರೌಢಶಾಲಾ ಶಿಕ್ಷಣವನ್ನು ಪೂರೈಸಿದೆ.

ಮುಂದೆ ಕಾಲೇಜಿಗೆ ಸೇರಿದಾಗ ಅಲ್ಲಿಯ ಹೊಸ ಗೆಳತಿಯರ ಹಾವಭಾವ, ಬೆಡಗು ಬಿನ್ನಾಣ, ನಗು, ಮಾತುಕತೆ ಎÇÉಾ ನೋಡಿ ನಾನೂ ಅವರ ಹಾಗೇ ನಾಜೂಕತನವನ್ನು ಕಲಿತುಕೊಳ್ಳಬೇಕು ಎಂದುಕೊಂಡೆ. ಆದರೆ ಮಾತಿಗೆ ಮುಂಚೆಯೇ ನಗುವ ಹಾಗೂ ಮಾತುಮಾತಿಗೆ ನಗುವ ನನಗೆ ನನ್ನ ವಕ್ರಹಲ್ಲುಗಳೇ ಶತ್ರುಗಳಂತೆ ತೋರತೊಡಗಿದವು. ಸರಿ, ಮನೆಯಲ್ಲಿ ಎಲ್ಲರೂ ಎಷ್ಟು ಬೇಡವೆಂದರೂ ಕೇಳದೆ, ಅಪ್ಪನನ್ನು ಕಾಡಿಬೇಡಿ ಹಲ್ಲಿನ ವೈದ್ಯರ ಬಳಿ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದೆ. ಅಲ್ಲಿ ಹಲ್ಲುಗಳನ್ನೆಲ್ಲ ಕೂಲಂಕಷವಾಗಿ ಪರಿಶೀಲಿಸಿದ ವೈದ್ಯರು, “”ಇದನ್ನು ಸರಿಮಾಡಬೇಕಾದರೆ ಕೆಲವು ಹೊಸ ಹಲ್ಲುಗಳನ್ನು ಕೀಳಬೇಕಾಗುತ್ತದೆ. ಆಗ ಸ್ವಲ್ಪ ಜಾಗವಾಗಿ ಅಡ್ಡಾದಿಡ್ಡಿಯಾಗಿದ್ದವು ಸರಿಯಾಗಬಹುದು” ಎಂದರು. ಅದನ್ನು ಕೇಳಿ ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಅಷ್ಟರಲ್ಲಿ ಅಪ್ಪ,””ಡಾಕ್ಟ್ರೇ, ನಿಮ್ಮ ಅನಿಸಿಕೆ ಏನು?” ಎಂದರು. ಅದಕ್ಕೆ ಆ ಒಳ್ಳೆಯ ವೈದ್ಯರು, “”ನನ್ನ ಪ್ರಕಾರ ಅದು ಇದ್ದ ಹಾಗೇ ಇರಲಿ, ಒಂದು ರೀತಿ ಚೆನ್ನಾಗೇ ಕಾಣುತ್ತದೆ, ಸುಮ್ಮನೆ ಹೊಸಹಲ್ಲುಗಳನ್ನು ಇಷ್ಟು ಸಣ್ಣ ಪ್ರಾಯದಲ್ಲಿ ಕೀಳುವುದು ಸರಿಯಲ್ಲ” ಎನ್ನಬೇಕೆ? ಅಷ್ಟೇ ಸಾಕು, ಎಂಬಂತೆ ಅಪ್ಪ ಅಲ್ಲಿಂದ ನನ್ನನ್ನು ದರದರನೇ ಮನೆಗೆ ಕರೆತಂದರು. ಅಲ್ಲಿ ನನಗೆ ಎರಡನೇ ಸುತ್ತು ಉಪದೇಶ ಶುರುವಾಯಿತು. ಆಗ ಊರಿಗೆ ಬಂದಿದ್ದ ನನ್ನ ಬೊಂಬಾಯಿ ಚಿಕ್ಕಮ್ಮ ,  “”ಅಲ್ಲ ಕಣೇ, ಮೌಸಮಿ ಚಟರ್ಜಿ ಹಲ್ಲು ಕೂಡ ಹೀಗೆ ಇವೆ, ಅವಳು ನಗುವಾಗ ಎಷ್ಟು ಚೆನ್ನಾಗಿ ಕಾಣುತ್ತಾಳೆ, ಅವಳು ಮಾತ್ರವಲ್ಲ ಕನ್ನಡದ ಮಾಲಾಶ್ರೀ ಹಲ್ಲುಗಳೂ ಹೀಗೆ ತಾನೆ?” ಎಂದಾಗ ಚೂರು ಸಮಾಧಾನವಾಯಿತು. ಅÇÉೇ ಇದ್ದು ಎಲ್ಲವನ್ನೂ ನೋಡುತ್ತಿದ್ದ ತಮ್ಮಂದಿರಿಬ್ಬರು ಮಾಲಾಶ್ರೀ, ಮಾಲಾಶ್ರೀ ಎಂದು ಅಣಕಿಸಲು, ಇಬ್ಬರತ್ತ ಕೆಂಗಣ್ಣು ಬೀರಿದೆ. ಅಂತೂ ಇಂತೂ ಎಲ್ಲರ ಬುದ್ಧಿವಾದ ಮನಸ್ಸಿಗೂ ಹಲ್ಲಿಗೂ ನಾಟಿ ಸರಿ ಇನ್ನು ಹಲ್ಲಿನ ಬಗ್ಗೆ ಅಲೋಚನೆ ಮಾಡುವುದಿಲ್ಲ ಎಂದು ಗಟ್ಟಿ ಮನಸ್ಸು ಮಾಡಿಕೊಂಡೆ.

ಮುಂದೆ ಇಂಜಿನಿಯರಿಂಗ್‌ ಶಿಕ್ಷಣಕ್ಕೆಂದು ಮಣಿಪಾಲಕ್ಕೆ ಸೇರಿದಾಗ ಕೂಡ ಮಾಡೆಲಿಂಗ್‌ ಕ್ಷೇತ್ರದಿಂದಲೇ ಬಂದಂತಿದ್ದ ಗೆಳತಿಯರ ನಡುವೆಯೂ ಆತ್ಮವಿಶ್ವಾಸದಿಂದಲೇ ಇ¨ªೆ. ಒಮ್ಮೆ ಕಾಲೇಜಿನಲ್ಲಿ ಬಿಹಾರದ ಹುಡುಗನೊಬ್ಬ , “”ನಿನ್ನ ಹಲ್ಲು ನಿನ್ನ ಮುಖಕ್ಕೆ ಚೆನ್ನಾಗಿ ಒಪ್ಪುತ್ತದೆ” ಎಂದು ಹೇಳಿದಾಗ ತರಗತಿಯಲ್ಲಿ ಫ‌ರ್ಸ್ಡ್ ಬಂದಿದ್ದಕ್ಕಿಂತ ಹೆಚ್ಚು ಖುಷಿಯಾಗಿತ್ತು. ಈ ವಿಷಯವನ್ನು ಮನೆಯಲ್ಲಿ ಬಂದು ಹೇಳಿದಾಗ ತಮ್ಮಂದಿರು, “”ಅಕ್ಕಾ, ಅವನು ಬಿಹಾರದಲ್ಲಿ ದನದ ಹಲ್ಲು ಮಾತ್ರ ನೋಡಿರುತ್ತಾನೆ, ಅದಕ್ಕೆ ಹೋಲಿಸಿ ನಿನ್ನ ಹಲ್ಲು ಚೆನ್ನಾಗಿದೆ ಎಂದಿರಬಹುದು ಅಥವಾ ಅವನಿಗೆ ಸ್ವಲ್ಪ ದೃಷ್ಟಿ ದೋಷವಿರಬೇಕು” ಎಂದು ನನ್ನ ಸಂತೋಷದ ಬಲೂನಿನ ಗಾಳಿ ತೆಗೆದರು. “”ಸರಿ, ಮತ್ತೆ ಪಾಠದ ಬಗ್ಗೆ ಡೌಟ್‌ ಕೇಳಲು ಬನ್ನಿ, ಕಲಿಸುತ್ತೇನೆ ನಿಮಗೆ”  ಎಂದುಕೊಂಡೆ. ಅಷ್ಟರಲ್ಲಿ ಅಪ್ಪ, “”ಅಲ್ಲ ಕಣೇ, ಉಬ್ಬು ಹಲ್ಲಿಗಿಂತ ವಕ್ರ ಹಲ್ಲು ಎಷ್ಟೋ ಪಾಲು ಮೇಲು” ಎಂದು  ವೇದಾಂತಿಯಂತೆ ನುಡಿದಾಗ ಹೌದೆನಿಸಿತು.

ಶಿಕ್ಷಣ ಮುಗಿದು ಉಪನ್ಯಾಸಕಿಯಾಗಿ ಕೆಲಸ ಸಿಕ್ಕಾಗ ಖುಷಿಯಿಂದಲೇ ಒಪ್ಪಿಕೊಂಡೆ. ಒಂದು ಗಂಟೆಯ ಕ್ಲಾಸಿಗೆ  ಎರಡು-ಮೂರು ಗಂಟೆ ತಯಾರಿ ಮಾಡಿ ಹಾಗೂ ಹೀಗೂ ಒಂದು ವಾರದ ತರಗತಿಗಳು ಮುಗಿದ ಬಳಿಕ ವಿದ್ಯಾರ್ಥಿಗಳ ಬಳಿ ಫೀಡ್‌- ಬ್ಯಾಕ್‌ ಕೇಳಿದೆ. ಅದರಲ್ಲಿ ಒಬ್ಬ  ಪುಣ್ಯಾತ್ಮ, “”ಮೇಡಂ, ನಿಮ್ಮ ಪಾಠ ತುಂಬಾ ಇಷ್ಟ, ನೀವು ನಗುವಾಗ ಚೆನ್ನಾಗಿ ಕಾಣುತ್ತೀರಿ” ಎಂದು ಬರೆದಿದ್ದ. ನನಗಂತೂ ಸ್ವರ್ಗಕ್ಕೆ ಮೂರೇ ಗೇಣು.

ಆದರೆ, ಕೊನೆಯಲ್ಲಿ ಮನಸ್ಸಿನಲ್ಲಿದ್ದ ಆತಂಕ ಎದುರಿಸುವ  ಸಮಯ ಬಂದೇ ಬಂತು. ಅದೇನೆನ್ನುವಿರಾ? ವಧು ಪರೀಕ್ಷೆ! ಹೌದು, ವಧು ಪರೀಕ್ಷೆಯೇ ! ಜಾತಕ ಎÇÉಾ ಕೂಡಿ ಬಂದ ನಂತರ ಹುಡುಗಿ ನೋಡುವ ಶಾಸ್ತ್ರ . ನನಗೋ ಸೀರೆ ಉಡುವ ಚಿಂತೆಗಿಂತ ವಕ್ರಹಲ್ಲು ಗೊತ್ತಾಗದಂತೆ ಹೇಗೆ ನಗುವುದು ಎಂಬ ಚಿಂತೆ. ಅಂತೂ ಆ ದಿನ ಗಲಿಬಿಲಿಯಲ್ಲಿ ಏನು ಮಾತಾಡಿದೆನೋ, ಹೇಗೆ ನಕ್ಕೆನೋ ಅಂತೂ “ಹುಡುಗಿ ಒಪ್ಪಿಗೆ’ ಎಂಬ ಸಂದೇಶ ಬಂತು. ಆದರೆ, ನನಗೆ ಮನದÇÉೇ ಅಳುಕು. ಹುಡುಗ ನನ್ನ ಹಲ್ಲು ಸರಿಯಾಗಿ ನೋಡಿರಲ್ಲಿಕ್ಕಿಲ್ಲ, ನೋಡಿದ್ದರೆ ಒಪ್ಪಿಗೆ ನೀಡುತ್ತಿರಲಿಲ್ಲ.

ಮುಂದೆ ಗೊತ್ತಾಗಿ ತೊಂದರೆಯಾಗುವುದಕ್ಕಿಂತ ಈಗಲೇ ತಿಳಿಸುವುದು ಒಳ್ಳೆಯದು ಎಂದು ಮನೆಯಲ್ಲಿ ಹೇಳಿದಾಗ ಎಲ್ಲರೂ ಕಷ್ಟಪಟ್ಟು ನಗು ತಡೆದುಕೊಂಡು ನನ್ನನ್ನು “ಸುಮ್ಮನಿರು’ ಎಂದು ಗದರಿದರು. ಮುಂದೆ ಮದುವೆಯ ನಂತರ ಕೇಳಿದಾಗ ತಿಳಿದು ಬಂದಿದ್ದೇನೆಂದರೆ, ನನ್ನ ಹುಡುಗನಿಗೆ ಮೊದಲು ಇಷ್ಟವಾಗಿದ್ದೇ ನನ್ನ (ವಕ್ರ) ಹಲ್ಲುಗಳಂತೆ. ಅದಕ್ಕೆ ಸರಿಯಾಗಿ ಆತನ ಹಲ್ಲುಗಳು ಒಂದರಿಂದ ಇನ್ನೊಂದು ಮಾರು ದೂರ. ಸರಿ, ಇವೆರಡರ ಕಾಂಬಿನೇಶನ್‌ ಆಗಿ ನಮ್ಮ ಮಕ್ಕಳ ಹಲ್ಲು ಸರಿಯಾಗಿ ಬರುತ್ತವೆ ಎಂದು ಕನಸು ಕಂಡಿದ್ದೇ ಬಂತು.

ಕ್ರಮವಾಗಿಯೇ ಇದ್ದ ನನ್ನ ಮಗನ ಹೊಸ ಹಲ್ಲು, ಆಡುವಾಗ ಒಮ್ಮೆ ಬಿದ್ದು ಒಸಡಿನ ಒಳಗೆ ತಳ್ಳಲ್ಪಟ್ಟು ಮುಂದೆ ಮತ್ತೆ ಹೊರಬರುವಾಗ ವಕ್ರವಾಗಿ ಬರಬೇಕೆ? ಇನ್ನು ಮಗಳ ವಿಷಯಕ್ಕೆ ಬಂದರೆ ಅಣ್ಣನೊಡನೆ ಸಮಸಮಕ್ಕೆ ಜಗಳವಾಡುವ ಆಕೆಗೆ ಏನೂ ಅಡೆತಡೆ ಇಲ್ಲದಿದ್ದರೂ ವಕ್ರಹಲ್ಲುಗಳೇ ಬಂದಿವೆ. ಇಲ್ಲದಿದ್ದರೆ, “ಅಣ್ಣನಿಗೆ ಇರುವಂತಹುದೇ ಹಲ್ಲುಗಳು ನನಗೂ ಬೇಕು’ ಎಂದಿದ್ದರೆ ನಾನು ಸರಿಯಿದ್ದ ಹಲ್ಲು ವಕ್ರ ಮಾಡುವವರನ್ನು ಹುಡುಕಿಕೊಂಡು ಹೋಗಬೇಕಾಗುತ್ತಿತ್ತು.
ಹೀಗೆÇÉಾ ಇರಲು ಕೊನೆಯಲ್ಲಿ ನಾನೊಂದು ತೀರ್ಮಾನಕ್ಕೆ ಬಂದಿದ್ದೇನೆ.
ಇರುವ ಭಾಗ್ಯವ ನೆನೆದು
ಬಾರೆನೆಂಬುದ ಬಿಡು
ಹರುಷಕಿದೆ ದಾರಿ
ಎಂದು ಸರ್ಕಾರಿ ಬಸ್ಸಿನಲ್ಲಿ ಬರೆದ ಕವಿವಾಣಿಯಂತೆ ಹರುಷಕ್ಕೆ ದಾರಿ ಕಂಡುಕೊಂಡಿದ್ದೇನೆ. ಹಲ್ಲಿನÇÉೇನಿದೆ, ಹಲ್ಲು ಹೇಗೇ ಇರಲಿ, ಮನಸ್ಸು ಮತ್ತು ಬುದ್ಧಿ ಮಾತ್ರ ವಕ್ರವಿಲ್ಲದಿರಲಿ, ಅಲ್ಲವೆ?

– ಶಾಂತಲಾ ಎನ್‌. ಹೆಗ್ಡೆ

ಟಾಪ್ ನ್ಯೂಸ್

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

I have not encroached on anyone’s jurisdiction: Modi

Narendra Modi: ನಾನು ಯಾರದ್ದೇ ಅಧಿಕಾರ ವ್ಯಾಪ್ತಿ ಅತಿಕ್ರಮಿಸಿಕೊಂಡಿಲ್ಲ: ಮೋದಿ

Trump imposes no taxes on India, only taxes on Canada and China!

US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್‌!

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.