ಭೀಕರ ಭೂಕಂಪ ಕಾದಿದೆಯೆ?


Team Udayavani, Dec 3, 2017, 6:55 AM IST

kampana.jpg

2018ರಲ್ಲಿ ಸಾಲುಸಾಲಾಗಿ ಸಂಭವಿಸಲಿರುವ ಭೀಕರ ಭೂಕಂಪಗಳಿಂದ ಭೂಮಿಯ ಸರ್ವನಾಶವಾಗಲಿದೆ! ಈ ವರ್ಷ 25-30 ಸಲ ಭೂಮಿ ಗಢಗಢ ನಡುಗಿ ಸಂಪೂರ್ಣ ಧ್ವಂಸವಾಗಲಿದೆ.

ಪುಣ್ಯವಶಾತ್‌ ಇದರಿಂದೇನಾದರೂ ಬಚಾವಾದರೆ  2036ರ ಏಪ್ರಿಲ್‌ 13ರಂದು ಮತ್ತೆ ಕಾದಿದೆ ಘನಘೋರ ಗಂಡಾಂತರ. ಅದ್ಯಾವುದೋ “ಅಪೋಫಿಸ್‌’ ಎನ್ನುವ ಕ್ಷುದ್ರಗ್ರಹ ಭೂಮಿಯನ್ನು ಬಡಿದು ಪುಡಿ ಮಾಡಲು ಕಾದಿದೆಯಂತೆ!
ಈ ಆಪತ್ತಿನಿಂದಲೂ ಬಡಪಾಯಿ ಭೂಮಿ ಬದುಕುಳಿಯಿತು ಎನ್ನುವ. ಆದರೆ ಮಂಗಳೂರಿಗೆ ಮಾತ್ರ ಉಳಿಗಾಲವಿಲ್ಲ. ಮುಂದಿನ ನೂರು ವರ್ಷದೊಳಗೆ ಅರಬೀ ಸಮುದ್ರ ಉಕ್ಕೇರಿ, ಈ ಊರು ನೀರೊಳಗೆ “ಗುಳುಂ’ ಎಂದು ಮುಳುಗಿ ಮಾಯವಾಗಲಿದೆ!

ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ, ಮುಖ್ಯ ವಾಗಿ ಕೆಲವು ದೃಶ್ಯಮಾಧ್ಯಮ ವಾಹಿನಿಗಳಲ್ಲಿ ಈ ರೀತಿಯ ಪ್ರಳಯದ್ದೇ ಸುದ್ದಿ, ಸದ್ದು. ಬೆಚ್ಚಿಬೀಳಿಸುವ ಸರ್ವನಾಶದ ಸುದ್ದಿಗಳಿಗೆ “ನಾಸಾ’ ಸಂಸ್ಥೆಯ ಸಂಶೋಧನೆಗಳು ನೀಡಿರುವ ಮುನ್ಸೂಚನೆಗಳೆಂಬ ಅಧಿಕೃತತೆಯ ಅಡಿಗೆರೆ ಬೇರೆ.

ಮಾಧ್ಯಮಗಳ ಮೂಲಕ ಪ್ರಳಯ ಪಂಡಿತರು ಚರ್ಚಿಸುತ್ತಿರುವ ಹಂಚುತ್ತಿರುವ ಇಂತಹ ಸುದ್ದಿ ಸರಣಿಗಳ ಮೂಲ ಯಾವುದು? ಇವರು ಆಧಾರವಾಗಿ ಬಿಂಬಿ ಸುತ್ತಿರುವ ವೈಜ್ಞಾನಿಕ ಸಂಶೋಧನೆಗಳ ವಾಸ್ತವಾಂಶ ಏನು? ಇವುಗಳು ನಿಜವಾಗಿಯೂ ಭೂಮಿಯ ಸರ್ವ ನಾಶದ ಕುರಿತು ಏನಾದರೂ ಮುನ್ನೆಚ್ಚರಿಕೆ ನೀಡಿವೆಯೇ?

ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೊರಟಾಗ ಬಯಲಾಗುವ ಸತ್ಯವೇ ಬೇರೆ. ಈ ಭೀತಿ ಬಿತ್ತುವ ಕಥೆಗಳೆಲ್ಲವೂ ಯಾವುದೋ ಒಂದು ಅತಿ ಸಣ್ಣ ಮಾಹಿತಿ ತುಣುಕನ್ನು ಮಿತಿಮೀರಿ ಎಳೆದಾಡಿ ಹಿಗ್ಗಿಸಿ, ಭಯಾನಕವಾಗಿ ಉತ್ಪ್ರೇಕ್ಷಿತಗೊಳಿಸಿ ಬಿತ್ತರಿಸಿ ಓದುಗರ, ವೀಕ್ಷಕರ ಗಮನ ಸೆಳೆಯುವ ಪ್ರಯತ್ನ ಎನ್ನುವುದು ಗೊತ್ತಾಗಬೇಕಾದರೆ ಮುಂದೆ ಓದಿ.

2018, ಗಢಗಢ ಅÇÉಾಡಲಿದೆ ಭೂಮಿ!
ಈ ಸುದ್ದಿ ಹುಟ್ಟಿದ್ದು ಕೊಲರಾಡೊ ವಿವಿಯ ರೋಜರ್‌ ಬಿಲ್‌ಹಾಮ್‌ ಮತ್ತು ಮೊಂಟನಾ ವಿವಿಯ ರೆಬೆಕಾ ಬೆಂಡಿಕ್‌ ಎಂಬ ಭೂಭೌತ (ಜಿಯೋಫಿಸಿಕ್ಸ್‌) ವಿಜ್ಞಾನಿಗಳು ಪ್ರಕಟಿಸಿದ ಓಂದು ಸಂಶೋಧನಾ ಪ್ರಬಂಧದಿಂದ. 1900ರಿಂದ 2017ರ ತನಕ ಜಾಗತಿಕ ವಾಗಿ 7ಕ್ಕಿಂತ ಅಧಿಕ  ರಿಕ್ಟರ್‌ ಮಾಪನಾಂಕದ  ಪ್ರಬಲ ಭೂಕಂಪಗಳು ಯಾವ್ಯಾವ ಇಸವಿಗಳಲ್ಲಿ ಘಟಿಸಿವೆ ಎಂಬುದನ್ನು ಇವರು ಚಾರಿತ್ರಿಕ ಮಾಹಿತಿಗಳ ಮೂಲಕ ವಿಶ್ಲೇಷಿಸಿದಾಗ ಕೆಲವು ನಿರ್ದಿಷ್ಟ ವರ್ಷಗಳಲ್ಲಿ ಇಂತಹ ಭೂಕಂಪಗಳು ಹೆಚ್ಚಾಗಿರುವುದು ವ್ಯಕ್ತವಾಯಿತು. ಸಾಮಾನ್ಯವಾಗಿ ವರ್ಷಕ್ಕೆ 15ರಿಂದ 20ರಷ್ಟು ಪ್ರಬಲ ಭೂಕಂಪಗಳು ವರದಿಯಾಗಿದ್ದರೆ, ಕೆಲವು ವರ್ಷಗಳಲ್ಲಿ ಮಾತ್ರ ಇವುಗಳ ಸಂಖ್ಯೆ 25ರಿಂದ 30ರಷ್ಟು ಹೆಚ್ಚಾಗಿತ್ತು.

ಹೀಗೆ ಭೂಕಂಪಗಳು ಕೆಲವು ನಿರ್ದಿಷ್ಟ ವರ್ಷ ಹೆಚ್ಚಾಗಲು, ಗುಂಪು ಗುಂಪಾಗಿ ಸಂಭವಿಸಲು ಏನಾದರೂ ವಿಶೇಷ ಕಾರಣಗಳು ಇದ್ದಿರಬಹುದೇ ಎನ್ನುವ ಪ್ರಶ್ನೆ ಈ ವಿಜ್ಞಾನಿಗಳನ್ನು ಕಾಡಿತು. ಅಂತಹ ಕಾರಣಗಳು ಗೊತ್ತಾದರೆ, ಅವುಗಳನ್ನೇ ಆಧಾರವಾಗಿಟ್ಟುಕೊಂಡು ಭವಿಷ್ಯದಲ್ಲಿ ಯಾವ್ಯಾವಾಗ ಭೂಕಂಪಗಳು ಹೆಚ್ಚಾಗಿ ಸಂಭವಿಸಬಹುದು ಎಂಬುದರ ಮುನ್ಸೂಚನೆ ಪಡೆಯಬಹುದು ಎನ್ನುವುದು ಇವರ ಆಲೋಚನೆ. ಈ ಹಿನ್ನೆಲೆಯಲ್ಲಿ, ಭೂಕಂಪ ಹೆಚ್ಚಾಗಿ ವರದಿಯಾಗಿರುವ ಇಸವಿಗಳಲ್ಲಿ ಅಥವಾ ಅವುಗಳ ಹಿಂದೆ-ಮುಂದೆ ನಡೆದಿರುವ ಕೆಲವು ಭೌಗೋಳಿಕ ಘಟನೆಗಳನ್ನು ಅವಲೋಕಿಸಿ, ಅವುಗಳಿಗೆ ಮತ್ತು ಭೂಕಂಪ ಹೆಚ್ಚಳಕ್ಕೆ ಏನಾದರೂ ಸಂಬಂಧವಿದ್ದಿರಬಹುದೇ ಎಂಬುದರ ಪರಿಶೀಲನೆ ನಡೆಸಿದರು. ಆಗ ಗೊತ್ತಾಗಿದ್ದೇನೆಂದರೆ ಭೂಮಿ ತನ್ನ ಅಕ್ಷದಲ್ಲಿ ತಿರುಗುವ ವೇಗದ ಏರಿಳಿತಕ್ಕೂ, ಭೂಕಂಪಗಳು ಹೆಚ್ಚುವುದಕ್ಕೂ ಪರಸ್ಪರ ಏನೋ ಸಂಬಂಧವಿದೆ ಎನ್ನುವ ವಿಚಾರ.

ಭೂಮಿಯ ಒಡಲಾಳದ ರಾಸಾಯನಿಕ ರಚನಾ ಸ್ವರೂಪದ ಪರಿಣಾಮವಾಗಿ ಅದರ ಪರಿಭ್ರಮಣ ವೇಗ ಆಗೊಮ್ಮೆ ಈಗೊಮ್ಮೆ ಕೇವಲ ಮಿಲಿಸೆಕೆಂಡಿನಷ್ಟು ಕಡಿಮೆಯಾಗುತ್ತದೆ. ಹೀಗೆ ಭೂಮಿ ತನ್ನ ತಿರುಗುವಿಕೆಯ ನಿತ್ಯ ಕಾಯಕದಲ್ಲಿ ಸ್ವಲ್ಪ ಸೋಮಾರಿತನ ತೋರಿಸಿದ ಐದಾರು ವರ್ಷಗಳ ನಂತರ ಭೂಕಂಪಗಳ ಸಂಖ್ಯೆ ದಿಢೀರ್‌ ಏರಿಕೆ ಕಂಡಿದೆ. ಅಂದರೆ, ಚಾರಿತ್ರಿಕವಾಗಿ ಭೂಮಿ ನಿಧಾನವಾಗಿದ್ದನ್ನು ಹಿಂಬಾಲಿಸಿಕೊಂಡು ಭೂಕಂಪಗಳ ಸಂಖ್ಯೆ ವೃದ್ಧಿಸಿದೆ.
ಇತ್ತೀಚೆಗೆ, ಭೂಮಿಯ ವೇಗ ಕುಂಠಿತವಾಗಿದ್ದು 2011ರಲ್ಲಿ.  ಅಂದರೆ ಮೇಲೆ ಹೇಳಿದ ಸಂಬಂಧವೇನಾದರೂ ನಿಜವಾಗಿದ್ದಲ್ಲಿ ಇದಾದ 5-6 ವರ್ಷಗಳ ನಂತರ ಭೂಕಂಪಗಳು ಕೂಡಾ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವುದು ಈ ವಿಜ್ಞಾನಿಗಳ ತರ್ಕ. 

2018ರಲ್ಲಿ ಅಲ್ಲಲ್ಲಿ ಭೀಕರ ಭೂಕಂಪಗಳು ಘಟಿಸಿ ಭೂಮಿ ಧೂಳೀಪಟವಾಗಬಹುದು ಎನ್ನುವ ಮಾಧ್ಯಮಗಳ ಸುದ್ದಿಗೆ ಇದೇ ಆಧಾರ! “ತಿರುಗುವ ವೇಗ ಎಳ್ಳಷ್ಟೂ ನಿಧಾನವಾದರೂ ಭೂಮಿಯೇ ಗಢಗಢ ಅÇÉಾಡಿ ನಿಧನವಾಗಲಿದೆ’ ಎನ್ನುವ ಬೆದರಿಕೆ ವರದಿಗಳಿಗೆ ಬೇರೆ ಯಾವುದೇ ವೈಜ್ಞಾನಿಕ ಬೆಂಬಲವಿಲ್ಲ. 2017ರ ಅಂತ್ಯದಲ್ಲಿ ಬೆನ್ನುಬೆನ್ನಿಗೆ ಮೆಕ್ಸಿಕೋ (ಸೆಪ್ಟೆಂಬರ್‌ 19), ಇರಾನ್‌-ಇರಾಕ್‌ ಗಡಿಭಾಗ (ನವೆಂಬರ್‌ 12) ಮತ್ತು ಕಾಲೆಡೊನಿಯಾ (ನವೆಂಬರ್‌ 19)ಗಳಲ್ಲಿ 7ಕ್ಕೂ ಹೆಚ್ಚು ರಿಕ್ಟರ್‌ ಮಾಪನಾಂಶದ ಭೂಕಂಪಗಳಾಗಿರುವುದನ್ನು ಈ ಪುಕಾರಿಗೆ ಪೂರಕ ಪುರಾವೆಗಳಾಗಿ ಬಳಸಿಕೊಳ್ಳಲಾಗುತ್ತಿದೆ.

ಆದರೆ, ಈ ಲೇಖನದಲ್ಲಿ ಎಲ್ಲಿಯೂ ಭೂಮಿಯ ವೇಗಕ್ಕೂ ಭೂಕಂಪನಗಳ ಹೆಚ್ಚಳಕ್ಕೂ ನೇರ ಸಂಬಂಧವಿದೆ ಎನ್ನುವುದು ರುಜುವಾತಾಗಿರುವ ಉÇÉೇಖವಿಲ್ಲ. ಅದು ಕೇವಲ ಕಾಕತಾಳೀಯ ಘಟನೆಗಳಾಗಿರುವ ಸಾಧ್ಯತೆಗಳು ಸಾಕಷ್ಟು ನಿಚ್ಚಳವಾಗಿವೆ.

2036ರಲ್ಲಿ ಕ್ಷುದ್ರಗ್ರಹ ಅಪ್ಪಳಿಸಿ ಭೂಮಿ ಛಿದ್ರ!
ಇದು ಕೆಲವು  ಪ್ರಳಯದಾಹಿ ಮಾಧ್ಯಮಗಳು ಮತ್ತೂಮ್ಮೆ ಮರುಚಲಾವಣೆಗೆ ತಂದಿರುವ ಹಳೆಯ ಸುದ್ದಿ. ಈ “ಅಪೊಫಿಸ್‌’ ಎಂಬ ಹೆಸರಿನ ಕ್ಷುದ್ರಗ್ರಹ 2004ರಲ್ಲಿ ಪತ್ತೆಯಾದ ನಂತರ ಭೂಗ್ರಹವನ್ನು ಬಡಿಯುವ ಬೆದರಿಕೆ ಆಗಾಗ ಕೇಳಿಬರುತ್ತಲೇ ಇದೆ. ಹಿಂದೊಮ್ಮೆ 2013ರಲ್ಲಿ ಇದು ಅಪ್ಪಳಿಸಿ ಭೂಮಿಯನ್ನು ಬಲಿ ತೆಗೆದುಕೊಳ್ಳಲಿದೆ ಎಂದು ಪ್ರಚಾರ ಮಾಡಲಾಗಿತ್ತು. ನಂತರ ಇದು ಏಪ್ರಿಲ್‌ 13, 2029ಕ್ಕೆ ಮುಂದೂಡಲ್ಪಟ್ಟಿತ್ತು. ಮತ್ತೆ ಏಪ್ರಿಲ್‌ 13, 2036ಕ್ಕೆ ಈ ಮುಹೂರ್ತವನ್ನು ಮರುನಿಗದಿ ಮಾಡಲಾಯಿತು. ಇದು 2068ರ ತನಕ ಮುಂದೆ ಹೋಗುವ ಸಂಭವವೂ ಇದೆ.

ಈ ಕ್ಷುದ್ರಗ್ರಹದ ಚಲನೆಯ ಮೇಲೆ ನಿರಂತರ ಕಣ್ಣಿಟ್ಟಿರುವ ನಾಸಾ ವಿಜ್ಞಾನಿಗಳ ಪ್ರಕಾರ ಅದು ಕೆಲವು ಸಂದರ್ಭಗಳಲ್ಲಿ ಭೂಮಿಯ ತೀರಾ ಸನಿಹದಿಂದ ಹಾದುಹೋಗುವ ಸಾಧ್ಯತೆಗಳಿದ್ದದ್ದು ಹೌದು. ಆ ಬಗ್ಗೆ ಅವರು ಹಿಂದೊಮ್ಮೆ ಮುನ್ಸೂಚನೆ ನೀಡಿದ್ದಿದೆ. ಆದರೆ, ಲೆಕ್ಕಾಚಾರಗಳು ಹೆಚ್ಚು ನಿಖರವಾದಂತೆ ಈ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎನ್ನುವುದು ಗೊತ್ತಾಗಿದೆ. 2029ರಲ್ಲಿ ಮತ್ತು 2036ರಲ್ಲಿ ಅದು ಭೂಮಿಗಿಂತ ಕನಿಷ್ಠ 31 ಸಾವಿರ ಕಿ.ಮೀ. ಅಂತರದಲ್ಲಿ ಹಾದುಹೋಗಲಿದೆ ಎನ್ನುವುದು ಈಗಿನ ಅಂದಾಜು. ಈ ಲೆಕ್ಕಾಚಾರ ಬುಡಮೇಲಾಗಿ, ಅದು ಭೂಮಿಯನ್ನು ಅಪ್ಪಳಿಸಿ ಆಪೋಶನ ತೆಗೆದುಕೊಳ್ಳುವ ಸಾಧ್ಯತೆ ಶೇ.  0.0000005ರಷ್ಟು ಅತ್ಯಲ್ಪವಂತೆ! ಒಂದು ವೇಳೆ, ದುರದೃಷ್ಟಕ್ಕೆ ನಮ್ಮತ್ತಲೇ ಇದು ಬರಲಿದೆ ಎನ್ನುವುದು ಮುಂದೇನಾದರೂ ಗೊತ್ತಾದರೆ, ಅದರ ದಾರಿ ಬದಲಿಸಿ ಭೂಮಿಯಿಂದ ದೂರ ತಳ್ಳಲು ಕೂಡ ಸಾಧ್ಯವಿದೆಯಂತೆ! ಹಾಗಾಗಿ ಸದ್ಯಕ್ಕೆ ಭೂನಿವಾಸಿಗಳು ನಿಶ್ಚಿಂತೆಯಿಂದ ಇರಬಹುದು.

ಏಪ್ರಿಲ್‌ 13, 2036ರಂದು ಈ ವಿನಾಶದ ಘಟನೆ ಖಂಡಿತ ನಡೆಯಲಾರದು ಎನ್ನುವುದಕ್ಕೆ ಕೆಲವರು ಇನ್ನೊಂದು ತಮಾಷೆಯ ಕಾರಣವನ್ನು ಕೊಡುತ್ತಾರೆ! ಅದೇನೆಂದರೆ ಈ ನಿರ್ಧರಿತ ದಿನ ಆದಿತ್ಯವಾರ! ಅವತ್ತು ಸಾರ್ವಜನಿಕ ರಜಾದಿನವಲ್ಲವೆ? 

ಶೀಘ್ರದಲ್ಲಿಯೇ ಮಂಗಳೂರು ಗುಳುಂ!
 ಭಾರೀ ಗಟ್ಟಿಗರೆಂದು ಕರೆಸಿಕೊಳ್ಳುವ ಮಂಗಳೂರಿ ಗರನ್ನೂ ಇತ್ತೀಚೆಗೆ ಕಂಗಾಲಾಗುವಂತೆ ಮಾಡಿದ್ದು, ಈ ಊರು ಮುಂಬಯಿ, ಕೊಲ್ಕತಾಗಳಿಗಿಂತ ಮೊದಲೇ ಅರಬೀ ಸಮುದ್ರದಲ್ಲಿ ಮುಳುಗಿ ಹೋಗಲಿದೆ ಅಂತ “ನಾಸಾ’ದವರು ಹೇಳಿ¨ªಾರೆ ಎನ್ನುವ ಸಂಗತಿ. “ಈ ನಾಸಾದವರಿಗೆ ಮುಳುಗಿಸಲಿಕ್ಕೆ ನಮ್ಮ ಮಂಗಳೂರೇ ಸಿಕ್ಕಿ¨ªಾ? ಇದು ನಿಜವಾ ಮಾರಾಯೆÅà?’ ಅಂತ ಇಲ್ಲಿಯ ಹಲವು ಜನರು ಭಯಂಕರ ಮಂಡೆಬೆಚ್ಚ ಮಾಡಿಕೊಂಡಿದ್ದರಂತೆ.

ಆದರೆ, ವಾಸ್ತವ ಏನೆಂದರೆ ಕರಾವಳಿಯನ್ನು ತಲ್ಲಣಗೊಳಿಸಿದ ಈ ಸುದ್ದಿಗೆ ಕಾರಣವಾದ ನಾಸಾ ವಿಜ್ಞಾನಿಗಳ ಸಂಶೋಧನಾ ಪ್ರಬಂಧದಲ್ಲಿ ಯಾವುದೇ ನಗರ ಮುಳುಗುವ ನೇರ ಪ್ರಸ್ತಾವವೇ ಇಲ್ಲ. ಈಗಾಗಲೇ ವೈಜ್ಞಾನಿಕವಾಗಿ ರುಜುವಾತಾಗಿರುವ ಭೂತಾಪಮಾನ ಏರಿಕೆಯಿಂದಾಗಿ ಭೂಮಿಯ ಮೇಲಿನ ಮಂಜುಗಡ್ಡೆ ಬಂಡೆಗಳು ಕರಗಿ ಆ ನೀರು ಸಮುದ್ರ ಸೇರಿದಂತೆ ಯಾವ್ಯಾವ ನಗರಗಳಲ್ಲಿ ಸಮುದ್ರ ಮಟ್ಟ ಎಷ್ಟೆಷ್ಟು ಏರಿಕೆಯಾಗಬಹುದು ಎನ್ನುವುದನ್ನು ಅಂದಾಜಿಸುವುದಷ್ಟೇ ಅವರ ಪ್ರಮುಖ ಕಳಕಳಿಯಾಗಿತ್ತು. ಆಪತ್ತಿಗೆ ತುತ್ತಾಗಲಿರುವ ಕರಾವಳಿ ಪ್ರದೇಶಗಳ ರಕ್ಷಣೆಗೆ ಅಗತ್ಯ  ಮುನ್ನೆಚ್ಚರಿಕೆ ಯೋಜನೆ, ಕ್ರಮಗಳನ್ನು ಕೈಗೊಳ್ಳಲು ಇಂತಹ ಮಾಹಿತಿಯಿಂದ ಅನುಕೂಲವಾಗಲಿದೆ ಎನ್ನುವುದು ಆಶಯ. ಪ್ರಪಂಚದ ಆಯ್ದ 283 ಪ್ರಮುಖ ಬಂದರು ನಗರಗಳಲ್ಲಿ ಮುಂದಿನ 10, 50 ಮತ್ತು 100 ವರ್ಷಗಳ ಅವಧಿಯಲ್ಲಿ ಸಮುದ್ರದ ನೀರು ಎಷ್ಟು ಮೇಲೇರಬಹುದು ಎಂಬುದನ್ನು ಲೆಕ್ಕ ಹಾಕಿ ತೋರಿಸುವ “ಗ್ರೇಡಿಯೆಂಟ್‌ ಫಿಂಗರ್‌ಪ್ರಿಂಟ್‌ ಮ್ಯಾಪಿಂಗ್‌’ ಎನ್ನುವ ಡಿಜಿಟಲ್‌ ಸಾಧನವನ್ನು ಇವರು ಅಭಿವೃದ್ಧಿ ಮಾಡಿದರು. 

ಈ ಬಂದರು ನಗರಗಳ ಪಟ್ಟಿಯಲ್ಲಿ ಭಾರತದ ಮುಂಬಯಿ ಮತ್ತು ಕಾಕಿನಾಡಗಳ ಜೊತೆ ಮಂಗಳೂರು ಕೂಡ ಸೇರಿಕೊಂಡಿತ್ತು. ಮಾತ್ರವಲ್ಲ ಮುಂದಿನ 100 ವರ್ಷಗಳಲ್ಲಿ ಅತ್ಯಂತ ಹೆಚ್ಚು ನೀರಿನ ಮಟ್ಟ ಏರಲಿರುವ “ಟಾಪ್‌ ಟೆನ್‌’ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ 6ನೇ ಸ್ಥಾನ ಸಿಕ್ಕಿಬಿಟ್ಟಿತು! ಇಲ್ಲಿ 15.98 ಸೆಂ.ಮೀಟರ್‌ನಷ್ಟು ಸಮುದ್ರ ಮಟ್ಟ ಮೇಲೆ ಬರಲಿದೆಯಂತೆ! ಪಟ್ಟಿಯಲ್ಲಿ ಮೊದಲಿಗನಾಗಿರುವ ಟೋಕಿಯೋದಲ್ಲಿ 17.55 ಸೆಂ.ಮೀ. ಏರಿಕೆಯಾಗಲಿದ್ದರೆ, ಈ ಪಟ್ಟಿಯಲ್ಲಿ ಮಂಗಳೂರಿನ ಹಿಂದಿರುವ ಮುಂಬಯಿಯಲ್ಲಿ 15.20 ಸೆಂ.ಮೀ. ಏರಿಕೆಯಾಗಲಿದೆ.

ಈ ಸುದ್ದಿ ಸಿಕ್ಕಿದ್ದೇ ತಡ, ಪ್ರಳಯೋನ್ಮಾದಿಗಳು ಮುಂಬಯಿಗಿಂತ ಮೊದಲೇ ಮಂಗಳೂರನ್ನು ನೀರಿನಲ್ಲಿ ಮುಳುಗಿಸಿ ಕೊಂದುಬಿಡುವ ಉತ್ಸಾಹ ತೋರಿಸಿಬಿಟ್ಟರು! ಮಂಗಳೂರು ನಗರ ಸಮುದ್ರ ಮಟ್ಟಕ್ಕಿಂತ ಸರಾಸರಿ 20 ಮೀ. ಗಿಂತಲೂ ಹೆಚ್ಚು ಎತ್ತರದಲ್ಲಿದೆ. ಕೇವಲ 15 ಸೆಂ.ಮೀ. ನಷ್ಟು ಸಮುದ್ರ ಮೇಲೆ ಬಂದರೆ ಮಂಗಳೂರು ಮುಳುಗದು ಎನ್ನುವ ಸತ್ಯ ನೀರಲ್ಲಿ ಕೊಚ್ಚಿಹೋಯಿತು.

ಹಾಗಂದ ಮಾತ್ರಕ್ಕೆ, ಇದು ತೀರಾ ನಗಣ್ಯ ವಿಷಯ ಎಂದು ತಳ್ಳಿಹಾಕುವಂತಿಲ್ಲ. ತಜ್ಞರ ಪ್ರಕಾರ ಸಮುದ್ರ ಮಟ್ಟ ಅಂದಾಜು 1 ಸೆಂ.ಮೀ. ಮೇಲೆ ಬಂದರೆ, ಸಮುದ್ರ ತೀರ 1 ಮೀಟರ್‌ನಷ್ಟು ಸರಿದು, ಅಷ್ಟು ವ್ಯಾಪ್ತಿಯ ಭೂಭಾಗವನ್ನು ನುಂಗಬಹುದು, ಅಲ್ಲಿನ ಆಸ್ತಿಪಾಸ್ತಿಗಳು ಕೊಚ್ಚಿಹೋಗಬಹುದು. ಸಮುದ್ರ ಮಟ್ಟದಲ್ಲಿರುವ ಕರಾವಳಿ ಪ್ರದೇಶಗಳ ಪಾಲಿಗೆ ಇದು ದೊಡ್ಡ ಆಪತ್ತಿನ ಮುನ್ಸೂಚನೆ! ಈಗಲೇ ಎಚ್ಚೆತ್ತುಕೊಂಡು ತಾಪಮಾನ ತಗ್ಗಿಸಲು ನೆರವಾಗುವ ಪರಿಸರ ಸಹ್ಯ ಜೀವನ ಶೈಲಿಯ ಕಡೆಗೆ ಸ್ವಲ್ಪವಾದರೂ ವಾಲಿದರೆ ದೀರ್ಘ‌ಕಾಲೀನ ಅನಾಹುತಗಳನ್ನು ಅಲ್ಪವಾದರೂ ತಗ್ಗಿಸಬಹುದು. ಈ ಬಗ್ಗೆ ಯೋಚಿಸಲು, ಕಾರ್ಯೋನ್ಮುಖರಾಗಲು ಇದೊಂದು ಎಚ್ಚರಿಕೆಯ ಘಂಟೆ ಎನ್ನಬಹುದು. 

ಕೊನೆಗೆ, ಜಗತ್ತೇ ಸರ್ವನಾಶವಾಗುವ, ಮಂಗಳೂರು ನೀರಿನಲ್ಲಿ ಮುಳುಗಿ ಹೋಗುವ ಶಾಕಿಂಗ್‌ ಸುದ್ದಿಗಳ ಭೀತಿಯಿಂದ ಹೊರಬಂದು ನಕ್ಕು ಹಗುರಾಗಲು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ಜೋಕ್‌:

ಮಂಗಳೂರು ನೀರಿನಲ್ಲಿ ಕೊಚ್ಚಿಹೋಗಲಿದೆ ಎಂದು ಸುದ್ದಿ ಕೇಳಿದ ಅಪ್ಪಟ ಮಂಗಳೂರಿಗನೊಬ್ಬ ಹೇಳಿದನಂತೆ – ನಾವು ಎಷ್ಟು ದೊಡ್ಡ ನೆರೆ ಬಂದ ಸಂದರ್ಭದಲ್ಲಿಯೂ ತೇಲುತ್ತಿರುವ ತೆಂಗಿನಕಾಯಿ, ಅಡಿಕೆಯನ್ನೇ ಕೊಚ್ಚಿ ಹೋಗಲಿಕ್ಕೆ ಬಿಟ್ಟಿಲ್ಲ. ಮತ್ತೆ ನಮ್ಮ ಮಂಗಳೂರನ್ನು ಬಿಡಲಿಕ್ಕೆ ಉಂಟಾ?

– ಡಾ. ಜಯಕರ ಭಂಡಾರಿ

ಟಾಪ್ ನ್ಯೂಸ್

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Happy New Year 2025: ಹೊಸ ಕ್ಯಾಲೆಂಡರ್‌ನೊಂದಿಗೆ ಹೊಸ ವರ್ಷದ ಆರಂಭ

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

kejriwal-2

Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ

1-maika

‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ

doctor

ಕೊಪ್ಪಳದಲ್ಲಿ ಕ್ಯಾನ್ಸರ್‌ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್‌ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.