ಜಳಕದ ಪುಳಕ 


Team Udayavani, Sep 3, 2017, 6:05 AM IST

jalaka.jpg

ಮನೆ ಎಂದ ಮೇಲೆ ಮನೆಯಲ್ಲೊಂದು ಬಚ್ಚಲು ಮನೆಯೂ ಇರುವುದು ಅಗತ್ಯವೇ. ಬಚ್ಚಲು ಮನೆ ಎಂದಿದ್ದ ಮೇಲೆ ನೀರು ಕಾಯಿಸಲೆಂದು ಬಚ್ಚಲೊಲೆಯೂ ಇರಲೇಬೇಕಲ್ಲ. ಒಲೆ ಇದ್ದ ಮೇಲೆ ಅದರೊಳಗೆ ಉರುವಲು ಹಾಕಿ ಉರಿ ಹತ್ತಿಸಲೇಬೇಕಲ್ಲ. ಆ ಕ್ಷಣಕ್ಕಾಗಿ ಕಾಯುತ್ತಿದ್ದ ದಿನಗಳಿತ್ತು ಎಂದರೆ ಅಚ್ಚರಿ ಎನ್ನಿಸುತ್ತದೆಯೆ? ಬಚ್ಚಲೊಲೆಗೆ ಬೆಂಕಿ ಹಾಕುವುದು ನಮ್ಮ ಬಾಲಕಾಂಡದಲ್ಲಿ ಬರುವ ಅತ್ಯದ್ಭುತ ಅಧ್ಯಾಯ. ಏಕೆಂದರೆ, ಭಾಗಮಂಡಲದ ಗಡಗಡ ನಡುಗಿಸುವ ಚಳಿಯನ್ನು ಸ್ವಲ್ಪ ಹೊತ್ತಾದರೂ ದೂರ ಓಡಿಸುವ ಶಕ್ತಿ ಇದ್ದದ್ದು ಇದಕ್ಕೆ ಮಾತ್ರ. 

ಉದ್ಯೋಗಕ್ಕಾಗಿ ಅಪ್ಪ ಭಾಗಮಂಡಲವೆಂಬ ಊರಿನಲ್ಲಿ ನೆಲೆಸುವ ಮನಸ್ಸು ಮಾಡಿದಾಗ ಸಿಕ್ಕಿದ್ದು ಒಂದು ವಠಾರದ ಮನೆ. ಇಪ್ಪತ್ತನಾಲ್ಕು ಗಂಟೆ ನೀರು ಇರುವ ಮನೆ ಎಂಬ ಹೆಗ್ಗಳಿಕೆ ಬೇರೆ. ಆದರೆ ಆ ನೀರು ಇದ್ದದ್ದು ಮನೆಯ ಪಕ್ಕದಲ್ಲಿ ಹರಿಯುತ್ತಿದ್ದ ಕಾವೇರಿ ಹೊಳೆಯಲ್ಲಿ ಎಂದು ಗೊತ್ತಾಗುವಾಗ ಸಾಮಾನು ಸಮೇತ ಮನೆಯೊಳಗೆ ಪ್ರವೇಶ ಪಡೆದಾಗಿತ್ತು. ಅಡುಗೆಗೂ, ಕುಡಿಯಲೂ ಒಂದೆರಡು ಕೊಡ ನೀರು ತರುವುದು ಬಹು ಕಷ್ಟದ ಕೆಲಸ ಎಂದಾರೂ ಅಂದುಕೊಳ್ಳದೇ ಇರುವ ಕಾಲ ಅದಾಗಿದ್ದುದರಿಂದ ಹೊಳೆಯಲ್ಲಿ ನೀರಿದೆ ಎನ್ನುವುದೇ ಸಮಾಧಾನಕರ ವಿಷಯವಾಗಿತ್ತು. ಇನ್ನುಳಿದ ನೀರು ಬೇಕಾಗುವುದು ಸ್ನಾನಕ್ಕೆ. ಅದನ್ನು ತರುವುದು ಹೇಗೆ ಎನ್ನುವುದೇ ಅಮ್ಮನ ಮಂಡೆ ಬಿಸಿಯೇರಿಸಿದ ವಿಷಯವಾಗಿತ್ತು. 

ಎ¨ªೊಡನೆ ಸ್ನಾನಕ್ಕೆಂದು ಟವೆಲ್‌ ಹಿಡಿದು ಹೊರಡುವ ಸೆಖೆಯೂರಿನಿಂದ ಹೋಗಿದ್ದ ಅಮ್ಮ  ಮನೆಯ ಓನರ್‌ ಹತ್ತಿರ ಸ್ನಾನ ಎಲ್ಲಿ ಮಾಡುವುದು ಎಂದು ಕೈಯಲ್ಲಿ ಬದಲಿಸಬೇಕಾದ ಸೀರೆ -ರವಿಕೆ- ಬೈರಾಸು ಹಿಡಿದು ನಿಂತು ಕೇಳಿದಾಗ ಆಕೆ, “”ತಣ್ಣೀರಲ್ಲಿ ಸ್ನಾನ ಮಾಡಿದ್ರೆ ಸತ್ತು ಹೋದಾರಿಲ್ಲಿ. ಮೊದಲು ಗುಡ್ಡಕ್ಕೆ ಬೆಂಕಿ ಹಾಕಿ” ಎಂದಿದ್ದರಂತೆ. ಅಮ್ಮ ಸುತ್ತಮುತ್ತೆಲ್ಲ ಹುಡುಕಾಡಿ ಯಾವ ಗುಡ್ಡವೂ ಕಾಣದೇ ಬಸವಳಿದು ಮತ್ತೆ ಮನೆ ಓನರಿನ ಕಡೆಗೆ ಮುಖ ಮಾಡಿ, “”ಗುಡ್ಡ ಎಲ್ಲಿದೆ?” ಎಂದು ಕೇಳಿದಾಗ ಆಕೆ ಬಚ್ಚಲು ಮನೆಯ ಕಡೆ ಬೊಟ್ಟು ಮಾಡಿದ್ದಳು. ಆಗಲೇ ಅಮ್ಮನಿಗೆ ದಕ್ಷಿಣಕನ್ನಡ ಜಿÇÉೆಯ ಅಬ್ಬಿಕೊಟ್ಟಿಗೆ ಅಥವಾ ಬಚ್ಚಲು ಮನೆ ಎನ್ನುವುದು ಇಲ್ಲಿ ಗುಡ್ಡ ಎಂಬ ಹೆಸರನ್ನು ಪಡೆದಿದೆ ಎಂದು ತಿಳಿಯಿತಂತೆ. ಸ್ನಾನ ಮಾಡಬೇಕಾದರೆ ನಿತ್ಯ ಗುಡ್ಡಕ್ಕೆ ಬೆಂಕಿ ಕೊಡಬೇಕೆನ್ನುವ ಆತಂಕಕ್ಕೆ ಸಿಲುಕಿದ್ದ ಅವಳು ವಿಷಯ ತಿಳಿದ ಮೇಲೆ ಮನೆಯೊಳಗೆ ಬಂದು ನಕ್ಕಿದ್ದಳು.

ನಮ್ಮೂರಿನ ನ್ಯಾಷನಲ್‌ ಉಡುಗೆ ಎಂದರೆ ಸ್ವೆಟರ್‌ ಆಗಿತ್ತು. ವರ್ಷದ ಮುನ್ನೂರರುವತ್ತೈದು ದಿನವೂ ಅದು ಮೈಯೇರಿ ನಲಿಯುತ್ತಿತ್ತು. ಅದೆಷ್ಟು ಅಭ್ಯಾಸವಾಗಿತ್ತು ಎಂದರೆ ಕೆಲವು ಸ್ವೆಟರುಗಳು ಅವು ಹುಟ್ಟಿದ ಮೇಲೆ ನೀರಿನ ಮುಖ ಕಾಣದೇ ಡಿಹೈಡ್ರೇಷನ್ನಿನಿಂದಲೇ ಹರಿದು ಸತ್ತಿದ್ದವೇನೋ ಎನ್ನುವಷ್ಟು. ಒಮ್ಮೆ ಮೈಯೇರಿದ ಅದನ್ನು ತೆಗೆಯಲು ಎರಡು ದಿನವಂತೂ ಮಿನಿಮಮ್‌. ಮ್ಯಾಕ್ಸಿಮಮ್‌ ಎಷ್ಟು ಎನ್ನುವುದು ಅವರ ಸ್ನಾನ ಮಾಡದೇ ಇರುವ ದಿನಗಳ ಮೇಲೆ ನಿರ್ಧರಿತವಾಗುತ್ತಿತ್ತು. ನಮ್ಮೂರಿನವರಿಗೆ ಸ್ನಾನ ಎಂಬುದೊಂದು ನಿತ್ಯದ ಸಂಗತಿಯಾಗದೇ ಅದೊಂದು ವಿಶೇಷ ಸಂದರ್ಭವಾಗಲು ಕೊಡಗಿನ ಗಡಗಡ ನಡುಗಿಸುವ ಚಳಿಯೇ ಕಾರಣವಾಗಿತ್ತು. 

ಇದನ್ನು ನಿರೂಪಿಸಲೆಂದೇ ಆ ವಠಾರದ ಮನೆಯಲ್ಲಿ ಇದ್ದ¨ªೊಂದೇ ಬಚ್ಚಲು ಮನೆ. ಒಂದೇ ಹಂಡೆ. ಒಂದೇ ಒಲೆ. ಎಂಟು ಮನೆಯವರು ಅದೊಂದರÇÉೇ ಸ್ನಾನ ಮಾಡುವುದು ಎಂಬ ಕೆಲಸವನ್ನು ಪೂರೈಸಿಕೊಳ್ಳಬೇಕಿತ್ತು. ಆದರೆ, ಈಗಿನ ಬಚ್ಚಲು ಮನೆಗಳಂತೆ ಒಂದು ಬಕೆಟ್‌ ಒಂದು ಮಗ್‌ ಇಟ್ಟ ಕೂಡಲೇ ಜನ ನಿಲ್ಲುವುದು ಇನ್ನೆಲ್ಲಿ ಎಂಬಷ್ಟು ಚಿಕ್ಕ ಕೋಣೆಯೇನಲ್ಲ ಅದು. ಮೊದಲ ಸಲ ಅದರೊಳಗೆ ನುಗ್ಗಿದ ಅಮ್ಮ ಹತ್ತು ಜನಕ್ಕೆ ಹಸೆ ಹಾಕಿ ಮಲಗಬಹುದಿಲ್ಲಿ ಎಂದು ಉದ್ಗಾರ ತೆಗೆದಿ¨ªಾಳೆ ಎಂದರೆ ಎಷ್ಟು ದೊಡ್ಡದಿರಬಹುದು ಅದು ಎಂದು ಊಹಿಸಿಕೊಳ್ಳಿ.  

ಬೆಳಗ್ಗೆ ಸ್ನಾನ ಮಾಡುವವರು ಪುಣ್ಯ ಸಂಪಾದನೆಯ ನೆವದಲ್ಲಿ ಗಡಗಡನೆ ನಡುಗುತ್ತ ಕಾವೇರಿ ನದಿಯÇÉೇ ಆ ಕೆಲಸ ಪೂರೈಸಿ ಬರುತ್ತಿದ್ದರು. ಸಂಜೆ ಸಾಮಾನ್ಯವಾಗಿ ಎಲ್ಲರೂ ಸ್ನಾನ ಮಾಡುವ ಸಮಯವಾಗಿತ್ತು. ಹಾಗೆಂದು ಹತ್ತಿಪ್ಪತ್ತು ಕೊಡಪಾನ ನೀರು ಹಿಡಿಯುವ ಆ ಹಂಡೆಗೆ ಒಬ್ಬಿಬ್ಬರಿಂದ ನೀರು ತುಂಬಿಸಲು ಸಾಧ್ಯವೇ ಆಗುತ್ತಿರಲಿಲ್ಲ. ಅದಕ್ಕೆಂದು ನೀರಲ್ಲಿ ಆಡುವ ಹುಚ್ಚಿಗೆ ಬಿದ್ದ ಮಕ್ಕಳ ಗುಂಪು ಸದಾ ಸಿದ್ಧವಿರುತ್ತಿತ್ತು. ಇದೊಂದು ಸಹಕಾರಿ ಸಂಸ್ಥೆಯಂತೆ ಕೆಲಸ ಮಾಡುತ್ತಿತ್ತು. ಹೊಳೆಯಿಂದ ಬಚ್ಚಲಿನ ಹಂಡೆಯವರೆಗೆ ಸಮಾನ ಅಂತರದಲ್ಲಿ ನಾವೆಲ್ಲ ನಿಂತುಕೊಳ್ಳುತ್ತಿ¨ªೆವು. ನೀರು ತುಂಬಿದ ಕೊಡ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ವರ್ಗಾವಣೆಯಾಗುತ್ತ ಹಂಡೆ ತುಂಬುತ್ತಿತ್ತು. ಇದು ಮನೆಯ ಅಂಗಳದ ತುದಿಯÇÉೊಂದು ಸರ್ಕಾರಿ ಬೋರ್‌ವೆಲ್‌ ಬರುವವರೆಗೆ ನಡೆಯುತ್ತಿದ್ದ ಕಾರ್ಯವಾಗಿತ್ತು. ಕೈ ಪಂಪು ಬಂದ ನಂತರ ಈ ಕೆಲಸಕ್ಕೆ ಮನೆಯ ಹೆಂಗಸರೂ, ಬಲಶಾಲಿಗಳೆಂದು ರಟ್ಟೆ ಬಲ ಪ್ರದರ್ಶಿಸುವ ಗಂಡಸರೂ ಸೇರಿಕೊಂಡರು.

ಸರತಿ ಪ್ರಕಾರ ಗಂಡಸರು ಹ್ಯಾಂಡ್‌ ಪಂಪಿಗೆ ಜೋತು ಬಿದ್ದು ನೀರು ಹೊಡೆಯುವುದು ಎಂಬ ಕೆಲಸ ಮಾಡಿದರೆ ಉಳಿದವರು ಕೊಡಪಾನದ ನೀರನ್ನು ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸಿ ಹಂಡೆ ತುಂಬುವಂತೆ ಮಾಡುತ್ತಿ¨ªೆವು. ಸ್ವಲ್ಪ ಹೊತ್ತಿನÇÉೇ ದ್ರೌಪದಿಯ ಸೀರೆಯನ್ನೆಳೆದ ದುಶ್ಯಾಸನನಂತೆ ಸೋತು ಬಸವಳಿದು ಬೆಂಡಾಗಿ, ತಾನೇ ಪಂಪು ಹೊಡೆದ ನೀರನ್ನಿ°ಷ್ಟು ಕುಡಿದು, ಆ ವೃತ್ತಿಯಿಂದ ನಿವೃತ್ತಿ ಹೊಂದಿದವರು ಇನ್ನೊಬ್ಬರಿಗೆ ನೀರು ಹೊಡೆಯಲು ಅನುವು ಮಾಡಿಕೊಡುತ್ತಿದ್ದರು. ಹೀಗೆ ನೀರು ತುಂಬಿಸುವ ಕೆಲಸ ಮುಗಿದೊಡನೆ ಅತಿ ಮುಖ್ಯವಾದ ಬಚ್ಚಲೊಲೆಗೆ ಬೆಂಕಿ ಹಾಕುವುದು ಎಂಬ ಕೆಲಸ ಶುರು. 

ಯಾವುದಾದರೊಂದು ಮನೆಯವರು ತಮ್ಮ ಸೌದೆಯಿಂದ ಬಚ್ಚಲೊಲೆಗೆ ಬೆಂಕಿ ಹಾಕಬೇಕಿತ್ತು. ತಿಂಡಿ ಹಿಡಿದ ಸೌದೆಗಳನ್ನು ಒಲೆಯೊಳಗೆ ತಳ್ಳುವ ಮೊದಲೇ ತೆಂಗಿನಕಾಯಿಯ ಗೆರಟೆಗೊಂದಿಷ್ಟು ಒಲೆಯ ಬೂದಿ ತುಂಬಿ ಅದರ ಮೇಲೆ ನಾಲ್ಕಾರು ಹನಿಗಳಷ್ಟು ಸೀಮೆ ಎಣ್ಣೆ ಬೀಳಿಸಬೇಕಿತ್ತು. ಬೆಂಕಿಕಡ್ಡಿಯಿಂದ ಬೆಂಕಿ ಕೊಟ್ಟು ಅದನ್ನು ಒಲೆಯ ನಡುವಲ್ಲಿರಿಸಿ ಬೆಂಕಿ ನಂದದಂತೆ  ಸೌದೆಯನ್ನು ಕಲಾತ್ಮಕವಾಗಿ ಅದರ ಮೇಲಿಡಬೇಕಿತ್ತು. ಇಷ್ಟು ಮಾಡಿ ಕಣ್ಣು ಮೂಗಲ್ಲಿ ನೀರಿಳಿಸಿಕೊಂಡು ಬಿದಿರಿನ ಓಟೆಯಲ್ಲಿ ಊದಿ ಎಲ್ಲ ಸೌದೆಗೂ ಬೆಂಕಿ ಹಿಡಿಯುವಂತೆ ನೋಡಿಕೊಂಡಲ್ಲಿಗೆ ಅವರ ಕೆಲಸ ಮುಗಿದಂತೆ.

ಉಳಿದ ಮನೆಯವರು ಸ್ನಾನಕ್ಕಿಳಿಯುವ ಮುನ್ನ ಅವರ ಲೆಕ್ಕದ ಸೌದೆಯನ್ನು ಒಲೆಗೆ ತಳ್ಳಿ ಸ್ನಾನ ಮುಗಿಸಬೇಕಾಗಿದ್ದುದು ವಾಡಿಕೆ.  ಹಾಗೆಂದು ಒಲೆಯ ಬುಡದಲ್ಲಿ ಚಳಿ ಕಾಯಿಸಲು ಕೂರಲು ಸರ್ವೈವಲ್‌ ಆಫ್ ದಿ ಫಿಟ್ಟೆಸ್ಟ್‌ ಎಂಬ ರೂಲ್ಸೇ ಅಪ್ಲೆ„ ಆಗುತ್ತಿತ್ತಲ್ಲದೇ ಒಲೆಯಲ್ಲಿ ಉರಿಯುತ್ತಿರುವುದು ಯಾರು ಹಾಕಿದ ಸೌದೆ ಎಂಬುದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಆದರೂ ಓನರ್‌ ಮನೆಯವರಿಗೆ ವಿಶೇಷ ಸ್ಥಾನಮಾನ ಇದ್ದುದು ಸತ್ಯ. 

ಸಂಜೆ ಆಗುತ್ತಲೇ ಬೆಂಕಿ ಹಾಕಿದರೂ ಸ್ನಾನದ ಕೋಣೆಗೆ ನುಸುಳುವಾಗ ಕತ್ತಲಾಗಿಯೇ ಹೋಗುತ್ತಿತ್ತು. ಮಿಣುಕು ಸೀಮೆ ಎಣ್ಣೆಯ ದೀಪ. ಧಗಧ‌ಗ ಉರಿವ ಬೆಂಕಿ ಇವಿಷ್ಟರ ಬೆಳಕಿನಲ್ಲಿ ಸ್ನಾನ ಸಂಪನ್ನಗೊಳ್ಳುತ್ತಿತ್ತು. ಹಾಗಾಗಿಯೇ ಸ್ನಾನದ ಸಮಯದÇÉೇ ಬರುತ್ತಿದ್ದವುಗಳೆಂದರೆ ಭೂತಗಳು, ಅಲ್ಲಿಲ್ಲಿ ಕೇಳಿದ ಕಥೆಗಳ ರಕ್ಕಸರು, ಎಲ್ಲವೂ ಆ ಅರೆಬೆಳಕಿನ ಕೋಣೆಯಲ್ಲಿ ಜೀವ ತಳೆದು ಕಣ್ಮುಂದೆ ನಿಂತಂತಾಗುತ್ತಿತು. ಅÇÉೆÇÉೋ  ಕಣ್ಣುಗಳು ಹೊಳೆದಂತೆ ಕಾಣುವುದು, ಹಂಚಿನ ಮೇಲಿನಿಂದೇನೋ ಸ¨ªಾಗುವುದು, ಬೆಂಕಿಯಲ್ಲಿ ವಿಧವಿಧದ ಆಕಾರಗಳು ಕಂಡು ಅವುಗಳೂ ಭೂತಗಳಾಗುವುದು ಎಲ್ಲ ಮಾಮೂಲಿ. ಮಕ್ಕಳಿಗಂತೂ ಆ ಆಕಾರವನ್ನು ಬಹುವಿಧವಾಗಿ ವರ್ಣಿಸುವುದರÇÉೇ ಮಜಾ ಎನ್ನಿಸುತ್ತಿತ್ತು. ನಮ್ಮ ಕಲ್ಪನೆ ಎಷ್ಟು ವಿಸ್ತಾರವಿತ್ತೋ ಅಷ್ಟು ನಮ್ಮ ಭೂತಗಳೂ ಭಯ ಹುಟ್ಟಿಸುತ್ತಿದ್ದವು. ನಮ್ಮ ಅಕ್ಕಪಕ್ಕದ ಮನೆಗಳವರು ಈ ಹೆದರಿಕೆಯಿಂದಾಗಿ  ಒಬ್ಬರೇ ಆಗಿ ಅದರೊಳಗೆ ನುಗ್ಗಿದವರೇ ಅಲ್ಲ. ಅಮ್ಮ-ಮಗಳು, ಅಕ್ಕ-ತಂಗಿ, ಗಂಡ ಹೆಂಡತಿ. ಹೀಗೆ ಜೋಡಿಗಳಾಗಿಯೇ ಒಳಹೋಗುತ್ತಿದ್ದರು. ಸ್ನಾನದ ಕೋಣೆಯೇ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಆತ್ಮೀಯ ಸ್ಥಳವಾಗಿ ಮಾರ್ಪಾಡು ಹೊಂದುತ್ತಿದ್ದ ಸಮಯವದು.  

ಪಕ್ಕದ ಮನೆಯವರ ಎರಡನೇ ಹೆಂಡತಿಗೂ ಮೊದಲನೇ ಹೆಂಡತಿಗೂ ಯಾವ ವಿಷಯಕ್ಕೂ ಸರಿ ಹೊಂದುತ್ತಿರಲಿಲ್ಲ. ಎರಡನೆಯವಳು ಬೆಂಕಿ ಹಾಕಿ¨ªಾಳೆಂದು ಗೊತ್ತಾದರೆ ಮೊದಲನೆಯ ಹೆಂಡತಿ ಆ ದಿನ ಸ್ನಾನವನ್ನೇ ಮಾಡಳು. ಮೊದಲನೆ ಹೆಂಡತಿ ನೀರು ತರಲು ಸೇರಿ¨ªಾಳೆಂದು ಗೊತ್ತಾದರೆ ಎರಡನೆಯವಳು ಬಚ್ಚಲ ಕಡೆ ತಲೆ ಹಾಕಿಯೂ ಮಲಗಲಾರಳು. ಇಂತಿರ್ಪ ಸಮಯದಲ್ಲಿ  ಮನೆಯ ಉಳಿದ ಸದಸ್ಯರೆಲ್ಲ ಜಾತ್ರೆಗೆಂದು ಹತ್ತಿರದ ಊರಿಗೆ ಹೋಗಿದ್ದರು. ಇವರಿಬ್ಬರೂ ಹೋಗಬೇಕಿತ್ತು. ಹೋಗಬೇಕಿದ್ದರೆ ಸ್ನಾನವೂ ಆಗಬೇಕಿತ್ತಲ್ಲ. ಮೊದಲನೆಯವಳು ತನಗೆ ಬೇಕಾದಷ್ಟು ನೀರು ತುಂಬಿಸಿ, ಬೆಂಕಿ ಹಾಕಿ ಸ್ನಾನ ಮಾಡಿ, ಒಲೆಯಲ್ಲುಳಿದಿದ್ದ ಬೆಂಕಿಯನ್ನು ನೀರು ಹಾಕಿ ಆರಿಸಿಟ್ಟು ಹೊರಬಂದ ಮೇಲೆ ಎರಡನೆಯವಳು ಹೊರಟಿದ್ದಳು ನೀರು ತರಲು. ಕರ್ಮದವಳು ಬಚ್ಚಲೆÇÉಾ ಒ¨ªೆ ಮಾಡಿ¨ªಾಳೆ, ಎಣ್ಣೆ ಜಿಡ್ಡಿನಿಂದಾಗಿ ಜಾರಿ ಬೀಳುವಂತಾಗಿದೆ ಎಂದೆಲ್ಲ ಬಯುYಳಾರ್ಚನೆಗಳೊಂದಿಗೆ ಸೌದೆ ತೆಗೆಯಲೆಂದು ಕೈ ಹಾಕಿದ್ದಳು.

ಒಲೆಗೆ ಹಾಕುವಾಗ ಸೌದೆ ಮಿಡುಕಿದಂತಾಗಿತ್ತು. ಜೋರಾಗಿ ಕಿರುಚಿ ಎಸೆದಳು. ಮೈಮೇಲೆÇÉಾ ಕಟ್ಟು ಹಾಕಿದಂತಿರುವ ಕಟ್ಟ ಹಾವು. ಇವಳ ಕಿರುಚಾಟಕ್ಕೆ ಹೆದರಿ ಓಡಿ ಬಂದ ಮೊದಲನೆಯವಳಿಗೆ ಕಂಡದ್ದು ಮೆಲ್ಲನೆ ಹೊರಗೆ ಬರುತ್ತಿರುವ ಹಾವು. ಅವಳು ಒಳಗೆ ಇರುವವಳಿಂದಲೂ ಹೆಚ್ಚಿಗೆ ಹೆದರಿ ಒಂದೇ ಏಟಿಗೆ ಅವಳ ಬಳಿ ಹಾರಿ ಅವಳನ್ನಪ್ಪಿಕೊಂಡಿದ್ದಳು. ಆ ಕೆಲಕ್ಷಣಗಳು ಅವರು ಜೀವಭಯದಿಂದ ತಾವು ಸವತಿಯರು ಎಂಬುದನ್ನು ಮರೆತು ಅಂತಃಕರಣ ಮೆರೆದಿದ್ದರು. 

ಹುಡುಗರಿಗಂತೂ ಬಚ್ಚಲು ಮನೆ ಎಂಬುದು ಒಂದು ರೀತಿಯ ಅಡ್ಡಾ ಆಗಿತ್ತೇನೋ. ನನ್ನ ದೊಡ್ಡಮ್ಮನ ಮಗ ಅಣ್ಣ ನಮ್ಮ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಆರನೆಯ ತರಗತಿಯ ವಿದ್ಯಾರ್ಥಿ ಅವನು. ಪ್ರತಿದಿನ ಬಚ್ಚಲು ಮನೆಗೆ ಅವನು ನುಗ್ಗಿದನೆಂದರೆ ಹೊರ ಬರುವಾಗ ಅರ್ಧ ಗಂಟೆ ಖಂಡಿತ. ಕೆಲವೊಮ್ಮೆ ಸ್ನಾನ ಮಾಡಿದ ಯಾವ ಕುರುಹೂ ಇಲ್ಲದೆ ಮರಳುತ್ತಿದ್ದುದೂ ಇತ್ತು. ಚಳಿ ಕಾಯಿಸಿಕೊಂಡು ಹೊತ್ತು ಕಳೆಯುತ್ತಾನೆನ್ನುವುದು ನಮ್ಮೆಲ್ಲರ ದೂರಾಗಿತ್ತು.

ಅದೊಂದು ದಿನ ಅವನು ಬಚ್ಚಲು ಮನೆಗೆ ಹೋಗಿದ್ದ. ಅಪ್ಪನಿಗೆ ಏನೋ ಅವಸರವಾಗಿ ಹೋಗಬೇಕಿತ್ತು. ಅದರ ಮೊದಲು ಸ್ನಾನವಾಗಲೇಬೇಕಿತ್ತು. ಸೀದಾ ಟವೆಲ್‌ ಹಿಡಿದು ನಡೆದರು. ಒಳಗಿನಿಂದ ಚಿಲಕ ಹಾಕಿರದ ಕಾರಣ ಬಾಗಿಲು ದೂಡಿದೊಡನೆ ತೆರೆಯಿತು. ಬಚ್ಚಲೊಲೆಯ ಪಕ್ಕದಲ್ಲಿ ಬುಸು ಬುಸನೆ ಹೊಗೆ. ಎರಡು ಕೈಯಲ್ಲಿ ಎರಡು ಬೀಡಿಯನ್ನು ಹೊತ್ತಿಸಿ ಇಟ್ಟುಕೊಂಡು ಎಳೆಯುತ್ತಿದ್ದ. ಅಪ್ಪನ ಹಿಂದೆಯೇ ಅವನನ್ನು ಕರೆದು, “ಬೇಗ ಬಾಗಿಲು ತೆಗೆ’ ಎಂದು ಹೇಳಲು ಬಂದಿದ್ದ ಅಮ್ಮ ಈ ದೃಶ್ಯವನ್ನು ನೋಡಿ ಬೆಚ್ಚಿದ್ದಳು. ಒಂದು ಕ್ಷಣ ಅಷ್ಟೇ. ಮರುದಿನ ಶಾಲೆಗೆ ತೆಗೆದುಕೊಂಡು ಹೋಗಲು ಎಂದು ಅವನೇ ಮಾಡಿಟ್ಟಿದ್ದ ಬಿದುರಿನ ಕೋಲುಗಳು ಅÇÉೇ ಬದಿಯಲ್ಲಿ ಒಣಗಲೆಂದು ಇಟ್ಟಿತ್ತು. ಅದನ್ನು ಹಿಡಿದೆಳೆದು ಬಿಗಿದೇ ಬಿಟ್ಟಿದ್ದಳು. “ಹೊಡೀಬೇಡ ಚಿಕ್ಕಮ್ಮ, ಇನ್ನು ಎಳೆಯೋದಿಲ್ಲ’ ಎಂದು  ಬೇಡಿಕೊಳ್ಳುವವರೆಗೆ. ರಾತ್ರೆ ಮಲಗುವಾಗ ಅವನ ಬಾಸುಂಡೆಗಳಿಗೆ ಎಣ್ಣೆ ಹಚ್ಚುತ್ತ ಕಣ್ಣೀರಾದವಳನ್ನು  ಅವನೂ ಅಳುತ್ತ¤ ಸಮಾಧಾನ ಮಾಡಿದ್ದ. ಆ ನಂತರದ ದಿನಗಳಲ್ಲಿ ಅವನು ಸ್ನಾನಕ್ಕೆ ಹೋಗುವಾಗ ನನ್ನ ಅವಳಿ ಅಣ್ಣನೂ ಅವನ ಜೊತೆ ಹೋಗಲೇಬೇಕಿತ್ತು. ಅದೂ ಬಚ್ಚಲ ಹೊರಗೆ ಮತ್ತು ಒಳಗೆ ಎಲ್ಲಿಯೂ ಬೀಡಿಗಳು ಇಲ್ಲ ಎಂದು ಅಮ್ಮನ ಕಸ್ಟಮ್ಸ್‌ ಚೆಕ್ಕಿಂಗ್‌ ಆದ ನಂತರ. 

ನಾವು ಕೊಡಗಿನಲ್ಲಿ ಪಳಗುತ್ತ ಹೋದಂತೆ  ಚಳಿಯ ದಿನಗಳಲ್ಲಿ, ಮಳೆಗಾಲದ ದಿನಗಳಲ್ಲಿ ಸ್ನಾನವೆನ್ನುವುದೂ ಒಂದು ಶಿಕ್ಷೆಯೇ ಎಂಬುದು ನಮ್ಮನುಭವಕ್ಕೆ ಬಂದಿತ್ತು. ಎಷ್ಟೇ ಕುದಿ ನೀರಿದ್ದರೂ ತಲೆಯಿಂದ ಕಾಲಿಗಿಳಿಯುವಾಗ ತಣ್ಣಗಾಗಿ ನಡುಗುವಂತೆ ಮಾಡುತ್ತಿದ್ದುದು ಸುಳ್ಳಲ್ಲ. ಈ ದಿನಗಳಲ್ಲಿ ಸ್ನಾನವನ್ನು ತಪ್ಪಿಸಿಕೊಳ್ಳಲೆಂದು ಕೆಲವು ಕಳ್ಳವಿದ್ಯೆಗಳನ್ನು ಕೈವಶ ಮಾಡಿಕೊಂಡಿ¨ªೆವು. ಮೊದಲನೆಯದ್ದು, ತಲೆ ನೋವಾಗುತ್ತಿದೆ, ಮೈಕೈ ನೋವೂ ಕೂಡಾ ಎಂಬ ರೋಗದ ನೆವನ. ನಾಳೆ ಜ್ವರ ಬರಬಹುದು, ಇಂದು ಸ್ನಾನ ಮಾಡಬೇಡ ಎಂದು ಸ್ನಾನದಿಂದ ಮುಕ್ತಿ ಸಿಗುತ್ತಿತ್ತು. ಇದು ಯಾವಾಗಲೂ ನಡೆಯುವ ಕೆಲಸವಲ್ಲದ ಕಾರಣ ಬಚ್ಚಲು ಮನೆಗೆ ನುಗ್ಗಿ ಒಂದು ಚೊಂಬು ಸುಡು ನೀರನ್ನು ಹಿಡಿದು ಮುಖದ ಮೇಲಕ್ಕೆ ಬರುವ ಕೂದಲನ್ನು ಕೈಯಿಂದಲೇ ಒ¨ªೆ ಮಾಡಿ, ಬರೀ ಕೈ ಕಾಲಿಗೆ ನೀರು ಹನಿಸಿ, ಉಳಿದ ನೀರನ್ನು ಬೈರಾಸು ಒ¨ªೆ ಮಾಡಲು ಬಳಸುತ್ತಿ¨ªೆವು. ಒಲೆಯೆದುರೇ ನಿಂತು ಬಟ್ಟೆ ಬದಲಾಯಿಸಿ, ಸ್ವಲ್ಪ ಹೊತ್ತು ಅÇÉೇ ಕಳೆದು ಹೊರ ಬಂದಲ್ಲಿಗೆ ಸ್ನಾನವೆಂಬ ಕೆಲಸ ಮುಗಿಸಿದೆವು ಎಂಬ ನೆಮ್ಮದಿಯನ್ನು ಮನೆಯವರಿಗೆ ನೀಡುತ್ತಿ¨ªೆವು.

ಹಾಗೆಂದು ಈ ಬಚ್ಚಲು ಮನೆ ಬರೀ ಸಾಮರಸ್ಯದ ಗೂಡು ಎಂಬ ಕಲ್ಪನೆ ಬಿಟ್ಟುಬಿಡಿ. ಇದರಿಂದಾಗಿಯೇ ಯುದ್ಧಗಳು ನಡೆಯುತ್ತಿದ್ದವು. ಯಾರೋ ನೀರು ಹಾಕದೇ ಸ್ನಾನ ಮಾಡಿ ಹೋಗಿ¨ªಾರೆನ್ನುವ ದೂರು, ಇನ್ಯಾರೋ ಸೌದೆಯೇ ಹಾಕದೇ ನೀರು ತಣ್ಣಗಾಗಿತ್ತು ಎನ್ನುವ ಖ್ಯಾತೆ, ಇಂಥದ್ದಕ್ಕೆÇÉಾ ಜೋರಾಗಿ ವಾದ ವಿವಾದಗಳು ನಡೆಯುತ್ತಿದ್ದವು. ತಪ್ಪುಗಾರನೆಂದು ಗೊತ್ತಾದವರು ಮತ್ತೆ ನಾಲ್ಕು ದಿನ ಸ್ನಾನ ಮಾಡುವುದಕ್ಕೇ ಬಹಿಷ್ಕಾರ ಹಾಕಿ ತಮ್ಮ ಸಿಟ್ಟನ್ನು ತೋರಿಸಿಕೊಳ್ಳುತ್ತಿದ್ದರು. ಮತ್ತೆ ಮೈ ಕೊಳೆಯಾಗಿಯೋ, ಸಿಟ್ಟು ತಿಳಿಯಾಗಿಯೋ, ಹಂಡೆಗೆ ನೀರು ತುಂಬುವಾಗ ತಾವೂ ಕೈ ಜೋಡಿಸುತ್ತ ಒಂದಾಗುತ್ತಿದ್ದರು. 

ಮೊದಲ ಬಾರಿ ಹರೆಯಕ್ಕೆ ಕಾಲಿಟ್ಟ ಹೆಣ್ಣುಮಗಳ ಅಳುವಿಗೆ ಮುಕ್ತಿ ಸಿಕ್ಕುತ್ತಿದ್ದುದೂ ಇದೇ ಒಲೆಯ ಬುಡದÇÉೇ. ದೊಡ್ಡವರು ಮನೆಯೊಳಗೆ ಮಾತನಾಡದೇ ಉಳಿಯುತ್ತಿದ್ದ ಹಲವು ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದುದು ಇದರ ಗೋಡೆಯ ಕಿವಿಗಳೇ. ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತಿದೆ ಎಂಬ ಹಲವು ವಿಷಯಗಳು ಗೆಳತಿಯರ ನಡುವೆ ಚರ್ಚೆಗೆ ಬರುತ್ತಿದ್ದುದೂ ಇಲ್ಲಿಯೇ. ಹೀಗೆ ಹತ್ತು-ಹಲವು ರಹಸ್ಯಗಳನ್ನು ಹೊತ್ತು ಕುಳಿತಿರುತ್ತಿದ್ದ ಬಚ್ಚಲು ಮನೆ, ಈಗ ಬೆಡ್‌ರೂಮುಗಳಿಗೆ ಒಂದೊಂದು ಎಂಬ ಸ್ವಾತಂತ್ರ್ಯ ಪಡೆದು ನಲ್ಲಿ ನೀರು, ಹೀಟರ್‌ ಎಂಬೆಲ್ಲ ವೈಜ್ಞಾನಿಕ ಆವಿಷ್ಕಾರಗಳ ನಡುವೆ ಕಳೆದು ಬಚ್ಚಲೊಲೆಯ ನಿಗಿ ನಿಗಿ ಕೆಂಡ ಮರೆಯಾಗಿ ಹೋಗಿ ಸಂಸ್ಕೃತಿಯ ತುಂಡೊಂದು ಕಳಚಿ ಬಿದ್ದಂತಾಗಿದೆ ಎಂಬ ವಿಷಾದ ನನ್ನದು.

– ಅನಿತಾ ನರೇಶ ಮಂಚಿ

ಟಾಪ್ ನ್ಯೂಸ್

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್

Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ

8

VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್‌ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

7

Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್‌ ರುವಾಂಡದಿಂದ ಭಾರತಕ್ಕೆ ಗಡಿಪಾರು!

6(1

Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್‌ ನಿಲ್ದಾಣ

ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್‌ ಬೇಡಿಕೆ

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್‌ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.