ಎಲ್ಲೆಲ್ಲೂ ವಾಟ್ಸಾಪ್‌ ವ್ಯಸನವು


Team Udayavani, Mar 31, 2019, 6:00 AM IST

Whattsapp

ಜಗತ್ತಿನ ಅತ್ಯಂತ ಕಿರಿಕಿರಿಯ ಪರಿಸ್ಥಿತಿಯೇನೆಂಬುದನ್ನು ಇತ್ತೀಚೆಗೆ ಗೆಳೆಯನೊಬ್ಬನಿಗೆ ವಿವರಿಸುತ್ತಿದ್ದೆ. ಅದು ನಾನು ಸಿನೆಮಾ ನೋಡಲೆಂದು ಹೋಗಿದ್ದ ಸಂಜೆ. ಜನಪ್ರಿಯ ಚಿತ್ರವಾಗಿದ್ದರಿಂದ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರವು ಪ್ರೇಕ್ಷಕರಿಂದ ತುಂಬಿಹೋಗಿತ್ತು. ಆದರೆ, ಚಿತ್ರದ ಜೊತೆಗೇ ಎಡವಟ್ಟುಗಳು ಕೂಡ ಶುರುವಾಗಿದ್ದು ಮಾತ್ರ ವಿಪರ್ಯಾಸ. ಜಗತ್ತಿನ ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಒಂದೆರಡು ತಾಸು ಹಾಯಾಗಿ ಸಿನೆಮಾ ನೋಡೋಣವೆಂದು ಬಂದರೆ ಇಲ್ಲೂ ಕೆಲವರು ಬಂದು ತಮ್ಮ ಲೀಲೆಗಳನ್ನು ತೋರಿಸಬೇಕೇ? ನನ್ನ ಎಡಭಾಗದಲ್ಲಿ ಕುಳಿತವನಿಗೆ ಪ್ರತೀ ಹತ್ತು-ಹದಿನೈದು ನಿಮಿಷಗಳಿಗೊಮ್ಮೆ ಕರೆ ಬರುತ್ತಿತ್ತು. ಆತನೋ ಭಾರೀ ಶಿಸ್ತಿನಿಂದ ಒಂದು ಕರೆಯನ್ನೂ ಬಿಡದೆ ಪಿಸುಗುಡುತ್ತ ಮಾತಾಡುತ್ತಿದ್ದ. ಇನ್ನು ನನ್ನ ಮುಂದಿನ ಸಾಲಿನಲ್ಲಿ ಕುಳಿತವನಿಗೆ ತನ್ನ ವಾಟ್ಸಾಪ್‌ ಪ್ರತೀ ಬಾರಿ ಬೀಪ್‌ ಎಂದಾಗಲೂ ತಳಮಳವಾಗುತ್ತಿತ್ತೋ ಏನೋ. ಈತ ನಿಮಿಷಕ್ಕೆ ಹತ್ತು ಸಾರಿ ಜೇಬಿಗೆ ಕೈಹಾಕಿ ಸ್ಮಾರ್ಟ್‌ಫೋನ್‌ ತೆಗೆಯುತ್ತಿದ್ದ, ವಾಟ್ಸಾಪ್‌ ಸಂದೇಶಗಳಿಗೆ ಉತ್ತರಿಸುತ್ತಿದ್ದ. ಮಹಾನುಭಾವರು ಕೂತಿದ್ದಕ್ಕಿಂತ ಹೆಚ್ಚಾಗಿ ಈ ಗಡಿಬಿಡಿಯಲ್ಲಿ ಕೊಸರಾಡಿದ್ದೇ ಆಯಿತು. ಕತ್ತಲೆ ತುಂಬಿದ್ದ ಚಿತ್ರಮಂದಿರದಲ್ಲಿ ಇವರೂಂದು ಅಂಗೈಯಗಲದ ಫೋನು ಆಗಾಗ ಕಣ್ಣಿಗೆ ರಾಚುವಂತೆ ವಿನಾಕಾರಣ ಪ್ರಕಾಶಿಸುತ್ತ ವಿಘ್ನಸಂತೋಷಿಯಂತೆ ಅಣಕಿಸುತ್ತಿತ್ತು.

ಚಿತ್ರವು ಮುಗಿದ ನಂತರ ಇವರಿಬ್ಬರಿಗೆ ಸಾಷ್ಟಾಂಗ ಮಾಡುವುದೊಂದೇ ಬಾಕಿಯಿದ್ದಿದ್ದು. “ಬಿಡುವಿನ ಅವಧಿಯಲ್ಲೂ ಫೋನ್‌ಗಳ ಸುತ್ತ ಅದೆಂಥ ಲೋಕಕಲ್ಯಾಣದ ಕೆಲಸವನ್ನು ಮಾಡಿಮುಗಿಸಿದ್ರಪ್ಪಾ’ ಎಂದು ಕೇಳಬೇಕನ್ನಿಸಿತ್ತು! ಹಾಗೇನಾದರೂ ಕೇಳಿದ್ದರೆ ಬಹುಶಃ ಅವರು ನನ್ನನ್ನೇ ಅನ್ಯಗ್ರಹ ಜೀವಿಯಂತೆ ನೋಡುತ್ತಿದ್ದರೇನೋ. ಏಕೆಂದರೆ ಇಂಥಾ ಸನ್ನಿವೇಶಗಳನ್ನು ನಾವೆಲ್ಲರೂ ಬಹುತೇಕ ಎಲ್ಲ ಕಡೆ ನೋಡಿರುತ್ತೇವೆ. ಊಟದ ಮೇಜಿನಿಂದ ಶೌಚಾಲಯದವರೆಗೂ, ನಿದ್ದೆಯಿಂದ ಹಿಡಿದು ಧ್ಯಾನದಲ್ಲೂ ಸ್ಮಾರ್ಟ್‌ ಫೋನ್‌ ಮಾತ್ರ ನಮ್ಮನ್ನು ಬಿಡುವುದಿಲ್ಲ. ಇಂದು ಸ್ಮಾರ್ಟ್‌ಫೋನ್‌ “ಬೀಪ್‌’ ಎಂದಾಕ್ಷಣ ನೋಡದಿದ್ದರೆ ಏನೋ ಮಹತ್ತರವಾದದ್ದನ್ನು ಕಳೆದುಕೊಂಡು ಬಿಡುತ್ತೇವೇನೋ ಎಂದೆನ್ನಿಸುತ್ತದೆ. ವಾಟ್ಸಾಪ್‌, ಸಾಮಾಜಿಕ ಜಾಲತಾಣಗಳನ್ನು ರೆಫ್ರಿಜರೇಟರಿನ ಬಾಗಿಲಿನಂತೆ ಐದು ನಿಮಿಷಗಳಿಗೊಮ್ಮೆ ತೆರೆದರಷ್ಟೇ ಸಮಾಧಾನ ಅನ್ನಿಸುತ್ತದೆ. ಇನ್ನು ಇಂಟರ್‌ನೆಟ್‌ ಬಳಕೆಗೆ ವೈ-ಫೈ ಸಿಗದಿದ್ದರಂತೂ ಜಗತ್ತೇ ನಿಂತುಹೋದಂತನಿಸಿ ರಕ್ತದೊತ್ತಡ ಏಕಾಏಕಿ ಮೇಲಕ್ಕೇರಿ ಬಿಡುತ್ತದೆ.

ವ್ಹಾರೆವ್ಹಾ ವಾಟ್ಸಾಪ್‌
ಇಂದು ಕಮ್ಯುನಿಕೇಷನ್‌ ಆ್ಯಪ್‌ ಎಂದಾಕ್ಷಣ ತಕ್ಷಣ ನೆನಪಾಗುವುದು ವಾಟ್ಸಾಪ್‌ ಮಾತ್ರ. ವಾಟ್ಸಾಪನ್ನ ಸರಳ ಬಳಕೆಯ ವಿಧಾನಗಳಿಂದ ನೋಡನೋಡುತ್ತಲೇ ಎಲ್ಲ ವಯಸ್ಸಿನವರನ್ನೂ ಕೂಡ ತನ್ನೆಡೆಗೆ ಸೆಳೆದುಕೊಂಡು ನಮ್ಮ ಜೀವನದ ಒಂದು ಭಾಗವೇ ಅನ್ನಿಸುವಷ್ಟು ಆಪ್ತವಾಗಿಬಿಟ್ಟಿದೆ. ತಂತ್ರಜ್ಞಾನವು ಇಂದು ನಮ್ಮ ಬದುಕಿಗೆ ಸೊಗಸಾದ ಕಂಫ‌ರ್ಟ್‌ ಒದಗಿಸಿರುವುದೇನೋ ಸರಿ. ಆದರೆ, ನಮ್ಮ ಬದುಕಿನಲ್ಲಿ ಸಂತಸವನ್ನೂ ತಂದಿದೆಯೇ ಎಂಬುದನ್ನು ಮಾತ್ರ ಧೈರ್ಯವಾಗಿ ಎದೆ ತಟ್ಟಿ ಹೇಳಿಕೊಳ್ಳುವುದು ಕಷ್ಟ.
ಇಂದು ಸ್ಮಾರ್ಟ್‌ಫೋನ್‌ ಮತ್ತು ಜಾಗತಿಕ ಡಿಜಿಟಲ್‌ ಮಾರುಕಟ್ಟೆಯ ಬಹುದೊಡ್ಡ ಆಟಗಾರನಾಗಿರುವ ಭಾರತದ ಜನತೆಯು ತನ್ನ ದೈನಂದಿನ ಡಿಜಿಟಲ್‌ ಬಳಕೆಯ ಶೇ. 90 ಭಾಗವನ್ನು ಸ್ಮಾರ್ಟ್‌ಫೋನಿನಲ್ಲೇ ಕಳೆಯುತ್ತಿದೆಯಂತೆ. ನಾವಿಂದು ಏನಿಲ್ಲವೆಂದರೂ ದಿನದ 5-6 ತಾಸುಗಳನ್ನು ನಮ್ಮ ಸ್ಮಾರ್ಟ್‌ಫೋನು ಗಳಲ್ಲಿರುವ ವಾಟ್ಸಾಪ್‌ನಂತಹ ಆಪ್‌ಗ್ಳಲ್ಲೂ, ಸಾಮಾಜಿಕ ಜಾಲತಾಣಗಳಲ್ಲೂ ಕಳೆಯುತ್ತಿದ್ದೇವೆ.

ಮೇಲ್ನೋಟಕ್ಕಿದು ತೀರಾ ಉತ್ಪ್ರೇಕ್ಷೆಯಂತೆ ಕಂಡರೂ ಸ್ಮಾರ್ಟ್‌ ಫೋನ್‌ ಬಳಕೆಯಲ್ಲಿ ನಮ್ಮ ದಿನಚರಿಯ ಚದುರಿಹೋದ ಪ್ರತೀ ನಿಮಿಷಗಳನ್ನು ಲೆಕ್ಕಕ್ಕಿಟ್ಟುಕೊಂಡರೆ ಸರಿಸುಮಾರು ಇಷ್ಟೇ ಆಗುತ್ತದೆ. ಬಹಳಷ್ಟು ಬಾರಿ ಒಂದೆರಡು ನಿಮಿಷಗಳ ಬಿಡುವಿಗೆಂಬಂತೆ ನಾವು ವಾಟ್ಸಾಪ್‌ ಮೊರೆಹೋದರೂ ಯಾರೊಂದಿಗೋ ಕಾಡುಹರಟೆ ಮಾಡುವುದರಲ್ಲಿ, ಸೋಷಿಯಲ್‌ ಮೀಡಿಯಾದತ್ತ ಹೋದರೆ ಗಂಟೆಗಟ್ಟಲೆ ಸೊಲ್‌ಡೌನ್‌ ಮಾಡುವ ಭರದಲ್ಲಿ ಸಮಯ ಸರಿದದ್ದೇ ಗೊತ್ತಾಗಿರುವುದಿಲ್ಲ. ಹೀಗಾಗಿ, ಇವುಗಳ ಜಂಜಾಟದಲ್ಲಿ ಮಾಡ ಬೇಕಾಗಿರುವ ಆದ್ಯತೆಯ ಕೆಲಸಗಳು ಬಾಕಿಯಾದಾಗ ದಿನದ ಇಪ್ಪತ್ತ ನಾಲ್ಕು ಗಂಟೆಗಳೂ ಕಮ್ಮಿ ಎಂಬಂತಾಗಿ ತ್ರಾಸವೆನಿಸುವುದು ಸಹಜ.

ಇಟಞಖcಟ್ಟಛಿ ಜಾಲತಾಣವು ಹೇಳುವ ಪ್ರಕಾರ ಭಾರತೀಯರು ಶೀಘ್ರ ಸಂದೇಶಗಳಿಗಾಗಿ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಗೆಂದೇ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ವಾಟ್ಸಾಪ್‌ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ನಂತರದ ಸ್ಥಾನಗಳನ್ನು ಯೂ-ಟ್ಯೂಬ್‌, ಗೂಗಲ್‌ ಪ್ಲೇ, ಜಿ-ಮೈಲ್‌ಗ‌ಳು ಪಡೆದುಕೊಂಡಿವೆ. ಜಗತ್ತಿನಾದ್ಯಂತ ಸರಿಸುಮಾರು ಸಾವಿರದೈನೂರು ಕೋಟಿಯಷ್ಟು ವಾಟ್ಸಾಪ್‌ ಬಳಕೆದಾರರಿದ್ದರೆ, ಅದರಲ್ಲಿ ಇಪ್ಪತ್ತು-ಮೂವತ್ತು ಕೋಟಿಯಷ್ಟು ಬಳಕೆದಾರರು ಭಾರತದಲ್ಲಷ್ಟೇ ಇದ್ದಾರೆ. ಬ್ಯುಸಿನೆಸ್‌ ಆಫ್ ಆಪ್ಸ್‌ ಜಾಲತಾಣದ ವರದಿಯ ಪ್ರಕಾರ ನಗರಗಳಲ್ಲಿರುವ ಭಾರತೀಯರು ಗ್ರಾಮೀಣ ಜನತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾಟ್ಸಾಪ್‌ ಅನ್ನು ಬಳಸುತ್ತಿರುವುದಲ್ಲದೆ 2017-2018ರ ಒಂದೇ ವರ್ಷದ ಅವಧಿಯಲ್ಲಿ ಇದು ಶೇ. 18ರಷ್ಟು ಏರಿಕೆಯಾಗಿದೆ. ವಾಟ್ಸಾಪಿನ ವಿಚಾರದಲ್ಲಿ ಭಾರತವು ಜಗತ್ತಿನ ಬಹುದೊಡ್ಡ ಮಾರುಕಟ್ಟೆಯೂ ಹೌದು.

ವಾಟ್ಸಾಪು ದುನಿಯಾ
ಲೆಕ್ಕವಿಲ್ಲದಷ್ಟು ಇತರ ಆಪ್‌ ಮತ್ತು ಫೇಸ್‌ಬುಕ್‌, ಟ್ವಿಟರ್‌, ಇನ್ಸಾ$rಗ್ರಾಮ್‌ಗಳಂಥ ಜಾಲತಾಣಗಳಿದ್ದರೂ ವಾಟ್ಸಾಪಿನ ಜನಪ್ರಿಯತೆಯ ನಾಗಾಲೋಟಕ್ಕೆ ಮಾತ್ರ ಸಾಟಿಯೇ ಇಲ್ಲ. ಇಂದು ಬರೋಬ್ಬರಿ 180 ರಾಷ್ಟ್ರಗಳಲ್ಲಿ ಅಜಮಾಸು ನೂರಾರು ಭಾಷೆಗಳಲ್ಲಿ ವಾಟ್ಸಾಪ್‌ ಚಾಲ್ತಿಯಲ್ಲಿದೆ. 2014ರಲ್ಲಿ ಹತ್ತೂಂಬತ್ತು ಬಿಲಿಯನ್‌ ಅಮೆರಿಕನ್‌ ಡಾಲರ್‌ಗಳ ಮೊತ್ತದಲ್ಲಿ ಫೇಸ್‌ಬುಕ್‌ ಸುಪರ್ದಿಗೆ ಬಂದ ವಾಟ್ಸಾಪ್‌ನಲ್ಲಿ ಜಗತ್ತಿನಾದ್ಯಂತ ದಿನವೊಂದಕ್ಕೆ ಸುಮಾರು 65 ಬಿಲಿಯನ್‌ ಸಂದೇಶಗಳು ವಿನಿಮಯವಾದರೆ, ನಿಮಿಷಕ್ಕಿದು 29 ಮಿಲಿಯನ್ನಷ್ಟಾಗುತ್ತದೆ. ಹೀಗೆ ಫೇಸ್‌ಬುಕ್‌ ಮೆಸೆಂಜರ್‌ ಮತ್ತು ವಿ-ಚಾಟ್‌ಗಳನ್ನು ಹಿಂದಿಕ್ಕಿ ಗ್ಲೋಬಲ್‌ ಮೆಸೆಂಜರ್‌ ಆ್ಯಪ್‌ಗ್ಳಲ್ಲಿ ಮುಂಚೂಣಿಯ ಸ್ಥಾನವನ್ನು ವಾಟ್ಸಾಪ್‌ ಅಲಂಕರಿಸಿಯಾಗಿದೆ.

ಅಂದ ಹಾಗೆ ಇದು ಮುಂದುವರಿದ ಮತ್ತು ಮುಂದುವರಿಯು ತ್ತಿರುವ ದೇಶಗಳ ಕತೆಯಷ್ಟೇ ಅಲ್ಲ. ಉದಾಹರಣೆಗೆ ಸೊಮಾಲಿಯಾ ಮತ್ತು ಎರಿಟ್ರಿಯಾಗಳಂಥ ಆಫ್ರಿಕಾದ ಕೆಲ ಆಯ್ದ ದೇಶಗಳನ್ನು ಹೊರತುಪಡಿಸಿ ಆಫ್ರಿಕಾ ಖಂಡದಲ್ಲೂ ವಾಟ್ಸಾಪ್‌ ಭರ್ಜರಿಯಾಗಿಯೇ ಆವರಿಸಿಕೊಂಡಿದೆ. ಪರವಾಗಿಲ್ಲ ಎಂಬಂತಿರುವ ಅಂತರ್ಜಾಲ ಸೌಲಭ್ಯ ಗಳ ಹೊರತಾಗಿಯೂ ಆಫ್ರಿಕಾದ ಭೂಭಾಗಗಳಲ್ಲಿ ಕಳೆದೆರಡು ವರ್ಷ ಗಳಲ್ಲಿ 20 ಶೇ. ದಷ್ಟು ಹೆಚ್ಚಿರುವ ಅಂತರ್ಜಾಲ ಮಾರುಕಟ್ಟೆಯ ವ್ಯಾಪ್ತಿಯು 7 ಕೋಟಿಗೂ ಹೆಚ್ಚು ಬಳಕೆದಾರರನ್ನು ತಲುಪಿ ಅಪಾರ ಜನಪ್ರಿಯತೆಯನ್ನು ಪಡೆಯುತ್ತಿದೆ. ಇನ್ನು ಆಫ್ರಿಕಾದಲ್ಲಿ ಇಂಟರ್‌ನೆಟ್‌ ಬಳಕೆದಾರರ ಪ್ರಮಾಣವು ಪ್ರತೀವರ್ಷವೂ 20 ಪ್ರತಿಶತದಷ್ಟು ಹೆಚ್ಚುತ್ತಿ ರುವುದರಲ್ಲಿ ಮಾಲಿ, ಬೆನಿನ್‌, ನೈಜರ್‌, ಮೊಝಾಂಬಿಕ್‌, ಸಿಯೇರಾ ಲಿಯೋನೆಯಂಥ ದೇಶಗಳ ಪಾತ್ರವಿರುವುದು ಗಮನಾರ್ಹ ಅಂಶ.

5-ಜಿ ಲೋಕದಲ್ಲಿ, ನಾವು ಬಿದ್ದಿದ್ದೆಲ್ಲಿ?
ಸ್ಮಾರ್ಟ್‌ಫೋನ್‌ ಆಪ್‌ ಮತ್ತು ಸೋಷಿಯಲ್‌ ಮೀಡಿಯಾ ವ್ಯಸನಗಳ ತೀವ್ರತೆಯು ನಮ್ಮನ್ನು ತಕ್ಕಮಟ್ಟಿಗಾದರೂ ತಟ್ಟಿರುವುದು ಸತ್ಯ. ಈ ಸತ್ಯವನ್ನು ನಾವು ಒಪ್ಪಿಕೊಳ್ಳುತ್ತೇವೋ ಇಲ್ಲವೋ ಎಂಬುದು ಮಾತ್ರ ಬೇರೆ ಮಾತು. ಈ ಬಗ್ಗೆ “ಬಾಝಾರ್‌’ ವರದಿಯು ಎರಡು ವರ್ಷಗಳ ಹಿಂದೆಯೇ ಸ್ವಾರಸ್ಯಕರ ಅಂಶವೊಂದರತ್ತ ಬೊಟ್ಟುಮಾಡಿತ್ತು. ಅದೇನೆಂದರೆ 2017ರ ಹೊಸವರ್ಷದ ರೆಸಲ್ಯೂಷನ್‌ಗಳಲ್ಲಿ ಬ್ರಿಟನ್ನಿನ ಬಹಳಷ್ಟು ಮಂದಿ ಚಾಟಿಂಗ್‌ ಆ್ಯಪ್‌ ಮತ್ತು ಸೋಷಿಯಲ್‌ ಮೀಡಿಯಾಗಳನ್ನು ತ್ಯಜಿಸುವ ಬಗ್ಗೆ ಗಂಭೀರವಾಗಿ ಯೋಚಿಸಿದ್ದರು. ಹೊಸವರ್ಷದ ಅವಧಿಯಲ್ಲಿ ಸಾಮಾನ್ಯವಾಗಿ ಸಿಗರೇಟು ಬಿಡುವ, ದೇಹದ ತೂಕ ಇಳಿಸಿಕೊಳ್ಳುವ ಇತ್ಯಾದಿ ರೆಸಲ್ಯೂಷನ್ನುಗಳನ್ನು ಹಿಂದಿಕ್ಕಿ “ಡಿಜಿಟಲ್‌ ಡಿಟಾಕ…’ ಹೊಸದಾಗಿ ಸೇರಿಕೊಂಡಿತ್ತು. ಡಿಜಿಟಲ್‌ ಯುಗದ ಆಧುನಿಕ ಬಳಕೆದಾರರು ಆತಂಕ, ಖನ್ನತೆ, ಕುಸಿದ ಏಕಾಗ್ರತೆ, ಕೀಳರಿಮೆ ಮತ್ತು ಸಂಬಂಧಗಳಂಥ ಸಮಸ್ಯೆಯಿಂದ ಕಂಗೆಟ್ಟಿರುವುದು ಸ್ಪಷ್ಟವಾಗಿತ್ತು.

“”ನಾನು ಅದ್ಯಾವ ಮಟ್ಟಿಗೆ ಸ್ಮಾರ್ಟ್‌ಫೋನ್‌ ಅಡಿಕ್ಟ್ ಆಗಿದ್ದೆನೆಂದರೆ ಹಲವು ತಿಂಗಳುಗಳ ಚಿಕಿತ್ಸೆಯ ನಂತರವಷ್ಟೇ ನನ್ನ ಕತ್ತುನೋವು ವಾಸಿಯಾಗಿತ್ತು”, ಎನ್ನುತ್ತಿದ್ದರು ಗಾಜಿಯಾಬಾದ್‌ ಮೂಲದ ಗೆಳೆಯರಾದ ಮೋಹಿತ್‌ ಕೌರ್‌. ಇವರ ತಂದೆಯೂ, ನನ್ನ ಹಿರಿಯ ಸಹೋದ್ಯೋಗಿಯೂ ಆಗಿದ್ದ ಡಾ. ಕೆ. ಕೆ. ಗೌರ್‌ ಈ ಬಗ್ಗೆ ನನ್ನಲ್ಲಿ ಯಾವತ್ತೂ ವ್ಯಥೆಯಿಂದ ಹೇಳಿಕೊಳ್ಳುತ್ತಿದ್ದವರು. ತಜ್ಞರು ಹೇಳುವಂತೆ ಸಾಮಾನ್ಯ ಬಳಕೆದಾರನೊಬ್ಬ ದಿನಕ್ಕೆ ಸರಾಸರಿ ಇಪ್ಪತ್ತಮೂರು ಬಾರಿ ತನ್ನ ವಾಟ್ಸಾಪ್‌ ಅನ್ನು ತೆರೆದು ಪರಿಶೀಲಿಸುತ್ತಾನಂತೆ. ಇನ್ನು ವಾಟ್ಸಾಪ್‌ ಸಂದೇಶಗಳ ಒಟ್ಟಾರೆ ಟ್ರಾಫಿಕ್‌ ವಿಚಾರದಲ್ಲಿ ಭಾರತೀಯ ಬಳಕೆದಾರರ ಪ್ರಾಬಲ್ಯ ಮತ್ತು ಸಮಾಜಘಾತುಕ ಸುಳ್ಳು ಸುದ್ದಿಗಳನ್ನು ತೀವ್ರಗತಿಯಲ್ಲಿ ಹರಡು ವಲ್ಲಿ ಸದ್ಯ ವಾಟ್ಸಾಪ್‌ ವಹಿಸುತ್ತಿರುವ ಪಾತ್ರದ ಬಗ್ಗೆ ನಮಗೆಲ್ಲ ತಿಳಿದೇ ಇದೆ.

ಲೇಖಕಿಯೂ, ಥೆùವ್‌ ಗ್ಲೋಬಲ್‌ ಡಾಟ್‌ಕಾಮ್‌ ತಾಣದ ಸಂಸ್ಥಾಪ ಕರೂ ಆಗಿರುವ ಆರಿಯಾನಾ ಹಫಿಂಗ್ಟನ್‌ ಹೇಳುವ ಪ್ರಕಾರ ನಿದ್ದೆಯ ಸಮಯದಲ್ಲಿ ಅವರು ತನ್ನೆಲ್ಲ ಗ್ಯಾಜೆಟ್‌ಗಳನ್ನು ಕೋಣೆಯಿಂದಲೇ ಹೊರಗಿಟ್ಟು ಕದವಿಕ್ಕಿ ಮಲಗುತ್ತಾರಂತೆ. ರಾತ್ರಿಯ ಸುಖ ನಿದ್ದೆಯು ಇದರಿಂದಾಗುವ ಒಂದು ಲಾಭವಾದರೆ, ಅರ್ಧರಾತ್ರಿಯಲ್ಲೂ ಫೋನ್‌ ಕಿರುಚಾಡುತ್ತಿದ್ದರೆ ತಲೆಕೆಡಿಸಿಕೊಳ್ಳದಿರುವ ಭಾಗ್ಯ ಮತ್ತೂಂದು. ವಿಶ್ವದಾದ್ಯಂತ ಮೂರು ಬಿಲಿಯನ್‌ಗೂ ಹೆಚ್ಚಿನ ಸ್ಮಾರ್ಟ್‌ಫೋನ್‌ ಬಳಕೆದಾರರು ಇಂದು ದೀರ್ಘಾವಧಿಯ ಫೋನ್‌ ಬಳಕೆ ಮತ್ತು ಬಳಕೆಯ ಅವಧಿಯಲ್ಲಿ ಕತ್ತುನೋವೂ ಸೇರಿದಂತೆ ಕೆಡುತ್ತಿರುವ ಆರೋಗ್ಯಕರ ದೇಹಭಂಗಿಗಳಿಂದಾಗಿ Text Neck Syndromeನಿಂದ ಬಳಲುತ್ತಿದ್ದಾ
ರೆ.

ಇಕನಾಮಿಕ್‌ ಟೈಮ್ಸ್‌ ವರದಿಯ ಪ್ರಕಾರ ತಂತ್ರಜ್ಞಾನ ಸಂಬಂಧಿ ವ್ಯಸನಗಳಿಗೆ ಚಿಕಿತ್ಸೆಯನ್ನು ನೀಡುವ ಬೆಂಗಳೂರಿನ Services for Healthy Use of Technology (SHUT) ವೈದ್ಯಕೀಯ ಕೇಂದ್ರವು ವಾರಕ್ಕೆ 7-8 ಕತ್ತು/ಭುಜನೋವಿನಂಥ ಪ್ರಕರಣಗಳನ್ನು ದಾಖಲಿಸುತ್ತಿದೆ. ವಾಟ್ಸಾಪ್‌ನಂಥ ಚಾಟ್‌ ಮೆಸೆಂಜರ್‌ಗಳಲ್ಲಿ ನಿರಂತರವಾಗಿ ಚಾಟ್‌ಮಾಡುವ ಪರಿಣಾಮವಾಗಿ ಹೆಬ್ಬೆರಳ ಮಾಂಸಖಂಡದ ಮೇಲಾಗುವ ಪರಿಣಾಮವನ್ನು “ವಾಟ್ಸಾಪೈಟಿಸ್‌’ ಎಂದು ಕರೆದಿದ್ದ ಜನಪ್ರಿಯ ಪದಪುಂಜವನ್ನು ನಾವಿಲ್ಲಿ ನೆನೆಸಿಕೊಳ್ಳಬಹುದು. ಬೆರಳುಗಳಲ್ಲಿ ನೋವುಂಟುಮಾಡುವ Carpal Tunnel Syndrome ಕೂಡ ದೀರ್ಘಾವಧಿಯ ಟೆಕ್ಸಿಟಿಂಗ್‌ ಮತ್ತು ಸ್ಮಾರ್ಟ್‌ಫೋನ್‌ ಬಳಕೆಯಿಂದಾಗುವ ಆರೋಗ್ಯ ಸಂಬಂಧಿ ಪರಿಣಾಮಗಳೊಂದು.

ಆರಿಂಚಿನ ಪರದೆಯೊಳಗಿನ ಮಾಯೆ
ಕೇವಲ ಸಂದೇಶಗಳನ್ನಷ್ಟೇ ಕಳಿಸಲು ಸೀಮಿತವಾಗಿದ್ದ ವಾಟ್ಸಾಪ್‌ ಇಂದು ಬಹಳಷ್ಟನ್ನು ತನ್ನ ತೆಕ್ಕೆಯಲ್ಲಿರಿಸಿಕೊಂಡಿದೆ. ನಮ್ಮ ಇಷ್ಟಾನಿಷ್ಟಗಳನ್ನು ಸಾಮಾಜಿಕ ಜಾಲತಾಣಗಳ ಅಗೋಚರ ಆಲ್ಗಾರಿದಂಗಳು ಅರ್ಥಮಾಡಿಕೊಂಡು ಪತ್ತೇದಾರಿ ಕೆಲಸಗಳನ್ನು ಸದ್ದಿಲ್ಲದೆ ಮಾಡುತ್ತಿವೆ. ಖಾಸಗಿತನವನ್ನು ಕಾಯ್ದಿರಿಸಿಕೊಳ್ಳುವ ರೂಢಿಯು ಇಂದು ತಂತ್ರಜ್ಞಾನದ ಟ್ರೆಂಡ್‌ಗಳಿಗೆ ಅನುಸಾರವಾಗಿ ಬಚ್ಚಿಟ್ಟುಕೊಳ್ಳುವ ನಡೆಗಳಂತೆ ಕಂಡು ನಮ್ಮ ನಮ್ಮಲ್ಲೇ
ಮುನಿಸನ್ನು ತರುತ್ತಿವೆ. ಅವಳ ಸದಾ ಆನ್‌ಲೈನ್‌ ಹಾಜರಿಯಿಂದಾಗಿ ಅವನು ಒಳಗೊಳಗೇ ಕುದಿಯುತ್ತಾನೆ. ಅವನ ಬ್ಲೂ-ಟಿಕ್‌ ತನಗೇಕೆ ಕಾಣುವುದಿಲ್ಲವೆಂದು ಅವಳು ಬುಸುಗುಡುತ್ತಿರುತ್ತಾಳೆ. ಭಾವನೆಗಳು ಇಮೋಜಿಗಳಿಗೆ ಸೀಮಿತವಾಗುತ್ತಿವೆ. ತನ್ನೆಲ್ಲವನ್ನೂ ಜಗತ್ತಿಗೆ ತಿಳಿಸಬೇಕು ಎಂದು ಯಾರೋ ಸ್ಟೇಟಸ್‌-ಸ್ಟೋರಿ-ಲೈಕುಗಳೆಂದು ಬಡಬಡಿಸುತ್ತಿದ್ದರೆ, ಇವೆಲ್ಲವುಗಳಿಂದ ಸುರಕ್ಷಿತ ದೂರವನ್ನು ಕಾಯ್ದುಕೊಂಡಿರುವ ಸಾಮಾನ್ಯನೊಬ್ಬ ಜಗತ್ತಿಗೆ ಗುಗ್ಗುವಿನಂತೆ ಗೋಚರಿಸುತ್ತಾನೆ. ಆಡಂಬರದ ಆರ್ಭಟದೆದುರು ಪ್ರಜ್ಞಾಪೂರ್ವಕವಾಗಿ ಬದುಕುವ ಪ್ರಕ್ರಿಯೆಯು ನೀರಸವೆಂಬಂತೆ ದಟ್ಟ ಭ್ರಮೆಯೊಂದು ಆವರಿಸತೊಡಗುತ್ತದೆ.

“”ಇದು ವಿಜ್ಞಾನ ಮತ್ತು ಸಂಸ್ಕೃತಿಗಳು ಪರಸ್ಪರ ಸಂಧಿಸುವ ಬಿಂದುವಾಗಿದ್ದರೂ ತೀರಾ ವೈಯಕ್ತಿಕವೂ ಹೌದು. ನಮ್ಮ ತಾಣದ ಬಹಳಷ್ಟು ಅಂಶಗಳನ್ನು ಬಳಕೆದಾರರಲ್ಲಿ ನಿರ್ದಿಷ್ಟ ಬಗೆಯ ಭಾವನಾತ್ಮಕ ಬದಲಾವಣೆಗಳನ್ನು ತರುವ ಉದ್ದೇಶದಿಂದಲೇ ವೈಜ್ಞಾನಿಕವಾಗಿ ರೂಪಿಸಲಾಗುತ್ತದೆ”, ಎಂದು ಫೇಸ್‌ಬುಕ್‌ ಮುಖ್ಯಸ್ಥರಾದ ಮಾರ್ಕ್‌ ಝೂಕರಬರ್ಗ್‌ ನ್ಯೂಯಾರ್ಕ್‌ ಲೇಖನವೊಂದಕ್ಕಾಗಿ ಸ್ವತಃ ಹೇಳಿದ್ದರು. ಒಂದೊಳ್ಳೆಯ ಸಿನೆಮಾ ಒಂದಲ್ಲ ಒಂದು ಹಂತದಲ್ಲಿ ಮುಗಿಯುತ್ತದೆ. ಇದು ಪುಸ್ತಕದ ಮಟ್ಟಿಗೂ ಸತ್ಯ. ಆದರೆ, ಸಾಮಾಜಿಕ ಜಾಲತಾಣಗಳನ್ನು ಒಂದು ಕೊನೆಯಿಲ್ಲದ ವೇದಿಕೆಯಂತೆ ರೂಪಿಸಿರುವ ವ್ಯವಸ್ಥೆಯೇ ಬಳಕೆದಾರರನ್ನು ದೀರ್ಘಾವಧಿಯ ಮಟ್ಟಿಗೆ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಒಂದು ಬುದ್ಧಿವಂತಿಕೆಯ ಮಾದರಿ. ಹೀಗೆ ಕೆಲನಿಮಿಷಗಳ ಬಿಡುವಿಗೆಂದು ಈ ದಿಕ್ಕಿನತ್ತ ಆಕರ್ಷಿತನಾಗುವ ಬಳಕೆದಾರ ತನಗರಿವಿಲ್ಲದಂತೆಯೇ ತನ್ನ ಬಲು ಅಮೂಲ್ಯವಾದ ಸಮಯವನ್ನು ಇಲ್ಲಿ ವ್ಯಯಿಸಿರುತ್ತಾನೆ.

ಅಷ್ಟಕ್ಕೂ ತಂತ್ರಜ್ಞಾನವು ನಮ್ಮ ಅನುಕೂಲಕ್ಕಿರಬೇಕಿತ್ತು. ಆದರೆ, ಇಲ್ಲೇಕೋ ನಮ್ಮ ಬದುಕು ಉಲ್ಟಾಹೊಡೆದಂತೆ ಕಾಣುತ್ತಿದೆ. ಇತ್ತೀಚೆಗೆ ದೆಹಲಿಯ ಖ್ಯಾತ ಸಾಂಸ್ಕೃತಿಕ ತಾಣಗಳೊಂದಾದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಕಲ್ಚರ್‌ ಆವರಣದ ಲಾಂಜ್‌ನಲ್ಲಿ ಪರಿಚಿತರೊಬ್ಬರೊಂದಿಗೆ ಕೂತಿದ್ದೆ. ಈ ನಡುವೆ ಯಾರಧ್ದೋಕರೆ ಬಂತೆಂದು ಫೋನೆತ್ತಿದರೆ, “”ಕ್ಷಮಿಸಿ ಸಾರ್‌, ನೀವಿಲ್ಲಿ ಫೋನ್‌ ಕರೆಗಳನ್ನು ಮಾಡುವಂತಿಲ್ಲ” ಎಂದು ಸಿಬ್ಬಂದಿಯೊಬ್ಬರು ಬಂದು ಸೌಮ್ಯ ದನಿಯಲ್ಲಿ ಎಚ್ಚರಿಸಿದರು. ಲ್ಯಾಪ್‌ಟಾಪ್‌ ಕೂಡ ತೆರೆದು ಕೆಲಸ ಮಾಡುವಂತಿಲ್ಲ ಎಂಬುದನ್ನು ಅಲ್ಲಿಯ ನಿಯಮಗಳ ಪಟ್ಟಿಯಲ್ಲಿ ಸೂಚಿಸಲಾಗಿದ್ದನ್ನು ನಂತರ ಗಮನಿಸಿದೆ. ಅದೆಷ್ಟೋ ಪ್ರತಿಭಾವಂತರು, ಖ್ಯಾತನಾಮರು ಬಂದುಹೋಗುವ ಈ ಪುಟ್ಟ ತಾಣವು ಅದೇಕೆ ಅಷ್ಟು ತಣ್ಣಗಿದೆ ಎಂದು ನನಗರಿವಾಗಿದ್ದು ಆಗಲೇ.

ಜನಜಾತ್ರೆಯಲ್ಲಿ ಕಳೆದುಹೋಗುವುದು ಸುಲಭ. ಆದರೆ, ಅದರೊಳಗೇ ಒಂದು ಸುಂದರವಾದ ಬೃಂದಾವನವನ್ನು ಸೃಷ್ಟಿಸುವುದು ಅದೆಂಥ ಸವಾಲಿನ ಕೆಲಸ! ಯಾವುದಕ್ಕೂ ಇಚ್ಛಾಶಕ್ತಿಯಿರಬೇಕಷ್ಟೇ !

ಇದೊಂದು ಬ್ರಹ್ಮಕಪಾಲ!
ಮುಂಬೈಯ ಒಂದು ಕಂಪೆನಿಯ ದುರಂತಕತೆಯನ್ನು ಒಬ್ಬರು ಹೇಳುತ್ತಿದ್ದರು. ಅಲ್ಲಿರುವ ಯುವಕರಲ್ಲಿ ಹೆಚ್ಚಿನವರು ಕೆಲಸದ ವೇಳೆ ಮೊಬೈಲ್‌ನಲ್ಲಿ “ಓಲಾಡಲು’ ತೊಡಗಿದ್ದರಿಂದ ಕಂಪೆನಿಯ ಕಾರ್ಯಕ್ಷಮತೆ ಕುಸಿಯಿತು. ಹೊಣೆ ವಹಿಸಬೇಕಾದ ಮೆನೇಜರುಗಳೂ ವಾಟ್ಸಾಪ್‌ ವ್ಯಸನಕ್ಕೆ ಸಿಲುಕಿ ಕ್ಯಾಬಿನ್‌ನಿಂದ ಹೊರಬರಲಿಲ್ಲ. ಹಾಗಾಗಿ, ಕಂಪೆನಿ ನಷ್ಟ ಅನುಭವಿಸಬೇಕಾಯಿತು. ಕೊನೆಗೆ ಅದು ಮುಚ್ಚಿಯೇ ಹೋಯಿತು.

ನಗರದಲ್ಲಿ ಹೋಲ್‌ಸೇಲ್‌ ಡೀಲರ್‌ ಆಗಿರುವ ಒಬ್ಬರ ಸಮಸ್ಯೆಯೇ ಬೇರೆ. ಅವರಿಗೆ ಕೆಲಸಕ್ಕೆ ಜನ ಸಿಗುವುದಿಲ್ಲ! ಕೆಲಸ ಕೇಳಿಕೊಂಡು ಹುಡುಗರು ಬರುತ್ತಾರೆ, “ಕೆಲಸದ ಅವಧಿ ಯಲ್ಲಿ ಒಳಗೆ ಮೊಬೈಲ್‌ ಒಯ್ಯಲು ಅವಕಾಶವಿಲ್ಲ’ ಎಂಬ ನಿರ್ಬಂಧವಿರುವುದನ್ನು ನೋಡಿ “ಈ ಕೆಲಸ ಬೇಡ’ ಎಂದು ವಾಪಸಾಗುತ್ತಾರೆ. ಕೆಲಸದ ವೇಳೆ ಮೊಬೈಲ್‌ ಬಳಕೆಗೆ ಅನುಮತಿ ಕೊಟ್ಟರೆ ಮುಗಿದೇಹೋಯಿತು, ಹುಡುಗರು ಅದರಲ್ಲಿಯೇ ಮುಳುಗಿ ಬಿಡುತ್ತಾರೆ.

ಅತಿಯಾದ ಮೊಬೈಲ್‌ ಬಳಕೆ ಯುವಜನತೆಯ ಕ್ರತುಶಕ್ತಿಯನ್ನು ನಾಶಮಾಡುವ ಅಪಾಯ ಸದ್ಯೋಭವಿಷ್ಯದಲ್ಲಿದೆ. ಹಾಗೆಂದು, ಮೊಬೈಲ್‌ನಿಂದ ಪ್ರಯೋಜನವಿಲ್ಲ ಎಂದು ಹೇಳ್ಳೋಣವೆ? ಇಂಥ ಸಂವಹನ ಕ್ರಾಂತಿ ಸಾಧ್ಯವಾಗದೇ ಇದ್ದರೆ ಜಗತ್ತು ಇಷ್ಟು ಮುಂದುವರಿಯಲು ಸಾಧ್ಯವಿತ್ತೆ? ವಾಟ್ಸಾಪ್‌ನಿಂದ ಎಷ್ಟೋ ಅಮೂಲ್ಯ ಮಾಹಿತಿಗಳು ಜನರಿಂದ ಜನರಿಗೆ ತಲುಪಲು ಸಾಧ್ಯವಾಗಿದೆ. ಎಷ್ಟೋ ಬರಹಗಾರರು, ಕವಿಗಳು ಹುಟ್ಟಿಕೊಂಡಿದ್ದಾರೆ. ಅಭಿವ್ಯಕ್ತಿಯ ಅವಕಾಶವಿಲ್ಲದವರಿಗೆ ವಾಟ್ಸಾಪ್‌, ಫೇಸ್‌ಬುಕ್‌ಗಳು ವೇದಿಕೆ ಒದಗಿಸಿವೆ. ವಾಟ್ಸಾಪ್‌ನಲ್ಲಿ “ಗ್ರೂಪ್‌’ಗಳು ಹುಟ್ಟಿಕೊಂಡು ಒಂದು ರೀತಿಯ ಸಾಮುದಾಯಿಕ ಸಂಸ್ಕೃತಿಯನ್ನು ಜಾಗೃತಗೊಳಿಸಿವೆ. ಕುಟುಂಬದ ಮಂದಿ ತಮ್ಮ ವಾಟ್ಸಾಪ್‌ ಗ್ರೂಪ್‌ಗ್ಳಲ್ಲಿ ಒಂದಾಗಿದ್ದಾರೆ. ಯಾವುದೋ ಕಾಲದಲ್ಲಿ ಜೊತೆಯಾಗಿದ್ದ ಸಹಪಾಠಿಗಳು ಮತ್ತೆ ವಾಟ್ಸಾಪ್‌, ಫೇಸ್‌ಬುಕ್‌ಗಳ ಮೂಲಕ ಸಂಧಿಸಿದ್ದಾರೆ. ದೂರದೂರವಾಗಿದ್ದ ಮನಸ್ಸುಗಳು, ವಾಟ್ಸಾಪ್‌ ಮೂಲಕ ಪ್ರತಿನಿತ್ಯ ಗುಡ್‌ಮಾರ್ನಿಂಗ್‌, ಗುಡ್‌ನೈಟ್‌ ಸಂದೇಶಗಳನ್ನು ಹೇಳಿ ಹತ್ತಿರ ಬರುತ್ತಿವೆೆ. ನೂರಾರು ಪ್ರಯೋಜನಗಳು ಇದ್ದೇ ಇವೆ. ಆದರೆ, ಅದು ಹೇಗೆ ಬಳಸುತ್ತೀರಿ ಎಂಬುದನ್ನು ಅವಲಂಬಿಸಿದೆ.

ಈ ಮೊದಲೆಲ್ಲ ಫೋನ್‌ಗಳಿರಲಿಲ್ಲ. “ನಾನು ಇಂಥ ಜಾಗದಲ್ಲಿ ಸಿಗುತ್ತೇನೆ’ ಎಂದು ಒಮ್ಮೆ ಹೇಳಿದರೆ ಮುಗಿಯಿತು. ಅದು ಮಾತು ಕೊಟ್ಟ ಹಾಗೆ. ಆ ದಿನ, ಆ ಸಮಯದಲ್ಲಿ ಅವನು ಅಲ್ಲಿರಲೇಬೇಕು. ಈಗ ಎಲ್ಲವೂ ಮೊಬೈಲ್‌ ಮೂಲಕ, ವಾಟ್ಸಾಪ್‌ ಸಂದೇಶದ ಮೂಲಕ ನಡೆಯುತ್ತವೆ. ಮಾತು ಕೊಡುವುದು ಸುಲಭ, ಮಾತು ಮುರಿಯು ವುದೂ ಸುಲಭವೇ. ಸಂದೇಶ ಕಳುಹಿಸಿ ಮೀಟಿಂಗ್‌ ಫಿಕ್ಸ್‌ ಮಾಡುವುದು ಸರಳ; ಅದೇ ಸಂದೇಶದ ಮೂಲಕ ಆ ಮೀಟಿಂಗ್‌ನ್ನು ರದ್ದುಗೊಳಿಸುವುದೂ ಸರಳವೇ.ಹೊಣೆಗಾರಿಕೆ ಮತ್ತು ಹೊಣೆ ಗೇಡಿತನ ಎರಡೂ ಸೌಲಭ್ಯಗಳು ಇಂದಿನ ವೇಗದ ಸಂವಹನದಿಂದ ಸುಲಭಸಾಧ್ಯವಾಗಿವೆ.
– ರಾಮ್‌

ಇಂಟರ್ನೆಟ್‌ ಡಿ-ಎಡಿಕ್ಷನ್‌ ಸೆಂಟರ್‌ಗಳು

ತಮಾಷೆ ನೋಡಿ, ಉಚಿತವಾದ ಸೌಲಭ್ಯಗಳನ್ನು ನೀಡಿ ಇಂಟರ್‌ನೆಟ್‌ನ್ನು ಹೆಚ್ಚು ಹೆಚ್ಚು ಬಳಸಿ ಎಂದು ಕಂಪೆನಿಗಳು ಹೇಳುತ್ತಿವೆ. ಜನರೆಲ್ಲ ಸುತ್ತಮುತ್ತ ನೋಡುವುದನ್ನು ಮರೆತು ಮೊಬೈಲ್‌ನಲ್ಲಿ ಕಣ್ಣು ನೆಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಮಹಾನಗರದ ಕೆಲವು ಎನ್‌ಜಿಓಗಳು “ಇಂಟರ್ನೆಟ್‌ ಡಿ-ಎಡಿಕ್ಷನ್‌ ಸೆಂಟರ್‌’ಗಳನ್ನು ತೆರೆಯಬೇಕಾಗಿ ಬಂದಿದೆ. ಇಂಟರ್‌ನೆಟ್‌ ಎಂಬುದು ಬದುಕಿನ ಭಾಗವನ್ನು ಎಷ್ಟೊಂದು ಆಕ್ರಮಿಸಿದೆ ಎಂದರೆ ಅದರಿಂದ ಹೊರಬರಲು ಜನ ಒದ್ದಾಡಬೇಕಾದ ಸ್ಥಿತಿ ಒದಗಿದೆ.

ಜಂಕ್‌ಫ‌ುಡ್‌ಗಳನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತೇವೆ. ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದೂ ಅದನ್ನು ಸೇವಿಸುತ್ತೇವೆ. ಹಾಳಾದ ಆರೋಗ್ಯವನ್ನು ಸರಿಪಡಿಸಲು ಔಷಧಿಯ ಮೊರೆ ಹೋಗುತ್ತೇವೆ. ಮತ್ತೆ ಆಹಾರದ ಪಥ್ಯವನ್ನು ಅನುಸರಿಸಬೇಕಾಗುತ್ತದೆ. ಒಟ್ಟಿನಲ್ಲಿ ಬದುಕು ಎಂದರೆ ಡ್ರಗ್‌-ಡ್ರಗ್‌-ಡ್ರಗ್‌!

ಹಾಗೆಯೇ ಇಂಟರ್‌ನೆಟ್‌ನಿಂದ ಹೊರಬರಲು ಇಂಟರ್‌ನೆಟ್‌ನಲ್ಲಿಯೇ ಪರಿಹಾರ ಹುಡುಕಬೇಕಾಗಿದೆ ! ಇಂಟರ್‌ನೆಟ್‌ ಎಡಿಕ್ಷನ್‌ನಿಂದ ವ್ಯಕ್ತಿತ್ವಕ್ಕೆ ಏನು ಹಾನಿಗಳಾಗುತ್ತವೆ ಎಂಬುದನ್ನು ತಿಳಿಯಬೇಕಾದರೆ ಇಂಟರ್‌ನೆಟ್‌ ಜಾಲಾಡಬೇಕಾಗುತ್ತದೆ. ಹೀಗೆ, ಒಂದು ಅಂತರ್ಜಾಲ ತಾಣಕ್ಕೆ ಹೋದರೆ ಅಮಿತ್‌ ಅಗರ್‌ವಾಲ್‌ ಎಂಬವರ ವ್ಯಥೆಯ ಕತೆ ತೆರೆದುಕೊಳ್ಳುತ್ತದೆ.

ಅಮಿತ್‌ ತಮ್ಮ ಮಗನ ಅತಿಯಾದ ಬೇಡಿಕೆಯನ್ನು ಮನ್ನಿಸಿ ಒಂದು ಮೊಬೈಲ್‌ ತೆಗೆದುಕೊಟ್ಟರು. ಈಗ ಒಂದು ವರ್ಷವಾಯಿತು. ಮಗ ತನ್ನ ಕೊಠಡಿ ಬಿಟ್ಟು ಹೊರಬರುವುದಿಲ್ಲ. ಹೊರಬಂದರೂ ತಲೆತಗ್ಗಿಸಿ ಮೊಬೈಲ್‌ನಲ್ಲಿ ದೃಷ್ಟಿ ಇಟ್ಟಿರುತ್ತಾನೆ. ಅವನನ್ನು ಬಲವಂತವಾಗಿ ಮನಶಾಸ್ತ್ರಜ್ಞರಲ್ಲಿ ಕರೆದೊಯ್ಯಬೇಕಾದ ಸ್ಥಿತಿ ಬಂದಿದೆ.

ಈ ಹಿಂದೆಲ್ಲ ಮಾನಸಿಕ ಚಿಕಿತ್ಸೆಗೆ ಬರುವವರಲ್ಲಿ ಹೆಚ್ಚಿನವರು ಮದ್ಯಪಾನ-ಧೂಮಪಾನ ಚಟಕ್ಕೆ ಅಂಟಿಕೊಂಡವರಾಗಿದ್ದರು. ಕೆಲವರು ಪ್ರೀತಿ-ಪ್ರೇಮದಲ್ಲಿ ಸೋತವರಾಗಿದ್ದರು. ಹಲವರು ಪರೀಕ್ಷೆಯಲ್ಲಿ ಫೇಲಾದವರಿದ್ದರು. ಈಗ ಮನಶಾÏಸ್ತ್ರಜ್ಞರ ಬಳಿ ಹೋಗುವ ಹೆಚ್ಚಿನ ಗಿರಾಕಿಗಳು ಮೊಬೈಲ್‌ ವ್ಯಸನದಿಂದ ಬಾಧಿತರಾದವರು!
– ವಾಣಿ

ಇಮೋಜಿ ಭಾಷೆ !
ನಮ್ಮ ಸಂವಹನ ತಂತ್ರಜ್ಞಾನ ಕಳೆದ 5-6 ವರ್ಷಗಳಲ್ಲಿ ಎಷ್ಟೊಂದು ಬದಲಾಗಿದೆ !”ಹೇಗಿದ್ದೀರಿ?’, “ಏನು ಮಾಡುತ್ತೀರಿ?’ ಎಂದೆಲ್ಲ ಮೊಬೈಲ್‌ ಮೂಲಕ ಕೇಳಿದರೆ ಈಗಿನ ಉತ್ತರ ಇಮೋಜಿಗಳೇ. ಪದಗಳ ಬಳಕೆ ಇಲ್ಲದ ಕಾಲದಲ್ಲಿ , ಭಾಷೆ ಬೆಳೆದಿರದಿದ್ದ ದಿನಗಳಲ್ಲಿ ಜನ ಸನ್ನೆ-ಸಂಕೇತ ಗಳಿಂದ ವ್ಯವಹರಿಸುತ್ತಿದ್ದರಂತೆ. ಈಗ ಮತ್ತೆ ಅದೇ ಕಾಲ ಬಂದಿದೆ. ಮಾತು ಮರೆತುಹೋಗಿದೆ, ಸಾಂಕೇತಿಕ ಚಿತ್ರಗಳೇ ಮೆರೆಯುತ್ತಿವೆ.

ಜೋಕ್‌ 1
ಅವಿವಾಹಿತ ಗುಂಡನಿಗೆ ಪ್ರೀತಿ ಮಾಡುವ ಆಸೆ.ಒಬ್ಬಳಿಗೆ “ಹಲೊ’ ಎಂಬ ವಾಟ್ಸಾಪ್‌ ಸಂದೇಶ ಕಳುಹಿಸಿದ. ಅವಳು ನಗುವ ಇಮೋಜಿ ಕಳುಹಿಸಿದಳು.

“ಛೆ! ಇವಳ ಮುಖ ಏನೂ ಚೆಂದವಿಲ್ಲ. ಚೀನಾದ‌ವಳ ಹಾಗೆ ಇದ್ದಾಳೆ’ ಎಂದು ಗುಂಡ ಅವಳ ಜೊತೆಗೆ ಸಂಭಾಷಣೆ ಯನ್ನು ಮೊಟಕುಗೊಳಿಸಿ ಬೇರೊಬ್ಬಳ ತಲಾಶೆಯಲ್ಲಿ ತೊಡಗಿದ.

ಜೋಕ್‌ 2
“ನಿನ್ನ ಕೈನೋವು ಹೇಗಿದೆ?’ ಎಂದು ಗುಂಡ ಊರಿನಲ್ಲಿರುವ ಹೆಂಡತಿಗೆ ವಾಟ್ಸಾಪ್‌ ಸಂದೇಶ ಕಳುಹಿಸಿದ.ಆಕೆ ಹೆಬ್ಬೆರಳಿನ ಚಿತ್ರವನ್ನು ಕಳುಹಿಸಿದಳು.”ಹೊ! ಇನ್ನೂ ಕಡಿಮೆಯಾಗಿಲ್ಲವಾ? ಹೆಬ್ಬೆರಳು ನೋವು ಇನ್ನೂ ಇರಬೇಕು!’ ಎಂದು ಗುಂಡ ತನ್ನೊಳಗೆ ಭಾವಿಸಿದ.

ಜೋಕ್‌ 3
ಗುಂಡ ವೈದ್ಯರ ಬಳಿಗೆ ಹೋಗಿದ್ದ. ವೈದ್ಯರು ಕೇಳಿದರು, “ನಿನ್ನ ಗ್ರೂಪ್‌ ಯಾವುದಪ್ಪ?
‘”ಅಜ್ಜಿಮನೆ, ಯಕ್ಷಬಳಗ, ನಮ್ಮಶಾಲೆ- ಇಂಥ ಆರೆಂಟು ಗ್ರೂಪ್‌ಗ್ಳಲ್ಲಿದ್ದೇನೆ’ ಎಂದ.
“ಅದಲ್ಲ ಕೇಳಿದ್ದು, ನಿನ್ನ ಬ್ಲಿಡ್‌ಗ್ರೂಪ್‌?’
– ನಿಧಿ

– ಪ್ರಸಾದ್‌ ನಾಯ್ಕ

ಟಾಪ್ ನ್ಯೂಸ್

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

15-bng

Bengaluru: ‘ಪೊಲೀಸರ ಹೆಸರಿನ ನಕಲಿ ಕರೆ ಬಗ್ಗೆ ಎಚ್ಚರ ವಹಿಸಿ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.