ವಾಟ್ಸಾಪ್ ಕತೆ: ಬಾಡಿಗೆದಾರ!
Team Udayavani, Jul 28, 2019, 5:00 AM IST
ನಮ್ಮ ಮನೆಯಿಂದ ಒಂದೈವತ್ತು ಅಡಿ ದೂರದಲ್ಲಿರುವ ಮಠದ್ ಮನೆಯ ಮನೆಯೆರಡು ಖಾಲಿಯಾಗಿ ಒಂದೆರಡು ತಿಂಗಳುಗಳೇ ಗತಿಸಿದ್ದರೂ ಯಾವ ಬಾಡಿಗೆದಾರರೂ ಬಂದಿರಲಿಲ್ಲ. ಆ ಹಿಂದೆ ಇದ್ದವರಿಗೂ ನಮಗೂ ಅವರು ಬೀದಿಗೆ ಎಸೆಯುತ್ತಿದ್ದ ಕಸದಿಂದಾಗಿ ಮನಸ್ತಾಪವಾಗಿತ್ತು. ಪುನಃ ಅಂತಹ ಗಿರಾಕಿಗಳು ಬಂದರೇನು ಮಾಡುವುದು ಅಂತ ಯೋಚನೆಯಾಗಿತ್ತು.
ಆದರೆ, ಆನಂತರ ಕಪ್ಪನೆಯ ಗಟ್ಟಿಮುಟ್ಟಾದ ಕುಳ್ಳ ವ್ಯಕ್ತಿ ಬೆಳ್ಳನೆಯ ಇಜ್ಜೋಡು ಹೆಂಡತಿಯೊಂದಿಗೆ ಬಂದಿಳಿದ. ಅವರ ಓಡಾಟ ಮಾತುಕತೆ ಸುಶಿಕ್ಷಿತ ಜನರಂತೆ ಇದ್ದುದಲ್ಲದೇ, ಕಸವನ್ನು ಕಸದ ಗಾಡಿಗೆ ಹಾಕುವಷ್ಟು ಸ್ವಚ್ಛ ಭಾರತ ಯೋಜನೆಗೆ ಪುಷ್ಟೀಕರಿಸುವಂತಿದ್ದವು. ಆ ಮಟ್ಟಿಗೆ ಸಂತಸವಾಗದಿರಲಿಲ್ಲ.
ಇಡೀ ಕಾಲೊನಿಗೆ, ನಾನೊಬ್ಬನೇ ಪದ್ಮಾವತಪ್ಪ ಆಗಿದ್ದೆ, ಅರುಣೋದಯಕ್ಕೆ ಮುಂಚಿತವಾಗಿ ವಾಕಿಂಗ್ ಹೋಗುತ್ತಿದ್ದವನೆಂಬ ಜಂಭ ಬೇರೆ. ಆದರೆ, ಈ ಕರಿಯಪ್ಪ, ನನ್ನನ್ನು ನೋಡಿಯೋ ಏನೋ ಮಡದಿಯೊಂದಿಗೆ ವಾಕ್ ಮಾಡಲು ಶುರು ಮಾಡಿದ್ದ! ಆದರೆ, ನನ್ನ ದಾರಿ ಮತ್ತು ಅವರವು ಬೇರೆ ಬೇರೆಯಾಗಿದ್ದರಿಂದ, ಯಾವುದೇ ಮೇಲಾಟಕ್ಕೆ ಆಸ್ಪದವಿರಲಿಲ್ಲ.
ಆದರೆ, ನಾನು ಹಿಂತಿರುಗುವಾಗ, ಸರ್ಕಾರಿ ಕಚೆೇರಿಯ ಮುಂದಿದ್ದ ಗಂಟೆಹೂಗಳನ್ನು ಕಿತ್ತುಕೊಂಡು ಬರುತ್ತಿದ್ದುದನ್ನು ಗಮನಿಸಿದ ಆತ ಲೆಕ್ಕ ಹಾಕಿಕೊಂಡವನಂತೆ, ನನಗಿಂತಲೂ ಬೇಗನೆ ಎದ್ದವನು ಮಡದಿಯ ಗೋಜಿಗೆ ಹೋಗದೇ, ಒಬ್ಬನೇ ನನಗಿಂತ ಬೇಗನೆ ಹೋಗಿ, ಆ ಹೂವುಗಳನ್ನು ಕಿತ್ತು ತರಹತ್ತಿದ್ದ. ಎಲಾ ಇವನ! ನನ್ನ ಗಳಿಕೆಗೆ ಕನ್ನಹಾಕಹತ್ತಿದನಲ್ಲ ! ಎಂದುಕೊಂಡು ಅವನಿಗಿಂತ ಬೇಗ ಹೋಗಹತ್ತಿದೆ. ಅದನ್ನರಿತ ಅವನು, ಅದು ಯಾವಾಗ ಮಲಗುವನೋ ಅದು ಯಾವಾಗ ಹೋಗುವನೋ ಎಂಬಂತೆ ಅಷ್ಟೊತ್ತಿಗೇ ಹೋಗಿ ಹೂವನ್ನೆಲ್ಲ ಕಿತ್ತುಕೊಂಡು ಬರಹತ್ತಿದ. ನನ್ನ ಪಾಲನ್ನು ಅವನೇ ಉಣ್ಣಹತ್ತಿದ್ದಾನೆ. ಅವನೊಂದಿಗೆ ಜಗಳ ಮಾಡಲೇ- ಎನ್ನಿಸಿತ್ತು.
ಯಾಕೆ ಜಗಳ ಮಾಡಬೇಕು; ಅವನು ಹೂವುಗಳನ್ನು ಅರ್ಪಿಸುವ ದೇವರು ಮತ್ತು ನಾನು ಹೂವುಗಳನ್ನು ಅರ್ಪಿಸುವ ದೇವರು ಒಂದೇ ಆಗಿರುವಾಗ !
ಶರಣ ಗೌಡ ಎರಡೆತ್ತಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.