ಹಕ್ಕಿಯಂತೆ ರೆಕ್ಕೆ ಮೂಡಿಸಿಕೊಂಡು ಅಕ್ಕನಂತೆ ಸ್ವಚ್ಛಚಂದ
Team Udayavani, Aug 5, 2018, 6:00 AM IST
ಅಕ್ಕನಂತೊಬ್ಬಳು ಅನುರಕ್ತೆ-ಆಸೆ ಹುಟ್ಟಿಸುವ ಒಂದು ಕವಿತಾ ಸಂಗ್ರಹ. ಒಂದೊಂದಾಗಿ ಬಿಡಿಕವಿತೆಗಳನ್ನು ಓದುವಾಗ ಕೆಲವು ಕವಿತೆಗಳು ಚಕ್ಕನೆ ಅಂತರಂಗಕ್ಕೆ ಕಚ್ಚಿಕೊಂಡವು. ಒಮ್ಮೆ ಪೂರ್ಣಿಮಾ ಹಂಪೆಯ ಯಾತ್ರೆಗೆ ಹೋಗುತ್ತಾರೆ. ಹಾಳು ಹಂಪಿ ಆಕೆಯ ಅಂತರಂಗವನ್ನು ತುಂಬಿಕೊಳ್ಳುತ್ತದೆ. ಗರ್ಭಗುಡಿಗಳಲ್ಲಿ ಭಗ್ನವಾಗಿರುವ ದೇವಮೂರ್ತಿಗಳು ಆಕೆಯ ಮನೋಗರ್ಭವನ್ನು ತಲ್ಲಣಗೊಳಿಸುತ್ತವೆ. ಪದ್ಯ ಕೊನೆಯಾಗುವ ವೇಳೆಗೆ ಹಾಳುಹಂಪಿ ಅತ್ಯಾಚಾರಕ್ಕೆ ಒಳಗಾದ ಒಬ್ಬಳು ಹೆಣ್ಣುಮಗಳ ಶರೀರವಾಗಿ ಪರಿಣಮಿಸುತ್ತದೆ. ಆಗ ಗರ್ಭಗುಡಿ ಎಂಬ ಮಾತಿಗೆ ವಿಶೇಷವಾದ ಅರ್ಥ ತನಗೆ ತಾನೇ ಪ್ರಾಪ್ತವಾಗುತ್ತದೆ.
ನೀಲ, ಗರ್ಭಗುಡಿಯಲ್ಲಿ ಮೆರೆದಿರುವ
ನಿನಗೆ ತ್ರಿಕಾಲ ಪೂಜೆ:
ಅತ್ಯಾಚಾರಕ್ಕೊಳಗಾಗುವ ಮನ
ಆಗದಿರಲಿ ಈ ಹಾಳು ಹಂಪೆಯಂತೆ.
ಹಂಪಿಯನ್ನು ಈ ನೆಲೆಯಲ್ಲಿ ನೋಡಿದ ಇನ್ನೊಂದು ಕವಿತೆ ನನ್ನ ಗಮನಕ್ಕಂತೂ ಬಂದಿಲ್ಲ. ಮುಕ್ಕಾದ ದೇವಾಲಯಗಳು, ಗರ್ಭಾಂಕಣದಲ್ಲಿ ನುಚ್ಚುನೂರಾದ ದೇವಮೂರ್ತಿಗಳು ಅತ್ಯಾಚಾರಕ್ಕೊಳಗಾದ ಹೆಣ್ಣಿನ ದೇಹ ಮತ್ತು ಗರ್ಭಕೋಶಕ್ಕೆ ತಮ್ಮನ್ನು ಸಂಬಂಧಿಸಿಕೊಳ್ಳುತ್ತ ಮನಸ್ಸನ್ನು ಆಳದಲ್ಲಿ ಕಲಕುತ್ತವೆ. ಪ್ರತಿಯೊಂದು ಹೆಣ್ಣೂ ದೈವವನ್ನೇ ಗರ್ಭದಲ್ಲಿ ಧರಿಸಿದ ಒಂದು ದೇವಾಲಯ. ಆ ದೇವಾಲಯದ ಪಾವಿತ್ರ್ಯ ಮತ್ತು ಘನತೆಯನ್ನು ಹಾಳುಗೆಡಹಬೇಡಿ ಎಂದು ಸೂಚಿಸುವ ಕವಿತೆ ನಮ್ಮ ಮನಸ್ಸಲ್ಲಿ ಮರೆಯಲಾಗದ ಸ್ಮರಣೆಯಾಗಿ ಉಳಿಯುತ್ತದೆ.
ಲಯಬದ್ಧವಾದ ಅವನೆಂದರೆ ಕವಿತೆ, ಪೂರ್ಣಿಮಾ ಅರಸುತ್ತಿರುವ ಪುರುಷನ (ಪುರುಷೋತ್ತಮ ಕೃಷ್ಣನ) ಪ್ರತೀಕವೆಂಬಂತೆ ಮೈದಳೆಯುತ್ತದೆ. ಈ ಕವಿತೆಯ ಲಯವೇ ತುಂಬ ಆಕರ್ಷಕವಾಗಿದೆ.
ಹಸುಳೆ ಕಣ್ಣ ಎಳೆ ಎಳೆಯಾಗಿ ಲಕಲಕಿಸುವ ಹೊಳಪು ಹರಯವಪ್ಪಿ ಮುತ್ತಿಟ್ಟು ಮುದ್ದಾಡುವ ಪಲಕದಾಯಿ ಒನಪುಹಾಡು ಜೇನುಗೂಡನು ಕಟ್ಟಲೆಳಸುವ ಲೋಕಾನುಭವ ಸಂಚಯಿತ ಮನಸು ಹಲ್ಲಿರದ ಹಣ್ಣುಹಣ್ಣೂ ಜೀವ ನನ್ನಜ್ಜಿಯ ತನ್ಮಯಕರ ಬಿಸುಪು ಪೂರ್ಣಿಮಾ ತನ್ನ ಅಜ್ಜನಲ್ಲಿ ಪುರುಷೋತ್ತಮನ ಹೊಳಹನ್ನು ಕಂಡಿದ್ದಾರೆಯೇ ಎಂಬ ಪ್ರಶ್ನೆಯೂ ಮನಸ್ಸಲ್ಲಿ ಮಿಂಚುತ್ತದೆ. ಗಂಡಿನ ಬಗ್ಗೆ ಮನಸ್ಸಲ್ಲಿ ಮೂಡುವ ಎಲ್ಲ ಬಗೆಯ ಮಿಶ್ರಭಾವಗಳ ನಡುವೆಯೂ ತನ್ನ ಒಲವನ್ನು ಪುರುಷನಿಗೆ ಧಾರೆಯೆರೆಯಲು ಹಿಂಜರಿಯದ ಜಟಿಲವಾದ ಮನೋಧರ್ಮ ಅವರ ಪದ್ಯಗಳಲ್ಲಿ ಕಾಣುತ್ತದೆ. ಮಗಳಾಗಿ, ಮೊಮ್ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ ತನ್ನ ಸ್ವಕ್ಷೇತ್ರದಲ್ಲಿ ನಿಂತು ಬಗೆಬಗೆಯಲ್ಲಿ ಬಣ್ಣಿಸುವ ಪೂರ್ಣಿಮಾ ಕವಿತೆಗಳು ಆಕರ್ಷಕವಾಗಿವೆ. ಸ್ವಕ್ಷೇತ್ರವೆಂದು ಮನೆಯೊಳಗೆ ತನ್ನನ್ನು ಬಂಧಿಸಿಕೊಳ್ಳುವ ಇರಾದೆಯೂ ಆಳದಲ್ಲಿ ಈ ಕವಿಗೆ ಇಲ್ಲ ! ಹಾರುವ, ಕ್ಷೇಮವಲಯವನ್ನು ತಿರಸ್ಕರಿಸುವ, ಹಕ್ಕಿಯಂತೆ ರೆಕ್ಕೆ ಮೂಡಿಸಿಕೊಂಡು ಅಕ್ಕನಂತೆ ಸ್ವತ್ಛಂದವಾಗಿ ಬಯಲಲ್ಲಿ ಬೆರೆತಾಡುವ ಅಲೌಕಿಕ ತುಡಿತಗಳೂ ಪೂರ್ಣಿಮಾಗೆ ಇವೆ.
– ಎಚ್. ಎಸ್. ವೆಂಕಟೇಶಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.