ಕಾಲ್ಚೆಂಡು ಕಾಳಗದ ಹಳೆಯ ಪ್ರಸಂಗ: ಬ್ರೆಜಿಲ್‌ ವಿಜಯ!


Team Udayavani, Jun 17, 2018, 9:52 AM IST

q-32.jpg

ವಿಶ್ವಕಪ್‌ ಫ‌ುಟ್ಬಾಲ್‌ ಎಂಬ ಪ್ರತಿಷ್ಠಿತ ಪಂದ್ಯಾಟದ ಆತಿಥ್ಯವನ್ನು ವಹಿಸಿರುವ ರಷ್ಯಾದಲ್ಲಿ ಈಗ ಅವರ್ಣನೀಯ ಸಂಭ್ರಮ. ಮೊನ್ನೆ ಜೂ. 14 ರಂದು ರಷ್ಯಾದಲ್ಲಿ ಅದ್ದೂರಿಯಿಂದ ಆರಂಭೋತ್ಸವ ಕಂಡಿದೆ. ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾಟದ 21ನೇ ಆವೃತ್ತಿ ಇದೀಗ ರೋಚಕ ಕ್ಷಣಗಳನ್ನು ನೀಡುತ್ತಿದೆ.

ಫ‌ುಟ್ಬಾಲ್‌ ಸರಳವಾದ ಆಟವಾದುದರಿಂದ ಇಡೀ ಜಗತ್ತಿನಲ್ಲೇ ಜನಪ್ರಿಯವಾಗಿದೆ.  ಫ‌ುಟ್ಬಾಲ್‌ ಫೆಡರೇಶನ್‌ನ ಸಮೀಕ್ಷೆ ಪ್ರಕಾರ ಜಗತ್ತಿನ 200 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಜನರು ಫ‌ುಟ್ಬಾಲ್‌ನ್ನು ಆಡುತ್ತಿದ್ದಾರೆ. ಕಾಲ್ಚೆಂಡಿನ ಆಟಕ್ಕೆ 1930 ರಲ್ಲಿ ಜಾಗತಿಕ ಮನ್ನಣೆ ದೊರೆತ ನಂತರ ಇದರ ಖದರೇ ಬದಲಾಗಿದೆ. 1930 ರಲ್ಲಿ ಉರುಗ್ವೆ ದೇಶದಲ್ಲಿ ಹಲವು ಅಡೆತಡೆಗಳ ನಡುವೆ ಆರಂಭಗೊಂಡ ವಿಶ್ವಕಪ್‌ ಫ‌ುಟ್ಬಾಲ್‌ ಟೂರ್ನಿ ಮೊದಲ ಪ್ರಯತ್ನದಲ್ಲೇ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಯಿತು.  ಅಲ್ಲಿಂದ ಇಲ್ಲಿಯವರೆಗೆ 88 ವರ್ಷಗಳ ಇತಿಹಾಸದಲ್ಲಿ ಈ ಜಾಗತಿಕ ಕ್ರೀಡಾಮೇಳ 21 ಆವೃತ್ತಿಗಳನ್ನು ಕಂಡಿದೆ.

    ಈ ಬಾರಿ ರಷ್ಯಾದಲ್ಲಿ 12 ಕ್ರೀಡಾಂಗಣಗಳಲ್ಲಿ ನಡೆಯುವ ವಿಶ್ವಕಪ್‌ನ 64 ಪಂದ್ಯಗಳು ಫ‌ುಟ್ಬಾಲ್‌ ಪ್ರೇಮಿಗಳಿಗೆ ರೋಚಕ ಅನುಭವವನ್ನು ನೀಡಲಿದೆ. ಒಂದು ತಿಂಗಳ ಕಾಲ ನಡೆಯಲಿರುವ ಈ ಪಂದ್ಯಗಳು ಹಳೆಯ ನೆನಪುಗಳನ್ನು, ಸಂತೋಷದ ಕ್ಷಣಗಳನ್ನು, ದುರಂತದ ಘಟನೆಗಳನ್ನು ಹಾಗೂ ವಿಜಯೋತ್ಸವದ ಸ್ಮರಣೀಯ ಗಳಿಗೆಯನ್ನು ಫ‌ುಟ್ಬಾಲ್‌ ಪ್ರೇಮಿಗಳಿಗೆ ನೀಡಲಿದೆ. ಹಾಗಾಗಿ, ಈ ಅಭೂತಪೂರ್ವ ಸಾಹಸದ ಚಿತ್ರಣಗಳ ಫ‌ುಟ್ಬಾಲ್‌ ಇತಿಹಾಸ ಇದುವರೆಗೆ ಜೀವಂತವಾಗಿ ಉಳಿದಿದೆ.

ವಿಶ್ವಕಪ್‌ ಫ‌ುಟ್ಬಾಲ್‌ ಇತಿಹಾಸವನ್ನು ಕೆದಕಿದಾಗ ಈ ಪಂದ್ಯಾಟದಲ್ಲಿ ಇದುವರೆಗೆ ನೂರಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸಿವೆ. ಆದರೆ, ಕೆಲವೊಂದು ಕಾರಣಗಳಿಂದ ಈ ಪಂದ್ಯಾಟದಲ್ಲಿ ಹೆಚ್ಚಿನ ತಂಡಗಳು ತಮ್ಮ ಪಾರುಪತ್ಯವನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಇದುವರೆಗಿನ ವಿಶ್ವಕಪ್‌ನ 20 ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದಿರುವುದು ಬರೀ 8 ರಾಷ್ಟ್ರಗಳು ಮಾತ್ರ.  ಯುರೋಪ್‌ ಮತ್ತು ದಕ್ಷಿಣಅಮೆರಿಕ ದೇಶಗಳು ವಿಶ್ವಕಪ್‌ನಲ್ಲಿ ಪಾರಮ್ಯ ಮೆರೆದಿವೆ.  ಈವರೆಗೆ ಒಮ್ಮೆ ಕೂಡ ಈ ಎರಡೂ ಖಂಡಗಳ ದೇಶಗಳನ್ನು ಹೊರತುಪಡಿಸಿ ಇನ್ಯಾವ ತಂಡವೂ ಫೈನಲ್‌ಗೆ ಎಂಟ್ರಿಯಾಗಿಲ್ಲ, ಪ್ರಶಸ್ತಿ ಗೆದ್ದಿಲ್ಲ.  ಪ್ರತೀ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದ ದಾಖಲೆ ಹೊಂದಿರುವ ಬ್ರೆಜಿಲ್‌ ಐದು ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದರೆ, ನಂತರದ ಸ್ಥಾನದಲ್ಲಿರುವ ಇಟಲಿ ಹಾಗೂ ಜರ್ಮನಿ ತಲಾ ನಾಲ್ಕು ಬಾರಿ ವಿಶ್ವಕಪ್‌ ಗೆದ್ದಿದೆ.  ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ ಉರುಗ್ವೆ ಮತ್ತು ಅರ್ಜೆಂಟೀನಾ ತಂಡಗಳು ತಲಾ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರೆ, ಇಂಗ್ಲೆಂಡ್‌, ಫ್ರಾನ್ಸ್‌, ಸ್ಪೇನ್‌ ತಂಡಗಳು ತಲಾ ಒಂದು ಬಾರಿ ವಿಶ್ವಕಪ್‌ನ್ನು ಮುಡಿಗೇರಿಸಿಕೊಂಡಿವೆ.

ಬ್ರೆಜಿಲ್‌ ದಿ ಗ್ರೇಟ್‌
ವಿಶ್ವಕಪ್‌ ಫ‌ುಟ್ಬಾಲ್‌ ಬಗ್ಗೆ ಏನು ಹೇಳಿದರೂ ಅದರಲ್ಲಿ ಬ್ರೆಜಿಲ್‌ ಬಗ್ಗೆ ವಿಶೇಷ ಪ್ರಸ್ತಾವನೆ ಅಗತ್ಯವಾಗಿ ಬೇಕಾಗುತ್ತದೆ. ಬ್ರೆಜಿಲ್‌ಗೆ ಫ‌ುಟ್ಬಾಲ್‌ ಎನ್ನುವುದು ಮೂಲಸಂಸ್ಕೃತಿಯಾಗಿದೆ.  ಮನಮೋಹಕ ನೃತ್ಯ, ಸಂಗೀತ, ಅತೀ ಸುಂದರ ನೈಸರ್ಗಿಕ ಸಿರಿ ಸಂಪತ್ತನ್ನು ಬ್ರೆಜಿಲ್‌ ಹೊಂದಿದ್ದರೂ ಅದು ಜಗತ್ತಿನಲ್ಲಿ ಗುರುತಿಸಿಕೊಂಡದ್ದು ಫ‌ುಟ್ಬಾಲ್‌ನಿಂದ ಮಾತ್ರ!  ಬ್ರೆಜಿಲ್‌ ಎಂದರೆ ಫ‌ುಟ್ಬಾಲ್‌ ಎಂಬ ರೂಢಿ ಮಾತೇ ಇದೆ.

    ಇಲ್ಲಿಯ ತನಕ 20 ವಿಶ್ವಕಪ್‌ ಫ‌ುಟ್ಬಾಲ್‌ ಟೂರ್ನಿಯಲ್ಲಿ ಪ್ರಧಾನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ ಏಕೈಕ ತಂಡ ಬ್ರೆಜಿಲ್‌.  ಅಷ್ಟೇ ಅಲ್ಲ, ಅದು ಇದೀಗ 21ನೆಯ ವಿಶ್ವಕಪ್‌ನಲ್ಲೂ ಆಡುತ್ತಿದೆ.  ಆದುದರಿಂದಲೇ ವಿಶ್ವಕಪ್‌ ಫ‌ುಟ್ಬಾಲ್‌ ಎಂದಾಗಲೇ ಎಲ್ಲರ ಕಣ್ಣು ಬ್ರೆಜಿಲ್‌ ಮೇಲೆ ನೆಟ್ಟಿದೆ.

    ಐದು ಬಾರಿ ವಿಶ್ವಕಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಬ್ರೆಜಿಲ್‌ ವಿಶ್ವದ ಏಕೈಕ ಫೇವರೆಟ್‌ ತಂಡವಾಗಿದೆ. ಅದು ಫೇವರೆಟ್‌ ಆಗಲು ಇಲ್ಲಿಯವರೆಗೆ ಸಾಧಿಸಿರುವ ಸಾಧನೆಯೇ ಕಾರಣವಾಗಿದೆ.  1958 ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ ಪ್ರಶಸ್ತಿ ಪಡೆಯಲು ಆರಂಭಿಸಿದ ಬ್ರೆಜಿಲ್‌ ನಂತರ 1962, 1970, 1994 ಮತ್ತು 2002 ರಲ್ಲಿ ವಿಶ್ವಕಪ್‌ ಗೆದ್ದು ಅಪೂರ್ವ ದಾಖಲೆ ಗೈದಿದೆ. ಎರಡು ಬಾರಿ ರನ್ನರ್‌ ಅಪ್‌ ಪ್ರಶಸ್ತಿಯನ್ನು ಬ್ರೆಜಿಲ್‌ ಪಡೆದಿತ್ತು.

    ಬ್ರೆಜಿಲ್‌ ಖ್ಯಾತಿಗೆ ಹಲವಾರು ವಿಶ್ವ ವಿಖ್ಯಾತ ಆಟಗಾರರ ಕೊಡುಗೆಯೂ ಇದೆ.  ಅವರಲ್ಲಿ ಪ್ರಮುಖರೆಂದರೆ, ಲಿಯೋನಿಡಾಸ್‌, ಪೀಲೆ, ಡಿಡಿ, ವಾವಾ, ಗಾರಿಂಚ, ಜೈರ್ಜಿನೊ, ಟೊಸ್ಲಾವೋ, ರೊಮಾರಿಯಾ, ರೊನಾಲ್ಡ್‌, ರಿವಾಲ್ಡೊ, ರೊನಾಲ್ಡಿನೊ ಹಾಗೂ ಇದೀಗ ನೇಮರ್‌ ! ಇಂತಹ ಖ್ಯಾತನಾಮರನ್ನು ಬೇರಾವುದೇ ರಾಷ್ಟ್ರ ಫ‌ುಟ್ಬಾಲ್‌ ರಂಗಕ್ಕೆ ನೀಡಿಲ್ಲ.

ವಿಶ್ವಕಪ್‌ ಫ‌ುಟ್ಬಾಲ್‌ ವೀಕ್ಷಣೆ
    ಜಗತ್ತಿನ ಅತ್ಯಧಿಕ ಮಂದಿ ವಿಶ್ವಕಪ್‌ ಫ‌ುಟ್ಬಾಲ್‌ನ್ನು ದೂರದರ್ಶನದ ಮೂಲಕ ವೀಕ್ಷಿಸಲು ಕಾತರದಲ್ಲಿದ್ದಾರೆ.  1994 ರಲ್ಲಿ ವಿಶ್ವಕಪ್‌ ಫ‌ುಟ್ಬಾಲ್‌ ಟೂರ್ನಿ ನಡೆದಿದ್ದಾಗ 320 ಕೋಟಿಗೂ ಹೆಚ್ಚು ಮಂದಿ ಈ ಪಂದ್ಯಾವಳಿಯನ್ನು ವೀಕ್ಷಿಸಿದ್ದಾರೆ.  1998ರಲ್ಲಿ ಫ್ರಾನ್ಸ್‌ನಲ್ಲಿ ವಿಶ್ವಕಪ್‌ ನಡೆದಿದ್ದಾಗ 335 ಕೋಟಿ, 2002ರಲ್ಲಿ ಕೊರಿಯಾ-ಜಪಾನ್‌ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ನ್ನು 400 ಕೋಟಿ, ಜರ್ಮನಿಯಲ್ಲಿ 2006 ರಲ್ಲಿ ನಡೆದ ವಿಶ್ವಕಪ್‌ನ್ನು 715 ಕೋಟಿ, 2010 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹಾಗೂ 2014 ರಲ್ಲಿ ಬ್ರೆಜಿಲ್‌ನಲ್ಲಿ ನಡೆದ 19 ಹಾಗೂ 20ನೆಯ ವಿಶ್ವಕಪ್‌ನ್ನು 800 ಕೋಟಿಗೂ ಹೆಚ್ಚು ಜನರು ದೂರದರ್ಶನದ ಮೂಲಕ ವೀಕ್ಷಿಸಿ¨ªಾರೆ ಎನ್ನುವಾಗ ಈ ಕ್ರೀಡೆಯ ಮಾಂತ್ರಿಕ ಶಕ್ತಿ ಎಷ್ಟಿದೆ- ಎನ್ನುವುದನ್ನು ಊಹಿಸಬಹುದು.

    ಒಟ್ಟಿನಲ್ಲಿ ಜೂನ್‌ 14 ರಿಂದ ಆರಂಭಗೊಂಡಿರುವ ವಿಶ್ವಕಪ್‌ ಫ‌ುಟ್ಬಾಲ್‌ ಪಂದ್ಯಾವಳಿಯನ್ನುರಷ್ಯಾ ಹಾಗೂ ವಿಶ್ವದಾದ್ಯಂತ ಫ‌ುಟ್ಬಾಲ್‌ಪ್ರಿಯರು ಕಾತರದಿಂದ  ವೀಕ್ಷಿಸುತ್ತಿದ್ದಾರೆ. ಫ‌ುಟ್ಬಾಲ್‌ ನೆಪದಲ್ಲಿ ವಿಶ್ವವನ್ನು ಒಂದೇ ಛಾವಣಿಯಡಿಯಲ್ಲಿ ತರುವ ಪ್ರಯತ್ನ ವಿಶ್ವಕಪ್‌ ಟೂರ್ನಿಯಲ್ಲಿ ನಡೆದಿದೆ.

ಎಸ್‌. ಜಗದೀಶ್ಚಂದ್ರ ಅಂಚನ್‌

ಟಾಪ್ ನ್ಯೂಸ್

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

Shimoga; Deport Zameer Ahmed: ​​MLA Channabasappa

Shimoga; ಜಮೀರ್‌ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು

Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

11

Kannada Rajyotsava: ನಿಂತ ನೆಲವೇ ಕರ್ನಾಟಕ!

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

ಎಲ್ಲಿಂದಲೋ ಬಂದು ಇಲ್ಲಿನವರೇ ಆದರು!: ಪುಸ್ತಕ ಸೇವೆಯ ಕನಸು, ಸಪ್ನದ ಮೂಲಕ ನನಸು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.