Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…


Team Udayavani, Mar 24, 2024, 1:24 PM IST

Bhuvaneshwari hegde: ಓದುಗರ ಅಭಿರುಚಿಯ ಮಟ್ಟ ಹೆಚ್ಚಿಸುವ  ಹೊಣೆ ಬರಹಗಾರರ ಮೇಲಿದೆ…

ಸದಭಿರುಚಿಯ ಹಾಸ್ಯ ಸಾಹಿತ್ಯ ಪರಂಪರೆಯ ಒಂದು ಗಟ್ಟಿಕೊಂಡಿ- ಭುವನೇಶ್ವರಿ ಹೆಗಡೆ. ಎಲ್ಲ ವಯೋಮಾನ­ದವರಿಗೂ ಇಷ್ಟವಾಗುವ ತಿಳಿಹಾಸ್ಯ ಅವರ ಬರಹದ ಹೆಚ್ಚುಗಾರಿಕೆ. ನಗೆಯ ಲೆಕ್ಕದಲ್ಲಿ ಅಸಭ್ಯತೆ ಮೆರೆವ ಬಗೆ ಹಾಸ್ಯವೇ ಅಲ್ಲ ಎಂಬುದು ಅವರ ಸ್ಪಷ್ಟ ಮಾತು. ದಕ್ಷಿಣ ಕನ್ನಡ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಅವರು, ತಾವು ಹಾಸ್ಯ ಲೇಖಕಿಯಾದ ಸಂದರ್ಭ, ಅದಕ್ಕೆ ಕಾರಣವಾದ ಪ್ರಸಂಗ ಮತ್ತು ಬರಹಗಾರರ ಜವಾಬ್ದಾರಿ ಕುರಿತು ಮಾತಾಡಿದ್ದಾರೆ…

ನಮ್ಮ ಹಾಸ್ಯ ಸಾಹಿತ್ಯ ಪರಂಪರೆಯಲ್ಲಿ ಹಲವಾರು ದಿಗ್ಗಜರಿದ್ದರು. ಗೊರೂರು, ರಾಶಿ, ಬೀಚಿ, ಪಾವೆಂ, ಪ್ರಭುಶಂಕರ ಹೀಗೆ… ಯಾರ ಹಾಸ್ಯ ಸಾಹಿತ್ಯ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದೆ ಎನ್ನಿಸುತ್ತದೆ?

ರಾಶಿ, ಬೀಚಿ, ನಾ.ಕಸ್ತೂರಿ, ಕೈಲಾಸಂ ಹೀಗೆ ಅನೇಕ ಹಿರಿಯ ಸಾಹಿತಿಗಳ ಬರಹಗಳನ್ನು ನಾನು ಇಷ್ಟಪಟ್ಟು ಓದಿದ್ದೇನೆ. ಗೊರೂರರ ಗ್ರಾಮೀಣ ಪರಿಸರಕ್ಕೂ, ನನ್ನ ಗ್ರಾಮೀಣ ಪರಿಸರಕ್ಕೂ ಹೋಲಿಕೆ ಕಂಡು ಬಂದು ಅವರನ್ನು ಮೆಚ್ಚಿಕೊಂಡಿದ್ದೂ ಇದೆ. ಆದರೆ ಲಾಂಗೂಲಾಚಾರ್ಯ ಎಂಬ ಹೆಸರಿನಲ್ಲಿ ಹರಟೆಗಳನ್ನು ಬರೆಯುತ್ತಿದ್ದ ಪಾ.ವೆಂ. ಆಚಾರ್ಯರ ಶೈಲಿ, ಹಾಸ್ಯದ ನಿರ್ವಹಣೆ ನನ್ನ ಮೇಲೆ ಅಪಾರವಾದ ಪ್ರಭಾವವನ್ನು ಬೀರಿದೆ.

ಕಾವ್ಯ, ನಾಟಕ, ಕಾದಂಬರಿಗಳಿಗೆ ಹೋಲಿಸಿದರೆ ಹಾಸ್ಯ ಸಾಹಿತ್ಯವನ್ನು ಎರಡನೆ ದರ್ಜೆಯ ಸಾಹಿತ್ಯವೆಂದು ಪರಿಗಣಿಸಿದ ವಿಮರ್ಶಕರ ಕಾರಣದಿಂದ ಹಾಸ್ಯ ಸಾಹಿತ್ಯ ಸೊರಗಿತೆ?

ಖಂಡಿತ. ಸಾಹಿತ್ಯದ ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಹಾಸ್ಯ ಸಾಹಿತ್ಯವನ್ನು ಲಘುವಾಗಿ ಪರಿಗಣಿಸಿ ಗಂಭೀರವಾಗಿ ಉಪೇಕ್ಷಿಸಲಾಗಿದೆ. ಯಾವುದೇ ಪ್ರಕಾರದ ಸಾಹಿತ್ಯವನ್ನು ವಿಮರ್ಶೆಯ ನಿಕಷಕ್ಕೆ ಒಳಪಡಿಸಿದಾಗ ಅದು ಇನ್ನಷ್ಟು ಗಟ್ಟಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ. ತನ್ನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಹಿತಿಗೆ ವಿಮರ್ಶೆಯ ಬೆಂಬಲ ಬೇಕಾಗುತ್ತದೆ. ಅದು ದೊರಕದಿದ್ದುದು ಹಾಸ್ಯ ಸಾಹಿತ್ಯ ಕ್ಷೇತ್ರದ ದೌರ್ಭಾಗ್ಯವೇ ಸರಿ.

ನೀವು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ. ನೆಲೆ ಕಂಡುಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ.  ಮೂಲಕ ಕಾಡು ಮತ್ತು ಕಡಲು-ಎರಡನ್ನೂ ಕಂಡವರು ನೀವು. ನಿಮ್ಮ ಅಭಿವ್ಯಕ್ತಿಯಲ್ಲಿ ಇದನ್ನು ಹೇಗೆ ಪ್ರತಿಬಿಂಬಿಸುವಿರಿ?

ಕಾಡು ನನ್ನ ತವರು. ಪ್ರಕೃತಿ ಸಹಜವಾಗಿ ಅದರ ಅಗಾಧತೆ, ಕೌತುಕ, ವಿಸ್ಮಯ, ಪಾಠಗಳೆಲ್ಲ ನನ್ನ ವ್ಯಕ್ತಿತ್ವದೊಳಗೆ ಸ್ಥಾನ ಪಡೆದಿವೆ. ಮೊದಲಿನ ನಾಲ್ಕು ಕೃತಿಗಳಲ್ಲಿ ಕಾಡಿನ ಅನುಭವ ದಟ್ಟವಾಗಿದೆ. ಮುಂದೆ ಮಂಗಳೂರಿನ ವಾಸ ಕಡಿಲನ್ನ ಪರಿಚಯ ಮಾಡಿಸಿತು. ನಾನು ಕಡಲಾಗುವ ಭಾವವನ್ನು, ಕಡಲು ನನ್ನದಾಗುವ ಪರಿಯನ್ನು ಆಶ್ಚರ್ಯದಿಂದ ಅನುಭವಿಸಿದ್ದೇನೆ. ಕಾಡಿನ ಇಂಚರ, ಕಡಲಿನ ಮೊರೆತ; ಕಾಡಿನ ಮೌನ, ಕಡಲಿನ ಧ್ಯಾನಸ್ಥ ಗಂಭೀರತೆ -ಇವೆಲ್ಲ ಜೀವನ ಧರ್ಮವಾಗಿ ನನ್ನೊಳಗೆ ಇಳಿದಿವೆ. ಮಂಗಳೂರಿನ ಜನಪ್ರೀತಿಯಲ್ಲಿ ನಾನಿದನ್ನು ಉಂಡಿದ್ದೇನೆ. ಒಳಗೊಂಡ, ಒಳಗೊಳ್ಳುವ ತೃಪ್ತಿ ಇದೆ.

ಇವತ್ತು ಹಾಸ್ಯವೆಂದರೆ ಅಶ್ಲೀಲ ಪದಗಳ ಬಳಕೆ ಮತ್ತು ಅವಹೇಳನ ಎಂಬಂತಾಗಿದೆ. ನಿಜವಾದ ಹಾಸ್ಯ ಸಾಹಿತ್ಯಕ್ಕೆ ಇಂಥ ಬೆಳವಣಿಗೆ ಮಾರಕ. ಇದನ್ನು ನೀಗಿಸಲು ಹಾಸ್ಯ ಸಾಹಿತಿಗಳ ಜವಾಬುದಾರಿ ಯಾವ ರೀತಿಯದು?

ನಿಜ, ಅಶ್ಲೀಲ ಸಂಭಾಷಣೆ ತುರುಕುತ್ತ, “ಪ್ರೇಕ್ಷಕರು ಖುಷಿ ಪಡುತ್ತಾರೆ, ಅದಕ್ಕೆ ಇಂಥ ಸಂಭಾಷಣೆ ರಚಿಸುತ್ತೇವೆ’ ಎಂದು ಪ್ರತಿಪಾದಿಸುವ ಸಿನಿಮಾ ಮಂದಿಯಂತೆ ಹಾಸ್ಯ ಲೇಖಕರು ಆಗಬಾರದು. ಟಿ.ವಿ.ಗಳಲ್ಲಿ ಬರುವ ಕೆಲವು ರಿಯಾಲಿಟಿ ಶೋಗಳಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳೇ ವಿಜೃಂಭಿಸುತ್ತಿವೆ.. ತೀರ್ಪುಗಾರರು ಅದನ್ನು ವಿರೋಧಿಸದೇ ನಗುತ್ತಾ ಚಪ್ಪಾಳೆ ತಟ್ಟುವುದನ್ನು ನೋಡಿದಾಗ, ನಮ್ಮ ಜನರ ಸೂಕ್ಷ್ಮತೆ ಎಲ್ಲಿಗೆ ಹೋಯಿತು ಎಂದು ಬೇಸರವಾಗುತ್ತದೆ. “ಜನ ಕೇಳುತ್ತಾರೆ, ಹಾಗಾಗಿ ನಾವು ಕೊಡುತ್ತೇವೆ’ ಎನ್ನದೆ, ಒಳ್ಳೆಯ ಸಾಹಿತ್ಯ ಕೊಟ್ಟು ಜನರ ಅಭಿರುಚಿಯ ಮಟ್ಟವನ್ನೇ ಮೇಲಕ್ಕೆ ಏರಿಸುತ್ತೇವೆ ಎಂಬ ಸಾಮಾಜಿಕ ಕಾಳಜಿ ಇರುವ ಪ್ರವೃತ್ತಿ ಹಾಸ್ಯ ಲೇಖಕರ ಆದ್ಯತೆ ಆಗಬೇಕು. ಅಶ್ಲೀಲತೆ, ವೈಯಕ್ತಿಕವಾಗಿ ನೋವುಂಟು ಮಾಡುವ ಅಣುಕುಗಳು, ಕಟಕಿ ಇತ್ಯಾದಿಗಳಿಲ್ಲದೆ ಆರೋಗ್ಯಕರ ಹಾಸ್ಯವನ್ನು ಹೇಗೆ ರಚಿಸಬಹುದು ಎಂಬುದನ್ನು ನಮ್ಮ ಹಿರಿಯ ಲೇಖಕರು-ಕಲಾವಿದರು ತಮ್ಮ ಕೃತಿ ಮತ್ತು ಕಲೆಗಳ ಮೂಲಕ ತೋರಿದ್ದಾರೆ. ಆ ಮಾರ್ಗದಲ್ಲೇ ನಮ್ಮ ಲೇಖಕರು- ಕಲಾವಿದರು ಹೆಜ್ಜೆ ಇಡಬೇಕು.

ದಕ್ಷಿಣ ಕನ್ನಡ ಜಿಲ್ಲೆಯ 26ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೀಗ ದೊರೆತಿದೆ. ಸಂದರ್ಭದಲ್ಲಿ ನಿಮ್ಮ ಮಾತುಗಳೇನು?

ಇದು ಇಡೀ ಹಾಸ್ಯ ಸಾಹಿತ್ಯಕ್ಕೇ ಸಂದ ಗೌರವ ಎಂದು ಭಾವಿಸುತ್ತೇನೆ. ವೈಯಕ್ತಿಕವಾಗಿ ಎನ್ನುವುದಕ್ಕಿಂತ ಸಾಹಿತ್ಯಕ­ವಾಗಿ ನನಗೆ ಹೆಚ್ಚು ತೃಪ್ತಿಯನ್ನೂ, ಸಮಾಧಾನವನ್ನೂ ಕೊಟ್ಟ ಸಂಗತಿ ಇದು. ಕರಾವಳಿಯ ಜನರ ಪ್ರೀತಿ ಹಾಗೂ ಕಲೆಯ ಬಗ್ಗೆ ಅವರಿಗಿ­ ರುವ ಬದ್ಧತೆ, ಗುಣ ಗ್ರಾಹಿತ್ವ ದೊಡ್ಡದು. ಕರಾವಳಿಯ ಮಹಾ­ ಜನತೆಗೆ ನನ್ನ ಕೃತಜ್ಞತೆ ಈ ಮೂಲಕ.

ನಿಮ್ಮ ಮೊದಲ ಹಾಸ್ಯ ಪ್ರಸಂಗದ ಬಗ್ಗೆ ಹೇಳಿ… :

ನನ್ನ ಮೊದಲ ಹಾಸ್ಯ ಪ್ರಸಂಗದ ಬಗ್ಗೆ ಹೇಳಬೇಕೆಂದರೆ- ನಿಮಗೊಂದು ವೈಯಕ್ತಿಕ ವಿಷಯ ಹೇಳಬೇಕಿದೆ. ಏನೆಂದರೆ, ಗಂಡಿನ ಕಡೆಯವರು ಒಬ್ಬರು ನನ್ನನ್ನು ನೋಡಲು ಬಂದಿದ್ದರು. ನನಗಾಗ ಉದ್ದ ಜಡೆ ಇತ್ತು. ಗಂಡಿನ ಕಡೆಯ ಒಬ್ಬ ಮಹಿಳೆಗೆ ನನ್ನ ಜಡೆಯನ್ನು ಪರೀಕ್ಷಿಸಬೇಕೆಂಬ ಆಸೆ! ಆಕೆ ಹಾಗೇ ಸುಮ್ಮನೆ ನಾನು ಕೂತಿದ್ದ ಜಾಗಕ್ಕೆ ಬಂದು, ನನ್ನ ಜಡೆ ಎಳೆದು ಜಗ್ಗಿ ನೋಡಿದಳು. ನನಗೆ ಆಮೇಲೆ ಗೊತ್ತಾಯಿತು; ನಾನು ಚೌರಿ ಹಾಕಿ ಜಡೆ ಉದ್ಧ ಮಾಡಿಕೊಂಡಿ­ದ್ದೇನೆ ಎಂದು ಅವಳು ಭಾವಿಸಿದ್ದಳು ಅಂತ. ಇದೇ ಕಾರಣಕ್ಕೆ ನನ್ನ ಮನಸ್ಸಿನೊಳಗೆ ಆ ಗಂಡು ತಿರಸ್ಕೃತನೂ ಆದ ಬಿಡಿ. (ನಗು)

ಭುವನೇಶ್ವರಿ ಹೆಗಡೆ, ಪ್ರಸಿದ್ಧ ಹಾಸ್ಯ ಲೇಖಕಿ

ಸಂದರ್ಶನ:

ಸಂಧ್ಯಾ ಹೆಗಡೆ ದೊಡ್ಡಹೊಂಡ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

256

ಶಾಲ್ಮಲಾ ನಮ್ಮ ಶಾಲ್ಮಲಾ!

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

Life Lesson: ಬುದ್ಧ ಹೇಳಿದ ಜೀವನ ಪಾಠ ಬಿಟ್ಟುಕೊಡುವ ಕಲೆ

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

‌Second hand book stores: ಸೆಕೆಂಡ್‌ ಹ್ಯಾಂಡ್‌ಗೆ ಶೇಕ್‌ ಹ್ಯಾಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.