ಯಹೂದಿ ಕತೆಗಳು
Team Udayavani, Oct 29, 2017, 6:25 AM IST
ಮಾರುವ ಕಲೆ
ಸೇನೆ ಸೇರಿದ ಯುವಕರಿಗೆ ವಿಮೆ ಮಾಡಿಸುವ ಜವಾಬ್ದಾರಿಯನ್ನು ಕೊಹೆನ್‌ಗೆ ಕೊಡಲಾಗಿತ್ತು. ಕೊಹೆನ್‌ನ ದಕ್ಷತೆ ಹೇಗಿತ್ತೆಂದರೆ ಆತ ಯಾರ ಜೊತೆ ಮಾತಿಗಿಳಿದರೂ ಅವರು ವಿಮೆ ಮಾಡಿಸುವ ವಿಚಾರದಲ್ಲಿ ಹಿಂದೇಟು ಹಾಕುವ ಸಾಧ್ಯತೆಯೇ ಇರಲಿಲ್ಲ. ತಾನು ಯಾರ ಜೊತೆ ಮಾತಿಗೆ ಕೂತರೂ ಅವರಿಂದ ವಿಮೆ ಮಾಡಿಸುವ ಚಾಕಚಕ್ಯತೆ ಕೊಹೆನ್‌ಗಿತ್ತು. ಆತ ಜನರನ್ನು ಹೇಗೆ ಮರುಳು ಮಾಡುತ್ತಾನೆ ಎಂಬುದನ್ನು ನೋಡಲು ಕ್ಯಾಪ್ಟನ್ ಸ್ಮಿತ್ ಒಮ್ಮೆ ಅವನ ಮಾತು ಕೇಳಲು ಸೇರಿದ್ದ ಯೋಧರ ಗುಂಪು ಸೇರಿಕೊಂಡರು.
ಕೊಹೆನ್ ಮಾತಿಗೆ ತೊಡಗಿದ, “”ಯುವಕರೇ, ನೀವೆಲ್ಲ ಹೊಸದಾಗಿ ಸೇನೆ ಸೇರಿದ್ದೀರಿ. ಸೇನೆ ಎಂದರೆ ಅನಿಶ್ಚಿತ ಬದುಕು. ಯಾವ ಕ್ಷಣದಲ್ಲಿ ಏನಾಗುತ್ತದೋ ಹೇಳುವಂತಿಲ್ಲ. ಆದ್ದರಿಂದ ನಿಮಗೆಲ್ಲ ವಿಮೆ ಇರಬೇಕಾದ್ದು ಅತ್ಯಗತ್ಯ. ಒಂದು ವೇಳೆ ನಿಮಗೆ ಜೀವಮೆ ಇದೆ ಅನ್ನಿ. ಆಗ ನೀವು ಯುದ್ಧಭೂಮಿಯಲ್ಲಿ ಹೋರಾಡುತ್ತ ಮಡಿದರೆ, ಸರಕಾರ ನಿಮ್ಮ ಕುಟುಂಬಕ್ಕೆ 200,000 ಡಾಲರ್ ಪರಿಹಾರ ಕೊಡುತ್ತದೆ. ಒಂದು ವೇಳೆ ನಿಮಗೆ ಜೀವವಿಮೆ ಇಲ್ಲ ಅನ್ನಿ. ಆಗ ನೀವು ಯುದ್ಧಭೂಮಿಯಲ್ಲಿ ಹೋರಾಡುತ್ತ ಮಡಿದರೆ, ಸರಕಾರ ನಿಮ್ಮ ಕುಟುಂಬಕ್ಕೆ ಕೊಡಬೇಕಾದ ಪರಿಹಾರ 6,000 ಡಾಲರ್ ಮಾತ್ರ. ಆದ್ದರಿಂದ ಯುವಕರೇ, ಯೋಚಿಸಿ, ಒಂದು ವೇಳೆ ಯುದ್ಧ ಘೋಷಣೆ ಆದರೆ ಸರಕಾರದವರು ಯಾರನ್ನು ಮೊದಲು ಯುದ್ಧಭೂಮಿಗೆ ಕಳಿಸುತ್ತಾರೆ?”
ವಿನಿಮಯ
ಇಸ್ರೇಲ್ ಮತ್ತು ಈಜಿಪ್ತ್ ಮಧ್ಯೆ ಯುದ್ಧ ನಡೆಯುತ್ತಿದ್ದ ದಿನಗಳು. ದಿನಗಟ್ಟಲೆ ನಡೆದರೂ ಮುಗಿಯದ ಈ ಯುದ್ಧದಿಂದ ಒಬ್ಬ ಯುವಕ ಬೇಸತ್ತುಹೋಗಿದ್ದ. ಅವನು ತನ್ನ ಕಮಾಂಡರ್ ಬಳಿ ಬಂದು, “”ಸಾರ್, ನನಗೆ ಎರಡು ವಾರ ರಜೆ ಬೇಕು” ಎಂಬ ಬೇಡಿಕೆ ಇಟ್ಟ.
“”ಏನು ಎರಡು ವಾರವೇ? ಸರಿ, ಆ ಬೆಟ್ಟಗಳು ಕಾಣಿಸ್ತಿವೆಯಲ್ಲ ಅಲ್ಲಿ, ಅದರಾಚೆಗೆ ಈಜಿಪ್ತ್ನ ಸೇನೆ ಇದೆ. ಆ ಕಡೆಯಿಂದ ಒಂದು ತಾಸಿನ ಒಳಗಾಗಿ ವೈರಿಗಳ ಒಂದು ಯುದ್ಧ ಟ್ಯಾಂಕ್ ಅನ್ನು ತಂದುಕೊಡು. ನಿನಗೆ ಆ ಕ್ಷಣದÇÉೇ ಎರಡು ವಾರಗಳ ರಜೆ ಮಂಜೂರು ಮಾಡ್ತೇನೆ” ಎಂದ ಕಮಾಂಡರ್. ಯುವಕ ಮರಳಿಹೋದ.
ಆದರೆ, ಸರಿಯಾಗಿ ಒಂದು ತಾಸಾಗುವಷ್ಟರಲ್ಲಿ ಅದೇ ಯುವಕ ಒಂದು ಈಜಿಪ್ತ್ ಯುದ್ಧ ಟ್ಯಾಂಕ್ ಜೊತೆಗೆ ಕಮಾಂಡರ್ ಎದುರಲ್ಲಿ ಹಾಜರಾದ. ಕಮಾಂಡರ್‌ಗೆ ತನ್ನ ಕಣ್ಣುಗಳನ್ನೇ ನಂಬಲು ಆಗಲಿಲ್ಲ. “”ಏನು! ನೀನು ನಿಜಕ್ಕೂ ಒಂದು ಈಜಿಪ್ತ್ ಟ್ಯಾಂಕ್ ಅನ್ನು ವಶಪಡಿಸಿಕೊಂಡು ಬಂದಿದ್ದೀಯಾ? ಹೇಗೆ ಸಾಧ್ಯವಾಯಿತು ಇದು!” ಎಂದು ಕೇಳಿದನಾತ.
“”ಸಾರ್, ಅಷ್ಟೇನೂ ದೊಡ್ಡ ಸಂಗತಿ ಅಲ್ಲ. ನಾನು ನನ್ನ ಟ್ಯಾಂಕ್‌ನಲ್ಲಿ ಕೂತು ಬೆಟ್ಟದ ಆಚೆ ಬದಿಗೆ ಹೋದೆ. ಅಲ್ಲಿ ಈಜಿಪ್ತ್ನ ಸೈನಿಕರಲ್ಲಿ ಯಾರಿಗೆ ಎರಡು ವಾರ ರಜೆ ಬೇಕಾಗಿದೆ” ಎಂದು ಕೇಳಿದೆ. ಒಬ್ಬ ಸೈನಿಕನಿಗೆ ಬೇಕಾಗಿತ್ತು. ನಾವಿಬ್ಬರೂ ನಮ್ಮ ಟ್ಯಾಂಕ್‌ಗಳನ್ನು ವಿನಿಮಯ ಮಾಡಿಕೊಂಡೆವು ಎಂದ ಯುವಕ.
ನಿಜಸ್ಥಿತಿ
ರಬೈ ಮೊರಿಸ್ ಒಂದು ಸಿನೆಗಾಗ್‌ನಿಂದ ನಿವೃತ್ತರಾಗುವ ಸಂದರ್ಭ ಬಂತು. ಅವರ ನಿವೃತ್ತಿಯ ದಿನ ಒಂದು ವಿಶೇಷ ಸಮಾರಂಭ ಏರ್ಪಾಟಾಯಿತು. ಆ ಊರಿಗೆಲ್ಲ ಹಿರಿಯನಾದ ಯೆಂಕೆಲ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದ. ಮೊರಿಸ್ ಅವರು ಬಹಳ ಒಳ್ಳೆಯ ರಬೈ ಆಗಿದ್ದರು. ಅವರು ನಮ್ಮನ್ನು ಬಿಟ್ಟುಹೋಗುವುದು ಭರಿಸಲಾರದ ನಷ್ಟ ಎಂದೇ ಎಲ್ಲರೂ ಅತ್ತೂ ಕರೆದು ಮಾತಾಡುತ್ತಿದ್ದರು. ಎಲ್ಲರ ಭಾಷಣಗಳಾದ ಮೇಲೆ ಮಾತಾಡಲು ನಿಂತ ರಬೈ ಮೊರಿಸ್, “”ನೀವೇನೂ ಅಷ್ಟು ಚಿಂತೆ ಮಾಡಬೇಕಿಲ್ಲ. ನಾನು ನಿವೃತ್ತನಾದರೆ ಜಗತ್ತು ಕೊನೆಯಾಯಿತು ಅಂತ ಏನೂ ಅರ್ಥವಲ್ಲ. ನನ್ನ ನಿವೃತ್ತಿಯ ನಂತರ ಬರುವವರು ಎಲ್ಲ ರೀತಿಯಲ್ಲೂ ನನಗಿಂತ ಒಳ್ಳೆಯವರೂ ಸಮರ್ಥರೂ ಆಗಿರುತ್ತಾರೆ” ಎಂದರು ಭಾವುಕರಾಗಿ.
ಅಷ್ಟರಲ್ಲಿ ಯೆಂಕೆಲ್ ಎದ್ದುನಿಂತ. ಊರಿಗೆ ಹಿರಿಯನೂ ಹಲವು ರಬೈಗಳನ್ನು ನೋಡಿರುವವನೂ ಆದ ಆತನ ಮಾತುಗಳನ್ನು ಕೇಳಲು ಎಲ್ಲರಂತೆ ಮೊರಿಸ್ ಕೂಡ ಮುಂಬಾಗಿದರು. ಯೆಂಕೆಲ್ ಹೇಳಿದ, “”ನಿಮ್ಮ ನಂತರ ಬರೋರು ನಿಮಗಿಂತ ಸಮರ್ಥರಿರುತ್ತಾರೆ ಅಂತ ನೀವೇನೋ ಹೇಳ್ತೀರಿ. ಆದ್ರೆ ನಂಬೋದು ಹೇಗೆ ಗುರುಗಳೇ? ನಿಮಗಿಂತ ಹಿಂದೆ ಇಲ್ಲಿ ರಬೈ ಆಗಿದ್ದವರು ಕೂಡ ನಿವೃತ್ತಿ ಸಮಯದಲ್ಲಿ ಹಾಗೇ ಹೇಳಿದ್ರು”
ಅನಾಮಿಕ ಯೋಧ
ಇಸ್ರೇಲಿನ ಒಂದು ಊರಲ್ಲಿ ಅನಾಮಧೇಯ ಯೋಧರ ಸ್ಮಾರಕದ ಉದ್ಘಾಟನೆ ಸಮಾರಂಭವಿತ್ತು. ಊರಿನ ಮೇಯರ್ ಬಂದು ಸ್ಮಾರಕದ ಮೇಲೆ ಹಾಕಿದ್ದ ಪರದೆ ಸರಿಸಿ ಅದನ್ನು ಲೋಕಾರ್ಪಣೆ ಮಾಡಿದರು. ಸ್ಮಾರಕದಲ್ಲಿ ಓರ್ವ ವ್ಯಕ್ತಿಯ ಪ್ರತಿಮೆ ಇತ್ತು. ಅದರ ಕೆಳಗೆ, “ಮೋಷೆ ಸಿಲ್ಬರ್‌ಸ್ಟೀನ್. ಅನಾಮಿಕ ಯೋಧ’ ಎಂದು ಬರೆಯಲಾಗಿತ್ತು.
ಸಭೆಯಲ್ಲಿ ಕೂತಿದ್ದ ಮೆಂಡೆಲ್ ತನ್ನ ಪಕ್ಕದ ರಾಫೆಲ್‌ನಲ್ಲಿ, “”ಅದು ಹೇಗ್ರೀ ಆಗುತ್ತೆ? ಮೋಷೆ ಅಂತ ಹೆಸರು ಬರೆದಿ¨ªಾರೆ. ಅದಾಗಿ ಅನಾಮಿಕ ಯೋಧ ಅಂತ ಹಾಕಿ¨ªಾರೆ. ಅನಾಮಿಕರಿಗೆ ಮಾಡಿದ ಸ್ಮಾರಕ ಅಂದ ಮೇಲೆ ಯಾವ ಯೋಧರ ಹೆಸರು ಗೊತ್ತಿಲ್ಲವೋ ಅವರಿಗೆ ಅಂತ ಅರ್ಥ ಅಲ್ವ?” ಎಂದು ವಿಚಾರಿಸಿದ.
“”ರಾಫೆಲ್, ಹೌದು ಮೆಂಡೆಲ್ ಅವರೇ, ನೀವು ಹೇಳುವುದು ಸರಿ. ಮೋಷೆ ಸಿಲ್ಬರ್‌ಸ್ಟೀನ್ ಅವರು ಈ ಊರಿನ ಬಹಳ ಪ್ರಸಿದ್ಧ ವಕೀಲರು. ಪ್ರತಿಯೊಬ್ಬರಿಗೂ ಗೊತ್ತಿ¨ªೋರು. ಆದರೆ, ಸೈನಿಕನಾಗಿ ಅವರು ಯಾವಾಗ ಹೋರಾಡಿದರು ಅನ್ನೋದು ಯಾರಿಗೂ ಗೊತ್ತಿಲ್ಲ. ಅದಕ್ಕೇ ಅನಾಮಿಕ ಯೋಧ ಅಂತ ಹಾಕಿರೋದು” ಎಂದು ವಿವರಿಸಿದ.
ಪ್ರಾರ್ಥನೆ
ಬೆನ್ನಿಯ ನಾಯಿ ಸತ್ತಿತು. ಆತ ರಬೈ ಅವರ ಬಳಿ ಬಂದ. “”ಗುರುಗಳೇ, ನನ್ನ ನಾಯಿಯ ಸಮಾಧಿಯ ಬಳಿ ಬಂದು ನೀವು ಅದರ ಸದ್ಗತಿಗಾಗಿ ದೇವರನ್ನು ಪ್ರಾರ್ಥಿಸುತ್ತೀರಾ?” ಕೇಳಿದ.
“”ಬೆನ್ನಿ, ನಿನ್ನ ಬೇಡಿಕೆಯೇನೋ ಸರಿ, ಆದರೆ ಅದನ್ನು ನನ್ನ ಕೈಯಲ್ಲಿ ನೆರವೇರಿಸುವ ಹಾಗೆ ಇಲ್ಲಪ್ಪ! ಮನುಷ್ಯರಲ್ಲದೆ ಬೇರಾವ ಜೀವಿಯ ಸಮಾಧಿಯ ಹತ್ತಿರ ನಿಂತೂ ನಾವು ಸದ್ಗತಿಗೆ ಪ್ರಾರ್ಥಿಸುವ ಕ್ರಮ ಇಲ್ಲ. ಧರ್ಮಗ್ರಂಥದಲ್ಲಿ ಅಂಥ ಕೆಲಸ ನಿಷಿದ್ಧ ಅಂತ ಬರೆದಿದೆ ಎಂದರು ರಬೈ. ಬೆನ್ನಿ ಪರಿಪರಿಯಾಗಿ ಬೇಡಿಕೊಂಡರೂ ಅವರ ಮನಸ್ಸು ಕರಗಲಿಲ್ಲ. ಕೊನೆಗೆ ಆತ ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸು ಹೋಗಲೇಬೇಕಾಯಿತು. ಹಿಂತಿರುಗಿ ಹೋಗುತ್ತ ಆತ, “”ಏನು ಹೇಳಲಿ! ನನ್ನ ನಾಯಿಯ ಪರವಾಗಿ ದೇವರನ್ನು ಪ್ರಾರ್ಥಿಸಲು ನೀವು ಒಪ್ಪಿಕೊಂಡಿದ್ದರೆ ಸಾವಿರ ಡಾಲರ್ ದಕ್ಷಿಣೆ ಕೊಡೋಣ ಅಂತ ಅಂದೊRಂಡಿ¨ªೆ. ಆದರೆ ಈಗ…?” ಎಂದು ಜೋರಾಗಿ ಕೂಗಿ ಹೇಳಿದ.
ಕೂಡಲೇ ರಬೈ ಹೊರಟುಹೋಗುತ್ತಿದ್ದ ಆತನನ್ನು ಕೂಗಿ ಕರೆದರು. “”ಬೆನ್ನೀ, ಬೆನ್ನೀ, ಬಾ ಇಲ್ಲಿ…” ಎಂದು ಜೋರಾಗಿ ಕೈ ಬೀಸಿದರು. ಬೆನ್ನಿ ವಾಪಸ್ ಬಂದ. “”ಈ ಕೆಲಸ ಆಗೋದೇ ಇಲ್ಲ ಅಂತ ಖಡಾಖಂಡಿತವಾಗಿ ಹೇಳ್ತಿದ್ರಿ ಇಷ್ಟು ಹೊತ್ತು!” ಎಂದ ಕೋಪದಿಂದ.
“”ಹೌದಪ್ಪ! ಹೇಳಿ¨ªೆ ಹೌದು! ಆದ್ರೆ ನಿನ್ನ ನಾಯಿ ಧರ್ಮನಿಷ್ಠವಾಗಿತ್ತು ಅನ್ನೋದನ್ನ ನೀನು ಮೊದಲೇ ಹೇಳ್ಬೇಕೋ ಬೇಡ್ವೋ! ಬಾ, ಬಾ, ನಿನ್ನ ನಾಯಿಗಾಗಿ ಪ್ರಾರ್ಥಿಸೋಣ” ಎಂದರು ರಬೈ ಸದ್ಗತಿಯ ಪ್ರಾರ್ಥನೆಗೆ ತಯಾರಾಗುತ್ತ.
– ರೋಹಿತ್ ಚಕ್ರತೀರ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.