ನೆನಪೇ ನೀನಿರುವುದು ಹೀಗೆ…
Team Udayavani, Nov 5, 2017, 6:00 AM IST
ನೆನಪೇ ನೀನಿರುವುದು ಹೀಗೆ…
ಧಡಾರನೆ ಎಚ್ಚರವಾಯ್ತು ! ಎದ್ದು ಕೂತವನು ಪಿಳಿ ಪಿಳಿ ಕಣ್‌ಬಿಡ್ತಾ ಗಡಿಯಾರದತ್ತ ನೋಡಿದೆ. ಮುಂಜಾನೆ 4.30ರ ಹತ್ತಿರ. ಕಿಟಕಿ ಆಚೆ ದೃಷ್ಟಿಸಿದೆ. ಮಳೆ ಹನಿಯುತ್ತಲೇ ಇತ್ತು. ನೆನಪಾದದ್ದು ಮಾಕ್ವೆìಸ್‌ನ ಹಂಡ್ರಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿಯಲ್ಲಿ ಬರುವ ಮಳೆಯ ಚಿತ್ರ. ಅಂದ ಹಾಗೆ ಅದೆಷ್ಟೋ ದಿನ ಸತತವಾಗಿ ಸುರಿದು ಹೋಯ್ತಲ್ಲಾ ಹಾಗೆ. ಹಾಗೆ ಸುರೀತಾ ಇದ್ದ ಮಳೆ ನೋಡ್ತಿ¨ªಾಗ ನೆನಪಾದದ್ದು ಅನಂತಮೂರ್ತಿಯವರ ಕವಿತೆಯ ಸಾಲುಗಳು:
ಮತ್ತೆ ಮಳೆ ಹೊಯ್ಯುತಿದೆ-ಎಲ್ಲ ನೆನಪಾಗುವುದೆ (ತಿದೆ)
ಸುಖ ದುಃಖ, ಬಯಕೆ ಭಯ-ಒಂದೆ? ಎರಡೆ?
“ಎಲ್ಲ ನೆನಪಾಗುತಿದೆ’. ನೆನಪಾಗುತ್ತಿರುವ ನನ್ನ ಬದುಕಿನ ವೃತ್ತಾಂತಗಳನ್ನು ಪರಿಭಾವಿಸುತ್ತಾ ಇದ್ದೇನೆ.
ಈ ವರ್ಷದ ಮಳೆ ಮೂರು ವರ್ಷಗಳಿಂದ ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತರಿಗಂತೂ ಮರುಜೀವ ಬಂದಂತಾಗಿತ್ತು. ಆದರೆ, ಜಾಸ್ತಿಯಾಯ್ತು ಅಂತಲೂ ಗೊಣಗುತ್ತಿದ್ದರು. ಸುಮಾರೇನು ಸತತ ಹತ್ತು ದಿನಗಳಿಂದ ಸುರಿದ ಮಳೆಗೆ ತುಂಗಾನದಿ ಪ್ರವಾಹ ಉಕ್ಕಿ ಹರಿಯುತ್ತಿತ್ತು. ಊರು ತುಂಬಾ ನೀರೇ ನೀರು.
ಕುಂಬಾರಗುಂಡಿವಾಸಿಗಳನ್ನೆಲ್ಲಾ ಸುರಕ್ಷಿತ ಸ್ಥಳ, ಶಾಲಾ-ಕಾಲೇಜು ಕಟ್ಟಡಗಳಿಗೆ ಸ್ಥಳಾಂತರಿಸಲಾಗಿತ್ತು. ಬಸವೇಶ್ವರ ನಗರದ ರಸ್ತೆಗಳಲ್ಲಿ ಮಂಡಿ ಎತ್ತರ ನೀರು ಹರಿತಿತ್ತು. ವಿವೇಕಾನಂದ ಶಾಲೆ ಕಟ್ಟಡ ಅರ್ಧ ಮುಳುಗಿಹೋಗಿದೆ. ತುಂಗಾ ನಾಲೆ ತುಂಬಿ ಹರಿದು ಪಾಶ್ ಏರಿಯ ಗಾಂಧಿನಗರ ಜಲನಗರವಾಗಿತ್ತು. ಎಲ್ಲಿ ನೋಡಿದರು ಕೇರೆ ಹಾವುಗಳು ಹರಿದಾಡುತ್ತಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ನಿತ್ಯ ವಾಕಿಂಗ್ ಹೋಗಲೇಬೇಕಾದವರ ಪಾಡಂತೂ ದೇವರೇ ಕಾಪಾಡಬೇಕಾಗಿತ್ತು. ಮನೆಯಲ್ಲೇ ಸುತ್ತಿ ಸುತ್ತಿ, ಮಾಮೂಲಿ ನುಂಗುತ್ತಿದ್ದುದಕ್ಕಿಂತ ಒಂದೆರಡು ಮಾತ್ರೆ ಹೆಚ್ಚು ಹೆಚ್ಚು ನುಂಗಿ ನೀರು ಕುಡಿಯುತ್ತಿದ್ದಾರೆ. ಹಸಿವಾಗ್ತಿಲ್ಲಾ, ಚಪಲ ಬಿಟ್ಟಿಲ್ಲಾ. ಅದೂ ಮಲೆನಾಡಿನ ಭಾಗ ಒಂದು ಮಳೆಗಾಲದ ಚಪಲ. ತಿನ್ನೋದು, ರಾತ್ರಿ ತ್ರಿಫಲ ಮಾತ್ರೆ ನುಂಗೋದು. ತರಕಾರಿ ತರಲು ಹೊರಗೆ ಹೋಗಲೂ ಸಾಧ್ಯವಾಗ್ತಿಲ್ಲ. ಮಾಮೂಲಿ ರಸ್ತೆ ಮೇಲೆ ಮಾರೋರು ಬರ್ತಿಲ್ಲ. ಬಂದೋರಾದ್ರು ಹೇಳೊ ರೇಟು ಮೂರರಷ್ಟು. “ಸೊಪ್ಪು ಕೊಳೆತು ಹೋಗ್ತಿದೆ ಬುದ್ಧಿ’ ಅಂತ ರಾಗ ಬೇರೆ. “ಸೊಪ್ಪು ತಿಂದೇಯಿದ್ರೆ ವಿಸರ್ಜನೆ ಸಲೀಸಾಗಿ ಆಗುತ್ತಾ. ಹೀಗೆ ಇನ್ನೊಂದ್ನಾಲ್ಕು ದಿನ ಮಳೆ ಸುರಿದರೆ ನಮ್ಮೂರಿಗೆ ಮುಳುಗೂರು’ ಅಂತ ಹೊಸ ಹೆಸರು ಇಡಬೇಕಾಗ್ತದೇ ಅಂದು ಆಡಿ ಎರಡೋ ಮೂರೋ ರೂಪಾಯಿಗೆ ಒಂದು ಕಂತೆಯಂತೆ ಸೊಪ್ಪು ಕೊಟ್ಟು ಮುಂದೆ ಹೋಗ್ತಾರೆ.
ಕತ್ತೆತ್ತಿದೆ. ಇಪ್ಪತ್ತೆçದು ವರ್ಷಗಳ ಹಿಂದೆ ಕಟ್ಟಿಸಿದ ಆರ್‌ಸಿಸಿ ಮನೆ ರೂಫೆಲ್ಲಾ ಥಂಡಿ ಹಿಡಿದುಹೋಗಿದೆ. ಒಂದೆರಡು ಕಡೆ ತೊಟ್ಟಿಕ್ಕುವ ಹನಿಗಳು. ಕಿಟಿಕಿಯಿಂದ ತೂರಿಬರುತ್ತಿದ್ದ ರಸ್ತೆ ದೀಪದ ಬೆಳಕಿನಲ್ಲಿ ಮಿಣಿ ಮಿಣಿ ಮಿನುಗುತ್ತಿದ್ದವು. ಮೋಜು ನೋಡ್ತಾ ಹಾಗೆ ಕೂತಿ¨ªೆ. ಝಗ್ ಅಂತ ದೀಪ ಹತ್ತಿಕೊಂಡು¤. ಹೆಂಡ್ತಿ ಎದ್ದು ಬಂದವಳೇ ಸ್ವಿಚ್‌ಒತ್ತಿ, ನನ್ನಕಡೆ ನೋಡಿ, “”ಏನ್ರಿ ಹಾಗೆ ನೋಡ್ತಿದ್ದೀರಿ. ನೀರ ಹನೀನ. ಈಸಲ ಬಂತು ಬಿಡಿ ಒಂದಿಪ್ಪತ್ತು ಸಾವಿರ ಖರ್ಚಿಗೆ. ಮಳೆಗಾಲ ಕಳೆದ ಮೇಲೆ ಮತ್ತೂಂದು ಸಲ ಕಾಂಕ್ರೀಟೇ ಹಾಕಿಸಬೇಕಾಗುತ್ತೋ ಏನೋ” ಎಂದು, “”ಕಾಫಿನಾದ್ರು ಮಾಡಿ ತರ್ತಿàನಿ” ಅಂತ ಕಿಚನ್‌ಗೆ ಹೋದುÉ.
ಹಾಗೇ ಯೋಚಿಸುತ್ತಾ ಇ¨ªೆ: ಈ ಪಾಟಿ ಮಳೆ ಮೂವತ್ತೆçದು ವರ್ಷಗಳ ನನ್ನ ಶಿವಮೊಗ್ಗ ಜೀವನಾವಧಿಯಲ್ಲಿ ಕಂಡಿರಲಿಲ್ಲ. ಹಾಸನ ಜಿಲ್ಲೆ ಬಯಲು ತಾಲೂಕಿನ ಕುಗ್ರಾಮದಲ್ಲಿ ಹುಟ್ಟಿದವನು. ಕಳೆದ ಐವತ್ತರ ದಶಕದಲ್ಲಿ ಕೇಂದ್ರ ಸಮಾಜ ಕಲ್ಯಾಣ ಯೋಜನೆಯಲ್ಲಿ ಅಕೌಂಟ್ಸ್ ಕ್ಲರ್ಕ್ ಆಗಿ ಹಾಸನದಲ್ಲಿ ಒಂದ ಮೂರು ವರ್ಷ ಕೆಲಸ ಮಾಡಿ, ಅಲ್ಲಿಂದ ವರ್ಗಮಾಡಿದ್ದರು ಹೊನ್ನಾವರಕ್ಕೆ. ಆ ವರ್ಷದ ಮಳೆಯೂ ಭಾರೀನೇ. ಹಾಸನದಿಂದ ಹೊನ್ನಾವರಕ್ಕೆ ಇಪ್ಪತ್ತು ಗಂಟೆಗಳಿಗೂ ಹೆಚ್ಚು ಪ್ರಯಾಣ ಮಾಡಿ ಶಿವಮೊಗ್ಗ, ಸಾಗರ, ಸಿ¨ªಾಪುರ, ಸಿರಸಿ ಮೂಲಕ ತಲುಪಿ¨ªೆ. ಆಗಲೂ ಮಳೆ ಸುರೀತಾಲೇ ಇತ್ತು. ಹೊನ್ನಾವರ ಒಂದು ಹಳ್ಳಿ ಹಾಗೇ ಇತ್ತು. ವಿದ್ಯುತ್ಛಕ್ತಿ ದೀಪ ಕೂಡ ಇರಲಿಲ್ಲ.
ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದ್ದವನಿಗೆ, ಯಾವ ಕಡೆಯಿಂದಲೋ ಬರುತ್ತಿದ್ದ ನಮ್ಮ ಆಫೀಸ್ ಜೀಪು, ನಾನೇ ನಿಲ್ಲಿಸಿ ಅದರಲ್ಲೇ ಆಫೀಸೆY ಹೋಗಿ ಅಲ್ಲೇ ಇದ್ದ ಒಂದು ಖಾಲಿ ರೂಮ್‌ನಲ್ಲಿ ಠಿಕಾಣಿ ಹೂಡಿ¨ªೆ. ಅಲ್ಲಿಂದ ಆನೆಕಲ್‌ಗೆ, ನಂತರ ರಾಮದುರ್ಗಕ್ಕೆ ವರ್ಗಾಯಿಸಿದ್ದರು. ಸುಮಾರು ಒಂಬತ್ತು ವರ್ಷ ಹೀಗೆ ಕೆಲಸಮಾಡಿ, ಈ ಕೆಲಸ ಬೋರ್ ಹೊಡೆದು, ರಾಜೀನಾಮೆ ಕೊಟ್ಟು ಕರ್ನಾಟಕ ಯೂನಿವರ್ಸಿಟಿನಲ್ಲಿ ಕನ್ನಡ ಎಂ.ಎ ಮಾಡಿ, ಚಳ್ಳಕೆರೆ ಕಾಲೇಜಿನಲ್ಲಿ ಎರಡು ವರ್ಷ ಉಪನ್ಯಾಸಕನಾಗಿದ್ದು, ನಂತರ ಶಿವಮೊಗ್ಗ ಡಿ.ವಿ.ಎಸ್. ಕಾಲೇಜ್‌ನಲ್ಲಿ ಅಧ್ಯಾಪಕನಾಗಿದ್ದು, ನಿವೃತ್ತನಾಗಿ ಇಲ್ಲೇ ಸೆಟ್ಲಾಗಿರೋದು. ನಲವತ್ತು ವರ್ಷಗಳಿಂದ ತುಂಗಾನದಿ ನೀರು ಕುಡೀತಾ ಇರೋದು. ಈ ಹಿಂದೆ 1974ರಲ್ಲಿ ಬಂದ ಮಳೆಯೂ ಅದಕ್ಕೂ ಹಿಂದಿನ 1924ರ ಮಳೆಯನ್ನು ನೆನಪಿಸುತ್ತಿತ್ತು. ಬಿ. ಎಚ್. ರಸ್ತೆ ತುಂಗಾ ನದಿ ಹಳೇ ಬ್ರಿಡ್ಜ್ ಹತ್ರ ಹೋದ್ರೆ ಹಿರಿಯರು ಇವತ್ತೂ ತೋರಿಸುತ್ತಾರೆ : ಕಮಾನು ಕಂಬಗಳ ಮೇಲಿನ ನೀರಿನ ಗೆರೆಗಳನ್ನು (water mark). ಆ ಇಸವಿ ಮಳೆ ಬಂದಾಗಿನ ಪ್ರವಾಹದ ಗೆರೆ ಅದು, ಈ ಇಸವಿನಲ್ಲಿನ ಪ್ರವಾಹದ ಗೆರೆ ಇದು ಅಂತ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅಂಥ ಯಾವ ಪ್ರವಾಹದ ಗುರುತಿನ ಗೆರೆಗಳು ಇÇÉಾ ಬಿಡಿ. ತುಂಗಾನದಿಗೆ ಅಣೆಕಟ್ಟು ಕಟ್ಟಿದ ಮೇಲೆ ಗಾಜನೂರಿನಿಂದ ಮುಂದಕ್ಕೆ ಯಾವಾಗಲೂ ಬಡಕಲು ತುಂಗೆನೇ. ಆದರೆ ಈ ಸಲದ ಮಳೆ ಇನ್ನೇನು ಮುಗಿತಾ ಬಂದಿರುವ ಅಪ್ಪರ್ ತುಂಗಾ ಅಣೆಕಟ್ಟೆಯನ್ನೂ ಮೀರಿ ಹರಿದ ಪ್ರವಾಹದ್ದು. ಹೊಸ ಗುರುತು ಮೂಡೆ ಮೂಡುತ್ತೆ.
ಅಂದುಕೊಳ್ಳುವ ಹೊತ್ತಿಗೆ, “ತಗೊಳ್ಳಿ ಕಾಫಿ ಕುಡಿದು ಕೊಡೆ ಹಿಡಕೊಂಡಾದರೂ ಹೊರಗೆ ಹೋಗಿ ಒಂದು ಲೀಟರ್ ಹಾಲು, ಒಂದಿಷ್ಟು ತರಕಾರಿ ಏನಾದರೂ ತನ್ನಿ’ ಎಂದು ಆಜ್ಞಾಪಿಸಿದಳು ಹೆಂಡತಿ. ಕಾಫಿ ಗ್ಲಾಸ್ ಕೈಲಿ ಹಿಡಿದು ಮಂಚದ ಮೂಲೆಯಲ್ಲಿ ಕುಳಿತು ಕಾಫಿ ಗುಟುಕರಿಸುತ್ತ ರೋಸ್ ಬಣ್ಣದ ನೈಟಿ ತೊಟ್ಟಿದ್ದ ಹೆಂಡತಿಯನ್ನು ನೋಡ್ತಾ ಇವಳಿಗಿನ್ನು ಮೂವತ್ತು-ನಲವತ್ತು ಇರಬಹುದೇ ಅಂದುಕೊಂಡೆ. ಕಾಫಿ ಹೀರಿ ಮುಂಬಾಗಿಲಿಗೆ ಬಂದು ನೋಡಿದರೆ ಮೋಡದ ಮರೆಯಲ್ಲಿ ಸೂರ್ಯ ಒಂದೆರಡು ಕಿರಣ ಸೂಸಲು ಸೆಣಸಾಡುತ್ತಿದ್ದ. ಕರಿಮೋಡಗಳು ಮೇಲೇರಿ ಬರುತ್ತಿದ್ದವು. ಪೇಪರ್ ಹುಡುಗ ಗೇಟಿಗೆ ಸಿಕ್ಕಿಸಿದ ಪ್ಲಾಸ್ಟಿಕ್ ಬ್ಯಾಗ್‌ಗೆ ಪೇಪರ್ ತುರುಕಿ ಹೋದ. ತೇವವಾಗಿದ್ದ ಪೇಪರ್ ತಗೊಂಡು ಬಂದು ಹಾಲ್‌ನಲ್ಲಿ ಓದೋಕೆ ಕೂತೆ. ಮಲೆನಾಡಿನಾದ್ಯಂತ ಹತ್ತು ದಿನಗಳಿಂದ ಸತತ ಮಳೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 4, 6 ಸಾವು. ತಳ್ಳುಗಾಡಿ, ತರಕಾರಿ ಮಾರುವವವರಿಗೆ ದಿನದ ಆದಾಯವಿಲ್ಲ. ಜನಜೀವನ ಅಸ್ತವ್ಯಸ್ಥ. ಅಷ್ಟರಲ್ಲಿ ಹೆಂಡತಿ ಪೇಪರ್ ಕಿತ್ತುಕೊಂಡು, “ನೀವು ಆಮೇಲೆ ಓದುವಿರಂತೆ, ಮೊದಲು ಹೋಗಿ ಒಂದಿಷ್ಟು ತರಕಾರಿ ಏನಾದರೂ ಬಂದಿದೆಯೇ ನೋಡಿ, ಹಾಲೂ ತಗೊಂಡು ಬನ್ನಿ’ ಎಂದವಳು. ತಾನು ಪೇಪರ್ ಓದೋಕೆ ಶುರುಮಾಡಿದಳು.
ಮಧ್ಯಾಹ್ನದ ನಿ¨ªೆ ಮುಗಿಸಿ ಬರೀತಾ ಕೂತಿ¨ªೆ. ಮಡದಿ ಬಂದು, “”ರೀ ಸಂಜೆ ಗಾಜನೂರಿಗೆ ಹೋಗಿ ಬರೋಣ. ತುಂಗೆ ತುಂಬಿ ಹರಿತಿ¨ªಾಳೆ. ಡ್ಯಾಂನಲ್ಲಿ ನೀರು ತುಂಬಿ ಹರಿಯುವುದು ತುಂಬ ಚೆನ್ನಾಗಿರುತ್ತೆ. ಮಕ್ಕಳು ಇಷ್ಟಪಡ್ತಾರೆ” ಎಂದು ಒತ್ತಾಯಿಸಿದಳು. ಇಷ್ಟವಾಯ್ತು. “”ಸರಿ ರೆಡಿಯಾಗಿ ನಾಲ್ಕು ನಾಲ್ಕೂವರೆ ಗಂಟೆಗೆ ಹೊರಟು ನೋಡಿಕೊಂಡು ಸಂಜೆ ಆರು ಗಂಟೆ ಹೊತ್ತಿಗೆ ವಾಪಸ್ ಆಗುವ. ರೆಡಿ” ಎಂದು ಹೇಳುತ್ತ ಬರೆಯುವುದನ್ನು ನಿಲ್ಲಿಸಿ ಸಿದ್ಧನಾಗಿ ಹೊರಟೇಬಿಟ್ಟೆ. ಗಾಜನೂರು ಅಣೆಕಟ್ಟೆ ಮುಂದೆ ನಿಂತು ನೋಡುತ್ತ ನೋಡುತ್ತಾ: ತೆಳುವಾದ ಕೆಮ್ಮಣ್ಣು ಬಣ್ಣದ ಧುಮುಕುವ ನೀರು ತೆರೆ ತೆರೆಯಾಗಿ ಧುಮಿಕಿ ನೊರೆ ನೊರೆಯಾಗಿ ಏರಿಳಿದು ಭೋರ್ಗರೆದು ಏಳುಸೀಳು ಒಂದಾಗಿ ನದಿಯ ಪಾತ್ರದಲ್ಲಿ ಹರಿದು ಹೋಗುವ ದೃಶ್ಯ ನೋಡುತ್ತ ನೋಡುತ್ತ ಮೂಡಿದ ಕವನ ಸಾಲುಗಳು:
ಕಲ್ಲುಸಾರದ ಜಲತರಂಗ ಶೃತಿಗೆ
ಮೈದುಂಬಿ ಹರಿವ
ಶ್ರಾವಣದ ಕೆಮ್ಮೆ„ಯ್ಯ ಗಂಧ ಗೌರಿ
ಸಹ್ಯಾದ್ರಿಯ ಕುಲವಧು. ಬಡ ನಡುವಿನ
ಕಿರು ತೊರೆಗಳ ಘಲಿರು ಗೆಜ್ಜೆಯ
ಸೊರಗುತ್ತಿರುವ ಜಲಮಧು
ಎಂದು ಆರಂಭವಾಗಿ ಇಂದಿನ ತುಂಗೆಯ ಬಡಕಲು ಸ್ಥಿತಿಯನ್ನು ಕಾರಣವಾದ ಪರಿಸರ ನಾಶವನ್ನು ಒಳಗೊಂಡಂತೆ ಮುಂದುವರಿಯುತ್ತದೆ. ಕುವೆಂಪುರವರ ಕಾದಂಬರಿಯ ಪಾತ್ರಗಳಾದ ಹೂವಯ್ಯ, ಸೀತೆ, ಬಾಡುಗಳ್ಳ ಸೋಮ, ನಂಬಿಕೆಯ ನಾಯಿಗುತ್ತಿ ಮುಂತಾದವರನ್ನೆಲ್ಲಾ ಒಳಗೊಂಡು ತುಂಗಭದ್ರೆಯಾಗಿ ಹರಿದು ತುಂಗಭದ್ರಾ ಡ್ಯಾಂ ಆದದ್ದು, ಪಾಲಿಫೈಬರ್ ವಿಶಾನಿಲ ಕಾರುವ ಫ್ಯಾಕ್ಟರಿ, ಇಂಡಿಯಾದ ನದಿಗಳ ಕಲುಷಿತ ಸ್ಥಿತಿಯನ್ನೂ ಚಿತ್ರಿಸಿ ತುಂಗೆಯನ್ನು “ನೀನು ಕಾರಣ ಕನ್ಯೆ , ನಿತ್ಯ ಮಾನ್ಯೆ’ ಎಂದು ಚಿತ್ರಿಸುವ ಕವಿತೆ “ಸಹ್ಯಾದ್ರಿಯ ಕುಲವಧುವಾಗಿ’ ರೂಪುಗೊಂಡಿದೆ.
ಜಗತ್ತಿನಾದ್ಯಂತ ಇಷ್ಟೊಂದು ಮಳೆಗೆ ಕಾರಣವೇನು? ಯುರೋಪಿಯನ್ ದೇಶಗಳಲ್ಲೂ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಷ್ಟು ಮಳೆ. ಇಂಗ್ಲೆಂಡ್‌ನಲ್ಲಿ ಒಂದು ಊರಿಗೆ ಊರೇ ನೀರಿನಲ್ಲಿ ಮುಳುಗಿಹೋಗಿತ್ತು ! ಪರಿಸರ ವಿಜ್ಞಾನಿಗಳ ಪ್ರಕಾರ ಇಷ್ಟೊಂದು ಮಳೆಗೂ ಕಾರಣ ಗ್ಲೋಬಲ್ ವಾರ್ಮಿಂಗ್. ಒಂದು ಕಡೆ ಕಾಡುನಾಶ; ಗ್ರೀನ್‌ಹೌಸ್ ಇಫೆಕ್ಟ್; ಫ್ರಿಡ್ಜ್ ಮುಂತಾದ ಶೈತ್ಯ ಉಪಕರಣಗಳ ಅನಿಲದಿಂದ ಹರಿದ ಓಜೋನ್ ಪದರ. ವಾರ್ಮ್ ಆಗದೇ ಗ್ಲೋಬ್ ಇನ್ನೇನಾಗುತ್ತೆ. ಈ ವಾರ್ಮ್ನಿಂದ ಮಳೆನೂ ಜಾಸ್ತಿ, ಸುಡುವ ಸಮ್ಮರ್. ಋತುಮಾನದ ವೈಪರೀತ್ಯಗಳು. ಮನುಷ್ಯನ ಈ ದುರಾಸೆ ಹೀಗೆ ಮುಂದುವರಿದರೆ ಜಲಪ್ರಳಯವಾಗಿ ಗ್ಲೋಬೇ ಕೊಚ್ಚಿ ಹೋಗುವ ಸಂಭವ ಬಂದರೆ ಯಾವ ನೋಹ ಬರ್ತಾನೆ ಸ್ಪೀಶೀಸ್‌ಗಳನ್ನ ಉಳಿಸೋಕೆ? ಎಂಬಿತ್ಯಾದಿ ಪ್ರಶ್ನೆಗಳಿಂದ ತಲೆಬಿಸಿಯಾಯಿತು.
ಮಳೆ ನಿಲ್ಲುವ ಸೂಚನೆಗಳು ಕಾಣಿಸಲಿಲ್ಲ. ಪ್ರಳಯಕಾಲ ಬಂದೇ ಬಿಡ್ತೇನೋ ಅನ್ನಿಸಿತು. ಅಷ್ಟರಲ್ಲಿ ಟೆಲಿಫೋನ್ ರಿಂಗಾಯ್ತು. ಎತ್ತಿಕೊಂಡೆ.
“”ನಮಸ್ಕಾರ ಗುರುವೇ”.
“”ಮೇಡಂ ಚೆನ್ನಾಗಿ¨ªಾರಾ? ಮಳೆ ಹೇಗಿದೆ? ನಾನು ಹೇಳಿದ್ದು ಏನು ಮಾಡಿದಿರಿ?”
“”ಶುರುಮಾಡಿದಿರಿ ತಾನೆ. ಯಾವುದಯ್ನಾ ಅದು ನೀ ಹೇಳಿದ್ದು! ರೀ ನಿಮಗೇನು ಅರಳು ಮರುಳೇನ್ರಿ? ಪ್ರತಿವಾರ ಹೊಡ್ಕೊತಿದ್ದೀನಿ. ನಾನು ಹೇಳಿದ್ದ ಬರವಣಿಗೆ ಎಲ್ಲಿಗೆ ಬಂತು ಹೇಳಿ” ಅಂತ ಕೇಳುತ್ತಿದ್ದ ಗೆಳೆಯನಿಗೆ ಒಂದು ಸಣ್ಣ ಸುಳ್ಳು ಹೇಳಿಯೇಬಿಟ್ಟೆ. “”ಟೇಕ್ ಆಫ್ ಆಗಿದೆ ಕಣಯ್ನಾ. ನೀನು ಹೇಳಿರೋ ಅಷ್ಟು ದಿನದಲ್ಲಿ ಸ್ಕ್ರಿಪ್ಟ್ ಕೊಟ್ಟಾಯ್ತಲ್ಲಾ? ಪಬ್ಲಿಷ್ ಮಾಡಿಸುದಷ್ಟೇ ನಿನ್ನ ಕೆಲಸ” ಅಂದೆ. ಅವನು ನಂಬಿ “”ಗುಡ್, ನಾನು ಹೇಳಿ¨ªೆÇÉಾ ಅದರಲ್ಲಿರಬೇಕು. ಲಿರಿಕಲ್ ಆಗಿರಬೇಕು. ನಿಮ್ಮ ಎಪ್ಪತೈದು ವರ್ಷಗಳ ಅನುಭವ, ಚಲ್ಲಾಟ, ಚಿಲ್ಲರೆ ವಿಚಾರ, ವಿನೋದ ಎಲ್ಲಾ ಇರಬೇಕು. ಮುಂದಿಂದು ನನಗೆ ಬಿಡಿ. ಸರಿ ಇಡ್ಲಾ” ಅಂತ ಹೇಳಿ “”ಬೈ” ಅಂದು ಫೋನ್ ಇಟ್ಟೇಬಿಟ್ಟ.
ನನ್ನ ಜೀವನ ಹಳ್ಳಿಯಿಂದ ಆರಂಭವಾಯ್ತು. ಬಡತನ ರೋಗ-ರುಜಿನ. ಒಂದಿಷ್ಟು ವಿದ್ಯಾಭ್ಯಾಸ. ಅದೂ ಎಷ್ಟೊಂದು ಅಡೆತಡೆಗಳು, ಅಂತೂ ಓದು, chequred carrer. ಒಂದಿಷ್ಟು ಹೋರಾಟ. ನೋವು -ನಲಿವು. ಎಲ್ಲ ವೃತ್ತಾಂತಗಳನ್ನು ಬರೆಯುತ್ತಿದ್ದೇನೆ. ನನ್ನ ಬಾಲ್ಯದ ಗೆಳೆಯನೊಬ್ಬ ನನ್ನ ಜೀವನ ವೃತ್ತಾಂತಗಳನ್ನು ಮೀಟುತ್ತಿ¨ªಾನೆ.
ಈ ಹಿಂದೆ ಶಿವಮೊಗ್ಗಕ್ಕೆ ಬಂದ ಹೊಸದರಲ್ಲಿ ಒಂದು ಕತೆ ಬರೆದಿ¨ªೆ. “ಸ್ಲಿàಪಿಂಗ್ ಬರ್ತ್’ ಅಂತ. ಅರವತ್ತರ ದಶಕದ ರೈಲ್ ಪ್ರಯಾಣದಲ್ಲಿನ ಒಂದು ಅನುಭವ. ನಾಯಕ ಹುಬ್ಬಳ್ಳಿಯಿಂದ ಬೆಂಗಳೂರಿಗೆ ರಾತ್ರಿ ಪ್ರಯಾಣಮಾಡಿದ್ದ: ಎದುರು ಬರ್ತ್‌ನಲ್ಲಿ ಕೂತಿದ್ದ ಹುಡುಗಿ ಅಲ್ಲಾ ಹೆಂಗಸು ಅನ್ನುವುದೇ ಸರಿ. ಅವಳ ಚಿಕ್ಕ ಮಗು ಅವನನ್ನೇ ನೋಡ್ತಾಯಿತ್ತು. ನಗ್ತಾಯಿತ್ತು. ಮಗುನ ಮಾತನಾಡಿಸೋಕೆ ಶುರುಮಾಡಿ ಫ್ರೆಂಡ್‌ಶಿಪ್ ಬೆಳೀತು. ಅವಳು ಮಾತನಾಡಿಸಿದಳು. ಮಗುವಿನಿಂದ ಕಿಸ್ ಕೊಡಿಸಿದುÉ. ಅವನೂ ಕೊಟ್ಟು ಅವಳಿಗೇ ಕೊಟ್ಟಿದ್ದೂ ಅಂದುಕೊಂಡ. ಇಬ್ಬರೂ ನಕ್ಕಿದ್ದರು. ಎದ್ದು ಓಡಾಡೊ ನೆಪದಲ್ಲಿ ಒಂದು ಚೂರ್ ಟಚ್ಚಾ ಆಯ್ತು. ಸ್ವಲ್ಪ ಹೊತ್ತಿನ ಮೇಲೆ, “”ಒಂದು ನಿಮಿಷ ಮಗು ಎತ್ತಿಕೊಂಡಿರಿ” ಅಂತ ಅವನ ಕೈಗೆ ಕೊಟ್ಟು, ಬಾತ್‌ರೂಮ್‌ಗೆ ಹೋಗಿಬಂದು, ಮಗು ಮತ್ತೆ ಕರಕೊಂಡು, “ಗುಡ್ ನೈಟ್’ ಹೇಳಿ ಮಲಗಿದಳು.
ರೋಮಾಂಚನಗೊಂಡು ಮಲಗಿ ಅವÛನ್ನೆ ನೋಡ್ತಿದ್ದ. ಎಡಕ್ಕೆ ಹೊರಳಿದಳು, ಬಲಕ್ಕೆ ಹೊರಳಿದಳು. ಅವನು ಮಾತ್ರ ಒಂದೇ ಪೋಸಲ್ಲಿ ಮಲಗಿ ಅವಳ ಬಾಡಿ ಹಿಂಭಾಗ ಮುಂಭಾಗದ ಕರ್ವ್‌ಗಳನ್ನು ನೋಡ್ತಾ ಒಂದಿಷ್ಟು ಮಂಪರ್ನಲ್ಲಿ ಜಂಪೋ ಜಂಪು. “”ರೀ ಬೆಂಗಳೂರು ಬಂತು” ಅಂತ ಎಬ್ಬಿಸಿದಳು. ಬ್ಯಾಗ್, ಸೂಟ್‌ಕೇಸ್ ಸರಿಮಾಡಿಕೊಂಡು ಟ್ರೈನ್ ನಿಂತ ಕೂಡಲೇ ಇಳಿದು, ಪ್ಲಾಟ್‌ಫಾರಮ್‌ನಲ್ಲಿ ನಿಂತಿದ್ದ ಗಂಡನ ಹೆಗಲಮೇಲೆ ಕೈಹಾಕಿ “ಟಾ ಟಾ’ ಹೇಳಿ ಆಟೋ ಹತ್ತಿ ಹೊರಟು ಹೋದುÉ. ಇವನೂ ಒಂದು ಆಟೋ ಹಿಡಿದು ಮನೆಗೆ ಬಂದು ಬೆಲ್ ಬಾರಿಸಿ ಒಳಗೆ ಹೋದ. ತಕ್ಷಣವೆ ಹೆಂಡತಿ ಕೇಳಿದ ಪ್ರಶ್ನೆ: “”ಯಾಕ್ರಿ ಕಣ್ಣೆಲ್ಲಾ ಕೆಂಪಗಾಗಿದೆ. ಸ್ಲಿàಪಿಂಗ್‌ಬರ್ತ್ ಸಿಕ್ಕಲಿಲ್ಲವಾ, ನಿ¨ªೆ ಬರಲಿಲ್ಲವಾ?” ಅಂತ ಕೇಳಿಬಿಡೋಣವೇ. “”ಎಲ್ಲಾ ಸಿಕ್ಕಿತ್ತು” ಅಂತ ತಲೆತಗ್ಗಿಸಿ ಬಾತ್ ರೂಮ್ ಕಡೆ ಹೋದ.
ಈ ಕಥೆ ಬರೆದ ಅದೆಷ್ಟೋ ದಿನಗಳ ಮೇಲೆ ಇನ್ನೊಂದು ಕಥೆ ಬರೆದಿ¨ªೆ. ಅದರ ಎರಡು-ಮೂರು ಹಸ್ತಪ್ರತಿಗಳು ಇನ್ನೂ ಧೂಳು ತಿನ್ನುತ್ತಾ ಬಿದ್ದಿದೇ ಅನ್ನಿ. ಬೆನ್ನುನೋವು ತಾಳಲಾರದೆ, ಯಾವ ಟ್ರೀಟೆ¾ಂಟ್‌ಗೂ ಜಗ್ಗದೆ ಅತ್ಮಹತ್ಯೆ ಮಾಡಿಕೊಂಡ ಒಬ್ಬ ವಿದ್ಯಾರ್ಥಿಯ ಸುತ್ತ ಹೆಣೆದ ಕಥೆ. ಅದರ ಸ್ವಾರಸ್ಯ ಇರೋದು, ಅವನು ಸತ್ತಮೇಲೆ ಆ ಸುದ್ದೀನ ಹಳ್ಳಿàಲಿದ್ದ ಅವನ ಪೇರೆಂಟ್ಸ್‌ಗೆ ಮುಟ್ಟಿಸುವುದಕ್ಕೆ ನೆರವಾದ ಆಟೋ ಡ್ರೆçವರ್ ಮಹಮದ್, ಅವನ ಪೇಚಾಟ ಪೀಕಲಾಟ, ಗುಮಾನಿ ಸುತ್ತ ಅವನ ನರಳೂದು, ಕೊನೇಗೆ ಅವನ ಹ್ಯೂಮನ್ ಕನ್ಸರ್ನ್ ಬಗ್ಗೆ ಅನುಕಂಪ ಹೀಗೆ- ಇತ್ತು ಅಂತ ಇಟ್ಟುಕೊಳ್ಳಿ. ಈ ಕಥೆ ಸ್ಥಿತಿ ಹೀಗಾದ ಮೇಲೆ ಬರೆದ¨ªೆಲ್ಲ ಕವಿತೆಗಳೇ. ಕವಿ ಪಟ್ಟವಂತೂ ಸಿಕ್ಕಿದೆ, ಕಿರೀಟ ಇಲ್ಲ.
(ಆತ್ಮ ವೃತ್ತಾಂತದ ಮೊದಲ ಭಾಗ)
– ಸತ್ಯನಾರಾಯಣ ರಾವ್ ಅಣತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.