ಚಳಿಯೇತಕೆ ಕಾಡುವನಮ್ಮಾ?


Team Udayavani, Dec 19, 2018, 6:00 AM IST

30.jpg

ಗರ್ಭಿಣಿಯರಿಗೆ ಚಳಿಗಾಲ ಎನ್ನುವುದು ಸವಾಲಿನ ಪರ್ವ. ಗರ್ಭಿಣಿ ತಾನು ಬೆಚ್ಚಗಿರುವುದಷ್ಟೇ ಅಲ್ಲ, ಗರ್ಭದೊಳಗಿನ ಕಂದಮ್ಮನನ್ನೂ ಬೆಚ್ಚಗೆ ಕಾಯಬೇಕು. ನಿಮ್ಮ ಮನೆಯಲ್ಲೂ ಗರ್ಭಿಣಿಯರಿದ್ದರೆ, ಅವರ ಆರೈಕೆ ಮಾಡಲು ಕೆಲವು ಪ್ರಾಯೋಗಿಕ ಸಲಹೆಗಳು ಇಲ್ಲಿವೆ…

ಚಳಿಗಾಲ ಬಂದಾಗ ಎಲ್ಲರೂ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಗಮನ ಹರಿಸಬೇಕಾಗುತ್ತದೆ. ಇನ್ನು, ಒಡಲೊಳಗೆ ಚಿಗುರೊಂದನ್ನು ಪೊರೆಯುತ್ತಿರುವ ಗರ್ಭಿಣಿಯರಂತೂ ಡಬಲ್‌ ಕೇರ್‌ ಮಾಡಬೇಕು. ಯಾಕೆಂದರೆ, ಚಳಿಗಾಲದಲ್ಲಿ ಗರ್ಭ ನಿರ್ವಹಣೆ ಸ್ವಲ್ಪ ಕಷ್ಟ. ತಾಯಿ ತಾನು ಬೆಚ್ಚಗಿರುವುದಷ್ಟೇ ಅಲ್ಲ, ಗರ್ಭದೊಳಗಿನ ಕಂದಮ್ಮನನ್ನೂ ಬೆಚ್ಚಗೆ ಕಾಯಬೇಕು. ಅದಕ್ಕೇನು ಮಾಡಬೇಕು?

1. ಹೆಚ್ಚೆಚ್ಚು ನೀರು ಸೇವನೆ
ವಾತಾವರಣ ತಣ್ಣಗಿದ್ದರೂ, ಶುಷ್ಕತೆ ಇರುವುದರಿಂದ ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚು ನೀರು ಬೇಕಾಗುತ್ತದೆ. ಗರ್ಭಿಣಿಯರು ಸರಿಯಾಗಿ ನೀರು ಕುಡಿಯದಿದ್ದರೆ, ನಿರ್ಜಲೀಕರಣವಾಗಿ ತಾಯಿ ಮತ್ತು ಮಗುವಿಗೆ ಅಪಾಯ ಸಂಭವಿಸಬಹುದು. ಇದು ವಿವಿಧ ಸೋಂಕುಗಳಿಗೂ ಕಾರಣವಾಗಬಲ್ಲದು. ಎದೆಹಾಲಿನ ಉತ್ಪಾತ್ತಿ ಮೇಲೂ ಪರಿಣಾಮ ಬೀರಬಹುದು.

2. ಫ‌ೂ ಶಾಟ್‌ ಪಡೆಯಿರಿ
ಚಳಿಗಾಲದಲ್ಲಿ ಶೀತ ಮತ್ತು ಜ್ವರ ಸರ್ವೇ ಸಾಮಾನ್ಯ. ಮುನ್ನೆಚ್ಚರಿಕೆಯಾಗಿ ಗರ್ಭಿಣಿಯರು ಫ‌ೂÉ ಶಾಟ್‌ (ಜ್ವರ ನಿರೋಧಕ ಲಸಿಕೆ) ತೆಗೆದುಕೊಳ್ಳಬೇಕು. ರೋಗ ನಿರೋಧಕ ಶಕ್ತಿ ದುರ್ಬಲವಾದರೆ, ತಾಯಿ-ಮಗುವಿನ ಆರೋಗ್ಯದಲ್ಲಿ ಏರುಪೇರಾಗುವ ಅಪಾಯವಿದೆ. 

3. ಬೆಚ್ಚಗಿನ ಉಡುಪು ಧರಿಸಿ 
ಗರ್ಭಿಣಿಯರು ಬೆಚ್ಚಗಿನ ಮತ್ತು ಆರಾಮದಾಯಕ ಉಡುಗೆ ಧರಿಸಬೇಕು. ಕಾರ್ಡಿಜನ್‌, ಬಟ®x… ಶರ್ಟ್‌, ಸ್ವೆಟರ್‌, ಟ್ಯಾಂಕ್‌ ಟಾಪ್‌, ಟಿ ಶರ್ಟ್‌ ಇತ್ಯಾದಿಗಳಿಂದ ದೇಹವನ್ನು ಬೆಚ್ಚಗಿಡುವುದು ಒಳ್ಳೆಯದು.

4. ಜ್ವರವನ್ನು ಕಡೆಗಣಿಸಬೇಡಿ
ಗರ್ಭಿಣಿಯರು ಸತತ ಮೂರು ದಿನಗಳಿಂದ ಶೀತ- ಜ್ವರದಿಂದ ಬಳಲುತ್ತಿದ್ದರೆ, ವೈದ್ಯರನ್ನು ಕಾಣುವುದು ಕಡ್ಡಾಯ. ಆರೋಗ್ಯದಲ್ಲಿ ಆಗುವ ಯಾವ ಸಣ್ಣ ಬದಲಾವಣೆಯನ್ನೂ ಕಡೆಗಣಿಸಬಾರದು.

5. ಸ್ವತ್ಛತೆ ಕಡೆ ಗಮನ ಹರಿಸಿ 
ಗರ್ಭಿಣಿಯರ ದೇಹಸ್ಥಿತಿ ಸೂಕ್ಷ್ಮವಾಗಿರುವುದರಿಂದ, ರೋಗಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ಸ್ವತ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಕೈಗಳನ್ನು ಸ್ವತ್ಛವಾಗಿ ಇಟ್ಟುಕೊಳ್ಳುವುದರಿಂದ, ರೋಗಗಳು ದೇಹವನ್ನು ಪ್ರವೇಶಿಸದಂತೆ ತಡೆಯಬಹುದು.

6. ಹೊರಗೆ ತಿರುಗಾಡಬೇಡಿ
ಗರ್ಭಿಣಿಯರು ಮನೆಯೊಳಗೆ ಬೆಚ್ಚಗಿದ್ದರೆ ಹೆಚ್ಚು ಸುರಕ್ಷ. ವಿಪರೀತ ಹವಾಮಾನ ಪರಿಸ್ಥಿತಿಗಳಿಗೆ ಮತ್ತು ಸೂಕ್ಷ್ಮಾಣುಜೀವಿಗಳಿಗೆ ದೇಹವನ್ನು ಒಡ್ಡಿಕೊಳ್ಳುವುದು ಅಪಾಯಕಾರಿ. ಚಳಿಗಾಲದಲ್ಲಿ ವಾತಾವರಣ ಶುಷ್ಕವಾಗಿರುವುದರಿಂದ, ಗರ್ಭಿಣಿಯರು ದೂರದ ಪ್ರಯಾಣ, ಪ್ರವಾಸ ಹೋಗದಿದ್ದರೆ ಉತ್ತಮ. 

7. ನಿಯಮಿತ ವ್ಯಾಯಾಮ
ವಾತಾವರಣ ತಣ್ಣಗಿರುವುದರಿಂದ ಗರ್ಭಿಣಿಯರಿಗೆ ವಾಕಿಂಗ್‌ ಹೋಗಲು ಸಾಧ್ಯವಾಗದಿರಬಹುದು. ದೇಹವನ್ನು ಚಟುವಟಿಕೆಯಿಂದ ಇಡಲು, ಮನೆಯ ಒಳಗೇ ಕೆಲವು ಸರಳ ವ್ಯಾಯಾಮಗಳನ್ನು ಮಾಡಬೇಕು. ಸರಳ ಯೋಗಾಸಾನ, ಮನೆಯೊಳಗೆ ಅಡ್ಡಾಡುವುದು, ಸಂಜೆ ವೇಳೆಯ ವಾಕಿಂಗ್‌ ಮಾಡಿ. 

8. ಚರ್ಮ ಕೋಮಲವಾಗಿರಲಿ
ಚಳಿಗಾಲದಲ್ಲಿ, ಚರ್ಮವು ಒರಟಾಗುವುದು ಸಹಜ. ಕೈ ಕಾಲು ಒಡೆದು, ತುಟಿಯಲ್ಲಿ ರಕ್ತ ಮೂಡುತ್ತದೆ. ಗರ್ಭಧಾರಣೆ ಕೂಡ ಚರ್ಮದ ಶುಷ್ಕತೆಗೆ ಕಾರಣವಾಗುವುದರಿಂದ, ಗರ್ಭಿಣಿಯರು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಬಿಸಿನೀರಿಗಿಂತ ಬೆಚ್ಚಗಿನ ನೀರಿನ ಸ್ನಾನ ಮಾಡಿ. ಸ್ನಾನದ ನಂತರ, ಒಳ್ಳೆಯ ಮಾಯಿಶ್ಚರೈಸರ್‌ ಹಚ್ಚಿ, ಒಣಗಾಳಿಯಿಂದ ಚರ್ಮವನ್ನು ಕಾಪಾಡಿ. 
     
ಗರ್ಭಿಣಿಯರಿಗೆ ಉಸಿರಾಟದ ವ್ಯಾಯಾಮ
1. ಎದೆಯಿಂದ ಉಸಿರಾಟ
ನೆಟ್ಟಗೆ ನಿಂತುಕೊಂಡು, ಪಾದಗಳನ್ನು ಸಮಾನಾಂತರವಾಗಿ ಇರಿಸಿ. ಬಾಯಿಯನ್ನು ಮುಚ್ಚಿ, ಒಂದರಿಂದ ಹತ್ತು ಎಣಿಸುತ್ತಾ ಆಳವಾಗಿ ಉಸಿರಾಡಿ. ಹೀಗೆ ಮಾಡುವಾಗ ಕೈಯನ್ನು ಎದೆಯ ಮೇಲೆ ಇರಿಸಿ. ಉಸಿರಾಡುವಾಗ ಶ್ವಾಸಕೋಶಗಳು ವಿಸ್ತರಿಸಿ, ಕಮಾನಿನಂತೆ ನಿಮ್ಮ ಕೈ ಹೊರಕ್ಕೆ ಚಲಿಸುತ್ತದೆ.

2. ಹೊಟ್ಟೆಯಿಂದ ಉಸಿರಾಟ 
ಕಾಲುಗಳನ್ನು ಚಾಚಿ, ಆರಾಮಾಗಿ ನೆಲದ ಮೇಲೆ ಕುಳಿತುಕೊಳ್ಳಿ. ಕೆಳ ಹೊಟ್ಟೆಯಿಂದ ಉಸಿರಾಡಲು ಪ್ರಾರಂಭಿಸಿ ಮತ್ತು ಹೊಟ್ಟೆಯನ್ನು ಗಾಳಿಯಿಂದ ತುಂಬಿಸಿ. ಸಾಧಾರಣ ವೇಗದಲ್ಲಿ ಉಸಿರಾಡಿ. 

3. ಆಳವಿಲ್ಲದ, ಆಳವಾದ ಉಸಿರಾಟ 
ಅನುಕೂಲಕರ ಸ್ಥಿತಿಯಲ್ಲಿ ಕುಳಿತು, ದೇಹವನ್ನು ವಿರಮಿಸಿ. ಆಳವಾಗಿ ಉಸಿರು ತೆಗೆದುಕೊಳ್ಳಿ ಮತ್ತು ನಿಧಾನವಾಗಿ ಉಸಿರನ್ನು ಹೊರ ಬಿಡಿ. ಬಾಯಿಯನ್ನು ಅಗಲವಾಗಿ ತೆರೆಯಿರಿ. ಕನಿಷ್ಠ 20 ಬಾರಿ ಇದನ್ನು ಪುನರಾವರ್ತಿಸಿ.

– ಡಾ. ಟೀನಾ ಥಾಮಸ್‌

ಟಾಪ್ ನ್ಯೂಸ್

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

gold

D.K.Suresh ಹೆಸರಲ್ಲಿ 14 ಕೆಜಿ ಚಿನ್ನ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

cyber crime

Cyber ​​fraud ಬದಲಾಗಿದೆ: ನಮ್ಮವರೇ ಆಟಗಾರರು; ಆಡಿಸುವಾತ ಮಾತ್ರ ಬೇರೆ!

1somanna

ರೈಲ್ವೇ, ಜಲಶಕ್ತಿ ಇಲಾಖೆ; ಶೀಘ್ರ 60,000 ಉದ್ಯೋಗ ನೇಮಕ: ಸೋಮಣ್ಣ

bjp-congress

Contractor ಆತ್ಮಹ*ತ್ಯೆ: ರಾಜಕೀಯ ಜಟಾಪಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.