ಜಗಳ ಮೆಚ್ಚಿದ ಮಗ!


Team Udayavani, Mar 28, 2018, 3:43 PM IST

jagala-mechi.jpg

ಕದನ, ಹೊಡೆದಾಟಗಳು ದೇಶ ದೇಶಗಳ ನಡುವೆಯೇ ಆಗುತ್ತವಂತೆ. ಅಂಥದ್ದರಲ್ಲಿ ಮನೆಯಲ್ಲಿ ಚಿಕ್ಕ ಮಕ್ಕಳು ಜಗಳವಾಡುವುದರಲ್ಲಿ ತಪ್ಪೇನು ಎಂದು ಮಕ್ಕಳ ಪರ ಕೆಲವರು ವಾದಿಸಬಹುದು. ಆದರೆ, ಈ ವಿಚಾರ ಅಷ್ಟೊಂದ್‌ ಸಿಂಪಲ್‌ ಇಲ್ಲ. ಪರಮಾಣು ಯುದ್ಧವನ್ನು ಬೇಕಾದರೂ ಸಹಿಸಿಕೊಂಡೇವು ಆದರೆ ಮಕ್ಕಳ ರಚ್ಚೆ, ಜಗಳವನ್ನು ಮಾತ್ರ ಸಹಿಸಿಕೊಳ್ಳುವುದು ಕಷ್ಟ ಎನ್ನುವ ಪಾಲಕರತ್ತ ಅನುಕಂಪದ ದೃಷ್ಟಿ ಬೀರಬೇಕಾದ ಅನಿವಾರ್ಯತೆಯೂ ಇದೆ… 

ಚಿಕ್ಕ ಮಕ್ಕಳು ಏನು ಮಾಡಿದರೂ ಚೆಂದ ಎಂದು ದೊಡ್ಡವರು ಮಕ್ಕಳ ಕುರಿತು ಹೆಮ್ಮೆ ವ್ಯಕ್ತಪಡಿಸುವುದನ್ನು ನೋಡಿರಬಹುದು. ಮಕ್ಕಳು ಮಾಡುವ ತರಲೆ ಕೆಲಸ, ತಪ್ಪುಗಳೇನನ್ನೇ ಆದರೂ ದೊಡ್ಡವರು ಕ್ಷಮಿಸಿಬಿಡಬಹುದು. ಆದರೆ, ಈ ಒಂದು ವಿಚಾರದಲ್ಲಿ ಮಾತ್ರ ಮಕ್ಕಳಿಗೆ ವಿನಾಯಿತಿ ಇಲ್ಲ. ಅದ್ಯಾವುದಪ್ಪಾ ಅಂಥ ತಲೆಹೋಗುವ ವಿಚಾರ ಅಂದುಕೊಳ್ಳುತ್ತಿದ್ದೀರಾ? ಅದೇ ಜಗಳ. ಮಕ್ಕಳು, ಓರಗೆಯವರೊಂದಿಗೇ ಆಗಲಿ, ಮನೆಯವರೊಂದಿಗೇ ಆಗಲಿ, ಕೀರಲು ದನಿಯಲ್ಲಿ ಜಗಳವಾಡುವ ಪರಿ ದೊಡ್ಡವರ ತಾಳ್ಮೆಗೆ ಅತಿ ದೊಡ್ಡ ಸವಾಲು.

ಕದನ, ಹೊಡೆದಾಟಗಳು ದೇಶ ದೇಶಗಳ ನಡುವೆಯೇ ಆಗುತ್ತವಂತೆ. ಅಂಥದ್ದರಲ್ಲಿ ಮನೆಯಲ್ಲಿ ಚಿಕ್ಕ ಮಕ್ಕಳು ಜಗಳವಾಡುವುದರಲ್ಲಿ ತಪ್ಪೇನು ಎಂದು ಕೆಲವರು ಕೇಳಬಹುದು. ಆದರೆ, ಇದರ ಹಿಂದೆ ಪಾಲಕರ ಮನಃಸ್ಥಿತಿಯನ್ನೂ ಅರ್ಥಮಾಡಿಕೊಳ್ಳಬೇಕಾದ್ದು ನ್ಯಾಯ. ಕೆಲಸದ ಒತ್ತಡ, ಕುಟುಂಬ ನಿರ್ವಹಣೆಯಂಥ ಘನ ಗಂಭೀರವಾದ ಸಮಸ್ಯೆಗಳಲ್ಲಿ ಮುಳುಗಿರುವ, ಮನೆ ಹೊರಗಡೆ ಎಂಥೆಂಥವರೊಂದಿಗೋ ಹೆಣಗಾಡಿ, ಅವರನ್ನು ಸಂಭಾಳಿಸಿಕೊಂಡು ಮನೆಗೆ ಬಂದಿರುತ್ತಾರೆ ಅವರು. ಸೂಜಿ ಬಿದ್ದರೂ ಕೇಳುವಂಥ ಮೌನ ಅನ್ನುತ್ತಾರಲ್ಲ, ಅಕ್ಷರಶಃ ಅಂಥದ್ದೊಂದು ಶಾಂತಿಯುತ ವಾತಾವರಣವನ್ನು ಅವರು ಮನೆಯಲ್ಲಿ ಅಪೇಕ್ಷಿಸುತ್ತಿರುತ್ತಾರೆ!

ಒಂದು ಕಾರಣ ಇರುತ್ತೆ!: ಶಾಲೆಗಳಲ್ಲಿ ಕಲಿಯುವಿಕೆಯನ್ನು ಎಷ್ಟೇ ಮನರಂಜನಾತ್ಮಕವಾಗಿ ರೂಪಿಸಿದರೂ, ಶಾಲೆ ಯಾವತ್ತಿದ್ದರೂ ಶಾಲೆಯೇ. ಅಂದರೆ ಅಲ್ಲಿ ಸಮವಸ್ತ್ರ ತೊಡಲೇಬೇಕು, ಅಲ್ಲಿನ ನಿಯಮಗಳನ್ನು ಪಾಲಿಸಲೇಬೇಕು. ಮಕ್ಕಳಿಗೆ ತೋರಿದ ಹಾಗೆ ನಡೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಶಾಲೆ ಬಿಡುತ್ತಿದ್ದ ಹಾಗೆ ಬಂಧನ ಮುಕ್ತವಾದ ಹಕ್ಕಿಗಳ ಹಾಗೆ ಸಂತಸದಿಂದ ಓಡೋಡುತ್ತಾ ಮಕ್ಕಳು ಮನೆ ಸೇರುವುದು. ಹಾಗೆ ಬಂದ ಮಕ್ಕಳು ಒಂದಷ್ಟು ಹೊತ್ತು ಆಟವಾಡಲು ಬಯಸಿದರೆ, ಆಡಲು ಬಿಡಿ.

ಇದರಿಂದ ಅವರ ಮನಸ್ಸು ಹಗುರಾಗುವುದು. ಅದು ಬಿಟ್ಟು ಆಡದಂತೆ ನಿಷೇಧ ಹೇರಿದರೆ ಅದನ್ನು ಜಗಳದ ಮೂಲಕ ತಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.  ಆದರೆ, ದೂರು- ಪ್ರತಿದೂರುಗಳ ನಡುವೆ, ಪಾಲಕರು “ಇದೊಂದು ಮುಗಿಯದ ಗೋಳು’ ಎಂದು ಹತಾಶರಾಗುವುದೇ ಹೆಚ್ಚು. ಮನೆಯವರೊಂದಿಗೇ ಆಗಲಿ, ಪಕ್ಕದ ಮನೆಯ ಸ್ನೇಹಿತರೊಂದಿಗೇ ಆಗಲಿ, ಮಕ್ಕಳು ಜಗಳವಾಡುತ್ತಿದ್ದಾರೆ ಎಂದರೆ ಅದಕ್ಕೊಂದು ಕಾರಣವಿರುತ್ತದೆ. ಅದನ್ನು ತಿಳಿಯಲು ಪ್ರಯತ್ನಿಸಿದರೆ ಸಮಸ್ಯೆ ಪರಿಹಾರವಾಗುವುದು. 

ಮಕ್ಕಳೇಕೆ ಜಗಳ ಆಡ್ತಾರೆ?: ಮನಃಶಾಸ್ತ್ರಜ್ಞರು ಮಕ್ಕಳ ಮನಸ್ಸನ್ನು ಸ್ಪಾಂಜಿಗೆ ಹೋಲಿಸುತ್ತಾರೆ. ಹೇಗೆ ಒಂದು ಸ್ಪಾಂಜು ತನ್ನ ದಾರಿಯಲ್ಲಿ ಸಿಗುವ ದ್ರವ ಪದಾರ್ಥಗಳನ್ನು ಹೀರಿಕೊಳ್ಳುವುದೋ, ಅದೇ ರೀತಿ ಮಕ್ಕಳು ತಮ್ಮ ಕಣ್ಣ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು, ವಿಷಯಗಳನ್ನು ಹೀರಿಕೊಳ್ಳುತ್ತಿರುತ್ತಾರೆ.

ಮಕ್ಕಳ ಸ್ವಭಾವವನ್ನು ನಿರ್ಧರಿಸುವಲ್ಲಿ ಮಕ್ಕಳು ಬೆಳೆಯುವ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸುಮ್ಮನೆಯೇ ಹೇಳಿಲ್ಲ ಹಿರಿಯರು. ಒಡಹುಟ್ಟಿದವರ ಮೇಲಿನ ಅಸೂಯೆ, ಅಪ್ಪ ಅಮ್ಮನ ಪ್ರೀತಿ ಸಿಗದೇ ಇರುವುದು, ಶಾಲೆಯಲ್ಲಿ ನಡೆದ ಯಾವುದೋ ಘಟನೆ, ಅಪ್ಪ ಅಮ್ಮ ಮನೆಯಲ್ಲಿ ಯಾವಾಗಲೂ ಜಗಳ ಆಡುತ್ತಿದ್ದರೆ, ಹೀಗೆ ಅನೇಕ ವಿಷಯಗಳು ಮಕ್ಕಳ ಜಗಳಗಂಟತನ ಸ್ವಭಾವವನ್ನು ಪ್ರಭಾವಿಸುತ್ತದೆ.

ಫೈಟಿಂಗ್‌ ವೀರರ ಪೋಷಕರೇ…
1. ಮಕ್ಕಳು ಮನೆಯಿಂದ ಹೊರಗಡೆ ಜಗಳವಾಡಿಕೊಂಡು, ತಕ್ಷಣ ಬೈಯದಿರಿ. ಏಕೆಂದರೆ, ಮಕ್ಕಳ ಮನಸ್ಸು ಆ ಸಮಯದಲ್ಲಿ ಪ್ರಕ್ಷುಬ್ದತೆಯಿಂದ ಕೂಡಿರುತ್ತದೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ಬಳಿಕ ಜಗಳದ ಕುರಿತು ಮಾತನಾಡಿ.

2. ತಪ್ಪುಮಾಡಿದ್ದರೂ, ಮಾಡದಿದ್ದರೂ ಮಗು ಹೇಳುವುದನ್ನು ಸಹನೆಯಿಂದ ಆಲಿಸಿ. ಮಗುವಿನ ಮಾತನ್ನು ಅರ್ಧದಲ್ಲಿಯೇ ತಡೆದು ಮಾತನಾಡಬೇಡಿ. ಶಿಕ್ಷೆ ನೀಡುವುದು ಪಾಲಕರ ಗುರಿಯಾಗಿರಬಾರದು. ವಿಷಯ ತಿಳಿದುಕೊಳ್ಳುವುದಷ್ಟೇ ಆದ್ಯತೆಯಾಗಿರಲಿ.

3. ಮಗುವನ್ನು ಯಾವುದೇ ಷರತ್ತಿಲ್ಲದೆ ಪ್ರೀತಿಸಿ. ತಂದೆ- ತಾಯಿಯರ ಪ್ರೀತಿಯ ಸ್ಪರ್ಶವು ಮಗುವಿಗೆ ಸದಾ ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಹಾಗೆಯೇ ಮನೆಮಂದಿಯೆಲ್ಲ ಬೆರೆತು ಖುಷಿಯಿಂದ ಇರುವ ಕೌಟುಂಬಿಕ ವಾತಾವರಣದಿಂದ ಮಗುವಿನ ಮನಸ್ಸು ಮುದಗೊಳ್ಳುತ್ತದೆ.

4. ಒಡಹುಟ್ಟಿದವರ ಜಗಳ ಹೊಡೆದಾಟ ತೀರಾ ವೈಯಕ್ತಿಕವಾಗದಂತೆ ಎಚ್ಚರವಹಿಸಿ. ಏಕೆಂದರೆ ಅದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡಬಹುದು. ಮುಖ್ಯವಾಗಿ ಪಾಲಕರು ಯಾರ ಕಡೆಗೂ ಪಕ್ಷಪಾತ ತೋರದಿರಿ. ಮಕ್ಕಳೆಲ್ಲರನ್ನೂ ಸಮಾನವಾಗಿ ಪ್ರೀತಿಸಿ.

5. ಮಕ್ಕಳು ಓರಗೆಯವರೊಂದಿಗೆ ಜಗಳವಾಡಿದ ಸಂದರ್ಭ ಹೆಚ್ಚಿನ ಪಾಲಕರು ಇನ್ನೊಬ್ಬ ಹುಡುಗನ ಪರ ನಿಂತು ಸಾರಿ ಕೇಳಿಬಿಡುತ್ತಾರೆ. ಸ್ವಂತ ತಂದೆ ತಾಯಿಯೇ ತಮ್ಮ ಪರ ನಿಲ್ಲದಿರುವುದು ಮಕ್ಕಳ ಮನಸ್ಸಿಗೆ ಆಘಾತ ತರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಸನ್ನಿವೇಶವನ್ನು ನಿಭಾಯಿಸಬೇಕು.

6. ಪಾಲಕರು ತಮ್ಮ ಮಕ್ಕಳ ಆಟ ಪಾಠ, ಅವರ ಸ್ನೇಹಿತರು… ಮುಂತಾದ ವಿಚಾರಗಳ ಕುರಿತು ಗಮನ ಹರಿಸುತ್ತಿದ್ದರೆ, ಮಕ್ಕಳಲ್ಲಿ ಸುರಕ್ಷತಾ ಮನೋಭಾವ ಮೂಡುತ್ತದೆ.

ಪ್ರೀತಿ ಕಮ್ಮಿ ಆದ್ರೆ, ಯುದ್ಧ ಆಗುತ್ತೆ!: ಮಕ್ಕಳ ನಡುವೆ ಜಗಳ ಏರ್ಪಡುವುದು ಅತ್ಯಂತ ಸಹಜ. ಚಿಕ್ಕ ಮಟ್ಟಿನ ಜಗಳ, ಮನಸ್ತಾಪ, ಮಕ್ಕಳ ಮಾನಸಿಕ ಬೆಳವಣಿಗೆಗೆ ಆರೋಗ್ಯಕರ.  ಹೊರ ಪ್ರಪಂಚವನ್ನು ಎದುರಿಸುವಲ್ಲಿ ಮಗುವನ್ನು ಈ ಪುಟ್ಟ ಜಗಳಗಳು ಸಿದ್ಧಗೊಳಿಸುತ್ತವೆ ಎನ್ನುತ್ತಾರೆ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್‌ ಕಾಲೇಜಿನ ಮನೋವೈದ್ಯರಾದ ಡಾ. ವಿಷ್ಣುವರ್ಧನ್‌. ಮಕ್ಕಳು ಮನೆಯಲ್ಲಿ ರಚ್ಚೆ ಹಿಡಿಯುವುದಕ್ಕೆ, ಪ್ರಮುಖ ಕಾರಣ ಹೆತ್ತವರ ಗಮನವನ್ನು ತಮ್ಮೆಡೆಗೆ ಸೆಳೆಯುವುದೇ ಆಗಿರುತ್ತದಂತೆ.

ಈಗಿನ ಸ್ಮಾರ್ಟ್‌ಪೋನ್‌ ಯುಗದಲ್ಲಿ ದೊಡ್ಡವರ ಗಮನ ಸೆಳೆೆಯಲು ನೂರಾರು ಸಂಗತಿಗಳಿವೆ. ಪಾಲಕರು ಅದರಲ್ಲೇ ಸದಾ ಕಾಲ ಮುಳುಗಿದ್ದರೆ, ಅದರ ಬಿಸಿ ಮಕ್ಕಳಿಗೆ ತಟ್ಟುವುದು. ಮಕ್ಕಳು ಜಗಳವಾಡುವಾಗ ಪಾಲಕರು ಯಾರೊಬ್ಬರ ಪರವೂ ನಿಲ್ಲಬಾರದು. ಕೋಪ ತಾಪ ತೋರಬಾರದು. ಮಾತುಕತೆಯಿಂದ ಯುದ್ಧಗಳೇ ನಿಂತುಹೋಗುತ್ತವೆ, ಇನ್ನು ಮನೆಯಲ್ಲಿನ ಜಗಳ ನಿಲ್ಲದೇ?

ಪೋಷಕರ ಪ್ರೀತಿ, ಗಮನದ ಕೊರತೆ ಇದ್ದಾಗ ಮಕ್ಕಳು ಅತಿರೇಕದ ಹಾದಿ ಹಿಡಿಯುತ್ತಾರೆ. ಮಕ್ಕಳತ್ತ ಪೋಷಕರು ಹೆಚ್ಚಿನ ಗಮನ ಹರಿಸಬೇಕು ಮಾತ್ರವಲ್ಲ, ಅವರಿಗೆ ಪೊಸಿಟಿವ್‌ ಮತ್ತು ನೆಗೆಟಿವ್‌ ವಿಚಾರಗಳನ್ನು ತಿಳಿಹೇಳಬೇಕು.
-ಡಾ. ವಿಷ್ಣುವರ್ಧನ್‌, ಮನೋವೈದ್ಯರು

* ರಾಜೇಶ್ವರಿ ಜಯಕೃಷ್ಣ 

ಟಾಪ್ ನ್ಯೂಸ್

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Hubli: Bankrupt govt cutting BPL card: Prahlada Joshi

Hubli: ದಿವಾಳಿಯಾದ ಸರ್ಕಾರ ಬಿಪಿಎಲ್‌ ಕಾರ್ಡ್‌ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.