ತಾರಸಿ ತೋಟ
ಮನೆಗೊಂದು ಹಸಿರು ಹಾಸು
Team Udayavani, Jan 29, 2020, 5:10 AM IST
ವೈದೇಹಿಯವರ ಬಾಲ್ಕನಿಯಲ್ಲಿ ಹಸಿರು ಸ್ವರ್ಗ ಸೃಷ್ಟಿಯಾಗಿದೆ. “ಇಷ್ಟು ಕಡಿಮೆ ಜಾಗದಲ್ಲಿ, ಇಷ್ಟೊಂದು ಗಿಡ ಬೆಳೆಸಬಹುದಾ?’ ಅಂತ ಅಚ್ಚರಿಯಾಗುವಂತೆ, 40*60 ಅಡಿಯ ಮನೆಯ ತಾರಸಿಯಲ್ಲಿ ಮುನ್ನೂರಕ್ಕು ಹೆಚ್ಚು ತಳಿಯ ಗಿಡಗಳು ನಳನಳಿಸುತ್ತಿವೆ…
ಹಿಂದೆಲ್ಲಾ ಮನೆ ಅಂದರೆ, ಎದುರಲ್ಲಿ ಅಥವಾ ಹಿತ್ತಲಿನಲ್ಲಿ ಸಣ್ಣ ಕೈ ತೋಟ ಇರಲೇಬೇಕಿತ್ತು. ಪೂಜೆಗೆ ಬೇಕಾಗುವ ಹೂವನ್ನು, ಮನೆಗೆ ಸಾಕಾಗುವಷ್ಟು ಸೊಪ್ಪು- ತರಕಾರಿಗಳನ್ನು ಜನ ಸ್ವತಃ ಬೆಳೆದುಕೊಳ್ಳುತ್ತಿದ್ದರು. ಆ ಕೆಲಸದಲ್ಲಿ ಗಂಡಸರಿಗಿಂತ, ಗೃಹಿಣಿಯರಿಗೇ ಹೆಚ್ಚು ಆಸಕ್ತಿ. ಗಿಡ ನೆಡುವುದು, ನೀರು ಹನಿಸುವುದು, ದನ-ಕರುಗಳಿಂದ ಅವುಗಳನ್ನು ಕಾಪಾಡಿಕೊಳ್ಳುವುದು, ಯಾರ ಮನೆಗೆ ಹೋದರೂ, ನಮ್ಮ ಹಿತ್ತಲಿನಲ್ಲಿ ಇರದ ಯಾವ ಗಿಡ ಇವರ ಮನೆಯಲ್ಲಿದೆ ಅಂತ ಹುಡುಕುವುದು, ಅದನ್ನು ಜತನದಿಂದ ತಂದು ತಮ್ಮ ಹಿತ್ತಲಿನಲ್ಲಿ ನೆಡುವುದು, ಅದರಲ್ಲಿ ಹೂವು ಬಿಟ್ಟಾಗ ಸಂಭ್ರಮಿಸುವುದು… ಇದು, ಬಹುತೇಕ ಎಲ್ಲ ಮಹಿಳೆಯರ ಹವ್ಯಾಸವಾಗಿತ್ತು.
ಆದರೆ, ಕಾಲ ಬದಲಾದಂತೆ ಮನೆಯ ಸುತ್ತ ತುಂಡು ಭೂಮಿಗೂ ಜಾಗ ಇಲ್ಲದಂತಾಯ್ತು. ಬೆಂಗಳೂರಿನಂಥ ಮಹಾ ನಗರದಲ್ಲಂತೂ, ಆಕಾಶದಲ್ಲಿಯೇ ಮನೆಗಳು ಎದ್ದವು. ಮಣ್ಣೇ ಇರದಿದ್ದರೆ, ಗಿಡ ನೆಡುವುದು ಹೇಗೆ? ಆದರೂ, ಹೆಣ್ಮಕ್ಕಳ ಹಸಿರು ಪ್ರೀತಿ ಕಮರಲಿಲ್ಲ. ಮನೆಯ ಬಾಲ್ಕನಿ, ಟೆರೇಸ್‌ಗಳ ಮೇಲೆಯೇ ಕೈ ತೋಟ, ಕಿಚನ್ ಗಾರ್ಡನ್ ಬೆಳೆಸತೊಡಗಿದರು. ಇಂಥವರಲ್ಲಿ ಉಡುಪಿ ಮೂಲದ ಗೃಹಿಣಿ, ವೈದೇಹಿ ನಾಯಕ್ ಕೂಡಾ ಒಬ್ಬರು. ಇವರು, ಬೆಂಗಳೂರಿನ ತಮ್ಮ ಮನೆಯ ಟೆರೇಸ್, ಬಾಲ್ಕನಿ ಮತ್ತು ಮನೆಯ ಸುತ್ತಲಿನ ಜಾಗದಲ್ಲಿ ಸುಮಾರು ಮುನ್ನೂರು ಬಗೆಯ ಹೂವು, ಹಣ್ಣು, ತರಕಾರಿ, ಗಿಡಮೂಲಿಕೆ ಮತ್ತು ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ.
ಹಸಿರೋ ಹಸಿರು
ಇವರ ಬಾಲ್ಕನಿಗೆ ಬಂದರೆ, “ಇಷ್ಟು ಕಡಿಮೆ ಜಾಗದಲ್ಲಿ, ಇಷ್ಟೊಂದು ಗಿಡ ಬೆಳೆಸಬಹುದಾ?’ ಅಂತ ನೋಡುಗರಿಗೇ ಅಚ್ಚರಿಯಾಗುವಷ್ಟು ಗಿಡಗಳಿವೆ. ಕಟ್ಟಡದ ಗುಣಮಟ್ಟಕ್ಕೆ ಅನುಗುಣವಾಗಿ, ತಾರಸಿ ಎಷ್ಟು ಭಾರ ತಡೆಯಬಲ್ಲದು ಎಂಬುದನ್ನು ಮನಗಂಡು ಸಿಮೆಂಟ್ ಕುಂಡ ಮತ್ತು ತೊಟ್ಟಿಗಳನ್ನು ಬಳಸಿ¨ªಾರೆ. ಬಾಲ್ಕನಿಗಳಲ್ಲಿ ನೇತಾಡುವ ಕುಂಡಗಳನ್ನು, ಪ್ಲಾಸ್ಟಿಕ್ ಕುಂಡಗಳನ್ನು ಇರಿಸಿ, ಹಸಿರು ಚೆಲ್ಲಿದ್ದಾರೆ. ಕೆಂಪು ಮಣ್ಣು, ತ್ಯಾಜ್ಯದಿಂದ ತಯಾರಿಸಿದ ಗೊಬ್ಬರ ಮತ್ತು ಮರಳನ್ನು 1:1:1ಅನುಪಾತದಲ್ಲಿ ಬೆರೆಸಿದ ಕುಂಡಗಳಲ್ಲಿ, ಗಿಡಗಳು ನಳನಳಿಸುವುದನ್ನು ನೋಡುವುದೇ ಚೆನ್ನ.
ಗೊಬ್ಬರ ತಯಾರಿ
ವೈದೇಹಿಯವರು, ಅಡುಗೆ ಮನೆಯ ಹಸಿ ತ್ಯಾಜ್ಯ (ತರಕಾರಿ-ಹಣ್ಣಿನ ಸಿಪ್ಪೆ, ಕೊಳೆತ ಸೊಪ್ಪು, ತರಕಾರಿ, ದೇವರಿಗಿಟ್ಟ ಒಣಗಿದ ಹೂವು)ಗಳನ್ನು ಉಪಯೋಗಿಸಿ, ಸಾವಯವ ಗೊಬ್ಬರ ತಯಾರಿಸುತ್ತಾರೆ. ಅವರ ತೋಟಕ್ಕೆ ಅಷ್ಟು ಗೊಬ್ಬರ ಸಾಕು. ಇನ್ನು, ಸೂರ್ಯನ ಬೆಳಕಿಲ್ಲದಿದ್ದರೆ ಕೆಲವು ರೀತಿಯ ಗಿಡಗಳು ಬೆಳೆಯುವುದಿಲ್ಲ. ಬೆಳಕಿನ ಅವಶ್ಯಕತೆಗೆ ತಕ್ಕಂತೆ ತರಕಾರಿ, ಸೊಪ್ಪು, ಹಣ್ಣು ಹೂವಿನ ಗಿಡಗಳನ್ನು ತಾರಸಿಯಲ್ಲಿ ಜೋಡಿಸಿಟ್ಟಿದ್ದಾರೆ. ಅಲಂಕಾರಿಕ ಗಿಡಗಳನ್ನು ಬಾಲ್ಕನಿ ಮತ್ತು ಮನೆಯ ಒಳಾಂಗಣದಲ್ಲಿ ಇರಿಸಿದ್ದಾರೆ. ಟೊಮೇಟೊ, ಮೆಣಸು, ಬೀನ್ಸ್, ಹೂಕೋಸು, ಎಲೆಕೋಸು, ಬ್ರೋಕೋಲಿ, ಸೌತೆ ಹಾಗೂ ಲೆಟ್ಯೂಸ್, ದಂಟು, ಹರಿವೆ, ಮೆಂತೆ ಮತ್ತು ಕೊತ್ತಂಬರಿ ಸೊಪ್ಪುಗಳಿಗಾಗಿ ಅಂಗಡಿಗೆ ಹೋಗುವುದೇ ಬೇಡ.
ವೈವಿಧ್ಯಮಯ ಸಸ್ಯರಾಶಿ
ಇವರ ಸಂಗ್ರಹದಲ್ಲಿ ಸುಗಂಧಿತ ಗಿಡಮೂಲಿಕೆಗಳಾದ ರೋಸೆರಿ, ಥೈಮ…, ಬಾಸಿಲ್, ಸೇಜ…, ಲ್ಯಾವೆಂಡರ್,ಚ್ಚೆವ್ವಸ್, ಪಾರ್ಸಲೀ, ಧವನ, ಮೊರಗ, ಪಚ್ಚೆಕೊರಳು, ಲೆಮನ್ ಗ್ರಾಸ್ ಇದೆ. ಔಷಧೀಯ ಸಸ್ಯಗಳಾದ ಅರಿಶಿನ, ಶುಂಠಿ, ಬ್ರಾಹ್ಮಿ, ಬಿಲ್ವ, ಲೆಮನ್ ಮಿಂಟ್, ಆಪಲ್ ಮಿಂಟ್, ಬರಗೋ ಮಿಂಟ್, ಶಂಖಪುಷ್ಪ (ಬಿಳಿ ಮತ್ತು ನೇರಳೆ),ಬೆಟ್ಟದ ನೆಲ್ಲಿಕಾಯಿ, ಭೃಂಗರಾಜ ಮತ್ತು ಮದರಂಗಿ ಬೆಳೆಸಿ¨ªಾರೆ. ಎರಡು ವಿಧದ ಬಸಳೆ ಮತ್ತು ಗರಿಕೆ ಕೂಡ ಇದೆ. ಗುಲಾಬಿ, ಗೋರಂಟಿ, ಸೇವಂತಿಗೆ, ರತ್ನಗಂಧಿ, ಮಲ್ಲಿಗೆ (6 ವಿಧ) ,ರಾತ್ರಿ ರಾಣಿ, ಸಂಪಿಗೆ, ದಾಸವಾಳ, ಚೆಂಡು ಹೂ ಮತ್ತು ಬ್ರಹ್ಮಕಮಲ, ಇವರ ತೋಟಕ್ಕೆ ಇನ್ನಷ್ಟು ಮೆರಗುಕೊಟ್ಟಿವೆ. ಬೆಣ್ಣೆ ಹಣ್ಣು, ನಿಂಬೆಹಣ್ಣು, ಜಂಬುನೇರಳೆ, ಸ್ಟ್ರಾಬೆರಿ, ಮಲ್ಬರಿ,ಸ್ಟಾರ್ ಫೂÅಟ್, ಬಿಂಬುಲಿ,ಬಾಳೆಹಣ್ಣು ,ಮಾವಿನ ಹಣ್ಣು ಅಲ್ಲದೆ ಎರಡು ವಿಧದ ಗೆಣಸು, ಮೂರು ವಿಧದ ಕೆಸುವಿನ ಗಿಡ ಕೂಡಾ ಇವರ ತೋಟದಲ್ಲಿವೆ.
ಸುಂದರವಾದ ವರ್ಲಿ ಚಿತ್ತಾರದ ಗೋಡೆಗಳ ಮಧ್ಯ ಇರುವ ಇವರ ತಾರಸಿ ತೋಟ ಮನೆಯನ್ನು ತಂಪಾಗಿಯೂ, ಮನವನ್ನು ಆಹ್ಲಾದವಾಗಿಯೂ ಇರಿಸುತ್ತಿದೆ. ತಾವೇ ಬೆಳೆದ ತಾಜಾ ಹಣ್ಣು-ತರಕಾರಿಗಳನ್ನು ಮನೆ ಮಂದಿಗೆ ಉಣಬಡಿಸುವಾಗ ಸಿಗುವ ಸಂತೃಪ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ ಅಂತಾರೆ ವೈದೇಹಿ.
“ದಿನದಲ್ಲಿ ಒಂದೆರಡು ತಾಸನ್ನು ತೋಟಕ್ಕಾಗಿ ಮೀಸಲಿಡುತ್ತೇನೆ. ಸಿಟಿಯಲ್ಲಿದ್ದರೂ, ಪ್ರಕೃತಿಯೊಂದಿಗೆ ದೂರವಿದ್ದೇನೆ ಅಂತ ಅನ್ನಿಸಿಯೇ ಇಲ್ಲ. ಕೈ ತೋಟ ಬೆಳೆಸುವುದು ಶಾರೀರಿಕ ಕ್ಷಮತೆಯನ್ನೂ, ಮಾನಸಿಕ ಚೈತನ್ಯವನ್ನೂ ಹೆಚ್ಚಿಸುತ್ತಿದೆ. ಲಾಲ್‌ಬಾಗ್, ಜಿಕೆವಿಕೆಯ ತೋಟಗಾರಿಕೆ ಕಾಲೇಜ್ ನರ್ಸರಿ, ಬನ್ನೇರು ಘಟ್ಟ ರಸ್ತೆಯಲ್ಲಿ ಇರುವ ಬಯೋಸೆಂಟರ್, ಹೇಸರಘಟ್ಟ ರಸ್ತೆಯಲ್ಲಿರುವ ಐಐಎಚ್‌ಆರ್ ಅಂತೆಲ್ಲಾ ಸುತ್ತಾಡಿ, ನನಗೆ ಬೇಕಾದ ಗಿಡ, ಬೀಜಗಳನ್ನು ಖರೀದಿಸುತ್ತೇನೆ.
-ವೈದೇಹಿ ನಾಯಕ್
-ಸುಮನ ಪೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.