ಬಾಣಂತಿ ಬಾಳು…ಬಯಸಿದ್ದೆಲ್ಲ ತಿನ್ನೋ ಹಾಗಿಲ್ಲ…


Team Udayavani, Feb 26, 2020, 5:30 AM IST

cha-12

ಹೆಣ್ಣಿನ ಬಾಳಿನಲ್ಲಿ ತಾಯ್ತನದ ಘಟ್ಟ ಬಹಳ ಮುಖ್ಯವಾದುದು. ತಾಯ್ತನ ಅಂದರೆ, ಆ ನವಮಾಸವಷ್ಟೇ ಅಲ್ಲ. ಅದರ ನಂತರದ ಬಾಣಂತನದಲ್ಲೂ ತಾಯಿ-ಮಗುವನ್ನು ಮುಚ್ಚಟೆಯಿಂದ ಕಾಪಾಡಬೇಕು. ಆ ಸಮಯದಲ್ಲಿ ತಾಯಿ, ಬಯಸಿದ್ದನ್ನೆಲ್ಲ ತಿನ್ನುವಂತಿಲ್ಲ. ಕಟ್ಟುನಿಟ್ಟಾಗಿ ಪಥ್ಯ ಮಾಡಬೇಕು. ಅಮ್ಮನೋ-ಅಜ್ಜಿಯೋ ಹೇಳಿದ್ದನ್ನು ಚಾಚೂ ತಪ್ಪದೆ ಕೇಳಬೇಕು. ಹೀಗೆ, ಬಾಣಂತನದ ವಿಧಿ-ವಿಧಾನ ಒಂದೊಂದು ಪ್ರಾಂತ್ಯದಲ್ಲೂ ಒಂದೊಂದು ರೀತಿ. ಉತ್ತರಕರ್ನಾಟಕದ ತಾಯಿಯೊಬ್ಬಳು, ತನ್ನೂರಿನ ಬಾಣಂತನದ ಬಗ್ಗೆ ಹೀಗೆ ಬರೆಯುತ್ತಾರೆ…

“ಬಸುರಿ ಹೆಣ್ಣಿಗೆ ತಿನ್ನಬೇಕೆನ್ನಿಸಿದ್ದೆಲ್ಲಾ ತಿನ್ಸಿ. ಇಲ್ಲ ಅಂದ್ರೆ ಹೊಟ್ಯಾಗಿರೋ ಕೂಸಿನ ಕಿವಿ ಸೋರ್ತದ’… ಎಂದು ಹೆರಿಗೆಯಾಗುವವರೆಗೂ ಬಯಸಿದ್ದನ್ನೆಲ್ಲಾ ತಿಂದು ಆರಾಮಾಗಿರ್ತಾರೆ ನಮ್‌ ಕಡೆ ಗರ್ಭಿಣಿಯರು. ಆದರೆ, ಹೆರಿಗೆಯಾದ ಮಾರನೇ ದಿನದಿಂದ ಶುರುವಾಗುತ್ತೆ ನೋಡಿ ದಿಗ್ಬಂದನದ ಬದುಕು. ಅದು ಮಾಡುವಂತಿಲ್ಲ, ಇದು ತಿನ್ನುವಂತಿಲ್ಲ ಎಂಬೆಲ್ಲಾ ಕಟ್ಟಪ್ಪಣೆಗಳನ್ನು ಪಾಲಿಸಲೇಬೇಕು.

ನಮ್ಮ ಕಡೆ ಬಾಣಂತಿಯರು ನಸುಕು 3-4 ಗಂಟೆಗೆ ಏಳಬೇಕು. ಹಸುಳೆಗೆ ಹಾಲುಣಿಸಿ, ತುಪ್ಪದಲ್ಲಿ ಮಾಡಿದ ಕೊಬ್ಬರಿ ಬೆಲ್ಲದ ಉಂಡೆ ತಿನ್ನಬೇಕು. ನಂತರ ಅಮ್ಮ, ಒಂದು ಬಟ್ಟಲಲ್ಲಿ ಕೊಬ್ಬರಿ ಎಣ್ಣೆ, ಅರಿಶಿಣ, ಬೇವಿನ ರಸದ ಮಿಶ್ರಣ ತರುತ್ತಾಳೆ. ಅದನ್ನು ಮೈಗೆಲ್ಲಾ ಹಚ್ಚಿಕೊಂಡು ಸ್ವಲ್ಪ ಹೊತ್ತಾದ ಮೇಲೆ, ಚೆನ್ನಾಗಿ ಕಾದ ನೀರಿಂದ ಅಜ್ಜಿ ಸ್ನಾನ ಮಾಡಿಸುತ್ತಾಳೆ. ಸ್ನಾನವೆಂದರೆ ಸೋಪು ಬಳಸುವಂತಿಲ್ಲ. ಕಡಲೇಹಿಟ್ಟನ್ನೇ ಬಳಸಬೇಕು. ಸ್ನಾನದ ನಂತರ ಮೊದಲೇ ನೇಯ್ದಿಟ್ಟ ವರಸಿನ ಮೇಲೆ ಮಲಗಬೇಕು.

ಇತ್ತ ಅಮ್ಮ ಅಷ್ಟರಲ್ಲಾಗಲೇ ದೊಡ್ಡ ಮಡಕೆಯಲ್ಲಿ ಇದ್ದಿಲಿನಿಂದ ಬೆಂಕಿ ರೆಡಿ ಮಾಡಿರುತ್ತಾಳೆ. ದೇಹಕ್ಕೆ ಬೆಂಕಿಯ ಶಾಖ ತಾಕಲು ಹೇಳಿ ಮಾಡಿಸಿಟ್ಟಂತ ಒಂದು ಮಂಚವೇ (ಬಾಣಂತಿಯರಿಗೆ ಮಾತ್ರ ಬಳಕೆ) ಈ ವರಸು. ವರಸಿನ ಕೆಳಗೆ ಬೆಂಕಿ ತಂದಿಡುತ್ತಾರೆ. ಅದರ ಶಾಖಕ್ಕೆ ಸಂಪೂರ್ಣ ಮೈಯೊಡ್ಡಿ, ನಂತರ ಬೆಂಕಿಯಲ್ಲಿ ಬೆಳ್ಳುಳ್ಳಿಯ ಸಿಪ್ಪೆ ಹಾಕಿ ಬರುವ ಹೊಗೆಯಿಂದ ಮತ್ತೆ ಕಾಯಿಸಿಕೊಳ್ಳಬೇಕು. ಕೊನೆಯಲ್ಲಿ ಲೋಬಾನ ಹಾಕಿ ಕೂದಲಿಗೆ ಶಾಖ ತಾಕಿಸಿಕೊಳ್ಳಬೇಕು.

ಇಷ್ಟೊತ್ತಿಗಾಗಲೇ ಹೊಟ್ಟೆ ಹಸಿದು ತಾಳಹಾಕುತ್ತಿರುತ್ತದೆ. ಬಿಸಿ ಬಿಸಿ ಜೋಳದ ರೊಟ್ಟಿ, ಸಪ್ಪನೆಯ ಬೇಳೆಯ ಕಟ್ಟಿನಲ್ಲಿ ನೆನೆಸಿಟ್ಟ ಅಜ್ಜಿ ಊಟಕ್ಕೆ ಕೊಡುತ್ತಾಳೆ. ಯಾವುದೇ ಕಾರಣಕ್ಕೂ 3 ತಿಂಗಳವರೆಗೂ ಖಾರ ಉಣ್ಣುವಂತಿಲ್ಲ. ಒಂದೆರಡು ತುತ್ತು ಬಾಯಲ್ಲಿ ಇಡುವಷ್ಟರಲ್ಲಿ ಕಂದಮ್ಮನ ಹೊಟ್ಟೆ ನಮ್ಮೊಂದಿಗೆ ಸ್ಪರ್ಧೆಗೆ ನಿಂತು, ಮಗು ರಾಗ ತೆಗೆಯುತ್ತದೆ. ಆಗ ಊಟವನ್ನು ಅರ್ಧಕ್ಕೇ ಬಿಟ್ಟು ಮಗುವಿಗೆ ಹಾಲುಣಿಸಬೇಕು. ಆಗ, “ನೀ ಉಣ್ಣುವಾಗ ದೇವರು ಪರೀಕ್ಷೆ ಮಾಡಲೆಂದೇ ಮಕ್ಕಳನ್ನು ಅಳಿಸುತ್ತಾನೆ’ ಎನ್ನುವ ಅಜ್ಜಿಯ ಮಾತು ಜೊತೆಗೂಡುತ್ತದೆ. ಮಧ್ಯಾಹ್ನದ ಊಟಕ್ಕೆ ಅನ್ನ, ಟೊಮೇಟೊ ಸಾರು, ಸಂಜೆಗೆ ಜೋಳದ ರೊಟ್ಟಿ, ಸಬ್ಬಸಿಗೆ, ಬೆಳ್ಳುಳ್ಳಿ, ತುಪ್ಪ ಹಾಕಿ ಮಾಡಿದ ಬೆಂಡೆಕಾಯಿ… ಇದು ಬಾಣಂತಿಯರ ಊಟದ ಮೆನು. ಪ್ರತಿ ಬಾರಿ ಊಟವಾದ ನಂತರ ಚಿಟಿಕೆ ಅಜವಾನ ತಿನ್ನಲೇಬೇಕು. ಅಪ್ಪಿ ತಪ್ಪಿ ಮಧ್ಯರಾತ್ರಿ ಯಾವುದೋ ಕಾರಣಕ್ಕೆ ಮಗು ಹಠ ಮಾಡಿ ಅಳತೊಡಗಿದರೆ, “ಕದ್ದು ಮುಚ್ಚಿ ಏನಾದ್ರೂ ತಿಂದಿಯೇನಲೇ? ಕೂಸಿಗೆ ಹೊಟ್ಟಿ ನೋಯ್ದು ಅಳಕತೈತಿ ನೋಡು’ ಅನ್ನೋ ಬೈಗುಳ ಅಜ್ಜಿಯಿಂದ. ಇದು ಬಾಣಂತನದ ಮೊದಲ ಮೂರು ತಿಂಗಳವರೆಗೆ ಮುಂದುವರಿಯುತ್ತದೆ.

ನಂತರದ ದಿನಗಳಲ್ಲಿ ಈ ನಿಯಮಗಳು ಸ್ವಲ್ಪ ಬದಲಾದರೂ, ಹೆರಿಗೆಯ ನಂತರ ಹೆಣ್ಣಿನ ಜೀವನ ಸಂಪೂರ್ಣ ಬದಲಾಗುವುದರಲ್ಲಿ ಸಂಶಯವಿಲ್ಲ. ಊಟದ ವಿಷಯದಲ್ಲಿ ತುಂಬಾನೇ ಕಟ್ಟುನಿಟ್ಟಾಗಿರಬೇಕು. ಇಲ್ಲದಿದ್ದರೆ, ಎದೆಹಾಲು ಕುಡಿಯುವ ಮಕ್ಕಳಿಗೆ ಅದರಿಂದ ತೊಂದರೆಯಾಗುತ್ತದೆ ಎಂದು ಹಿರಿಯರು ಎಚ್ಚರಿಸುತ್ತಲೇ ಇರುತ್ತಾರೆ. ತಾಸಿಗೊಮ್ಮೆ ಹಸಿವಿನಿಂದ ಅಳುತ್ತಾ, ಹಾಲಿಗಾಗಿ ಚಡಪಡಿಸುವ ಕಂದಮ್ಮನಿಂದ ನಿದ್ದೆಯೂ ಸರಿಯಾಗಿ ಬರುವುದಿಲ್ಲ. ಆದರೂ, ಹೆಣ್ಮಕ್ಕಳು ಅದನ್ನೆಲ್ಲಾ ಎಂಜಾಯ್‌ ಮಾಡುತ್ತಲೇ ಸಹಿಸಿಕೊಳ್ಳುತ್ತಾರೆ ಅನ್ನೋದು ಬೇರೆ ಮಾತು. ಬಾಣಂತನದ ಆಕೆಯ ಕಷ್ಟವನ್ನು ಕಡಿಮೆ ಮಾಡುವುದು ಅಮ್ಮ ಮತ್ತು ಅಜ್ಜಿಯರು. ತನ್ನ ತಾಯಿಯ ಸಂಪೂರ್ಣ ಬೆಲೆ ಮಗಳಿಗೆ ಅರ್ಥವಾಗುವುದೇ ಬಾಣಂತನದ ಸಮಯದಲ್ಲಿ ಅನ್ನಬಹುದು. ಯಾಕಂದ್ರೆ, ಅಮ್ಮ/ ಅಜ್ಜಿ ಮುತುವರ್ಜಿಯಿಂದ ಬಾಣಂತನ ಮಾಡದಿದ್ದರೆ, ಅವರು ಹೇಳುವುದನ್ನು ಬಾಣಂತಿ ಪಾಲಿಸದಿದ್ದರೆ, ಮುಂದೆ ತಾಯಿ-ಮಗುವಿನ ಆರೋಗ್ಯದಲ್ಲಿ ಏರುಪೇರಾಗಬಹುದು. ಆ ಹೆದರಿಕೆಯಿಂದಲಾದರೂ ಹೆಣ್ಮಕ್ಕಳು ಬಾಯಿ ಚಪಲಕ್ಕೆ ಕಡಿವಾಣ ಹಾಕುವುದು ಸುಳ್ಳಲ್ಲ.

-ಸೌಮ್ಯಶ್ರೀ ಸುದರ್ಶನ್‌ ಹಿರೇಮಠ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.