ನಿಮ್ಮ ಬಾಯ್‌ಫ್ರೆಂಡ್‌ಗೆ ಒಂದು ಟೆಸ್ಟ್‌

Team Udayavani, Feb 14, 2018, 11:45 AM IST

by-fr.jpg

ಪ್ರೀತಿ ಆಯ್ತು. ಅವನೊಂದಿಗೆ ಕೈಕೈ ಹಿಡಿದು ಸುತ್ತಾಡಿದ್ದೂ ಆಯ್ತು. ಮಾಲ್‌ನಲ್ಲಿ ಸಿನಿಮಾ ನೋಡುತ್ತಾ, ಭುಜಕ್ಕೆ ಭುಜ ಆನಿಸಿ ಪಾಪ್‌ಕಾರ್ನ್ ತಿಂದಿದ್ದೂ ಆಯ್ತು. ಈಗ ಈಕೆಯ ಹೃದಯದಲ್ಲಿ ಪ್ರೀತಿ ಮಾಗಿದೆ. ಅದನ್ನು ಸಾವಿರ ಸಲ ಅವನಲ್ಲಿ ಹೇಳಿಕೊಂಡಿದ್ದಾಳೆ ಕೂಡ. ಆದರೆ ಆತನದ್ದು ಒಂದೇ ರಾಗ, “ಇಷ್ಟು ಬೇಗ ಮದ್ವೆ ಬೇಡ’ ಅಂತ. ಆಕೆಯ ಎದೆಯಲ್ಲಿ ಢವಢವ. ಇವನ ಪ್ರೀತಿ ನಿಜನಾ? ಇಲ್ಲಾ ಕೈ ಕೊಡ್ತಾನಾ? ಇಂಥ ವೇಳೆ ಬಾಯ್‌ಫ್ರೆಂಡ್‌ ಅನ್ನು ಟೆಸ್ಟ್‌ ಮಾಡೋದು ಹೇಗೆ? ಇಲ್ಲಿವೆ ಕೆಲವು ಟೆಕ್ನಿಕ್ಸ್‌…

1. ಅವನ ಫ್ಯಾಮಿಲಿ ಪ್ರೋಗ್ರಾಮ್‌ಗೆ ನೀವು ಆಹ್ವಾನಿತರಲ್ಲವೇ?
ಒಂದು ವೇಳೆ ನಿಮ್ಮ ಪ್ರೀತಿಯನ್ನು ಆತ ಗೌರವಿಸಿದ್ದೇ ಆದಲ್ಲಿ, “ಇವಳೂ ನನ್ನ ಕುಟುಂಬದ ಭಾಗ’ ಎಂದು ನಿಮ್ಮನ್ನು ಗೌರವಿಸುತ್ತಿರುತ್ತಾನೆ. ಆತನ ಕುಟುಂಬದ ಯಾವುದೇ ಶುಭಸಮಾರಂಭದಲ್ಲೂ ನಿಮ್ಮ ಉಪಸ್ಥಿತಿಯನ್ನು ಬಯಸುತ್ತಿರುತ್ತಾನೆ. ಇಲ್ಲ ಹುಡುಗನ ಮನೇಲಿ ಏನ್‌ ಕಾರ್ಯಕ್ರಮ ನಡೀತೋ ನಂಗೆ ಗೊತ್ತೇ ಇಲ್ಲ ಅಂತ ನೀವಿದ್ದರೆ, ಆತನ ಪ್ರೀತಿಯನ್ನು ಒರೆಗೆ ಹಚ್ಚುವುದು ಒಳ್ಳೇದು.

2. ಭವಿಷ್ಯದ ಬಗ್ಗೆ ಹೇಳಿಕೊಳ್ಳುತ್ತಿಲ್ಲವೇ?
ನೀನು ಚಿನ್ನ, ನೀನು ರನ್ನ, ನಿನ್ನ ಕಣ್ಣು ಐಶ್ವರ್ಯಾ ರೈ ಥರಾ ಇದೆ… ಹೀಗೆಲ್ಲ ಹೊಗಳಿ ಆತ ಅಟ್ಟಕೇರಿಸುತ್ತಿದ್ದಾನಾ? ಸಂತೋಷ. ಆದರೆ, ಒಂದು ಅನುಮಾನವೂ ಇರಲಿ. ಯಾಕೆ ಗೊತ್ತಾ? ಮದುವೆಯಾಗ ಬಯಸುವ ಹುಡುಗರು ಯಾವತ್ತೂ ಭವಿಷ್ಯದ ಕನಸುಗಳನ್ನು ಹೆಚ್ಚೆಚ್ಚು ಹಂಚಿಕೊಳ್ಳುತ್ತಿರುತ್ತಾರೆ.

3. ನಿಮ್ಮ ಕನಸಿನ ಭಾಗವಾಗಿದ್ದಾನಾ?
ಆತನ ಕೈಕೈ ಹಿಡಿದು ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಹೇಳಿಕೊಳ್ತೀರಿ, ಕೆಲಸದ ಬಗ್ಗೆ ಹೇಳಿಕೊಳ್ತೀರಿ, ನಾಳೆ ನಾನು ಹೀಗಿರಬೇಕು- ಹಾಗಿರಬೇಕು ಅಂತೆಲ್ಲ ಕನಸುಗಳನ್ನು ಅವನೆದುರು ಹರವಿಡುತ್ತೀರಿ. ಹೀಗೆಲ್ಲ ಹೇಳುವಾಗ ಆತ ಇದಕ್ಕೆ ಸ್ಪಂದಿಸುತ್ತಿದ್ದಾನಾ? ಗಮನಿಸಿ. ಇದಕ್ಕೆ ಪೂರಕವಾಗಿ ಮಾತಾಡುತ್ತಿದ್ದಾನಾ? ನೋಡಿ. ಇಲ್ಲಾಂದ್ರೆ, ಆತ ಕೈಕೊಡಲು ಅರ್ಹ.

4. ಅವನೇನಾದ್ರು ಬಚ್ಚಿಡ್ತಿದ್ದಾನಾ?
ಆತ ತನ್ನ ಅಕ್ಕ- ತಂಗಿಯರು, ಗೆಳೆಯ- ಗೆಳತಿಯರ ಎದುರು “ಇವಳು ನನ್ನ ವುಡ್‌ಬಿ. ಇವಳನ್ನು ನಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಿದ್ದೀನಿ, ಮುಂದೆ ಮದ್ವೆ ಆಗ್ತಿàನಿ’ ಅಂತ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾನಾ? ಒಂದು ವೇಳೆ ತನ್ನ ಪ್ರೇಮವನ್ನು ನಿಗೂಢವಾಗಿ ಇಟ್ಟಿದ್ದಾನೆ ಅಂತಾದರೆ, ಕಿವಿಹಿಂಡಿ ಬುದ್ಧಿ ಹೇಳಿ. ಪ್ರೀತಿಯನ್ನು ಗಟ್ಟಿ ಮಾಡಿಕೊಳ್ಳಿ.

5. ಗಂಡನ ಗುಣಗಳು ಅವನಲ್ಲಿ ಕಾಣುತ್ತಿವೆಯಾ?
ನೀವು ಪ್ರೀತಿಸುತ್ತಿರುವ ಹುಡುಗನೊಳಗೆ ಒಬ್ಬ ಆದರ್ಶ ಗಂಡನ ವ್ಯಕ್ತಿತ್ವವನ್ನು ಹುಡುಕುವ ಪ್ರಯತ್ನ ಮಾಡಿ. ಆತನ ಪ್ರತಿ ನಡತೆಯನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಿರಿ. ಇಲ್ಲಾ, ಇವನು ಪ್ರೀತಿ ಅಂತ ಹೇಳಿ ನಾಟಕ ಆಡ್ತಿದ್ದಾನೆ ಅಂತನ್ನಿಸಿದರೆ, ಆದಷ್ಟು ಬೇಗ ಆ ಸುಳಿಯಿಂದ ಹೊರಬನ್ನಿ.

6. ಲಿವ್‌ ಇನ್‌ ಅಂತ ಕತೆ ಹೊಡೀತಾನಾ?
ನೀವು ಇಷ್ಟಪಟ್ಟ ಹುಡುಗನಿಗೆ ಲಿವ್‌ ಇನ್‌ ಸಂಬಂಧದಲ್ಲಿ ಹೆಚ್ಚು ಆಸಕ್ತಿ ಇದೆಯಾ? ಮದುವೆ ಸಂಪ್ರದಾಯವನ್ನು ಆತ ಗೌರವಿಸುತ್ತಿದ್ದಾನಾ? ಈ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಿ. ಅದ್ಧೂರಿ ಮದುವೆ ಅಲ್ಲದಿದ್ದರೂ, ಸರಳ ಮದುವೆಗಾದರೂ ಅವನ ಒಲವು ಇದೆಯಾ ಎಂಬುದನ್ನಾದರೂ ಪರಿಶೀಲಿಸಿ.

ಟಾಪ್ ನ್ಯೂಸ್

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Bangla-immigrtnst

ಆಪರೇಷನ್‌ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು

Bengaluru-Techi

Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾವು: ಪ್ರಾಣಿಗಳಿಗೆ ಕ್ವಾರಂಟೈನ್‌

Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್‌

1

540 ಅಡಿ ಆಳದ ಬೋರ್​ವೆಲ್​ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ಮಧ್ಯಾಹ್ನ ದಿನಾಂಕ ನಿಗದಿ

Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.