ಮೌನ ಒಂದೇ ಆಭರಣವಲ್ಲ; ಕಿಕ್ಕರ್- ಜುಮ್ಮಂತ ಜುವೆಲರಿ ತೊಡಿ!
Team Udayavani, Mar 15, 2017, 3:50 AM IST
ಆಭರಣಗಳ ಫ್ಯಾಷನ್ ಬದಲಾಗುತ್ತಿದೆ. ಕ್ವಾಲಿಂಗ್ ಪೇಪರ್ ಜುವೆಲರಿ ಹಾಗೂ ಸಿಲ್ಕ… ತ್ರೆಡ್, ಮಡ್ ಜುವೆಲರಿ ಸಿಲ್ಕ… ತ್ರೆಡ್ ಜುವೆಲರಿ ಈಗ ಮಹಿಳೆಯರ ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ.ಎಲ್ಲಾ ವಯೋಮಾನದವರಿಗೆ ಸರಿ ಹೊಂದುವ ಈ ಜುವೆಲರಿಗಳು, ಎಲ್ಲಾ ವರ್ಗದ ಮಹಿಳೆಯರ ಹಾಟ… ಫೇವರೆಟ… ಆಗಿವೆ. ಕಾಲೇಜು ಯುವತಿಯರಿಂದ ಹಿಡಿದು ಆಫೀಸ್‌ಗೆ ಹೊಗುವ ಮಹಿಳೆಯರು ಸಹ ಈ ಮಾಡ್ರನ್ ಜುವೆಲರಿಗಳಿಗೆ ಮನಸೋತಿದ್ದಾರೆ.
ಸಿಲ್ಕ… ತ್ರೆಡ್ ಜುವೆಲರಿ
ಸದ್ಯದ ಟ್ರೆಂಡ್ ಆಗಿರುವ ಸಿಲ್ಕ… ತ್ರೆಡ್ ಜುವೆಲರಿಗಳನ್ನು, ಯುವತಿಯರು ಸಲ್ವಾರ್ ಮೇಲೆ ಮತ್ತು ಸೀರೆಗಳ ಮೇಲೆ ಧರಿಸಬಹುದು.
*ವಿವಿಧ ಕಲರ್ ಮತ್ತು ವೆರೈಟಿ ಡಿಸೈನ್‌ಗಳಲ್ಲಿ ಈ ಸಿಲ್ಕ… ತ್ರೆಡ್ ಜುವೆಲರಿ ಲಭ್ಯ.
*ಎಲ್ಲಾ ಡ್ರೆಸ್‌ಗಳ ಮೇಲೂ ಧರಿಸಬಹುದಾಗಿದ್ದು, ಅದರಲ್ಲೂ ಜೀರಿ… ಮತ್ತು ಚೂಡಿದಾರ್ ಜೊತೆ ಇವುಗಳನ್ನು ಧರಿಸುವುದರಿಂದ ವಿಭಿನ್ನವಾಗಿ ಕಾಣಬಹುದು.
*ಸಿಲ್ಕ… ತ್ರೆಡ್ ಜುಮುಕಿಗಳು ಮತ್ತು ಬಳೆಗಳು ಸೀರೆಗಳ ಮೇಲೆ ಟ್ರೆಡಿಷನಲ… ಲುಕ್ ನೀಡುತ್ತದೆ.
ಮಡ್ ಜುವೆಲರಿ
ಮಡ್ ಜುವೆಲರಿ ಮಹಿಳೆಯರಿಗೆ ಎಥಿಕ್(ಸಾಂಪ್ರದಾಯಿಕ) ಲುಕ್ ನೀಡುತ್ತವೆ.
*ಕಾಟನ್ ಸೀರೆಗಳ ಮೇಲೆ ಮಹಿಳೆಯರು ಡಾರ್ಕ್ ಕಲರ್ ಮಡ್ ಜುವೆಲರಿ ಧರಿಸುವುದರಿಂದ ಸ್ನೇಹಿತರ ಬಳಗದಲ್ಲಿ ಮಿಂಚಬಹುದು.
*ಕಾಲೇಜು ಯುವತಿಯರು ಮಾಡ್ರನ್ ಡ್ರೆಸ್‌ಗಳ ಮೇಲೂ ಈ ಜುವೆಲರಿ ಧರಿಸಿ ಯುನಿಕ್ ಆಗಿ ಕಾಣಬಹುದು.
ಟ್ರೈಬಲ… ಜುವೆಲರಿ
ಭಾರತೀಯರಿಗೆ ಇದೊಂದು ವಿನೂತನ ಕಾನ್ಸೆಪ್ಟ್. ಬಟ್ಟೆಗಳು, ಟ್ಯಾಟೂಗಳಾದ ಮೇಲೆ ಇದೀಗ ಆಭರಣ ಜಗತ್ತಿಗೂ ಈ ವಿನ್ಯಾಸ ಕಾಲಿಟ್ಟಿದೆ. ಎಲ್ಲಾ ವಯೋಮಾನದ ಮಹಿಳೆಯರು ಈ ಜುವೆಲರಿ ಧರಿಸಬಹುದು.
*ಡಿಸೈನರ್ ಸೀರೆಗಳ ಮೇಲೆ ಈ ಜುವೆಲರಿಯ ಅಂದ ಹೆಚ್ಚುತ್ತದೆ.
*ಮಾಡ್ರನ್ ಡ್ರೆಸ್ ಮಾತ್ರವಲ್ಲದೆ ಸಾಂಪ್ರದಾಯಿಕ ಉಡುಗೆಗಳಿಗೂ ಈ ಜುವೆಲ್ಲರಿ ಹೊಂದುತ್ತದೆ.
ಕ್ವಾಲಿಂಗ್ ಪೇಪರ್ ಜುವೆಲರಿ
ಇಲ್ಲಿ ನೀಡಲಾಗಿರುವ ಜುವೆಲ್ಲರಿ ಬಗೆಗಳಲ್ಲಿ ಅನೇಕವು ಯುವತಿಯರ ಮೆಚ್ಚುಗೆ ಗಳಿಸಿವೆ ಎಂಬುದೇನೋ ನಿಜ. ಅದರಲ್ಲೂ ಕ್ವಾಲಿಂಗ್ ಜುವೆಲರಿ ಸ್ಕೂಲ… ಹುಡುಗಿಯರ ಮತ್ತು ಕಾಲೇಜ್ ವಿದ್ಯಾರ್ಥಿನಿಯರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ. ಬೆಲೆಯೂ ಕಡಿಮೆ.
*ಸೀರೆಗಳ ಮೇಲೆ ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದು.
*ಮಾಡ್ರನ್, ಸಾಂಪ್ರದಾಯಿಕ ದಿರಿಸುಗಳೆರಡನ್ನೂ ಮಿಕ್ಸ್ ಮಾಡಿ ಧರಿಸುವವರಿಗೂ ಈ ಜುವೆಲ್ಲರಿ ಸೂಕ್ತ.
ಕಾವ್ಯ ಹೆಚ್.ಎನ್, ದಾವಣಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
German: ಮಾರುಕಟ್ಟೆಗೆ ನುಗ್ಗಿದ ಕಾರು, ಇಬ್ಬರು ಸಾವು, 60ಕ್ಕೂ ಹೆಚ್ಚು ಗಾಯ, ವೈದ್ಯನ ಬಂಧನ
Prithvi Shaw: ಮುಂಬೈ-ಶಾ ನಡುವೆ ಆರೋಪ ಸಮರ; ಅರ್ಧ ಗೊತ್ತಿದ್ದು ಮಾತಾಡಬೇಡಿ ಎಂದ ಶಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.