ಕಾಲಿಗೂ ಬೇಕು ಏಸಿ!
Team Udayavani, Mar 8, 2017, 3:45 AM IST
ಸೌಂದರ್ಯ ಎಂದಾಗ ಮುಖಕ್ಕೆ ಮೇಕಪ್ ಹಚ್ಚುತ್ತೇವೆ, ಕೇಶವಿನ್ಯಾಸ ಮಾಡಿಕೊಳ್ಳುತ್ತೇವೆ, ಅಂದದ ಬಟ್ಟೆಬರೆ ಉಡುತ್ತೇವೆ. ಸಮಯವಿದ್ದರೆ, ಬಟ್ಟೆಗೆ ತಕ್ಕ ಪಾದರಕ್ಷೆಗಳನ್ನೂ ಹಾಕಿಕೊಳ್ಳುತ್ತೇವೆ. ಆದರೆ ಪಾದಗಳ ಆರೈಕೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ, ಸಮೀಕ್ಷೆ ಒಂದರ ಪ್ರಕಾರ ಮನುಷ್ಯ ಅತಿ ಹೆಚ್ಚು ನಿರ್ಲಕ್ಷಿಸುವ ದೇಹದ ಅಂಗ ಎಂದರೆ ಕಾಲುಗಳು.
ಪೆಡಿಕ್ಯೂರ್ ಮಾಡಿಸಿಕೊಳ್ಳಲು ಬಿಡುವಿಲ್ಲ ಎಂದೋ, ಅಥವಾ ಪಾದಗಳ ಬಗ್ಗೆ ಕಾಳಜಿ ವಹಿಸಲು ಆಗುವುದಿಲ್ಲ ಎಂದೋ ಜನರು ಕಾಲ್ಗಳನ್ನು ನಿರ್ಲಕ್ಷಿಸುತ್ತಾರೆ. ಹಾಗಾಗಿ ನಾವು ಓಪನ್ ಶೂಸ್, ಚಪ್ಪಲಿ, ಫ್ಲಿಪ್ ಫ್ಲಾ±Õ…, ಸ್ಯಾಂಡಲ್ಸ… ಅಥವಾ ಗ್ಲಾಡಿಯೇಟರ್ ಹಾಕಿಕೊಳ್ಳಲು ಹಿಂದೆ- ಮುಂದೆ ನೋಡುತ್ತೇವೆ. ಒಡೆದ ಹಿಮ್ಮಡಿ ಕಾಣಿಸಿಕೊಂಡರೆ ಮುಜುಗರವಾಗುತ್ತದೆ ಎಂದು ಬಹುತೇಕ ಮಂದಿ ಶೂ, ಬ್ಯಾಲರೀನಾ ಶೂಸ್, ಸ್ಲಿಪ್-ಆ®Õ…, ಮುಂತಾದ ಪಾದರಕ್ಷೆಗಳನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ.
ಆದರೀಗ ಹಿಮ್ಮಡಿ ಮುಚ್ಚುವಂಥ ಸ್ಯಾಂಡಲ್ಸ… ಕೂಡಾ ಮಾರುಕಟ್ಟೆಯಲ್ಲಿ ಲಭ್ಯ! ಹಿಮ್ಮಡಿಯೂ ಮುಚ್ಚುತ್ತೆ ಎಂದಾದರೆ ಇದು ಓಪನ್ ಶೂ ಹೇಗಾಯಿತು? ಇದಕ್ಕೂ ಶೂ ಗೂ ಏನು ವ್ಯತ್ಯಾಸ ಎಂದು ಯೋಚಿಸುತ್ತಿರುವಿರಾದರೆ ಇಲ್ಲಿದೆ ಉತ್ತರ. ಈ ಪಾದರಕ್ಷೆ ಪಾದವನ್ನು ಸಂಪೂರ್ಣವಾಗಿ ಕವರ್ ಮಾಡುವುದಿಲ್ಲ. ಬದಲಾಗಿ ಕೇವಲ ಕಾಲ ಬೆರಳುಗಳು ಮತ್ತು ಹಿಮ್ಮಡಿಯನ್ನು ಮುಚ್ಚುತ್ತದೆ. ಆದ್ದರಿಂದ ಇದನ್ನು ಇತರ ಶೂ ವಿನಂತೆ ಸಾಕÕ… ಜೊತೆ ಧರಿಸುವಂತಿಲ್ಲ!
ಬೇಸಿಗೆ ಶುರುವಾಗಿದೆ. ಇಂಥ ಸೆಕೆಯಲ್ಲೂ ಶೂಸ್ ಹಾಕೊಂಡು ಓಡಾಡೋದು ಕಷ್ಟ. ಬೆವರಿನಿಂದ ಶೂ ದುರ್ನಾತ ಕೂಡ ಬೀರಲು ಶುರು ಮಾಡುತ್ತೆ ಈ ಸಮಯದಲ್ಲಿ! ಆದ್ದರಿಂದ ಶಾಲಾ ಮಕ್ಕಳು ಯುನಿಫಾರ್ಮ್ ಎಂದು ಮತ್ತು ಆಫೀಸ್ ಹೋಗೋರು ಫಾರ್ಮಲ್ಸ… ಎಂದು ಶೂಸ್ ಧರಿಸಲೇಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಮಿಕ್ಕವರು ಹವಾಯಿ ಚಪ್ಪಲಿ ಹಾಕಬೇಕೆಂದಲ್ಲ! ಸ್ಟೈಲಿಶ್ ಮತ್ತು ಟ್ರೆಂಡಿ ಓಪನ್ ಶೂಸ್‌ನ ಟ್ರೈ ಮಾಡಿ ನೋಡಿ! ಏಕೆಂದರೆ ಕಾಲಿಗೂ ಬೇಕು ಏಸಿ, ಸ್ಟೈಲಿಶ್ ಏಸಿ! ಇದುವೇ ಸಮ್ಮರ್ ಫೂಟ್‌ವೇರ್.
ಕಾಲ್ಗಗಂಟಿನವರೆಗೆ ಇರುವ ಓಪನ್ ಶೂಗಳನ್ನೂ ಸೀರೆ, ಚೂಡಿದಾರ್, ಲಂಗ, ಪ್ಯಾಂಟ್, ಎಲ್ಲದರ ಜೊತೆ ಹಾಕಿಕೊಳ್ಳಬಹುದು. ಆದರೆ ಮೊಣಕಾಲವರೆಗೆ ಕಟ್ಟುವಂತಹ ಗ್ಲಾಡಿಯೇಟರ್/ ರೋಮನ್ ಸ್ಯಾಂಡಲ್ಸ… ಮುಂತಾದ ಮೆಟ್ಟು ಕೇವಲ ಸಾರ್ಟ್ ಡ್ರೆಸ್‌ಗಳ ಜೊತೆ ಹಾಕಿಕೊಳ್ಳಬಹುದು. ಇನ್ನು ಇಂಥ ಚಪ್ಪಲಿಗಳಲ್ಲಿ ankle ಸಪೋರ್ಟ್ ಇದ್ದರೆ, ಇವುಗಳನ್ನು ಡಾನ್ಸ್ ಫೋ›ಔ ನಲ್ಲೂ ಹಾಕಬಹುದು! ankle ಸಪೋರ್ಟ್ ಇಲ್ಲದ ಚಪ್ಪಲಿಗಳಲ್ಲಿ ಡಾನ್ಸ್ ಮಾಡುವುದು ಕಷ್ಟ. ಏಕೆಂದರೆ ಅವು ಬಾರಿ, ಬಾರಿ ಬಿಚ್ಚಿ ಹೋಗುತ್ತವೆ.
ಓಪನ್ ಶೂಸ್ ಫ್ಲಾಟ… ಆಗಿರಬೇಕೆಂದು ನಿಯಮ ಏನಿಲ್ಲ. ಇವುಗಳಲ್ಲೂ ಹೈ ಹೀಲ್ಡ… ಆಯ್ಕೆಗಳು ಇವೆ. ಇಂತಹ ಚಪ್ಪಲಿ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಲಭ್ಯ ಇವೆ. ಅಷ್ಟಕ್ಕೂ ಅಂದಿನ ಕಾಲದಲ್ಲಿ ರೋಮ…ನ ಪುರುಷರು ಇಂತಹ ಮೆಟ್ಟು ಧರಿಸುತ್ತಾ ಇದ್ದುದರಿಂದಲೇ ಇಂತಹ ಚಪ್ಪಲಿಗಳಿಗೆ ರೋಮನ್ ಸ್ಯಾಂಡಲ್ಸ್, ಗ್ಲಾಡಿಯೇಟರ್ ಎಂಬ ಹೆಸರು ಬಂದಿರೋದು. ಮಕ್ಕಳೂ ಧರಿಸಬಲ್ಲ ಶೂಸ್ ಮಾರುಕಟ್ಟೆಯಲ್ಲಿ ಲಭ್ಯ. ಕೇವಲ ಲೇಸ್ ವರ್ಕ್, ಸ್ಟ್ರಾ±Õ… ಮತ್ತು ದಾರಗಳು ಅಲ್ಲದೆ ಇವುಗಳಲ್ಲಿ ಎಂಬ್ರಾಯxರಿ, ಮಿರರ್ ವರ್ಕ್ ಮತ್ತು ಊಹಿಸಲೂ ಆಗದಷ್ಟು ವಿಭಿನ್ನ ಬಣ್ಣಗಳು, ವಿನ್ಯಾಸಗಳು ಮತ್ತು ನಮೂನೆಗಳಿವೆ! ಹಾಗಾಗಿ ಓಪನ್ ಶೂಸ್ ಟ್ರೈ ಮಾಡಿ. ಹಾಕಿದ್ದ ಬಟ್ಟೆ ಸಿಂಪಲ… ಆದರೂ ಪರ್ವಾಗಿಲ್ಲ, ತೊಡುವ ಚಪ್ಪಲಿ ವಿಶಿಷ್ಟ ವಾಗಿದ್ದರೆ ಜನರು ನೋಟಿಸ್ ಮಾಡೇ ಮಾಡುತ್ತಾರೆ!
– ಅದಿತಿಮಾನಸ ಟಿ ಎಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.