ಇದೇ ಫಸ್ಟ್ ಹೆರಿಗೇನಾ? : ಗರ್ಭಿಣಿಯರಿಗೆ ಕಿವಿಮಾತು
Team Udayavani, Jan 6, 2021, 7:07 PM IST
ಜೀವನದಲ್ಲಿ ಈ ಪ್ರಥಮ ಬಾರಿಯ ಅನುಭವಗಳಿಂದ ಸಿಗುವಷ್ಟುಸಂತಸ, ನೆಮ್ಮದಿ ಮುಂದಿನ ಸಲದಅನುಭವಗಳಿಂದ ಸಿಗುವುದಿಲ್ಲ. ಶಾಲೆಯಲ್ಲಿಆಸಕ್ತಿ ಇರುವುದರಲ್ಲಿ ಮೊದಲ ಸ್ಥಾನ, ಮೊದಲ ವೃತ್ತಿ, ಮೊದಲ ಸಂಬಳ, ಮೊದಲ ಪ್ರಮೋಷನ್… ಹೀಗೆ ಹತ್ತು ಹಲವು. ಹಾಗೆಯೇ ವೈಯಕ್ತಿಕ ಜೀವನದಲ್ಲಿ ಮೊದಲ ಬಾರಿಗೆ ಗರ್ಭಿಣಿಯಾಗುವುದು, ಮೊದಲಬಾರಿಯ ಸೀಮಂತ, ಮೊದಲ ಹೆರಿಗೆ… ಇವುಗಳೆಲ್ಲಾ ವಿಶೇಷವೇ.. ಪ್ರಗ್ನೆನ್ಸಿ ಹಾಗೂ ಡೆಲಿವರಿ ಸಮಯದಲ್ಲಿ ಹಲವಾರು ವಿಷಯಗಳನ್ನು ತಿಳಿದುಕೊಳ್ಳಬೇಕು. ಅದನ್ನು ಓದುವ ಮೂಲಕ ತಿಳಿದುಕೊಳ್ಳಿ,
ಕೆಲವೊಂದು ವೀಡಿಯೋಸ್ ನೋಡಿ ತಿಳಿದುಕೊಳ್ಳಿ ಅಥವಾ ದಿ ಬೆಸ್ಟ್ ಡೇಟಾ ಬೇಸ್ ಅಂದರೆ ನಮ್ಮಗಳ ಅಮ್ಮಂದಿರು. ಗರ್ಭಿಣಿಯಾಗುವುದು ಹಾಗೂ ಡೆಲಿವರಿ ಅಷ್ಟೊಂದು ಸುಲಭದ ಮಾತಲ್ಲ. ಒಂಬತ್ತು ತಿಂಗಳು ಹಾಗೂ ನಂತರದ ಬಾಣಂತಿಜೀವನವನ್ನು ಸುಲಭವಾಗಿ ಹಾಗೂ ಖುಷಿಯಿಂದ ಕಳೆಯಲುಕೆಲವೊಂದಿಷ್ಟು ಮಾಹಿತಿಗಳನ್ನುಕಲೆಹಾಕಬೇಕು. ನಾನು ಇತ್ತೀಚೆಗಷ್ಟೇ ಅಮ್ಮನಾದೆ. ನನ್ನ ಅನುಭವದ ಆಧಾರದಮೇಲೆ, ಈಗ ಗರ್ಭಿಣಿಯಾಗಿರುವವರಿಗೆ ಹಾಗೂ ಇನ್ನೇನು ಡೆಲಿವರಿ ಡೇಟ್ ಹತ್ತಿರ ಬರುತ್ತಾ ಇರುವವರಿಗೆ ನಾನೊಂದಿಷ್ಟು ಟಿಪ್ಸ್ ಕೊಡಬಯಸುವೆ.
ಕರುಳ ಕುಡಿಯನ್ನು ಹೊತ್ತಿರುವವರಿಗೆ :
- ನಿಮ್ಮದೇ ರಕ್ತಹಂಚಿಕೊಂಡು ಹುಟ್ಟುವ ಮಗುವೊಂದು ನಿಮ್ಮ ಗರ್ಭದಲ್ಲಿದೆ.ಹೀಗಾಗಿ ದೈಹಿಕ ವಿಶ್ರಾಂತಿ ಹಾಗೂ ಮಾನಸಿಕ ನೆಮ್ಮದಿ ಅತ್ಯಗತ್ಯ. ಹಾಡುಹೇಳುವುದು ಅಥವಾ ಕೇಳುವುದು, ಟಿ. ವಿ ನೋಡುವುದು ಅಥವಾ ಆಪ್ತರೊಂದಿಗೆ ಸಮಯ ಕಳೆಯುವುದು, ಹೀಗೆ ನಿಮಗೆ ಯಾವುದರಿಂದ ಖುಷಿ, ನೆಮ್ಮದಿ ಸಿಗುವುದೋ ಅದನ್ನೇ ಮಾಡಿ.
- ನಾನು ಗರ್ಭಿಣಿ, ನನಗೆ ಬಯಕೆ ಆಗ್ತಾ ಇದೆ ಎಂದು ಕಂಡ ಕಂಡದ್ದೆಲ್ಲಾತಿನ್ನೋಕೆ ಹೋಗಬೇಡಿ. ಗರ್ಭಿಣಿ ಬಯಕೆ ತೀರಿಸಿಕೊಳ್ಳಿ, ಆದರೆಆಹಾರದ ಪ್ರಮಾಣ ಹಾಗೂತೆಗೆದುಕೊಳ್ಳುವ ಸಂಖ್ಯೆಯಲ್ಲಿ ಮಿತಿಯಿರಲಿ.
- ದೇಹದ ತೂಕವನ್ನು ಆಗಾಗ ಪರೀಕ್ಷಿಸುತ್ತಾ ಇರಬೇಕು. ಈಗಿನ ಡಾಕ್ಟರ್ಸ್ ಬಳಿ ಇವೆಲ್ಲಾ ಸವಲತ್ತುಗಳಿರುತ್ತವೆ. ಸಕ್ಕರೆ ಅಂಶವಿರುವುದನ್ನು ಜಾಸ್ತಿ ತಿನ್ನಬಾರದು. ಸಿಹಿ ಇಷ್ಟಪಡುವುವವರು ಹಿತಮಿತವಾಗಿ ಸೇವಿಸಿದರೆ ಒಳ್ಳೆಯದು. ಇಲ್ಲವಾದಲ್ಲಿ\ ದೇಹದ ತೂಕ ಹೆಚ್ಚಾಗಿ ಮುಂದೆ ತೊಂದರೆ ಆಗಬಹುದು.
- ಗರ್ಭಿಣಿಯಾದೆ ಎಂದು ವ್ಯಾಯಾಮವನ್ನು ಪೂರ್ಣವಾಗಿ ನಿಲ್ಲಿಸುವುದು ದೊಡ್ಡ ತಪ್ಪು! ಉತ್ತಮ ಗಾಳಿ ಸೇವನೆ, ಸೂರ್ಯನ ಹದವಾದ ಬಿಸಿಲು ಮೈಗೆ ಸೋಕಲೇಬೇಕು. ವಾಕಿಂಗ್, ಡಾಕ್ಟರ್ ಸೂಚಿಸುವ ಮತ್ತೆ ಕೆಲವೊಂದಿಷ್ಟು ವ್ಯಾಯಾಮ/ ಯೋಗ ಮಾಡಿ.
- ಶುದ್ಧ ನೀರನ್ನು ಆಗಾಗ ಕುಡಿಯುತ್ತಿರಬೇಕು. ಹಣ್ಣುಗಳನ್ನು ಸೇವಿಸಿ. ಇನ್ನೊಂದು ಮಾತು. ಎಲ್ಲಾ ಹಣ್ಣುಗಳನ್ನೂ ಸೇವಿಸುವಂತಿಲ್ಲ. ನೆನಪಿರಲಿ.
ಡೆಲಿವರಿ ಡೇಟ್ ಹತ್ತಿರ ಇರುವವರಿಗೆ:
- ನೀವು ಡೆಲಿವರಿಗೆ ಸೇರಲಿರುವ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗೆಗೆ ತಿಳಿದುಕೊಳ್ಳಿ.
- ಕೊನೆಯ ಕ್ಷಣಕ್ಕೆ ಯಾವ ತಯಾರಿಯನ್ನೂ ಇಟ್ಟುಕೊಳ್ಳಬೇಡಿ. ಡ್ನೂ ಇರುವ 15 ದಿನಗಳ ಮೊದಲೇ ಎಲ್ಲವನ್ನೂ ಸಿದ್ಧತೆ ಮಾಡಿಟ್ಟುಕೊಳ್ಳಿ.
- ಆಸ್ಪತ್ರೆಯಲ್ಲಿ ನಿಮಗೆ ಬದಲಾಯಿಸಲು ಫಿಡಿಂಗ್ ಝಿಪ್ ಇರುವ ನೈಟಿ/ಡ್ರೆಸ್ ಅಥವಾ ನಿಮಗೆ ಸುಲಭವಾಗುವ ಎರಡು ಜೊತೆ ಬಟ್ಟೆಗಳನ್ನು ಜೋಡಿಸಿಕೊಳ್ಳಿ.
- ಡೆಲಿವರಿಯ ನಂತರ ಸ್ವಲ್ಪ ದಿನ ಬ್ಲಿಡ್ ಲೀಕಿಂಗ್ ಇರುವುದು, ಹೀಗಾಗಿ ಸ್ಯಾನಿಟರಿ ಪ್ಯಾಡ್’ಗಳನ್ನು ನಿಮ್ಮ ಬ್ಯಾಗಿಗೆ ತುಂಬಿಸಿ.
- ಅವಶ್ಯಕವಾದ ಇತರೆ ಸಾಮಗ್ರಿಗಳು ಬಟ್ಟಲು, ಗ್ಲಾಸ್, ಚಮಚ, ಬಾಚಣಿಗೆ, ಟಿಶ್ಯೂಸ್, ಟೂತ್ ಬ್ರಶ್, ಟವೆಲ್… ಹೀಗೆಕೆಲವೊಂದನ್ನು ಪಟ್ಟಿಮಾಡಿಟ್ಟುಕೊಳ್ಳಿ. ಆಸ್ಪತ್ರೆಯಲ್ಲಿ ಅವರೇ ಕೊಡುವು ದಾದರೆ ಚಿಂತೆಯಿಲ್ಲ. ಏನು ಕೊಡುವುದಿಲ್ಲವೋ ಅವನ್ನು ತೆಗೆದುಕೊಂಡರೆ ಆಯ್ತು.
- ಮಗುವಿಗೆ ನ್ಯೂ ಬಾರ್ನ್ ಸೈಜ್ ಡೈಪರ್ ಬೇಕಾಗುತ್ತದೆ. ಒಂದೆರಡು ಜೊತೆ ಕಾಟನ್ ಬಟ್ಟೆಗಳು, ಟವೆಲ್
- ಆಸ್ಪತ್ರೆಯ ಕೋಣೆಗಳು ಎ. ಸಿ.ಯಾಗಿದ್ದರೆ ಮಗುವಿನ ತಲೆಗೆ ಕ್ಯಾಪ್, ಕೈಗೆ ಹಾಗೂ ಕಾಲುಗಳಿಗೆ ಮಿಟನ್ಸ್ ಹಾಗೂ ಸಾಕ್ಸ್ ಬೇಕಾಗುವುದು.
- ಮಗು ಚೆನ್ನಾಗಿ ನಿದ್ರಿಸಲು ಸಹಾಯ ಮಾಡುವ ರ್ಯಾಪ್, ಬೆಡ್ ಶೀಟ್ಸ್ ಇರಲಿ.
- ಮನೆಯಲ್ಲಿ ಬೇಬಿ ಸೋಪ್, ಬೇಬಿ ಪೌಡರ್, ಬಾತ್ ಟಬ್ ರೆಡಿ ಇರಲಿ. ಎದೆ ಹಾಲಿನ ಬಗ್ಗೆ ಮೊದಲೇ ಏನೂಹೇಳ್ಳೋಕಾಗದ ಕಾರಣ, ಫೀಡಿಂಗ್ ಬಾಟಲ್ಸ್, ಲ್ಯಾಕ್ಟೊಜೆನ್ (ಮಿಲ್ಕ್ ಪೌಡರ್) ತೆಗೆದುಕೊಳ್ಳಿ. ನನಗೆ ತೋಚಿದಕೆಲವು ಸಲಹೆಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಏನಾದರೂ ಬಿಟ್ಟುಹೋಗಿದ್ದಲ್ಲಿ ನಿಮ್ಮ ಚೆಕ್ ಲಿಸ್ಟಿಗೆ ಈಗಲೇ ಸೇರಿಸಿ.. ಹೊಸ ಅಮ್ಮಂದಿರಿಗೆ ಶುಭವಾಗಲಿ..
– ಸುಪ್ರೀತಾ ವೆಂಕಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.