ಅಕ್ಕ ಕೇಳವ್ವಾ ಗುರಲಿಂಗಮ್ಮನ ಕಥೆಯಾ…
Team Udayavani, Oct 30, 2019, 4:38 AM IST
ಬೆನ್ನು ಬಾಗಿದೆ, ಕಣ್ಣು ಮಂಜಾಗಿದೆ, ಕೈ-ಕಾಲಿನಲ್ಲಿ ಶಕ್ತಿ ಕುಂದಿದೆ, ವಯಸ್ಸು ನೂರರ ಗಡಿ ದಾಟಿದೆ. ಆದರೆ, ಉತ್ಸಾಹ, ದೈವಭಕ್ತಿ, ವಚನಗಳ ಮೇಲಿನ ಪ್ರೀತಿ ಇಂದಿಗೂ ಬುಗ್ಗೆಯಾಗಿ ಚಿಮ್ಮುತ್ತಿದೆ. ವಯಸ್ಸಿನ ಇತಿಮಿತಿಯನ್ನು ಮೀರಿ ಅಕ್ಕಮಹಾದೇವಿ ವಚನಗಳನ್ನು ಸಾರುತ್ತಾ, ಶರಣೆಯಂತೆ ಬದುಕುತ್ತಿರುವವರು 113 ವರ್ಷದ, ಮಾತೋಶ್ರೀ ಗುರಲಿಂಗಮ್ಮ ದುಂಡಪ್ಪ ಬಾಳಿ.
ಇಂದಿನ ದಿನಗಳಲ್ಲಿ ವಯಸ್ಸು ನಲವತ್ತಾಗಿದ್ದರೆ, ದೇಹ ಅರವತ್ತರ ಹರೆಯದವರಷ್ಟು ಜರ್ಜರಿತವಾಗಿರುತ್ತದೆ. ಸಣ್ಣ ವಯಸ್ಸಿನಲ್ಲೇ ಬಿ.ಪಿ., ಶುಗರ್ ಬಂದು ಸುಸ್ತಾಗಿಬಿಟ್ಟಿದೆ ಈ ಜನಾಂಗ. ಆದರೆ, ಅವರಿಗೆಲ್ಲ ಸೆಡ್ಡು ಹೊಡೆದಂತೆ ಕ್ರಿಯಾಶೀಲರಾಗಿದ್ದಾರೆ ಈ ತಾಯಿ. ವಯೋಸಹಜ ಕಾಯಿಲೆಗಳಾದ ದೃಷ್ಟಿ-ಶ್ರವಣ ದೋಷವೂ ಇವರಿಗಿಲ್ಲ ಎಂಬುದು ವಿಶೇಷ.
ಬರದನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಶಿಕ್ಷಕ, ರೇವಣಸಿದ್ಧಪ್ಪ ಐರಸಂಗ ಅವರ ಮೂರ್ತಿಯನ್ನು ಸ್ಥಾಪಿಸಿ, ದೇವಸ್ಥಾನ ಕಟ್ಟಿಸಿರುವ ಗುರಲಿಂಗಮ್ಮ, ದಿನದ ಎರಡೊತ್ತು ಅಲ್ಲಿ ಪೂಜೆ ಸಲ್ಲಿಸುತ್ತಾರೆ. ಅಷ್ಟೇ ಅಲ್ಲ, ಚಟಪಟನೆ ಕೆಲಸ ಮಾಡುತ್ತ, ಅಕ್ಕಮಹಾದೇವಿಯ ವಚನಗಳ ಸಾರವನ್ನು ಭಕ್ತಾದಿಗಳಿಗೆ ಬಿತ್ತರಿಸುತ್ತ ಸಾರ್ಥಕ ಜೀವನ ಸಾಗಿಸುತ್ತಿದ್ದಾರೆ.
ಗುರಲಿಂಗಮ್ಮ ಅವರು ಹುಟ್ಟಿದ್ದು ವಿಜಯಪುರದ ಅಡಕಿಗಲ್ಲಿಯಲ್ಲಿ. 1906ರಲ್ಲಿ ಜನಿಸಿದ ಇವರಿಗೆ ತೊಟ್ಟಿಲಿನಲ್ಲಿ ಇದ್ದಾಗಲೇ ವಿವಾಹವೂ ನಡೆದುಬಿಟ್ಟಿತು. ದುರದೃಷ್ಟಕ್ಕೆ ಇವರಿನ್ನೂ ಚಿಕ್ಕವರಿದ್ದಾಗಲೇ ಗಂಡ ತೀರಿಹೋದರು. ಮುಂದೆ ಅವರು ವಿಜಯಪುರ ತೊರೆದು, ಗಂಡನ ಮನೆಯಾದ ಅಥರ್ಗಾಕ್ಕೆ ಬಂದರು.
ಬಾಲ್ಯದಿಂದಲೂ ಅಕ್ಕಮಹಾದೇವಿ ಮತ್ತು ಬಸವಣ್ಣನ ವಚನಗಳಿಂದ ಪ್ರೇರಿತರಾದ ಗುರಲಿಂಗಮ್ಮ, ಅಥರ್ಗಾದ ತಮ್ಮ ಮನೆಯಲ್ಲಿ ಅಕ್ಕಮಹಾದೇವಿಯ ಮೂರ್ತಿಯನ್ನು ಸ್ಥಾಪಿಸಿ ಮನೆಯನ್ನೇ ಮಠವನ್ನಾಗಿ ಪರಿವರ್ತಿಸಿದರು. ತಮ್ಮ ಇಡೀ ಜೀವನವನ್ನು ವಚನಗಳ ಸಾರವನ್ನು ಬೋಧಿಸುವುದಕ್ಕೆ ಮುಡಿಪಾಗಿಟ್ಟರು.
2002ರಲ್ಲಿ ಮಠ ನಿರ್ಮಾಣವಾಗಿದ್ದು, ಇಲ್ಲಿ ಪ್ರತಿನಿತ್ಯ ಅನ್ನದಾಸೋಹವನ್ನೂ ನಡೆಸಲಾಗುತ್ತದೆ. ನೂರು ವರ್ಷ ದಾಟಿದ್ದರೂ ಗುರಲಿಂಗಮ್ಮ ಚಟುವಟಿಕೆಯಿಂದ ಮಠದ ತುಂಬಾ ಓಡಾಡುತ್ತ ಕೆಲಸ ಮಾಡುವುದೇ ಜನರಿಗೆ ಅಚ್ಚರಿ ಹುಟ್ಟಿಸುತ್ತದೆ. ದವನ ಹುಣ್ಣಿಮೆ ದಿನದಂದು ಅಕ್ಕಮಹಾದೇವಿ ಜಯಂತಿ ಆಚರಿಸಿ, ಎರಡು ದಿನಗಳ ಅದ್ಧೂರಿ ಜಾತ್ರೆಯನ್ನು ಮುಂದೆ ನಿಂತು ನಡೆಸುತ್ತಾರೆ. ಈ ತಾಯಿಯ ಮೂಲಕ, ಅಕ್ಕಮಹಾದೇವಿಯ ವಚನಗಳು ಮತ್ತಷ್ಟು ಜನರನ್ನು ತಲುಪುತ್ತಿವೆ.
-ವಿದ್ಯಾಶ್ರೀ ಗಾಣಿಗೇರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.