ಸೀರೆ ಮೇಲೆ ಅಕ್ಷರಮಾಲೆ


Team Udayavani, Mar 20, 2019, 12:30 AM IST

e-6.jpg

ಟೀ ಶರ್ಟ್‌, ಜಾಕೆಟ್‌, ಹೂಡಿ ಮತ್ತು ಅಂಗಿಗಳ ಮೇಲೆ ಸ್ಲೋಗನ್‌ (ಘೋಷವಾಕ್ಯ) ಬರೆದಿರುವುದು ನೀವು ನೋಡಿರುತ್ತೀರಾ. ಆದರೀಗ ಆ ಘೋಷವಾಕ್ಯಗಳು ಸೀರೆಯ ಮೇಲೂ ಮೂಡುತ್ತಿವೆ. ಘೋಷವಾಕ್ಯಗಳಷ್ಟೇ ಅಲ್ಲದೆ, ವಿಧ-ವಿಧ ಭಾಷೆಗಳ ಪದಗಳು, ಅಕ್ಷರಗಳು, ಸಂಖ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಈ ಶೈಲಿಯನ್ನು “ಆಲ್ಫಾಬೆಟ್‌ ಪ್ರಿಂಟ್‌’ ಎಂದು ಕರೆಯಲಾಗುತ್ತದೆ. ವಸ್ತ್ರ ವಿನ್ಯಾಸಕರು, ಚಿತ್ರನಟಿಯರು, ಚಿತ್ರ ನಂತರ ಮಡದಿಯರು, ಗಾಯಕಿಯರು, ಕ್ರೀಡಾಪಟುಗಳು, ರಾಜಕಾರಣಿಗಳು ಮತ್ತು ಗಣ್ಯವ್ಯಕ್ತಿಗಳು ಉಟ್ಟು ಸಭೆ- ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಇದು ಟ್ರೆಂಡ್‌ ಆಗುತ್ತಿದೆ.

ಸೀರೆಯಿಂದ ಸಿನಿಮಾ ಪ್ರಚಾರ
ವಸ್ತ್ರ ವಿನ್ಯಾಸಕಿ ಮಸಾಬ ಗುಪ್ತಾ ಈ ರೀತಿಯ ಸೀರೆಯ ವಿನ್ಯಾಸ ಮಾಡುವುದಲ್ಲದೆ ಅವುಗಳನ್ನು ಉಟ್ಟು ಅವುಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದ್ದಾರೆ. ಇವರ ವಿನ್ಯಾಸದ ಆಲ್ಫಾಬೆಟ್‌ ಪ್ರಿಂಟ್‌ ಸೀರೆಯೊಂದನ್ನು ಬಾಲಿವುಡ್‌ ನಟಿ ಸೋನಂ ಕಪೂರ್‌ ಉಟ್ಟು ತನ್ನ ಚಿತ್ರದ ಪ್ರಮೋಷನ್‌ ವೇಳೆ ಅದೇ ಸೀರೆಯಲ್ಲಿ ಕಾಣಿಸಿಕೊಂಡಿಲ್ಲೇ ತಡ, ಅಭಿಮಾನಿಗಳಲ್ಲಿ ಮತ್ತು ಫ್ಯಾಷನ್‌ಲೋಕದಲ್ಲಿ ದೊಡ್ಡ ಸುದ್ದಿ ಮಾಡಿತು. ಮೈಬಣ್ಣಕ್ಕೆ ಹೋಲುವ ಸೀರೆಯ ಮೇಲೆ ತಮಿಳು ಅಕ್ಷರಗಳಲ್ಲಿ ವಿನ್ಯಾಸಕಿಯ ಹೆಸರು, ನಟಿಯ ಹೆಸರು ಮತ್ತು ಚಿತ್ರದ ಹೆಸರನ್ನು ತಮಿಳು ಲಿಪಿಯ ಆ ಪದಗಳನ್ನು ಸೀರೆಯ ತುಂಬಾ ಬರೆಯಲಾಗಿತ್ತು.

ಮಿರ್ಚಿ ಮಸಾಲಾ
ಉದ್ಯಮಿ ನೀತಾ ಅಂಬಾನಿ ತನ್ನ ಮಗನ ಮದುವೆಗೆ ತೊಟ್ಟ ಲೆಹೆಂಗಾ ಚೋಲಿ (ಶಾಲು, ರವಿಕೆ ಮತ್ತು ಲಂಗದ ಸೆಟ್‌)ಯಲ್ಲೂ ಈ ಶೈಲಿಯನ್ನು ಅಳವಡಿಸಲಾಗಿತ್ತು. ಹಿಂದಿಯ “ಶುಭಾರಂಭ’ ಎಂಬ ಪದವನ್ನು ರವಿಕೆಯ ಬೆನ್ನಲ್ಲಿ ಮೂಡಿಸಲಾಗಿತ್ತು. ಭಾರತೀಯ ಮಸಾಲೆಗಳಿಂದ ಪ್ರೇರಣೆ ಪಡೆದು ವಸ್ತ್ರ ವಿನ್ಯಾಸಕ ಸತ್ಯ ಪೌಲ್‌ ಹಿಂದಿಯ “ಮಿರ್ಚಿ’ (ಮೆಣಸು) ಎಂಬ ಪದವನ್ನು ಕೈಯಿಂದಲೇ ಬರೆದ ಸೀರೆಯನ್ನು ಹಿಂದಿ ನಟಿ ಕರಿಷ್ಮಾ ಕಪೂರ್‌ ಉಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿ ಟ್ರೆಂಡ್‌ ಆಗುವಂತೆ ಮಾಡಿದ್ದಾರೆ.  

ಸೀರೆಯುಟ್ಟ ಬಾಲಿವುಡ್‌ ನೀರೆಯರು
ಹಿಂದಿ ನಟಿಯರಾದ ವಿದ್ಯಾ ಬಾಲನ್‌, ನೀನಾ ಗುಪ್ತಾ, ಬಿಪಾಶಾ ಬಸು, ರಾಣಿ ಮುಖರ್ಜಿ, ಸುಶ್ಮಿತಾ ಸೇನ್‌, ಸೋಹಾ ಅಲಿ ಖಾನ್‌ ಮುಂತಾದವರು ಈ ಶೈಲಿಯ ಸೀರೆಗಳನ್ನು ಉಟ್ಟಿದ್ದಾರೆ. ಹಿಂದಿ ನಟ ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ಕೂಡ ಈ ಆಲ್ಫಾಬೆಟ್‌ ಪ್ರಿಂಟ್‌ ಉಳ್ಳ ಸೀರೆ ತೊಟ್ಟಿದ್ದು ಟ್ರೆಂಡ್‌ ಆಗಿತ್ತು.  ಮಾರುಕಟ್ಟೆಯ ಅಂಗಡಿಗಳಲ್ಲಿ ಈ ಬಗೆಯ ಸೀರೆ ಕೊಳ್ಳುವುದಾದರೆ, ಆಲ್ಫಾಬೆಟ್‌ ಪ್ರಿಂಟ್‌ ಎಂದು ಕೇಳಬಹುದು. ಈ ಸೀರೆಗಳು ಆನ್‌ಲೈನ್‌ನಲ್ಲೂ ಲಭ್ಯ. ಎಲ್ಲರಿಗಿಂತ ಭಿನ್ನವಾಗಿ ಕಾಣಬಯಸುವಿರಾದರೆ ನೀವೂ ಇಂಥ ಆಲ್ಫಾಬೆಟ್‌ ಪ್ರಿಂಟ್‌ ಸೀರೆಗಳನ್ನು ಉಟ್ಟು ಟ್ರೆಂಡ್‌ ಸೆಟ್‌ ಮಾಡಿ!

ಸ್ವರ್ಣ ದೀಪಿಕಾ
ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆಯೂ ತನ್ನ ಮದುವೆಗೆ ಉಟ್ಟ ಸೀರೆಯ ಸೆರಗಿನ ಜರಿಯಲ್ಲಿ ಹಿಂದಿಯಲ್ಲಿ ಬರೆಯಲಾಗಿತ್ತು. ವಸ್ತ್ರ ವಿನ್ಯಾಸಕ ಸಬ್ಯಸಾಚಿ, “ಸದಾ ಸೌಭಾಗ್ಯವತೀ ಭವ’ ಎಂಬ ಪದಗಳನ್ನು ಸ್ವರ್ಣ ವರ್ಣದಲ್ಲಿ ಈಕೆಯ ಉಡುಗೆಯಲ್ಲಿ ಮೂಡಿಸಿದ್ದರು. 

ಬಹಳ ಹಿಂದೆಯೇ ಉಟ್ಟಿದ್ದರು
ಈ ಆಲ್ಫಾಬೆಟ್‌ ಪ್ರಿಂಟ್‌ ಟ್ರೆಂಡ್‌ ಆಗುವ ಅದೆಷ್ಟೋ ವರ್ಷಗಳ ಹಿಂದಿನಿಂದಲೇ ಜನಪ್ರಿಯ ಪಾಪ್‌ ಗಾಯಕಿ ಉಷಾ ಉತುಪ್‌ ಇಂಥ ಶೈಲಿಯ ಸೀರೆ ಉಡುತ್ತಿದ್ದಾರೆ. ಬೆಂಗಾಲಿ ಅಥವಾ ತಮಿಳು ಭಾಷೆಗಳ ಅಕ್ಷರಗಳನ್ನು ಮೂಡಿಸಿರುವ ಸೀರೆ ಮತ್ತು ರವಿಕೆಯನ್ನು ಇವರು ಬಹಳಷ್ಟು ಸಂದರ್ಭಗಳಲ್ಲಿ ಉಟ್ಟಿದ್ದಾರೆ. 

ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್‌ ಕ್ಯಾನ್ಸರ್‌ ಬಗ್ಗೆ ಎಚ್ಚರವಿರಲಿ: ವೈದ್ಯರು

Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್‌ ಕ್ಯಾನ್ಸರ್‌ ಬಗ್ಗೆ ಎಚ್ಚರವಿರಲಿ

ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

Grhajyothi

Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್‌’

High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು

High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

ಮುಡಾ ನಿವೇಶನ 50:50 ಹಂಚಿಕೆ ರದ್ದು ತೀರ್ಮಾನ

MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್‌ ಆಫ್ರಿಕಾ ಸವಾಲು

ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್‌ ಕ್ಯಾನ್ಸರ್‌ ಬಗ್ಗೆ ಎಚ್ಚರವಿರಲಿ: ವೈದ್ಯರು

Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್‌ ಕ್ಯಾನ್ಸರ್‌ ಬಗ್ಗೆ ಎಚ್ಚರವಿರಲಿ

ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!

Grhajyothi

Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್‌’

High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು

High Court: ಮತದಾರರಿಗೆ ಅನುದಾನ ಆಮಿಷ; ನಡ್ಡಾ ವಿರುದ್ಧದ ಪ್ರಕರಣ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.