ನಧೀಂ ಧೀಂ ತನ…
Team Udayavani, Nov 8, 2017, 6:15 AM IST
“ಗಾಳಿಪಟ’ದ ಆ ಚಲ್ಲು ಹುಡುಗಿ ಪಾವನಿಯನ್ನು ಯಾರಾದರು ಮರೆತಿರಲು ಸಾಧ್ಯವಾ? ಪ್ರಥಮ ಸಿನಿಮಾದಲ್ಲೇ ಅಭಿನಯ ಮತ್ತು ನೃತ್ಯದಿಂದ ಎಲ್ಲರ ಚಿತ್ರಪ್ರೇಮಿಗಳ ಗಮನ ಸೆಳೆದ ಹುಡುಗಿ ಭಾವನಾ ರಾವ್. ಈಗ “ದಯವಿಟ್ಟು ಗಮನಿಸಿ’ ಎನ್ನುತ್ತಾ ಬಂದಿದ್ದಾರೆ. ಗಾಳಿಪಟ ಚಿತ್ರದ ಬಳಿಕ ಕನ್ನಡ, ತಮಿಳಿನ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡ ಭಾವನಾ, ಶರಣ್ ಜೊತೆ ಸತ್ಯಹರಿಶ್ಚಂದ್ರ, ರೋಹಿತ್ ಪದಕಿ ಅವರ “ದಯವಿಟ್ಟು ಗಮನಿಸಿ’ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಬ್ಯುಸಿ ನಟಿಯಾಗುವ ಲಕ್ಷಣ ತೋರಿದ್ದಾರೆ. ಸದ್ಯ ಪ್ರೇಮ್ ಅವರ “ಗಾಂಧಿಗಿರಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಭರತನಾಟ್ಯ ಕಲಾವಿದೆ ಆಗಿರುವ ಅವರು ನೃತ್ಯ ಪ್ರದರ್ಶನಗಳಲ್ಲಿ ಸದಾ ಬ್ಯುಸಿ. ಕನ್ನಡದಲ್ಲಿ ನೃತ್ಯ ಆಧಾರಿತ ಚಿತ್ರಗಳು ಈಗೀಗ ಬರುತ್ತಲೇ ಇಲ್ಲ ಎಂಬ ಬಗ್ಗೆ ಬೇಜಾರಿದೆ ಎನ್ನುವ ಅವರಿಗೆ, ಅಂಥ ಒಂದು ಚಿತ್ರದಲ್ಲಿ ಅಭಿನಯಿಸಿ ತಮ್ಮ ನೃತ್ಯ ಕೌಶಲ್ಯವನ್ನು ಸಂಪೂರ್ಣವಾಗಿ ತೆರೆದಿಡಬೇಕು ಎಂಬ ಇರಾದೆ ಇದೆಯಂತೆ…
– – – – –
– ರಾಂಪ್ ವಾಕನ್ನೇ ವಿರೋಧಿಸಿದ್ದ ಕುಟುಂಬದವರು ಸಿನಿಮಾದಲ್ಲಿ ನಟಿಸಲು ಬಿಟ್ಟಿದ್ದು ಹೇಗೆ?
ಸಿನಿಮಾಗೆ ಆಡಿಷನ್ ಕೊಟ್ಟಿದ್ದು ಕೂಡ ಮನೆಯವರಿಗೆ ಗೊತ್ತಿರಲಿಲ್ಲ. “ಗಾಳಿಪಟ’ ಸಿನಿಮಾಕ್ಕೆ ಸೆಲೆಕ್ಟ್ ಆದ ಮೇಲೆ ಮನೆಯವರಿಗೆ ತಿಳಿಸಿದೆ. ಆಗಲೂ ವಿರೋಧಿಸಿದ್ರು. ಆದರೆ, ಸಿನಿಮಾ ಬಿಡುಗಡೆ ಆದ ಮೇಲೆ, ನನಗೆ ನನ್ನದೇ ಆದ ಐಡೆಂಟಿಟಿ ಸಿಕ್ಕಿತು. ಅದಾದ ಮೇಲೆ ಅವರಿಗೆ ನನ್ನ ಮೇಲೆ ಕಾನ್ಫಿಡೆನ್ಸ್ ಹುಟ್ಟತೊಡಗಿತು. ನಮ್ಮನೇಲಿ ನಾನೊಬ್ಬಳೇ ಈ ರೀತಿ ಬೋಲ್ಡ್ ಡಿಸಿಷನ್ಸ್ ತೆಗೆದುಕೊಳ್ಳೋದು.
– ಡ್ಯಾನ್ಸ್ ಮತ್ತು ನಟನೆ. ಇವೆರಡರಲ್ಲಿ ನಿಮ್ಮ ಪ್ರಧಾನ ಆಯ್ಕೆ? ಯಾವ್ಯಾವ ಡ್ಯಾನ್ಸ್ ಪ್ರಕಾರಗಳಲ್ಲಿ ನೀವು ಪಂಟರ್?
ಡ್ಯಾನ್ಸ್ ಯಾವಾಗಲೂ ನನ್ನ ಪ್ರಥಮ ಆಯ್ಕೆ. ಜೀವನದಲ್ಲಿ ಏನೇ ಬಿಟ್ಟರೂ ಡ್ಯಾನ್ಸ್ ಮಾತ್ರ ಬಿಡುವುದಿಲ್ಲ. ಡ್ಯಾನ್ಸರ್ ಆಗಿದ್ದಕ್ಕೇನೇ ನಾನು ನಟಿ ಆಗಿದ್ದು. ಮುಂದೆ ಪೂರ್ಣ ಪ್ರಮಾಣದ ನೃತ್ಯ ನಿರ್ದೇಶಕಿ ಆಗಬೇಕು ಎಂಬ ಬಯಕೆ ಇದೆ. ಇದಕ್ಕಾಗಿ ಈಗಾಗಲೇ ಸಿದ್ಧತೆ ಆರಂಭಿಸಿದ್ದೇನೆ. ಚಿತ್ರರಂಗದಲ್ಲಿ ನಟಿಯಾಗಿ ಎಷ್ಟು ದಿನ ಇರಿ¤àನೊ ಗೊತ್ತಿಲ್ಲ. ಆದರೆ, ಕೊರಿಯೋಗ್ರಾಫರ್ ಆಗಿ ಇಲ್ಲಿ ನೆಲೆ ನಿಲ್ಲಬೇಕು ಎಂಬ ಬಯಕೆ ಇದೆ. ಭರತನಾಟ್ಯವನ್ನು ಶಾಸ್ತ್ರೋಕ್ತವಾಗಿ ಕಲಿತಿದ್ದೇನೆ. ಫ್ರೀ ಸ್ಟೈಲ್, ವೆಸ್ಟ್ರನ್ ಡ್ಯಾನ್ಸ್ ಮಾಡುತ್ತೇನೆ. ಸಾಲ್ಸಾ, ಬೆಲ್ಲಿ ಡ್ಯಾನ್ಸ್ ಬೇಸಿಕ್ಸ್ ಕಲಿತಿದ್ದೇನೆ.
– ಸೆಟ್‌ನಲ್ಲಿ ತುಂಬಾ ಆರಾಮಾಗಿ ಇರಿ¤àರಂತೆ. ಅದಕ್ಕೆ ಕಾರಣ?
ನಾನು ವರ್ಕೋಹಾಲಿಕ್. ನಾಳಿನ ಸೀನ್‌ಗಳ ಬಗ್ಗೆ ಇಂದೇ ನಿರ್ದೇಶಕರನ್ನು ಕೇಳಿ ಸ್ಕ್ರಿಪ್ಟ್ ಪಡೆದು ಹೋಂ ವರ್ಕ್ ಮಾಡಿಕೊಂಡು ಹೋಗಿರುತ್ತೇನೆ. ಆದ್ದರಿಂದ ಸೆಟ್‌ನಲ್ಲಿ ನಾನು ಆದಷ್ಟು ಆರಾಮಾಗಿ ಇರಿ¤àನಿ. ಸೆಟ್‌ಗೆ ಹೋಗಿ ಡೈಲಾಗ್ ಕಲಿಯುವುದು, ಕ್ಯಾಮೆರಾ ಮುಂದೆ ತಡವರಿಸುವುದು ನನಗೆ ಚೂರೂ ಹಿಡಿಸುವುದಿಲ್ಲ. ಪ್ರತಿ ಕ್ಷಣಕ್ಕೂ ನಿರ್ಮಾಪಕರು ಹಣ ವ್ಯಯ ಮಾಡಿರ್ತಾರೆ. ಆದ್ದರಿಂದ ಕಲಾವಿದರು ಸಮಯಕ್ಕೆ ಬೆಲೆ ಕೊಡಬೇಕು ಅಂತ ನನ್ನ ಅಭಿಪ್ರಾಯ.
– ಅಮ್ಮನಿಗೆ ಕಾಡಿ ಬೇಡಿ ಮಾಡಿಸಿಕೊಳ್ಳುವ ಅಡುಗೆ ಯಾವುದು?
ಟೊಮೇಟೊ ಬಾತ್. ನಮ್ಮಮ್ಮ ಮಾಡೋ ಟೊಮೇಟೊ ಬಾತ್ ಮುಂದೆ ಯಾವ ಫೈವ್‌ಸ್ಟಾರ್ ಹೋಟೆಲ್ ಊಟಾನೂ ನಿಲ್ಲಲ್ಲ.
– ನೀವು ಅಡುಗೆ ಮನೆ ಕಡೆ ಹೋಗ್ತಿàರಾ?
ಇಲ್ಲ. ನನಗೂ ಅಡುಗೆ ಮನೆಗೂ ಅಷ್ಟಾಗಿ ಆಗಿಬರಲ್ಲ. ನನಗೆ ಅಡುಗೆ ಮಾಡುವುದರಲ್ಲಿ ಅಂಥ ಆಸಕ್ತಿನೂ ಇಲ್ಲ. ಮುಂಚೆ ನನ್ನ ಫ್ರೆಂಡ್ಸ್ ಎಲ್ಲಾ ಅಡುಗೆ ಮಾಡ್ತಾರೆ, ನಾನು ಏನಾದರೂ ಟ್ರೈ ಮಾಡಬೇಕು ಅಂತ ಅಡುಗೆ ಮನೆಗೆ ಹೋಗಿ ಏನಾದರೂ ಖಾದ್ಯ ತಯಾರಿಸುತ್ತಿದ್ದೆ. ಯಾವುದೂ ಸರಿಯಾಗಿ ಬರುತ್ತಿರಲಿಲ್ಲ. ಅಡುಗೆ ಎಂಬ ಕಲೆ ನನ್ನ ಕೈಹಿಡಿಯಲ್ಲಾ ಅಂತ ತಿಳಿದು ಪ್ರಯತ್ನ ಪಡುವುದನ್ನೇ ಬಿಟ್ಟುಬಿಟ್ಟೆ. ಅನಿವಾರ್ಯ ಸಂದರ್ಭಗಳಿಗೆ ಅಂತ ಅನ್ನ, ಸಾರು ಮಾಡುವುದನ್ನು ಕಲಿತಿದ್ದೇನೆ ಅಷ್ಟೇ.
– ಬೆಂಗಳೂರಿನಲ್ಲಿ ನಿಮ್ಮ ಅಡ್ಡಾಗಳು?
ಫ್ರೆಂಡ್ಸ್ ಎಲ್ಲಾ ಸೇರಿ ಹರಟೆ ಹೊಡೆಯಲು, ಯಾವುದಾದರೂ ಕಾಫಿ ಡೇಗೆ ಹೋಗ್ತಿàವಿ. ನನಗೆ ಆಂಧ್ರ ಸ್ಟೈಲ್ ಬಿರಿಯಾನಿ ಇಷ್ಟ. ಊಟಕ್ಕೆ ನಾಗಾರ್ಜುನ, ನಂದಿನಿ ಹೋಟೆಲ್‌ಗೆ ಹೋಗಿ ಬಿರಿಯಾನಿ ತಿಂದು ಬರಿ¤àನಿ. ಆದರೆ, ತುಂಬಾ ಖುಷಿ ಸಿಗುವುದು ವೀಣಾ ಸ್ಟೋರ್ನ ಇಡ್ಲಿ ಮತ್ತು ಏರ್‌ಲೈನ್ಸ್‌ನ ಮಸಾಲೆ ದೋಸೆ ತಿಂದಾಗ ಮಾತ್ರ.
– ನಿಮ್ಮ ಡಯಟ್ ಬಗ್ಗೆ ಹೇಳಿ?
ಮುಂಚೆ ತುಂಬಾ ತಿನ್ನುತ್ತಿದ್ದೆ. ಈಗ ಡಯಟ್ ಮಾಡಿ ಮಾಡಿ ನನ್ನ ಹೊಟ್ಟೆ ಸಣ್ಣಗಾಗಿದೆ. ತಿನ್ನಬೇಕೆನಿಸಿದರೂ ಹೆಚ್ಚು ತಿನ್ನಲು ಸಾಧ್ಯಾನೆ ಆಗಲ್ಲ. ತೂಕ ಮೆಂಟೇನ್ ಮಾಡಬೇಕೆಂದರೆ ಮೊದಲು ಅನ್ನ ತಿನ್ನುವುದನ್ನು ಬಿಡಬೇಕು. ನಾನು ವಾರಕ್ಕೆ ಒಮ್ಮೆ ಮಾತ್ರ ಅನ್ನ ಅಥವಾ ಅನ್ನದ ಖಾದ್ಯ ತಿನ್ನುವುದು. ಅನ್ನದ ಬದಲಿಗೆ ಮಿಲೆಟ್ಸ್ ತಿಂತೀನಿ. ರಾತ್ರಿ 7.30- 8 ಗಂಟೆಗೆ 2 ಚಪಾತಿ ತಿಂದು ಊಟ ಮುಗಿಸಿಬಿಡುತ್ತೇನೆ. ದಿನವಿಡೀ ತುಂಬಾ ನೀರು ಕುಡೀತೀನಿ, ತಾಜಾ ಹಣ್ಣು ತಿನ್ನೋದು ರೂಢಿಯಾಗಿದೆ. ತಪ್ಪದೇ ಜಿಮ್‌ಗೆ ಹೋಗಿ 1 ಗಂಟೆ ವಕೌìಟ್ ಮಾಡ್ತೀನಿ. ಚೆಂದ ಕಾಣಬೇಕೆಂದರೆ, ಕರಿದ ಪದಾರ್ಥಗಳಿಂದ ದೂರ ಇದ್ದು, ಆದಷ್ಟು ಹಣ್ಣು, ಹಸಿ ತರಕಾರಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
– ಇತ್ತೀಚೆಗೆ ಕೈಬಿಟ್ಟ ಒಂದು ದುರಭ್ಯಾಸ ಹೇಳಿ?
ಆನ್‌ಲೈನ್ ಶಾಪಿಂಗ್ ಮಾಡುವ ಚಟ ಹಿಡಿದುಬಿಟ್ಟಿತ್ತು. ಸ್ವಲ್ಪ ಬಿಡುವಾದರೂ ಕೈಯಲ್ಲಿ ಫೋನ್ ಹಿಡಿದು ಏನಾದರೊಂದು ಆರ್ಡರ್ ಮಾಡುತ್ತಲೇ ಇರುತ್ತಿದ್ದೆ. ಪಾಕೆಟ್ ಖಾಲಿ ಆದರೂ ಈ ಗೀಳಿನಿಂದ ಹೊರಬರಲು ಸಾಧ್ಯವೇ ಆಗುತ್ತಿರಲಿಲ್ಲ. ಹೇಗೊ ಗಟ್ಟಿ ಮನಸ್ಸು ಮಾಡಿ ಆನ್‌ಲೈನ್ ಶಾಪಿಂಗ್‌ಗೆ ಕಡಿವಾಣ ಹಾಕಿದ್ದೇನೆ. ಸದ್ಯಕ್ಕೆ ಇದು ನನ್ನ ದೊಡ್ಡ ಸಾಧನೆ.
– ಬೆಂಗಳೂರಿನಲ್ಲಿ ಎಲ್ಲಿ ಶಾಪಿಂಗ್ ಮಾಡ್ತೀರಾ? ಶಾಪಿಂಗ್ ಮಾಡೋವಾಗ ನಿಮ್ಮ ಜೊತೆ ಯಾರಿದ್ರೆ ಚೆಂದ?
ಹೆಚ್ಚಾಗಿ ಒರಾಯನ್ ಮಾಲ್‌ನಲ್ಲಿ ಶಾಪಿಂಗ್ ಮಾಡ್ತೀನಿ. ನನ್ನ ಫ್ರೆಂಡ್ ಶ್ವೇತಾ ನನ್ನ ಸ್ಟೈಲಿಸ್ಟ್ ಕೂಡಾ ಹೌದು. ಶಾಪಿಂಗ್ ಮಾಡ್ತಾ ಆಕೆ ಜೊತೆಯಲ್ಲಿ ನನ್ನ ಅರ್ಧ ಕೆಲಸ ಮುಗಿಯುತ್ತದೆ. ನನಗಿಂತ ಅವಳೇ ಚೆನ್ನಾಗಿ ನನಗೆ ಬಟ್ಟೆ ಆರಿಸುತ್ತಾಳೆ.
– ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ನಾನು ಕೆಲವರನ್ನು ನೋಡಿದ್ದೇನೆ, ಇಷ್ಟಪಟ್ಟು ಶಾರ್ಟ್ ಡ್ರೆಸ್‌ಗಳನ್ನು ಹಾಕಿರುತ್ತಾರೆ. ಆದರೆ, ಹೊರಗಡೆ ಬಂದಾಗ ಭಾರಿ ಮುಜುಗರ ಪಡುತ್ತಿರುತ್ತಾರೆ. ನೀವು ಹಾಕಿದ ಬಟ್ಟೆಯಲ್ಲಿ ನೀವು ಕಂಫರ್ಟೆಬಲ್ ಆಗಿಲ್ಲದಿದ್ದರೆ, ನೀವು ಹಾಕಿದ ಬಟ್ಟೆ ಎಷ್ಟೇ ಚೆನ್ನಾಗಿದ್ದೂ ನೀವು ರೂಪಸಿಯಾಗಿ ಕಾಣುವುದಿಲ್ಲ. ಏನೇ ಧರಿಸಿ, ಅದು ಕಂಫರ್ಟೆಬಲ್ ಫೀಲ್ ಕೊಡಲಿ. ಇಲ್ಲಾ, ಕಂಫರ್ಟೆಬಲ್ ಇರುವ ಬಟ್ಟೆಯನ್ನೇ ಹಾಕಿ ಆ್ಯಟಿಟ್ಯೂಡ್ ತೋರಿಸಿ.
– ನಿಮಗೆ ಯಾವ ಶೈಲಿಯ ಡ್ರೆಸ್ ತುಂಬಾ ಕಂಫರ್ಟ್?
ನನಗೆ ಶಾರ್ಟ್ಸ್ ಮತ್ತು ಟೀ ಶರ್ಟ್ ಧರಿಸೋದಂದ್ರೆ ತುಂಬಾ ಇಷ್ಟ. ಜೊತೆಗೆ ಸೀರೆ ಕೂಡ ತುಂಬಾ ಇಷ್ಟ. ಸೀರೆಯಲ್ಲಿ ನಾನು ಅಪ್ಪಟ ಭಾರತೀಯ ನಾರಿ ಥರಾ ಕಾಣುತ್ತೇನೆ. ಆದರೆ, ಹೈಹೀಲ್ಸ್ ಧರಿಸಿ, ನಡೆಯುವುದೆಂದರೆ ಮಾತ್ರ ನನಗೆ ಸಖತ್ ಕಷ್ಟ. ಈಗೀಗ ಹೈಹೀಲ್ಸ್‌ನಲ್ಲಿ ನಡೆಯೋದನ್ನು ಸ್ವಲ್ಪ ಅಭ್ಯಾಸ ಮಾಡಿದ್ದೇನೆ. ಆದರೂ ಅದು ಭಯಂಕರ ಕಷ್ಟ ಆಗುತ್ತದೆ.
– ಬೆಂಗಳೂರಿನಲ್ಲಿ ಭಯಂಕರ ಚಳಿ ಶುರುವಾಗಿದೆ. ಚಳಿ ಇದ್ದಾಗ ಎಲ್ಲಿಗೆ ಹೋಗಬೇಕು ಅಂತನಿಸುತ್ತೆ?
ಈಗ ನನಗೆ ಬೆಂಗಳೂರು ಬಿಟ್ಟು ಚಿಕ್ಕಮಗಳೂರಿನ ಯಾವುದಾದರೂ ಹೋಂ ಸ್ಟೇಗೆ ಹೋಗಿ ಇದ್ದು ಬಿಡಬೇಕು ಅಂತನ್ನಿಸುತ್ತಿದೆ. ಬೆಂಗಳೂರಿನಲ್ಲಿ ಇರುವಾಗ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ತಿನ್ನಬೇಕು ಅಂತ ತುಂಬಾ ಅನಿಸುತ್ತೆ. ತುಂಬಾ ಚಳಿ ಆದಾಗ ಒಂದು ಕಪ್ ಟೀ ಹಿಡಿದು ಬಾಲ್ಕನಿಗೆ ಬಂದು ಯಾವುದಾದರೂ ಹಾಡು ಕೇಳುತ್ತಾ ನಿಲ್ಲೋದು ನನಗೆ ಖುಷಿ ಕೊಡುತ್ತದೆ.
– ತುಂಬಾ ಚೆನ್ನಾಗಿ ಹಾಡ್ತೀರಂತೆ. ಆಗಾಗ ಯಾವ ಹಾಡು ಗುನುಗುತ್ತೀರಾ?
ಆಶಾ ಭೋಂಸ್ಲೆ ಹಡಿರುವ ಹಿಂದಿ ಹಾಡು “ಆಜ್ ಜಾನೆ ಜಿದ್ ನಾ ಕರೋ…’ ಹಾಡು ನನಗೆ ತಿಳಿಯದಂತೇ ಸದಾ ನನ್ನ ನಾಲಿಗೆಯಲ್ಲಿರುತ್ತದೆ. ಈಗ “ದಯವಿಟ್ಟು ಗಮನಿಸಿ’ ಚಿತ್ರದ ಟೈಟಲ್ ಹಾಡು ತುಂಬಾ ಇಷ್ಟ.
– ನೀವು ಯಾವ ಹೀರೊಗಳ ಡೈ ಹಾರ್ಡ್ ಫ್ಯಾನ್?
ಕ್ರಮವಾಗಿ ಹೇಳಬೇಕೆಂದರೆ ಸುದೀಪ್, ಶಿವಣ್ಣ, ಪುನೀತ್ ರಾಜ್‌ಕುಮಾರ್ ನನಗೆ ಇಷ್ಟ. ಇವರ ಜೊತೆ ಕಲಸ ಮಾಡುವ ಅವಕಾಶ ಸಿಕ್ಕರೇ ಅದೇ ಪುಣ್ಯ. ರಕ್ಷಿತ್ ಶೆಟ್ಟಿ ಅವರ ಸಿನಿಮಾದಲ್ಲಿ ಕೂಡ ಕೆಲಸ ಮಾಡುವ ಆಸೆ ಇದೆ.
– ಮನೆಯಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್?
ಮನೆಯಲ್ಲಿ ನನ್ನ ಅಣ್ಣ ಮತ್ತು ಅತ್ತಿಗೆ ನನ್ನ ಬೆಸ್ಟ್ ಫ್ರೆಂಡ್ಸ್. ಅವರಿಗೊಂದು ಪುಟ್ಟ ಮಗು ಇದೆ. ಅದು ಥೇಟ್ ನನ್ನ ಥರಾನೇ ಇದೆ. ಅದರ ಜೊತೆ ಆಡುತ್ತಾ ಸಮಯ ಕಳೆಯೋದಂದ್ರೆ, ನನಗೆ ಭಾರಿ ಖುಷಿ. ಆದ್ರೆ ಆ ಖುಷಿ ಹೆಚ್ಚು ಹೊತ್ತು ಇರಲ್ಲ. ಮಗು ಏನಾದರೂ ಕಿರಿಕಿರಿ ಮಾಡಲು ಆರಂಭಿಸಿದರೆ ನನಗೆ ಕಿರಿಕಿರಿ ಆಗಲು ಶುರುವಾಗುತ್ತೆ. ಮಗುವನ್ನು ಎತ್ತಿಕೊಂಡು ಹೋಗಿ ಅದರ ಅಮ್ಮನ ಕೈಗೆ ಕೊಟ್ಟು ಬಿಡ್ತೀನಿ.
– ಇನ್ನು 10 ವರ್ಷಗಳ ಬಳಿಕ ಭಾವನಾ ರಾವ್ ಏನಾಗಿರುತ್ತಾರೆ?
ಒಳ್ಳೆ ಗೃಹಿಣಿ, ತುಂಬಾ ಒಳ್ಳೆಯ ತಾಯಿ, ಯಶಸ್ವಿ ಕೊರಿಯೋಗ್ರಾಫರ್ ಆಗಿರುತ್ತೇನೆ. 10 ವರ್ಷಗಳ ಬಳಿಕ ನನ್ನ ಸಿನಿಮಾ ವೃತ್ತಿ ಕಡೆ ಹಿಂದಿರುಗಿ ನೋಡಿದಾಗ ನಾನು ಒಂದು 10 ನೆನಪಿನಲ್ಲಿಟ್ಟುಕೊಳ್ಳುವಂಥ ಚಿತ್ರಗಳ ಭಾಗವಾಗಿರಬೇಕು. ಸದ್ಯ ಡಾಲರ್ ಕಾಲೊನಿಯಲ್ಲಿ ಫ್ರೆಂಡ್ ಜೊತೆ ಸೇರಿ ಡ್ಯಾನ್ಸ್ ಸ್ಟುಡಿಯೋ ತೆರೆದಿದ್ದೇನೆ. ಅಲ್ಲಿ ಡ್ಯಾನ್ಸ್ ತರಬೇತಿಗೆಂದೇ ತರಬೇತುದಾರರಿದ್ದಾರೆ. ನಾನೂ ಡ್ಯಾನ್ಸ್ ಕಲಿಸುವುದು, ಕೊರಿಯೊಗ್ರಫಿ ಮಾಡುವುದು ಮಾಡುತ್ತೇನೆ. ಸಂಸ್ಥೆಯನ್ನು ಇನ್ನಷ್ಟು ಚೆನ್ನಾಗಿ ಕಟ್ಟಿ ಬೆಳೆಸಬೇಕು. ಸದ್ಯಕ್ಕೇ ಅಷ್ಟೇ, ಫ್ಯೂಚರ್ ಪ್ಲಾನ್ಸ್.
“ದಯವಿಟ್ಟು ಗಮನಿಸಿ’ ಇದು ನನ್ನ ಕೆರಿಯರ್‌ನ ವಿಶೇಷ
ಈಗ ಹೊಸ ಅಲೆ ಚಿತ್ರಗಳದ್ದೇ ಸುದ್ದಿ. ಇಂಥ ಸಮಯದಲ್ಲಿ ಯಾವ ನಟ, ನಟಿಯರಿಗಾದರೂ ಬ್ರಿಡ್ಜ್ ಸಿನಿಮಾಗಳಲ್ಲಿ ಅಭಿನಯಿಸುವ ಆಸೆ ಇರುತ್ತದೆ. ನಾನೂ ಅಂಥದ್ದೊಂದು ಅವಕಾಶಕ್ಕಾಗಿ ಕಾದಿದ್ದೆ. ಅದರಲ್ಲೂ “ಲೂಸಿಯಾ’ ಚಿತ್ರ ನೋಡಿದ ಮೇಲೆ ಬ್ರಿಡ್ಜ್ ಸಿನಿಮಾದಲ್ಲಿ ನಟಿಸುವ ಬಯಕೆ ಹೆಚ್ಚಾಗಿತ್ತು. “ದಯವಿಟ್ಟು ಗಮನಿಸಿ’ ಚಿತ್ರದ ಅವಕಾಶ ಸಿಕ್ಕಿತು. ಎಂಥ ಒಳ್ಳೆಯ ರೆಸ್ಪಾನ್ಸ್ ಜನರಿಂದ ಬರುತ್ತಿದೆ. ಈ ಚಿತ್ರದ ಭಾಗವಾಗಿದ್ದರ ಬಗ್ಗೆ ಸದಾ ಹೆಮ್ಮೆ ಇರುತ್ತದೆ.
ರಾಂಪ್ ಮೇಲೆ ನಡೆದಿದ್ದಕ್ಕೆ ಅಮ್ಮ ಬೈದಿದ್ರು…
ನಮ್ಮದು ಮಧ್ಯಮ ವರ್ಗದ ಕುಟುಂಬ. ನಮ್ಮನೇಲಿ ಸಿನಿಮಾ, ಮಾಡೆಲಿಂಗ್ ಅಂದ್ರೇನೆ ಏನೋ ದೊಡ್ಡ ಅಪರಾಧ ಅನ್ನೋ ಹಾಗೆ ತಿಳೀತಿದ್ರು. ನನಗೆ ಒಳ್ಳೇ ಶಿಕ್ಷಣ ಕೊಡಿಸಿ, ಶಿಕ್ಷಣ ಮುಗೀತಿದ್ದ ಹಾಗೆ ಮಾದುವೆ ಮಾಡಿ ಬಿಡುವ ಯೋಚನೆಯಲ್ಲಿ ಅವರಿದ್ರು. ನಾನು ಕಾಲೇಜಿನಲ್ಲಿದ್ದಾಗ ಒಮ್ಮೆ ಗ್ಲಾಟ್ರಾಕ್ಸ್ ಎಂಬ ಸಂಸ್ಥೆ, ಮಾಡೆಲ್ ಹಂಟ್‌ಗೆ ಅಂತ ಬಂದಿತ್ತು. ಆಗ ನಾನು ಕದ್ದು ಮುಚ್ಚಿ ಆಡಿಷನ್ ಕೊಟ್ಟಿದ್ದೆ. ಆಡಿಷನ್‌ನಲ್ಲಿ ಆಯ್ಕೆಯಾಗಿ ಫ್ಯಾಷನ್ ಶೋಗೆ ಸೆಲೆಕ್ಟ್ ಆದೆ. ಅಲ್ಲಿ ಮಾಡಿದ್ದ ರ್‍ಯಾಂಪ್ ವಾಕ್ ಮರುದಿನ ಪೇಪರ್‌ನಲ್ಲಿ ಬಂದುಬಿಡು¤. ನಮ್ಮಮ್ಮ ಬೆಳಗ್ಗೆ ಬೆಳಗ್ಗೆ ಪೇಪರ್ ಹಿಡಿದು ನನ್ನನ್ನು ಎಬ್ಬಿಸಿ “ನೋಡಿಲ್ಲಿ, ನೀನು ಮಾಡಿರುವ ಕೆಲಸ ಪೇಪರ್‌ನಲ್ಲೆಲ್ಲಾ ಬಂದಿದೆ. ನಿನಗೆ ಮರ್ಯಾದೆ ಇಲ್ವಾ?’ ಅಂತ ಬೈದಿದ್ರು. ನಾನು ಹೆದರಿ ಮತ್ತೆ ರ್‍ಯಾಂಪ್ ಮೆಟ್ಟಲೇರುವ ಧೈರ್ಯ ಮಾಡಲಿಲ್ಲ. ಈಗ ನೆನೆಸಿಕೊಂಡ್ರೆ ನಗು ಬರತ್ತೆ.
ಹಿರಿಯ ನಟ ಶ್ರೀಧರ್ ನನಗೆ 50 ರೂ. ಬಹುಮಾನ ಕೊಟ್ಟಿದ್ರು!
ನಾನು 7 ವರ್ಷದವಳಿದ್ದಾಗ ಮೊದಲ ಬಾರಿಗೆ ವೇದಿಕೆ ಮೇಲೆ ಪ್ರದರ್ಶನ ನೀಡಿದ್ದೆ. ಆ ಕಾರ್ಯಕ್ರಮಕ್ಕೆ ನಟ ಶ್ರೀಧರ್ ಅವರು ಅತಿಥಿಯಾಗಿ ಬಂದಿದ್ದರು. ನಾನು ಶೋ ಕೊಟ್ಟ ಬಳಿಕ ಅವರು ನನ್ನ ಕೈಗೆ 50 ರೂ. ನೋಟು ನೀಡಿ, “ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದೆ ಮರಿ’ ಎಂದು ಹೇಳಿದ್ದರು. ಅವರು ನೀಡಿದ್ದ 50 ರೂ. ನನ್ನ ಜೀವನದ ಮೊದಲ ಗಳಿಕೆ. ನಾನದನ್ನು ಜೋಪಾನವಾಗಿ ತೆಗೆದುಕೊಂಡು ಹೋಗಿ ಅಮ್ಮನಿಗೆ ನೀಡಿದ್ದೆ.
ಮಾಧುರಿ ದೀಕ್ಷಿತ್ ಮತ್ತು ರಮ್ಯಾ ನನಗೆ ರೋಲ್ ಮಾಡೆಲ್‌ಗಳು
ಚಿಕ್ಕವಳಿದ್ದಾಗ ಮಾಧುರಿ ದೀಕ್ಷಿತ್ ನನ್ನನ್ನು ತುಂಬಾ ಪ್ರಭಾವಿಸುತ್ತಿದ್ದ ಮಹಿಳೆ. ಅವರ ಡ್ಯಾನ್ಸಿಂಗ್ ಸ್ಕಿಲ್ಸ್, ನೋಟ, ಸೌಂದರ್ಯ ಎಲ್ಲವೂ ತುಂಬಾ ಇಷ್ಟ ಆಗ್ತಾ ಇತ್ತು. ಜೊತೆಗೆ ಅವರು ತುಂಬಾ ಗಂಭೀರ ಸ್ವಭಾವದವರು ಕೂಡ. ಬಳಿಕ ನಮ್ಮ ಸ್ಯಾಂಡಲ್‌ವುಡ್ ನಟಿ ರಮ್ಯಾ ನನ್ನ ಮೆಚ್ಚಿನ ಮಹಿಳೆಯಾದರು. 10 ವರ್ಷಗಳ ಕಾಲ ಟಾಪ್ ನಟಿಯಾಗಿ ಮೆರೆಯುವುದೆಂದರೆ ಚಿಕ್ಕ ವಿಷಯವಾ? ರಮ್ಯಾ ಈಗಲೂ ಸಿನಿಮಾ ರಂಗಕ್ಕೆ ಹಿಂತಿರುಗುತ್ತೇನೆ ಅಂದ್ರೆ ಹತ್ತಾರು ನಿರ್ಮಾಪಕರು ಅವರ ಮುಂದೆ ಹೋಗಿ ಕ್ಯೂ ನಿಲ್ಲಬಹುದು. ಈಗಲೂ ಅಷ್ಟು ಬೇಡಿಕೆ ಇದೆ ಅವರಿಗೆ. ಆದರೆ, ಆ ಅವಕಾಶವನ್ನೆಲ್ಲ ಬಿಟ್ಟು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅದರಲ್ಲೂ ಸಕ್ಸಸ್ ಕಾಣುತ್ತಿದ್ದಾರೆ. ಜೊತೆಗೆ ಅವರ ವ್ಯಕ್ತಿತ್ವದಲ್ಲೂ ಒಂದು ತೂಕ ಇದೆ. ಅವರ ಬಗ್ಗೆ ಹೆಮ್ಮೆ ಆಗುತ್ತೆ.
– ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.