ಸಿಎಂ ಕ್ಯಾಂಡಿಡೇಟ್! ತುಪ್ಪದ ಹುಡುಗಿ ರಾಗಿಣಿಯ ಬೆಣ್ಣೆ ಮಾತು
Team Udayavani, Jul 19, 2017, 3:40 AM IST
ಬೆಣ್ಣೆಯಂಥ ಚೆಲುವು, ತುಪ್ಪದ ಘಮವೂ, ತಾವರೆಯಂಥ ನಗುವೂ ಮಿಳಿತವಾದ ರೂಪರಾಶಿ, ನಟಿ ರಾಗಿಣಿ. “ವೀರ ಮದಕರಿ’ಯಲ್ಲಿ ಸಿನಿರಸಿಕರಿಗೆ ಜುಮ್ ಜುಮ್ಮೆನ್ನಿಸಿ, ಕನ್ನಡಿಗರಿಗೆ ಪರಿಚಿತಗೊಂಡ ಈ ಮಾದಕ ನಟಿ, ಇಂದು ಬೇಡಿಕೆಯ ತಾರೆ. ಆ್ಯಕ್ಷನ್ ಲುಕ್ಕಿಗೂ, ಐಟಂ ಕಿಕ್ಕಿಗೂ ಒಗ್ಗಿಹೋದ ಈ ಸುಂದರಿ ಆಗಾಗ್ಗೆ ಕೆರಿಯರ್‌ನ ಆಚೆಗೂ ಸುದ್ದಿ ಆಗುತ್ತಾರೆ. ಹುಟ್ಟಿದ್ದು ಬೆಂಗಳೂರಿನ ಪಂಜಾಬಿ ಕುಟುಂಬದಲ್ಲಿ. ತಂದೆ ಸೇನೆಯ ಜನರಲ್ ಆಗಿದ್ದವರು. ರಾಗಿಣಿ, 2008ರಲ್ಲೇ “ಫೆಮಿನಾ ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಬಾಚಿದವರು. ಸದ್ಯಕ್ಕೆ ಆ್ಯಕ್ಷನ್ ಚಿತ್ರಗಳಲ್ಲಿ ಮಿಂಚುತ್ತಿರುವ ಕನ್ನಡದ ಏಕೈಕ ನಟಿ. ಕೇವಲ ಕನ್ನಡವಲ್ಲ ತೆಲುಗು, ಮಲಯಾಳಂ, ತಮಿಳು ಚಿತ್ರಗಳಲ್ಲೂ ಮಿಂಚಿದ್ದಾರೆ. ಸದ್ಯಕ್ಕೆ “ನಾನೇ ನೆಕ್ಸ್ಟ್ ಸಿಎಂ’ ಎನ್ನುತ್ತಿರುವ ರಾಗಿಣಿ ಬದುಕಿನ ಒಂದು ರೌಂಡಪ್ ನಿಮ್ಮ ಓದಿಗೆ…
ಆ್ಯಕ್ಷನ್ ಸಿನಿಮಾಕ್ಕೇ ಬ್ರಾಂಡ್ ಆದ ಹಾಗೆ ಕಾಣುತ್ತೀರಿ?
ಒಂದೇ ಥರದ ಪಾತ್ರ ಮಾಡುತ್ತಿದ್ದರೆ, ಯಾವ ನಟಿಗಾದರೂ ಬೋರ್ ಆಗುತ್ತದೆ. ಅಂಥ ಸಮಯದಲ್ಲಿ ಆ್ಯಕ್ಷನ್ ಸಿನಿಮಾಗಳು ನನ್ನನ್ನು ಹುಡುಕಿಕೊಂಡು ಬಂದವು. ಅದೂ “ಸೋಲೊ’ ಪಾತ್ರಗಳು. ಈ ವಿಷಯದಲ್ಲಿ ನಾನು ಅದೃಷ್ಟವಂತೆ ಎಂದೇ ಹೇಳಬೇಕು. ಏಕೆಂದರೆ, ಈಚಿನ ದಿನಗಳಲ್ಲಿ “ಸೋಲೊ’ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಟಿ ಎಂದರೆ ಅದು ನಾನೇ. ಈ ಚಿತ್ರಗಳು ನನಗೆ ಬೇರೆಯದ್ದೇ ಇಮೇಜ್, ಐಡೆಂಟಿಟಿ ನೀಡಿವೆ. ಆದರೆ, ಕಮರ್ಷಿಯಲ್ ಚಿತ್ರಗಳಲ್ಲೂ ನಾಯಕಿಯಾಗಿ ನಟಿಸುವುದನ್ನು ಮುಂದುವರಿಸುತ್ತೇನೆ. ಅಭಿಮಾನಿಗಳು ನನ್ನನ್ನು ಆ ರೀತಿಯ ಪಾತ್ರಗಳಲ್ಲೂ ನೋಡಲು ಇಷ್ಟ ಪಡುತ್ತಾರೆ.
ಅಭಿಮಾನಿ ಸಂಘ ಉಂಟಂತೆ…?
ಹೌದು. ಇದು ಕನ್ನಡ ಜನತೆಯ ಆಶೀರ್ವಾದ. ಒಬ್ಬ ಹೀರೋಗೆ ತೋರುವಂಥ ಅಭಿಮಾನವನ್ನು ಅವರು ನನಗೆ ತೋರಿಸುತ್ತಿದ್ದಾರೆ. ನನಗೆ ನನ್ನದೇ ಆದ ಮಾರ್ಕೆಟ್ ಇದೆ. ನಟರಿಗೆ ಈ ರೀತಿಯ ಮಾರ್ಕೆಟ್ ಇರುತ್ತದೆ. ಆದರೆ, ನಟಿಯರಿಗೆ ಇಂಥ ಇಮೇಜ್ ಸಿಗುವುದು ಬಹಳ ಕಡಿಮೆ. ನನಗೆ ಇದೆಲ್ಲಾ ಸಿಕ್ಕಿರುವುದು ಹೆಮ್ಮೆ ಮತ್ತು ಖುಷಿ. ಇದರಿಂದ ನನ್ನ ಜವಾಬ್ದಾರಿ ಕೂಡ ಹೆಚ್ಚಿದೆ.
ಐಟಂ ಸಾಂಗ್‌ನಲ್ಲಿ ಕುಣಿದ್ರೆ, ಅಭಿಮಾನಿಗಳು ಹುಟ್ಕೊàತಾರಾ?
ನಾನು ನಟಿಸಿರುವ ಐಟಂ ಸಾಂಗ್‌ಗಳೆಲ್ಲಾ ಸಾಕಷ್ಟು ಜನಪ್ರಿಯವಾಗಿರುವುದು ನಿಜ. ಅದರಲ್ಲೂ “ತುಪ್ಪ ಬೇಕೇ ತುಪ್ಪಾ…’ ಮತ್ತು “ಅಕ್ಕ ನಿನ್ ಮಗಳು…’ ಹಾಡುಗಳು ಮಕ್ಕಳಿಗೂ ಇಷ್ಟ ಆಗಿವೆ. ಆದರೆ, ಐಟಂ ಹಾಡಿನಿಂದಲೇ ಅಭಿಮಾನಿಗಳನ್ನು ಸಂಪಾದಿಸಿದೆ ಎನ್ನಲಾಗುವುದಿಲ್ಲ.
ಎಷ್ಟು ಚಿತ್ರಗಳು ಕೈಯಲ್ಲಿವೆ?
“ಕಿಚ್ಚು’ ಮತ್ತು “ಗಾಂಧಿಗಿರಿ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಮತ್ತೆ 3 ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಅದರಲ್ಲಿ 2 ಕಮರ್ಷಿಯಲ್ ಚಿತ್ರ ಮತ್ತೂಂದು ನಾಯಕಿ ಪ್ರಧಾನ ಚಿತ್ರ. ದ್ವಿಭಾಷೀಯ ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆ. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಹೊರಬರಲಿದೆ.
ನಿಮ್ಮ ಕನ್ನಡ ಸಾಕಷ್ಟು ಸುಧಾರಿಸಿದೆ ಅಲ್ವಾ?
“ನಾನೇ ನೆಕ್ಸ್ಟ್ ಸಿಎಂ’ ಅಲ್ವಾ ಅದಕ್ಕೆ… ಎಲ್ಲಾ ಕ್ರೆಡಿಟ್ಸ್ ಪ್ರೊಡಕ್ಷನ್ ಬಾಯ್ಸ, ಲೈಟ್ ಬಾಯ್ಸ, ಟೆಕ್ನಿಷಿಯನ್‌ಗಳಿಗೆ ಸೇರಬೇಕು. ನನ್ನ ಕನ್ನಡವನ್ನು ಅವರೆಲ್ಲಾ ಸಾಕಷ್ಟು ತಿದ್ದಿದ್ದಾರೆ.
ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರಾ?
ಫ್ರೀ ಇದ್ದಾಗ ನನ್ನ ಫ್ರೆಂಡ್ಸನ್ನೆಲ್ಲಾ ಮನೆಗೆ ಕರೆದು ನಾನೇ ಅವರಿಗೆ ಅಡುಗೆ ಮಾಡಿ ಬಡಿಸುತ್ತೇನೆ. ಇಟಾಲಿಯನ್, ಮೆಕ್ಸಿಕನ್, ಚೈನೀಸ್ ಅಡುಗೆಗಳನ್ನು ಹೆಚ್ಚಾಗಿ ತಯಾರಿಸುತ್ತೇನೆ. ನಾನು ಅಡುಗೆ ಮಾಡಲು ಆರಂಭಿಸಿ ಕೇವಲ ಒಂದೂವರೆ ವರ್ಷ ಮಾತ್ರ ಕಳೆದಿರುವುದು. ಒಮ್ಮೆ ಯಾವಾಗಲೋ ನೆಟ್‌ನಲ್ಲಿ ನೋಡಿದ್ದ ಅಡುಗೆಯನ್ನು ಟ್ರೈ ಮಾಡಿದ್ದೆ. ಅಲ್ಲಿಂದ ಕುಕಿಂಗ್ ಒಂದು ಹವ್ಯಾಸವಾಗಿ ಬದಲಾಗಿದೆ.
ಟ್ರಿಪ್ ಹೊಡೆಯೋದಾದ್ರೆ…?
ಇಸ್ತಾಂಬುಲ್ ಮತ್ತು ಮಾಲ್ಡೀವ್ಸ್. ಕರ್ನಾಟಕದಲ್ಲಾದರೆ ಸಕಲೇಶಪುರ, ಗೋಕಾಕ್. ಉತ್ತರ ಕರ್ನಾಟಕ ಪ್ರವಾಸ ನನಗೆ ಬಹಳಾ ಇಷ್ಟ.
ನಿಮ್ಮ 6 ಸ್ನೇಹಿತರ ಬಗ್ಗೆ ಹೇಳಿ…
ನನ್ನ 6 ಸ್ನೇಹಿತರು ನನ್ನ ಮುದ್ದಿನ ನಾಯಿಗಳು. ತುಮಕೂರು ಬಳಿ ನಮ್ಮ ತೋಟ ಇದೆ. ಅಲ್ಲಿ ಮೂರು ನಾಯಿಗಳಿವೆ. ಬೆಂಗಳೂರಿನ ಮನೆಯಲ್ಲಿ 3 ನಾಯಿಗಳಿವೆ. ನನಗೆ ಪ್ರಾಣಿಗಳೆಂದರೆ ಮೊದಲಿನಿಂದಲೂ ತುಂಬಾ ಇಷ್ಟ. ಅದರಲ್ಲೂ ನಾಯಿಗಳು ತೋರಿಸುವ ಪ್ರೀತಿ ಎಂಥಾ ನೋವನ್ನಾದರೂ ಮರೆಸುತ್ತದೆ.
ರಾಗಿಣಿಯ ಚೆಂದದ ಹಿಂದಿನ ರಹಸ್ಯ?
ಮೆಡಿಮಿಕ್ಸ್ ಸೋಪ್, ವಿಕೊ ಟರ್ಮರಿಕ್ ಕ್ರೀಮ್ ಮತ್ತು ಅಮ್ಮ ಮಾಡಿಕೊಡುವ ಹೋಮ್ ಮೇಡ್ ಫೇಸ್ ಪ್ಯಾಕ್‌ಗಳು..
ನಿಮ್ಮ ತಂದೆ ಸೇನೆಯಲ್ಲಿ ಇದ್ದವರು. ನೀವು ಬಹಳ ಸ್ಟ್ರಿಕ್ಟಾ?
ಸೇನಾ ಕುಟುಂಬದಲ್ಲಿ ಮಕ್ಕಳನ್ನು ಸ್ಟ್ರಿಕ್ಟ್ ಆಗಿ ಬೆಳೆಸುತ್ತಾರೆ ಎನ್ನುವುದು ಸುಳ್ಳು. ಮಕ್ಕಳನ್ನು ಸ್ಟ್ರಾಂಗ್ ಆಗಿ ಬೆಳೆಸುತ್ತಾರೆ. ಎಲ್ಲಾ ಸಂದರ್ಭಗಳಲ್ಲೂ ಹೊಂದಿಕೊಳ್ಳುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಿರುತ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳು, ಗಂಡು ಮಕ್ಕಳೆಂಬ ಬೇಧವೇ ಇರುವುದಿಲ್ಲ.
ಐಟಂ ಡ್ಯಾನ್ಸ್‌ನಿಂದ ಸ್ನೇಹಿತರಿಗೆ ಹೆಲ್ಪ್ ಆಗುತ್ತೆ!
ನಟಿಯಾಗಿ ಬೇಡಿಕೆಯಲ್ಲಿರುವಾಗಲೇ ಐಟಂ ಸಾಂಗ್ ಏಕೆ ಒಪ್ಪಿಕೊಳ್ಳುತ್ತೀಯಾ ಎಂದು ಸಾಕಷ್ಟು ಜನರು ಕೇಳುತ್ತಾರೆ. ಬೇಡಿಕೆಯಲ್ಲಿದ್ದರೆ ಐಟಂ ಸಾಂಗ್, ಸ್ಪೆಷಲ್ ಅಪಿಯರೆನ್ಸ್ ಪಾತ್ರಗಳಲ್ಲಿ ನಟಿಸಬಾರದು ಎಂದು ನಿಯಮ ಎಲ್ಲಿದೆ? ನಾನು ನನ್ನ ಸಿನಿಮಾಗಳಲ್ಲೇ ಐಟಂ ಸಾಂಗ್‌ಗಳನ್ನು ಮಾಡಿದ್ದೇನೆ. ಐಟಂ ಸಾಂಗ್‌ಗಳನ್ನು ಒಪ್ಪಿಕೊಳ್ಳಲು ಮೊದಲ ಕಾರಣವೇನೆಂದರೆ, ಉದ್ಯಮದಲ್ಲಿಯ ನನ್ನ ಸ್ನೇಹಿತರಿಗೆ ಸಹಾಯವಾಗಲಿ ಎಂಬುದು. ಸ್ನೇಹಿತರು ನನ್ನ ಸಹ ನಟರಾಗಿರಬಹದು, ನಿರ್ದೇಶಕ, ನಿರ್ಮಾಪಕರಾಗಿರಬಹುದು. ಅವರ ಚಿತ್ರದಲ್ಲಿ ನಾನು ಐಟಂ ಸಾಂಗ್‌ನಲ್ಲಿ ನಟಿಸುವುದರಿಂದ ಅವರ ಚಿತ್ರಕ್ಕೆ ಸಹಾಯವಾಗುತ್ತದೆ ಎಂದಾದರೆ ನಾನು ಆ ಆಫರ್ ಒಪ್ಪಿಕೊಳೆ¤àನೆ. ಅಲ್ಲದೇ ನನಗೂ ವಿಭಿನ್ನ ಗೆಟಪ್ ಮತ್ತು ಲುಕ್‌ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಸಿಗುತ್ತದೆ.
ಕಾಳಿ ನದಿಯ ತಟದಲ್ಲಿ…
ಕರ್ನಾಟದಲ್ಲಿ ಎಷ್ಟೊಂದು ಸುಂದರ ಸ್ಥಳಗಳಿವೆ ಗೊತ್ತಾ? ವಿಪರ್ಯಾಸವೆಂದರೆ, ಅವುಗಳೆಲ್ಲಾ ಅಪರಿಚಿತವಾಗಿಯೇ ಉಳಿದಿವೆ. ನನಗೆ ಅಂಥ ಅಪರಿಚಿತ ಸ್ಥಳಗಳನ್ನು ಎಕ್ಸ್‌ಪ್ಲೋರ್ ಮಾಡುವ ಆಸೆಯಿದೆ. ಅದರಲ್ಲೂ ಉತ್ತರ ಕರ್ನಾಟಕ ನನ್ನನ್ನು ಸೆಳೆಯುವಷ್ಟು ಬೇರೆ ಯಾವ ದೇಶವೂ ಸೆಳೆದಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರತಿ 100 ಕಿ.ಮೀ.ಗೆ ಭಾಷೆ ಬದಲಾಗುತ್ತದೆ. 200 ಕಿ.ಮೀ.ಗೆ ವಾತಾವರಣ ಬದಲಾಗುತ್ತದೆ. ನೋಡಲು ತುಂಬಾ ಜಾಗಗಳಿವೆ. ಕಾಳಿ ನದಿ ತಟದಲ್ಲಿ ಹುಲಿದೇವರ ಕಾಡು ಎಂಬ ಸ್ಥಳ ಇದೆ. ಆ ಸ್ಥಳದ ಕುರಿತೇ ಚಿತ್ರವೊಂದನ್ನು ತಯಾರಿಸುತ್ತಿದ್ದೇವೆ. ಆ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಉತ್ತರ ಕರ್ನಾಟಕದಲ್ಲಿ ಇನ್ನಷ್ಟು ಸುತ್ತಾಡಲು ಒಳ್ಳೆಯ ಅವಕಾಶ ಸಿಕ್ಕಿದೆ.
“ತೂಕ’ದ ಮಾತು!
“ರಣಚಂಡಿ’ ಶೂಟಿಂಗ್ ವೇಳೆ ಬಿದ್ದಿದ್ದೆ. ಬಳಿಕ ವಿಶ್ರಾಂತಿ ತೆಗೆದುಕೊಳ್ಳುವ ಸಲುವಾಗಿ ಎಲ್ಲಾ ದೈಹಿಕ ಚಟುವಟಿಕೆಗಳನ್ನು ಕೆಲಕಾಲ ಬದಿಗಿರಿಸಬೇಕಾಗಿತ್ತು. ಆಗಲೇ ನಾನು ದಪ್ಪಗಾಗಿದ್ದು. ನಾನು ಮೊದಲಿನಿಂದಲೂ ಫಿಟೆ°ಸ್ ಬಗ್ಗೆ ಹೆಚ್ಚು ಗಮನ ಕೊಟ್ಟವಳು. ದಪ್ಪಗಾಗುತ್ತಾ ಹೋದಂತೆ ಒಂದು ರೀತಿಯ ಕೀಳರಿಮೆ ಆವರಿಸಿಕೊಳ್ಳಲು ಆರಂಭವಾಯಿತು. ಮನೆಯಿಂದ ಹೊರ ಹೋಗಲು ಮುಜುಗರವಾಗುತ್ತಿತ್ತು. ಯಾವ ಬಟ್ಟೆ ಹಾಕಿದರೂ ಮನಸ್ಸಿನಲ್ಲಿ ಒಂಥರಾ ಕಸಿವಿಸಿ. 30 ಇಂಚು ಇದ್ದ ನನ್ನ ಪ್ಯಾಂಟ್ ಸೈಝ್ 36ಕ್ಕೆ ತಲುಪಿತ್ತು. ಶಾಪಿಂಗ್ ಹೋಗಲು ಕೂಡಾ ಮನಸ್ಸಾಗುತ್ತಿರಲಿಲ್ಲ.
6 ತಿಂಗಳು ಬ್ರೇಕ್ ತಗೊಂಡೆ…
2016ನೇ ಇಸವಿಯನ್ನು ತೂಕ ಕಳೆದುಕೊಳ್ಳಲೆಂದೇ ಮೀಸಲಿಟ್ಟಿದ್ದೆ. ಕೈಯಲ್ಲಿದ್ದ ಚಿತ್ರಗಳನ್ನು ಬೇಗ ಮುಗಿಸಿದೆ ಮತ್ತು ಯಾವ ಹೊಸ ಚಿತ್ರಗಳನ್ನೂ ಒಪ್ಪಿಕೊಳ್ಳಲಿಲ್ಲ. ಸಂಪೂರ್ಣ 6 ತಿಂಗಳು ದೇಹವನ್ನು ದಂಡಿಸುವುದನ್ನು ಹೊರತುಪಡಿಸಿ ಬೇರೇನನ್ನೂ ಮಾಡಿಲ್ಲ. ಹೊರಗಡೆ ಕೂಡ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.
ಆರೋಗ್ಯಕರವಾಗಿ ತೂಕ ಕಳೆದುಕೊಂಡೆ. ತೂಕ ಇಳಿಸಿಕೊಳ್ಳಲು ಇಷ್ಟು ಸಮಯ ಬೇಕಾ ಎಂದು ನೀವು ಕೇಳಬಹುದು? ಆರೋಗ್ಯಕರವಾಗಿ, ನೈಸರ್ಗಿಕ ಕ್ರಮಗಳಲ್ಲಿ ತೂಕ ಇಳಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ತೂಕ ಇಳಿಸಲು ಸಾಕಷ್ಟು ಅಡ್ಡದಾರಿಗಳಿವೆ. ಆದರೆ ಅವು ಇಂದಲ್ಲಾ ನಾಳೆ ನಮ್ಮ ದೇಹದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತವೆ. ನಾನು ತೂಕ ಇಳಿಸುವ ನಿಶ್ಚಯ ಮಾಡಿದ ನಂತರ ಮೊದಲು ಹೋಗಿದ್ದು ಪ್ರಕೃತಿ ಚಿಕಿತ್ಸಾಲಯಕ್ಕೆ. ನೈಸರ್ಗಿಕ ಕ್ರಮದಲ್ಲಿ ಕೆಲ ಕಿಲೋಗಳಷ್ಟು ತೂಕ ಕಳೆದುಕೊಂಡ ಬಳಿಕ ಡೀಟಾಕ್ಸ್ ಡಯಟ್, ಯೋಗ ಆರಂಭಿಸಿದೆ. ನಂತರ ನ್ಯೂಟ್ರಿಷಿಯನ್, ಜಿಮ್ ಟ್ರೇನರ್‌ಗಳನ್ನು ನೇಮಿಸಿಕೊಂಡು ಕ್ರಮಬದ್ಧವಾಗಿ ದೇಹದಂಡಿಸಿದೆ.
ದಿನಕ್ಕೆ 12 ಬಾರಿ ಆಹಾರ ಸೇವಿಸುತ್ತೇನೆ…
ವಾರದಲ್ಲಿ 5 ದಿನ ಡಯಟ್ ಫಾಲೊ ಮಾಡುತ್ತೇನೆ. ಡಯಟ್ ಮಾಡುವ ದಿನಗಳಲ್ಲಿ ಆರೋಗ್ಯಕರ ಆಹಾರವನ್ನು ದಿನಕ್ಕೆ 12 ಬಾರಿ ಸ್ವಲ್ಪ ಸ್ವಲ್ಪವೇ ಸೇವಿಸುತ್ತೇನೆ. ವಾರಾಂತ್ಯದಲ್ಲಿ “ನೋ ಡಯಟ್’. ಜೊತೆಗೆ ಬೆಳಗ್ಗೆ 45 ನಿಮಿಷ ಯೋಗ ಮತ್ತು ಸಂಜೆ 45 ನಿಮಿಷ ವಕೌìಟ್ ಮಾಡುವುದನ್ನು ತಪ್ಪಿಸುವುದಿಲ್ಲ.
– ಚೇತನ ಜೆ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.