ವಿಶ್ವಸುಂದರಿಯರು ಕೊಟ್ಟ ಉತ್ತರಗಳು
Team Udayavani, Dec 13, 2017, 1:28 PM IST
ಸೌಂದರ್ಯ ಮತ್ತು ಬುದ್ಧಿಶಕ್ತಿಯನ್ನು ಒಂದೇ ವೇದಿಕೆಯಲ್ಲಿ ಅಳೆದು, ತೂಗುವ ಸ್ಪರ್ಧೆಯೇ “ವಿಶ್ವ ಸುಂದರಿ’ ಸ್ಪರ್ಧೆ. 118 ಸುಂದರಿಯರು ಪಾಲ್ಗೊಂಡಿದ್ದ ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ, ಅಂತಿಮ ಸುತ್ತಿಗೆ ಆಯ್ಕೆಯಾದವರು ಕೇವಲ ಐವರು ಮಾತ್ರ. ಆ ಪಂಚಕನ್ಯೆಯರ ಬುದ್ಧಿಶಕ್ತಿ ಹೇಗಿತ್ತು? ಅವರ ಉತ್ತರದಿಂದ ನಾವು ಕಂಡುಕೊಳ್ಳುವುದು ಏನನ್ನು?
1. ಸ್ಟೆಫನಿ ಹಿಲ್, ಮಿಸ್ ಇಂಗ್ಲೆಂಡ್
* ವಿಶ್ವದ ಎಲ್ಲ ನಾಯಕರ ಎದುರು ಮಾತನಾಡುವ ಅವಕಾಶ ಸಿಕ್ಕಿದರೆ, ಯಾವ ವಿಷಯದ ಬಗ್ಗೆ ಮಾತಾಡುತ್ತೀರಿ?
– ನಾನು ಜಾಗತಿಕ ಆರೋಗ್ಯಕ್ಷೇತ್ರದ ಅಸ್ಥಿರತೆಯ ಕುರಿತು ಮಾತಾಡಲು ಇಚ್ಛಿಸುತ್ತೇನೆ. ಜಗತ್ತಿನಲ್ಲಿ ವ್ಯಾಕ್ಸಿನ್ಸ್‌ಗಳು, ಔಷಧಗಳು ಲಭ್ಯವಿವೆ. ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿದೆ.
2. ಅರೋರೆ ಕಿಚೆನಿನ್, ಮಿಸ್ ಫ್ರಾನ್ಸ್
* ಇಲ್ಲಿಯವರೆಗೆ ಜಗತ್ತಿನ ಅತ್ಯಂತ ಮಹತ್ವದ ಅನ್ವೇಷಣೆ ಯಾವುದು ಮತ್ತು ಯಾಕೆ?
– ಅತ್ಯಂತ ಮಹತ್ವದ ಅನ್ವೇಷಣೆ ಅಂದರೆ, ಅದು ಸಾರಿಗೆ. ಎಲ್ಲ ದೇಶಗಳ ಪರಸ್ಪರ ಸಂಪರ್ಕ ಸಾರಿಗೆಯಿಂದ ಸಾಧ್ಯವಾಗಿದೆ.
3. ಮಾನುಷಿ ಛಿಲ್ಲರ್, ಮಿಸ್ ಇಂಡಿಯಾ
*ಯಾವ ವೃತ್ತಿಗೆ ಅತಿ ಹೆಚ್ಚು ವೇತನ ಸಿಗಬೇಕು ಮತ್ತು ಏಕೆ?
– ನಾನು ನಮ್ಮ ಅಮ್ಮನಿಗೆ ತುಂಬಾ ಕ್ಲೋಸ್ ಇರುವುದರಿಂದ, ನನ್ನ ಪ್ರಕಾರ ತಾಯಿಗೇ ಅತಿ ಹೆಚ್ಚಿನ ಗೌರವ ಸಿಗಬೇಕು. ವೇತನ ಅಂದರೆ, ಅದು ಕೇವಲ ಹಣ ಮಾತ್ರ ಅಲ್ಲ. ಬೇರೆಯವರಿಗೆ ತೋರಿಸುವ ಪ್ರೀತಿ- ಗೌರವವೂ ಕೂಡ ಆ ಲೆಕ್ಕಕ್ಕೇ ಬರುತ್ತದೆ. ಅಮ್ಮನೇ ನನ್ನ ಜೀವನದ ದೊಡ್ಡ ಸ್ಫೂರ್ತಿ. ಎಲ್ಲ ತಾಯಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ. ಅತಿ ಹೆಚ್ಚು ವೇತನ, ಗೌರವ ಮತ್ತು ಪ್ರೀತಿ ಸಿಗಬೇಕಾಗಿದ್ದು ತಾಯಂದಿರಿಗೆ.
4. ಮ್ಯಾಗ್‌ಲೈನ್ ಜೆರುಟೊ, ಮಿಸ್ ಕೀನ್ಯಾ
* ಸೈಬರ್ ಬುಲ್ಲಿಯಿಂಗ್ (ಬೆದರಿಕೆ) ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಯಾಗಿದೆ. ಅದನ್ನು ನೀವು ಹೇಗೆ ಪರಿಹರಿಸುತ್ತೀರಿ?
-ಸೈಬರ್ ಬುಲ್ಲಿಯಿಂಗ್ ಅನ್ನೋದು ಇತ್ತೀಚಿಗೆ ಬಹುದೊಡ್ಡ ಸಮಸ್ಯೆಯಾಗಿದೆ ಮತ್ತು ಅದು ಕೊನೆಯಾಗಬೇಕು.
5. ಆಂಡ್ರಿಯಾ ಮೆಝಾ, ಮಿಸ್ ಮೆಕ್ಸಿಕೊ
*ವಿಶ್ವ ಸುಂದರಿಗೆ ಇರಬೇಕಾದ ಮುಖ್ಯವಾದ ಗುಣ ಯಾವುದು?
ಪ್ರೀತಿ… ಅವಳಿಗೆ ಅವಳ ಮೇಲೆ ಹಾಗೂ ಜಗತ್ತಿನ ಮೇಲೆ ಪ್ರೀತಿ ಇರಬೇಕು. ಅದುವೇ ಬಹಳ ಮುಖ್ಯವಾದ ಗುಣ. ವಿಶ್ವ ಸುಂದರಿಯಾದವಳು ಪ್ರೀತಿ ಮತ್ತು ಸಂತೋಷವನ್ನು ಹಂಚಬಲ್ಲವಳಾಗಿರಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.