ಅಜ್ಜನ ಮದುವೆಯ ಆಲ್ಬಮ್ಮು

ಸುದೀರ್ಘ‌ ದಾಂಪತ್ಯದ ಗುಟ್ಟು ಗೊತ್ತೇ?

Team Udayavani, Apr 17, 2019, 11:30 AM IST

Avalu—Ajji

ಬಹಳ ಹಿಂದೆ ಮೊಬೈಲುಗಳೇ ಇಲ್ಲದ ಕಾಲದಲ್ಲಿ ದಾಂಪತ್ಯದಲ್ಲಿ ಸಂಗಾತಿಯ ಬರ್ತ್‌ ಡೇ, ಮೊದಲ ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟಿದ ಹಬ್ಬ… ಈ ರೀತಿಯ ಯಾವ ಆಚರಣೆಗಳೂ ಇರುತ್ತಿರಲಿಲ್ಲ, ಯಾರನ್ನೋ ಮೆಚ್ಚಿಸಬೇಕೆಂಬ ಒತ್ತಡಗಳೂ ಇರುತ್ತಿರಲಿಲ್ಲ. ಹಾಗಿದ್ದೂ ಸಂಸಾರಗಳು ಸಧೃಢವಾಗಿದ್ದವು. ಆಗಿನ್ನೂ ಮದುವೆ ಎನ್ನುವುದು ಹಾಟ್‌ ಸೀಟ್‌ ಆಗಿರಲಿಲ್ಲ!

ಮೊದಲೆಲ್ಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಮದುವೆ ವಾರ್ಷಿಕೋತ್ಸವ ಸಂಭ್ರಮಾಚರಣೆಗಳು ಈಗ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿವೆ. ಪ್ರತಿವರ್ಷವೂ ಕೇಕ್‌ ಕತ್ತರಿಸಿ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಈಗಿನ ಟ್ರೆಂಡ್‌. ಬದಲಾಗುತ್ತಿರುವ ಕಾಲದಲ್ಲಿ ಈ ವಿದ್ಯಮಾನ ಅವಶ್ಯ ಮತ್ತು ಅನಿವಾರ್ಯ ಕೂಡ. ಏಕೆಂದರೆ, ಇದು ದಂಪತಿಗಳ ನಡುವಿನ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಆದರೆ ಹಿಂದೆಲ್ಲಾ ಸಂಗಾತಿಯ ಬರ್ತ್‌ ಡೇ, ಮೊದಲ ಮದುವೆ ವಾರ್ಷಿಕೋತ್ಸವ, ಮಕ್ಕಳ ಹುಟ್ಟಿದ ಹಬ್ಬ… ಈ ರೀತಿಯ ಯಾವ ಆಚರಣೆಗಳೂ ಇರುತ್ತಿರಲಿಲ್ಲ, ಹಾಗಿದ್ದೂ ಸಂಸಾರಗಳು ಸದೃಢವಾಗಿದ್ದವು.

ಮನೆಯಲ್ಲಿ ಕಾರ್ಪೊರೆಟ್‌ ಸಂಸ್ಕೃತಿ
ಇತ್ತೀಚಿಗಷ್ಟೆ ನನ್ನ ಅಜ್ಜನೂ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಅದು ಭರ್ತಿ ಐವತ್ತು ವರ್ಷದ ಗೋಲ್ಡನ್‌ ಜುಬಿಲಿ. 50 ವರ್ಷಗಳ ಕಾಲ, ನಾಲ್ಕಾರು ಮಕ್ಕಳನ್ನು ಹೆತ್ತು, ಅವರಿಗೆ ಉತ್ತಮ ಶಿಕ್ಷಣ ನೀಡಿ ಬಂದದ್ದೆಲ್ಲವನ್ನೂ ಅದು ಹೇಗೆ ಸರಿದೂಗಿಸಿಕೊಂಡು ಹೋದರು ಎನ್ನುವುದು ಅಚ್ಚರಿಯೇ ಸರಿ. ಇಂದು ಒಂದೇ ಒಂದು ಸಣ್ಣ ಮನಸ್ತಾಪಕ್ಕೆ ಕುಟುಂಬಗಳು ತರಗಲೆಗಳಂತೆ ಹಾರಿಹೋಗುತ್ತಿವೆ. ಅಷ್ಟು ದುರ್ಬಲ ಪರಿಸ್ಥಿತಿ ತಂದುಕೊಂಡುಬಿಟ್ಟಿದ್ದೇವೆ. ‘ಸಾರಿ’, ‘ಥ್ಯಾಂಕ್ಸ್‌’ಗಳಿಂದಲೇ ಸಂಸಾರ ನಡೆಯುತ್ತಿದೆ. ನಮ್ಮದೇ ಮನೆಯಲ್ಲಿದ್ದಾಗಲೂ ನೂರಾರು ಫಾರ್ಮಾಲಿಟಿಗಳು. ಎಷ್ಟೋ ಸಲ ಅನ್ನಿಸುವುದಿದೆ; ಇದು ಸಂಸಾರವೋ ಇಲ್ಲಾ ಕಾರ್ಪೊರೆಟ್‌ ಸಂಸ್ಥೆಯೋ ಎಂದು. ಏಕೆಂದರೆ, ಕಂಪನಿಗಳಲ್ಲಿರುವಂತೆಯೇ ಸಂಸಾರದಲ್ಲೂ ಹಲವು ನಿಯಮಾವಳಿ, ಕಟ್ಟಳೆಗಳು! ಅದಕ್ಕೇ ಹಳೆಯ ತಲೆಮಾರಿನವರನ್ನು ಕಂಡಾಗ ಅಚ್ಚರಿಯಾಗುತ್ತದೆ, ಗೌರವ ಮೂಡುತ್ತದೆ.

ಹುಡುಗಿ ನೋಡಿದ್ದು ಮದುವೆ ಮನೆಯಲ್ಲಿ!
ಅಜ್ಜನ ಕಾಲದಲ್ಲಿ ಮದುವೆಗಳು ಹೇಗಿರುತ್ತಿ­ದ್ದವು ಎಂದು ಕೇಳಿದಾಗ ನಾಚಿಕೊಳ್ಳುತ್ತಲೇ ನೆನಪಿನ ಬುತ್ತಿಯನ್ನು ಬಿಚ್ಚಿದರು. ಅಜ್ಜನಿಗೆ ಅಜ್ಜಿಯನ್ನು ನೋಡಲು ಹೋಗುವ ವಿಷಯವೇ ಗೊತ್ತಿರಲಿಲ್ಲವಂತೆ. ಹಿರಿಯರು ಅವರವರೇ ಮಾತಾಡಿಕೊಂಡು ಅಜ್ಜಿಯನ್ನು ಮೊದಲೇ ನೋಡಿ ಇಷ್ಟಪಟ್ಟು ನನ್ನಜ್ಜನಿಗೆ ಮದುವೆ ಮಾಡಿಸಿದ್ದರಂತೆ. ಅಜ್ಜ, ಅಜ್ಜಿಯನ್ನು ನೋಡಿದ್ದು ತಾಳಿಕಟ್ಟು­ವಾಗಲೇ. ಆಗ ಕಾಲವೇ ಹಾಗಿತ್ತು ಮನೆಯಲ್ಲಿನ ಹಿರಿಯರೇ ಕನ್ಯಾನ್ವೇಷಣೆಗೆ ತೆರಳುತ್ತಿದ್ದರು. ಅವರು ಹೇಳಿದ್ದೇ ವೇದವಾಕ್ಯ! ವಧು- ವರರದ್ದು ಕಣ್ಣುಮುಚ್ಚಿ ತಾಳಿ ಕಟ್ಟಿ ಸಂಸಾರ ತೂಗಿಸಿಕೊಂಡು ಹೋಗುವುದೊಂದೇ ಕೆಲಸ.

ಆಗೆಲ್ಲಾ ದಂಪತಿಗಳು ಬರ್ತ್‌ ಡೇ ಆಚರಿಸುತ್ತಿರಲಿಲ್ಲ, ಮದುವೆ ವಾರ್ಷಿಕೋತ್ಸವ ಆಚರಿಸುತ್ತಿರಲಿಲ್ಲ, ಅಪರೂಪಕ್ಕೆ ಜಾತ್ರೆಗೋ ಹಬ್ಬಕ್ಕೋ ಸೀರೆ ಕೊಡಿಸಿದರೆ ಮುಗಿಯಿತು. ದಂಪತಿಗಳು ಸದಾ ಸಂಪರ್ಕದಲ್ಲಿರಲು ಮೊಬೈಲುಗಳಿರಲಿಲ್ಲ. ಕೆಲಸಗಳು ತಮ್ಮ ಪಾಡಿಗೆ ಸಾಗುತ್ತಿದ್ದವು. ಯಾರನ್ನೋ ಮೆಚ್ಚಿಸಬೇಕೆಂಬ ಒತ್ತಡಗಳಿರುತ್ತಿರಲಿಲ್ಲ. ಇದ್ಯಾವುದರ ಆಡಂಬರವಿಲ್ಲದೆ ಅಜ್ಜ ಅಜ್ಜಿ ಪೂರಾ ಐವತ್ತು ವರ್ಷಗಳ ಸಂಸಾರ ಬಂಡಿ ಎಳೆದಿದ್ದರು. ಅವೆಲ್ಲಾ ಇಲ್ಲದೇ ಇದ್ದುದಕ್ಕೇ ಅ ಸಾಧನೆ ಸಾಧ್ಯವಾಯಿತೇನೋ?

— ಅಂಜನಾ ಎಸ್‌.ಎಚ್‌.

ಟಾಪ್ ನ್ಯೂಸ್

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ

Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.