![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 29, 2020, 4:30 AM IST
ಮನೆಯ ಇಂಟೀರಿಯರ್ ಡಿಸೈನ್ ಬದಲಾಯಿಸಬೇಕು, ಮನೆಗೆ ಹೊಸ ಸ್ಪರ್ಶ ಕೊಡಬೇಕು ಅಂದುಕೊಳ್ಳುವವರು ನಿರ್ಲಕ್ಷಿಸುವ ಒಂದು ಸ್ಥಳ ಇದೆ. ಯಾವುದು ಗೊತ್ತಾ? ಅದೇ ಅಡುಗೆ ಮನೆ. ಲಿವಿಂಗ್ ರೂಮ್, ಬೆಡ್‌ರೂಮ್ ಅನ್ನು ಚಂದಗಾಣಿಸಿದಷ್ಟೇ ಪ್ರಾಮುಖ್ಯತೆಯನ್ನು, ಅಡುಗೆ ಮನೆಯ ಅಲಂಕಾರಕ್ಕೂ ನೀಡಬೇಕು ಅಂತ ಹಲವರು ಯೋಚಿಸುವುದೇ ಇಲ್ಲ. ಆದರೆ, ಅಡುಗೆಮನೆಯನ್ನು ಸುಂದರವಾಗಿಸುವುದಕ್ಕೆ ಹೆಚ್ಚು ಖರ್ಚನ್ನೇನೂ ಮಾಡಬೇಕಿಲ್ಲ. ಇದ್ದುದರಲ್ಲಿಯೇ ಸ್ವಲ್ಪ ಆಚೀಚೆ ಮಾಡಿದರೂ, ಕಿಚನ್‌ಗೆ ಕಲಾತ್ಮಕ ಸ್ಪರ್ಶ ಸಿಗುತ್ತದೆ.
-ಬೆಳಕು
ಅಡುಗೆಮನೆಗೆ ಆದಷ್ಟು ಹೆಚ್ಚಿನ ಗಾಳಿ-ಬೆಳಕು ಬರುವಂತಿರಲಿ. ಕಿಟಕಿಯ ಮೂಲಕ ನೈಸರ್ಗಿಕ ಬೆಳಕು ಒಳ ಬರುವಂತಿದ್ದರೆ ಇನ್ನೂ ಒಳ್ಳೆಯದು. ಇಲ್ಲವಾದರೆ, ಕೃತಕ ಬೆಳಕಿನ ವ್ಯವಸ್ಥೆಯ ಮೂಲಕ ಅಡುಗೆಮನೆಯನ್ನು ಬ್ರೈಟ್ ಆಗಿ ಕಾಣಿಸುವಂತೆ ಮಾಡಿ.
– ಹಣ್ಣಿನ ಬುಟ್ಟಿ/ ಫ್ರೂಟ್ ಬೌಲ್
ಕಲಾತ್ಮಕ ಹಣ್ಣಿನ ಬುಟ್ಟಿಯಲ್ಲಿ ತಾಜಾ ಹಣ್ಣುಗಳನ್ನು ಜೋಡಿಸಿ, ಅಡುಗೆಮನೆ ಅಥವಾ ಡೈನಿಂಗ್ ಟೇಬಲ್ ಮೇಲೆ ಇಡಿ. ಅದು ಇಡೀ ವಾತಾವರಣಕ್ಕೆ ಜೀವ ಕಳೆ ನೀಡುತ್ತದೆ.
– ನೀಟಾಗಿ ಜೋಡಿಸಿ
ಅಡುಗೆ ಸಾಮಗ್ರಿಗಳನ್ನು ಶೆಲ್ಫ್ನಲ್ಲಿ ನೀಟಾಗಿ ಜೋಡಿಸಿ. ತಟ್ಟೆ, ಲೋಟ, ಚಮಚ, ಪಾತ್ರೆ, ಅಡುಗೆ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಜೋಡಿಸಿಡುವುದು ಕಿಚನ್‌ನ ಸೌಂದರ್ಯ ಹೆಚ್ಚಿಸುವುದಲ್ಲದೆ, ಅಡುಗೆ ಕೆಲಸವನ್ನು ಸುಲಭ ಮಾಡುತ್ತದೆ ಕೂಡಾ.
– ಗಾಜಿನ ಜಾಡಿಗಳು
ಸ್ಟೀಲ್ ಪಾತ್ರೆಗಳಿಗಿಂತ ಗಾಜು ಮತ್ತು ಪಿಂಗಾಣಿ ಪಾತ್ರೆಗಳು, ಅಡುಗೆಮನೆಗೆ ಹೆಚ್ಚು ಕಲಾತ್ಮಕತೆಯನ್ನು ನೀಡುತ್ತವೆ. ಸಾಧ್ಯವಾದರೆ ಕೆಲವು ಪದಾರ್ಥಗಳನ್ನು ಇಡಲು, ಬಣ್ಣ ಬಣ್ಣದ ಪಿಂಗಾಣಿ ಅಥವಾ ಗಾಜಿನ ಜಾಡಿಗಳನ್ನು ಖರೀದಿಸಿ. ಅವುಗಳನ್ನು ತೆಗೆದು, ಇಟ್ಟು ಮಾಡುವಾಗ ಜಾಗ್ರತೆ ಇರಬೇಕು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.