“ನಾನ್ ಹೇಳ್ಳೋ ಮುದ್ದು ಸುಳ್ಳು ಐ ಲವ್ ಯೂ!’
Team Udayavani, Feb 1, 2017, 3:45 AM IST
ಆಶಿತಾಗೆ ಶಾರುಖ್ ಯಾಕಿಷ್ಟ ಗೊತ್ತಾ?ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗೋ “ನೀಲಿ’ ಸೀರಿಯಲ್‌ನ ಕೆಟ್ಟ ತಾಯಿ ರೇಖಾಳನ್ನು ಕಂಡರೆ ಯಾರಿಗೆ ಸಿಟ್ ಬರಲ್ಲ ಹೇಳಿ? ಆದರೆ ರಿಯಲ್‌ನಲ್ಲಿ ರೇಖಾ ಪಾತ್ರಧಾರಿ ಅಶಿತಾ ಕೂಲ್ ಕೂಲ್ ಹುಡ್ಗಿ. ಎದುರಿಗಿರೋ ವ್ಯಕ್ತಿ ಪ್ರಾಮಾಣಿಕಯಲ್ಲಿ ಪ್ರಾಮಾಣಿಕತೆಯನ್ನೇ ನೋಡೋದು. ಅಪ್ಪಂಗೆ ನಾನ್‌ವೆಜ್ ಅಡುಗೆ ಮಾಡ್ಕೊಡೋದು ಅಂದ್ರೆ ಇಷ್ಟ. ತನಗೆ ಫುಡ್ ಅಂದ್ರೆ ಅಂಥ ಆಸಕ್ತಿಯೇನೂ ಇಲ್ಲ. ಪಕ್ಕಾ ಪ್ರಾಕ್ಟಿಕಲ್ ಅನಿಸೋ ಅಶಿತಾ ಡಿಡಿಎಲ್‌ಜೆ ಸಿನಿಮಾವನ್ನು 10 ಸಲ ಥಿಯೇಟರ್‌ನಲ್ಲೇ ನೋಡಿದ್ದಾರೆ. ಆದರೆ ಸದ್ಯಕ್ಕೆ ಡ್ರೀಮ್‌ಬಾಯ್ ಬಗ್ಗೆ ಕಲ್ಪನೆಗಳಿಲ್ವಂತೆ!
*
– ಊರು : ಬೆಂಗಳೂರು
– ಓದಿದ್ದು : ಬಿಷಪ್ ಕಾಟನ್ ಸ್ಕೂಲ್ ಮತ್ತು ಬಿಎಂಎಸ್ ಕಾಲೇಜು
– ಕ್ರೇಜ್ : ಟ್ರಾವೆಲಿಂಗ್, ಸಿನಿಮಾ, ಮಕ್ಕಳ ಜೊತೆ ಆಟ ಆಡೋದು, ಏಕಾಂಗಿಯಾಗಿ ಕುಳಿತಿರೋದು
– ಕಳೆದುಹೋಗೋ ಜಾಗ : ಸ್ವಿಜರ್‌ಲ್ಯಾಂಡ್
– ಹೆಚ್ಚು ರೇಗಿಸೋ ಫ್ರೆಂಡ್ಸ್ : ಒಬ್ಬ ಮೈಸೂರ್‌ನಲ್ಲಿದ್ದಾನೆ, ಬೆಸ್ಟ್ ಫ್ರೆಂಡ್, ಒಟ್ಟು ಐದು ಜನ ಫ್ರೆಂಡ್ಸ್, ಹೆಚ್ಚಿನವರು ಹುಡುಗ್ರು. 15 ವರ್ಷಗಳ ಬೆಸ್ಟ್ ಫ್ರೆಂಡ್ಸ್ ನಾವು. ಅವರ ಜೊತೆ ಮಾತನಾಡಿದಷ್ಟು ಕ್ಲೋಸಾಗಿ ಇನ್ನೊಬ್ಬರ ಹತ್ರ ಮಾತನಾಡಕ್ಕಾಗಲ್ಲ.
– ಫೇವರೆಟ್ ಫುಡ್ : ಚೈನೀಸ್
– ಪ್ರಿಯವಾದ ಸುಳ್ಳು: ಐ ಲವ್ ಯೂ !
– ಹೆಚ್ಚು ಸಲ ನೋಡಿದ ಸಿನಿಮಾ : ದಿಲ್‌ವಾಲೆ ದುಲ್ಹನಿಯ ಲೇ ಜಾಯೆಂಗೆ 10 ಸಲ ಮೆಜೆಸ್ಟಿಕ್‌ನ ಸಾಗರ್ ಥಿಯೇಟರ್‌ನಲ್ಲಿ ನೋಡಿದ್ದು.
– ಆ ಸಿನಿಮಾ ಬಗ್ಗೆ ಕಂಡ ಕನಸು : ಅದು ನಮ್ಮ ಸ್ಕೂಲ್‌ನ ಹೆಚ್ಚಿನ ಹುಡುಗಿಯರ ಕನಸು. ಶಾರುಖ್ ಆಗ ನಮ್ಮ ಡ್ರೀಂ ಬಾಯ್, ನಮಗೆ ನಾವೇ ಕಾಜೊಲ್ ಅಂದೊRಳ್ತಿದ್ವಿ. ಒಂದಿನ ನಮ್ಮಪ್ಪ ನಮ್ಮನ್ನು ಸ್ವಿಜರ್‌ಲ್ಯಾಂಡ್‌ಗೆ ಪ್ರವಾಸಕ್ಕೆ ಕಳಿಸ್ತಾರೆ, ಅಲ್ಲಿ ನಮ್ಮ ಡ್ರೀಂ ಬಾಯ್ ಶಾರುಖ್ ಸಿಗ್ತಾನೆ ಅನ್ನೋ ಕನಸು.
– ಈಗ: ಏನಿಲ್ಲ. ಡ್ರೀಮ್‌ಬಾಯ್ ಕನಸೆಲ್ಲ ಶಾರುಖ್‌ಗೇ ಮುಗೀತು, ಈಗ ದೇವ್ರು ನನಗೆ ಅಂತ ಒಬ್ಬ ಹುಡುಗನ್ನ ಇಟ್ಟಿರ್ತಾನೆ, ಅವು ಹೇಗೋ ನಂಗೆ ಸಿಗ್ತಾನೆ ಅನ್ನೋ ನಂಬಿಕೆ ಅಷ್ಟೇ.
– ಸಿನಿಮಾದಲ್ಲಿ ಯಾರನ್ನ ಕಂಡ್ರೆ ಸಖತ್ ಇಷ್ಟ ?: ಕಾಜೊಲ್ ಮತ್ತು ಕರೀನಾ
– ಯಾಕೆ?: ಇಲ್ಲಿಯವರೆಗೆ ನಟಿಯರು ತಮ್ಮ ಪ್ರಗ್ನಿನ್ಸಿಯನ್ನು ಮುಚ್ಚಿಡೋದಕ್ಕೆ ನೋಡ್ತಿದ್ರು. ಆದರೆ ಕರೀನಾ ಗರ್ಭ ಧರಿಸಿರೋದನ್ನ ಹೆಮ್ಮೆಯಿಂದ ಹೇಳ್ಕೊಂಡ್ರು. ಆ ಸಮಯದಲ್ಲೂ ಕೆಲಸ ಮಾಡ್ತಿದ್ರು. ಕಾಜೊಲ್ ಒಬ್ಬ ನಟಿಯಾಗಿಯೂ ಇಷ್ಟ, ಮಕ್ಕಳ ಫೇವರೆಟ್ ತಾಯಿಯಾಗೂ ಇಷ್ಟ.
– ಎದುರಾಗೋ ಹೊಸಬರಲ್ಲಿ ಮೊದಲು ನೋಡೋದು: ಪ್ರಾಮಾಣಿಕತೆ
– ಶೂಟಿಂಗ್ ಇಲ್ಲಾಂದ್ರೆ : ನನ್ನ ಹವ್ಯಾಸಗಳನ್ನು ಪೋಷಿಸೋದು.
**
ನಿಮ್ಮ ಫೇ. ಡ್ರಿಂಕ್? : ಎಲ್ಲ ಬಗೆಯ ಫೂÅಟ್ ಜ್ಯೂಸ್
ಫೇ. ರೆಸಿಪಿ?: ಅಪ್ಪಂಗೆ ಮಾಡ್ಕೊಡೋ ನಾನ್‌ವೆಜ್ ರೆಸಿಪಿಗಳು.
ಫೇ. ಫುಡ್?: ಚೈನೀಸ್
ಫೇವರೆಟ್ ರೆಸ್ಟೊರೆಂಟ್?:ತಾಜ್ ವೆಸ್ಟೆಂಡ್
ಯಾವತ್ತೂ ನೆನಪಾಗೋ ಕೈ ರುಚಿ?: ವಿದ್ಯಾಮೂರ್ತಿ ಅವರದ್ದು. ಶೂಟಿಂಗ್ ಇರುವಾಗ ಅವರ ಕೈ ರುಚಿಯನ್ನು ಎನ್‌ಜಾಯ್ ಮಾಡಿದ್ದೇ ಮಾಡಿದ್ದು. ಅಕ್ಕಿ ಗೋಧಿ ಉಂಡೆಗಳು, ಪುಳಿಯೋಗರೆ ಎಲ್ಲ ಸಖತ್ ರುಚಿಯಾಗಿ ಮಾಡ್ಕೊಂಡು ಬರಿ¤ದ್ರು
ವ್ಯಾಕ್ ಅಂದಿದ್ದು?: ಏನಕ್ಕೂ ಇಲ್ಲ. ಇಷ್ಟ ಆಗದ ಫುಡ್ ಕಡೆ ತಲೆ ಎತ್ತಿಯೂ ನೋಡಲ್ಲ. ಚೆನ್ನಾಗಿಲ್ಲ ಅಂದ್ರೆ ನಂಗೆ ಮೊದಲೇ ಗೊತ್ತಾಗುತ್ತೆ.
ಡಯೆಟ್‌ನಲ್ಲಿ ಚೀಟ್ ಮಾಡೋದು?: ತಿನ್ನೋದೆ ಸ್ವಲ್ಪ, ಡಯೆಟ್ ಮಾಡೋ ಮಾತೆಲ್ಲಿಂದ?
ವಕೌìಟ್ ಮಾಡಿದ್ಮೇಲೆ ಇಷ್ಟಪಟ್ಟು ತಿನ್ನೋದು?: ವಕೌìಟ್ ಮಾಡೋ ಜಾಗದ ಅಕ್ಕಪಕ್ಕ ಚಾಟ್ಸ್ ಗಾಡಿಗಳನ್ನು ನಿಲ್ಲಿಸಿರ್ತಾರೆ, ನಂಗೆ ಚಾಟ್ಸ್ ಅಂದ್ರೆ ಸಖತ್ ಇಷ್ಟ. ಗೊಲ್ಗೊಪ್ಪ, ಪಾನಿಪುರಿ ಎಲ್ಲ ತಿನ್ತೀನಿ.
*
“ನೀಲಿ’ ಸೀರಿಯಲ್‌ನಲ್ಲಿ ನನ್ನದು ನೆಗೆಟಿವ್ ಶೇಡ್‌ನ ಪಾತ್ರ. ಅದು ನನಗೆ ಮೊದಲೇ ಗೊತ್ತಿರಲಿಲ್ಲ. ಟೀಂನವರು ಈ ವಿಷಯ ನನ್ನಿಂದ ಮುಚ್ಚಿಟ್ಟಿದ್ರು. ಮೊದಲೇ ಗೊತ್ತಾಗ್ತಿದ್ರೆ ನಾನು ಒಪ್ಕೊಳ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹೇಗಿದೆ ಅಂದ್ರೆ, ಯಾರಾದ್ರೂ ಪಬ್ಲಿಕ್‌ನಲ್ಲಿ ರೇಖಾನ ಚೆನ್ನಾಗಿ ಬೈದ್ರೆ ನಂಗೆ ಖುಷಿಯಾಗುತ್ತೆ. ಇಷ್ಟು ಚೆನ್ನಾಗಿ ಮಾಡಿದ್ದೀನಲ್ವಾ ಅಂತ ಹೆಮ್ಮೆಯಾಗುತ್ತೆ.
*
ನಂಗೆ ಹೊಸ ಹೊಸ ಜಾಗಗಳನ್ನು ನೋಡುವ ಜೊತೆಗೆ ಅಲ್ಲಿನ ಭಾಷೆಗಳನ್ನು ಕಲಿಯೋ ಆಸಕ್ತಿಯೂ ಇದೆ. ಸಿನಿಮಾ ನೋಡಿಯೇ ತಮಿಳು, ಮರಾಠಿ, ಹಿಂದಿ ಭಾಷೆ ಕಲಿತೆ. ಈಗ ಸ್ಪಾನಿಷ್ ಕಲೀತಿದ್ದೀನಿ. ನನಗೆ ಭಾಷೆಯನ್ನು ಬೇಗ ಕಲಿಯೋ ಕಲೆಯೂ ಸಿದ್ಧಿಸಿದೆ. ನಮ್ಮ ಶೂಟಿಂಗ್‌ನಲ್ಲಿ ಮಾತ್ರ ಸ್ಪಾನಿಷ್ ಕಲೀತೀನಿ ಅಂತ ಕೂತಿದ್ರೆ, ಮೊದುÉ ಸೀನ್ ಪೇಪರ್ ನೋಡ್ಕೊಳ್ಳಿ, ಆಮೇಲೆ ಸ್ಪಾನಿಶ್ ಕಲೀಬಹುದು ಅಂತ ರೇಗಿದ್ತಾರೆ, ಇಸ್ತಾಂಬುಲ್‌ಗೆ ಹೋಗ್ಬೇಕು ಅನ್ನೋದು ನನ್ನ ಇನ್ನೊಂದು ಕನಸು.
*
ಅಪ್ಪಂಗೆ ಅಡುಗೆ ಮಾಡಿಕೊಟ್ಟು ಅವರು ಚೆನ್ನಾಗಿದೆ ಅಂದರೆ ನಾನೇ ತಿಂದದ್ದಕ್ಕಿಂತ ಹೆಚ್ಚು ತೃಪ್ತಿ. ಈಗ ಶೂಟಿಂಗ್ ಬ್ಯುಸಿಯಲ್ಲಿ ಇರಿ¤àನಿ ಅಂತ ಅಪ್ಪ ನಾನು ಮಾಡ್ತೀನಿ ಅಂದ್ರೂ, ಬೇಡ, ಸುಸ್ತಾಗಿರುತ್ತೆ, ಮಲಕ್ಕೋ ಹೋಗು ಅಂತಾರೆ. ಫ್ರೀ ಇದ್ದಾಗ ಅಪ್ಪಂಗೆ ನಾಟಿ ಚಿಕನ್, ಮಟನ್, ಫಿಶ್ ಅಡುಗೆಗಳನ್ನು ಮಾಡಿಕೊಡ್ತೀನಿ. ಅವರಿಗೆ ಮನೆಯಲ್ಲಿ ಮಾಡುವ ಅಡುಗೆಗಳೇ ಇಷ್ಟ.
– ಪ್ರಿಯಾ ಕೆರ್ವಾಶೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.