ಸನ್ನಿ ಮೋಹದ ಬಲೆಯಲ್ಲಿ: ಮಕ್ಕಳ ನಿಲುವು, ಪೋಷಕರ ಫಜೀತಿ
Team Udayavani, Jun 21, 2017, 12:29 PM IST
ಎಲ್ಲವನ್ನೂ ಉದ್ದಿಮೆ, ವ್ಯಾಪಾರವೆಂದು ತಿಳಿದು ಬೆಳೆಯುತ್ತಿರುವ ಇಂದಿನ ಜನಾಂಗದ ನಿಲುವು, ಅವರೆತ್ತುವ ಪ್ರಶ್ನೆಗಳ ಸರಣಿಗೆ ಪೋಷಕರೂ ದಂಗಾಗಿ ಹೋಗುತ್ತಾರೆ ಎನ್ನುವುದಕ್ಕೆ ಈ ಕಿರುಚಿತ್ರ ಸಾಕ್ಷಿ. ಬೆಳೆದು ನಿಂತ ಮಗಳೊಬ್ಬಳ ಬಾಯಿಯಲ್ಲಿ, “ನಾನು ಸನ್ನಿ ಲಿಯೋನ್ ಆಗ್ತಿನಿ’ ಎಂಬ ವಾಕ್ಯವನ್ನು ಹುಟ್ಟಿಸಿ, ರಾಮ್‌ಗೊàಪಾಲ್ ವರ್ಮಾ ಪುನಃ ಸ್ತ್ರೀಯರ ಸ್ವಾತಂತ್ರ್ಯದ ಆಯ್ಕೆಯನ್ನು ಎಳೆದು ತಂದಿದ್ದಾರೆ. ಯಾವ ತಂದೆ- ತಾಯಿಯೂ ಊಹಿಸಿಕೊಳ್ಳದ, ಊಹಿಸಿಕೊಳ್ಳಲಾಗದ ಪರಿಕಲ್ಪನೆಯ ಮೇಲೊಂದು ವಿಮಶಾì ಬರಹವಿದು…
“ನಾನು ಸನ್ನಿ ಲಿಯೋನ್ ಆಗ್ತಿನಿ!’
ಬೆಳೆದು ನಿಂತ ಮಗಳು ತನ್ನ ಮುಂದಿನ ಆಸೆಯನ್ನು ಹೆತ್ತವರ ಮುಂದೆ ಹೀಗೆ ತೆರೆದಿಟ್ಟಳು! ಮುಂದೆ ನಾನು ಕತ್ರಿನಾ ಕೈಫ್ ಅಥವಾ ಸಾನಿಯಾ ಮಿರ್ಜಾ ಆಗ್ತೀನೆ ಅಂತಂದಿದ್ದರೆ, ಅಪ್ಪ- ಅಮ್ಮ “ಆಗು ಮಗಳೇ’ ಅಂತ ಸಂತೋಷದಿಂದ ಹರಸುತ್ತಿದ್ದರೇನೋ. ಆದರೆ, ಮಗಳ ಬಾಯಿಂದ ಉದುರಿದ ಹೆಸರು ಅದಲ್ಲ! ಭವಿಷ್ಯದಲ್ಲಿ, ಒಂದು ಮಾದಕ ಜಿಂಕೆ ಆಗುವ ಕನಸನ್ನು ಮಗಳು ಜಪಿಸುತ್ತಿದ್ದಾಳೆ. “ಸನ್ನಿ’ಯ ಹೆಸರು ಕೇಳುತ್ತಿದ್ದಂತೆ, ಆ ಮನೆಯಲ್ಲಿ ಪ್ರಳಯವೇ ಆಗಿಹೋಗುತ್ತದೆ. ಅಪ್ಪನ ಸಿಟ್ಟು ನೆತ್ತಿಗೇರುತ್ತದೆ. ಅಮ್ಮ ಗರಬಡಿದವರಂತೆ ನಿಲ್ಲುತ್ತಾರೆ. ಮಾತು ಹೊರಹೊಮ್ಮದೇ, ಬಾಯಿಂದಲೂ ಅಳುವನ್ನೇ ಉದುರಿಸುತ್ತಾರೆ.
“ಏನು? ಸನ್ನಿ ಲಿಯೋನ್ ಆಗ್ತಿಯಾ?’ ಸಿಡಿಲಿನಂತೆ ಕೇಳುತ್ತಾರೆ, ಅಪ್ಪ. ಮಗಳು ತಣ್ಣನೆ ಹೇಳತೊಡಗಿದಳು: “ಹೌದು ಪಪ್ಪಾ, ನೀನು ಅಸಿಸ್ಟೆಂಟ್ ಮ್ಯಾನೇಜರ್ ಆದ ಹಾಗೆ ನಾನು ಸನ್ನಿ ಲಿಯೋನ್ ಆದರೆ ತಪ್ಪೇನು? ಅವಳಿಗೆ ಕೋಟಿ ಕೋಟಿ ಆರಾಧಕರಿದ್ದಾರೆ. ಒಂದೆರಡು ಗಂಟೆಯಲ್ಲಿ ಕೋಟಿ ರೂ. ದುಡಿಯುವಷ್ಟು ಅವಳು ಸಮಥೆì. ನೀನು ಜೀವಮಾನದಲ್ಲಿ ದುಡಿದಿದ್ದನ್ನು, ಅವಳು ಒಂದು ಗಂಟೆಯಲ್ಲಿ ದುಡೀತಾಳೆ. ಅಮ್ಮನಂತೆ ಒಂದೇ ಗಂಡನನ್ನು ಕಟ್ಟಿಕೊಂಡು, ನಾಲ್ಕು ಗೋಡೆಯ ಮಧ್ಯೆ ಇದ್ದು, ಇದೇ ಪ್ರಪಂಚವೆಂದು ಭ್ರಮಿಸಿಕೊಳ್ಳುವುದರಲ್ಲಿ ಏನು ಅರ್ಥ?’. ಮಗಳ ತಿರುಗೇಟಿಗೆ, ಪುನಃ ಹೆತ್ತವರ ತಲೆ ಗಿರ್ರೆನ್ನುತ್ತದೆ.
ಇದು, ಬಾಲಿವುಡ್‌ನ ಶೋಮ್ಯಾನ್ ಅನ್ನಿಸಿಕೊಂಡಿರುವ ಆರ್‌ಜಿವಿ ಅಲಿಯಾಸ್ ರಾಂಗೋಪಾಲ ವರ್ಮಾನ ಕಿರುಚಿತ್ರ “ಮೇರಿ ಭೇಟಿ ಸನ್ನಿ ಲಿಯೋನ್ ಬನ್ನಾ ಚಾಹಿ¤ ಹೈ’ ಕಥೆ. ಕೆಲವು ವರುಷಗಳ ಹಿಂದೆ, “ಮೈ ಮಾಧುರಿ ದೀಕ್ಷಿತ್ ಬನ್ನಾ ಚಾಹಿ¤ ಹೂnಂ’ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದ ಇದೇ ರಾಮ್ ಗೋಪಾಲ್ ವರ್ಮಾ ಇಂದು “ಮೇರಿ ಭೇಟಿ ಸನ್ನಿ ಲಿಯೋನ್ ಬನ್ನಾ ಚಾಹಿ¤ ಹೈ’ ಶಾರ್ಟ್‌ಫಿಲ್ಮ್ ಅನ್ನು ಜಗತ್ತಿನೆದುರು ಇಟ್ಟಿದ್ದಾರೆ. ಯಾವ ತಂದೆ- ತಾಯಿಯೂ ಕಲ್ಪಿಸಿಕೊಳ್ಳಲಾರದ, ಎಂದೆಂದಿಗೂ ಕಲ್ಪಿಸಿಕೊಳ್ಳದ ಪರಿಕಲ್ಪನೆಗೆ ದೃಶ್ಯರೂಪ ನೀಡಿದ್ದಾರೆ. ಹೆಣ್ಣುಮಕ್ಕಳ ಆಯ್ಕೆಯ ಸ್ವಾತಂತ್ರ್ಯ ಎಂಬ ಎಳೆಯನ್ನು ಆಧಾರವಾಗಿಟ್ಟುಕೊಂಡ ಈ ಕಿರುಚಿತ್ರ ಇದೀಗ ಭಾರತದೆಲ್ಲೆಡೆ ಚರ್ಚೆಗೆ ವಸ್ತು.
ಎಲ್ಲವನ್ನೂ ಉದ್ದಿಮೆ, ವ್ಯಾಪಾರವೆಂದು ತಿಳಿದು ಬೆಳೆಯುತ್ತಿರುವ ಇಂದಿನ ಜನಾಂಗದ ನಿಲುವು, ಅವರೆತ್ತುವ ಪ್ರಶ್ನೆಗಳ ಸರಣಿಗೆ ಪೋಷಕರೂ ದಂಗಾಗಿ ಹೋಗುತ್ತಾರೆ. ಮಕ್ಕಳು ತಮಗಿಂತಲೂ ಎತ್ತರಕ್ಕೆ ಬೆಳೆಯಲಿ, ಒಳ್ಳೆಯ ಹೆಸರು ಗಳಿಸಲಿ ಎಂದು ಕನಸು ಕಾಣುವ ಪೋಷಕರ ನಂಬಿಕೆಗೆ ಕೊಡಲಿಯೇಟು ಬೀಳುವ ಸಮಯ ಬಂದಾಗಿದೆ ಎನ್ನುವುದು ವರ್ಮಾನ ಕಿರುಚಿತ್ರ ನೀಡುವ ಸಂದೇಶ.
ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಪರದೆ ತೆಳುವಾದಂತೆಲ್ಲಾ ಏನೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಎನ್ನುವುದಕ್ಕೆ ಇದು ಕೈಗನ್ನಡಿ. ಪೋರ್ನ್ ಜಗತ್ತಿನ ಕಣ್ಮಣಿ ಸನ್ನಿ ಲಿಯೋನ್, ಬಾಲಿವುಡ್‌ನಲ್ಲಿ ಬೆಳೆದ ರೀತಿ ಹಲವರ ಹುಬ್ಬೇರಿಸುವಂತೆ ಮಾಡಿರುವುದು ನಿಜ. ಆದರೆ, ಆಕೆಯನ್ನು ಆದರ್ಶವಾಗಿರಿಸಿಕೊಂಡು ಹದಿಹರೆಯದ ಹುಡುಗಿಯೊಬ್ಬಳು ತಾನೂ ಸನ್ನಿ ಲಿಯೋನ್‌ಳ ಹಾಗೆ ಪೋರ್ನ್ ನಟಿಯಾಗಬೇಕೆಂದು ಪೋಷಕರ ಮುಖದ ಮೇಲೆ ಹೇಳುವ ಈ ಕಿರುಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿ ವ್ಯಕ್ತಿಯ ನಿಲುವನ್ನು ಗೌರವಿಸಬೇಕೆನ್ನುವ ಸಂದೇಶವಿದ್ದರೂ, ಕೆಲವು ಮೂಲಭೂತ ಸಾಮಾಜಿಕ ಕಟ್ಟುಪಾಡುಗಳನ್ನು ಗಾಳಿಗೆ ತೂರಲು ಹೊರಟ ಇಂದಿನ ಪೀಳಿಗೆಯ ಹೆಜ್ಜೆಗಳು ಕಾಣಿಸುತ್ತವೆ. ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳ ಲೈಂಗಿಕ ತೃಷೆ ತಣಿಸುವ ಸಾಧನ ಮಾತ್ರವೆನ್ನುವ ಈ ಕಿರುಚಿತ್ರ, ಹೊಸ ಕಾಲಮಾನದ ಮಕ್ಕಳ ಮನಃಸ್ಥಿತಿ ಮತ್ತು ಆಲೋಚನಾ ಲಹರಿಗಳನ್ನು ಬಯಲಿಗೆಳೆಯುತ್ತದೆ.
“ದೇಹವನ್ನು ಮಾರಿಕೊಂಡು ಬದುಕಬೇಕೇ?’ ಎಂದು ಕುಪಿತನಾಗುವ ತಂದೆಗೆ, “ಎಲ್ಲರೂ ಒಂದಲ್ಲಾ ಒಂದನ್ನು ಮಾರಿಕೊಂಡೇ ಬದುಕುತ್ತಿದ್ದಾರೆ. ನನ್ನ ದೇಹ ನನ್ನ ಆಸ್ತಿ. ನನ್ನ ಯೌವನವನ್ನು, ಸೌಂದರ್ಯವನ್ನು, ಲೈಂಗಿಕತೆಯನ್ನು ಮಾರಿಕೊಂಡು ಬದುಕಿದರೆ ತಪ್ಪೇನು?” ಎಂದು ಮರು ಪ್ರಶ್ನಿಸುವ ಮಗಳಿಗೆ ಸಮಾಜದ ಕಟ್ಟುಪಾಡುಗಳನ್ನು ಪೋಷಕರು ನೆನಪಿಸುತ್ತಾರೆ.
“ಪೋರ್ನ್’ ಎಂಬ ವಿಷವರ್ತುಲದಲ್ಲಿ ಸಿಲುಕಿ ನೊಂದವರೆಷ್ಟೋ, ಪ್ರಾಣ ಕಳೆದುಕೊಂಡವರೆಷ್ಟೋ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಇದು ವರ್ಮಾಗೂ ಗೊತ್ತಿರುವ ವಾಸ್ತವವೇ. ಆದರೆ ಇಲ್ಲಿ, ವರ್ಮಾನ ಪ್ರಚಾರದ ಗೀಳಿಗೆ “ಮಹಿಳೆಯ ಆಯ್ಕೆಯ ಸ್ವಾತಂತ್ರ್ಯ’ ದಾಳವಾಗಿದೆ.
ಚೈತ್ರಾ ಅರ್ಜುನಪುರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.